logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಗುಂಡಾಲ್ ಡ್ಯಾಮ್ ಯೋಜನೆಗೆ ಶಾಸಕ ಮಂಜುನಾಥ್ ಭೂಮಿ ಪೂಜೆ: ರೈತರಿಗೆ ನೀರಾವರಿ ಸೌಲಭ್ಯ ವೃದ್ಧಿ ಹನೂರು: ತಾಲೂಕಿನ ಗುಂಡಾಲ್ ಡ್ಯಾಮ್ ಏತ ನೀರಾವರಿ ಯೋಜನೆಯ ರೈಸಿಂಗ್ ಮೇನ್ ಹಾಗೂ ನಾಲೆಗಳ ಅಭಿವೃದ್ಧಿ ಕಾಮಗಾರಿಗೆ ಸುಮಾರು 1 ಕೋಟಿ 50 ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗೆ ಶಾಸಕ ಎಂ.ಆರ್. ಮಂಜುನಾಥ್ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಯೋಜನೆಯ ಮೂಲಕ ಪ್ರದೇಶದ ರೈತರಿಗೆ ನೀರಾವರಿ ಸೌಲಭ್ಯ ಹೆಚ್ಚಾಗಿ ಲಭಿಸಲಿದೆ ಎಂದು ತಿಳಿಸಿದರು. ಕೃಷಿ ಅಭಿವೃದ್ಧಿಗೆ ಇಂತಹ ಯೋಜನೆಗಳು ಮಹತ್ವದ್ದಾಗಿದ್ದು, ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರದಿಂದ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಅಲ್ಲದೆ, ಕಾಮಗಾರಿಯನ್ನು ಗುಣಮಟ್ಟದಿಂದ ಮತ್ತು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಯೋಜನೆ ಪೂರ್ಣಗೊಂಡ ಬಳಿಕ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಎಇಇ ಅಭಿಲಾಷ್, ಜೆಇ ಪ್ರತಾಪ್ ಹಾಗೂ ಮುಖಂಡರಾದ ಕೊಂಗ್ರಹಳ್ಳಿ ಮಹೇಶ್, ಡ್ಯಾಮ್ ಶಂಕರ್, ಗುರುಸ್ವಾಮಿ, ಶಿವಮಲ್ಲು, ಸದಾಶಿವ, ತೊಮಣ್ಣ, ಶಿವರುದ್ರ, ಚಿನ್ನಸ್ವಾಮಿ, ಗೋವಿಂದ, ತಿರುಪತಿ, ವಿಜಯ್ ಕುಮಾರ್, ಎಸ್.ಆರ್. ಮಹದೇವ್, ವೆಂಕಟೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

22 hrs ago
user_ಹನೂರು ನ್ಯೂಸ್ ಅಡ್ಡ
ಹನೂರು ನ್ಯೂಸ್ ಅಡ್ಡ
Farmer ಹನೂರು, ಚಾಮರಾಜನಗರ, ಕರ್ನಾಟಕ•
22 hrs ago

ಗುಂಡಾಲ್ ಡ್ಯಾಮ್ ಯೋಜನೆಗೆ ಶಾಸಕ ಮಂಜುನಾಥ್ ಭೂಮಿ ಪೂಜೆ: ರೈತರಿಗೆ ನೀರಾವರಿ ಸೌಲಭ್ಯ ವೃದ್ಧಿ ಹನೂರು: ತಾಲೂಕಿನ ಗುಂಡಾಲ್ ಡ್ಯಾಮ್ ಏತ ನೀರಾವರಿ ಯೋಜನೆಯ ರೈಸಿಂಗ್ ಮೇನ್ ಹಾಗೂ ನಾಲೆಗಳ ಅಭಿವೃದ್ಧಿ ಕಾಮಗಾರಿಗೆ ಸುಮಾರು 1 ಕೋಟಿ 50 ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗೆ ಶಾಸಕ ಎಂ.ಆರ್. ಮಂಜುನಾಥ್ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ

ಮಾತನಾಡಿದ ಅವರು, ಈ ಯೋಜನೆಯ ಮೂಲಕ ಪ್ರದೇಶದ ರೈತರಿಗೆ ನೀರಾವರಿ ಸೌಲಭ್ಯ ಹೆಚ್ಚಾಗಿ ಲಭಿಸಲಿದೆ ಎಂದು ತಿಳಿಸಿದರು. ಕೃಷಿ ಅಭಿವೃದ್ಧಿಗೆ ಇಂತಹ ಯೋಜನೆಗಳು ಮಹತ್ವದ್ದಾಗಿದ್ದು, ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರದಿಂದ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಅಲ್ಲದೆ, ಕಾಮಗಾರಿಯನ್ನು ಗುಣಮಟ್ಟದಿಂದ ಮತ್ತು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಯೋಜನೆ

ಪೂರ್ಣಗೊಂಡ ಬಳಿಕ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಎಇಇ ಅಭಿಲಾಷ್, ಜೆಇ ಪ್ರತಾಪ್ ಹಾಗೂ ಮುಖಂಡರಾದ ಕೊಂಗ್ರಹಳ್ಳಿ ಮಹೇಶ್, ಡ್ಯಾಮ್ ಶಂಕರ್, ಗುರುಸ್ವಾಮಿ, ಶಿವಮಲ್ಲು, ಸದಾಶಿವ, ತೊಮಣ್ಣ, ಶಿವರುದ್ರ, ಚಿನ್ನಸ್ವಾಮಿ, ಗೋವಿಂದ, ತಿರುಪತಿ, ವಿಜಯ್ ಕುಮಾರ್, ಎಸ್.ಆರ್. ಮಹದೇವ್, ವೆಂಕಟೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

More news from ಕರ್ನಾಟಕ and nearby areas
  • ಮಳವಳ್ಳಿ:ಕುಂದೂರುಸರ್ಪಭೂಷಣ ಮಠದ ಶ್ರೀಚನ್ನಬಸವಸ್ವಾಮಿಗಳು ಲಿಂಗ್ಯಕ್ಯ-ಅಪಾರ ಭಕ್ತರ ಕಂಭನಿ • ಮಾ.೧೬ ರಂದು ಸುತ್ತೂರು -ಸಿದ್ದಗಂಗಾ-ಕನಕಪುರ ದೇಗುಲ ಶ್ರೀಗಳ ದಿವ್ಯಸಾನಿಧ್ಯದಲ್ಲಿ ಅಂತ್ಯಸ0ಸ್ಕಾರಕ್ಕೆ ಸಿದ್ದತೆ ಮಳವಳ್ಳಿ:ತಾಲೂಕಿನ ಕುಂದೂರು ಗ್ರಾಮದ ಧಾರ್ಮಿಕ ಪುಣ್ಯಕ್ಷೇತ್ರವಾದ ಸರ್ಪಭೂಷಣ ಮಠದ ಶ್ರೀ ಚನ್ನಬಸವಸ್ವಾಮಿಗಳು (೫೫) ಭಾನುವಾರ ಲಿಂಗ್ಯಕ್ಯರಾಗಿದ್ದಾರೆ. ಹೊಸಹಳ್ಳಿ ಗ್ರಾಮದ ಶ್ರೀಮತಿ ಪಾರ್ವತಮ್ಮ ಮಾದಪ್ಪನವರ ೫ ಮಕ್ಕಳಲ್ಲಿ ೪ನೇ ಪುತ್ರನಾಗಿ ಜನಿಸಿದ ಇವರು ತಮ್ಮ ೨೫ನೇ ವರ್ಷದಲ್ಲೆ ಮೇದಿನಿ ಶ್ರೀಗಳ ನಂತರ ಕುಂದೂರು ಗ್ರಾಮದ ಸರ್ಪಭೂಷಣ ಮಠದ ಶ್ರೀಗಳಾಗಿ ಪಟ್ಟಾಧಿಕಾರ ಸ್ವೀಕರಿಸಿದ್ದರು. ಇವರು ತಮ್ಮ ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದ ಅಪಾರ ಭಕ್ತರ ಪ್ರೀತಿ ಪಾತ್ರರಾಗಿದ್ದರು. ಸರ್ಪಭೂಷಣ ಮಠಾಧ್ಯಕ್ಷರಾಗಿ ಸುದೀರ್ಘ ೩೦ ವರ್ಷ ಶ್ರೀಮಠದ ಹಲವಾರು ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುವುದರೊಂದಿಗೆ ಸುತ್ತಮುತ್ತಲ್ಲ ಗ್ರಾಮಗಳ ಬಡ ಜನರ ನೆಚ್ಚಿನ ಗುರುಗಳಾಗಿ ಹೆಸರು ಗಳಿಸಿದ್ದರು.ಭಕ್ತರ ಬಗ್ಗೆ ಅಪಾರ ಕಾಳಜಿಯಿದ್ದ ಇವರು ಸರ್ಪಭೂಷಣ ಮಠದ ಪುನರುಜ್ಜೀವನ ಗೊಳಿಸಿ ಭಕ್ತರಿಗೆ ಇನ್ನು ಹೆಚ್ಚಿನ ಸೇವೆಗಳನ್ನು ನೀಡುವ ಸಂಕಲ್ಪದೊAದಿಗೆ ಕಾಯಕ ಮಾಡುತ್ತಿದ್ದರು. ಮಾ.೧೫ ರಂದು ಬಾನುವಾರ ಬೆಳಿಗ್ಗೆ ಮಠದಲ್ಲಿ ತಮ್ಮ ದಿನನಿತ್ಯದ ಕಾಯಕ ಪೂಜೆ ಮುಗಿಸಿಕೊಂಡು ಕಾಗೇಪುರದಲ್ಲಿ ಭಕ್ತರೊಬ್ಬರ ಪೂಜೆಗೆ ಬರುವಾಗ ಮಾರ್ಗಮದ್ಯದಲ್ಲಿ ಅಯಾಸಗೊಂಡ ಇವರನ್ನು ತಕ್ಷಣ ಪಟ್ಟಣದ ಸಾರ್ವಜನಿಕ ಅಸ್ಪತ್ರೆಗೆ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಜಿಲ್ಲಾ ಅಸ್ಪತ್ರೆಗೆ ರವಾನಿಸಲಾಯಿತು.ಆದರೆ ಚಿಕಿತ್ಸೆ ಪಲಕಾರಿಯಾಗದೆ ಅಸ್ಪತ್ರೆಯಲ್ಲಿ ಶ್ರೀಗಳು ಲಿಂಗ್ಯಕ್ಯರಾಗಿದ್ದಾರೆ. ತಮ್ಮ ನೆಚ್ಚಿನ ಶ್ರೀಗಳ ಲಿಂಗ್ಯಕ್ಯ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಗಳ ಗ್ರಾಮಗಳ ಭಕ್ತರು ,ಬಿ.ಜಿ.ಪುರ ಸೇರಿದಂತೆ ಸುತ್ತಮುತ್ತಲ ಮಠಗಳ ಶ್ರೀಗಳು ಅಗಮಿಸಿ ದರ್ಶನ ಪಡೆದು ಮುಂದಿನ ಅಂತ್ಯಸAಸ್ಖಾರದ ವಿಧಿ ವಿದಾನಗಳ ವ್ಯವಸ್ಥೆಗಳಿಗೆ ಕಾರ್ಯೋನ್ಮುಖರಾಗಿದ್ದಾರೆ.ಸ್ಥಳದಲ್ಲೆ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಮೂರ್ತಿ ಮತ್ತು ಎಲ್ಲ ಪದಾಧಿಕಾರಿಗಳು ನಿಂತುಕೊ0ಡು ಪೂಜ್ಯರ ದರ್ಶನಕ್ಕೆ ಎಲ್ಲ ವ್ಯವಸ್ಥೆಗಳ ಉಸ್ತುವಾರಿ ವಹಿಸಿದ್ದಾರೆ. ಲಿಂಗ್ಯಕ್ಯರಾದ ಪೂಜ್ಯ ಶ್ರೀಗಳ ಪಾರ್ಥಿವ ಶರೀರವನ್ನು ಬಾನುವಾರ ಮದ್ಯಾಹ್ನ ಕುಂದೂರು ಗ್ರಾಮದ ಸರ್ಪಭೂಷಣ ಮಠಕ್ಕೆ ತರಲಾಗಿದ್ದು,ಅಗಮಿಸುವ ಭಕ್ತರಿಗೆ ಅಂತಿಮ ದರ್ಶನಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗಿದೆ.ಸೋಮವಾರ ಮದ್ಯಾಹ್ನ ೧ ಗಂಟೆಗೆ ಸುತ್ತೂರು,ಸಿದ್ದಗಂಗಾ,ಕನಕಪುರ ದೇಗುಲ ಮಠದ ಶ್ರೀಗಳು ಸೇರಿದಂತೆ ತಾಲೂಕಿನ ಹರಗುರು ಚರಮೂರ್ತಿಗಳ ದಿವ್ಯಸಾನಿಧ್ಯದಲ್ಲಿ ಸಂಪ್ರದಾಯಬದ್ದ ಪೂಜಾ ವಿಧಿ ವಿದಾನಗಳೊಂದಿಗೆ ಅಂತ್ಯಸ0ಸ್ಕಾರ ನಡೆಯಲಿದೆ ಎಂದು ಕುಂದೂರು ಶ್ರೀ ರಸಸಿದ್ದೇಶ್ವರ ಮಠದ ಶ್ರೀ ನಂಜು0ಡಸ್ವಾಮಿಗಳು ತಿಳಿಸಿದ್ದಾರೆ.
    1
    ಮಳವಳ್ಳಿ:ಕುಂದೂರುಸರ್ಪಭೂಷಣ ಮಠದ ಶ್ರೀಚನ್ನಬಸವಸ್ವಾಮಿಗಳು ಲಿಂಗ್ಯಕ್ಯ-ಅಪಾರ ಭಕ್ತರ ಕಂಭನಿ
•	ಮಾ.೧೬ ರಂದು ಸುತ್ತೂರು -ಸಿದ್ದಗಂಗಾ-ಕನಕಪುರ ದೇಗುಲ ಶ್ರೀಗಳ ದಿವ್ಯಸಾನಿಧ್ಯದಲ್ಲಿ ಅಂತ್ಯಸ0ಸ್ಕಾರಕ್ಕೆ ಸಿದ್ದತೆ
ಮಳವಳ್ಳಿ:ತಾಲೂಕಿನ ಕುಂದೂರು ಗ್ರಾಮದ ಧಾರ್ಮಿಕ ಪುಣ್ಯಕ್ಷೇತ್ರವಾದ ಸರ್ಪಭೂಷಣ ಮಠದ ಶ್ರೀ ಚನ್ನಬಸವಸ್ವಾಮಿಗಳು (೫೫) ಭಾನುವಾರ ಲಿಂಗ್ಯಕ್ಯರಾಗಿದ್ದಾರೆ.
ಹೊಸಹಳ್ಳಿ ಗ್ರಾಮದ ಶ್ರೀಮತಿ ಪಾರ್ವತಮ್ಮ ಮಾದಪ್ಪನವರ ೫ ಮಕ್ಕಳಲ್ಲಿ ೪ನೇ ಪುತ್ರನಾಗಿ ಜನಿಸಿದ ಇವರು ತಮ್ಮ ೨೫ನೇ ವರ್ಷದಲ್ಲೆ ಮೇದಿನಿ ಶ್ರೀಗಳ ನಂತರ ಕುಂದೂರು ಗ್ರಾಮದ ಸರ್ಪಭೂಷಣ ಮಠದ ಶ್ರೀಗಳಾಗಿ ಪಟ್ಟಾಧಿಕಾರ ಸ್ವೀಕರಿಸಿದ್ದರು.
ಇವರು ತಮ್ಮ ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದ ಅಪಾರ ಭಕ್ತರ ಪ್ರೀತಿ ಪಾತ್ರರಾಗಿದ್ದರು. ಸರ್ಪಭೂಷಣ ಮಠಾಧ್ಯಕ್ಷರಾಗಿ  ಸುದೀರ್ಘ ೩೦ ವರ್ಷ ಶ್ರೀಮಠದ ಹಲವಾರು ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು  ಬರುವುದರೊಂದಿಗೆ ಸುತ್ತಮುತ್ತಲ್ಲ ಗ್ರಾಮಗಳ ಬಡ ಜನರ ನೆಚ್ಚಿನ ಗುರುಗಳಾಗಿ ಹೆಸರು ಗಳಿಸಿದ್ದರು.ಭಕ್ತರ ಬಗ್ಗೆ ಅಪಾರ ಕಾಳಜಿಯಿದ್ದ ಇವರು ಸರ್ಪಭೂಷಣ ಮಠದ ಪುನರುಜ್ಜೀವನ ಗೊಳಿಸಿ ಭಕ್ತರಿಗೆ ಇನ್ನು ಹೆಚ್ಚಿನ ಸೇವೆಗಳನ್ನು ನೀಡುವ ಸಂಕಲ್ಪದೊAದಿಗೆ ಕಾಯಕ ಮಾಡುತ್ತಿದ್ದರು.
ಮಾ.೧೫ ರಂದು ಬಾನುವಾರ ಬೆಳಿಗ್ಗೆ ಮಠದಲ್ಲಿ ತಮ್ಮ ದಿನನಿತ್ಯದ ಕಾಯಕ ಪೂಜೆ ಮುಗಿಸಿಕೊಂಡು ಕಾಗೇಪುರದಲ್ಲಿ ಭಕ್ತರೊಬ್ಬರ ಪೂಜೆಗೆ ಬರುವಾಗ ಮಾರ್ಗಮದ್ಯದಲ್ಲಿ ಅಯಾಸಗೊಂಡ ಇವರನ್ನು ತಕ್ಷಣ ಪಟ್ಟಣದ ಸಾರ್ವಜನಿಕ ಅಸ್ಪತ್ರೆಗೆ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಜಿಲ್ಲಾ ಅಸ್ಪತ್ರೆಗೆ ರವಾನಿಸಲಾಯಿತು.ಆದರೆ ಚಿಕಿತ್ಸೆ ಪಲಕಾರಿಯಾಗದೆ ಅಸ್ಪತ್ರೆಯಲ್ಲಿ ಶ್ರೀಗಳು ಲಿಂಗ್ಯಕ್ಯರಾಗಿದ್ದಾರೆ.
ತಮ್ಮ ನೆಚ್ಚಿನ ಶ್ರೀಗಳ ಲಿಂಗ್ಯಕ್ಯ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಗಳ ಗ್ರಾಮಗಳ ಭಕ್ತರು ,ಬಿ.ಜಿ.ಪುರ ಸೇರಿದಂತೆ ಸುತ್ತಮುತ್ತಲ ಮಠಗಳ ಶ್ರೀಗಳು ಅಗಮಿಸಿ ದರ್ಶನ ಪಡೆದು  ಮುಂದಿನ ಅಂತ್ಯಸAಸ್ಖಾರದ ವಿಧಿ ವಿದಾನಗಳ ವ್ಯವಸ್ಥೆಗಳಿಗೆ ಕಾರ್ಯೋನ್ಮುಖರಾಗಿದ್ದಾರೆ.ಸ್ಥಳದಲ್ಲೆ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಮೂರ್ತಿ ಮತ್ತು ಎಲ್ಲ ಪದಾಧಿಕಾರಿಗಳು ನಿಂತುಕೊ0ಡು ಪೂಜ್ಯರ ದರ್ಶನಕ್ಕೆ ಎಲ್ಲ ವ್ಯವಸ್ಥೆಗಳ ಉಸ್ತುವಾರಿ ವಹಿಸಿದ್ದಾರೆ.
ಲಿಂಗ್ಯಕ್ಯರಾದ ಪೂಜ್ಯ ಶ್ರೀಗಳ ಪಾರ್ಥಿವ ಶರೀರವನ್ನು ಬಾನುವಾರ ಮದ್ಯಾಹ್ನ  ಕುಂದೂರು ಗ್ರಾಮದ ಸರ್ಪಭೂಷಣ ಮಠಕ್ಕೆ ತರಲಾಗಿದ್ದು,ಅಗಮಿಸುವ ಭಕ್ತರಿಗೆ ಅಂತಿಮ ದರ್ಶನಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗಿದೆ.ಸೋಮವಾರ ಮದ್ಯಾಹ್ನ ೧ ಗಂಟೆಗೆ ಸುತ್ತೂರು,ಸಿದ್ದಗಂಗಾ,ಕನಕಪುರ ದೇಗುಲ ಮಠದ ಶ್ರೀಗಳು ಸೇರಿದಂತೆ ತಾಲೂಕಿನ ಹರಗುರು ಚರಮೂರ್ತಿಗಳ ದಿವ್ಯಸಾನಿಧ್ಯದಲ್ಲಿ ಸಂಪ್ರದಾಯಬದ್ದ ಪೂಜಾ ವಿಧಿ ವಿದಾನಗಳೊಂದಿಗೆ ಅಂತ್ಯಸ0ಸ್ಕಾರ ನಡೆಯಲಿದೆ ಎಂದು ಕುಂದೂರು ಶ್ರೀ ರಸಸಿದ್ದೇಶ್ವರ ಮಠದ ಶ್ರೀ ನಂಜು0ಡಸ್ವಾಮಿಗಳು ತಿಳಿಸಿದ್ದಾರೆ.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    ಮಳವಳ್ಳಿ, ಮಂಡ್ಯ, ಕರ್ನಾಟಕ•
    2 hrs ago
  • ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ದೇವಗಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಗಳಿಗೆ ಶಿಕ್ಷಣ ಇಲಾಖೆ ಕೈಗೊಂಡಿರುವ ಪರಿಣಾಮಕಾರಿ ಕಾರ್ಯಚಟುವಟಿಕೆಗಳನ್ನು ಗುರುತಿಸಿ ವಿಶೇಷ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯೊಂದಿಗೆ ₹75,000 ನಗದು ಬಹುಮಾನವನ್ನು ಎಸ್‌ಡಿಎಂಸಿ ಖಾತೆಗೆ ಜಮಾ ಮಾಡಲಾಗುತ್ತದೆ. ಶಾಲೆಯ ಮೂಲಭೂತ ಸೌಕರ್ಯಗಳನ್ನು ಸುಧಾರಿಸುವಲ್ಲಿ ಎಸ್‌ಡಿಎಂಸಿ ಪ್ರಮುಖ ಪಾತ್ರವಹಿಸಿದೆ. ಶಾಲೆಯ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳ ನಿರ್ವಹಣೆ, ತರಗತಿ ಕೊಠಡಿಗಳ ಸೌಲಭ್ಯಗಳನ್ನು ಉತ್ತಮಗೊಳಿಸುವ ಕಾರ್ಯಗಳನ್ನು ಸಮಿತಿ ನಿರಂತರವಾಗಿ ಕೈಗೊಂಡಿದೆ. ಶಾಲೆಯ ಪರಿಸರವನ್ನು ಸುಂದರ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿಸುವ ಉದ್ದೇಶದಿಂದ ಹಲವು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಶಾಲೆಯ ಶಿಕ್ಷಕರೊಂದಿಗೆ ಸಮನ್ವಯ ಹೊಂದಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವತ್ತ ಎಸ್‌ಡಿಎಂಸಿ ವಿಶೇಷ ಗಮನ ಹರಿಸಿದೆ. ಶಿಕ್ಷಕರು ಮತ್ತು ಸಮಿತಿ ಸದಸ್ಯರು ಸೇರಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸುವುದು, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಿಕ್ಷಣದತ್ತ ಸೆಳೆಯುವುದು ಹಾಗೂ ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿ ಆಸಕ್ತಿ ಮೂಡಿಸುವ ಕಾರ್ಯಗಳನ್ನು ಮಾಡುತ್ತಿದ್ದಾರೆ. ಶಾಲೆಯಲ್ಲಿ ಹಲವು ವಿಶೇಷ ಚಟುವಟಿಕೆಗಳು ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪರಿಸರ ಜಾಗೃತಿ ಕಾರ್ಯಕ್ರಮಗಳು ಮತ್ತು ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಉತ್ತೇಜಿಸುವಲ್ಲಿ ಸಹಾಯವಾಗಿವೆ. ಇದರ ಜೊತೆಗೆ ಶಾಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ರೂಪಿಸಿ ದಾನಿಗಳಿಗೆ ಮನವರಿಕೆ ಮಾಡಿಕೊಟ್ಟು ಅಗತ್ಯ ಸಹಾಯವನ್ನು ಪಡೆಯಲಾಗಿದೆ. ದಾನಿಗಳ ಸಹಕಾರದಿಂದ ಶಾಲೆಗೆ ಬೇಕಾದ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ. ಎಸ್‌ಡಿಎಂಸಿ ವತಿಯಿಂದ ನಿಯಮಿತವಾಗಿ ಸಭೆಗಳನ್ನು ನಡೆಸಿ ಶಾಲೆಯ ಅಭಿವೃದ್ಧಿ, ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರಗಳ ಕುರಿತು ಚರ್ಚಿಸಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಈ ಸಭೆಗಳ ಪರಿಣಾಮವಾಗಿ ಶಾಲೆಯಲ್ಲಿ ವ್ಯವಸ್ಥಿತ ಕಾರ್ಯಚಟುವಟಿಕೆಗಳು ನಡೆಯುತ್ತಿದ್ದು, ಶಾಲೆಯ ಶೈಕ್ಷಣಿಕ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಉತ್ತೇಜನ ಸಿಕ್ಕಿದೆ. ಶಾಲೆಯ ಅಭಿವೃದ್ಧಿಗೆ ಎಸ್‌ಡಿಎಂಸಿ ನೀಡಿರುವ ಮಹತ್ವದ ಕೊಡುಗೆ ಹಾಗೂ ಸಮರ್ಪಿತ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ಪ್ರಶಸ್ತಿ ಶಾಲೆಯ ಮುಂದಿನ ಅಭಿವೃದ್ಧಿಗೆ ಮತ್ತಷ್ಟು ಪ್ರೇರಣೆ ನೀಡಲಿದೆ ಎಂದು ಶಾಲೆಯ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಮತ್ತು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಬೈಟ್ :- ಶಶಿಕಲಾ, ಪ್ರಭಾರ ಮುಖ್ಯ ಶಿಕ್ಷಕಿ
    2
    ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ದೇವಗಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಗಳಿಗೆ ಶಿಕ್ಷಣ ಇಲಾಖೆ ಕೈಗೊಂಡಿರುವ ಪರಿಣಾಮಕಾರಿ ಕಾರ್ಯಚಟುವಟಿಕೆಗಳನ್ನು ಗುರುತಿಸಿ ವಿಶೇಷ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯೊಂದಿಗೆ ₹75,000 ನಗದು ಬಹುಮಾನವನ್ನು ಎಸ್‌ಡಿಎಂಸಿ ಖಾತೆಗೆ ಜಮಾ ಮಾಡಲಾಗುತ್ತದೆ.
ಶಾಲೆಯ ಮೂಲಭೂತ ಸೌಕರ್ಯಗಳನ್ನು ಸುಧಾರಿಸುವಲ್ಲಿ ಎಸ್‌ಡಿಎಂಸಿ ಪ್ರಮುಖ ಪಾತ್ರವಹಿಸಿದೆ. ಶಾಲೆಯ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳ ನಿರ್ವಹಣೆ, ತರಗತಿ ಕೊಠಡಿಗಳ ಸೌಲಭ್ಯಗಳನ್ನು ಉತ್ತಮಗೊಳಿಸುವ ಕಾರ್ಯಗಳನ್ನು ಸಮಿತಿ ನಿರಂತರವಾಗಿ ಕೈಗೊಂಡಿದೆ. ಶಾಲೆಯ ಪರಿಸರವನ್ನು ಸುಂದರ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿಸುವ ಉದ್ದೇಶದಿಂದ ಹಲವು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ.
ಶಾಲೆಯ ಶಿಕ್ಷಕರೊಂದಿಗೆ ಸಮನ್ವಯ ಹೊಂದಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವತ್ತ ಎಸ್‌ಡಿಎಂಸಿ ವಿಶೇಷ ಗಮನ ಹರಿಸಿದೆ. ಶಿಕ್ಷಕರು ಮತ್ತು ಸಮಿತಿ ಸದಸ್ಯರು ಸೇರಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸುವುದು, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಿಕ್ಷಣದತ್ತ ಸೆಳೆಯುವುದು ಹಾಗೂ ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿ ಆಸಕ್ತಿ ಮೂಡಿಸುವ ಕಾರ್ಯಗಳನ್ನು ಮಾಡುತ್ತಿದ್ದಾರೆ.
ಶಾಲೆಯಲ್ಲಿ ಹಲವು ವಿಶೇಷ ಚಟುವಟಿಕೆಗಳು ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪರಿಸರ ಜಾಗೃತಿ ಕಾರ್ಯಕ್ರಮಗಳು ಮತ್ತು ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಉತ್ತೇಜಿಸುವಲ್ಲಿ ಸಹಾಯವಾಗಿವೆ. ಇದರ ಜೊತೆಗೆ ಶಾಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ರೂಪಿಸಿ ದಾನಿಗಳಿಗೆ ಮನವರಿಕೆ ಮಾಡಿಕೊಟ್ಟು ಅಗತ್ಯ ಸಹಾಯವನ್ನು ಪಡೆಯಲಾಗಿದೆ. ದಾನಿಗಳ ಸಹಕಾರದಿಂದ ಶಾಲೆಗೆ ಬೇಕಾದ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ.
ಎಸ್‌ಡಿಎಂಸಿ ವತಿಯಿಂದ ನಿಯಮಿತವಾಗಿ ಸಭೆಗಳನ್ನು ನಡೆಸಿ ಶಾಲೆಯ ಅಭಿವೃದ್ಧಿ, ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರಗಳ ಕುರಿತು ಚರ್ಚಿಸಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಈ ಸಭೆಗಳ ಪರಿಣಾಮವಾಗಿ ಶಾಲೆಯಲ್ಲಿ ವ್ಯವಸ್ಥಿತ ಕಾರ್ಯಚಟುವಟಿಕೆಗಳು ನಡೆಯುತ್ತಿದ್ದು, ಶಾಲೆಯ ಶೈಕ್ಷಣಿಕ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಉತ್ತೇಜನ ಸಿಕ್ಕಿದೆ.
ಶಾಲೆಯ ಅಭಿವೃದ್ಧಿಗೆ ಎಸ್‌ಡಿಎಂಸಿ ನೀಡಿರುವ ಮಹತ್ವದ ಕೊಡುಗೆ ಹಾಗೂ ಸಮರ್ಪಿತ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ಪ್ರಶಸ್ತಿ ಶಾಲೆಯ ಮುಂದಿನ ಅಭಿವೃದ್ಧಿಗೆ ಮತ್ತಷ್ಟು ಪ್ರೇರಣೆ ನೀಡಲಿದೆ ಎಂದು ಶಾಲೆಯ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಮತ್ತು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಬೈಟ್ :- ಶಶಿಕಲಾ, ಪ್ರಭಾರ ಮುಖ್ಯ ಶಿಕ್ಷಕಿ
    user_ಹೊಂಗಿರಣ ನ್ಯೂಸ್
    ಹೊಂಗಿರಣ ನ್ಯೂಸ್
    Photographer Nanjangud, Mysuru•
    17 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    30 min ago
  • ಚಳ್ಳಕೆರೆ ತಾಲ್ಲೂಕು ಹೆಗ್ಗೆರೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೂವರು ಆರ್‌ಎಸ್‌ಐ ಮೃತಪಟ್ಟಿದ್ದು, ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಸ್ಥಳಕ್ಕೆ ಭೇಟಿ ನೀಡಿ, ಘಟನೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
    1
    ಚಳ್ಳಕೆರೆ ತಾಲ್ಲೂಕು ಹೆಗ್ಗೆರೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೂವರು ಆರ್‌ಎಸ್‌ಐ ಮೃತಪಟ್ಟಿದ್ದು, ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಸ್ಥಳಕ್ಕೆ ಭೇಟಿ ನೀಡಿ, ಘಟನೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
    user_Bindu vinod
    Bindu vinod
    ಆನೇಕಲ್, ಬೆಂಗಳೂರು ನಗರ, ಕರ್ನಾಟಕ•
    2 hrs ago
  • ಚಿತ್ರದುರ್ಗ ತಾಲೂಕಿನ ಹುಣಸಿಕಟ್ಟೆ ಗ್ರಾಮದಲ್ಲಿ ಒಂದನೇ ವರ್ಷದ ವಿದ್ಯಾರ್ಥಿನಿಗೆ ಹಾವು ಕಚ್ಚಿ ಉರಿ ಎಂದು ಅಳುತ್ತಿದ್ದ ಬಾಲಕಿಗೆ ತಾವೇ ಸ್ವಯಂ ತನ್ನ ಬಾಯಿಂದಲೇ ವಿಷ ತೆಗೆದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ, ಮತ್ತು ಶಿಕ್ಷಕ ರವಿಶಂಕರ್ ತಾವು ಚಿಕಿತ್ಸೆಗೆ ದಾಖಲಾಗಿ ಶಿಕ್ಷಕ ಮತ್ತು ವಿದ್ಯಾರ್ಥಿ ಆರೋಗ್ಯದಿಂದ ಇದ್ದಾರೆ ಎಂದು ಡಿಡಿಪಿಐ ತಿಳಿಸಿದ್ದಾರೆ..
    1
    ಚಿತ್ರದುರ್ಗ ತಾಲೂಕಿನ ಹುಣಸಿಕಟ್ಟೆ ಗ್ರಾಮದಲ್ಲಿ ಒಂದನೇ ವರ್ಷದ ವಿದ್ಯಾರ್ಥಿನಿಗೆ ಹಾವು ಕಚ್ಚಿ ಉರಿ ಎಂದು ಅಳುತ್ತಿದ್ದ ಬಾಲಕಿಗೆ ತಾವೇ ಸ್ವಯಂ ತನ್ನ ಬಾಯಿಂದಲೇ ವಿಷ ತೆಗೆದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ, ಮತ್ತು ಶಿಕ್ಷಕ ರವಿಶಂಕರ್ ತಾವು ಚಿಕಿತ್ಸೆಗೆ ದಾಖಲಾಗಿ ಶಿಕ್ಷಕ ಮತ್ತು ವಿದ್ಯಾರ್ಥಿ ಆರೋಗ್ಯದಿಂದ ಇದ್ದಾರೆ ಎಂದು ಡಿಡಿಪಿಐ ತಿಳಿಸಿದ್ದಾರೆ..
    user_ಅರವಿಂದ್ ರಾಜೀವ್
    ಅರವಿಂದ್ ರಾಜೀವ್
    ಬೆಂಗಳೂರು ಉತ್ತರ, ಬೆಂಗಳೂರು ನಗರ, ಕರ್ನಾಟಕ•
    1 hr ago
  • BHALKI :-ಬಲಗೈ ಸಮುದಾಯದ ಮುಖಂಡರಿಂದ, ಸಚಿವ ಈಶ್ವರ ಖಂಡ್ರೆಯವರಿಗೆ ಮನವಿ ಪತ್ರ.
    1
    BHALKI :-ಬಲಗೈ ಸಮುದಾಯದ ಮುಖಂಡರಿಂದ, ಸಚಿವ ಈಶ್ವರ ಖಂಡ್ರೆಯವರಿಗೆ  ಮನವಿ ಪತ್ರ.
    user_ಈಶ್ವರ್ ಬೆಳಕು ನ್ಯೂಸ್ ಕನ್ನಡ User
    ಈಶ್ವರ್ ಬೆಳಕು ನ್ಯೂಸ್ ಕನ್ನಡ User
    Bengaluru East, Bengaluru Urban•
    3 hrs ago
  • ಹನೂರು ಪಟ್ಟಣದ ಅಧಿದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮನ ಉತ್ಸವ ಮೂರ್ತಿಯ ತೆಪ್ಪೋತ್ಸವ ಹಾಗೂ ಉಯ್ಯಲೋತ್ಸವವು ಶುಕ್ರವಾರ ರಾತ್ರಿ ಸಮೀಪದ ಆರ್.ಎಸ್.ದೊಡ್ಡಿ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆಯಿತು. ಪ್ರತಿ ವರ್ಷ ಜಾತ್ರೆಯ ಮುಕ್ತಾಯದ ದಿನದ ಅಂಗವಾಗಿ ಗ್ರಾಮಸ್ಥರು ಪಟ್ಟಣದ ಬೆಟ್ಟಳ್ಳಿ ಮಾರಮ್ಮ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಉತ್ಸವಮೂರ್ತಿಯನ್ನು ಕುದುರೆ ವಾಹನದಲ್ಲಿ ಮೆರವಣಿಗೆಯ ಮೂಲಕ ಗ್ರಾಮಕ್ಕೆ ಕರೆತಂದರು. ರಾತ್ರಿ ಮಹದೇಶ್ವರಸ್ವಾಮಿ ದೇಗುಲದ ಸಮೀಪದ ಕೆರೆಯಲ್ಲಿ ಪುಷ್ಪ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಿದ ತೆಪ್ಪದಲ್ಲಿ ದೇವಿಯ ಮೂರ್ತಿಯನ್ನು ಕೂರಿಸಿ ತೆಪ್ಪೋತ್ಸವ ನೆರವೇರಿಸಲಾಯಿತು. ಬಳಿಕ ಹಸಿರು ಸೊಪ್ಪಿನಿಂದ ನಿರ್ಮಿಸಿದ ಚಪ್ಪರದ ಉಯ್ಯಲೆಯಲ್ಲಿ ದೇವಿಯ ಮೂರ್ತಿಯನ್ನು ಕೂರಿಸಿ ಉಯ್ಯಲೋತ್ಸವ ಆಚರಿಸಲಾಯಿತು. ಮಹಿಳೆಯರು ತಂಪುಜ್ಯೋತಿ ಅರ್ಪಿಸಿ ಭಕ್ತಿ ಪ್ರದರ್ಶಿಸಿದರು. ನಂತರ ಉತ್ಸವಮೂರ್ತಿಯನ್ನು ಗ್ರಾಮದ ಬೀದಿಗಳಲ್ಲಿ ಮೆರವಣಿಗೆಯಾಗಿ ಕರೆದುಕೊಂಡು ಹೋಗಿ ಮನೆಮನೆಗಳಲ್ಲಿ ವಿಶೇಷ ಪೂಜೆ ನಡೆಯಿತು. ಶನಿವಾರ ಮಧ್ಯಾಹ್ನ ಉತ್ಸವಮೂರ್ತಿಯನ್ನು ಮೆರವಣಿಗೆಯ ಮೂಲಕ ಮರಳಿ ಪಟ್ಟಣದ ದೇಗುಲದಲ್ಲಿ ಪ್ರತಿಷ್ಠಾಪಿಸಲಾಯಿತು.
    2
    ಹನೂರು ಪಟ್ಟಣದ ಅಧಿದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮನ ಉತ್ಸವ ಮೂರ್ತಿಯ ತೆಪ್ಪೋತ್ಸವ ಹಾಗೂ ಉಯ್ಯಲೋತ್ಸವವು ಶುಕ್ರವಾರ ರಾತ್ರಿ ಸಮೀಪದ ಆರ್.ಎಸ್.ದೊಡ್ಡಿ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆಯಿತು.
ಪ್ರತಿ ವರ್ಷ ಜಾತ್ರೆಯ ಮುಕ್ತಾಯದ ದಿನದ ಅಂಗವಾಗಿ ಗ್ರಾಮಸ್ಥರು ಪಟ್ಟಣದ ಬೆಟ್ಟಳ್ಳಿ ಮಾರಮ್ಮ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಉತ್ಸವಮೂರ್ತಿಯನ್ನು ಕುದುರೆ ವಾಹನದಲ್ಲಿ ಮೆರವಣಿಗೆಯ ಮೂಲಕ ಗ್ರಾಮಕ್ಕೆ ಕರೆತಂದರು. ರಾತ್ರಿ ಮಹದೇಶ್ವರಸ್ವಾಮಿ ದೇಗುಲದ ಸಮೀಪದ ಕೆರೆಯಲ್ಲಿ ಪುಷ್ಪ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಿದ ತೆಪ್ಪದಲ್ಲಿ ದೇವಿಯ ಮೂರ್ತಿಯನ್ನು ಕೂರಿಸಿ ತೆಪ್ಪೋತ್ಸವ ನೆರವೇರಿಸಲಾಯಿತು.
ಬಳಿಕ ಹಸಿರು ಸೊಪ್ಪಿನಿಂದ ನಿರ್ಮಿಸಿದ ಚಪ್ಪರದ ಉಯ್ಯಲೆಯಲ್ಲಿ ದೇವಿಯ ಮೂರ್ತಿಯನ್ನು ಕೂರಿಸಿ ಉಯ್ಯಲೋತ್ಸವ ಆಚರಿಸಲಾಯಿತು. ಮಹಿಳೆಯರು ತಂಪುಜ್ಯೋತಿ ಅರ್ಪಿಸಿ ಭಕ್ತಿ ಪ್ರದರ್ಶಿಸಿದರು. ನಂತರ ಉತ್ಸವಮೂರ್ತಿಯನ್ನು ಗ್ರಾಮದ ಬೀದಿಗಳಲ್ಲಿ ಮೆರವಣಿಗೆಯಾಗಿ ಕರೆದುಕೊಂಡು ಹೋಗಿ ಮನೆಮನೆಗಳಲ್ಲಿ ವಿಶೇಷ ಪೂಜೆ ನಡೆಯಿತು. ಶನಿವಾರ ಮಧ್ಯಾಹ್ನ ಉತ್ಸವಮೂರ್ತಿಯನ್ನು ಮೆರವಣಿಗೆಯ ಮೂಲಕ ಮರಳಿ ಪಟ್ಟಣದ ದೇಗುಲದಲ್ಲಿ ಪ್ರತಿಷ್ಠಾಪಿಸಲಾಯಿತು.
    user_ಹನೂರು ನ್ಯೂಸ್ ಅಡ್ಡ
    ಹನೂರು ನ್ಯೂಸ್ ಅಡ್ಡ
    Farmer ಹನೂರು, ಚಾಮರಾಜನಗರ, ಕರ್ನಾಟಕ•
    22 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    13 hrs ago
  • ಗ್ಯಾಸ್ ಸಿಲಿಂಡರ್ ವ್ಯತ್ಯಯ ಹಿನ್ನೆಲೆ ಇಂದಿರಾ ಕ್ಯಾಂಟೀನ್ ಗಳ ಬಂದ್ ವಿಚಾರ ಜಿಬಿಎ ಆಯುಕ್ತ ಮಹೇಶ್ವರ್ ರಾವ್ ಹೇಳಿಕೆ ಸರ್ಕಾರ ಕೇಳಿದ ಪ್ರಕಾರ ಐ ಓ ಸಿ ಯವರು ಸಿಲಿಂಡರ್ ಕೊಡಲು ಒಪ್ಪಿಗೆ..ಬೇಗನೆ ಚಾಲು ಆಗಲಿವೆ... ಪ್ರತಿದಿನ 80 ಸಿಲಿಂಡರ್ ಅವಶ್ಯಕತೆ ಇದೆ... ನಾಳೆಯಿಂದ ಎಲ್ಲವೂ ಚಾಲು ಆಗಲಿವೆ.... ಗೈಲ್ ಅವರ ಕನೆಕ್ಷನ್ ಪೆಂಡಿಗ್ ಇದ್ರೆ ತಕ್ಷಣ ಕ್ಲಿಯರ್ ಮಾಡಿಸುತ್ತೇವೆ...ಯಾಕಂದರೆ ಮುಂದೆ ಸಮಸ್ಯೆಯಾಗಬಾರದು..... ಚಿನ್ನಸ್ವಾಮಿ ಸ್ಟೇಡಿಯಂ ಐ ಪಿ ಎಲ್ ಪಂದ್ಯಗಳು ನಡೆಸುವ ವಿಚಾರ....ಆಲ್ರೆಡಿ ಸರ್ಕಾರ ಒಪ್ಪಿಕೊಂಡಿದೆ...ನಮಗೆ ವೆರಿಪಿಕೇಷನ್ ಮಾಡಲು ಹೇಳಿದ್ದರು... ವೆರಿಪಿಕೇಷನ್ ಮಾಡಿದ್ದೇವೆ... ಸೋಮವಾರ ಹೋಮ್ ಮಿನಿಸ್ಟರ್ ಮೀಟಿಂಗ್ ಕರೆದಿದ್ದಾರೆ...ಅಲ್ಲಿ ಹೋಗಿ ಚರ್ಚಿಸುತ್ತೇವೆ...ಕೆಪಿಸಿಎ ಏನು ಕೆಲಸ ಮಾಡಿಸಿದೆ ಸ್ಟೇಡಿಯಂ ನಲ್ಲಿ ಅನ್ನೋದು ಚರ್ಚೆ ಮಾಡಿದ್ದೇವೆ...ಈಗಾಗಲೇ ರಿಪೋರ್ಟ್ ನೀಡಿದ್ದೇವೆ....
    1
    ಗ್ಯಾಸ್ ಸಿಲಿಂಡರ್ ವ್ಯತ್ಯಯ ಹಿನ್ನೆಲೆ
ಇಂದಿರಾ ಕ್ಯಾಂಟೀನ್ ಗಳ ಬಂದ್ ವಿಚಾರ
ಜಿಬಿಎ ಆಯುಕ್ತ ಮಹೇಶ್ವರ್ ರಾವ್ ಹೇಳಿಕೆ
ಸರ್ಕಾರ ಕೇಳಿದ ಪ್ರಕಾರ ಐ ಓ ಸಿ ಯವರು ಸಿಲಿಂಡರ್ ಕೊಡಲು ಒಪ್ಪಿಗೆ..ಬೇಗನೆ ಚಾಲು ಆಗಲಿವೆ...
ಪ್ರತಿದಿನ 80 ಸಿಲಿಂಡರ್ ಅವಶ್ಯಕತೆ ಇದೆ...
ನಾಳೆಯಿಂದ ಎಲ್ಲವೂ ಚಾಲು ಆಗಲಿವೆ....
ಗೈಲ್ ಅವರ ಕನೆಕ್ಷನ್ ಪೆಂಡಿಗ್ ಇದ್ರೆ ತಕ್ಷಣ ಕ್ಲಿಯರ್ ಮಾಡಿಸುತ್ತೇವೆ...ಯಾಕಂದರೆ ಮುಂದೆ ಸಮಸ್ಯೆಯಾಗಬಾರದು.....
ಚಿನ್ನಸ್ವಾಮಿ ಸ್ಟೇಡಿಯಂ ಐ ಪಿ ಎಲ್  ಪಂದ್ಯಗಳು ನಡೆಸುವ ವಿಚಾರ....ಆಲ್ರೆಡಿ ಸರ್ಕಾರ ಒಪ್ಪಿಕೊಂಡಿದೆ...ನಮಗೆ ವೆರಿಪಿಕೇಷನ್ ಮಾಡಲು ಹೇಳಿದ್ದರು...
ವೆರಿಪಿಕೇಷನ್ ಮಾಡಿದ್ದೇವೆ...
ಸೋಮವಾರ ಹೋಮ್ ಮಿನಿಸ್ಟರ್ ಮೀಟಿಂಗ್ ಕರೆದಿದ್ದಾರೆ...ಅಲ್ಲಿ ಹೋಗಿ ಚರ್ಚಿಸುತ್ತೇವೆ...ಕೆಪಿಸಿಎ ಏನು ಕೆಲಸ ಮಾಡಿಸಿದೆ ಸ್ಟೇಡಿಯಂ ನಲ್ಲಿ ಅನ್ನೋದು ಚರ್ಚೆ ಮಾಡಿದ್ದೇವೆ...ಈಗಾಗಲೇ ರಿಪೋರ್ಟ್ ನೀಡಿದ್ದೇವೆ....
    user_Bindu vinod
    Bindu vinod
    ಆನೇಕಲ್, ಬೆಂಗಳೂರು ನಗರ, ಕರ್ನಾಟಕ•
    5 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.