logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ನರೇಂದ್ರ ಮೋದಿ ರವರ 75 ಜನ್ಮದಿನದ ಪ್ರಯುಕ್ತ ಕೋಲಾರಮ್ಮ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಶೇಷ ಪೂಜೆ ಕೋಲಾರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 75ನೇ ವರ್ಷದ ಜನ್ಮದಿನದ ಪ್ರಯುಕ್ತ ಕೋಲಾರ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ನಗರದ ಆರಾಧ್ಯ ದೇವತೆ ಕೋಲಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪ್ರಧಾನಮಂತ್ರಿಯವರ ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದರು. ಮೋದಿಯವರ ಜನ್ಮದಿನದ ಅಂಗವಾಗಿ ಜಿಲ್ಲೆಯ ವಿವಿಧೆಡೆ ಪ್ರತಿ ಮನೆಯಲ್ಲೂ ದೀಪ ಹಚ್ಚುವ ಮೂಲಕ ಶುಭ ಹಾರೈಸಲಾಯಿತು. ಬಳಿಕ ಕೋಲಾರಮ್ಮ ದೇವಸ್ಥಾನದಲ್ಲಿ ಮೋದಿಯವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕೋಲಾರಮ್ಮ ತಾಯಿ ನರೇಂದ್ರ ಮೋದಿ ಅವರಿಗೆ ಉತ್ತಮ ಆರೋಗ್ಯ, ಶಕ್ತಿ ಮತ್ತು ಆಯಸ್ಸು ನೀಡಲಿ. ದೇಶದ ಘನತೆ ಹಾಗೂ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಶಕ್ತಿ ನೀಡಲಿ. ದೀನ ದಲಿತರು, ಬಡವರು ಹಾಗೂ ಶೋಷಿತ ವರ್ಗಗಳ ಪರವಾಗಿ ಇನ್ನಷ್ಟು ಸೇವೆ ಸಲ್ಲಿಸುವ ಸಾಮರ್ಥ್ಯವನ್ನು ದೇವರು ಕರುಣಿಸಲಿ ಎಂದು ಮುಖಂಡರು ಹಾಗೂ ಕಾರ್ಯಕರ್ತರು ಪ್ರಾರ್ಥಿಸಿದರು. ಈ ಪೂಜಾ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಓಂ ಶಕ್ತಿ ಚಲಪತಿ, ಮಾಜಿ ಸಂಸದ ಮುನಿಸ್ವಾಮಿ, ವಿಜಯ್ ಕುಮಾರ್, ಸಮಾ ಅನಿಲ್ ಬಾಬು, ಕೆಂಬೋಡಿ ನಾರಾಯಣಸ್ವಾಮಿ, ನಾಗಭೂಷಣ್, ಬಾಲಾಜಿ, ಅಪ್ಪಿ, ತಿಮ್ಮರಾಯಪ್ಪ, ರಾಜೇಶ್ ಸಿಂಗ್, ಕೋಲಾರ್ ಶ್ರೀನಿವಾಸ್, ಶ್ರೀಧರ್, ಪ್ರವೀಣ್, ವೆಂಕಟೇಶ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಕಾರ್ಯಕ್ರಮದ ಸಂದರ್ಭದಲ್ಲಿ ಕಾರ್ಯಕರ್ತರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನಕ್ಕೆ ಶುಭಾಶಯಗಳನ್ನು ಸಲ್ಲಿಸಿ, ದೇಶದ ಅಭಿವೃದ್ಧಿ ಮತ್ತು ಜನಸೇವೆಯ ಸಂಕಲ್ಪದೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕೋಲಾರ್ ಶ್ರೀನಿವಾಸ್

1 hr ago
user_ಜನಪರ ಸುದ್ದಿ 91
ಜನಪರ ಸುದ್ದಿ 91
Singer ಕೋಲಾರ, ಕೋಲಾರ, ಕರ್ನಾಟಕ•
1 hr ago

ನರೇಂದ್ರ ಮೋದಿ ರವರ 75 ಜನ್ಮದಿನದ ಪ್ರಯುಕ್ತ ಕೋಲಾರಮ್ಮ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಶೇಷ ಪೂಜೆ ಕೋಲಾರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 75ನೇ ವರ್ಷದ ಜನ್ಮದಿನದ ಪ್ರಯುಕ್ತ ಕೋಲಾರ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ನಗರದ ಆರಾಧ್ಯ ದೇವತೆ ಕೋಲಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪ್ರಧಾನಮಂತ್ರಿಯವರ ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದರು. ಮೋದಿಯವರ ಜನ್ಮದಿನದ ಅಂಗವಾಗಿ ಜಿಲ್ಲೆಯ ವಿವಿಧೆಡೆ ಪ್ರತಿ ಮನೆಯಲ್ಲೂ ದೀಪ ಹಚ್ಚುವ ಮೂಲಕ ಶುಭ ಹಾರೈಸಲಾಯಿತು. ಬಳಿಕ ಕೋಲಾರಮ್ಮ ದೇವಸ್ಥಾನದಲ್ಲಿ ಮೋದಿಯವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕೋಲಾರಮ್ಮ ತಾಯಿ ನರೇಂದ್ರ ಮೋದಿ ಅವರಿಗೆ ಉತ್ತಮ ಆರೋಗ್ಯ, ಶಕ್ತಿ ಮತ್ತು ಆಯಸ್ಸು ನೀಡಲಿ. ದೇಶದ ಘನತೆ ಹಾಗೂ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಶಕ್ತಿ ನೀಡಲಿ. ದೀನ ದಲಿತರು, ಬಡವರು ಹಾಗೂ ಶೋಷಿತ ವರ್ಗಗಳ ಪರವಾಗಿ ಇನ್ನಷ್ಟು ಸೇವೆ ಸಲ್ಲಿಸುವ ಸಾಮರ್ಥ್ಯವನ್ನು ದೇವರು ಕರುಣಿಸಲಿ ಎಂದು ಮುಖಂಡರು ಹಾಗೂ ಕಾರ್ಯಕರ್ತರು ಪ್ರಾರ್ಥಿಸಿದರು. ಈ ಪೂಜಾ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಓಂ ಶಕ್ತಿ ಚಲಪತಿ, ಮಾಜಿ ಸಂಸದ ಮುನಿಸ್ವಾಮಿ, ವಿಜಯ್ ಕುಮಾರ್, ಸಮಾ ಅನಿಲ್ ಬಾಬು, ಕೆಂಬೋಡಿ ನಾರಾಯಣಸ್ವಾಮಿ, ನಾಗಭೂಷಣ್, ಬಾಲಾಜಿ, ಅಪ್ಪಿ, ತಿಮ್ಮರಾಯಪ್ಪ, ರಾಜೇಶ್ ಸಿಂಗ್, ಕೋಲಾರ್ ಶ್ರೀನಿವಾಸ್, ಶ್ರೀಧರ್, ಪ್ರವೀಣ್, ವೆಂಕಟೇಶ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಕಾರ್ಯಕ್ರಮದ ಸಂದರ್ಭದಲ್ಲಿ ಕಾರ್ಯಕರ್ತರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನಕ್ಕೆ ಶುಭಾಶಯಗಳನ್ನು ಸಲ್ಲಿಸಿ, ದೇಶದ ಅಭಿವೃದ್ಧಿ ಮತ್ತು ಜನಸೇವೆಯ ಸಂಕಲ್ಪದೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕೋಲಾರ್ ಶ್ರೀನಿವಾಸ್

More news from ಕರ್ನಾಟಕ and nearby areas
  • * ಟಮಕ ಕೈಗಾರಿಕಾ ಪ್ರದೇಶದಲ್ಲಿ ಮಳೆ ಸೃಷ್ಟಿಸಿದ ಅವಾಂತರ : ಕಾರ್ಖಾನೆಗಳಿಗೆ ನುಗ್ಗಿದ ಮಳೆ ನೀರು:  ಸಮರ್ಪಕ ನೀರು ಹರಿಯಲು ಮೋರಿ ವ್ಯವಸ್ಥೆಗೆ ಸಾರ್ವಜನಿಕರ ಆಗ್ರಹ * ಕೋಲಾರ : ನಗರ ಹೊರವಲಯದ ಟಮಕ ಕೈಗಾರಿಕಾ ಪ್ರದೇಶ ಹಾಗೂ ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಲ್ಲಿ  ಸುರಿದ ಭಾರಿ ಮಳೆಯಿಂದಾಗಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತವಾದ ಮೋರಿ ಹಾಗೂ ಒಳಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ಹಲವು ಕಾರ್ಖಾನೆಗಳ ಆವರಣಕ್ಕೆ ನೀರು ನುಗ್ಗಿರುವ ಘಟನೆ ವರದಿಯಾಗಿದೆ. ಮಳೆ ನೀರು ಹರಿದು ಹೋಗಲು ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಕೈಗಾರಿಕಾ ಘಟಕಗಳು, ರಸ್ತೆಗಳು ಹಾಗೂ ಕಾರ್ಖಾನೆಗಳ ಆವರಣಗಳಲ್ಲಿ ನೀರು ನಿಂತು, ಕೈಗಾರಿಕಾ ಚಟುವಟಿಕೆಗಳಿಗೆ ಅಡಚಣೆ ಉಂಟಾಗುತ್ತಿರುವ ಬಗ್ಗೆ ಸ್ಥಳೀಯರು ಹಾಗೂ ಕೈಗಾರಿಕಾ ಘಟಕಗಳ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರತಿ ಬಾರಿ ಮಳೆ ಬಂದಾಗ ಇದೇ ರೀತಿಯ ಸಮಸ್ಯೆ ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ, ಕೋಲಾರ ನಗರಸಭೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಮಳೆ ನೀರು ಸರಾಗವಾಗಿ ಹರಿದು ಹೋಗಲು ಅಗತ್ಯವಿರುವ ಮೋರಿ ಮತ್ತು ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸುವ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ. ಕೈಗಾರಿಕಾ ಪ್ರದೇಶದ ರಸ್ತೆಗಳು ಮತ್ತು ಚರಂಡಿಗಳ ಸ್ಥಿತಿಗತಿಯನ್ನು ಪರಿಶೀಲಿಸಿ, ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು. ಮುಂದಿನ ದಿನಗಳಲ್ಲಿ ಮಳೆ ನೀರು ಕಾರ್ಖಾನೆಗಳ ಒಳಗೆ ನುಗ್ಗದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಅಗತ್ಯ ಕ್ರಮಗಳ‌ನ್ನು ಕೈಗೊಂಡು ಮೂಲ ಭೂತಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.
    2
    * ಟಮಕ ಕೈಗಾರಿಕಾ ಪ್ರದೇಶದಲ್ಲಿ ಮಳೆ 
ಸೃಷ್ಟಿಸಿದ ಅವಾಂತರ : ಕಾರ್ಖಾನೆಗಳಿಗೆ ನುಗ್ಗಿದ ಮಳೆ ನೀರು:  ಸಮರ್ಪಕ ನೀರು ಹರಿಯಲು ಮೋರಿ ವ್ಯವಸ್ಥೆಗೆ ಸಾರ್ವಜನಿಕರ ಆಗ್ರಹ *
ಕೋಲಾರ : ನಗರ ಹೊರವಲಯದ ಟಮಕ ಕೈಗಾರಿಕಾ ಪ್ರದೇಶ ಹಾಗೂ ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಲ್ಲಿ  ಸುರಿದ ಭಾರಿ ಮಳೆಯಿಂದಾಗಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತವಾದ ಮೋರಿ ಹಾಗೂ ಒಳಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ಹಲವು ಕಾರ್ಖಾನೆಗಳ ಆವರಣಕ್ಕೆ ನೀರು ನುಗ್ಗಿರುವ ಘಟನೆ ವರದಿಯಾಗಿದೆ.
ಮಳೆ ನೀರು ಹರಿದು ಹೋಗಲು ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಕೈಗಾರಿಕಾ ಘಟಕಗಳು, ರಸ್ತೆಗಳು ಹಾಗೂ ಕಾರ್ಖಾನೆಗಳ ಆವರಣಗಳಲ್ಲಿ ನೀರು ನಿಂತು, ಕೈಗಾರಿಕಾ ಚಟುವಟಿಕೆಗಳಿಗೆ ಅಡಚಣೆ ಉಂಟಾಗುತ್ತಿರುವ ಬಗ್ಗೆ ಸ್ಥಳೀಯರು ಹಾಗೂ ಕೈಗಾರಿಕಾ ಘಟಕಗಳ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರತಿ ಬಾರಿ ಮಳೆ ಬಂದಾಗ ಇದೇ ರೀತಿಯ ಸಮಸ್ಯೆ ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ, ಕೋಲಾರ ನಗರಸಭೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಮಳೆ ನೀರು ಸರಾಗವಾಗಿ ಹರಿದು ಹೋಗಲು ಅಗತ್ಯವಿರುವ ಮೋರಿ ಮತ್ತು ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸುವ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.
ಕೈಗಾರಿಕಾ ಪ್ರದೇಶದ ರಸ್ತೆಗಳು ಮತ್ತು ಚರಂಡಿಗಳ ಸ್ಥಿತಿಗತಿಯನ್ನು ಪರಿಶೀಲಿಸಿ, ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು. ಮುಂದಿನ ದಿನಗಳಲ್ಲಿ ಮಳೆ ನೀರು ಕಾರ್ಖಾನೆಗಳ ಒಳಗೆ ನುಗ್ಗದಂತೆ 
ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು 
ಅಗತ್ಯ ಕ್ರಮಗಳ‌ನ್ನು ಕೈಗೊಂಡು ಮೂಲ ಭೂತಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.
    user_ಎಸ್.ಎನ್.ಪ್ರಕಾಶ್
    ಎಸ್.ಎನ್.ಪ್ರಕಾಶ್
    ಕೋಲಾರ, ಕೋಲಾರ, ಕರ್ನಾಟಕ•
    18 hrs ago
  • ಬೂದಿಕೋಟೆ ಎಂ.ಹೊಸಹಳ್ಳಿಯಲ್ಲಿ ವಿಜೃಂಭಣೆಯಿಂದ ವಿಶ್ವಕರ್ಮ ಜಯಂತಿ ಹೋಬಳಿಯ ಎಂ.ಹೊಸಹಳ್ಳಿ ಗ್ರಾಮದ ಆಂಜನೇಯ ಸ್ವಾಮಿ ಸರ್ಕಲ್‌ನಲ್ಲಿ ವಿಶ್ವಕರ್ಮ ಜಯಂತಿಯನ್ನು ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಜಯಂತಿ ಅಂಗವಾಗಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ದೇವಸ್ಥಾನದಲ್ಲಿ ವಿಶೇಷ ಪೂಜೆ, ಅರ್ಚನೆ ಹಾಗೂ ಅಭಿಷೇಕ ನೆರವೇರಿಸಿದ ಬಳಿಕ ದೇವಶಿಲ್ಪಿ ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿಯನ್ನು ಆಚರಿಸಲಾಯಿತು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗ್ರಾಮಸ್ಥರು, ಭಕ್ತರು ಹಾಗೂ ವಿಶ್ವಕರ್ಮ ಸಮುದಾಯದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಪಿಎನ್‌ಎಸ್ ಜುವೆಲ್ಲರಿ ಮಾಲೀಕ ಶ್ರೀನಿವಾಸ ಆಚಾರಿ ಮಾತನಾಡಿ, ವಿಶ್ವಕರ್ಮ ಜಯಂತಿ ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ಆಚರಣೆಯಲ್ಲ. ಸೃಷ್ಟಿ, ಕಲೆ, ಕರಕುಶಲ ಹಾಗೂ ನಿರ್ಮಾಣ ಕ್ಷೇತ್ರದಲ್ಲಿ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ. ಅವರ ಕಲೆ, ಕೌಶಲ್ಯ ಮತ್ತು ಪರಂಪರೆಯನ್ನು ಸ್ಮರಿಸುವುದು ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ವಿಶ್ವಕರ್ಮ ಸಮುದಾಯವು ಹಲವು ತಲೆಮಾರುಗಳಿಂದ ತನ್ನ ಕಲೆ ಮತ್ತು ಕೌಶಲ್ಯದ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದೆ. ಆಧುನಿಕ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಸಾಂಪ್ರದಾಯಿಕ ವೃತ್ತಿಗಳನ್ನೂ ಬೆಳೆಸಿಕೊಂಡು ಯುವಜನತೆ ಸ್ವಾವಲಂಬಿಗಳಾಗಬೇಕು. ಸಮಾಜದಲ್ಲಿ ಪರಸ್ಪರ ಸಹಕಾರ, ಸೌಹಾರ್ದತೆ ಹಾಗೂ ಒಗ್ಗಟ್ಟಿನಿಂದ ಮುನ್ನಡೆಯುವ ಮೂಲಕ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
    1
    ಬೂದಿಕೋಟೆ ಎಂ.ಹೊಸಹಳ್ಳಿಯಲ್ಲಿ ವಿಜೃಂಭಣೆಯಿಂದ ವಿಶ್ವಕರ್ಮ ಜಯಂತಿ

ಹೋಬಳಿಯ ಎಂ.ಹೊಸಹಳ್ಳಿ ಗ್ರಾಮದ ಆಂಜನೇಯ ಸ್ವಾಮಿ ಸರ್ಕಲ್‌ನಲ್ಲಿ ವಿಶ್ವಕರ್ಮ ಜಯಂತಿಯನ್ನು ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಜಯಂತಿ ಅಂಗವಾಗಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ದೇವಸ್ಥಾನದಲ್ಲಿ ವಿಶೇಷ ಪೂಜೆ, ಅರ್ಚನೆ ಹಾಗೂ ಅಭಿಷೇಕ ನೆರವೇರಿಸಿದ ಬಳಿಕ ದೇವಶಿಲ್ಪಿ ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿಯನ್ನು ಆಚರಿಸಲಾಯಿತು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗ್ರಾಮಸ್ಥರು, ಭಕ್ತರು ಹಾಗೂ ವಿಶ್ವಕರ್ಮ ಸಮುದಾಯದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಪಿಎನ್‌ಎಸ್ ಜುವೆಲ್ಲರಿ ಮಾಲೀಕ ಶ್ರೀನಿವಾಸ ಆಚಾರಿ ಮಾತನಾಡಿ, ವಿಶ್ವಕರ್ಮ ಜಯಂತಿ ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ಆಚರಣೆಯಲ್ಲ. ಸೃಷ್ಟಿ, ಕಲೆ, ಕರಕುಶಲ ಹಾಗೂ ನಿರ್ಮಾಣ ಕ್ಷೇತ್ರದಲ್ಲಿ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ. ಅವರ ಕಲೆ, ಕೌಶಲ್ಯ ಮತ್ತು ಪರಂಪರೆಯನ್ನು ಸ್ಮರಿಸುವುದು ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ವಿಶ್ವಕರ್ಮ ಸಮುದಾಯವು ಹಲವು ತಲೆಮಾರುಗಳಿಂದ ತನ್ನ ಕಲೆ ಮತ್ತು ಕೌಶಲ್ಯದ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದೆ. ಆಧುನಿಕ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಸಾಂಪ್ರದಾಯಿಕ ವೃತ್ತಿಗಳನ್ನೂ ಬೆಳೆಸಿಕೊಂಡು ಯುವಜನತೆ ಸ್ವಾವಲಂಬಿಗಳಾಗಬೇಕು. ಸಮಾಜದಲ್ಲಿ ಪರಸ್ಪರ ಸಹಕಾರ, ಸೌಹಾರ್ದತೆ ಹಾಗೂ ಒಗ್ಗಟ್ಟಿನಿಂದ ಮುನ್ನಡೆಯುವ ಮೂಲಕ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
    user_Vishnu Press
    Vishnu Press
    Local News Reporter ಬಂಗಾರಪೇಟೆ, ಕೋಲಾರ, ಕರ್ನಾಟಕ•
    9 hrs ago
  • ಕೋಲಾರ–ಚಿಕ್ಕಬಳ್ಳಾಪುರಕ್ಕೆ ನೀರು ತರಲು ಹೋರಾಟ: ಸೀಕಲ್ ರಾಮಚಂದ್ರಗೌಡ. ಕೋಲಾರ–ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳ ರೈತರ ಬದುಕು ಸುಧಾರಿಸಬೇಕಾದರೆ ಈ ಭಾಗಕ್ಕೆ ನೀರು ತರಲು ನಿರಂತರವಾಗಿ ಹೋರಾಟ ನಡೆಸಬೇಕಿದೆ ಎಂದು ಮಣ್ಣಿನ ಮಗ ಪ್ರಶಸ್ತಿ ಪುರಸ್ಕೃತ ಬಿಜೆಪಿ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ  ಸೀಕಲ್ ರಾಮಚಂದ್ರಗೌಡ ಹೇಳಿದರು. ಚಿಕ್ಕಬಳ್ಳಾಪುರ ನಗರದ ವರವಲಯದ ಎಸ್.ಜೆ.ಸಿ.ಐ.ಟಿ. ಕಾಲೇಜು ಸಭಾಂಗಣದಲ್ಲಿ ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಸಂಸ್ಮರಣೋತ್ಸವದ ಅಂಗವಾಗಿ ಆಯೋಜಿಸಿದ್ದ ವಿವಿಧ ಪ್ರಶಸ್ತಿ ಪ್ರದಾನ ಹಾಗೂ ಅಭಿನಂದನಾ ಸಮಾರಂಭದಲ್ಲಿ  ಅವರು ಮಾತನಾಡಿದರು. ತಾನು ರೈತ ಕುಟುಂಬದಿಂದ ಬಂದವನಾಗಿದ್ದು, ಕೃಷಿ ಮಾಡಿಕೊಂಡು ಬದುಕು ಕಟ್ಟಿಕೊಂಡ ನಂತರ ಸುಮಾರು 25 ವರ್ಷಗಳ ಕಾಲ ವ್ಯಾಪಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ಆದರೆ ಸ್ವಂತ ಜಿಲ್ಲೆಗೆ ಮರಳಿ ನೋಡಿದಾಗ ಹಿಂದಿನ ಪರಿಸ್ಥಿತಿಗೂ ಇಂದಿನ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸ ಕಂಡುಬರುತ್ತಿದೆ ಎಂದರು. ಹಿಂದೆ 100–150 ಅಡಿಗಳಲ್ಲಿಯೇ ಬಾವಿಗಳಲ್ಲಿ ನೀರು ದೊರೆಯುತ್ತಿತ್ತು, ಕೆರೆಗಳಲ್ಲಿ ನೀರು ಇರುತ್ತಿತ್ತು. ಉತ್ತಮ ಮಳೆಯಾಗುತ್ತಿತ್ತು. ಆದರೆ ಇಂದು ಕೋಲಾರ–ಚಿಕ್ಕಬಳ್ಳಾಪುರ ಭಾಗದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಹೇಳಿದರು. ಕೃಷ್ಣಾ ನದಿ ನೀರು ಸೇರಿದಂತೆ ವಿವಿಧ ಮೂಲಗಳಿಂದ ನೀರು ತರಲು ಪ್ರಯತ್ನಗಳು ನಡೆಯುತ್ತಿವೆ. ಈ ಭಾಗಕ್ಕೆ ನೀರು ಹರಿದುಬರದಿದ್ದರೆ ರೈತರು ಹಾಗೂ ರೈತರ ಮಕ್ಕಳು ಇಲ್ಲಿ ಬದುಕು ಕಟ್ಟಿಕೊಳ್ಳುವುದು ಕಷ್ಟವಾಗಲಿದೆ. ಹೀಗಾಗಿ ರೈತರ ಪರವಾಗಿ ಧ್ವನಿ ಎತ್ತಿ ನೀರಿಗಾಗಿ ಹೋರಾಟ ನಡೆಸುವುದು ತಮ್ಮ ಪ್ರಮುಖ ಉದ್ದೇಶವಾಗಿದೆ ಎಂದರು. ಸ್ವಗ್ರಾಮ ಸೀಕಲ್‌ನಲ್ಲಿ ತಾವೂ ಕೃಷಿ ಮಾಡುತ್ತಿದ್ದು, ರೈತರ ಸಮಸ್ಯೆಗಳನ್ನು ಹತ್ತಿರದಿಂದ ಅರಿತಿದ್ದೇನೆ. ರೈತರ ಬದುಕು ಹಸನಾಗಬೇಕು ಹಾಗೂ ಈ ಭಾಗದ ಜನರು ಅಭಿವೃದ್ಧಿ ಹೊಂದಬೇಕು ಎಂಬ ಉದ್ದೇಶದಿಂದ ರಾಜಕೀಯ ಕ್ಷೇತ್ರಕ್ಕೂ ಬಂದಿದ್ದೇನೆ ಎಂದು ತಿಳಿಸಿದರು. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದು, ಇದೀಗ ಪಕ್ಷದ ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷರಾಗಿ ಸಂಘಟನೆ ಬಲಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಸಂಘಟಿಸಿ, ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ತರಲು ಅಗತ್ಯವಾದ ಪ್ರಯತ್ನಗಳನ್ನು ನಡೆಸುವುದಾಗಿ ಹೇಳಿದರು. ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ‘ಮಣ್ಣಿನ ಮಗ’ ಪ್ರಶಸ್ತಿ ಪುರಸ್ಕೃತ ಸೀಕಲ್ ರಾಮಚಂದ್ರಗೌಡ ಗೌಡರಿಗೆ ಅಭಿನಂದನಾ ಸಮಾರಂಭ ನಡೆಯಿತು. ಈ ಗೌರವ ರೈತರಿಗಾಗಿ ಇನ್ನಷ್ಟು ಕೆಲಸ ಮಾಡಲು ಪ್ರೇರಣೆ ನೀಡಿದೆ ಎಂದು ಸೀಕಲ್ ರಾಮಚಂದ್ರಗೌಡ ಹೇಳಿದರು. ಕಾರ್ಯಕ್ರಮದಲ್ಲಿ ಯುಪಿಎಸ್‌ಸಿ ಸಾಧಕರಿಗೆ ಸನ್ಮಾನ, ‘ಸ್ಟಾರ್ ಆಫ್ ಕರ್ನಾಟಕ’ ಪ್ರಶಸ್ತಿ ಪ್ರದಾನ ಹಾಗೂ ಪಿಜಿಎಸ್ ಸಾಧಕ ಪುರಸ್ಕಾರ ಸೇರಿದಂತೆ ವಿವಿಧ ಗೌರವ ಕಾರ್ಯಕ್ರಮಗಳು ನಡೆದವು. ಪರಮಪೂಜ್ಯ ಶ್ರೀ ಶ್ರೀ ಶ್ರೀ ನಿರ್ಮಲಾನಂದ ಮಹಾಸ್ವಾಮೀಜಿಯವರ ಕೃಪಾಶೀರ್ವಾದದೊಂದಿಗೆ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳಾನಂದನಾಥ ಸ್ವಾಮೀಜಿ ಹಾಗೂ ಶ್ರೀ ಸೌಮ್ಯಾನಂದ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಡಾ. ಕೆ.ಜೆ. ಪುರುಷೋತ್ತಮ್ ವ್ಯವಸ್ಥಾಪಕ ನಿರ್ದೇಶಕರು, ಜೆ.ಆರ್. ಗ್ರೂಪ್ ಆಫ್ ಕಂಪನೀಸ್,ಮಿಸ್ಟರ್ ಬ್ರೆಂಡನ್ ಕಾಲಿಸ್ಟರ್ ವ್ಯವಸ್ಥಾಪಕ ನಿರ್ದೇಶಕರು, ಟೆರಾನೆಕ್ಸ್ ಮತ್ತು ಒರೆಲಿಯನ್ ಗ್ರೂಪ್ ಆಫ್ ಕಂಪನೀಸ್ ಆಸ್ಟ್ರೇಲಿಯಾ, ಶ್ರೀರಾಮ್ ಶೆಟ್ಟಿ ಪ್ರಮುಖ ಉದ್ಯಮಿಗಳು ಆಸ್ಟ್ರೇಲಿಯಾ,ಮಹೇಶ್ ಗೌಡ ಮಾಜಿ ಅಧ್ಯಕ್ಷರು, ಕರ್ನಾಟಕ ಸಂಘ ಕತಾರ್ ಹಾಗೂ ಗ್ಲೋಬಲ್ ಮೆಂಟರ್, ಒಕ್ಕಲಿಗ ಯುವ ಬ್ರಿಗೇಡ್, ಸಹನಾ ರಮೇಶ್ ಕೌನ್ಸಿಲರ್ ವಿಂಧಮ್ ಸಿಟಿ ಕೌನ್ಸಿಲ್ ಮೆಲ್ಬೋರ್ನ್, ಆಸ್ಟ್ರೇಲಿಯಾ,ಸುರೇಶ್ ಮೋಹನ್ ಗೌರವಾನ್ವಿತ ಕಾನ್ಸುಲ್ ರ್ವಾಂಡಾ ಗಣರಾಜ್ಯ, ಸಂಸ್ಥಾಪಕ ಅಧ್ಯಕ್ಷರು, ಒಕ್ಕಲಿಗ ಯುವ ಬ್ರಿಗೇಡ್, ಹಾಗೂ ಇನ್ನು ಮುಂತಾದವರು ಹಾಜರಿದ್ದರು. ವರದಿ ನಂದಿ ರಾಜೇಶ್ ಶಿಡ್ಲಘಟ್ಟ
    1
    ಕೋಲಾರ–ಚಿಕ್ಕಬಳ್ಳಾಪುರಕ್ಕೆ ನೀರು ತರಲು ಹೋರಾಟ: ಸೀಕಲ್ ರಾಮಚಂದ್ರಗೌಡ.
ಕೋಲಾರ–ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳ ರೈತರ ಬದುಕು ಸುಧಾರಿಸಬೇಕಾದರೆ ಈ ಭಾಗಕ್ಕೆ ನೀರು ತರಲು ನಿರಂತರವಾಗಿ ಹೋರಾಟ ನಡೆಸಬೇಕಿದೆ ಎಂದು ಮಣ್ಣಿನ ಮಗ ಪ್ರಶಸ್ತಿ ಪುರಸ್ಕೃತ ಬಿಜೆಪಿ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ  ಸೀಕಲ್ ರಾಮಚಂದ್ರಗೌಡ ಹೇಳಿದರು.
ಚಿಕ್ಕಬಳ್ಳಾಪುರ ನಗರದ ವರವಲಯದ ಎಸ್.ಜೆ.ಸಿ.ಐ.ಟಿ. ಕಾಲೇಜು ಸಭಾಂಗಣದಲ್ಲಿ ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಸಂಸ್ಮರಣೋತ್ಸವದ ಅಂಗವಾಗಿ ಆಯೋಜಿಸಿದ್ದ ವಿವಿಧ ಪ್ರಶಸ್ತಿ ಪ್ರದಾನ ಹಾಗೂ ಅಭಿನಂದನಾ ಸಮಾರಂಭದಲ್ಲಿ  ಅವರು ಮಾತನಾಡಿದರು.
ತಾನು ರೈತ ಕುಟುಂಬದಿಂದ ಬಂದವನಾಗಿದ್ದು, ಕೃಷಿ ಮಾಡಿಕೊಂಡು ಬದುಕು ಕಟ್ಟಿಕೊಂಡ ನಂತರ ಸುಮಾರು 25 ವರ್ಷಗಳ ಕಾಲ ವ್ಯಾಪಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ಆದರೆ ಸ್ವಂತ ಜಿಲ್ಲೆಗೆ ಮರಳಿ ನೋಡಿದಾಗ ಹಿಂದಿನ ಪರಿಸ್ಥಿತಿಗೂ ಇಂದಿನ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸ ಕಂಡುಬರುತ್ತಿದೆ ಎಂದರು.
ಹಿಂದೆ 100–150 ಅಡಿಗಳಲ್ಲಿಯೇ ಬಾವಿಗಳಲ್ಲಿ ನೀರು ದೊರೆಯುತ್ತಿತ್ತು, ಕೆರೆಗಳಲ್ಲಿ ನೀರು ಇರುತ್ತಿತ್ತು. ಉತ್ತಮ ಮಳೆಯಾಗುತ್ತಿತ್ತು. ಆದರೆ ಇಂದು ಕೋಲಾರ–ಚಿಕ್ಕಬಳ್ಳಾಪುರ ಭಾಗದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಹೇಳಿದರು.
ಕೃಷ್ಣಾ ನದಿ ನೀರು ಸೇರಿದಂತೆ ವಿವಿಧ ಮೂಲಗಳಿಂದ ನೀರು ತರಲು ಪ್ರಯತ್ನಗಳು ನಡೆಯುತ್ತಿವೆ. ಈ ಭಾಗಕ್ಕೆ ನೀರು ಹರಿದುಬರದಿದ್ದರೆ ರೈತರು ಹಾಗೂ ರೈತರ ಮಕ್ಕಳು ಇಲ್ಲಿ ಬದುಕು ಕಟ್ಟಿಕೊಳ್ಳುವುದು ಕಷ್ಟವಾಗಲಿದೆ. ಹೀಗಾಗಿ ರೈತರ ಪರವಾಗಿ ಧ್ವನಿ ಎತ್ತಿ ನೀರಿಗಾಗಿ ಹೋರಾಟ ನಡೆಸುವುದು ತಮ್ಮ ಪ್ರಮುಖ ಉದ್ದೇಶವಾಗಿದೆ ಎಂದರು.
ಸ್ವಗ್ರಾಮ ಸೀಕಲ್‌ನಲ್ಲಿ ತಾವೂ ಕೃಷಿ ಮಾಡುತ್ತಿದ್ದು, ರೈತರ ಸಮಸ್ಯೆಗಳನ್ನು ಹತ್ತಿರದಿಂದ ಅರಿತಿದ್ದೇನೆ. ರೈತರ ಬದುಕು ಹಸನಾಗಬೇಕು ಹಾಗೂ ಈ ಭಾಗದ ಜನರು ಅಭಿವೃದ್ಧಿ ಹೊಂದಬೇಕು ಎಂಬ ಉದ್ದೇಶದಿಂದ ರಾಜಕೀಯ ಕ್ಷೇತ್ರಕ್ಕೂ ಬಂದಿದ್ದೇನೆ ಎಂದು ತಿಳಿಸಿದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದು, ಇದೀಗ ಪಕ್ಷದ ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷರಾಗಿ ಸಂಘಟನೆ ಬಲಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಸಂಘಟಿಸಿ, ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ತರಲು ಅಗತ್ಯವಾದ ಪ್ರಯತ್ನಗಳನ್ನು ನಡೆಸುವುದಾಗಿ ಹೇಳಿದರು.
ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ‘ಮಣ್ಣಿನ ಮಗ’ ಪ್ರಶಸ್ತಿ ಪುರಸ್ಕೃತ ಸೀಕಲ್ ರಾಮಚಂದ್ರಗೌಡ ಗೌಡರಿಗೆ ಅಭಿನಂದನಾ ಸಮಾರಂಭ ನಡೆಯಿತು. 
ಈ ಗೌರವ ರೈತರಿಗಾಗಿ ಇನ್ನಷ್ಟು ಕೆಲಸ ಮಾಡಲು ಪ್ರೇರಣೆ ನೀಡಿದೆ ಎಂದು ಸೀಕಲ್ ರಾಮಚಂದ್ರಗೌಡ ಹೇಳಿದರು.
ಕಾರ್ಯಕ್ರಮದಲ್ಲಿ ಯುಪಿಎಸ್‌ಸಿ ಸಾಧಕರಿಗೆ ಸನ್ಮಾನ, ‘ಸ್ಟಾರ್ ಆಫ್ ಕರ್ನಾಟಕ’ ಪ್ರಶಸ್ತಿ ಪ್ರದಾನ ಹಾಗೂ ಪಿಜಿಎಸ್ ಸಾಧಕ ಪುರಸ್ಕಾರ ಸೇರಿದಂತೆ ವಿವಿಧ ಗೌರವ ಕಾರ್ಯಕ್ರಮಗಳು ನಡೆದವು. ಪರಮಪೂಜ್ಯ ಶ್ರೀ ಶ್ರೀ ಶ್ರೀ ನಿರ್ಮಲಾನಂದ ಮಹಾಸ್ವಾಮೀಜಿಯವರ ಕೃಪಾಶೀರ್ವಾದದೊಂದಿಗೆ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳಾನಂದನಾಥ ಸ್ವಾಮೀಜಿ ಹಾಗೂ ಶ್ರೀ ಸೌಮ್ಯಾನಂದ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ  ಡಾ. ಕೆ.ಜೆ. ಪುರುಷೋತ್ತಮ್
ವ್ಯವಸ್ಥಾಪಕ ನಿರ್ದೇಶಕರು, ಜೆ.ಆರ್. ಗ್ರೂಪ್ ಆಫ್ ಕಂಪನೀಸ್,ಮಿಸ್ಟರ್ ಬ್ರೆಂಡನ್ ಕಾಲಿಸ್ಟರ್
ವ್ಯವಸ್ಥಾಪಕ ನಿರ್ದೇಶಕರು, ಟೆರಾನೆಕ್ಸ್ ಮತ್ತು ಒರೆಲಿಯನ್ ಗ್ರೂಪ್ ಆಫ್ ಕಂಪನೀಸ್ ಆಸ್ಟ್ರೇಲಿಯಾ,
ಶ್ರೀರಾಮ್ ಶೆಟ್ಟಿ ಪ್ರಮುಖ ಉದ್ಯಮಿಗಳು
ಆಸ್ಟ್ರೇಲಿಯಾ,ಮಹೇಶ್ ಗೌಡ ಮಾಜಿ ಅಧ್ಯಕ್ಷರು, ಕರ್ನಾಟಕ ಸಂಘ ಕತಾರ್ ಹಾಗೂ ಗ್ಲೋಬಲ್ ಮೆಂಟರ್, ಒಕ್ಕಲಿಗ ಯುವ ಬ್ರಿಗೇಡ್,
ಸಹನಾ ರಮೇಶ್ ಕೌನ್ಸಿಲರ್ ವಿಂಧಮ್ ಸಿಟಿ ಕೌನ್ಸಿಲ್  ಮೆಲ್ಬೋರ್ನ್, ಆಸ್ಟ್ರೇಲಿಯಾ,ಸುರೇಶ್ ಮೋಹನ್
ಗೌರವಾನ್ವಿತ ಕಾನ್ಸುಲ್ ರ್ವಾಂಡಾ ಗಣರಾಜ್ಯ, ಸಂಸ್ಥಾಪಕ ಅಧ್ಯಕ್ಷರು, ಒಕ್ಕಲಿಗ ಯುವ ಬ್ರಿಗೇಡ್, ಹಾಗೂ ಇನ್ನು ಮುಂತಾದವರು ಹಾಜರಿದ್ದರು. 
ವರದಿ ನಂದಿ ರಾಜೇಶ್ ಶಿಡ್ಲಘಟ್ಟ
    user_Nandi Rajesh Press reporter
    Nandi Rajesh Press reporter
    ಚಿಕ್ಕಬಳ್ಳಾಪುರ, ಚಿಕ್ಕಬಳ್ಳಾಪುರ, ಕರ್ನಾಟಕ•
    3 hrs ago
  • ಪ್ರೇಮ ವಿವಾಹವಾಗಿದ್ದ ಯುವತಿ ಅಪಹರಣಕ್ಕೆ ಕುಟುಂಬದಿಂದ ಸುಪಾರಿ? ಅಡ್ಡಾದಿಡ್ಡಿ ಕಾರು ಚಾಲನೆ; 35ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಪ್ರೇಮ ವಿವಾಹವಾಗಿದ್ದ ಯುವತಿ ಅಪಹರಣಕ್ಕೆ ಕುಟುಂಬದಿಂದ ಸುಪಾರಿ? ಅಡ್ಡಾದಿಡ್ಡಿ ಕಾರು ಚಾಲನೆ; 35ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
    1
    ಪ್ರೇಮ ವಿವಾಹವಾಗಿದ್ದ ಯುವತಿ ಅಪಹರಣಕ್ಕೆ ಕುಟುಂಬದಿಂದ ಸುಪಾರಿ?
ಅಡ್ಡಾದಿಡ್ಡಿ ಕಾರು ಚಾಲನೆ; 35ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಪ್ರೇಮ ವಿವಾಹವಾಗಿದ್ದ ಯುವತಿ ಅಪಹರಣಕ್ಕೆ ಕುಟುಂಬದಿಂದ ಸುಪಾರಿ?
ಅಡ್ಡಾದಿಡ್ಡಿ ಕಾರು ಚಾಲನೆ; 35ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
    user_Veega News Kannada
    Veega News Kannada
    Technical service ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    5 hrs ago
  • ಮಹದೇವಪುರ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಜನ್ಮದಿನಕ್ಕೆ ಸೇವಾಕಾರ್ಯ ಶಾಸಕಿ‌ ಮಂಜುಳಾ‌ ಲಿಂಬಾವಳಿ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ನೇತ್ರತ್ವದಲ್ಲಿ ಆಯೋಜನೆ ಕ್ಷೇತ್ರ ವ್ಯಾಪ್ತಿ ಸುಮಾರು 134ಕ್ಕೂ ಹೆಚ್ಚು ಕಡೆ ಸೇವಾಕಾರ್ಯ ಕೆರೆ , ದೇವಾಲಯ ,ಶಾಲೆ , ಸ್ಮಶಾನ ಆವರಣ ಸ್ವಚ್ಛತೆ , ಪೌರ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ ರಕ್ತದಾನ ಶಿಬಿರ , ಆರೋಗ್ಯ ಶಿಬಿರ , ಗೋಶಾಲೆಗಳಲ್ಲಿ‌ ಸೇವಾಕಾರ್ಯ ಗಿಡ ನೆಡುವ ಜೊತೆ ಶಾಲಾ ಮಕ್ಕಳಿಗೆ ಪುಸ್ತಕ ಸಿಹಿ ವಿತರಣೆ ಪ್ರಧಾನಿ ಮೋದಿ ಅವರ ಹುಟ್ಟು ಹಬ್ಬ ಹಿನ್ನೆಲೆ ಇಡಿ‌ ತಿಂಗಳು ಸೇವಾಕಾರ್ಯ ಮಾಡಲು ಪಕ್ಷ ಕರೆ ನೀಡಿದೆ ಮಹದೇವಪುರ ಕ್ಷೇತ್ರದಲ್ಲಿ ‌ಒಂದೇ ದಿನ ನೂರಾರು ಸೇವಾಕಾರ್ಯ ಮಾಡಲಾಗಿದೆ ದೇಶದ ಅತ್ಯುತ್ತಮ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ದೇಶದ ಚಿತ್ರಣವನ್ನೇ ಪ್ರಧಾನ ಮಂತ್ರಿಗಳು ಬದಲಾಯಿಸುತ್ತಾರೆ ಎಂದು ಮಾಜಿ ಸಚಿವ ಲಿಂಬಾವಳಿ ಆಡಿ ಹೊಗಳಿದ್ದಾರೆ
    1
    ಮಹದೇವಪುರ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಜನ್ಮದಿನಕ್ಕೆ ಸೇವಾಕಾರ್ಯ
ಶಾಸಕಿ‌ ಮಂಜುಳಾ‌ ಲಿಂಬಾವಳಿ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ನೇತ್ರತ್ವದಲ್ಲಿ ಆಯೋಜನೆ 
ಕ್ಷೇತ್ರ ವ್ಯಾಪ್ತಿ ಸುಮಾರು 134ಕ್ಕೂ ಹೆಚ್ಚು ಕಡೆ ಸೇವಾಕಾರ್ಯ   
ಕೆರೆ , ದೇವಾಲಯ ,ಶಾಲೆ , ಸ್ಮಶಾನ ಆವರಣ ಸ್ವಚ್ಛತೆ , ಪೌರ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ 
ರಕ್ತದಾನ ಶಿಬಿರ , ಆರೋಗ್ಯ ಶಿಬಿರ , ಗೋಶಾಲೆಗಳಲ್ಲಿ‌ ಸೇವಾಕಾರ್ಯ  
ಗಿಡ ನೆಡುವ ಜೊತೆ ಶಾಲಾ ಮಕ್ಕಳಿಗೆ ಪುಸ್ತಕ ಸಿಹಿ ವಿತರಣೆ  
ಪ್ರಧಾನಿ ಮೋದಿ ಅವರ ಹುಟ್ಟು ಹಬ್ಬ ಹಿನ್ನೆಲೆ ಇಡಿ‌ ತಿಂಗಳು ಸೇವಾಕಾರ್ಯ ಮಾಡಲು ಪಕ್ಷ ಕರೆ ನೀಡಿದೆ 
ಮಹದೇವಪುರ ಕ್ಷೇತ್ರದಲ್ಲಿ ‌ಒಂದೇ ದಿನ ನೂರಾರು ಸೇವಾಕಾರ್ಯ ಮಾಡಲಾಗಿದೆ  
ದೇಶದ  ಅತ್ಯುತ್ತಮ ಪ್ರಧಾನಿ ನರೇಂದ್ರ ಮೋದಿ ಅವರು
ನಮ್ಮ ದೇಶದ ಚಿತ್ರಣವನ್ನೇ ಪ್ರಧಾನ ಮಂತ್ರಿಗಳು ಬದಲಾಯಿಸುತ್ತಾರೆ ಎಂದು ಮಾಜಿ ಸಚಿವ ಲಿಂಬಾವಳಿ ಆಡಿ ಹೊಗಳಿದ್ದಾರೆ
    user_The Reporter
    The Reporter
    Local News Reporter ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    8 hrs ago
  • ಕೆಆರ್ ಪುರದಲ್ಲಿ ಅದ್ದೂರಿ ಗಣೇಶೋತ್ಸವ:ಗಣೇಶೋತ್ಸವ ವೇದಿಕೆಯಲ್ಲಿ ನಟಿ ರಾಗಿಣಿ ಭರ್ಜರಿ ಸ್ಟೆಪ್ ಬೆಂಗಳೂರು:ಕೆಆರ್ ಪುರದಲ್ಲಿ ಅದ್ದೂರಿ ಗಣೇಶೋತ್ಸವ ನಡೆದಿದ್ದು,ಗಣೇಶೋತ್ಸವ ವೇದಿಕೆಯಲ್ಲಿ ನಟಿ ರಾಗಿಣಿ ಭರ್ಜರಿ ಸ್ಟೆಪ್ ಹಾಕಿದ್ದಾರೆ.ರಾಗಿಣಿ ಡ್ಯಾನ್ಸ್‌ಗೆ ಕೆಆರ್ ಪುರದ ಜನತೆ ಫಿದಾ ಆಗಿದ್ದಾರೆ.ಶ್ರೀ ಕೋಟೆ ವೆಂಕಟೇಶ್ವರ ಗೆಳೆಯರ ಬಳಗದಿಂದ ಅದ್ದೂರಿ ಗಣೇಶೋತ್ಸವ ಆಯೋಜನೆ ಮಾಡಲಾಗಿದ್ದು,ಈ ವೇಳೆ ಮಾತನಾಡಿದ ನಟಿ ರಾಗಿಣಿ ,ಗಣೇಶ ಹಬ್ಬ ಆಚರಣೆ ಅಂದ್ರೆ ತುಂಬಾನೇ ಖುಷಿ ನಮ್ಮ ಮನೆ ದೇವರು.ಇನ್ನೂ ಕೆಆರ್ ಪುರ ಭಾಗ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಏರಿಯಾ.ಈ ಭಾಗದಲ್ಲಿ ಅದ್ದೂರಿ ಗಣೇಶೋತ್ಸವ ಆಚರಣೆ ಸಂತಸ ತಂದಿದೆ.ಇದೇ ರೀತಿ ಗಣೇಶೋತ್ಸವ ಕಾರ್ಯಕ್ರಮಗಳು ಮುಂದುವರಿಯಲಿ ಎಂದು ನಟಿ ರಾಗಿಣಿಗೆ ಹೇಳಿದ್ದಾರೆ.ಈ ವೇಳಿ ನಟಿ ರಾಗಿಣಿಗೆ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಆಯೋಜಕರಾದ ನಿಖಿಲ್ ಹಾಗೂ ದರ್ಶನ್ ಸಾಥ್ ನೀಡಿದರು.
    1
    ಕೆಆರ್ ಪುರದಲ್ಲಿ ಅದ್ದೂರಿ ಗಣೇಶೋತ್ಸವ:ಗಣೇಶೋತ್ಸವ ವೇದಿಕೆಯಲ್ಲಿ ನಟಿ ರಾಗಿಣಿ ಭರ್ಜರಿ ಸ್ಟೆಪ್
ಬೆಂಗಳೂರು:ಕೆಆರ್ ಪುರದಲ್ಲಿ ಅದ್ದೂರಿ ಗಣೇಶೋತ್ಸವ ನಡೆದಿದ್ದು,ಗಣೇಶೋತ್ಸವ ವೇದಿಕೆಯಲ್ಲಿ ನಟಿ ರಾಗಿಣಿ ಭರ್ಜರಿ ಸ್ಟೆಪ್ ಹಾಕಿದ್ದಾರೆ.ರಾಗಿಣಿ ಡ್ಯಾನ್ಸ್‌ಗೆ  ಕೆಆರ್ ಪುರದ ಜನತೆ ಫಿದಾ ಆಗಿದ್ದಾರೆ.ಶ್ರೀ ಕೋಟೆ ವೆಂಕಟೇಶ್ವರ ಗೆಳೆಯರ ಬಳಗದಿಂದ ಅದ್ದೂರಿ ಗಣೇಶೋತ್ಸವ ಆಯೋಜನೆ ಮಾಡಲಾಗಿದ್ದು,ಈ ವೇಳೆ ಮಾತನಾಡಿದ ನಟಿ ರಾಗಿಣಿ ,ಗಣೇಶ ಹಬ್ಬ ಆಚರಣೆ ಅಂದ್ರೆ ತುಂಬಾನೇ ಖುಷಿ  ನಮ್ಮ ಮನೆ ದೇವರು.ಇನ್ನೂ ಕೆಆರ್ ಪುರ ಭಾಗ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಏರಿಯಾ.ಈ ಭಾಗದಲ್ಲಿ ಅದ್ದೂರಿ ಗಣೇಶೋತ್ಸವ ಆಚರಣೆ ಸಂತಸ ತಂದಿದೆ.ಇದೇ ರೀತಿ ಗಣೇಶೋತ್ಸವ ಕಾರ್ಯಕ್ರಮಗಳು ಮುಂದುವರಿಯಲಿ ಎಂದು ನಟಿ ರಾಗಿಣಿಗೆ ಹೇಳಿದ್ದಾರೆ.ಈ ವೇಳಿ ನಟಿ ರಾಗಿಣಿಗೆ  ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಆಯೋಜಕರಾದ ನಿಖಿಲ್ ಹಾಗೂ ದರ್ಶನ್ ಸಾಥ್ ನೀಡಿದರು.
    user_ಶಿವನಿ
    ಶಿವನಿ
    Fruit & Vegetable Exporter ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    13 hrs ago
  • ತುಮಟಗೆರೆ ಹಾಲು ಸಂಘಕ್ಕೆ ರೂ.8.71 ಲಕ್ಷ ನಿವ್ವಳ ಲಾಭ ಹಾಲು ವಹಿವಾಟು: ಪ್ರತಿದಿನ 1,100 ಲೀಟರ್ ಹಾಲು ಶೇಖರಣೆ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿರುವ ಸಂದರ್ಭದಲ್ಲಿ ಹೈನುಗಾರಿಕೆ ರೈತ ಕುಟುಂಬಗಳಿಗೆ ಆರ್ಥಿಕ ಆಸರೆಯಾಗಿದೆ. ರೈತರು ಹಾಲಿನ ಗುಣಮಟ್ಟ ಹಾಗೂ ಶುಚಿತ್ವಕ್ಕೆ ಆದ್ಯತೆ ನೀಡಿ ಉತ್ತಮ ಆದಾಯ ಗಳಿಸಬೇಕು ಎಂದು ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಶಿಬಿರ ಕಚೇರಿ ಉಪವ್ಯವಸ್ಥಾಪಕ ಎಂ.ಅಂಬರೀಶ್ ಸಲಹೆ ನೀಡಿದರು.ತಾಲ್ಲೂಕಿನ ತುಮಟಗೆರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ 2025-262 ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ವೈಜ್ಞಾನಿಕ ಹೈನುಗಾರಿಕೆ ಪದ್ಧತಿ ಅಳವಡಿಸಿಕೊಂಡರೆ ಜಾನುವಾರುಗಳ ಆರೋಗ್ಯ ಕಾಪಾಡುವುದರ ಜತೆಗೆ ಹಾಲಿನ ಉತ್ಪಾದನೆಯನ್ನೂ ಹೆಚ್ಚಿಸಬಹುದು ಎಂದರು.ಹಾಲು ಕರೆಯುವ ಸಂದರ್ಭದಲ್ಲಿ ಸ್ವಚ್ಛತೆ ಕಾಪಾಡುವುದು, ಪೌಷ್ಟಿಕ ಪೌಷ್ಟಿಕ ಮತ್ತು ಗುಣಮಟ್ಟದ ಮೇವು ನೀಡುವುದು ಹಾಗೂಇದರ ಸಹಕಾರ ಜಾನುವಾರುಗಳ ಆರೋಗ್ಯದ ಬಗ್ಗೆ ನಿಯಮಿತವಾಗಿ ಕಾಳಜಿ ವಹಿಸುವುದು ಅತ್ಯಗತ್ಯ. ಗುಣಮಟ್ಟದ ಹಾಲುಪೂರೈಸಿದರೆ ಉತ್ತಮ ದರದ ಜತೆಗೆ ಒಕ್ಕೂಟದಿಂದ ದೊರೆಯುವ ವಿವಿಧ ಪ್ರೋತ್ಸಾ ಹಧನ ಹಾಗೂ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
    1
    ತುಮಟಗೆರೆ ಹಾಲು ಸಂಘಕ್ಕೆ ರೂ.8.71 ಲಕ್ಷ ನಿವ್ವಳ ಲಾಭ ಹಾಲು ವಹಿವಾಟು: ಪ್ರತಿದಿನ 1,100 ಲೀಟರ್ ಹಾಲು ಶೇಖರಣೆ
ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿರುವ ಸಂದರ್ಭದಲ್ಲಿ ಹೈನುಗಾರಿಕೆ ರೈತ ಕುಟುಂಬಗಳಿಗೆ ಆರ್ಥಿಕ ಆಸರೆಯಾಗಿದೆ. ರೈತರು ಹಾಲಿನ ಗುಣಮಟ್ಟ ಹಾಗೂ ಶುಚಿತ್ವಕ್ಕೆ ಆದ್ಯತೆ ನೀಡಿ ಉತ್ತಮ ಆದಾಯ ಗಳಿಸಬೇಕು ಎಂದು ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಶಿಬಿರ ಕಚೇರಿ ಉಪವ್ಯವಸ್ಥಾಪಕ ಎಂ.ಅಂಬರೀಶ್ ಸಲಹೆ ನೀಡಿದರು.ತಾಲ್ಲೂಕಿನ ತುಮಟಗೆರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ 2025-262 ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ವೈಜ್ಞಾನಿಕ ಹೈನುಗಾರಿಕೆ ಪದ್ಧತಿ ಅಳವಡಿಸಿಕೊಂಡರೆ ಜಾನುವಾರುಗಳ ಆರೋಗ್ಯ ಕಾಪಾಡುವುದರ ಜತೆಗೆ ಹಾಲಿನ ಉತ್ಪಾದನೆಯನ್ನೂ ಹೆಚ್ಚಿಸಬಹುದು ಎಂದರು.ಹಾಲು ಕರೆಯುವ ಸಂದರ್ಭದಲ್ಲಿ ಸ್ವಚ್ಛತೆ ಕಾಪಾಡುವುದು, ಪೌಷ್ಟಿಕ ಪೌಷ್ಟಿಕ ಮತ್ತು ಗುಣಮಟ್ಟದ ಮೇವು ನೀಡುವುದು ಹಾಗೂಇದರ ಸಹಕಾರ ಜಾನುವಾರುಗಳ ಆರೋಗ್ಯದ ಬಗ್ಗೆ ನಿಯಮಿತವಾಗಿ ಕಾಳಜಿ ವಹಿಸುವುದು ಅತ್ಯಗತ್ಯ. ಗುಣಮಟ್ಟದ ಹಾಲುಪೂರೈಸಿದರೆ ಉತ್ತಮ ದರದ ಜತೆಗೆ ಒಕ್ಕೂಟದಿಂದ ದೊರೆಯುವ ವಿವಿಧ ಪ್ರೋತ್ಸಾ ಹಧನ ಹಾಗೂ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
    user_Vishnu Press
    Vishnu Press
    Local News Reporter ಬಂಗಾರಪೇಟೆ, ಕೋಲಾರ, ಕರ್ನಾಟಕ•
    18 hrs ago
  • ಕಲಬುರಗಿಯಲ್ಲಿ ರಾತ್ರೋರಾತ್ರಿ ಸಿದ್ದರಾಮಯ್ಯ ಪ್ರತಿಮೆ ಸ್ಥಾಪನೆ ಅನುಮತಿ ಇಲ್ಲದ ಪ್ರತಿಮೆ ಪಾಲಿಕೆ ಸಿಬ್ಬಂದಿಯಿಂದ ತೆರವು ಕಲಬುರಗಿಯಲ್ಲಿ ರಾತ್ರೋರಾತ್ರಿ ಸಿದ್ದರಾಮಯ್ಯ ಪ್ರತಿಮೆ ಸ್ಥಾಪನೆ ಅನುಮತಿ ಇಲ್ಲದ ಪ್ರತಿಮೆ ಪಾಲಿಕೆ ಸಿಬ್ಬಂದಿಯಿಂದ ತೆರವು
    1
    ಕಲಬುರಗಿಯಲ್ಲಿ ರಾತ್ರೋರಾತ್ರಿ ಸಿದ್ದರಾಮಯ್ಯ ಪ್ರತಿಮೆ ಸ್ಥಾಪನೆ
ಅನುಮತಿ ಇಲ್ಲದ ಪ್ರತಿಮೆ ಪಾಲಿಕೆ ಸಿಬ್ಬಂದಿಯಿಂದ ತೆರವು
ಕಲಬುರಗಿಯಲ್ಲಿ ರಾತ್ರೋರಾತ್ರಿ ಸಿದ್ದರಾಮಯ್ಯ ಪ್ರತಿಮೆ ಸ್ಥಾಪನೆ
ಅನುಮತಿ ಇಲ್ಲದ ಪ್ರತಿಮೆ ಪಾಲಿಕೆ ಸಿಬ್ಬಂದಿಯಿಂದ ತೆರವು
    user_Veega News Kannada
    Veega News Kannada
    Technical service ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    6 hrs ago
  • ನಿಮ್ಹಾನ್ಸ್ ಉತ್ತರ ಕ್ಯಾಂಪಸ್ ಕಾಮಗಾರಿ ವಿಚಾರವಾಗಿ ಧ್ವನಿ ಎತ್ತಿದ ಮಾಜಿ ಶಾಸಕ ನಂದೀಶ್ ರೆಡ್ಡಿ , ಬೆಂಗಳೂರು ಪೂರ್ವ ಜಿಲ್ಲಾಧ್ಯಕ್ಷ ಡಿಕೆ ಮೋಹನ್ ಬಾಬು ಟಾಂಗ್.!
    1
    ನಿಮ್ಹಾನ್ಸ್ ಉತ್ತರ ಕ್ಯಾಂಪಸ್ ಕಾಮಗಾರಿ ವಿಚಾರವಾಗಿ ಧ್ವನಿ ಎತ್ತಿದ ಮಾಜಿ ಶಾಸಕ ನಂದೀಶ್ ರೆಡ್ಡಿ , ಬೆಂಗಳೂರು ಪೂರ್ವ ಜಿಲ್ಲಾಧ್ಯಕ್ಷ ಡಿಕೆ ಮೋಹನ್ ಬಾಬು ಟಾಂಗ್.!
    user_The Reporter
    The Reporter
    Local News Reporter ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    12 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.