ದೇವಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎಸ್‌ಡಿಎಂಸಿ ಪ್ರಶಸ್ತಿ – ₹75,000 ಬಹುಮಾನ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ದೇವಗಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಗಳಿಗೆ ಶಿಕ್ಷಣ ಇಲಾಖೆ ಕೈಗೊಂಡಿರುವ ಪರಿಣಾಮಕಾರಿ ಕಾರ್ಯಚಟುವಟಿಕೆಗಳನ್ನು ಗುರುತಿಸಿ ವಿಶೇಷ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯೊಂದಿಗೆ ₹75,000 ನಗದು ಬಹುಮಾನವನ್ನು ಎಸ್‌ಡಿಎಂಸಿ ಖಾತೆಗೆ ಜಮಾ ಮಾಡಲಾಗುತ್ತದೆ. ಶಾಲೆಯ ಮೂಲಭೂತ ಸೌಕರ್ಯಗಳನ್ನು ಸುಧಾರಿಸುವಲ್ಲಿ ಎಸ್‌ಡಿಎಂಸಿ ಪ್ರಮುಖ ಪಾತ್ರವಹಿಸಿದೆ. ಶಾಲೆಯ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳ ನಿರ್ವಹಣೆ, ತರಗತಿ ಕೊಠಡಿಗಳ ಸೌಲಭ್ಯಗಳನ್ನು ಉತ್ತಮಗೊಳಿಸುವ ಕಾರ್ಯಗಳನ್ನು ಸಮಿತಿ ನಿರಂತರವಾಗಿ ಕೈಗೊಂಡಿದೆ. ಶಾಲೆಯ ಪರಿಸರವನ್ನು ಸುಂದರ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿಸುವ ಉದ್ದೇಶದಿಂದ ಹಲವು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಶಾಲೆಯ ಶಿಕ್ಷಕರೊಂದಿಗೆ ಸಮನ್ವಯ ಹೊಂದಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವತ್ತ ಎಸ್‌ಡಿಎಂಸಿ ವಿಶೇಷ ಗಮನ ಹರಿಸಿದೆ. ಶಿಕ್ಷಕರು ಮತ್ತು ಸಮಿತಿ ಸದಸ್ಯರು ಸೇರಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸುವುದು, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಿಕ್ಷಣದತ್ತ ಸೆಳೆಯುವುದು ಹಾಗೂ ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿ ಆಸಕ್ತಿ ಮೂಡಿಸುವ ಕಾರ್ಯಗಳನ್ನು ಮಾಡುತ್ತಿದ್ದಾರೆ. ಶಾಲೆಯಲ್ಲಿ ಹಲವು ವಿಶೇಷ ಚಟುವಟಿಕೆಗಳು ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪರಿಸರ ಜಾಗೃತಿ ಕಾರ್ಯಕ್ರಮಗಳು ಮತ್ತು ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಉತ್ತೇಜಿಸುವಲ್ಲಿ ಸಹಾಯವಾಗಿವೆ. ಇದರ ಜೊತೆಗೆ ಶಾಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ರೂಪಿಸಿ ದಾನಿಗಳಿಗೆ ಮನವರಿಕೆ ಮಾಡಿಕೊಟ್ಟು ಅಗತ್ಯ ಸಹಾಯವನ್ನು ಪಡೆಯಲಾಗಿದೆ. ದಾನಿಗಳ ಸಹಕಾರದಿಂದ ಶಾಲೆಗೆ ಬೇಕಾದ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ. ಎಸ್‌ಡಿಎಂಸಿ ವತಿಯಿಂದ ನಿಯಮಿತವಾಗಿ ಸಭೆಗಳನ್ನು ನಡೆಸಿ ಶಾಲೆಯ ಅಭಿವೃದ್ಧಿ, ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರಗಳ ಕುರಿತು ಚರ್ಚಿಸಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಈ ಸಭೆಗಳ ಪರಿಣಾಮವಾಗಿ ಶಾಲೆಯಲ್ಲಿ ವ್ಯವಸ್ಥಿತ ಕಾರ್ಯಚಟುವಟಿಕೆಗಳು ನಡೆಯುತ್ತಿದ್ದು, ಶಾಲೆಯ ಶೈಕ್ಷಣಿಕ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಉತ್ತೇಜನ ಸಿಕ್ಕಿದೆ. ಶಾಲೆಯ ಅಭಿವೃದ್ಧಿಗೆ ಎಸ್‌ಡಿಎಂಸಿ ನೀಡಿರುವ ಮಹತ್ವದ ಕೊಡುಗೆ ಹಾಗೂ ಸಮರ್ಪಿತ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ಪ್ರಶಸ್ತಿ ಶಾಲೆಯ ಮುಂದಿನ ಅಭಿವೃದ್ಧಿಗೆ ಮತ್ತಷ್ಟು ಪ್ರೇರಣೆ ನೀಡಲಿದೆ ಎಂದು ಶಾಲೆಯ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಮತ್ತು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಬೈಟ್ :- ಶಶಿಕಲಾ, ಪ್ರಭಾರ ಮುಖ್ಯ ಶಿಕ್ಷಕಿ
ದೇವಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎಸ್‌ಡಿಎಂಸಿ ಪ್ರಶಸ್ತಿ – ₹75,000 ಬಹುಮಾನ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ದೇವಗಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಗಳಿಗೆ ಶಿಕ್ಷಣ ಇಲಾಖೆ ಕೈಗೊಂಡಿರುವ ಪರಿಣಾಮಕಾರಿ ಕಾರ್ಯಚಟುವಟಿಕೆಗಳನ್ನು ಗುರುತಿಸಿ ವಿಶೇಷ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯೊಂದಿಗೆ ₹75,000 ನಗದು ಬಹುಮಾನವನ್ನು ಎಸ್‌ಡಿಎಂಸಿ ಖಾತೆಗೆ ಜಮಾ ಮಾಡಲಾಗುತ್ತದೆ. ಶಾಲೆಯ ಮೂಲಭೂತ ಸೌಕರ್ಯಗಳನ್ನು ಸುಧಾರಿಸುವಲ್ಲಿ ಎಸ್‌ಡಿಎಂಸಿ ಪ್ರಮುಖ ಪಾತ್ರವಹಿಸಿದೆ. ಶಾಲೆಯ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳ ನಿರ್ವಹಣೆ, ತರಗತಿ ಕೊಠಡಿಗಳ ಸೌಲಭ್ಯಗಳನ್ನು ಉತ್ತಮಗೊಳಿಸುವ ಕಾರ್ಯಗಳನ್ನು ಸಮಿತಿ ನಿರಂತರವಾಗಿ ಕೈಗೊಂಡಿದೆ. ಶಾಲೆಯ ಪರಿಸರವನ್ನು ಸುಂದರ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿಸುವ ಉದ್ದೇಶದಿಂದ ಹಲವು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಶಾಲೆಯ ಶಿಕ್ಷಕರೊಂದಿಗೆ ಸಮನ್ವಯ ಹೊಂದಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವತ್ತ ಎಸ್‌ಡಿಎಂಸಿ ವಿಶೇಷ ಗಮನ ಹರಿಸಿದೆ. ಶಿಕ್ಷಕರು ಮತ್ತು ಸಮಿತಿ ಸದಸ್ಯರು ಸೇರಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸುವುದು, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಿಕ್ಷಣದತ್ತ ಸೆಳೆಯುವುದು ಹಾಗೂ ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿ ಆಸಕ್ತಿ ಮೂಡಿಸುವ ಕಾರ್ಯಗಳನ್ನು ಮಾಡುತ್ತಿದ್ದಾರೆ. ಶಾಲೆಯಲ್ಲಿ ಹಲವು
ವಿಶೇಷ ಚಟುವಟಿಕೆಗಳು ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪರಿಸರ ಜಾಗೃತಿ ಕಾರ್ಯಕ್ರಮಗಳು ಮತ್ತು ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಉತ್ತೇಜಿಸುವಲ್ಲಿ ಸಹಾಯವಾಗಿವೆ. ಇದರ ಜೊತೆಗೆ ಶಾಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ರೂಪಿಸಿ ದಾನಿಗಳಿಗೆ ಮನವರಿಕೆ ಮಾಡಿಕೊಟ್ಟು ಅಗತ್ಯ ಸಹಾಯವನ್ನು ಪಡೆಯಲಾಗಿದೆ. ದಾನಿಗಳ ಸಹಕಾರದಿಂದ ಶಾಲೆಗೆ ಬೇಕಾದ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ. ಎಸ್‌ಡಿಎಂಸಿ ವತಿಯಿಂದ ನಿಯಮಿತವಾಗಿ ಸಭೆಗಳನ್ನು ನಡೆಸಿ ಶಾಲೆಯ ಅಭಿವೃದ್ಧಿ, ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರಗಳ ಕುರಿತು ಚರ್ಚಿಸಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಈ ಸಭೆಗಳ ಪರಿಣಾಮವಾಗಿ ಶಾಲೆಯಲ್ಲಿ ವ್ಯವಸ್ಥಿತ ಕಾರ್ಯಚಟುವಟಿಕೆಗಳು ನಡೆಯುತ್ತಿದ್ದು, ಶಾಲೆಯ ಶೈಕ್ಷಣಿಕ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಉತ್ತೇಜನ ಸಿಕ್ಕಿದೆ. ಶಾಲೆಯ ಅಭಿವೃದ್ಧಿಗೆ ಎಸ್‌ಡಿಎಂಸಿ ನೀಡಿರುವ ಮಹತ್ವದ ಕೊಡುಗೆ ಹಾಗೂ ಸಮರ್ಪಿತ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ಪ್ರಶಸ್ತಿ ಶಾಲೆಯ ಮುಂದಿನ ಅಭಿವೃದ್ಧಿಗೆ ಮತ್ತಷ್ಟು ಪ್ರೇರಣೆ ನೀಡಲಿದೆ ಎಂದು ಶಾಲೆಯ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಮತ್ತು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಬೈಟ್ :- ಶಶಿಕಲಾ, ಪ್ರಭಾರ ಮುಖ್ಯ ಶಿಕ್ಷಕಿ
- ಚಿತ್ರದುರ್ಗ: ಮಧ್ಯ ಪ್ರಾಚ್ಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮ ಕಳೆದ ಹದಿನೈದು ದಿನಗಳಿಂದಲೂ ಚಿತ್ರದುರ್ಗ ಜಿಲ್ಲೆಯಲ್ಲಿ ಕುಕ್ಕುಟೋದ್ಯಮದ ಮೇಲೆ ಭಾರಿ ಹೊಡೆತ ಬಿದ್ದಿದೆ! ಕುಕ್ಕುಟೋದ್ಯಮಕ್ಕೆ ಒಂದೆಡೆ ಯುದ್ಧ ಹಾಗೂ ಇನ್ನೊಂದೆಡೆ ಸುಡು ಬಿಸಿಲಿನ ತಾಪಕ್ಕೆ ಸಿಲುಕಿ ತತ್ತರಿಸುತ್ತಿದೆ.ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ (ಎನ್‌ಇಸಿಸಿ) ನಿಗದಿ ಮಾಡಿರುವ ದರದ ಅನುಸಾರ ತಿಂಗಳ ಹಿಂದೆ ಪ್ರತಿ ಸಗಟು ಕೋಳಿ ಮೊಟ್ಟೆ ದರ ₹5.50ರಿಂದ ₹5.60 ಇತ್ತು. ಆದರೆ ಈಗ ₹3.80ರಿಂದ ₹3.90ಕ್ಕೆ ಕುಸಿದಿದೆ. ಇದರಿಂದ ಮೊಟ್ಟೆ ವಹಿವಾಟಿನ ಮೇಲೆ ಆತಂಕದ ಕಾರ್ಮೋಡ ಕವಿದಿದೆ. ಇಲ್ಲಿನ ಮೊಟ್ಟೆಗಳನ್ನು ಬೆಂಗಳೂರು, ಹೊಸಪೇಟೆ, ಹೈದ್ರಾಬಾದ್, ನಾಮಕಲ್, ಮೈಸೂರು, ಚೆನ್ನೈಗಳಲ್ಲಿ ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ (ಎನ್‌ಇಸಿಸಿ) ಗಳಿದ್ದು, ಈ ಸಮನ್ವಯ ಸಮಿತಿಗಳು ನಿಗದಿ ಮಾಡುವ ಬೆಲೆಗೆ ಮಾರಾಟ ಮಾಡುವ ಅನಿವಾರ್ಯತೆಮೊದಲಿನಿಂದಲೂ ಮಾಲೀಕರದ್ದಾಗಿದೆ. ಆಂಧ್ರಪ್ರದೇಶದ ಜೊತೆ ಗಡಿ ಹಂಚಿಕೊಂಡಿರುವ ಮೊಳಕಾಲ್ಮುರು, ಚಳ್ಳಕೆರೆ ತಾಲ್ಲೂಕುಗಳಲ್ಲಿ ಅತಿ ಹೆಚ್ಚು ಕೋಳಿ ಫಾರಂಗಳಿವೆ. ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟಾರೆ 40 ಲಕ್ಷ ಕೋಳಿಗಳನ್ನು ಸಾಕಲಾಗುತ್ತಿದೆ. ಇದರಲ್ಲಿ 32 ಲಕ್ಷ ಕೋಳಿಗಳ ಸಾಕಣೆ ಈ ಎರಡು ತಾಲ್ಲೂಕುಗಳಲ್ಲೇ ನಡೆಯುತ್ತಿದೆ. ಜಿಲ್ಲೆಯಿಂದ ರಾಜ್ಯ, ಹೊರರಾಜ್ಯಗಳಿಗೆ ಮಾತ್ರವಲ್ಲದೇ ಹೊರ ದೇಶಗಳಿಗೂ ಮೊಟ್ಟೆ ರಫ್ತಾಗುತ್ತದೆ. ಆಂಧ್ರ ಮತ್ತು ಅಕ್ಕಪಕ್ಕದ ಜಿಲ್ಲೆಗಳಿಂದ ಬಂದ ಅಂದಾಜು 1 ಕೋಟಿಯಷ್ಟು ಮೊಟ್ಟೆಯನ್ನು ಪ್ರತಿದಿನ ಕಳುಹಿಸಲಾಗುತ್ತದೆ. ಕೋಳಿ ಸಾಕಣೆ, ವಿದೇಶಿ ರಫ್ಟಿಗೆ ಹೆಸರು-ವಾಸಿಯಾಗಿರುವ ತಮಿಳುನಾಡಿನ ನಾಮಕ್ಕಲ್ ಮೂಲಕ ಮೊಟ್ಟೆ ರಫ್ತು ಮಾಡಲಾಗುತ್ತದೆ. ಯುದ್ಧ ನಡೆಯುತ್ತಿರುವ ಕಾರಣ ನಾಮಕ್ಕಲ್ ನಿಂದ ರಫ್ತು ಸಂಪೂರ್ಣವಾಗಿ ಮೊಟ್ಟೆಗಳು ಸ್ಥಗಿತಗೊಂಡಿದ್ದು ಮಾರಾಟವಾಗದೇ ಹಾಳಾಗುತ್ತಿವೆ. *ಮೊಟ್ಟೆ ರಫ್ತಿಗೆ ಬ್ರೇಕ್* ಯುದ್ಧದ ಪರಿಣಾಮ ಕರ್ನಾಟಕ ರಾಜ್ಯ ಹಾಗೂ ತಮಿಳುನಾಡಿನ ನಾಮಕಲ್ ಸೇರಿ ಇಲ್ಲಿಂದ ಹೊರ ರಾಷ್ಟ್ರಗಳಿಗೆ ಹಡಗು ಹಾಗೂ ವಿಮಾನಗಳ ಮೂಲಕ ರಫ್ತಾಗುತ್ತಿದ್ದ ಮೊಟ್ಟೆಗೆ ಬ್ರೇಕ್ ಬಿದ್ದಿದೆ. ಇದರಿಂದ ಮೊಟ್ಟೆ ಬೆಲೆಯಲ್ಲಿ ಗಣನೀಯ ಪ್ರಮಾಣದ ಕುಸಿತ ಕಾಣಲು ಪ್ರಮುಖ ಕಾರಣವಾಗಿದೆ. ಸಮ್ಮರ್ ಸೀಜನ್ ಕುಕ್ಕುಟೋದ್ಯಮಕ್ಕೆ ಪ್ರತಿ ವರ್ಷವೂ ಅನ್‌ಸೀಜನ್. ಆದರೆ ಈಗ ಇದರ ಜೊತೆ ಯುದ್ಧವು ಸೇರಿ ಕೊಂಡಿರುವುದು ಪೌಲ್ಟ್ರಿ ಫಾರಂ ಮಾಲೀಕರ ಆತಂಕ ದ್ವಿಗುಣವಾಗಿದೆ. ಇನ್ನೇನು ಶೀಘ್ರವೇ ಶಾಲೆಗಳಿಗೆ ಬೇಸಿಗೆ ರಜೆ ಆಗಮಿಸಲಿದ್ದು, ಶಾಲೆಗೆ ವಿತರಣೆಯಾಗುತ್ತಿದ್ದ ಮೊಟ್ಟೆಗೂ ಬ್ರೇಕ್ ಬೀಳಲಿದೆ. ಇದು ಇನ್ನೊಂದು ಶಾಕಿಂಗ್ ವಿಷಯವಾಗಿದೆ ಎಂದು ಮಾಲೀಕರು ಅಳಲು ತೋಡಿಕೊಳ್ಳುತ್ತಾರೆ. *ಪೌಲ್ಟಿ ಮಾಲೀಕರ ಆತಂಕ* 'ಸೋಯಾ, ಸೂರ್ಯಕಾಂತಿ ಹಿಂಡಿ, ಮೆಕ್ಕೆಜೋಳ, ಡಿಒಆರ್‌ಬಿ ಹಾಗೂ ವಿಟಮಿನ್ ಬೆಲೆಗಳು ಗಗನಕ್ಕೇರು ತ್ತಿವೆ. ಮೊಟ್ಟೆ ಬೆಲೆ ಮಾತ್ರ ಕುಸಿಯು ತ್ತಿದೆ. ಬಂಡವಾಳ ಹಾಕಿ, ಫುಡ್, ಕೂಲಿ, ನಿರ್ವಹಣೆ ಮಾಡುವ ಮಾಲೀಕರ ಕೈ ಸುಡುತ್ತಿದೆ. ಒಂದು ವಾರಕ್ಕೂ ಅಧಿಕ ಕಾಲ ಮೊಟ್ಟೆಯನ್ನು ದಾಸ್ತಾನು ಮಾಡಲು ಸಾಧ್ಯವಿಲ್ಲವಾ ದ್ದರಿಂದ ಇದನ್ನೇ ಬಂಡವಾಳ ಮಾಡಿಕೊಂಡ ಅನೇಕರು ಮೊಟ್ಟೆಯ ಬೆಲೆಯನ್ನು ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ' ಎನ್ನುತ್ತಾರೆ ಪೌಲ್ಟಿಫಾರಂ ಮಾಲೀಕರು.1
- *ಭಾರತ ನಲ್ಲಿ ವೈರಲ್*1
- ಬನ್ನೂರಿಂದ 5.KM.ರಂಗಸಮುದ್ರ ಬಂಡಿ ಹಬ್ಬ ಮತ್ತು ಕೊಂಡ ಉತ್ಸವ ಇದೆ. 15.3.20261
- ಹನೂರು :ತಾಲೂಕಿನ ಗುಂಡಾಲ್ ಡ್ಯಾಮ್ ಏತ ನೀರಾವರಿ ಯೋಜನೆಯ ರೈಸಿಂಗ್ ಮೇನ್ ಹಾಗೂ ನಾಲೆಗಳ ಅಭಿವೃದ್ಧಿಯ ಕಾಮಗಾರಿಗೆ ಸುಮಾರು 1ಕೋಟಿ 50 ಲಕ್ಷ ರೂ ವೆಚ್ಚದ ಕಾಮಗಾರಿಗೆ ಶಾಸಕ ಎಂ.ಆರ್ ಮಂಜುನಾಥ್ ಭೂಮಿ ಪೂಜೆಯನ್ನು ನೆರವೇರಿಸಿ ಮಾಧ್ಯಮಗಳನ್ನು ಉದ್ದೇಶೀಸಿ ಮಾತನಾಡಿದ ಅವರು ಗುಂಡಾಲ್ ಜಲಾಶಯದಿಂದ ಸಣ್ಣ ನೀರಾವರಿ ಇಲಾಖೆ ವತಿಯಿಂದ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಯೋಜನೆ ಸಮರ್ಪಕವಾಗಿ ಬಳಕೆಯಾಗುತ್ತಿರಲಿಲ್ಲ. ಪೈಪ್ ಲೈನ್ ಹಾಗೂ ಲೈನಿಂಗ್ ಕಾಮಗಾರಿ ಆಗಿರಲಿಲ್ಲ. ಇದೀಗ ಈ ಕಾಮಗಾರಿಗಾಗಿ ಒಂದುವರೆ ಕೋಟಿ ಬಿಡುಗಡೆಯಾಗಿದೆ ಈ ಅನುದಾನ ಬಳಕೆ ಮಾಡಿಕೊಂಡು ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಇದರಿಂದಾಗಿ ಸುಮಾರು 200 ರಿಂದ 300 ಎಕರೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ಕೊಡುವಂತಹ ಕೆಲಸ ಈ ಏತ ನೀರಾವರಿಯಿಂದ ಆಗಲಿದೆ ಎಂದರು. ಈ ಯಂತ್ರ ಗಾರದಲ್ಲಿ 40 ಅಶ್ವಶಕ್ತಿ (ಹೆಚ್ ಪಿ) ಯ ಎರಡು ಪಂಪುಗಳಿವೆ. ಆದರೆ ನಾಲೆಯ ಎರಡು ಬದಿಯ ಲೈನಿಂಗ್ ಹಾಳಾಗಿವೆ. ಹಾಗಾಗಿ ನಾಲೆಯಲ್ಲಿ ಸಮರ್ಪಕವಾಗಿ ನೀರು ಹರಿಯಲಿಕ್ಕೆ ಆಗುತ್ತಿರಲಿಲ್ಲ. ಅದನ್ನು ಅನುಕೂಲ ಮಾಡಲಿಕ್ಕೆ ಈ ಕಾಮಗಾರಿ ನಡೆಸಲು ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಗುಂಡಾಲ್ ಜಲಾಶಯಕ್ಕೆ ಕಾವೇರಿ ನದಿಯಿಂದ ಏತ ನೀರಾವರಿ ಮೂಲಕ ನೀರು ತುಂಬಿಸಲಾಗುತ್ತದೆ ಹಾಗೆಯೇ ಮಳೆಗಾಲದಲ್ಲಿ ಪ್ರಾಕೃತಿಕವಾಗಿ ಬೆಟ್ಟ ಗುಡ್ಡಗಳ ನೀರು ಜಲಾಶಯಕ್ಕೆ ನೀರು ಹರಿದು ಬರಲಿದೆ. ಇದರಿಂದ ಅಂತರ್ಜಲ ಹೆಚ್ಚುತ್ತದೆ ಹೊರತು ರೈತರ ಜಮೀನುಗಳಿಗೆ ಹತ್ತಿರಕ್ಕೆ ನೀರು ತೆಗೆದುಕೊಂಡು ಆಗುತ್ತಿರಲ್ಲ. ಹಾಗಾಗಿ ಬಲದಂಡೆ ನಾಲೆಯ ಈ ಭಾಗಗಳಿಗೆ ಜಲಾಶಯ ಹತ್ತಿರದಲ್ಲಿದ್ದರೂ ನೀರು ತೆಗೆದುಕೊಂಡು ಹೋಗಲು ಆಗುತ್ತಿರಲಿಲ್ಲ. ಈಗ ಸಣ್ಣ ನೀರಾವರಿ ಇಲಾಖೆ ಏತ ನೀರಾವರಿ ಮೂಲಕ ನೀರು ತೆಗೆದುಕೊಂಡು ಹೋಗುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು. ನಾನು ಮಾಧ್ಯಮದ ಮೂಲಕ ಮನವಿ ಮಾಡಿಕೊಳ್ಳುವುದೇನೆಂದರೆ. ಈ ಯೋಜನೆಗೆ ರೈತರ ಸಹಕಾರ ಅಗತ್ಯ, ರೈತರು ಕೈಜೋಡಿಸಬೇಕು, ಅವರ ಸಹಭಾಗಿತ್ವ ಬೇಕು, ಹಾಗಾದರೆ ಮಾತ್ರ ವ್ಯವಸ್ಥೆ ಅಚ್ಚುಕಟ್ಟಾಗಿರುತ್ತದೆ ಎಲ್ಲರೂ ನನ್ನದಲ್ಲ ಎಂದು ಕೈಬಿಟ್ಟರೆ ಅದು ಹಾಳಾಗುತ್ತದೆ. ನನ್ನದು ಎಂದು ಉಪಯೋಗಿಸುವಾಗ ಮಾತ್ರ ಚೆನ್ನಾಗಿರುತ್ತದೆ. ಆದ್ದರಿಂದ ಇಲಾಖೆ ಹಾಗೂ ಗುತ್ತಿಗೆದಾರರ ಜೊತೆಗೆ ರೈತರು ಕಾಮಗಾರಿಯನ್ನು ಅಚ್ಚುಗಟ್ಟಾಗಿ ಮಾಡಿಸಿಕೊಳ್ಳುವ ನಿಟ್ಟಿನಲ್ಲಿ ಅನುಕೂಲ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ ಅವರು. ಇದೇ ವೇಳೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸುವಂತೆ ಸೂಚಿಸಿದರು ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಎಇಇ ಅಭಿಲಾಷ್, ಜೆ ಇ ಪ್ರತಾಪ್,ಮುಖಂಡರುಗಳಾದ ಕೊಂಗ್ರಹಳ್ಳಿ ಮಹೇಶ್,ಡ್ಯಾಮ್ ಶಂಕರ್,ಗುರುಸ್ವಾಮಿ, ಶಿವಮಲ್ಲು, ಸದಾಶಿವ,ತೊಮಣ್ಣ,ಶಿವರುದ್ರ,ಚಿನ್ನಸ್ವಾಮಿ,ಗೋವಿಂದ, ತಿರುಪತಿ,ವಿಜಯ್ ಕುಮಾರ್, ಎಸ್ ಆರ್ ಮಹದೇವ್, ವೆಂಕಟೇಶ್, ಗುತ್ತಿಗೆದಾರ ಫಾರಕ್ ಪಾಷ ಹಾಗೂ ಇನ್ನಿತರರು ಇದ್ದರು.2
- ಮಳವಳ್ಳಿ: ಸಂಸ್ಕಾರಯುತ ಕಲಿಕೆಯ ಜ್ಞಾನ ಮಕ್ಕಳ ಸಾಧನೆಗೆ-ಸರ್ವಾಂಗಿಣ ಪ್ರಗತಿಗೆ ದಾರಿದೀಪವಾಗಲಿದೆ-ಮುಖ್ಯ ಶಿಕ್ಷಕ ಚಂದ್ರಶೇಖರ್ ಹೇಳಿಕೆ • ಶ್ರೀಶಿವರಾತ್ರೀಶ್ವರ ಬಡಾವಣೆಯಲ್ಲಿ ಜೆ.ಎಸ್.ಎಸ್ ಪ್ರೌಢಶಾಲೆ ಶಾರದಪೂಜೆ - ೧೦ನೇ ತರಗತಿ ಮಕ್ಕಳಿಗೆ ಬೀಳ್ಕೂಡುಗೆ ಸಮಾರಂಭ ಮಳವಳ್ಳಿ:ಸAಸ್ಕಾರಯುತ ಕಲಿಕೆಯ ಜ್ಞಾನ ಮಕ್ಕಳ ಸಾಧನೆಗೆ ದಾರಿದೀಪವಾಗುವುದರೊಂದಿಗೆ ಸಮಾಜದ ಸರ್ವಾಂಗೀಣ ಪ್ರಗತಿಗೆ ನಾಂದಿಯಾಗಲಿದೆ ಎಂದು ಜೆ.ಎಸ್.ಎಸ್.ಶಾಲೆಯ ಮುಖ್ಯ ಶಿಕ್ಷಕರಾದ ಚಂದ್ರಶೇಖರ್ ಹೇಳಿದರು. ಮಾಗನೂರಿನ ಶ್ರೀ ಶಿವರಾತ್ರೀಶ್ವರ ಬಡಾವಣೆಯಲ್ಲಿರುವ ಜೆ.ಎಸ್.ಎಸ್.ಪ್ರೌಢಶಾಲೆಯಲ್ಲಿ ಅಯೋಜಿಸಿದ್ದ ಶಾರದ ಪೂಜೆ ಹಾಗೂ ೧೦ನೇ ತರಗತಿ ಮಕ್ಕಳ ಬೀಳ್ಕೂಡುಗೆ ಸಮಾರಂಭದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಅವರು ಪ್ರತಿಯೊಂದು ತರಗತಿಯಲ್ಲೂ ಜ್ಞಾನವನ್ನು ಗಳಿಸಿಕೊಂಡರೆ ಸಮಾಜದೊಳಗೆ ತಮ್ಮ ಸ್ಥಾನಮಾನ ಹೇಗಿರುತ್ತದೆ,ಜ್ಞಾನದಿಂದ ಸಿಗುವ ಗೌರವವೇನು ಎಂಬುವುದನ್ನು ಅರಿವು ಮೂಡಿಸಲಾಗಿದೆ ಮಕ್ಕಳು ಜ್ಞಾನವನ್ನು ಪಡೆದು ಸಾಧಕ ವ್ಯಕ್ತಗಳಾಗಿ ಸಮಾಜಕ್ಕೆ ಉತ್ತಮ ಕೂಡುಗೆ ನೀಡುವಂಎತ ಅವರು ಈ ಸಂದರ್ಭದಲ್ಲಿ ಕರೆ ನೀಡಿದರು. ಕಾರ್ಯಕ್ರಮವನ್ನು ಪಟ್ಟಣದ ಬಾಲಕಿಯರ ಪ್ರೌಢಶಾಲೆಯ ಮುಖ್ಯಶಿಕ್ಷಕ ಕುಮಾರಸ್ವಾಮಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಹಾಗೂ ಶಾರದ ದೇವಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿ,ವಿದ್ಯಾಥಿಗಳು ಸಮಯದ ಮಹತ್ವ ಅರಿಯಬೇಕು,ಕಲಿಕೆಯ ಹಂತದಲ್ಲಿ ಶಿಕ್ಷಣದ ಮಹತ್ವ,ಯಾವ ವಿಷಯದ ಬಗ್ಗೆ ಮಾತನಾಡಬೇಕು,ಹೆಚ್ಚು ಮಾತನಾಡುವುದು ಅವಶ್ಯಕತೆಯಿಲ್ಲ,ಮಾತುಗಳು ಅರ್ಥಪೂರ್ಣವಾಗಿರಬೇಕು ಅದೇ ರಿತಿಯಲ್ಲಿ ಕಲಿಕೆಯ ಹಂತದಲ್ಲಿ ಬಹು ಮುಖ್ಯವಾಗಿ ಏಕಾಗ್ರತೆ ಇಟ್ಟುಕೊಂಡು ವಿದ್ಯಾಭ್ಯಾಸ ಮಾಡುವ ಮೂಲಕ ಪೋಷಕರಿಗೆ ಶಾಲೆಗೆ,ಗುರುಗಳಿಗೆ ಕೀರ್ತಿ ತರುವ ನಿಟ್ಟಿನಲ್ಲಿ ಮಕ್ಕಳು ಮುಂದಾಗುವAತೆ ಸಲಹೆ ನೀಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಿದ್ದತಾಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಮರ ಸೌಹರ್ಧ ಸಹಕಾರಿ ಸಂಘದ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ ಹುಟ್ಟು ಅಕಸ್ಮಿಕ ಸಾವು ನಿಶ್ಚಿತ ಈ ನಡುವೆ ಬದುಕವ ನಾವುಗಳು ಸಮಾಜಕ್ಕೆ ಶಾಸ್ವತ ಕೂಡುಗೆ ನೀಡಬೇಕು,ನಾವು ಸತ್ತರೂ ನೀಡಿದ ಕೂಡುಗೆ ಮುಂದಿನ ಪೀಳಿಗೆಗೆ ಮಾದರಿಯಾಗಿ ಉಳಿಯುತ್ತದೆ. ಈ ದಿಶೇಯಲ್ಲಿ ಮಕ್ಕಳಿಗೆ ಕನಸ್ಸು ಕಾಣಬೇಕು,ಅದು ದೊಡ್ಡ ಕನಸ್ಸಾಗಿರಬೇಕು,ಅದನ್ನು ಸಾಧಿಸುವ ಛಲ ವಿಶ್ವಾಸ ಗುರಿ ಇಟ್ಟುಕೊಂಡು ಗುರುಗಳ ಮಾರ್ಗದರ್ಶನ,ಪೋಷಕರ ಅರ್ಶೀವಾದದೊಂದಿಗೆ ಮುನ್ನೆಡೆಯಿರಿ ಸಾಧನೆ ನಿಮ್ಮದಾಗಲಿದೆ ಎಂದ ಅವರು ಸುತ್ತೂರು ಗುರುಪರಂಪರೆಯ ಜೆ.ಎಸ್.ಎಸ್.ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ನೀವೇಲ್ಲರೂ ಪುಣ್ಯವಂತರು,ಶಾಲೆಯ ಶಿಕ್ಷಕರು ಹಗಳಿರುಲು ನಿಮ್ಮ ಪ್ರಗತಿ ಸಾಧನೆಗೆ ಕೆಲಸ ಮಾಡುತ್ತಿದ್ದಾರೆ ಇದು ಸಾರ್ಥಕತೆ ಅಗಬೇಕು ನೀವು ಶೇ.೧೦೦ ಪಲಿತಾಂಶ ಪಡೆಯಬೇಕೆಂದರು. ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್ ಮಕ್ಕಳು ತಮ್ಮ ಅನಿಸಿಕೆಗಳನ್ನು ಹಂಚಿಕೊAಡರು,ಶಾಲೆಯ ಶಿಕ್ಷಕರು ಶಾಲೆಯ ದಿನನಿತ್ಯದ ಕಾರ್ಯಚಟುವಟಿಕೆಗಳು,ಮಕ್ಕಳ ಯಶಸ್ಸಿಗೆ ಕೈಗೊಂಡ ಪಾಠ ಪ್ರವಚನಗಳ ಬಗ್ಗೆ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆ ಪದ್ದತಿ ಯಾವ ರೀತಿ ಇರಲಿದೆ,ಮೊದಲು ಪ್ರಶ್ನೆ ಪತ್ರಿಕೆ ನೀಡುತ್ತಾರೆ ನಂತರ೧೫ ನಿಮಷಗಳ ನಂತರ ಉತ್ತರ ಪತ್ರಿಕೆ ನೀಡುತ್ತಾರೆ ಮಕ್ಕಳು ಪ್ರಶ್ನೆ ಪತ್ರಿಕೆಯನ್ನು ಗಂಭಿರವಾಗಿ ಓದಿಕೊಂಡು ಯಾವುದು ಚೆನ್ನಾಗಿ ಗೊತ್ತಿದೆಯೋ ಅ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ ನಂತರ ಉಳಿದ ಪ್ರಶ್ನೆಗಳಿಗೆ ಯೋಚಿಸಿ ಪರೀಕ್ಷೆ ಬರೆದು ಉತ್ತಮ ಅಂಕ ಗಳಿಸುವಂತೆ ಸಲಹೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರವನ್ನು ಈ ಸಂದರ್ಭದಲ್ಲಿ ನೀಡಿ ಶುಭ ಹಾರೈಸಲಾಯಿತು. ಕಾರ್ಯಕ್ರಮದಲ್ಲಿ ಸಹ ಶಿಕ್ಷಕರು,ಪೋಷಕರು,ವಿದ್ಯಾರ್ಥಿ,ವಿದ್ಯಾರ್ಥಿನಿಯರುಗಳು ಉಪಸ್ತಿತರಿದ್ದರು.1
- ಕೊಡಗು :- ಮುಸ್ಕಾನ್ ಎನ್ನುವ ಹೆಣ್ಣು ಅಂಗವಿಕಲ ಅವರಿಗೆ ಮುಂದಿನ ಜೀವನವನ್ನು ಬಾಳಲು ಅವರಿಗೆ ಒಂದು ಮನೆ ನಿರ್ಮಿಸಲು ಸಾರ್ವಜನಿಕರಲ್ಲಿ ಸಹಾಯದ ಮನುವಿ.1
- ಹನೂರು, ನೀರಾವರಿ ಯೋಜನೆಗಳು ಹೆಚ್ಚಾದಾಗ ಜನರಿಗೆ ಅನುಕೂಲ ಆಗಲಿದೆ. ಎಂದು ಶಾಸಕ ಎಂ. ಆರ್. ಮಂಜುನಾಥ್ ಹೇಳಿದರು. ತಾಲ್ಲೂಕಿನ ಮಣಗಳ್ಳಿ ಗ್ರಾಮದ ಡಾ. ಬಿ. ಆರ್. ಅಂಬೇಡ್ಕರ್ ಸಮುದಾಯ ಭವನ ಏರ್ಪಡಿಸಿದ್ದ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜನರ ಆರ್ಥಿಕ ಅಭಿವೃದ್ದಿಗೆ ನೀರಾವರಿ ಯೋಜನೆಗಳು ಬಹಳ ಮುಖ್ಯವಾಗಿ ಬೇಕಾಗುತ್ತದೆ. ಅದಕ್ಕೆ ಪೂರಕವಾಗಿ ವಿಧ್ಯುತ್ ರಸ್ತೆಗಳ ಅಭಿವೃದ್ದಿಗೆ ಹೆಚ್ಚಿನ ಹೊತ್ತು ನೀಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತಿಯಾಗಿ ಕೆಲಸ ಮಾಡುತ್ತಿದ್ದೇನೆ. ಕೆರೆಕಟ್ಟೆಗಳು ಜಾಕ್ ಡ್ಯಾಂ ಅಭಿವೃದ್ದಿಯಿಂದ ಬಿವಿ ಬೋರ್ ವೆಲ್ ಗಳಲ್ಲಿ ಆಂತರ್ಜಲ ಹೆಚ್ಚಳ ಆಗಲಿದೆ. ರಾಮನಗುಡ್ಡೆ ಕೆರೆಗೆ ನದಿ ಮೂಲದಿಂದ ನೀರು ತುಂಬಿಸಿದ್ದ ಪರಿಣಾಮ ಚಿಂಚಳ್ಳಿ ಹಳ್ಳದ ಮೂಲಕ ಮಣಗಳ್ಳಿ ಹಳ್ಳ ಡ್ಯಾಂಗಳಿಗೆ ನೀರು ಹರಿದು ಬಂದಿದೆ. ಹಾಗೆಯೇ ಮುಂದೆ ಸಾಗಿ ಇನ್ನಿತರ ಗ್ರಾಮಗಳಗೂ ಅನುಕೂಲ ಆಗಲಿದೆ. ಈಗ ಬಜೆಟ್ ನಲ್ಲಿ ಘೋಷಣೆ ಆಗಿರುವ 490 ಕೋಟಿ ಹಣದಿಂದ ರಾಮಾಪುರ ಹೋಬಳಿ ವ್ಯಾಪ್ತಿಗೆ ಉಡೊತೊರೆ ಜಲಾಶಯದ ಮೂಲಕ ನೀರು ಹರಿಸುವ ಸಧ್ಯದಲ್ಲೆ ಪ್ರಾರಂಭ ಆಗಲಿದೆ. ಅದಲ್ಲದೆ ಕಬಿನಿ ನಾಲೆಯಿಂದ 980 ಕೋಟಿ ರೂ ವೆಚ್ಚದಲ್ಲಿ ಮೇಘ ಪ್ರೋಜೆಕ್ಟ್ ತರುವ ಉದ್ದೇಶ ಹೊಂದಿದ್ದು ಸರ್ಕಾರ ಮಟ್ಟದಲ್ಲಿ ಚೆರ್ಚೆ ಮಾಡಲಾಗಿದೆ. ಎಂದರು ಕ್ಷೇತ್ರದ ಎಲ್ಲೆಡೆ ಅಭಿವೃದ್ದಿ ಕೆಲಸಗಳು ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೆಲಸಗಳು ಸಹ ನಡೆಯಲಿದೆ. ಚುನಾವಣೆ ವೇಳೆ ನನಗೊಂದು ಅವಕಾಶ ನೀಡಿ ಎಂದು ಕೇಳಿದ್ದೆ ಅದರಂತೆ ಕೆಲಸ ಮಾಡುತ್ತಿದ್ದೇನೆ. ಇನ್ನೂ ಹೆಚ್ಚು ಕೆಲಸ ಮಾಡಲು ಎಲ್ಲರು ನನಗೆ ಸಹಕಾರ ನೀಡಿ ಶಕ್ತಿ ತುಂಬುವ ಕೆಲಸ ಮಾಡಬೇಕು. ತಾಲಲೂಕು ಘೋಷಣೆ ಆದ್ಮೇಲೆ ಕಛೇರಿಗಳು ಇರಲಿಲ್ಲ. ಅದಕ್ಕಾಗಿ ಪ್ರಯತ್ನಗಳು ನಡೆದಿದೆ. ರಸ್ತೆಗಳು ಆರೋಗ್ಯ ವಿಧ್ಯುತ್ ಕ್ಷೇತ್ರಗಳಲ್ಲಿ ಸುಧಾಹರಣೆ ಕಂಡಿದೆ. ಎಂದರು ಗ್ರಾಮ ಸದಸ್ಯ ಮಲ್ಲಣ್ಣ ಮಾತನಾಡಿ ಶಾಸಕ ಮಂಜುನಾಥ್ ರವರ ಅಭಿವೃದ್ದಿ ಕೆಲಸ ಕಾರ್ಯಗಳನ್ನು ನೋಡಿ ಮೆಚ್ಚಿದ ಜನರು ಸ್ವ ಇಚ್ಚೆಯಿಂದ ಅವರನ್ನು ಬೆಂಬಲಿಸಲು ಪ್ರತಿ ಗ್ರಾಮದಲ್ಲೂ ಮುಂದೆ ಬರುತ್ತಿದ್ದಾರೆ. ಶಾಸಕರ ಮಂದಾಲೋಚನೆ ಫಲವಾಗಿ ಕೆರೆಕಟ್ಟೆಗಳು ಜಾಕ್ ಡ್ಯಾಂ ಗಳು ಭರ್ತಿ ಆಗಿ ಹಳ್ಳಗಳಲ್ಲಿ ನೀರು ಹರಿಯುತ್ತಿರುವುದರಿಂದ ಪ್ರತಿ ಗ್ರಾಮದಲ್ಲೂ ಅಂತರ್ಜಲ ಹೆಚ್ಚಾಗಲಿದೆ. ಇದರಿಂದ ರೖತರು ಕೂಲಿ ಕಾರ್ಮಿಕರು ನಗರ ಪಟ್ಟಣಗಳಿಗೆ ವಲಸೆ ಹೋಗುವುದು ನಿಲ್ಲುತ್ತದೆ. ಜೊತೆಗೆ ಇಲ್ಲಿಯೇ ಉಧ್ಯೋಗ್ಯ ದೊರೆಯುವುದರಿಂದ ಜನರ ಬದುಕು ಹಸನಾಗಲಿದೆ. ಎಂದರು ಇದೇ ವೇಳೆ ಮಣಗಳ್ಳಿ ವಾದ್ಯ ಕೆಂಪಯ್ಯ ಅವರ ಕುಟುಂಬ ಸೇರಿದಂತೆ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಚಿನ್ನ ವೆಂಕಟಯ್ಯ ಮಲ್ಲಣ್ಣ ಕೃಷ್ಣಸ್ವಾಮಿ ರಾಮಚಂದ್ರ ಶ್ರೀನಿವಾಸ ಗ್ರಾಮದ ಯಜಮಾನ್ರು ಆದ ಕೆಂಪರಾಜು ಮಹದೇವಯ್ಯ ಚೆನ್ನಯ್ಯ ಕಾಲ ಕೆಂಪಯ್ಯ ಹಾಗೂ ಐವತ್ತು ಹೆಚ್ಚು ಮುಖಂಡರುಗಳು ಕಾಂಗ್ರೆಸ್ ಪಕ್ಷ ತೊರೆದು ಶಾಸಕ ಎಂ.ಆರ್. ಮಂಜುನಾಥ್ ಅವರ ನೇತೃತ್ವದಲ್ಲಿ ಜೆಡಿಎಸ್ ಕ್ಕೆ ಸೇರ್ಪಡೆಗೊಂಡರು. ವೇಳೆ ಲಿಂಗರಾಜು ಶಿವಮಲ್ಲು ಯುವ ಮುಖಂಡರಾದ ಲೋಕೇಶ್ ಕೃಷ್ಣರಾಜು, ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್ಮುಖಂಡರುಗಳಾದ ವಿಜಯ್ ಕುಮಾರ್, ತಿರುಪತಿ,ತಮಯ್ಯ ನಾಗಯ್ಯ,ಸೇರಿದಂತೆ ಇನ್ನಿತರ ಮುಖಂಡರುಗಳು ಇದ್ದರು..4
- ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ದೇವಗಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಗಳಿಗೆ ಶಿಕ್ಷಣ ಇಲಾಖೆ ಕೈಗೊಂಡಿರುವ ಪರಿಣಾಮಕಾರಿ ಕಾರ್ಯಚಟುವಟಿಕೆಗಳನ್ನು ಗುರುತಿಸಿ ವಿಶೇಷ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯೊಂದಿಗೆ ₹75,000 ನಗದು ಬಹುಮಾನವನ್ನು ಎಸ್‌ಡಿಎಂಸಿ ಖಾತೆಗೆ ಜಮಾ ಮಾಡಲಾಗುತ್ತದೆ. ಶಾಲೆಯ ಮೂಲಭೂತ ಸೌಕರ್ಯಗಳನ್ನು ಸುಧಾರಿಸುವಲ್ಲಿ ಎಸ್‌ಡಿಎಂಸಿ ಪ್ರಮುಖ ಪಾತ್ರವಹಿಸಿದೆ. ಶಾಲೆಯ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳ ನಿರ್ವಹಣೆ, ತರಗತಿ ಕೊಠಡಿಗಳ ಸೌಲಭ್ಯಗಳನ್ನು ಉತ್ತಮಗೊಳಿಸುವ ಕಾರ್ಯಗಳನ್ನು ಸಮಿತಿ ನಿರಂತರವಾಗಿ ಕೈಗೊಂಡಿದೆ. ಶಾಲೆಯ ಪರಿಸರವನ್ನು ಸುಂದರ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿಸುವ ಉದ್ದೇಶದಿಂದ ಹಲವು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಶಾಲೆಯ ಶಿಕ್ಷಕರೊಂದಿಗೆ ಸಮನ್ವಯ ಹೊಂದಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವತ್ತ ಎಸ್‌ಡಿಎಂಸಿ ವಿಶೇಷ ಗಮನ ಹರಿಸಿದೆ. ಶಿಕ್ಷಕರು ಮತ್ತು ಸಮಿತಿ ಸದಸ್ಯರು ಸೇರಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸುವುದು, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಿಕ್ಷಣದತ್ತ ಸೆಳೆಯುವುದು ಹಾಗೂ ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿ ಆಸಕ್ತಿ ಮೂಡಿಸುವ ಕಾರ್ಯಗಳನ್ನು ಮಾಡುತ್ತಿದ್ದಾರೆ. ಶಾಲೆಯಲ್ಲಿ ಹಲವು ವಿಶೇಷ ಚಟುವಟಿಕೆಗಳು ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪರಿಸರ ಜಾಗೃತಿ ಕಾರ್ಯಕ್ರಮಗಳು ಮತ್ತು ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಉತ್ತೇಜಿಸುವಲ್ಲಿ ಸಹಾಯವಾಗಿವೆ. ಇದರ ಜೊತೆಗೆ ಶಾಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ರೂಪಿಸಿ ದಾನಿಗಳಿಗೆ ಮನವರಿಕೆ ಮಾಡಿಕೊಟ್ಟು ಅಗತ್ಯ ಸಹಾಯವನ್ನು ಪಡೆಯಲಾಗಿದೆ. ದಾನಿಗಳ ಸಹಕಾರದಿಂದ ಶಾಲೆಗೆ ಬೇಕಾದ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ. ಎಸ್‌ಡಿಎಂಸಿ ವತಿಯಿಂದ ನಿಯಮಿತವಾಗಿ ಸಭೆಗಳನ್ನು ನಡೆಸಿ ಶಾಲೆಯ ಅಭಿವೃದ್ಧಿ, ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರಗಳ ಕುರಿತು ಚರ್ಚಿಸಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಈ ಸಭೆಗಳ ಪರಿಣಾಮವಾಗಿ ಶಾಲೆಯಲ್ಲಿ ವ್ಯವಸ್ಥಿತ ಕಾರ್ಯಚಟುವಟಿಕೆಗಳು ನಡೆಯುತ್ತಿದ್ದು, ಶಾಲೆಯ ಶೈಕ್ಷಣಿಕ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಉತ್ತೇಜನ ಸಿಕ್ಕಿದೆ. ಶಾಲೆಯ ಅಭಿವೃದ್ಧಿಗೆ ಎಸ್‌ಡಿಎಂಸಿ ನೀಡಿರುವ ಮಹತ್ವದ ಕೊಡುಗೆ ಹಾಗೂ ಸಮರ್ಪಿತ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ಪ್ರಶಸ್ತಿ ಶಾಲೆಯ ಮುಂದಿನ ಅಭಿವೃದ್ಧಿಗೆ ಮತ್ತಷ್ಟು ಪ್ರೇರಣೆ ನೀಡಲಿದೆ ಎಂದು ಶಾಲೆಯ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಮತ್ತು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಬೈಟ್ :- ಶಶಿಕಲಾ, ಪ್ರಭಾರ ಮುಖ್ಯ ಶಿಕ್ಷಕಿ2