Shuru
Apke Nagar Ki App…
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಭಕ್ತಿ ಮತ್ತು ಸೌಹಾರ್ದತೆಯ ವಾತಾವರಣದಲ್ಲಿ ಮೊಹರಂ ಕತ್ತಲ್ ರಾತ್ರಿಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಭಕ್ತಿಯ ಮೆರೆದರು.
Shivakumar Sajjan
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಭಕ್ತಿ ಮತ್ತು ಸೌಹಾರ್ದತೆಯ ವಾತಾವರಣದಲ್ಲಿ ಮೊಹರಂ ಕತ್ತಲ್ ರಾತ್ರಿಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಭಕ್ತಿಯ ಮೆರೆದರು.
More news from ಕರ್ನಾಟಕ and nearby areas
- ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಭಕ್ತಿ ಮತ್ತು ಸೌಹಾರ್ದತೆಯ ವಾತಾವರಣದಲ್ಲಿ ಮೊಹರಂ ಕತ್ತಲ್ ರಾತ್ರಿಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಭಕ್ತಿಯ ಮೆರೆದರು.2
- ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿಯಲ್ಲಿ ಜೂನ್ 25 ಮತ್ತು 26 ರಂದು ಮೊಹರಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗಿದ್ದು, ವಿಶೇಷವಾಗಿ 'ಕತ್ತಲ್ ರಾತ್ರಿ' ಕಾರ್ಯಕ್ರಮವು ಭಕ್ತಿ ಮತ್ತು ಸಂಭ್ರಮದಿಂದ ನೆರವೇರಿದೆ. ಉತ್ತರ ಕರ್ನಾಟಕದ ಪ್ರಮುಖ ಮೊಹರಂ ಆಚರಣೆಗಳಲ್ಲಿ ಒಂದಾದ ಜಾಲಹಳ್ಳಿಯ ಈ ಹಬ್ಬವು, ಮುದಗಲ್ ನಂತರ ಎರಡನೇ ಅತಿ ದೊಡ್ಡ ಆಚರಣೆಯಾಗಿದ್ದು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸಿದ್ದರು. ಹಬ್ಬದ ಅಂಗವಾಗಿ ಜೂನ್ 5 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, 9 ನೇ ತಾರೀಖಿನಂದು ನಡೆದ 'ಕತ್ತಲ್ ರಾತ್ರಿ' ಕಾರ್ಯಕ್ರಮವು ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ಕೂಡಿತ್ತು. ಊರಿನ ರಾಜವಂಶಸ್ಥರು ಹಾಗೂ ವತಂದಾರರ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಜಾತಿ-ಧರ್ಮ ಭೇದವಿಲ್ಲದೆ ಎಲ್ಲಾ ಸಮುದಾಯಗಳ ಸಾರ್ವಜನಿಕರು ಭಾಗವಹಿಸಿ ಕೋಮು ಸೌಹಾರ್ದತೆಗೆ ಮಾದರಿಯಾದರು. 9 ನೇ ತಾರೀಖಿನ ಮುಂಜಾನೆ ಸುಮಾರು 4 ಗಂಟೆಗೆ ಇಮಾಮ್ ಹುಸೇನ್ ಹಾಗೂ ಸೈಯದ್ ಕಾಸಿಂ ಅವರ ಮೆರವಣಿಗೆಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದವು. ಹೈದರ್ ಸಾಬ್ ಕೊಪ್ಪರ್ ಮುಲ್ಲಾ ಅವರ ಪ್ರಕಾರ, ಆಶೀರ್ ಖಾನ್ ಮಸೀದಿಯಿಂದ ಆರಂಭವಾದ ಮೆರವಣಿಗೆಯು ಗ್ರಾಮದ ಮುಖ್ಯ ಬೀದಿಗಳ ಮೂಲಕ ಗರಿಗಲಿ ದರ್ಗಾಕ್ಕೆ ತಲುಪಿ ದರ್ಶನ ಪಡೆದ ಬಳಿಕ ಬೆಳಿಗ್ಗೆ 8 ಗಂಟೆಗೆ ಸಮಾಪ್ತಿಯಾಯಿತು. ಶಬ್ಬೀರ್ ಜಾಲಹಳ್ಳಿ ಅವರು 'ಕತ್ತಲ್ ರಾತ್ರಿ' ಕಾರ್ಯಕ್ರಮವು ಅತ್ಯಂತ ಅದ್ದೂರಿಯಾಗಿ ನಡೆದಿರುವುದನ್ನು ದೃಢಪಡಿಸಿದ್ದು, ಇಮಾಮ್ ಹುಸೇನ್ ಹಾಗೂ ಸೈಯದ್ ಕಾಸಿಂ ಮೆರವಣಿಗೆಗಳು ರಾಜವಂಶಸ್ಥರು ಮತ್ತು ವತಂದಾರರ ನೇತೃತ್ವದಲ್ಲಿ ಸಾಗಿದವು ಎಂದು ತಿಳಿಸಿದರು. ಜೂನ್ 26 ರಂದು ಮೊಹರಂ ಹಬ್ಬದ ಕೊನೆಯ ದಿನದ ಅಂಗವಾಗಿ ಆಶೀರ್ ಖಾನ್‌ನಿಂದ ಆರಂಭವಾಗುವ ಮೆರವಣಿಗೆಯು ಜಾಲಹಳ್ಳಿಯ ದೇಸಾಯಿ ಕುಟುಂಬದವರ ತೋಟದ ಮೈದಾನದಲ್ಲಿ ಸಮಾರೋಪಗೊಂಡು ಅಂತಿಮ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ತಿಮ್ಮಣ್ಣ ನಾಯಕ್ ದಿದಗಿ ಅವರು ಜಾಲಹಳ್ಳಿ ಮೊಹರಂ ಹಬ್ಬವು ಜಾತಿ-ಧರ್ಮ ಭೇದವಿಲ್ಲದೆ ಎಲ್ಲ ಸಮುದಾಯದವರು ಒಗ್ಗಟ್ಟಿನಿಂದ ಆಚರಿಸುವ ಕೋಮು ಸೌಹಾರ್ದದ ಸಂಕೇತವಾಗಿದೆ ಎಂದು ಬಣ್ಣಿಸಿದರು. ಧಾರವಾಡದ ಮಹಿಬೂಬ್ ದಾದೆಬಾಯಿ ಅವರು, ಉತ್ತರ ಕರ್ನಾಟಕದಲ್ಲಿ ಮುದಗಲ್ ನಂತರ ಜಾಲಹಳ್ಳಿ ಮೊಹರಂ ಹಬ್ಬಕ್ಕೆ ಎರಡನೇ ಸ್ಥಾನವಿದ್ದು, ವಿವಿಧ ಜಾತಿ-ಧರ್ಮದ ಜನರು ಒಗ್ಗಟ್ಟಿನಿಂದ ಹಬ್ಬ ಆಚರಿಸುವುದು ಹಾಗೂ ರಾಜವಂಶಸ್ಥರು ಮತ್ತು ವತಂದಾರರ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯುವುದು ಇದರ ವಿಶೇಷತೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರಾಜ ತಿಮ್ಮಪ್ಪ ನಾಯಕ್, ತಿಮ್ಮಣ್ಣ ನಾಯಕ್ ದಿದಗಿ, ರಂಗಪ್ಪ ಬಂಡಿ, ಮೌನೇಶ್ ಪೂಜಾರಿ, ಶಿವಪ್ಪ ಬೋರಬಾಯಿ, ಯಾಸಿನ್ ಮುಲ್ಲಾ, ಗೌಸ್ ಮುಲ್ಲಾ, ಹುಸೇನ್ ಬಾಷಾ ಸರ್ನೋಬತ್, ಇಬ್ರಾಹಿಂ, ಆರತಿ ಪೂಜಾರಿ, ಬಾಬು ಕಕ್ಕೇರ, ಹೈದರಾಲಿ ಮುಲ್ಲಾ, ಮಹಿಬೂಬ್ ದಾದೆಬಾಯಿ, ಬಬ್ಬು ಬಳಿಗಾರ, ಮಹಮ್ಮದ್ ರಫಿ ಸರ್ನೋಬತ್, ಜಾಕಿರ್ ಹುಸೇನ್ ಆರತಿ, ರಾಜ್ ಮಹಮ್ಮದ್ ಸರ್ನೋಬತ್, ಭಾಷಾ ಸರ್ನೋಬತ್, ಬಾಶುಮಿಯ ಕಾರ್ಪೆಂಟರ್ ಸೇರಿದಂತೆ ಎಲ್ಲಾ ವತಂದಾರರು, ಗಣ್ಯರು, ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಭಾಗವಹಿಸಿದ್ದರು. ಹಬ್ಬದ ಹಿನ್ನೆಲೆಯಲ್ಲಿ ಜಾಲಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ವೈಶಾಲಿ ಜಳಕಿ ಅವರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಎಲ್ಲಾ ಕಾರ್ಯಕ್ರಮಗಳು ಶಾಂತಿಯುತವಾಗಿ ಮತ್ತು ಯಶಸ್ವಿಯಾಗಿ ನೆರವೇರಿದವು.4
- ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಏವೂರು ಗ್ರಾಮದಲ್ಲಿ ಇಂದು ಮೊಹರಂ ಹಬ್ಬವನ್ನು ಆಚರಿಸಲಾಯಿತು. ಗ್ರಾಮದ ಭಕ್ತರು, ಗಣ್ಯರು ಹಾಗೂ ಗ್ರಾಮಸ್ಥರು ಸೇರಿ ಊರಿನ ಎಲ್ಲಾ ಭಾಗದ ಜನರು ಮೊಹರಂ ಹಬ್ಬದ ದಫನ್ ಕಾರ್ಯವನ್ನು ನೆರವೇರಿಸಿದರು.1
- ಕುರುಗೋಡು ತಾಲೂಕಿನ ಸಿದ್ದಗೇರಿ ಗ್ರಾಮದಲ್ಲಿ ಒಂದು ಟ್ರ್ಯಾಕ್ಟರ್ ಕಳ್ಳತನವಾಗಿದೆ. ಈ ಘಟನೆ 25ನೇ ತಾರೀಖಿನಂದು ನಡೆದಿದ್ದು, ಕಳ್ಳತನವಾಗಿರುವ ಟ್ರ್ಯಾಕ್ಟರ್ ಅನ್ನು ಹುಡುಕಿಕೊಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ. ಈ ಟ್ರ್ಯಾಕ್ಟರ್‌ನ ಫೋಟೋವನ್ನು ಎಲ್ಲರಿಗೂ ಹಂಚಿಕೊಳ್ಳುವ ಮೂಲಕ ಸಹಾಯ ಮಾಡುವಂತೆ ಕೋರಲಾಗಿದೆ.4
- ಯಾದಗಿರಿ ಜಿಲ್ಲೆಯಲ್ಲಿ ಮೊಹರಂ ಹಬ್ಬದ ಕೊನೆಯ ದಿನದಂದು ದಫನ್ ಕಾರ್ಯಕ್ರಮವನ್ನು ಅತ್ಯಂತ ಭಕ್ತಿಭಾವದಿಂದ ನೆರವೇರಿಸಲಾಯಿತು.1
- ರಾಮನಗರದಲ್ಲಿ ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ರೈತರು ನಡೆಸಿದ ಪ್ರತಿಭಟನೆಗೆ ವಿವಿಧ ಜಿಲ್ಲೆಗಳ ರೈತರು ಬೆಂಬಲ ನೀಡಿದ್ದಾರೆ. ಆದರೆ, ಈ ಪ್ರತಿಭಟನೆಗೆ ಬೆಂಬಲ ನೀಡಲು ಬಂದ ರೈತರ ವಿರುದ್ಧ ಯೋಜನೆ ಪರವಿರುವ ಭೂಮಾಲೀಕರು ಘೋಷಣೆಗಳನ್ನು ಕೂಗಿದ್ದಾರೆ. ಹೊರಗಿನಿಂದ ಬಂದವರನ್ನು ಗುರಿಯಾಗಿಸಿಕೊಂಡು, ಭೂಮಾಲೀಕರು 'ದಿಕ್ಕಾರ' ಎಂದು ಘೋಷಿಸಿದಲ್ಲದೆ, ಅವರನ್ನು 'ಪೇಮೆಂಟ್ ಗಿರಾಕಿಗಳು' ಎಂದು ಕರೆದಿದ್ದಾರೆ. ಪರಿಸ್ಥಿತಿ ಉದ್ವಿಗ್ನಗೊಂಡಾಗ, ಪೊಲೀಸರು ಸ್ಥಳಕ್ಕೆ ಮಧ್ಯಪ್ರವೇಶಿಸಿ, ಯೋಜನೆಯ ಪರವಿರುವ ಭೂಮಾಲೀಕರನ್ನು ಸಮಾಧಾನಪಡಿಸಿ ಸ್ಥಳದಿಂದ ಕಳುಹಿಸಿದ್ದಾರೆ.1
- ವಡಗೇರಾ ತಾಲ್ಲೂಕು ಕೇಂದ್ರದಲ್ಲಿರುವ ಬಸ್ ನಿಲ್ದಾಣವು ಸಮಸ್ಯೆಗಳ ಕೂಪ ಹಾಗೂ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಎಂದು ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರುದ್ರಾಂಭಿಕ ಆರ್. ಪಾಟೀಲ್ ಆರೋಪಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಸ್ ನಿಲ್ದಾಣ ನಿರ್ಮಾಣವಾಗಿ ಹಲವು ವರ್ಷಗಳು ಕಳೆದರೂ ಇಲ್ಲಿ ಯಾವುದೇ ಮೂಲಭೂತ ಸೌಕರ್ಯವಿಲ್ಲದೆ ಸೊರಗಿದೆ, ಇದು ಹೆಸರಿಗಷ್ಟೇ ಬಸ್ ನಿಲ್ದಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸ್ ನಿಲ್ದಾಣದಲ್ಲಿ ಸರಿಯಾಗಿ ಬಸ್ಸುಗಳು ನಿಲ್ಲುವುದಿಲ್ಲ, ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಇರುವುದಿಲ್ಲ ಮತ್ತು ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯಗಳು ಇದ್ದು ಇಲ್ಲದಂತಾಗಿ ಹಾಳು ಬಿದ್ದಿದ್ದು, ನಿಲ್ದಾಣದೊಳಗಿನ ಬೋರ್‌ವೆಲ್ ಕೆಟ್ಟು ಹೋಗಿದೆ. ನೆಲಮಾಳಿಗೆಯ ನೀರಿನ ಟ್ಯಾಂಕ್ ಅನ್ನು ತೆರೆದಿಟ್ಟಿದ್ದು, ಅದರಲ್ಲಿ ಚಿಕ್ಕ ಮಕ್ಕಳು, ವೃದ್ಧರು ಕಾಲು ಜಾರಿ ಬಿದ್ದು ಅನಾಹುತಗಳಾದರೆ ಯಾರು ಜವಾಬ್ದಾರರು ಎಂದು ಅವರು ಪ್ರಶ್ನಿಸಿದ್ದಾರೆ. ಬಸ್ ನಿಲ್ದಾಣದ ಆವರಣದಲ್ಲಿ ಜಾಲಿ ಗಿಡಗಳು, ಮುಳ್ಳುಕಂಟಿಗಳು ಬೆಳೆದು ನಿಂತಿವೆ, ಎಲ್ಲೆಂದರಲ್ಲಿ ಕಸದ ರಾಶಿಗಳು ಪ್ರಯಾಣಿಕರನ್ನು ಸ್ವಾಗತಿಸುತ್ತಿವೆ. ಫ್ಯಾನ್, ಲೈಟ್‌ಗಳಿಲ್ಲ, ಶೌಚಾಲಯದ ಮೇಲ್ಛಾವಣಿ ಹಾರಿ ಹೋಗಿದೆ, ಒಳಗಡೆ ಕಸಕಡ್ಡಿ, ಜಾಲಿ ಮುಳ್ಳುಗಳು ಬೆಳೆದಿವೆ. ಮಹಿಳೆಯರು ಶೌಚಕ್ಕೆ ಹೋಗಲು ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದು ಅವರು ತಿಳಿಸಿದ್ದಾರೆ. ಒಂದು ವರ್ಷದ ಹಿಂದೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರಾದ ರಾಚಪ್ಪ ಅವರು ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮೂಲಭೂತ ಸೌಕರ್ಯ ಒದಗಿಸುವ ಭರವಸೆ ನೀಡಿದ್ದರೂ, ಇಲ್ಲಿಯವರೆಗೆ ಯಾವುದೇ ಸಮಸ್ಯೆ ಬಗೆಹರಿದಿಲ್ಲ ಎಂದು ಪಟ್ಟಣದ ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ದಿನನಿತ್ಯ ಬಸ್ ನಿಲ್ದಾಣದ ಮುಂದುಗಡೆ ತಿರುಗಾಡುತ್ತಾರೆ, ಆದರೆ ಬಸ್ ನಿಲ್ದಾಣದ ಒಳಗಡೆ ಹೋಗಿ ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದ್ದಾರೆ. ಈಗಲಾದರೂ ಸಂಬಂಧಿಸಿದ ಸಾರಿಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯ, ಕುಡಿಯುವ ನೀರು ಮತ್ತು ಸ್ವಚ್ಛತೆ ಒದಗಿಸಬೇಕು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಯನ್ನು ನೇಮಿಸಬೇಕು ಎಂದು ರೈತೋದಯ ಹಸಿರು ಸೇನೆ ಆಗ್ರಹಿಸಿದೆ. ಒಂದು ವೇಳೆ ನಿರ್ಲಕ್ಷ ವಹಿಸಿದ್ದಲ್ಲಿ, ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ಬಸ್ ನಿಲ್ದಾಣಕ್ಕೆ ಬೀಗ ಜಡಿದು ಹೋರಾಟ ಮಾಡುವುದಾಗಿ ರುದ್ರಾಂಭಿಕ.ಆರ್. ಪಾಟೀಲ್ ಚಟ್ನಳ್ಳಿ ಅವರು ಎಚ್ಚರಿಕೆ ನೀಡಿದ್ದಾರೆ.2
- ಯಾದಗಿರಿಯಲ್ಲಿ ಮೊಹರಂ ಹಬ್ಬದ ಕೊನೆಯ ದಿನದಂದು ದಫನ್ ಕಾರ್ಯಕ್ರಮವನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.1