ಕೆಜಿಎಫ್ ರೋಟರಿ ಕ್ಲಬ್ ನ ನೂತನ ಅದ್ಯಕ್ಷರಾಗಿ ಉಮೇಶ್, ಕಾರ್ಯದರ್ಶಿಯಾಗಿ ಗೋಪಿ ಪದಗ್ರಹಣ ಕೆ.ಜಿ.ಎಫ್: ನಗರದ ಊರಿಗಾಂ ನಲ್ಲಿರುವ ಕೆಜಿಎಫ್ ಕ್ಲಬ್‌ನಲ್ಲಿ ನಡೆದ ರೋಟರಿ ಕ್ಲಬ್ ಕೆಜಿಎಫ್ ಶಾಖೆಯ 71ನೇ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾಗಿ ಉಮೇಶ್ ಹಾಗೂ ಕಾರ್ಯದರ್ಶಿಯಾಗಿ ಗೋಪಿ ಅವರು ಅಧಿಕಾರ ವಹಿಸಿಕೊಂಡರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರೋಟರಿ ಜಿಲ್ಲೆ 3191ರ ಮಾಜಿ ಡಿಸ್ಟ್ರಿಕ್ಟ್ ಗವರ್ನರ್ ರೊಟೇರಿಯನ್ ಸತೀಶ್ ಮಾಧವನ್, "ರೋಟರಿ ಸಂಸ್ಥೆಯು ವಿಶ್ವದಾದ್ಯಂತ ಸಮಾಜ ಸೇವೆಯಲ್ಲಿ ನಿರತವಾಗಿದ್ದು, ಸದಸ್ಯರ ನಾಯಕತ್ವ ಹಾಗೂ ವೃತ್ತಿಪರ ಅನುಭವ ವೃದ್ಧಿಗೆ ನೆರವಾಗುತ್ತಿದೆ. ನೂತನ ಮಂಡಳಿಯು ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸಬೇಕು," ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಬಡ ಹಾಗೂ ವಿಧವಾ ಮಹಿಳೆಯರಿಗೆ ಉಚಿತ ಹಸು ನೀಡುವ 'ಕಾಮಧೇನು' ಯೋಜನೆಯನ್ನು ಡಿವೈಎಸ್ಪಿ ಲಕ್ಷ್ಮಯ್ಯ ಪ್ರಶಂಸಿಸಿದರು. ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಸಿ.ಎಂ.ಆರ್. ಶ್ರೀನಾಥ್ ಮಾತನಾಡಿ, 1955ರಲ್ಲಿ ಸ್ಥಾಪನೆಯಾದ ಈ ಕ್ಲಬ್‌ಗೆ 70ಕ್ಕೂ ಹೆಚ್ಚು ವರ್ಷಗಳ ಭವ್ಯ ಇತಿಹಾಸವಿದೆ ಎಂದರು. ಈ ಸಂದರ್ಭದಲ್ಲಿ ಸತೀಶ್ ಮಾದವನ್, ಡಿವೈಎಸ್ಪಿ ಲಕ್ಷ್ಮಯ್ಯ, ಸಿಎಂಆರ್ ಶ್ರೀನಾಥ್ ,ರಾಜ್ ಕುಮಾರ್, ಅ. ಮು. ಲಕ್ಷ್ಮೀ ನಾರಾಯಣ್, ರಾಮಚಂದ್ರಪ್ಪ, ಅಧ್ಯಕ್ಷ ಉಮೇಶ್ , ಕಾರ್ಯದರ್ಶಿ ಗೋಪಿ , ಖಜಾಂಚಿ ಮಂಜುನಾಥ್, ಮಾಜಿ ಅಧ್ಯಕ್ಷ ಬಾಬು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ನಾಗಾನಂದ ಕೆಂಪರಾಜು, ಸಾಗರ್, ಹರ್ಷ, ಚಂದ್ರಶೇಖರ್, ಪ್ರಭಾಕರ್, ನಾಗೇಶ್ ಶ್ರೀನಿವಾಸ್ ಹಾಗೂ ಅನೇಕ ಗಣ್ಯರು ರೋಟರಿ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಕೆಜಿಎಫ್ ರೋಟರಿ ಕ್ಲಬ್ ನ ನೂತನ ಅದ್ಯಕ್ಷರಾಗಿ ಉಮೇಶ್, ಕಾರ್ಯದರ್ಶಿಯಾಗಿ ಗೋಪಿ ಪದಗ್ರಹಣ ಕೆ.ಜಿ.ಎಫ್: ನಗರದ ಊರಿಗಾಂ ನಲ್ಲಿರುವ ಕೆಜಿಎಫ್ ಕ್ಲಬ್‌ನಲ್ಲಿ ನಡೆದ ರೋಟರಿ ಕ್ಲಬ್ ಕೆಜಿಎಫ್ ಶಾಖೆಯ 71ನೇ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾಗಿ ಉಮೇಶ್ ಹಾಗೂ ಕಾರ್ಯದರ್ಶಿಯಾಗಿ ಗೋಪಿ ಅವರು ಅಧಿಕಾರ ವಹಿಸಿಕೊಂಡರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರೋಟರಿ ಜಿಲ್ಲೆ 3191ರ ಮಾಜಿ ಡಿಸ್ಟ್ರಿಕ್ಟ್ ಗವರ್ನರ್ ರೊಟೇರಿಯನ್ ಸತೀಶ್ ಮಾಧವನ್, "ರೋಟರಿ ಸಂಸ್ಥೆಯು ವಿಶ್ವದಾದ್ಯಂತ ಸಮಾಜ ಸೇವೆಯಲ್ಲಿ ನಿರತವಾಗಿದ್ದು, ಸದಸ್ಯರ ನಾಯಕತ್ವ ಹಾಗೂ ವೃತ್ತಿಪರ ಅನುಭವ ವೃದ್ಧಿಗೆ ನೆರವಾಗುತ್ತಿದೆ. ನೂತನ ಮಂಡಳಿಯು ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸಬೇಕು," ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಬಡ ಹಾಗೂ ವಿಧವಾ ಮಹಿಳೆಯರಿಗೆ ಉಚಿತ ಹಸು ನೀಡುವ 'ಕಾಮಧೇನು' ಯೋಜನೆಯನ್ನು ಡಿವೈಎಸ್ಪಿ ಲಕ್ಷ್ಮಯ್ಯ ಪ್ರಶಂಸಿಸಿದರು. ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಸಿ.ಎಂ.ಆರ್. ಶ್ರೀನಾಥ್ ಮಾತನಾಡಿ, 1955ರಲ್ಲಿ ಸ್ಥಾಪನೆಯಾದ ಈ ಕ್ಲಬ್‌ಗೆ 70ಕ್ಕೂ ಹೆಚ್ಚು ವರ್ಷಗಳ ಭವ್ಯ ಇತಿಹಾಸವಿದೆ ಎಂದರು. ಈ ಸಂದರ್ಭದಲ್ಲಿ ಸತೀಶ್ ಮಾದವನ್, ಡಿವೈಎಸ್ಪಿ ಲಕ್ಷ್ಮಯ್ಯ, ಸಿಎಂಆರ್ ಶ್ರೀನಾಥ್ ,ರಾಜ್ ಕುಮಾರ್, ಅ. ಮು. ಲಕ್ಷ್ಮೀ ನಾರಾಯಣ್, ರಾಮಚಂದ್ರಪ್ಪ, ಅಧ್ಯಕ್ಷ ಉಮೇಶ್ , ಕಾರ್ಯದರ್ಶಿ ಗೋಪಿ , ಖಜಾಂಚಿ ಮಂಜುನಾಥ್, ಮಾಜಿ ಅಧ್ಯಕ್ಷ ಬಾಬು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ನಾಗಾನಂದ ಕೆಂಪರಾಜು, ಸಾಗರ್, ಹರ್ಷ, ಚಂದ್ರಶೇಖರ್, ಪ್ರಭಾಕರ್, ನಾಗೇಶ್ ಶ್ರೀನಿವಾಸ್ ಹಾಗೂ ಅನೇಕ ಗಣ್ಯರು ರೋಟರಿ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
- ಕೆಜಿಎಫ್ ರೋಟರಿ ಕ್ಲಬ್ ನ ನೂತನ ಅದ್ಯಕ್ಷರಾಗಿ ಉಮೇಶ್, ಕಾರ್ಯದರ್ಶಿಯಾಗಿ ಗೋಪಿ ಪದಗ್ರಹಣ ಕೆ.ಜಿ.ಎಫ್: ನಗರದ ಊರಿಗಾಂ ನಲ್ಲಿರುವ ಕೆಜಿಎಫ್ ಕ್ಲಬ್‌ನಲ್ಲಿ ನಡೆದ ರೋಟರಿ ಕ್ಲಬ್ ಕೆಜಿಎಫ್ ಶಾಖೆಯ 71ನೇ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾಗಿ ಉಮೇಶ್ ಹಾಗೂ ಕಾರ್ಯದರ್ಶಿಯಾಗಿ ಗೋಪಿ ಅವರು ಅಧಿಕಾರ ವಹಿಸಿಕೊಂಡರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರೋಟರಿ ಜಿಲ್ಲೆ 3191ರ ಮಾಜಿ ಡಿಸ್ಟ್ರಿಕ್ಟ್ ಗವರ್ನರ್ ರೊಟೇರಿಯನ್ ಸತೀಶ್ ಮಾಧವನ್, "ರೋಟರಿ ಸಂಸ್ಥೆಯು ವಿಶ್ವದಾದ್ಯಂತ ಸಮಾಜ ಸೇವೆಯಲ್ಲಿ ನಿರತವಾಗಿದ್ದು, ಸದಸ್ಯರ ನಾಯಕತ್ವ ಹಾಗೂ ವೃತ್ತಿಪರ ಅನುಭವ ವೃದ್ಧಿಗೆ ನೆರವಾಗುತ್ತಿದೆ. ನೂತನ ಮಂಡಳಿಯು ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸಬೇಕು," ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಬಡ ಹಾಗೂ ವಿಧವಾ ಮಹಿಳೆಯರಿಗೆ ಉಚಿತ ಹಸು ನೀಡುವ 'ಕಾಮಧೇನು' ಯೋಜನೆಯನ್ನು ಡಿವೈಎಸ್ಪಿ ಲಕ್ಷ್ಮಯ್ಯ ಪ್ರಶಂಸಿಸಿದರು. ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಸಿ.ಎಂ.ಆರ್. ಶ್ರೀನಾಥ್ ಮಾತನಾಡಿ, 1955ರಲ್ಲಿ ಸ್ಥಾಪನೆಯಾದ ಈ ಕ್ಲಬ್‌ಗೆ 70ಕ್ಕೂ ಹೆಚ್ಚು ವರ್ಷಗಳ ಭವ್ಯ ಇತಿಹಾಸವಿದೆ ಎಂದರು. ಈ ಸಂದರ್ಭದಲ್ಲಿ ಸತೀಶ್ ಮಾದವನ್, ಡಿವೈಎಸ್ಪಿ ಲಕ್ಷ್ಮಯ್ಯ, ಸಿಎಂಆರ್ ಶ್ರೀನಾಥ್ ,ರಾಜ್ ಕುಮಾರ್, ಅ. ಮು. ಲಕ್ಷ್ಮೀ ನಾರಾಯಣ್, ರಾಮಚಂದ್ರಪ್ಪ, ಅಧ್ಯಕ್ಷ ಉಮೇಶ್ , ಕಾರ್ಯದರ್ಶಿ ಗೋಪಿ , ಖಜಾಂಚಿ ಮಂಜುನಾಥ್, ಮಾಜಿ ಅಧ್ಯಕ್ಷ ಬಾಬು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ನಾಗಾನಂದ ಕೆಂಪರಾಜು, ಸಾಗರ್, ಹರ್ಷ, ಚಂದ್ರಶೇಖರ್, ಪ್ರಭಾಕರ್, ನಾಗೇಶ್ ಶ್ರೀನಿವಾಸ್ ಹಾಗೂ ಅನೇಕ ಗಣ್ಯರು ರೋಟರಿ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.1
- ಕೋಲಾರ ಯುವಶಕ್ತಿಯೇ ದೇಶದ ಆಸ್ತಿ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಯುವಜನತೆ ಮುಂದಾಗಲಿ ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ. ಬಿ.ಕೆ. ರವಿ ಯುವಶಕ್ತಿಯೇ ದೇಶದ ಆಸ್ತಿ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಯುವಜನತೆ ಮುಂದಾಗಲಿ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಕೆ. ರವಿ ಅವರು ಅಭಿಪ್ರಾಯಪಟ್ಟರು.ಇಂದು ಕೋಲಾರದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮಂಗಸAದ್ರ, ಸುವರ್ಣಗಂಗೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಕೋಲಾರ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಡಾ. ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ 'ವ್ಯಸನಮುಕ್ತ ದಿನಾಚರಣೆ'ಯಲ್ಲಿ ಭಾಗವಹಿಸಿದ್ದ ಅವರು ಮಾತನಾಡುತ್ತಿದ್ದರು. ಯುವಜನತೆ ಮಾದಕ ವ್ಯಸನಗಳಿಂದ ದೂರ ಉಳಿದು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವಂತೆ ಕರೆ ನೀಡಿದರು. ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಅವರು,. "ಭಾರತದಲ್ಲಿ ಶೇ. 65ರಷ್ಟು ಯುವ ಜನಸಂಖ್ಯೆ ಇದ್ದು, ಈ ಯುವಶಕ್ತಿಯೇ ದೇಶದ ನಿಜವಾದ ಆಸ್ತಿ. ಯಾವುದೇ ಒಂದು ವ್ಯಸನವು ಕೇವಲ ವ್ಯಕ್ತಿಯನ್ನು ಮಾತ್ರ ಬಲಿಪಡೆಯುವುದಿಲ್ಲ, ಬದಲಾಗಿ ಇಡೀ ಕುಟುಂಬ ಹಾಗೂ ಸಮಾಜವನ್ನೇ ನಾಶ ಮಾಡುತ್ತದೆ. ಆದ್ದರಿಂದ ಇಂದಿನ ಯುವಕರು ಮಾದಕ ವಸ್ತುಗಳ ದಾಸರಾಗದೆ, ಸಮಾಜವನ್ನು ಮುನ್ನಡೆಸುವ ಮತ್ತು ದೇಶ ಕಟ್ಟುವ ಕಾರ್ಯದಲ್ಲಿ ಮುಂಚೂಣಿಯಲ್ಲಿರಬೇಕು," ಎಂದು ಅವರು ಪ್ರತಿಪಾದಿಸಿದರು. ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಪ್ರಭು ಎನ್. ಬಡಿಗೇರ್ ಅವರು ವಿವಿಧ ಕಾನೂನುಗಳ ಅರಿವನ್ನು ಮೂಡಿಸಿದರು. "ದೇಶದಲ್ಲಿ ಯಾರೂ ಕಾನೂನಿಗಿಂತ ದೊಡ್ಡವರಲ್ಲ. ತಾಯಿಯ ಗರ್ಭದಲ್ಲಿರುವ ಮಗುವಿನ ರಕ್ಷಣೆಯಿಂದ ಹಿಡಿದು (ಭ್ರೂಣಹತ್ಯೆ ನಿಷೇಧ), ಮನುಷ್ಯ ಸತ್ತ ನಂತರದ ಆಸ್ತಿ ಹಂಚಿಕೆಯವರೆಗೂ ಕಾನೂನು ಪ್ರತಿಯೊಬ್ಬರಿಗೂ ರಕ್ಷಣೆ ನೀಡುತ್ತದೆ. ಅದರಲ್ಲೂ ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ಪೋಕ್ಸೊ (POCSO) ಕಾಯ್ದೆ ಅತ್ಯಂತ ಕಠಿಣವಾಗಿದ್ದು, ಅಪರಾಧ ಸಾಬೀತಾದರೆ 20 ವರ್ಷಗಳವರೆಗೆ ಕಠಿಣ ಶಿಕ್ಷೆ ಕಟ್ಟಿಟ್ಟ ಬುತ್ತಿ. ಯುವಜನತೆ ಇಂತಹ ಕಾನೂನುಗಳ ಬಗ್ಗೆ ಅರಿವು ಬೆಳೆಸಿಕೊಂಡು ಸಮಾಜದ ಸತ್ಪ್ರಜೆಗಳಾಗಿ ಬದುಕಬೇಕು," ಎಂದು ಅವರು ಕಿವಿಮಾತು ಹೇಳಿದರು. ಕಾರ್ಯಕ್ರಮ ಉದ್ದೇಶಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶ್ರೀನಿವಾಸ್ ಅವರು ಮಾತನಾಡಿ 'ವ್ಯಸನ' ಎಂದರೆ ಚಟ ಅಥವಾ ಗೀಳು ಎಂದರ್ಥ. ಇಂದಿನ ಯುವಜನತೆ ಧೂಮಪಾನ, ಮದ್ಯಪಾನ ಹಾಗೂ ಮಾದಕ ದ್ರವ್ಯಗಳಂತಹ ದುಶ್ಚಟಗಳಿಗೆ ಬಲಿಯಾಗುತ್ತಿರುವುದರ ದುರದುಷ್ಟಕರ ಎಂದು ಕಳವಳ ವ್ಯಕ್ತಪಡಿಸಿದರು. ವೈಜ್ಞಾನಿಕವಾಗಿ ಗಮನಿಸಿದರೆ, ನಾವು ಪರೀಕ್ಷೆಯಲ್ಲಿ ಗೆದ್ದಾಗ ಅಥವಾ ಒಳ್ಳೆಯ ಸಿನಿಮಾ ನೋಡಿದಾಗ ನಮ್ಮ ಮೆದುಳಿನ 'ರಿವಾರ್ಡ್ ಸೆಂಟರ್' ಡೋಪಮೈನ್ (Dopamine) ಎಂಬ ರಾಸಾಯನಿಕವನ್ನು ಬಿಡುಗಡೆ ಮಾಡಿ ನಮಗೆ ಸಹಜವಾದ ಖುಷಿ ನೀಡುತ್ತದೆ. ಆದರೆ, ಮಾದಕ ವಸ್ತುಗಳನ್ನು ಸೇವಿಸಿದಾಗ ಕೃತಕವಾಗಿ ಇದೇ ಡೋಪಮೈನ್ ಬಿಡುಗಡೆಯಾಗುತ್ತದೆ. ಈ ಕೃತಕ ಖುಷಿಗಾಗಿ ಯುವಜನರು ವ್ಯಸನಕ್ಕೆ ದಾಸರಾಗುತ್ತಾರೆ. ಆರಂಭದಲ್ಲಿ ಒಂದು ಸಿಗರೇಟ್‌ನಿಂದ ಸಿಗುವ ತೃಪ್ತಿ, ಕ್ರಮೇಣ ಮೆದುಳು ಆ ರಾಸಾಯನಿಕಕ್ಕೆ ಒಗ್ಗಿಕೊಳ್ಳುವುದರಿಂದ (ಅಡಾಪ್ಟೇಶನ್) ನಾಲ್ಕು ಸಿಗರೇಟ್ ಸೇದಿದರೂ ಸಿಗುವುದಿಲ್ಲ. ಈ ಹಂತದಲ್ಲಿ ಚಟವನ್ನು ನಿಲ್ಲಿಸಿದರೆ ವಿಪರೀತ ಕೋಪ ಮತ್ತು ಹತಾಶೆಯಂತಹ 'ವಿತ್‌ಡ್ರಾವಲ್' ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಯಾವುದೇ ಕಾರಣಕ್ಕೂ ಸ್ನೇಹಿತರ ಒತ್ತಡಕ್ಕೆ ಮಣಿದು ಅಥವಾ ಕೇವಲ ಕುತೂಹಲಕ್ಕಾಗಿ ದುಶ್ಚಟಗಳನ್ನು ಪ್ರಾರಂಭಿಸಬಾರದು; ಮೊದಲ ಹೆಜ್ಜೆಯಲ್ಲೇ ಇದನ್ನು ಕಡ್ಡಾಯವಾಗಿ ತಿರಸ್ಕರಿಸಬೇಕು ಎಂದು ಅವರು ಕಿವಿಮಾತು ಹೇಳಿದರು. ಒಂದು ವೇಳೆ ಈಗಾಗಲೇ ವ್ಯಸನಕ್ಕೆ ತುತ್ತಾಗಿದ್ದರೆ, ದೃಢವಾದ ಇಚ್ಛಾಶಕ್ತಿ ಹಾಗೂ ವೈದ್ಯಕೀಯ ನೆರವಿನಿಂದ ಅದರಿಂದ ಸಂಪೂರ್ಣವಾಗಿ ಹೊರಬರಬಹುದು. ಇದಕ್ಕಾಗಿ ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಕೌನ್ಸಿಲಿಂಗ್ ಕೇಂದ್ರಗಳಲ್ಲಿ ಅಗತ್ಯ ಚಿಕಿತ್ಸೆ ಲಭ್ಯವಿದ್ದು, ಯುವಜನರು ಮುಜುಗರವಿಲ್ಲದೆ ಸಹಾಯ ಪಡೆಯಬೇಕು ಎಂದು ಅವರು ಕರೆ ನೀಡಿದರು. ಮಾದಕ ವಸ್ತುಗಳ ಸೇವನೆಯಿಂದ ಆಗುವ ಭೀಕರ ಪರಿಣಾಮಗಳ ಕುರಿತು ಮಾತನಾಡಿದ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಚಾರಿಣಿ, "ಮಾದಕ ವಸ್ತುಗಳು ನೇರವಾಗಿ ಮನುಷ್ಯನ ಮೆದುಳಿನ ರಿವಾರ್ಡ್ ಸೆಂಟರ್ ಮೇಲೆ ಪ್ರಭಾವ ಬೀರಿ, ಡೋಪಮೈನ್ ಬಿಡುಗಡೆ ಮಾಡುವ ಮೂಲಕ ವ್ಯಕ್ತಿಯನ್ನು ಸಂಪೂರ್ಣ ವ್ಯಸನಿಯನ್ನಾಗಿಸುತ್ತವೆ. ಇದರ ನಿರಂತರ ಸೇವನೆಯಿಂದ ಯಕೃತ್ತು ಹಾಗೂ ಮೂತ್ರಪಿಂಡಗಳ ವೈಫಲ್ಯ, ಬಂಜೆತನ ಮತ್ತು ರೋಗ ನಿರೋಧಕ ಶಕ್ತಿ ಕುಂದುವAತಹ ಗಂಭೀರ ಸಮಸ್ಯೆಗಳು ಎದುರಾಗುತ್ತವೆ. ಅಲ್ಲದೆ, ಮಾದಕ ವ್ಯಸನಿಗಳು ಒಂದೇ ಇಂಜೆಕ್ಷನ್ ಹಂಚಿಕೊಳ್ಳುವುದರಿAದ ಎಚ್.ಐ.ವಿ (HIV) ನಂತಹ ಮಾರಕ ರೋಗಗಳು ವೇಗವಾಗಿ ಹರಡುತ್ತವೆ," ಎಂದು ಎಚ್ಚರಿಸಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್. ಶ್ರೀನಿವಾಸ್ ಅವರು ಪ್ರಸ್ತುತ ವಿದ್ಯಾವಂತರ ದುಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. "ಅಕ್ಷರಸ್ಥರಾದ ಮಾತ್ರಕ್ಕೆ ಎಲ್ಲರೂ ಬುದ್ಧಿವಂತರಾಗುವುದಿಲ್ಲ. ಇಂದು ವಿದ್ಯಾವಂತ ಯುವಜನತೆಯೇ ಅತಿ ಹೆಚ್ಚು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ದೊಡ್ಡ ವಿಪರ್ಯಾಸ. ರಾಜ್ಯದಲ್ಲಿನ ಇತ್ತೀಚಿನ ವರದಿಗಳ ಬಹಳಷ್ಟು ಜನರು ಎಚ್.ಐ.ವಿ ಸೋಂಕಿಗೆ ಒಳಗಾಗಿದ್ದಾರೆ. ಇದರಲ್ಲಿ ಯುವಕರ ಪ್ರಮಾಣವೇ ಹೆಚ್ಚಾಗಿರುವುದು ಸಮಾಜಕ್ಕೆ ಅತ್ಯಂತ ಮಾರಕವಾದ ಸಂಗತಿಯಾಗಿದೆ," ಎಂದು ಅವರು ಆತಂಕ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಡಾ. ಕೆ.ಎನ್. ಕವನ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಸಚಿವರು ಮೌಲ್ಯಮಾಪನ ಹಾಗೂ ನಿರ್ದೇಶಕಿ ಸುವರ್ಣಗಂಗೆ ಕ್ಯಾಂಪಸ್ ಹಾಗೂ ಪ್ರೊ ಕುಮುದ, ವಿತ್ತಾಧಿಕಾರಿ ಬಾಹುಬಲಿ, ಸಿಬ್ಬಂದಿಗಳು, ಎಲ್ಲಾ ಪ್ರಾಧ್ಯಪಕರು ಸೇರಿದಂತೆ ವಿವಿಧ ಇಲಾಖೆಗಳ ಗಣ್ಯರು ಉಪಸ್ಥಿತರಿದ್ದರು.1
- *ಕೋಲಾರದ ಜೆ.ಡಿ.ಎಸ್ ಮುಖಂಡರು ಹಾಗೂ ಕಾರ್ಯಕರ್ತರು ದಿವಂಗತ ಚನ್ನಮ್ಮ ದೇವೆಗೌಡರ ಉತ್ತರ ಕ್ರಿಯಾದಿ ಕಾರ್ಯದಲ್ಲಿ ಭಾಗಿ* ಕೋಲಾರ: ದಿವಂಗತ ಚನ್ನಮ್ಮ ದೇವೆಗೌಡರ ಉತ್ತರ ಕ್ರಿಯಾದಿ ಕಾರ್ಯಕ್ರಮಕ್ಕೆ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಜೆ.ಡಿ.ಎಸ್.ಮುಖಂಡ ಸಿ.ಎಂ.ಆರ್ .ಶ್ರೀನಾಥ್ ರವರ ನೇತೃತ್ವದಲ್ಲಿಸುಮಾರು 150 ಕ್ಕೂ ಹೆಚ್ಚಿನ ವಾಹನಗಳಲ್ಲಿನೂರಾರು ಕಾರ್ಯಕರ್ತರು ಹಾಗೂ ಮುಖಂಡರು ಪ್ರಯಾಣ ಬೆಳೆಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಮುಖಂಡರುಗಳಾದ ವಕ್ಕಲೇರಿ ರಾಮು, ಬಾಬು ಮೌನಿ, ದೊಡ್ಡವಲ್ಲಬಿ ಲಕ್ಷ್ಮಣಗೌಡರು, ಬಣಕನಹಳ್ಳಿ ನಟರಾಜ್, ಶ್ರೀಮತಿ ಚೌಡೇಶ್ವರಿ ರಾಮು, ವಡಗೂರು ರಾಮು ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.4
- ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಚಿಂತಾಮಣಿ ತಾಲ್ಲೂಕು ಆಡಳಿತದ ವತಿಯಿಂದ"ವ್ಯಸನಮುಕ್ತ ದಿನಾಚರಣೆ"ಯನ್ನು ಸಲುವಾಗಿ ಆಚೆರಿಸಿದರು1
- ಕೆಆರ್ ಪುರದಲ್ಲಿ ಕಾವೇರಿ ಪುತ್ಥಳಿಗೆ ಹೂವಿನ ಹಾರಹಾಕಿ ಕಾರ್ಯಕರ್ತರ ಜೊತೆ ಕರವೇ ಪ್ರವೀಣ್ ಶೆಟ್ಟಿ ಪಂಜಿನ ಮೆರವಣಿಗೆ1
- ಕೆಜಿಎಫ್‌ನಗರಸಭೆ ಮುಂಭಾಗ ಆ. 5 ರಂದು ಡಾ. ಬಿ.ಆರ್. ಅಂಬೇಡ್ಕರ್ ಕಂಚಿನ ಪ್ರತಿಮೆ ಅನಾವರಣಕ್ಕೆ ನಿರ್ಧಾರ ಕೆಜಿಎಫ್: ಇಲ್ಲಿನ ನಗರಸಭೆಯ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭವ್ಯ ಕಂಚಿನ ಪ್ರತಿಮೆಯನ್ನು ಆಗಸ್ಟ್ 5 ರಂದು ಅನಾವರಣಗೊಳಿಸಲು ನಿರ್ಧರಿಸಲಾಗಿದ್ದು, ಇದಕ್ಕೆ ವಿವಿಧ ರಾಜಕೀಯ ಪಕ್ಷಗಳು ಹಾಗೂ ದಲಿತ ಸಂಘಟನೆಗಳಿಂದ ಪಕ್ಷಾತೀತವಾಗಿ ಒಮ್ಮತದ ಬೆಂಬಲ ವ್ಯಕ್ತವಾಗಿದೆ. ಇಂದು ನಗರಸಭೆಯ ಸಭಾಂಗಣದಲ್ಲಿ ಶಾಸಕಿ ರೂಪಕಲಾ ಶಶಿಧರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ, ತಾಲೂಕಿನ ದಲಿತ ಮುಖಂಡರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು. ಹಬ್ಬದ ವಾತಾವರಣದಲ್ಲಿ ಕಾರ್ಯಕ್ರಮ: ಶಾಸಕಿ ರೂಪಕಲಾ ಶಶಿಧರ್ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕಿ ರೂಪಕಲಾ ಶಶಿಧರ್, "ಆಗಸ್ಟ್ 5 ರಂದು ಅತ್ಯಂತ ಶುಭ ದಿನವಾಗಿದ್ದು, ಎಲ್ಲರ ಸಮ್ಮುಖದಲ್ಲಿ ಹಬ್ಬದ ವಾತಾವರಣದಲ್ಲಿ ಅಂಬೇಡ್ಕರ್ ಅವರ ಪ್ರತಿಮೆಯನ್ನು ಅನಾವರಣ ಮಾಡಲಾಗುವುದು. ಕೆಜಿಎಫ್ ತಾಲೂಕಿನ ಮುಖಂಡರು ಹಾಗೂ ನಾಗರಿಕರು ಅಂಬೇಡ್ಕರ್ ಅವರ ಮೇಲಿರುವ ಅಭಿಮಾನದೊಂದಿಗೆ ಪಕ್ಷಾತೀತವಾಗಿ ಭಾಗವಹಿಸಬೇಕು. ನನ್ನ ಕ್ಷೇತ್ರದಲ್ಲಿ ಇಂತಹ ಮಹನೀಯರ ಪ್ರತಿಮೆ ಅನಾವರಣಗೊಳಿಸುವ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ," ಎಂದರು. ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅವರಿಗೆ ಆಹ್ವಾನಿಸಲು ಒತ್ತಾಯ: ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಖ್ಯಾತ ಸಾಹಿತಿ ಹಾಗೂ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಅವರನ್ನು ಆಹ್ವಾನಿಸಬೇಕು ಎಂದು ದಲಿತ ಮುಖಂಡ ರಂಗನಾಥ್ ಒತ್ತಾಯಿಸಿದರು. ಇದೇ ವೇಳೆ ಮಾತನಾಡಿದ ಮುಖಂಡ ಸಂದ ಮುನಿಸ್ವಾಮಿ, ಕೋಲಾರ ಜಿಲ್ಲೆಯಲ್ಲೇ ಅತಿ ಹೆಚ್ಚು ದಲಿತ ಸಮುದಾಯವನ್ನು ಹೊಂದಿರುವ ಕೆಜಿಎಫ್ ಕ್ಷೇತ್ರದಲ್ಲಿ ಕಂಚಿನ ಪ್ರತಿಮೆ ಸ್ಥಾಪಿಸುತ್ತಿರುವುದು ಶ್ಲಾಘನೀಯ. ದಲಿತ ಪರ ಹೋರಾಟ ಮಾಡಿದವರು ಹಾಗೂ ಕ್ರಾಂತಿಕಾರಿ ಗೀತೆಗಳನ್ನು ಹಾಡಿದ ಗಣ್ಯರನ್ನು ಗುರುತಿಸಿ ಸನ್ಮಾನಿಸಬೇಕು ಎಂದು ಅಭಿಪ್ರಾಯಪಟ್ಟರು. ಗ್ರಾಮೀಣ ಭಾಗದಲ್ಲೂ ಕಂಚಿನ ಪ್ರತಿಮೆ ಸ್ಥಾಪನೆಗೆ ಆಗ್ರಹ: ಕಂಚಿನ ಪ್ರತಿಮೆ ಸ್ಥಾಪನೆ ಕೇವಲ ಕೆಜಿಎಫ್ ನಗರಕ್ಕೆ ಸೀಮಿತವಾಗಬಾರದು. ಕ್ಯಾಸಂಬಳ್ಳಿ ಹಾಗೂ ಗ್ರಾಮಾಂತರ ಭಾಗದ ಕೇಂದ್ರ ಸ್ಥಾನವಾದ ಬೇತಮಂಗಲದಲ್ಲಿರುವ ಹಳೇ ಪ್ರತಿಮೆಯನ್ನು ತೆರವುಗೊಳಿಸಿ, ಅಲ್ಲೂ ಸಹ ನೂತನ ಕಂಚಿನ ಪ್ರತಿಮೆ ಸ್ಥಾಪಿಸಬೇಕು ಎಂದು ಶ್ರೀನಾಥ್ ನಾಸ್ತಿಕ ಒತ್ತಾಯಿಸಿದರು. ಸಭೆಯಲ್ಲಿ ಕೆಲಕಾಲ ಗದ್ದಲ: ಅಂಬೇಡ್ಕರ್ ಕಂಚಿನ ಪ್ರತಿಮೆ ನಿರ್ಮಾಣ ವಿಳಂಬವಾಗಲು ಕಾರಣಗಳನ್ನು ವಿವರಿಸಲು ಮುಂದಾದ ನಗರಸಭೆ ಮಾಜಿ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ಅವರ ವಿರುದ್ಧ 'ಸೇವ್ ಕೆಜಿಎಫ್ ಕಮಿಟಿ' ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸಭೆಯಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಗಿ, ಮುನಿಸ್ವಾಮಿ ಅವರು ತಮ್ಮ ಭಾಷಣವನ್ನು ಮೊಟಕುಗೊಳಿಸಿ ದಿಕ್ಕು ಬದಲಿಸಬೇಕಾಯಿತು. ಈ ಸಭೆಯಲ್ಲಿ ತಹಸೀಲ್ದಾರ್ ಗಾಯಿತ್ರಿ, ನಗರಸಭೆ ಪೌರಾಯುಕ್ತ ಶ್ರೀಧರ್, ನಗರಾಭಿವೃದ್ಧಿ ಪ್ರಾಧಿಕಾರದ ಪೌರಾಯುಕ್ತ ಧರ್ಮೇಂದ್ರ, ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ್, ನಗರಸಭೆ ಮಾಜಿ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ, ಮುಖಂಡರಾದ ದಯಾನಂದ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ಎಇಇ ಕಿರಣ್, ಪಿಎಸ್ಐ ಮಹೇಶ್ ಸೇರಿದಂತೆ ವಿವಿಧ ದಲಿತ ಪರ ಸಂಘಟನೆಗಳ ನಾಯಕರು ಹಾಗೂ ರಾಜಕೀಯ ಮುಖಂಡರು ಉಪಸ್ಥಿತರಿದ್ದರು.1
- ಮಚ್ಚು ಹಿಡಿದು ಏರಿಯಾದಲ್ಲಿ ಪುಂಡಾಟ! ಪುಡಿ ರೌಡಿಯನ್ನು ವಶಕ್ಕೆ ಪಡೆದ ಪೊಲೀಸರು! ಮಚ್ಚು ಹಿಡಿದು ಏರಿಯಾದಲ್ಲಿ ಪುಂಡಾಟ! ಪುಡಿ ರೌಡಿಯನ್ನು ವಶಕ್ಕೆ ಪಡೆದ ಪೊಲೀಸರು!1