ಶಿವಮೊಗ್ಗ-ಉಷಾ ನರ್ಸಿಂಗ್ ಹೋಂ ಬಳಿ ಬ್ರೀಝಾ ಕಾರು ಪಲ್ಟಿ ಶಿವಮೊಗ್ಗ: ನಗರದ ಉಷಾ ನರ್ಸಿಂಗ್ ಹೋಂ ಬಳಿ ಬ್ರೀಝಾ ಕಾರು ಮತ್ತು ಖಾಸಗಿ ಅಂಬ್ಯೂಲೆನ್ಸ್ ವಾಹನಗಳ ನಡುವೆ ಉಂಟಾದ ಡಿಕ್ಕಿಯಲ್ಲಿ ಬ್ರೀಝಾ ಕಾರು ಮೂರು ಪಲ್ಟಿ ಹೊಡೆದು ಯಥಾ ಸ್ಥಿತಿಯಲ್ಲಿ ನಿಂತ ಘಟನೆ ಇಂದು ಮದ್ಯಾಹ್ನ ನಡೆದಿದೆ. ಸೊರಬ ಕಡೆಯಿಂದ ಬಂದ ಅಂಬ್ಯೂಲೆನ್ಸ್ ವಾಹನ ಕಾಶೀಪುರದಿಂದ ಹನಸವಾಡಿಗೆ ಹೋಗುವಾಗ ಉಷಾ ನರ್ಸಿಂಗ್ ಹೋಂ ಬಳಿ ಬ್ರೀಝಾ ಕಾರಿಗೆ ಡಿಕ್ಕಿ ಹೊಡೆದಿದೆ. ಕಾಲಿನಲ್ಲಿ ಸುರೇಶ್, ದೀಪಾ (14) ಮಗು ಹಾಗೂ ಕಿಶನ್ ಎಂಬ 74 ವರ್ಷದ ವೃದ್ಧರಿದ್ದರು. ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಕಾರು ಪಲ್ಟಿ ಹೊಡೆದ ಪರಿಣಾಮ ಸಣ್ಣಪುಟ್ಟ ಗಾಯಗಳಾಗಿವೆ. ಕಾರಿನ ಹಿಂದಿನ ಗ್ಲಾಸ್ ಪುಡಿ ಪುಡಿಯಾಗಿದೆ. ನಾಲ್ವರನ್ನ ಉಷಾ ನರ್ಸಿಂಗ್ ಹೋಂ ನಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ಅಂಬ್ಯೂಲೆನ್ಸ್ ಚಾಲಕ ಸಾವಂತ್ ಗೆ ಕಾಲು ಮುರಿದಿದೆ. ತಕ್ಷಣವೇ ಮೂವರನ್ನ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪೂರ್ವ ಸಂಚಾರಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಶಿವಮೊಗ್ಗ-ಉಷಾ ನರ್ಸಿಂಗ್ ಹೋಂ ಬಳಿ ಬ್ರೀಝಾ ಕಾರು ಪಲ್ಟಿ ಶಿವಮೊಗ್ಗ: ನಗರದ ಉಷಾ ನರ್ಸಿಂಗ್ ಹೋಂ ಬಳಿ ಬ್ರೀಝಾ ಕಾರು ಮತ್ತು ಖಾಸಗಿ ಅಂಬ್ಯೂಲೆನ್ಸ್ ವಾಹನಗಳ ನಡುವೆ ಉಂಟಾದ ಡಿಕ್ಕಿಯಲ್ಲಿ ಬ್ರೀಝಾ ಕಾರು ಮೂರು ಪಲ್ಟಿ ಹೊಡೆದು ಯಥಾ ಸ್ಥಿತಿಯಲ್ಲಿ ನಿಂತ ಘಟನೆ ಇಂದು ಮದ್ಯಾಹ್ನ ನಡೆದಿದೆ. ಸೊರಬ ಕಡೆಯಿಂದ ಬಂದ ಅಂಬ್ಯೂಲೆನ್ಸ್ ವಾಹನ ಕಾಶೀಪುರದಿಂದ ಹನಸವಾಡಿಗೆ ಹೋಗುವಾಗ ಉಷಾ ನರ್ಸಿಂಗ್ ಹೋಂ ಬಳಿ ಬ್ರೀಝಾ ಕಾರಿಗೆ ಡಿಕ್ಕಿ ಹೊಡೆದಿದೆ. ಕಾಲಿನಲ್ಲಿ ಸುರೇಶ್, ದೀಪಾ (14) ಮಗು ಹಾಗೂ ಕಿಶನ್ ಎಂಬ 74 ವರ್ಷದ ವೃದ್ಧರಿದ್ದರು. ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಕಾರು ಪಲ್ಟಿ ಹೊಡೆದ ಪರಿಣಾಮ ಸಣ್ಣಪುಟ್ಟ ಗಾಯಗಳಾಗಿವೆ. ಕಾರಿನ ಹಿಂದಿನ ಗ್ಲಾಸ್ ಪುಡಿ ಪುಡಿಯಾಗಿದೆ. ನಾಲ್ವರನ್ನ ಉಷಾ ನರ್ಸಿಂಗ್ ಹೋಂ ನಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ಅಂಬ್ಯೂಲೆನ್ಸ್ ಚಾಲಕ ಸಾವಂತ್ ಗೆ ಕಾಲು ಮುರಿದಿದೆ. ತಕ್ಷಣವೇ ಮೂವರನ್ನ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪೂರ್ವ ಸಂಚಾರಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
- ಶಿವಮೊಗ್ಗ: ನಗರದ ಉಷಾ ನರ್ಸಿಂಗ್ ಹೋಂ ಬಳಿ ಬ್ರೀಝಾ ಕಾರು ಮತ್ತು ಖಾಸಗಿ ಅಂಬ್ಯೂಲೆನ್ಸ್ ವಾಹನಗಳ ನಡುವೆ ಉಂಟಾದ ಡಿಕ್ಕಿಯಲ್ಲಿ ಬ್ರೀಝಾ ಕಾರು ಮೂರು ಪಲ್ಟಿ ಹೊಡೆದು ಯಥಾ ಸ್ಥಿತಿಯಲ್ಲಿ ನಿಂತ ಘಟನೆ ಇಂದು ಮದ್ಯಾಹ್ನ ನಡೆದಿದೆ. ಸೊರಬ ಕಡೆಯಿಂದ ಬಂದ ಅಂಬ್ಯೂಲೆನ್ಸ್ ವಾಹನ ಕಾಶೀಪುರದಿಂದ ಹನಸವಾಡಿಗೆ ಹೋಗುವಾಗ ಉಷಾ ನರ್ಸಿಂಗ್ ಹೋಂ ಬಳಿ ಬ್ರೀಝಾ ಕಾರಿಗೆ ಡಿಕ್ಕಿ ಹೊಡೆದಿದೆ. ಕಾಲಿನಲ್ಲಿ ಸುರೇಶ್, ದೀಪಾ (14) ಮಗು ಹಾಗೂ ಕಿಶನ್ ಎಂಬ 74 ವರ್ಷದ ವೃದ್ಧರಿದ್ದರು. ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಕಾರು ಪಲ್ಟಿ ಹೊಡೆದ ಪರಿಣಾಮ ಸಣ್ಣಪುಟ್ಟ ಗಾಯಗಳಾಗಿವೆ. ಕಾರಿನ ಹಿಂದಿನ ಗ್ಲಾಸ್ ಪುಡಿ ಪುಡಿಯಾಗಿದೆ. ನಾಲ್ವರನ್ನ ಉಷಾ ನರ್ಸಿಂಗ್ ಹೋಂ ನಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ಅಂಬ್ಯೂಲೆನ್ಸ್ ಚಾಲಕ ಸಾವಂತ್ ಗೆ ಕಾಲು ಮುರಿದಿದೆ. ತಕ್ಷಣವೇ ಮೂವರನ್ನ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪೂರ್ವ ಸಂಚಾರಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.1
- ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಪಕ್ಷದ ಹೈಕಮಾಂಡ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಶ್ರೀನಿವಾಸ್ ದಾಸಕರಿಯಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಕ್ಷೇತ್ರದಲ್ಲಿ ಹಲವು ಮುಖಂಡರು ಟಿಕೆಟ್ ಆಕಾಂಕ್ಷಿಗಳಾಗಿದ್ದರೂ, ಅಂತಿಮವಾಗಿ ಬಿಜೆಪಿ ವಾಲ್ಮೀಕಿ (ಎಸ್‌ಟಿ) ಸಮುದಾಯಕ್ಕೆ ಮಣೆ ಹಾಕಿದೆ. ಸಾಮಾಜಿಕ ಸಮೀಕರಣವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಶ್ರೀನಿವಾಸ ದಾಸಕರಿಯಪ್ಪ ತಂದೆ ದಾಸಕರಿಯಪ್ಪ ಹಮಾಲಿ ಕೆಲಸದಿಂದ ಮೇಲೆ ಬಂದಿದ್ದು, ಮೂಲ ಜನತಾಪರಿವಾರದವರು. ಈಗ ಮಗ ಶ್ರೀನಿವಾಸ ದಾಸಕರಿಯಪ್ಪ ಬಿಜೆಪಿಯಲ್ಲಿದ್ದು ಅಖಾಡಕ್ಕೆ ಇಳಿದಿದ್ದಾರೆ. ಕಾಂಗ್ರೆಸ್‌ನ ಭದ್ರಕೋಟೆಯಾಗಿ ಪರಿಗಣಿಸಲ್ಪಡುವ ಈ ಕ್ಷೇತ್ರದಲ್ಲಿ ಕಮಲ ಅರಳಿಸಲು ಬಿಜೆಪಿ ತಂತ್ರ ರೂಪಿಸಿದೆ. ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಹಿನ್ನೆಲೆ, ಎಸ್‌ಟಿ ಸಮುದಾಯದ ಅಭ್ಯರ್ಥಿಗೆ ಆದ್ಯತೆ ನೀಡಲಾಗಿದೆ. ಈ ನಿರ್ಧಾರದಿಂದ ಉಪಚುನಾವಣೆಯಲ್ಲಿ ಸ್ಪರ್ಧೆ ಮತ್ತಷ್ಟು ತೀವ್ರಗೊಳ್ಳುವ ನಿರೀಕ್ಷೆಯಿದೆ.ಅಭ್ಯರ್ಥಿ ಘೋಷಣೆ ಆಗುತ್ತಿದ್ದಂತೆಯೇ ಶ್ರೀನಿವಾಸ್ ದಾಸಕರಿಯಪ್ಪ ಅವರ ಮನೆ ಎದುರು ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿ “ಈ ಬಾರಿ ಬಿಜೆಪಿ… ಈ ಬಾರಿ ಬಿಜೆಪಿ” ಎಂದು ಘೋಷಣೆ ಕೂಗಿ ಹರ್ಷ ವ್ಯಕ್ತಪಡಿಸಿದರು. ತಂಡೋಪತಂಡವಾಗಿ ಆಗಮಿಸಿದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದು, ಮನೆ ಎದುರು ಹಬ್ಬದಂತ ವಾತಾವರಣ ಕಂಡುಬರುತ್ತಿದೆ.1
- ಹಲವು ಕಡೆ ಇಸ್ಪೀಟ್ ಅಡ್ಡೆಗಳ ಮೇಲೆ ದಾಳಿ 17 ಪ್ರಕರಣ ದಾಖಲು 58 ಜನರ ಬಂಧನ. ಚಳ್ಳಕೆರೆ: :ಯುಗಾದಿ ಹಬ್ಬದ ನೆಪದಲ್ಲಿ ಹಲವು ಕಡೆ ಗುಂಪು ಕಟ್ಟಿಕೊಂಡು ಇಸ್ಪೀಟ್ ಹಾಡುತ್ತಿದ್ದ ಅಡ್ಡಗಳ ಮೇಲೆ ಚಳ್ಳಕೆರೆ ಪೊಲೀಸರಿಂದ ದಾಳಿ ಮಾಡಲಾಗಿದ್ದು ಇಲ್ಲಿಯವರೆಗ 58 ಮಂದಿಯನ್ನ ಬಂಧಸಿ ಅವರಿ 85.390. ನಗದು ವಶಕ್ಕೆ ಪಡೆದು 58 ಜನರನ್ನ ಬಂಧಿಸಲಾಗಿದೆ. ಯುಗಾದಿ ಹಬ್ಬದ ಮೊದಲನೇ ದಿನವೇ ಕೆಲವು ಕಡೆ ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಕಟ್ಟಿಕೊಂಡು ಇಸ್ಪೀಟ್ ಹಾಡುತ್ತಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಎಸ್ ಪಿ ರಂಜತ್ ಕುಮಾರ್ ಬಂಡಾರು ಹಾಗೂ ಚಳ್ಳಕೆರೆ ಡಿವೈಎಸ್ಪಿ ಎಂಜಿ. ಸತ್ಯನಾರಾಯಣರಾವ್ ಇವರ ಮಾರ್ಗದರ್ಶನದಲ್ಲಿ ಚಳ್ಳಕೆರೆ ಪೊಲೀಸ್ ಇನ್ಸ್ಪೆಕ್ಟರ್ ಕೆ. ಕುಮಾರ್ ಇವರ ನೇತೃತ್ವದ ತಂಡ ಚಳ್ಳಕೆರೆ ತಾಲೂಕಿನ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಇಸ್ಪೀಟ್ ಅಡ್ಡೆಗಳ ಮೇಲೆ ದಾಳಿ ಮಾಡಲಾಗಿದ್ದು. ಇಲ್ಲಿಯವರೆಗೆ 85 ಜನರನ್ನ ಬಂಧಿಸಿ ಅವರಿಂದ 85,390 ರೂ ನಗದು ವರ್ಷಕ್ಕೆ ಪಡೆದು 17 ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.. ಈ ದಾಳಿ ವೇಳೆ ಪೋಲಿಸ್ ಇನ್ಸ್ಪೆಕ್ಟರ್ ಕೆ ಕುಮಾರ್, ಪಿಎಸ್ ಐ ಗಳಾದ ವಿರೇಶ ಧರಪ್ಪ ಬಳಪ ದೊಡ್ಡಮನಿ. ಪೊಲೀಸ್ ಸಿಬ್ಬಂದಿಗಳು ಇದ್ದರು..1
- ಬಾರಿ ಗಾಳಿ-ಮಳೆಗೆ ಸೂರನಹಳ್ಳಿ ಗ್ರಾಮದಲ್ಲಿ ಹಾಗಲಕಾಯಿ ಫಸಲು ನೆಲಕಚ್ಚಿ ರೈತನಿಗೆ ಅಪಾರ ನಷ್ಟ ಉಂಟಾಗಿದೆ. ಚಳ್ಳಕೆರೆ ತಾಲೂಕಿನ ಸೂರನಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಗಾಳಿ-ಮಳೆಯಿಂದ ರೈತ ನರಸಿಂಹಪ್ಪ ಅವರ ತೋಟದಲ್ಲಿ ಬೆಳೆದಿದ್ದ ಹಾಗಲಕಾಯಿ ಬೆಳೆ ಸಂಪೂರ್ಣವಾಗಿ ನೆಲಕಚ್ಚಿ ಅಪಾರ ನಷ್ಟ ಉಂಟಾಗಿದೆ.1
- ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಜೆಬಿ ಹಳ್ಳಿ ಗ್ರಾಮದಲ್ಲಿ ನಿನ್ನೆ ಸುರಿದ ಭಾರಿ ಗಾಳಿ-ಮಳೆಯಿಂದ ರೈತರಿಗೆ ಭಾರೀ ನಷ್ಟ ಉಂಟಾಗಿದೆ. ಅನೇಕ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ಬೆಳೆ ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ಗಿಡಗಳು ನೆಲಕ್ಕುರುಳಿ ನಾಶವಾಗಿವೆ. ವರ್ಷಪೂರ್ತಿ ಶ್ರಮಪಟ್ಟ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತ ಶಿವಣ್ಣ ತಮ್ಮ ನೋವನ್ನು ಹಂಚಿಕೊಂಡು ಸರ್ಕಾರದಿಂದ ತುರ್ತು ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ಸ್ಥಳೀಯ ಅಧಿಕಾರಿಗಳು ತಕ್ಷಣ ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. #ಚಿತ್ರದುರ್ಗ #ಮೊಳಕಾಲ್ಮೂರು #ಜೆಬಿಹಳ್ಳಿ #ಗಾಳಿಮಳೆ #ರೈತನಷ್ಟ #ಬಾಳೆಬೆಳೆ #ಕರ್ನಾಟಕಸುದ್ದಿ #BreakingNews #FarmersLoss #RainDamage #KarnatakaNews #BananaCrop #Agriculture #WeatherDamage1
- ಶ್ರೀ ಶ್ರೀಕಾಂತ ದುಂಡಿಗೌಡ್ರ ನೇತೃತ್ವದಲ್ಲಿ ಭಾರತ ಸೇವಾ ಸಂಸ್ಥೆ (ರಿ) ಬನ್ನೂರ ವತಿಯಿಂದ ಇದೇ ಮಾರ್ಚ 22 ರಂದು ಶಿಗ್ಗಾವಿ ತಾಲ್ಲೂಕಿನ ತಡಸ ಗ್ರಾಮದ ಕಂಚಗಾರಗಟ್ಟಿ (14 ಎಕರೆ) ಕೆರೆಯನ್ನು ಹೂಳು ತೆಗೆಯುವ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ನಟರಾದ ಶ್ರೀ ಅನಿರುದ್ಧ ವಿಷ್ಣುವರ್ಧನರವರು ಸಹ ಭಾಗವಹಿಸಲಿದ್ದಾರೆ. ಬನ್ನಿ ನೀವು ಭಾಗವಹಿಸಿ…1
- ಶುಕ್ರವಾರ ರಂಝಾನ್ ಹಬ್ಬದ ಹಿನ್ನೆಲೆಯಲ್ಲಿ ಇಂದು (ಗುರುವಾರ) ಮಧ್ಯರಾತ್ರಿ 12 ಗಂಟೆ ತನಕ ಅಂಗಡಿ ಮುಂಗಟ್ಟುಗಳನ್ನು ತೆರೆದಿಡಲು ಅನುಮತಿ ನೀಡಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಗುರುವಾರ ಮಧ್ಯರಾತ್ರಿವರೆಗೆ ಅಂಗಡಿಗಳನ್ನು ತೆರೆದಿಡಲು ಹಲವರು ಮನವಿ ಮಾಡಿದ್ದರು. ಅದರಂತೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಇಂದು (ಗುರುವಾರ) ಮಧ್ಯರಾತ್ರಿ 12 ಗಂಟೆಯ ತನಕ ಅಂಗಡಿಗಳನ್ನು ತೆರೆದಿಡಲು ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ.1
- ಶಿವಮೊಗ್ಗ-ಬಿಸಿಲಿನ ತಾಪಕ್ಕೆ ಸೊರಗಿದ್ದ ಜನತೆಗೆ ತಂಪೆರೆದ ಆಲಿಕಲ್ಲಿನ ಮಳೆ2