ಮೊಬೈಲ್ ಗೀಳು ಬಿಟ್ಟು ಪುಸ್ತಕ ಪ್ರೀತಿಸಿ: ಡಾ. ಎಸ್.ವಿ. ಡಾಣಿ ಕುಷ್ಟಗಿ: ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸರ್ ಎಂ.ವಿ. ಪುತ್ಥಳಿ ಅನಾವರಣ, ಎಂಜಿನಿಯರ್ಸ್ ದಿನಾಚರಣೆ. ಕುಷ್ಟಗಿ: ಮೊಬೈಲ್ ನಿಮ್ಮನ್ನು ತಲೆತಗ್ಗಿಸಿ ನೋಡುವಂತೆ ಮಾಡಿ ಭ್ರಮೆಯ ಲೋಕದಲ್ಲಿ ಮುಳುಗಿಸಿದರೆ, ಪುಸ್ತಕ ನಿಮ್ಮನ್ನು ತಲೆತಗ್ಗಿಸಿ ಓದಿಸಿಕೊಂಡು ಭವಿಷ್ಯದಲ್ಲಿ ತಲೆ ಎತ್ತಿ ಗೌರವದಿಂದ ಬದುಕುವಂತೆ ಮಾಡುತ್ತದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಎಸ್.ವಿ. ಡಾಣಿ ಹೇಳಿದರು. ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಹಾಗೂ ಕ್ರೀಡಾ ಸಂಘಗಳ ಉದ್ಘಾಟನೆ, ಎಂಜಿನಿಯರ್ಸ್ ದಿನಾಚರಣೆ ಹಾಗೂ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೊಪ್ಪಳ ಗವಿಮಠದ ಶ್ರೀಗಳ ನುಡಿಯನ್ನು ಸ್ಮರಿಸಿದ ಅವರು, ಬರೆದ ಅಕ್ಷರ ತಪ್ಪಾದರೆ ತಿದ್ದಿ ಸರಿಪಡಿಸಬಹುದು. ಆದರೆ ಒಮ್ಮೆ ಕೈತಪ್ಪಿದ ಬದುಕನ್ನು ಮತ್ತೆ ತಿದ್ದಲಾಗದು. ಆದ್ದರಿಂದ ವಿದ್ಯಾರ್ಥಿಗಳು ಸರ್ ಎಂ. ವಿಶ್ವೇಶ್ವರಯ್ಯ ಅವರ ಶಿಸ್ತು, ಕೌಶಲ್ಯ, ಸಮಯಪ್ರಜ್ಞೆ ಹಾಗೂ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಎಚ್ಚರಿಕೆಯ ಹೆಜ್ಜೆ ಇಡಬೇಕು ಎಂದು ಸಲಹೆ ನೀಡಿದರು. ಪ್ರತಿಮೆ ಆದರ್ಶದ ಪ್ರತೀಕ ಸರ್ ಎಂ. ವಿಶ್ವೇಶ್ವರಯ್ಯ ಅವರ ಪುತ್ಥಳಿ ಅನಾವರಣಗೊಳಿಸಿದ ನಿವೃತ್ತ ಪ್ರಾಚಾರ್ಯ ವಾದಿರಾಜ ಮಠದ ಮಾತನಾಡಿ, ಪ್ರತಿಮೆ ಎಂದರೆ ಕೇವಲ ಕಲ್ಲು ಅಥವಾ ಲೋಹದ ಆಕೃತಿಯಲ್ಲ. ಅದು ಭವಿಷ್ಯದ ಪೀಳಿಗೆಗೆ ನೀಡುವ ಮೌನ ಸಂದೇಶವಾಗಿದೆ. ಸರ್ ಎಂ. ವಿಶ್ವೇಶ್ವರಯ್ಯ ಅವರು ಕೇವಲ ಅಣೆಕಟ್ಟುಗಳನ್ನು ನಿರ್ಮಿಸಿದ ತಂತ್ರಜ್ಞರಲ್ಲ; ಇಡೀ ನಾಡಿನ ಪ್ರಗತಿಯ ಕುರಿತು ದೂರದೃಷ್ಟಿಯ ಚಿಂತನೆ ನೀಡಿದ ಮಹಾನ್ ದಾರ್ಶನಿಕರು ಎಂದು ಹೇಳಿದರು. ಸಮಾಜಮುಖಿ ಜ್ಞಾನಕ್ಕೆ ಒತ್ತು ಮುಖ್ಯ ಅತಿಥಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ರಾಜಶೇಖರಗೌಡ ಪಾಟೀಲ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ಸ್ಪಷ್ಟ ಗುರಿ ನಿಗದಿಪಡಿಸಿಕೊಳ್ಳಬೇಕು. ತಾವು ಪಡೆದ ತಾಂತ್ರಿಕ ಜ್ಞಾನವನ್ನು ಕೇವಲ ವೈಯಕ್ತಿಕ ಪ್ರಗತಿಗೆ ಸೀಮಿತಗೊಳಿಸದೆ ಸಮಾಜದ ಅಭಿವೃದ್ಧಿಗೆ ಬಳಸಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಕೆ. ವೆಂಕಟೇಶಮೂರ್ತಿ ಮಾತನಾಡಿ, ಸಂಸ್ಥೆ, ದಾನಿಗಳು ಹಾಗೂ ಸಿಬ್ಬಂದಿಯ ಒಗ್ಗಟ್ಟಿನ ಶ್ರಮದಿಂದ ಕಾಲೇಜು ಆವರಣದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರ ಪುತ್ಥಳಿ ಸ್ಥಾಪಿಸಲು ಸಾಧ್ಯವಾಗಿದೆ. ವಿದ್ಯಾರ್ಥಿಗಳು ಜ್ಞಾನ, ಕೌಶಲ್ಯದ ಜೊತೆಗೆ ಸಮಾಜದ ಬಗ್ಗೆ ಪ್ರೀತಿ, ಕಾಳಜಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ದಾನಿಗಳಿಗೆ ಸನ್ಮಾನ ಸರ್ ಎಂ. ವಿಶ್ವೇಶ್ವರಯ್ಯ ಅವರ ಪುತ್ಥಳಿ ನಿರ್ಮಾಣಕ್ಕೆ ಸಹಕರಿಸಿದ ವಾದಿರಾಜ ಮಠದ, ಆನಂದ ದೇಸಾಯಿ, ಹನುಮಂತಪ್ಪ ಕುರ್ನಾಳ, ಮಹಾಂತೇಶ ಹಾಗಲದಾಳ ಹಾಗೂ ಮಹಾಂತಪ್ಪ ಕೌದಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಪರಶುರಾಮ, ಕ್ರೀಡಾ ಸಲಹೆಗಾರ ಮಹಾಂತಪ್ಪ ಹಾಗೂ ಎನ್‌ಎಸ್‌ಎಸ್ ಅಧಿಕಾರಿ ವೀರನಗೌಡ ಉಪಸ್ಥಿತರಿದ್ದರು. ಡಾ. ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಮಂಜುಳಾ ಹಿರೇಮಠ ಸ್ವಾಗತಿಸಿದರು. ಇರ್ಫಾನ್ ಹುಡೇದ್ ವಂದಿಸಿದರು. ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮೊಬೈಲ್ ಗೀಳು ಬಿಟ್ಟು ಪುಸ್ತಕ ಪ್ರೀತಿಸಿ: ಡಾ. ಎಸ್.ವಿ. ಡಾಣಿ ಕುಷ್ಟಗಿ: ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸರ್ ಎಂ.ವಿ. ಪುತ್ಥಳಿ ಅನಾವರಣ, ಎಂಜಿನಿಯರ್ಸ್ ದಿನಾಚರಣೆ. ಕುಷ್ಟಗಿ: ಮೊಬೈಲ್ ನಿಮ್ಮನ್ನು ತಲೆತಗ್ಗಿಸಿ ನೋಡುವಂತೆ ಮಾಡಿ ಭ್ರಮೆಯ ಲೋಕದಲ್ಲಿ ಮುಳುಗಿಸಿದರೆ, ಪುಸ್ತಕ ನಿಮ್ಮನ್ನು ತಲೆತಗ್ಗಿಸಿ ಓದಿಸಿಕೊಂಡು ಭವಿಷ್ಯದಲ್ಲಿ ತಲೆ ಎತ್ತಿ ಗೌರವದಿಂದ ಬದುಕುವಂತೆ ಮಾಡುತ್ತದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಎಸ್.ವಿ. ಡಾಣಿ ಹೇಳಿದರು. ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಹಾಗೂ ಕ್ರೀಡಾ ಸಂಘಗಳ ಉದ್ಘಾಟನೆ, ಎಂಜಿನಿಯರ್ಸ್ ದಿನಾಚರಣೆ ಹಾಗೂ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೊಪ್ಪಳ ಗವಿಮಠದ ಶ್ರೀಗಳ ನುಡಿಯನ್ನು ಸ್ಮರಿಸಿದ ಅವರು, ಬರೆದ ಅಕ್ಷರ ತಪ್ಪಾದರೆ ತಿದ್ದಿ ಸರಿಪಡಿಸಬಹುದು. ಆದರೆ ಒಮ್ಮೆ ಕೈತಪ್ಪಿದ ಬದುಕನ್ನು ಮತ್ತೆ ತಿದ್ದಲಾಗದು. ಆದ್ದರಿಂದ ವಿದ್ಯಾರ್ಥಿಗಳು ಸರ್ ಎಂ. ವಿಶ್ವೇಶ್ವರಯ್ಯ ಅವರ
ಶಿಸ್ತು, ಕೌಶಲ್ಯ, ಸಮಯಪ್ರಜ್ಞೆ ಹಾಗೂ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಎಚ್ಚರಿಕೆಯ ಹೆಜ್ಜೆ ಇಡಬೇಕು ಎಂದು ಸಲಹೆ ನೀಡಿದರು. ಪ್ರತಿಮೆ ಆದರ್ಶದ ಪ್ರತೀಕ ಸರ್ ಎಂ. ವಿಶ್ವೇಶ್ವರಯ್ಯ ಅವರ ಪುತ್ಥಳಿ ಅನಾವರಣಗೊಳಿಸಿದ ನಿವೃತ್ತ ಪ್ರಾಚಾರ್ಯ ವಾದಿರಾಜ ಮಠದ ಮಾತನಾಡಿ, ಪ್ರತಿಮೆ ಎಂದರೆ ಕೇವಲ ಕಲ್ಲು ಅಥವಾ ಲೋಹದ ಆಕೃತಿಯಲ್ಲ. ಅದು ಭವಿಷ್ಯದ ಪೀಳಿಗೆಗೆ ನೀಡುವ ಮೌನ ಸಂದೇಶವಾಗಿದೆ. ಸರ್ ಎಂ. ವಿಶ್ವೇಶ್ವರಯ್ಯ ಅವರು ಕೇವಲ ಅಣೆಕಟ್ಟುಗಳನ್ನು ನಿರ್ಮಿಸಿದ ತಂತ್ರಜ್ಞರಲ್ಲ; ಇಡೀ ನಾಡಿನ ಪ್ರಗತಿಯ ಕುರಿತು ದೂರದೃಷ್ಟಿಯ ಚಿಂತನೆ ನೀಡಿದ ಮಹಾನ್ ದಾರ್ಶನಿಕರು ಎಂದು ಹೇಳಿದರು. ಸಮಾಜಮುಖಿ ಜ್ಞಾನಕ್ಕೆ ಒತ್ತು ಮುಖ್ಯ ಅತಿಥಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ರಾಜಶೇಖರಗೌಡ ಪಾಟೀಲ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ಸ್ಪಷ್ಟ ಗುರಿ ನಿಗದಿಪಡಿಸಿಕೊಳ್ಳಬೇಕು. ತಾವು ಪಡೆದ ತಾಂತ್ರಿಕ ಜ್ಞಾನವನ್ನು ಕೇವಲ ವೈಯಕ್ತಿಕ ಪ್ರಗತಿಗೆ ಸೀಮಿತಗೊಳಿಸದೆ ಸಮಾಜದ ಅಭಿವೃದ್ಧಿಗೆ ಬಳಸಬೇಕು ಎಂದು ಕರೆ
ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಕೆ. ವೆಂಕಟೇಶಮೂರ್ತಿ ಮಾತನಾಡಿ, ಸಂಸ್ಥೆ, ದಾನಿಗಳು ಹಾಗೂ ಸಿಬ್ಬಂದಿಯ ಒಗ್ಗಟ್ಟಿನ ಶ್ರಮದಿಂದ ಕಾಲೇಜು ಆವರಣದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರ ಪುತ್ಥಳಿ ಸ್ಥಾಪಿಸಲು ಸಾಧ್ಯವಾಗಿದೆ. ವಿದ್ಯಾರ್ಥಿಗಳು ಜ್ಞಾನ, ಕೌಶಲ್ಯದ ಜೊತೆಗೆ ಸಮಾಜದ ಬಗ್ಗೆ ಪ್ರೀತಿ, ಕಾಳಜಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ದಾನಿಗಳಿಗೆ ಸನ್ಮಾನ ಸರ್ ಎಂ. ವಿಶ್ವೇಶ್ವರಯ್ಯ ಅವರ ಪುತ್ಥಳಿ ನಿರ್ಮಾಣಕ್ಕೆ ಸಹಕರಿಸಿದ ವಾದಿರಾಜ ಮಠದ, ಆನಂದ ದೇಸಾಯಿ, ಹನುಮಂತಪ್ಪ ಕುರ್ನಾಳ, ಮಹಾಂತೇಶ ಹಾಗಲದಾಳ ಹಾಗೂ ಮಹಾಂತಪ್ಪ ಕೌದಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಪರಶುರಾಮ, ಕ್ರೀಡಾ ಸಲಹೆಗಾರ ಮಹಾಂತಪ್ಪ ಹಾಗೂ ಎನ್‌ಎಸ್‌ಎಸ್ ಅಧಿಕಾರಿ ವೀರನಗೌಡ ಉಪಸ್ಥಿತರಿದ್ದರು. ಡಾ. ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಮಂಜುಳಾ ಹಿರೇಮಠ ಸ್ವಾಗತಿಸಿದರು. ಇರ್ಫಾನ್ ಹುಡೇದ್ ವಂದಿಸಿದರು. ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
- ಕುಷ್ಟಗಿಯಲ್ಲಿ ಪ್ರಧಾನಿ ಮೋದಿ ಜನ್ಮದಿನಾಚರಣೆ: ಮನೆ ಮನೆಯಲ್ಲಿ ಆಶೀರ್ವಾದ ದೀಪ ಬೆಳಗಲು ಕರೆ - ಶಾಸಕ ದೊಡ್ಡನಗೌಡ ಪಾಟೀಲ* *ಕುಷ್ಟಗಿ:* ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನಾಚರಣೆ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿ, ಅವರ ದೀರ್ಘಾಯುಷ್ಯಕ್ಕೆ ಶಾಸಕ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಹಾಗೂ ಬಿಜೆಪಿ ಕಾರ್ಯಕರ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಮಾತನಾಡಿದ ಅವರು, ದೇಶ ಕಂಡ ಪ್ರಬುದ್ಧ ನಾಯಕ, ಜಗತ್ತು ಮೆಚ್ಚಿದ ನಾಯಕ ನರೇಂದ್ರ ಮೋದಿಜಿ ಅವರಿಗೆ ಭಾರತವನ್ನು ಬಲಿಷ್ಠ ಮಾಡುವ ಶಕ್ತಿಯನ್ನು ದೇವರು ನೀಡಲಿ. ಇಂದು 75ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಮೋದಿಜಿ ಅವರಿಗೆ ನಿಮ್ಮೆಲ್ಲರ ಪರವಾಗಿ ಶುಭಾಶಯಗಳನ್ನು ಕೋರುತ್ತೇನೆ. ಅವರ ಹೆಸರಿನಲ್ಲಿ ಒಂದು ತಿಂಗಳ ಕಾಲ ಶಿವಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇಂದು ಸಂಜೆ ಮನೆ ಮನೆಯಲ್ಲಿ ದೀಪ ಹಚ್ಚುವ ಮೂಲಕ ಆಶೀರ್ವಾದ ದೀಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಾರತೀಯ ಜನತಾ ಪಕ್ಷದ ಹಿರಿಯರು, ಎಲ್ಲ ನಾಗರಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ ಅವರು, ಜನ್ಮದಿನದ ಈ ಸಂದರ್ಭದಲ್ಲಿ ಅವರಿಗೆ ಶುಭವಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಮಹಾಂತೇಶ ಬಾದಾಮಿ, ಜಯ ತೀರ್ಥ ಸೌದಿ, ಈರಣ್ಣ ಗಜೇಂದ್ರಗಡ,. ತಾಲೂಕು ಯುವ ಮೋರ್ಚಾ ಅಧ್ಯಕ್ಷ ಉಮೇಶ ಯಾದವ್, ಮಾಜಿ ಪುರಸಭೆ ಸದಸ್ಯ ಜಯತೀರ್ಥ ಆಚಾರಿ, ಅಶೋಕ ಬಳೂಟಗಿ, ಸುಖಮುನಿ ಗುರುವಿನ್, ವೆಂಕಟೇಶ ಇಂಗಳಗಿ, ಶಿವಪ್ಪ ಗೆಜ್ಜಲಗಟ್ಟಿ, ಸುರೇಶ ಕೌದಿ, ಶೈಲಜಾ ಬಾಗಲಿ, ಶರಣಮ್ಮ ಸೇರಿದಂತೆ ನಗರದ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.4
- ನಾಳೆ ದೇಶದ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರ ಜನ್ಮದಿನ. ಕುಷ್ಟಗಿ : ದೇಶದ ಅಭಿವೃದ್ಧಿ, ಜನಸೇವೆ ಹಾಗೂ ರಾಷ್ಟ್ರ ನಿರ್ಮಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ದೇಶದ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರಿಗೆ ನಾಳೆ ಜನ್ಮದಿನವಾಗಿರುವುದರಿಂದ ಅವರಿಗೆ ಇಂದು ಮುಂಚಿತವಾಗಿ ಹೃತ್ಪೂರ್ವಕವಾದ ಹುಟ್ಟುಹಬ್ಬದ ಶುಭಾಶಯಗಳನ್ನು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಹಾಗೂ ಕುಷ್ಟಗಿ ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಹೆಚ್ ಪಾಟೀಲ್ ಅವರು ತಿಳಿಸಿದ್ದಾರೆ. ನಾಳೆ ಸೆಪ್ಟೆಂಬರ್ 17ರಂದು ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ದೀಪ ಬೆಳಗಿಸಿ, ಮೋದಿಜಿ ಅವರಿಗೆ ಇನ್ನಷ್ಟು ಹೆಚ್ಚು ದೇಶ ಸೇವೆ ಮಾಡುವ ಶಕ್ತಿ, ಆರೋಗ್ಯ, ಆಯುಷ್ಯ ಹಾಗೂ ಯಶಸ್ಸನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸೋಣ ಹಾಗೂ ಸೇವೆಯ ಸಂಕಲ್ಪದೊಂದಿಗೆ, ರಾಷ್ಟ್ರ ನಿರ್ಮಾಣದ ಪಯಣಕ್ಕೆ ನಮ್ಮ ನಿಮ್ಮೆಲ್ಲರ ಬೆಂಬಲ ಇರಲಿ ಎಂದು ಶಾಸಕರು ಹೇಳಿದ್ದಾರೆ.2
- ಮಾಜಿ ಶಾಸಕ ದೊಡ್ಡನಗೌಡ ಜಿ ಪಾಟೀಲ್ ಮನೆಗೆ ಭೇಟಿ ನೀಡಿದ ಶಾಸಕ ಶರಣಗೌಡ ಕಂದಕೂರ ದೊಡ್ಡನಗೌಡ ಜಿ ಪಾಟೀಲ್ ಮನೆಗೆ ಭೇಟಿ ನೀಡಿದ ಶಾಸಕ ಶರಣಗೌಡ ಕಂದಕೂರ ಇಳಕಲ್ ; ಮಾಜಿ ಶಾಸಕ ದೊಡ್ಡನಗೌಡ ಜಿ ಪಾಟೀಲ್ ಅವರ ತಾಯಿಯವರು ನಿಧನದ ಹಿನ್ನೆಲೆ , ಗುರುಮಿಠಕಲ್ ಕ್ಷೇತ್ರದ ಜೆಡಿಎಸ್ ಪಕ್ಷದ ಶಾಸಕ ಶರಣಗೌಡ ಕಂದಕೂರ ಭೇಟಿ ನೀಡಿ ಸಾಂತ್ವಾನ ಹೇಳಿದರು. ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.4
- ಕೊಪ್ಪಳ: ನಮ್ಮ ಒತ್ತಡದಿಂದಲೇ ತಾಲೂಕಿನ ಬರ ಗುರುತಿಸಿದ ಸರಕಾರ' : ಸಿವಿಸಿ 'ಕೊಪ್ಪಳ: ಕೊಪ್ಪಳ ತಾಲೂಕ ಬರಪೀಡಿತ ಎಂದು ಸರಕಾರ ಒಪ್ಪಿಕೊಂಡಿರುವುದು ನಮ್ಮ ಹೋರಾಟಕ್ಕೆ ಸಂದ ಜಯ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. "ಕೊಪ್ಪಳವೂ ಸೇರಿದಂತೆ 53 ತಾಲೂಕುಗಳು ಬರಪೀಡಿತ ಸರಕಾರ ಆದೇಶ ಹೊರಡಿಸಿದೆ. ತಾಂತ್ರಿಕ ಪ್ರಕ್ರಿಯೆಗಳ ನಂತರ ಒಂದು ವಾರದಲ್ಲಿ ಈ ತಾಲೂಕು ಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗುತ್ತದೆ. ಈ ವಿಷಯದಲ್ಲಿ ಈ ಹಿಂದೆ ಮಾಡಿದಂತಹ ವಿಳಂಬವನ್ನು ಮಾಡದೆ ಎಲ್ಲಾ ಪ್ರಕ್ರಿಯೆಗಳನ್ನು ಒಂದೆರಡು ದಿನಗಳಲ್ಲಿ ಪೂರ್ಣಗೊಳಿಸಬೇಕು," ಎಂದು ಒತ್ತಾಯಿಸಿದ್ದಾರೆ. ತಾಲೂಕಿನ ಪರಸ್ಥಿತಿಯ ಆಧಾರದ ಮೇಲೆ ನಾವು ಮಂಡಿಸಿದ್ದ ಬೇಡಿಕೆಯನ್ನು ಈಡೇರಿಸಲು ಎರಡೂವರೆ ತಿಂಗಳುಗಳಷ್ಟು ಕಾಲಹರಣ ಮಾಡುವ ಅಗತ್ಯ ಇರಲಿಲ್ಲ. ನಾವು ಒಂದೂವರೆ ತಿಂಗಳಿನಲ್ಲಿ ಎರಡು ಪಾದಯಾತ್ರೆಗಳನ್ನು ಹಮ್ಮಿಕೊಂಡು ತೀವ್ರ ಒತ್ತಡ ಹೇರದಿದ್ದರೆ ಕೊಪ್ಪಳದಲ್ಲಿ ಬರ ಇರುವುದನ್ನು ಸರಕಾರ ಒಪ್ಪುತ್ತಿರಲಿಲ್ಲ. ಶಾಸಕರು ಕ್ರಿಯಾಶೀಲವಾಗಿ ಕೆಲಸ ಮಾಡಿದ್ದರೆ ನಾವು ಹೋರಾಡುವ ಪರಿಸ್ಥಿತಿಯೇ ಇರುತ್ತಿರಲಿಲ್ಲ. ಸರಕಾರದ ನಿರ್ಧಾರ ನಮ್ಮ ಹೋರಾಟಕ್ಕೆ ಸಿಕ್ಕ ಜಯ ಎಂದು ಹೇಳಿದ್ದಾರೆ. "ಕುಡಿಯುವ ನೀರು ಹಾಗೂ ಮೇವು ಪೂರೈಕೆಗೆ, ಬಾಕಿ ಇರುವ ಬೆಳೆ ವಿಮೆಗೆ ಹಾಗೂ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಹಣ ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ಈ ಕೂಡಲೇ ಆರಂಭಿಸಬೇಕು. ಈ ಪ್ರಕ್ರಿಯೆಯಲ್ಲಿ ವಿಳಂಬವಾದರೆ ಪರಿಹಾರ ಸಕಾಲದಲ್ಲಿ ದೊರೆಯದೆ ರೈತರು ಇನ್ನಷ್ಟು ಸಂಕಷ್ಟಕ್ಕೀಡಾಗಲಿದ್ದಾರೆ. ಈ ವಿಷಯದಲ್ಲಿ ಕಾಲಹರಣ ಮಾಡಿದರೇ ನಮ್ಮ ಪಕ್ಷ ಮತ್ತೊಮ್ಮೆ ಉಗ್ರ ಹೋರಾಟ ಮಾಡುವುದು ಖಚಿತ ಎಂದು ಸ್ಪಷ್ಟಪಡಿಸಿದ್ದಾರೆ.2
- ಗುಳೇದಗುಡ್ಡ: ವಿಶ್ವಕರ್ಮರು ಸಾಂಸ್ಕೃತಿಕ ಕಲಾಲೋಕಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ: ಬಡಿಗೇರ ಗುಳೇದಗುಡ್ಡ : ದೇವಶಿಲ್ಪಿ ಎಂದು ಕರೆಯುವ ವಿಶ್ವಕರ್ಮರು ವಾಸ್ತುಶಿಲ್ಪದ ಮೂಲ ಕರ್ತರು. ಅವರ ಕಲಾಪರಂಪರೆಯನ್ನು ಮುಂದುವರಿಸಿಕೊಂಡು ಬಂದಿರುವ ವಿಶ್ವಕರ್ಮರು ಈ ನಾಡಿನಲ್ಲಿ ಸುಂದರ ಶಿಲ್ಪಗಳನ್ನು, ದೇವಸ್ಥಾನಗಳನ್ನು ನಿರ್ಮಿಸುವ ಮೂಲಕ ಸಾಂಸ್ಕೃತಿಕ ಕಲಾಲೋಕಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ವಿಶ್ವಕರ್ಮ ಸಮಾಜದ ಉಪಾಧ್ಯಕ್ಷ ಪುಂಡಲೀಕ ಬಡಿಗೇರ ಹೇಳಿದರು. ಅವರು ಪಟ್ಟಣದಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ದೇವ ಶಿಲ್ಪಿ ಶ್ರೀ ವಿಶ್ವಕರ್ಮ ಜಯಂತ್ಯೋತ್ಸವದ ಅಂಗವಾಗಿ ಗುರುವಾರ ಪಟ್ಟಣದ ಮಳಿಯಪ್ಪಜ್ಜನ ದೇವಸ್ಥಾನದಲ್ಲಿ ಶ್ರೀ ವಿಶ್ವಕರ್ಮ ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಿದ ಸಂದರ್ಭದಲ್ಲಿ ಮಾತನಾಡಿ, ಕಮ್ಮಾರರು, ಬಡಿಗರು, ಶಿಲ್ಪಿಗಳು, ಅಕ್ಕಸಾಲಿಗಳು ವಿಶ್ವಕರ್ಮರನ್ನು ಪೂಜಿಸುವ ಮೂಲಕ ಅವರ ಕಲಾಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ಅಜಂತಾ ಎಲ್ಲೋರಾ, ಐಹೊಳೆ, ಪಟ್ಟದಕಲ್ಲು ಇವೆಲ್ಲವೂ ವಿಶ್ವಕರ್ಮ ಕಲೆಗಳ ಪ್ರತೀಕ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಮನೋಹರ ಪತ್ತಾರ, ಕಾರ್ಯದರ್ಶಿ ವಿಠ್ಠಲ ಪತ್ತಾರ, ಚನ್ನಪ್ಪ ಬಡಿಗೇರ, ಶೇಖಪ್ಪ ಪತ್ತಾರ, ಗಂಗಾಧರ ಪತ್ತಾರ, ಈರಣ್ಣ ಪತ್ತಾರ, ಶೇಖಪ್ಪ ಯಳ್ಳಿಗುತ್ತಿ, ಶಿವಾನಂದ ಬಡಿಗೇರ, ಮಾರುತಿ ಬಡಿಗೇರ, ಜಗದೀಶ ಬಡಿಗೇರ, ರಂಗನಾಥ ಬನ್ನಿಕೊಪ್ಪ, ರಾಜು ಪತ್ತಾರ, ಸಂತೋಷ ಬನ್ನಿಕೊಪ್ಪ, ಹನಮೇಶ ಪತ್ತಾರ, ಲೋಕೇಶ ಕಮ್ಮಾರ, ಮಂಜುಳಾ ಬಡಿಗೇರ, ವಿಜಯಲಕ್ಷ್ಮಿ ಪತ್ತಾರ, ಶೃತಿ ಪತ್ತಾರ, ರೇಖಾ ಬಡಿಗೇರ, ನಾಗರತ್ನಾ ಪತ್ತಾರ ಸೇರಿದಂತೆ ಸಮಾಜಬಾಂಧವರು ಇದ್ದರು.1
- ನವ ಯುವಶಕ್ತಿ ಸಂಘ ಮತ್ತು ಯೂತ್ ಎಸ್ಕಾರ್ಟ್ ಕಮಿಟಿ ವತಿಯಿಂದ ಅನ್ನ ಸಂತರ್ಪಣ ಕಾರ್ಯಕ್ರಮ4
- ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಗೆ ಆದ್ಯತೆಗೆ ಯುವ ಕಾಂಗ್ರೆಸ್ ಒತ್ತಾಯ ಲಿಂಗಸುಗೂರು, ಸೆ.17: ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೇಂದ್ರ ಸರ್ಕಾರ ಆದ್ಯತೆ ನೀಡಬೇಕು ಎಂದು ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ ಸೊಪ್ಪಿಮಠ ಒತ್ತಾಯಿಸಿದರು. ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಕರೆಯ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ‘ನಿರುದ್ಯೋಗ ದಿನ’ವಾಗಿ ಆಚರಿಸಿ, ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಕೇಂದ್ರ ಸರ್ಕಾರದ ಆಡಳಿತದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಯುವಕರಿಗೆ ಅಗತ್ಯ ಪ್ರಮಾಣದಲ್ಲಿ ಉದ್ಯೋಗಾವಕಾಶ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಅವರು ಆರೋಪಿಸಿದರು. ಯುವಕರ ಭವಿಷ್ಯದ ದೃಷ್ಟಿಯಿಂದ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಲಿಂಗಸುಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೌನೇಶ ಪೂಜಾರಿ, ಮುದಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಖದೀರ ಪಾನವಾಲೆ, ಮಾಜಿ ಅಧ್ಯಕ್ಷರಾದ ಕುಪ್ಪಣ್ಣ ಕೌತಾಳ, ವಾಸಿಮ್ ಪಾಶಾ ಸೇರಿದಂತೆ ಯುವ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.2
- ಕುಷ್ಟಗಿಯಲ್ಲಿ 79ನೇ ಕಲ್ಯಾಣ ಕರ್ನಾಟಕ ಉತ್ಸವ ಸಂಭ್ರಮ: ಹೋರಾಟಗಾರರ ತ್ಯಾಗ-ಬಲಿದಾನ ಪಠ್ಯಕ್ಕೆ ಸೇರಿಸಿ - ಶಾಸಕ ದೊಡ್ಡನಗೌಡ ಪಾಟೀಲ ಆಗ್ರಹ* *ಬರದ ನಡುವೆಯೂ ಉತ್ಸವ: ಕೂಡಲೇ ಬರ ಘೋಷಿಸಿ, ಗೋಶಾಲೆ ತೆರೆಯಿರಿ, ಇಲ್ಲದಿದ್ದರೆ ರೈತನ ಶಾಪ ತಟ್ಟುತ್ತದೆ - ಸರ್ಕಾರಕ್ಕೆ ಖಡಕ್ ಎಚ್ಚರಿಕೆ ಶಾಸಕ* *ಕುಷ್ಟಗಿ, ಸೆ.17:* ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ 79ನೇ ವರ್ಷದ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ *ದೊಡ್ಡನಗೌಡ ಪಾಟೀಲ* ಅವರು ಕಾರ್ಯಕ್ರಮ ಅಧ್ಯಕ್ಷತೆವಹಿಸಿ ಮಾತನಾಡಿ, ಕಲ್ಯಾಣ ಕರ್ನಾಟಕದ ವಿಮೋಚನೆಯ ಇತಿಹಾಸದಿಂದ ಹಿಡಿದು ಇಂದಿನ ಬರದ ಪರಿಸ್ಥಿತಿಯವರೆಗೆ ಎಲ್ಲಾ ವಿಷಯ ಪ್ರಸ್ತಾಪಿಸಿದರು. *ವಿಮೋಚನೆಯ ಇತಿಹಾಸ ಸ್ಮರಣೆ:* "ದೇಶಕ್ಕೆ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಸಿಕ್ಕರೂ ನಮ್ಮ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಸಿಗಲಿಲ್ಲ. ನಿಜಾಮನ ದಬ್ಬಾಳಿಕೆ, ರಜಾಕಾರರ ಹಾವಳಿಯ ದುಷ್ಪರಿಣಾಮ ಈ ಭಾಗದ ಮೇಲೆ ಎಷ್ಟಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಸರ್ದಾರ್ ವಲ್ಲಭಭಾಯಿ ಪಟೇಲರ ಆಪರೇಷನ್ ಪೋಲೋ ಕಾರ್ಯಾಚರಣೆಯಿಂದ 1948ರ ಸೆಪ್ಟೆಂಬರ್ 17ರಂದು ನಮಗೆ ನಿಜವಾದ ವಿಮೋಚನೆ ಸಿಕ್ಕಿತು ಸ್ವಾತಂತ್ರ್ಯವಾಯಿತು ಎಂದರು. *ಬರದ ಬವಣೆ - ಸರ್ಕಾರಕ್ಕೆ ಎಚ್ಚರಿಕೆ:* "ಈ ಉತ್ಸವವನ್ನು ನಾವು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದರೂ ಕೂಡ, ಮತ್ತೊಂದು ಕಡೆ ಕಲ್ಯಾಣ ಕರ್ನಾಟಕದಲ್ಲಿ ಬರದ ಪರಿಸ್ಥಿತಿ ನಮ್ಮೆಲ್ಲರಿಗೂ ಕಾಡುತ್ತಿದೆ. ನಿನ್ನೆ, ಮೊನ್ನೆ, ಇವತ್ತು ಹೊರಗಡೆ ಕಾಲಿಡೋದಕ್ಕೂ ಸಾಧ್ಯವಾಗದಷ್ಟು ಬಿಸಿಲು. ಇವತ್ತು ಹೆಚ್ಚಾಗುತ್ತಿದೆ ರೈತನ ಹೊಲದಲ್ಲಿ ಬೆಳೆಯಿಲ್ಲ, ದನಕರುಗಳಿಗೆ ಹಾಕೋದಕ್ಕೆ ಮೇವಿಲ್ಲ, ಕೆಲವೊಂದು ಗ್ರಾಮಗಳಲ್ಲಿ ಕುಡಿಯೋದಕ್ಕೆ ನೀರಿನ ಸಮಸ್ಯೆ ಆಗ್ತಾ ಇದೆ. ರೈತನಿಗೆ ಬೆಳೆ ಇಲ್ಲ, ಬೆಲೆ ಇಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು. *ಸ್ಯಾಟಲೈಟ್ ಸಮೀಕ್ಷೆಗೆ ಆಕ್ಷೇಪ:* "ಅಧಿಕಾರಿಗಳು ವೈಮಾನಿಕ ಸಮೀಕ್ಷೆಯಲ್ಲಿ ಸ್ಯಾಟಲೈಟ್ ನಲ್ಲಿ ಹಸಿರು ಕಾಣುತ್ತದೆ ಎಂದು ಹೇಳುತ್ತಾರೆ. ಹಸಿರು ಕಂಡ ಮಾತ್ರಕ್ಕೆ ಬೆಳೆ ಇದೆ ಎಂದಲ್ಲ. ಕೂಡಲೇ ಕುಷ್ಟಗಿ ತಾಲೂಕನ್ನು ಬರ ಎಂದು ಘೋಷಿಸಿ ವರದಿ ಕೊಡಬೇಕು. ಗೋಶಾಲೆಗಳನ್ನು ಪ್ರಾರಂಭ ಮಾಡಿ ಜಾನುವಾರುಗಳನ್ನು ಉಳಿಸಿ. ಇಲ್ಲದೇ ಹೋದರೆ ರೈತನ ಶಾಪ ನಿಮ್ಮೆಲ್ಲರಿಗೂ ತಟ್ಟುತ್ತದೆ" ಎಂದು ಎಚ್ಚರಿಕೆ ನೀಡಿದರು. *ನಿನ್ನೆ ನಡೆದ ಎತ್ತಿನ ಬಂಡಿ ಹೋರಾಟದ ಉಲ್ಲೇಖ:* "ನಿನ್ನೆ ನೂರಾರು ಎತ್ತಿನ ಬಂಡಿಗಳ ಮೂಲಕ ಸಾವಿರಾರು ರೈತರು ಬೃಹತ್ ಪ್ರತಿಭಟನೆ ನಡೆಸಿದ್ದು ನಿಮ್ಮೆಲ್ಲರಿಗೂ ಗೊತ್ತು. ಮುಂಬರುವ ಬರ ಪಟ್ಟಿಯಲ್ಲಿ ಖಂಡಿತವಾಗಿ ಕುಷ್ಟಗಿ ಇರುತ್ತದೆ ಎಂಬ ಭಾವನೆ ವ್ಯಕ್ತಪಡಿಸುತ್ತೇನೆ" ಎಂದರು. *ಪಠ್ಯಪುಸ್ತಕಕ್ಕೆ ಸೇರಿಸಲು ಆಗ್ರಹ:* "ಈ ಉತ್ಸವ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಮುಂದಿನ ಪೀಳಿಗೆಗೆ ನಮ್ಮ ಹಿರಿಯರು ಮಾಡಿರುವ ತ್ಯಾಗ, ಬಲಿದಾನವನ್ನು ಕಲಿಸಿಕೊಡಬೇಕು. ಅದನ್ನು ಮುಂದಿನ ಪಠ್ಯಪುಸ್ತಕಗಳಲ್ಲಿ ಸೇರಿಸುವ ಕೆಲಸ ಆಗಬೇಕು ಎಂದು ಈ ವೇದಿಕೆ ಮೂಲಕ ಸರ್ಕಾರಕ್ಕೆ ನಾನು ವಿನಂತಿ ಮಾಡುತ್ತೇನೆ" ಎಂದು ಹೇಳಿದರು. *ತಹಶೀಲ್ದಾರ್ ಮಾತು:* ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ದಾರ್ *ಅಶೋಕ ಶಿಗ್ಗಾವಿ* ಅವರು ಕಲ್ಯಾಣ ಕರ್ನಾಟಕ ವಿಮೋಚನೆಯ ಇತಿಹಾಸ ಹಾಗೂ 371(J) ಕಲಂನ ಮಹತ್ವದ ಬಗ್ಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ದೇಶ ಭಕ್ತಿ ಗೀತೆಗಳು ಹಾಗೂ ಸಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಇಓ ಅಮರೇಶ, ಸಿಡಿಪಿಓ ಯಲ್ಲಮ್ಮ ಹಂಡಿ, ಸಿಪಿಐ ವಿಶ್ವನಾಥ ಹಿರೇಗೌಡರ, ಪ್ರಭಾರಿ ಬಿಇಓ ಯಮನಪ್ಪ ಚೂರಿ, ದೈಹಿಕ ಶಿಕ್ಷಣ ಸಂಯೋಜಕ ನಾಗಪ್ಪ ಬಿಳಿಯಪ್ಪನವರ, ನಜೀರಸಾಬ ಮೂಲಿಮನಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಶಾಲಾ ಮಕ್ಕಳು, ಶಿಕ್ಷಕರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.1