Shuru
Apke Nagar Ki App…
*ಭಾರತ ನಲ್ಲಿ ವೈರಲ್*
Md Aleemulla Shariff
*ಭಾರತ ನಲ್ಲಿ ವೈರಲ್*
More news from ಕರ್ನಾಟಕ and nearby areas
- *ಭಾರತ ನಲ್ಲಿ ವೈರಲ್*1
- STATEMENT BY ABDUL KHADER SHAHID SOCIAL ACTIVIST STATEMENT RELATED TO #kvnews DAVANGERA BY ELECTION,ULAMA'S,CONGRESS1
- ಕುಡಿಯೋ ನೀರಿಗಾಗಿ ಅಹಾಕಾರ ಉಂಟಾಗಿ ಟ್ಯಾಂಕರ್ ಮೂಲಕ ಗ್ರಾಮಕ್ಕೆ ಕುಡಿಯೋ ನೀರಿನ ವ್ಯವಸ್ಥೆ ಮಾಡಲಾಗುತ್ತಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಸಿಂಗರಮಾರನಹಳ್ಳಿಯಲ್ಲಿ ನೆಡೆದಿದೆ. ಗ್ರಾಮಕ್ಕೆ ನೀರಿನ ಸಂಪರ್ಕ ಕಲ್ಪಿಸೋ ಪೈಪ್ ಲೈನ್ ದುರಸ್ತಿ ಮಾಡಿಸದ ಹಿನ್ನಲೆ ಸೂಳೆ ಕೆರೆಯಿಂದ ಸಿಂಗರಮಾರನಹಳ್ಳಿಗೆ ಕುಡಿಯೋ ನೀರಿಗೆ ವ್ಯವಸ್ಥೆ ಸ್ಥಗಿತವಾಗಿದೆ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೂಡ ಇದ್ದರೂ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು ಪಿಡಿಓ ಮಂಜುಳಾ ಹಾಗೂ ತಾಲೂಕು ಆಡಳಿತದ ವಿರುದ್ಧ ಗ್ರಾಮಸ್ಥರು ಅಸಮಧಾನ ವ್ಯಕ್ತ ಪಡಿಸಿದ್ದಾರೆ.2
- ಆಯುಷ್ಮಾನ್ ಕಾರ್ಡ್ ಮಾಡಿಸಲು ಕರೆಮಾಡಿ ನಿಂಗರಾಜು 87222239721
- ಸಾವಿರಾರು ವರ್ಷಗಳ ಹಿಂದೆ ರಾಮಾನುಜ ಚಾರ್ಯರು ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಧರ್ಮ ಪ್ರಚಾರ ನಡೆಸಿದ್ದರು. ವೇಳೆ ಆಚಾರ್ಯರಿಗೆ 4 ಜನ ಶಿಶ್ಯರಿದ್ದು, ಈ ಶಿಶ್ಯರ ಮನೆಯಲ್ಲೆ ಆಚಾರ್ಯರು ಭಿಕ್ಷಾ ಕೈಂಕರ್ಯ ನಡೆಸ್ತಿದ್ರು. ಹೀಗಾಗಿ ಇಂದಿಗೂ ಈ ಸಂಪ್ರದಾಯ ಮುಂದುವರೆದಿದ್ದು, ಯತಿರಾಜದಾಸರ್ ಕುಟುಂಬ ಭಿಕ್ಷಾ ಕೈಂಕರ್ಯವನ್ನ ಅತ್ಯಂತ ಅಚ್ಚುಕಟ್ಟಾಗಿ ನೆರವೇರಿಸಿದೆ. ಈ ಕುರಿತ ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ. ಹೌದು., ಸಾವಿರಾರು ವರ್ಷಗಳ ಹಿಂದೆ ಆಚಾರ್ಯ ರಾಮಾನುಜರು ಸಕ್ಕರೆನಾಡು ಮಂಡ್ಯ ಜಿಲ್ಲೆಯ ಪಾಂಡವಪುರದ ಮೇಲುಕೋಟೆಗೆ ದಾವಿಸಿ ಧರ್ಮ ಪ್ರಚಾರ ನಡೆಸಿದ್ದರು. ಈ ವೇಳೆ ತಮಗೆ ಪ್ರಿಯವಾದ 4 ಜನ ಶಿಶ್ಯರ ಮನೆಗಳಲ್ಲಿ ಭಿಕ್ಷಾ ಕೈಂಕರ್ಯ ನಡೆಸಿ ತಮ್ಮ ಧರ್ಮ ಪ್ರಚಾರವನ್ನ ಮಾಡ್ತಿದ್ರು. ಹೀಗಾಗೆ ಇಂದಿಗೂ ಮೇಲುಕೋಟೆಯಲ್ಲಿ ರಾಮಾನುಜ ಚಾರ್ಯರಿಗೆ ಭಿಕ್ಷಾ ಕೈಂಕರ್ಯ ನಡೆಸುವ ಸಂಪ್ರದಾಯವನ್ನ ನೆರವೇರಿಸಲಾಗ್ತಿದೆ. ಇನ್ನು ಇದರ ಭಾಗವಾಗಿ ಇಂದು ಮೇಲುಕೋಟೆಯಲ್ಲಿ ರಾಮಾನುಜ ಚಾರ್ಯರ ಶಿಶ್ಯರ ವಂಶಸ್ಥರಾದ ಯತಿರಾಜದಾಸರ್ ಕುಟುಂಬ ಭಿಕ್ಷಾ ಕೈಂಕರ್ಯವನ್ನ ನೆರವೇರಿಸಿತು. ರಾಮಾನುಜ ಚಾರ್ಯರಿಗೆ ಪ್ರಿಯವಾದ ಭಕ್ಷ್ಯ ಭೊಜ್ಯಗಳನ್ನ ಸಿದ್ದ ಪಡಿಸಿ, ಹಣ್ಣು ಹಂಪಲುಗಳನ್ನ ತಟ್ಟೆಯಲ್ಲಿ ಇರಿಸಿ ನೈವೇದ್ಯವನ್ನ ನೆರವೇರಿಸಲಾಯ್ತು. ಹಿಂದೆ ರಾಮಾನುಜರು ಯತಿರಾಜದಾಸರ್ ತಿರುಮಾಳಿಗೆಗೆ ಬಂದು ಭಿಕ್ಷೆ ಸ್ವೀಕರಿಸುತ್ತಿದ್ದ ಐತಿಹಾಸಿಕ ಘಟನೆಯ ಪ್ರತೀಕವಾಗಿ ಈ ಭಿಕ್ಷಾ ಕೈಂಕರ್ಯ ಸೇವೆ ನೆರವೇರಿಸಿಕೊಂಡು ಬರಲಾಗ್ತಿದೆ. ಇನ್ನು ಈ ಹಿಂದೆ ಶ್ರೀರಂಗಂನಲ್ಲಿ ನಡೆಯುತ್ತಿದ್ದ ದುರಾಚಾರಗಳಿಗೆ ರಾಮಾನುಜರು ಕಡಿವಾಣ ಹಾಕಿ, ಸಾಮಾಜಿಕ ಸಾಮರಸ್ಯದ ಪರ ಧ್ವನಿ ಎತ್ತಿದ್ದರು. ಹೀಗಾಗಿ ಅಂದು ರಾಮಾನುಜರಿಗೆ ಭಿಕ್ಷಾಟನೆ ವೇಳೆ ವಿಷ ಹಾಕಲಾಗಿತ್ತು ಎನ್ನಲಾಗಿದೆ. ಹೀಗಾಗಿ ಮೇಲುಕೋಟೆಯಲ್ಲಿ ಆಚಾರ್ಯರು ತಮಗೆ ಪ್ರಯವಾದ 4 ಜನ ಶಿಶ್ಯರ ಬಳಿ ಮಾತ ಭಿಕ್ಷಾ ಕೈಂಕರ್ಯ ನೆರವೇರಿಸುತ್ತಿದ್ದರು ಎನ್ನಲಾಗಿದೆ. ಸದ್ಯ ಈ ಸಂಪ್ರದಾಯ ಇಂದಿಗೂ ನಡೆಯುತ್ತಿದ್ದು, ಯತಿರಾಜದಾಸರ್ ಪರಂಪರೆ ಇಂದಿಗೂ ಈ ಆಚಾರಣೆಯನ್ನ ಮುನ್ನಡೆಸಿಕೊಂಡು ಬಂದಿದ್ದು, ರಾಮಾನುಜರಿಗೆ ಪ್ರಿಯವಾದ ಭಕ್ಚ್ಯಗಳನ್ನ ನೈವೇದ್ಯ ಮಾಡಲಾಗುತ್ತದೆ.1
- ಹನೂರು ಪಟ್ಟಣದ ಲೋಕಪಯೋಗಿ ಇಲಾಖೆ ವಸತಿಗೃಹದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಭಗೀರಥ ಮಹರ್ಷಿ ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು . ಭಗಿರಥ ಮಹರ್ಷಿ ಧರೆಗೆ ಗಂಗೆಯನ್ನು ತರಲು ಮಹಾ ಮಹಾಶಿವನೆ ಮಹರ್ಷಿಗಳ ತಪೋಶಕ್ತಿಗೆ ಮೆಚ್ಚಿ ಪ್ರತ್ಯಕ್ಷವಾಗಿ ಧರೆಗೆ ಗಂಗೆಯನ್ನು ಹರಿಸಿದರು ಹೀಗಾಗಿ ಮಹೇಶ್ ಜಯಂತಿ ಆಚರಣೆಯನ್ನು ತಾಲೂಕು ಆಡಳಿತ ಸಮಿತಿ ವತಿಯಿಂದ ಆಚರಿಸಲಾಗುತ್ತಿದೆ ಹೀಗಾಗಿ ಮುಂದಿನ ದಿನಗಳಲ್ಲಿ ವಿಜ್ರಮಣೆಯಿಂದ ಆಚರಣೆ ಮಾಡಲು ಸಂಪೂರ್ಣ ಸಹಕಾರ ನೀಡಲಾಗುವುದು ಹೀಗಾಗಿ ದೇಶಾದ್ಯಂತ ಇಂದು ಸರಳವಾಗಿ ನಡೆಯುತ್ತಿರುವ ಜಯಂತಿ ಆಚರಣೆ ಉತ್ತಮವಾದದ್ದು . ಎಂದರು ಕ್ಷೇತ್ರದಲ್ಲಿ ಮಳೆ ಇಲ್ಲದೆ ಕೆರೆಕಟ್ಟೆಗಳು ಕಾಲುವೆಗಳು ಬರಿದಾಗಿತ್ತು ಸಕಲ ಜೀವರಾಶಿಗಳಿಗೂ ನೀರಿನ ಸಮಸ್ಯೆ ಉಂಟಾಗಿರುವುದರಿಂದ ಮುಂದಿನ ನಾಲ್ಕೈದು ತಿಂಗಳ ಒಳಗಡೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಗ್ರಾಮಗಳಿಗೆ ಕಲ್ಪಿಸಲಾಗುತ್ತದೆ ಕ್ಷೇತ್ರದಲ್ಲಿ ಅವಶ್ಯಕತೆ ಇರುವ ಕಡೆ ಈಗಾಗಲೇ ನೀರಿನ ವ್ಯವಸ್ಥೆಗೆ ಸಕಲ ರೀತಿಯಲ್ಲಿ ಅಧಿಕಾರಿಗಳಿಗೆ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಲಾಗಿದೆ ಎಂದರು . ಮುಂದಿನ ದಿನಗಳಲ್ಲಿ ಭಗಿರಥ ಮಹರ್ಷಿ ಜಯಂತಿ ಆಚರಣೆಯನ್ನು ವಿಜ್ರಮಣೆಯಿಂದ ಮಾಡಲು ಸಕಲ ರೀತಿಯಲ್ಲಿಯೂ ಸಹಕಾರ ನೀಡಲಾಗುವುದು ಹೀಗಾಗಿ ಕ್ಷೇತ್ರದಲ್ಲಿ ರೈತಾಪಿ ವರ್ಗದವರೇ ಹೆಚ್ಚಾಗಿರುವುದಿಂದ ಕುಡಿಯುವ ನೀರಿನ ಸಮಸ್ಯೆ ಮತ್ತು ನೀರಾವರಿಗೆ ಸಮಸ್ಯೆ ಉಂಟಾಗಿದೆ ರಾಮನಗುಡ್ಡ ಕೆರೆಗೆ ನೀರು ಹರಿಸಿದ ಪರಿಣಾಮ ಆ ಭಾಗದಲ್ಲಿ ಇದ್ದಂತ ನೀರಿನ ಸಮಸ್ಯೆ ನೀಗಿದಂತಾಗಿದೆ ಉಳಿದಂತಹ ಕ್ಷೇತ್ರದ ವಿವಿಧ ಭಾಗಗಳಿಗೂ ನೀರಾವರಿ ಯೋಜನೆಯನ್ನು ಕಲ್ಪಿಸಲು ಅಂತಹ ಹಂತವಾಗಿ ಕ್ರಮ ಕೈಗೊಳ್ಳಲಾಗಿದೆ ಜನತೆ ಸಂಪೂರ್ಣವಾಗಿ ಸಹಕಾರ ನೀಡಬೇಕು ಎಂದರು . ಇದೆ ಸಮಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಹೇಶ್,ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ರೇಖಾ, ಪಟ್ಟಣ ಪಂ ಇಂಜಿನಿಯರ್ ನಾಗರಾಜ್, ಆರಕ್ಷಕ ನಿರೀಕ್ಷಕರಾದ ಸಾಹೇಬ್ ಗೌಡ, ಅಗ್ನಿಶಾಮಕ ಠಾಣಾಧಿಕಾರಿಗಳಾದ ಮಹೇಶ್,ಸಮುದಾಯದ ಮುಖಂಡರುಗಳಾದ ಡಿ ಪಿ ಗೋವಿಂದ ನಿಂಗಶೆಟ್ಟಿ, ಮಾಜಿ ಗ್ರಾಮ ಅಧ್ಯಕ್ಷರುಗಳಾದ ನಾಗೇಶ್, ರಂಗಸ್ವಾಮಿ,ಶೆಟ್ಟಿ, ಅಜ್ಜೀಪುರ ಮಹಾದೇವ, ಮಂಜು, ಮರೀಶೆಟ್ಟಿ, ನಂಜುಂಡಸ್ವಾಮಿ, ಉಮಾಶಂಕರ್,ಸೀನ,ಹಾಗೂ ಇನ್ನಿತರರು ಇದ್ದರು..4
- ಹನೂರು: ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಮೂಲ ಮಂತ್ರವಾಗಿದ್ದು, ಜನತೆಗೆ ನೀಡಿದ ಭರವಸೆಗಳನ್ನು ಹಂತ ಹಂತವಾಗಿ ಈಡೇರಿಸುತ್ತಿದ್ದೇನೆ ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು. ತಾಲೂಕಿನ ಕಾಮಗೆರೆ, ಮಂಗಲ ಮತ್ತು ಕೊಂಗರಹಳ್ಳಿ ಗ್ರಾಮಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅನುದಾನದಡಿ ಹಮ್ಮಿಕೊಳ್ಳಲಾದ ಒಟ್ಟು 2.70 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅವರು ಬುಧವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಅಭಿವೃದ್ಧಿ ಕಾಮಗಾರಿಗಳ ವಿವರ: ಕ್ಷೇತ್ರದ ವಿವಿಧ ಬಡಾವಣೆಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಈ ಕೆಳಕಂಡಂತೆ ಅನುದಾನ ವಿನಿಯೋಗಿಸಲಾಗುತ್ತಿದೆ: ಕಾಮಗೆರೆ ಹೊಸ ಬಡಾವಣೆ: ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ 1 ಕೋಟಿ ರೂ. ಮಂಗಲ ಗ್ರಾಮದ ಹೊಸ ಬಡಾವಣೆ: ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ 1 ಕೋಟಿ ರೂ. ಕಾಮಗೆರೆ ಆದಿಜಾಂಬವ ಬಡಾವಣೆ: ಸಿಸಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ 50 ಲಕ್ಷ ರೂ. ಕೊಂಗರಹಳ್ಳಿ ಹೊಸ ಬಡಾವಣೆ: ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ 20 ಲಕ್ಷ ರೂ. "ಕ್ಷೇತ್ರದ ನೀರಾವರಿ ಯೋಜನೆಗಳನ್ನು ಬಲಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಈಗಾಗಲೇ ರಾಮನ ಗುಡ್ಡೆ ಕೆರೆ ಭರ್ತಿಯಾಗಿದ್ದು, ಶೀಘ್ರದಲ್ಲೇ ಉದ್ದನೂರು ಡ್ಯಾಮ್‌ಗೆ ನೀರು ಬರಲಿದೆ. ರಾಜ್ಯ ಸರ್ಕಾರವು 2026ರ ಬಜೆಟ್‌ನಲ್ಲಿ ಹನೂರು ಕ್ಷೇತ್ರದ ನೀರಾವರಿಗಾಗಿ 490 ಕೋಟಿ ರೂ. ಅನುದಾನ ನೀಡಿದ್ದು, ಇದು ರೈತರಿಗೆ ವರದಾನವಾಗಲಿದೆ." — ಎಂ.ಆರ್. ಮಂಜುನಾಥ್, ಶಾಸಕರು. ಗಣ್ಯರ ಉಪಸ್ಥಿತಿ: ಈ ಸಂದರ್ಭದಲ್ಲಿ ಮುಖಂಡರಾದ ಸಿಂಗನಲ್ಲೂರು ರಾಜಣ್ಣ, ಮಹಾದೇವಣ್ಣ, ಡಾ. ಗುರುಮೂರ್ತಿ, ಶಿವು, ರಾಕೇಶ್, ಕಿಶೋರ್, ತೋಮಣ್ಣ, ಲಕ್ಷ್ಮಣ, ನಿಂಗರಾಜು, ರಾಜಪ್ಪ, ಶಿವಮ್ಮಲ್ಲು, ಮಹದೇವಸ್ವಾಮಿ, ಮಹೇಶ್, ಪ್ರವೀಣ್, ಸುದೀನ, ಚಿಕ್ಕಸ್ವಾಮಿ, ಮಲ್ಲಿಕಾರ್ಜುನ, ಶೇಖರ್, ಮಹಾದೇವ ಮರಿಸ್ವಾಮಿ, ರಾಜಮ್ಮ ಸೇರಿದಂತೆ ಹಲವಾರು ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.4
- *ಭಾರತ ನಲ್ಲಿ ವೈರಲ್*1