logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕೋಲಾರ–ಚಿಕ್ಕಬಳ್ಳಾಪುರಕ್ಕೆ ನೀರು ತರಲು ಹೋರಾಟ: ಸೀಕಲ್ ರಾಮಚಂದ್ರಗೌಡ. ಕೋಲಾರ–ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳ ರೈತರ ಬದುಕು ಸುಧಾರಿಸಬೇಕಾದರೆ ಈ ಭಾಗಕ್ಕೆ ನೀರು ತರಲು ನಿರಂತರವಾಗಿ ಹೋರಾಟ ನಡೆಸಬೇಕಿದೆ ಎಂದು ಮಣ್ಣಿನ ಮಗ ಪ್ರಶಸ್ತಿ ಪುರಸ್ಕೃತ ಬಿಜೆಪಿ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ  ಸೀಕಲ್ ರಾಮಚಂದ್ರಗೌಡ ಹೇಳಿದರು. ಚಿಕ್ಕಬಳ್ಳಾಪುರ ನಗರದ ವರವಲಯದ ಎಸ್.ಜೆ.ಸಿ.ಐ.ಟಿ. ಕಾಲೇಜು ಸಭಾಂಗಣದಲ್ಲಿ ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಸಂಸ್ಮರಣೋತ್ಸವದ ಅಂಗವಾಗಿ ಆಯೋಜಿಸಿದ್ದ ವಿವಿಧ ಪ್ರಶಸ್ತಿ ಪ್ರದಾನ ಹಾಗೂ ಅಭಿನಂದನಾ ಸಮಾರಂಭದಲ್ಲಿ  ಅವರು ಮಾತನಾಡಿದರು. ತಾನು ರೈತ ಕುಟುಂಬದಿಂದ ಬಂದವನಾಗಿದ್ದು, ಕೃಷಿ ಮಾಡಿಕೊಂಡು ಬದುಕು ಕಟ್ಟಿಕೊಂಡ ನಂತರ ಸುಮಾರು 25 ವರ್ಷಗಳ ಕಾಲ ವ್ಯಾಪಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ಆದರೆ ಸ್ವಂತ ಜಿಲ್ಲೆಗೆ ಮರಳಿ ನೋಡಿದಾಗ ಹಿಂದಿನ ಪರಿಸ್ಥಿತಿಗೂ ಇಂದಿನ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸ ಕಂಡುಬರುತ್ತಿದೆ ಎಂದರು. ಹಿಂದೆ 100–150 ಅಡಿಗಳಲ್ಲಿಯೇ ಬಾವಿಗಳಲ್ಲಿ ನೀರು ದೊರೆಯುತ್ತಿತ್ತು, ಕೆರೆಗಳಲ್ಲಿ ನೀರು ಇರುತ್ತಿತ್ತು. ಉತ್ತಮ ಮಳೆಯಾಗುತ್ತಿತ್ತು. ಆದರೆ ಇಂದು ಕೋಲಾರ–ಚಿಕ್ಕಬಳ್ಳಾಪುರ ಭಾಗದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಹೇಳಿದರು. ಕೃಷ್ಣಾ ನದಿ ನೀರು ಸೇರಿದಂತೆ ವಿವಿಧ ಮೂಲಗಳಿಂದ ನೀರು ತರಲು ಪ್ರಯತ್ನಗಳು ನಡೆಯುತ್ತಿವೆ. ಈ ಭಾಗಕ್ಕೆ ನೀರು ಹರಿದುಬರದಿದ್ದರೆ ರೈತರು ಹಾಗೂ ರೈತರ ಮಕ್ಕಳು ಇಲ್ಲಿ ಬದುಕು ಕಟ್ಟಿಕೊಳ್ಳುವುದು ಕಷ್ಟವಾಗಲಿದೆ. ಹೀಗಾಗಿ ರೈತರ ಪರವಾಗಿ ಧ್ವನಿ ಎತ್ತಿ ನೀರಿಗಾಗಿ ಹೋರಾಟ ನಡೆಸುವುದು ತಮ್ಮ ಪ್ರಮುಖ ಉದ್ದೇಶವಾಗಿದೆ ಎಂದರು. ಸ್ವಗ್ರಾಮ ಸೀಕಲ್‌ನಲ್ಲಿ ತಾವೂ ಕೃಷಿ ಮಾಡುತ್ತಿದ್ದು, ರೈತರ ಸಮಸ್ಯೆಗಳನ್ನು ಹತ್ತಿರದಿಂದ ಅರಿತಿದ್ದೇನೆ. ರೈತರ ಬದುಕು ಹಸನಾಗಬೇಕು ಹಾಗೂ ಈ ಭಾಗದ ಜನರು ಅಭಿವೃದ್ಧಿ ಹೊಂದಬೇಕು ಎಂಬ ಉದ್ದೇಶದಿಂದ ರಾಜಕೀಯ ಕ್ಷೇತ್ರಕ್ಕೂ ಬಂದಿದ್ದೇನೆ ಎಂದು ತಿಳಿಸಿದರು. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದು, ಇದೀಗ ಪಕ್ಷದ ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷರಾಗಿ ಸಂಘಟನೆ ಬಲಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಸಂಘಟಿಸಿ, ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ತರಲು ಅಗತ್ಯವಾದ ಪ್ರಯತ್ನಗಳನ್ನು ನಡೆಸುವುದಾಗಿ ಹೇಳಿದರು. ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ‘ಮಣ್ಣಿನ ಮಗ’ ಪ್ರಶಸ್ತಿ ಪುರಸ್ಕೃತ ಸೀಕಲ್ ರಾಮಚಂದ್ರಗೌಡ ಗೌಡರಿಗೆ ಅಭಿನಂದನಾ ಸಮಾರಂಭ ನಡೆಯಿತು. ಈ ಗೌರವ ರೈತರಿಗಾಗಿ ಇನ್ನಷ್ಟು ಕೆಲಸ ಮಾಡಲು ಪ್ರೇರಣೆ ನೀಡಿದೆ ಎಂದು ಸೀಕಲ್ ರಾಮಚಂದ್ರಗೌಡ ಹೇಳಿದರು. ಕಾರ್ಯಕ್ರಮದಲ್ಲಿ ಯುಪಿಎಸ್‌ಸಿ ಸಾಧಕರಿಗೆ ಸನ್ಮಾನ, ‘ಸ್ಟಾರ್ ಆಫ್ ಕರ್ನಾಟಕ’ ಪ್ರಶಸ್ತಿ ಪ್ರದಾನ ಹಾಗೂ ಪಿಜಿಎಸ್ ಸಾಧಕ ಪುರಸ್ಕಾರ ಸೇರಿದಂತೆ ವಿವಿಧ ಗೌರವ ಕಾರ್ಯಕ್ರಮಗಳು ನಡೆದವು. ಪರಮಪೂಜ್ಯ ಶ್ರೀ ಶ್ರೀ ಶ್ರೀ ನಿರ್ಮಲಾನಂದ ಮಹಾಸ್ವಾಮೀಜಿಯವರ ಕೃಪಾಶೀರ್ವಾದದೊಂದಿಗೆ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳಾನಂದನಾಥ ಸ್ವಾಮೀಜಿ ಹಾಗೂ ಶ್ರೀ ಸೌಮ್ಯಾನಂದ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಡಾ. ಕೆ.ಜೆ. ಪುರುಷೋತ್ತಮ್ ವ್ಯವಸ್ಥಾಪಕ ನಿರ್ದೇಶಕರು, ಜೆ.ಆರ್. ಗ್ರೂಪ್ ಆಫ್ ಕಂಪನೀಸ್,ಮಿಸ್ಟರ್ ಬ್ರೆಂಡನ್ ಕಾಲಿಸ್ಟರ್ ವ್ಯವಸ್ಥಾಪಕ ನಿರ್ದೇಶಕರು, ಟೆರಾನೆಕ್ಸ್ ಮತ್ತು ಒರೆಲಿಯನ್ ಗ್ರೂಪ್ ಆಫ್ ಕಂಪನೀಸ್ ಆಸ್ಟ್ರೇಲಿಯಾ, ಶ್ರೀರಾಮ್ ಶೆಟ್ಟಿ ಪ್ರಮುಖ ಉದ್ಯಮಿಗಳು ಆಸ್ಟ್ರೇಲಿಯಾ,ಮಹೇಶ್ ಗೌಡ ಮಾಜಿ ಅಧ್ಯಕ್ಷರು, ಕರ್ನಾಟಕ ಸಂಘ ಕತಾರ್ ಹಾಗೂ ಗ್ಲೋಬಲ್ ಮೆಂಟರ್, ಒಕ್ಕಲಿಗ ಯುವ ಬ್ರಿಗೇಡ್, ಸಹನಾ ರಮೇಶ್ ಕೌನ್ಸಿಲರ್ ವಿಂಧಮ್ ಸಿಟಿ ಕೌನ್ಸಿಲ್ ಮೆಲ್ಬೋರ್ನ್, ಆಸ್ಟ್ರೇಲಿಯಾ,ಸುರೇಶ್ ಮೋಹನ್ ಗೌರವಾನ್ವಿತ ಕಾನ್ಸುಲ್ ರ್ವಾಂಡಾ ಗಣರಾಜ್ಯ, ಸಂಸ್ಥಾಪಕ ಅಧ್ಯಕ್ಷರು, ಒಕ್ಕಲಿಗ ಯುವ ಬ್ರಿಗೇಡ್, ಹಾಗೂ ಇನ್ನು ಮುಂತಾದವರು ಹಾಜರಿದ್ದರು. ವರದಿ ನಂದಿ ರಾಜೇಶ್ ಶಿಡ್ಲಘಟ್ಟ

3 hrs ago
user_Nandi Rajesh Press reporter
Nandi Rajesh Press reporter
ಚಿಕ್ಕಬಳ್ಳಾಪುರ, ಚಿಕ್ಕಬಳ್ಳಾಪುರ, ಕರ್ನಾಟಕ•

More news from ಕರ್ನಾಟಕ and nearby areas
  • ನಿಮ್ಹಾನ್ಸ್ ಉತ್ತರ ಕ್ಯಾಂಪಸ್ ಕಾಮಗಾರಿ ವಿಚಾರವಾಗಿ ಧ್ವನಿ ಎತ್ತಿದ ಮಾಜಿ ಶಾಸಕ ನಂದೀಶ್ ರೆಡ್ಡಿ , ಬೆಂಗಳೂರು ಪೂರ್ವ ಜಿಲ್ಲಾಧ್ಯಕ್ಷ ಡಿಕೆ ಮೋಹನ್ ಬಾಬು ಟಾಂಗ್.!
    1
    ನಿಮ್ಹಾನ್ಸ್ ಉತ್ತರ ಕ್ಯಾಂಪಸ್ ಕಾಮಗಾರಿ ವಿಚಾರವಾಗಿ ಧ್ವನಿ ಎತ್ತಿದ ಮಾಜಿ ಶಾಸಕ ನಂದೀಶ್ ರೆಡ್ಡಿ , ಬೆಂಗಳೂರು ಪೂರ್ವ ಜಿಲ್ಲಾಧ್ಯಕ್ಷ ಡಿಕೆ ಮೋಹನ್ ಬಾಬು ಟಾಂಗ್.!
    user_The Reporter
    The Reporter
    Local News Reporter ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    12 hrs ago
  • ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿಯಲ್ಲಿ ವಿಶೇಷವಾದ ಹೆಲ್ಮೆಟ್ ಗಣಪತಿ ಮೂರ್ತಿ ವಿಸರ್ಜನೆ ಬೆಂಗಳೂರು:ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿಯಲ್ಲಿ ಇಟ್ಟಿದ್ದ ವಿಶೇಷ ಹೆಲ್ಮೆಟ್ ಗಣಪತಿಯನ್ನ ವಿಸರ್ಜನೆ ಮಾಡಲಾಗಿದೆ.ಇತ್ತಿಚೆಗೆ ರಸ್ತೆ ಅಪಘಾತ ಪ್ರಕರಣಗಳಲ್ಲಿ ಹೆಲ್ಮೆಟ್ ಧರಿಸದೆ ವಾಹನ ಸವಾರರ ಮರಣದ ಪ್ರಮಾಣ ಹೆಚ್ಚಳ ಹಿನ್ನೆಲೆ ವಾಹನ ಸವಾರರಲ್ಲಿ ಜಾಗೃತಿ ಮೂಡಿಸಲು ಹೆಲ್ಮೆಟ್ ಗಣಪತಿ ಯುವಕರು ಕೂರಿಸಿದ್ದರು.ಲಕ್ಕಿ ವಿನಾಯಕ ಗೆಳೆಯರ ಬಳಗದಿಂದ ತಾಯಿ ಗೌರಮ್ಮ ಮಗ ಗಣಪನಿಗೆ ಹೆಲ್ಮೆಟ್ ನೀಡುವ ಮಾದರಿ ಗಣೇಶನ ಕೂರಿಸಿ ಜಾಗೃತಿ ಮೂಡಿಸಲಾಗಿದ್ದು,ವಿಸರ್ಜನೆಗೆ ಮುನ್ನ ವಾಹನ ಸವಾರರು ಹೆಲ್ಮೆಟ್ ಧರಿಸುವಂತೆ ಘೋಷಣೆ ಕೂಗಿ ಯುವಕರು ಗಣೇಶನನ್ನ ವಿಸರ್ಜನೆ ಮಾಡಿದರು.
    1
    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿಯಲ್ಲಿ ವಿಶೇಷವಾದ ಹೆಲ್ಮೆಟ್ ಗಣಪತಿ ಮೂರ್ತಿ ವಿಸರ್ಜನೆ
ಬೆಂಗಳೂರು:ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿಯಲ್ಲಿ ಇಟ್ಟಿದ್ದ ವಿಶೇಷ ಹೆಲ್ಮೆಟ್ ಗಣಪತಿಯನ್ನ ವಿಸರ್ಜನೆ ಮಾಡಲಾಗಿದೆ.ಇತ್ತಿಚೆಗೆ ರಸ್ತೆ ಅಪಘಾತ ಪ್ರಕರಣಗಳಲ್ಲಿ ಹೆಲ್ಮೆಟ್ ಧರಿಸದೆ ವಾಹನ ಸವಾರರ ಮರಣದ ಪ್ರಮಾಣ ಹೆಚ್ಚಳ ಹಿನ್ನೆಲೆ ವಾಹನ ಸವಾರರಲ್ಲಿ ಜಾಗೃತಿ ಮೂಡಿಸಲು ಹೆಲ್ಮೆಟ್ ಗಣಪತಿ ಯುವಕರು ಕೂರಿಸಿದ್ದರು.ಲಕ್ಕಿ ವಿನಾಯಕ ಗೆಳೆಯರ ಬಳಗದಿಂದ ತಾಯಿ ಗೌರಮ್ಮ ಮಗ ಗಣಪನಿಗೆ ಹೆಲ್ಮೆಟ್ ನೀಡುವ ಮಾದರಿ ಗಣೇಶನ ಕೂರಿಸಿ ಜಾಗೃತಿ ಮೂಡಿಸಲಾಗಿದ್ದು,ವಿಸರ್ಜನೆಗೆ ಮುನ್ನ ವಾಹನ ಸವಾರರು ಹೆಲ್ಮೆಟ್ ಧರಿಸುವಂತೆ ಘೋಷಣೆ ಕೂಗಿ ಯುವಕರು ಗಣೇಶನನ್ನ ವಿಸರ್ಜನೆ ಮಾಡಿದರು.
    user_ಶಿವನಿ
    ಶಿವನಿ
    Fruit & Vegetable Exporter ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    13 hrs ago
  • 3 ತಿಂಗಳ ಬಳಿಕ ಕೊರಟಗೆರೆಗೆ ವರುಣನ ದರ್ಶನ: ಅರ್ಧ ಗಂಟೆ ಸುರಿದ ಮಳೆಗೆ ಜನರ ಮಿಶ್ರ ಪ್ರತಿಕ್ರಿಯೆ 3 ತಿಂಗಳ ಬಳಿಕ ಕೊರಟಗೆರೆಗೆ ವರುಣನ ದರ್ಶನ: ಅರ್ಧ ಗಂಟೆ ಸುರಿದ ಮಳೆಗೆ ಜನರ ಮಿಶ್ರ ಪ್ರತಿಕ್ರಿಯೆ *ಕೊರಟಗೆರೆ, ಸೆ.17:* ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನಲ್ಲಿ ಸುಮಾರು ಮೂರು ತಿಂಗಳಿನಿಂದ ಮಳೆ ಇಲ್ಲದೆ ಕಂಗಾಲಾಗಿದ್ದ ಜನರಿಗೆ ಇಂದು ಸಂಜೆ ವರುಣ ದೇವ ಕೊನೆಗೂ ದರ್ಶನ ನೀಡಿದ್ದಾನೆ. ಇಂದು ಸಂಜೆ ಸುಮಾರು ಅರ್ಧ ಗಂಟೆ ಕಾಲ ಸಾಧಾರಣ ಮಳೆ ಸುರಿದಿದ್ದು, ಬಿಸಿಲಿನ ಝಳದಿಂದ ಬಳಲಿದ್ದ ಜನರಿಗೆ ಕೊಂಚ ತಂಪೆರೆದಂತಾಗಿದೆ. ದೀರ್ಘ ಬರದ ನಂತರ ಬಿದ್ದ ಈ ಮಳೆಯನ್ನು ಕೆಲವರು "ಉತ್ತರೆ ಮಳೆ" ಎಂದು ಸಂಭ್ರಮಿಸಿದರು. ಆದರೆ ಬೆಳೆ ಒಣಗಿ ನಷ್ಟ ಅನುಭವಿಸಿರುವ ರೈತರು ಮಾತ್ರ ಮಳೆರಾಯನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. "ಈಗ ಮಳೆ ಬಂದು ಏನು ಪ್ರಯೋಜನ? ಬೆಳೆದಿದ್ದ ಬೆಳೆ ಎಲ್ಲಾ ಒಣಗಿ ಹೋಗಿದೆ. ಸಮಯಕ್ಕೆ ಬಾರದ ಮಳೆಯಿಂದ ರೈತನ ಬದುಕು ಹಾಳಾಗಿದೆ" ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ತಿಂಗಳುಗಳ ನಂತರ ಸುರಿದ ಮಳೆಯಿಂದ ವಾತಾವರಣ ತಂಪಾಗಿದ್ದರೂ, ರೈತರ ಮೊಗದಲ್ಲಿ ಮಾತ್ರ ನಿರೀಕ್ಷಿತ ಖುಷಿ ಕಾಣಲಿಲ್ಲ.
    2
    3 ತಿಂಗಳ ಬಳಿಕ ಕೊರಟಗೆರೆಗೆ ವರುಣನ ದರ್ಶನ: ಅರ್ಧ ಗಂಟೆ ಸುರಿದ ಮಳೆಗೆ ಜನರ ಮಿಶ್ರ ಪ್ರತಿಕ್ರಿಯೆ

3 ತಿಂಗಳ ಬಳಿಕ ಕೊರಟಗೆರೆಗೆ ವರುಣನ ದರ್ಶನ: ಅರ್ಧ ಗಂಟೆ ಸುರಿದ ಮಳೆಗೆ ಜನರ ಮಿಶ್ರ ಪ್ರತಿಕ್ರಿಯೆ
*ಕೊರಟಗೆರೆ, ಸೆ.17:* ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನಲ್ಲಿ ಸುಮಾರು ಮೂರು ತಿಂಗಳಿನಿಂದ ಮಳೆ ಇಲ್ಲದೆ ಕಂಗಾಲಾಗಿದ್ದ ಜನರಿಗೆ ಇಂದು ಸಂಜೆ ವರುಣ ದೇವ ಕೊನೆಗೂ ದರ್ಶನ ನೀಡಿದ್ದಾನೆ.
ಇಂದು ಸಂಜೆ ಸುಮಾರು ಅರ್ಧ ಗಂಟೆ ಕಾಲ ಸಾಧಾರಣ ಮಳೆ ಸುರಿದಿದ್ದು, ಬಿಸಿಲಿನ ಝಳದಿಂದ ಬಳಲಿದ್ದ ಜನರಿಗೆ ಕೊಂಚ ತಂಪೆರೆದಂತಾಗಿದೆ. ದೀರ್ಘ ಬರದ ನಂತರ ಬಿದ್ದ ಈ ಮಳೆಯನ್ನು ಕೆಲವರು "ಉತ್ತರೆ ಮಳೆ" ಎಂದು ಸಂಭ್ರಮಿಸಿದರು.
ಆದರೆ ಬೆಳೆ ಒಣಗಿ ನಷ್ಟ ಅನುಭವಿಸಿರುವ ರೈತರು ಮಾತ್ರ ಮಳೆರಾಯನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. "ಈಗ ಮಳೆ ಬಂದು ಏನು ಪ್ರಯೋಜನ? ಬೆಳೆದಿದ್ದ ಬೆಳೆ ಎಲ್ಲಾ ಒಣಗಿ ಹೋಗಿದೆ. ಸಮಯಕ್ಕೆ ಬಾರದ ಮಳೆಯಿಂದ ರೈತನ ಬದುಕು ಹಾಳಾಗಿದೆ" ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ತಿಂಗಳುಗಳ ನಂತರ ಸುರಿದ ಮಳೆಯಿಂದ ವಾತಾವರಣ ತಂಪಾಗಿದ್ದರೂ, ರೈತರ ಮೊಗದಲ್ಲಿ ಮಾತ್ರ ನಿರೀಕ್ಷಿತ ಖುಷಿ ಕಾಣಲಿಲ್ಲ.
    user_ವಿಜಯ್ ಶಂಕರ್
    ವಿಜಯ್ ಶಂಕರ್
    Local News Reporter ಕೊರಟಗೆರೆ, ತುಮಕೂರು, ಕರ್ನಾಟಕ•
    6 hrs ago
  • ಕೊರಟಗೆರೆ ತಾಲೂಕಿನ ತುಮಕೂರು ಜಿಲ್ಲೆ ನರಸಯ್ಯನಪಾಳ್ಯ ಕುರುಕ್ಷೇತ್ರ ನಾಟಕ
    1
    ಕೊರಟಗೆರೆ ತಾಲೂಕಿನ ತುಮಕೂರು ಜಿಲ್ಲೆ ನರಸಯ್ಯನಪಾಳ್ಯ ಕುರುಕ್ಷೇತ್ರ ನಾಟಕ
    user_Mutthuraj Raj
    Mutthuraj Raj
    Electrician ಕೊರಟಗೆರೆ, ತುಮಕೂರು, ಕರ್ನಾಟಕ•
    8 hrs ago
  • ರಂಗಮಂದಿರದಲ್ಲಿ ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮ. ಕೋಲಾರ : ನಗರದ ರಂಗಮಂದಿರದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಗವಾನ್ ಶ್ರೀ ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪ ಮಾಲಾರ್ಪಣೆ ಮಾಡಿ ವಿಶೇಷ ಪೂಜೆ ಸಲ್ಲಿಸಿ ಸಿಹಿ ನೀಡುವ ಮುಖಾಂತರ ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಆಚರಣೆ ಮಾಡಿದರು. ಕಾರ್ಯಕ್ರಮ ಉದ್ದೇಶಿಸಿ ಸಮುದಾಯದ ಮುಖಂಡರು ಮಾತನಾಡಿ ಭಗವಾನ್ ಶ್ರೀ ವಿಶ್ವಕರ್ಮರನ್ನು ಹಿಂದೂ ಪರಂಪರೆಯಲ್ಲಿ ದೇವತೆಗಳ ದಿವ್ಯ ಶಿಲ್ಪಿ ಮತ್ತು ನಿರ್ಮಾತೃ ಎಂದು ಪೂಜಿಸಲಾಗುತ್ತದೆ. ಶಿಲ್ಪಕಲೆ, ವಾಸ್ತುಶಿಲ್ಪ, ಕರಕುಶಲತೆ ಹಾಗೂ ನಿರ್ಮಾಣ ಕೌಶಲ್ಯದ ಪ್ರತೀಕವಾಗಿ ವಿಶ್ವಕರ್ಮರನ್ನು ಗೌರವಿಸಲಾಗುತ್ತದೆ. ಪ್ರತಿ ವರ್ಷ ಸೆಪ್ಟೆಂಬರ್ 17ರಂದು ವಿಶ್ವಕರ್ಮ ಜಯಂತಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಬಡಗಿಗಳು, ಕಮ್ಮಾರರು, ಅಕ್ಕಸಾಲಿಗರು, ಕುಂಬಾರರು, ಶಿಲ್ಪಿಗಳು ಸೇರಿದಂತೆ ವಿವಿಧ ಸಾಂಪ್ರದಾಯಿಕ ಕುಶಲಕರ್ಮಿಗಳು ತಮ್ಮ ಉಪಕರಣಗಳು ಮತ್ತು ವೃತ್ತಿ ಸಾಧನಗಳಿಗೆ ಪೂಜೆ ಸಲ್ಲಿಸಿ ಭಗವಾನ್ ವಿಶ್ವಕರ್ಮರನ್ನು ಸ್ಮರಿಸುತ್ತಾರೆ. ವಿಶ್ವಕರ್ಮ ಜಯಂತಿಯು ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ, ಕೈಚಳಕ, ಕೌಶಲ್ಯ ಮತ್ತು ಪರಿಶ್ರಮದಿಂದ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವ ಕಾರ್ಮಿಕರು ಹಾಗೂ ಕುಶಲಕರ್ಮಿಗಳಿಗೆ ಗೌರವ ಸಲ್ಲಿಸುವ ದಿನವಾಗಿಯೂ ಪರಿಗಣಿಸಲಾಗುತ್ತದೆ. “ಕೌಶಲ್ಯವೇ ಶಕ್ತಿ, ಪರಿಶ್ರಮವೇ ಪ್ರಗತಿಯ ದಾರಿ” ಎಂಬ ಸಂದೇಶದೊಂದಿಗೆ ವಿಶ್ವಕರ್ಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ ಎಂದರು. ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಗೌರವಧನ ನೀಡಿದರು. ಈ ಸಂದರ್ಭದಲ್ಲಿ ಪ್ರಭಾಕಾರ್ ಚಾರಿ, ಪುರುಷೋತ್ತಮ್ ಚಾರಿ, ಜಗಧೀಶ್ವರ ಚಾರಿ, ಗೋಪಿಕೃಷ್ಣ, ಮುರಳಿ, ಸೋಮಶೇಖರ್ ಚಾರಿ, ಮಂಜುನಾಥ್ ಚಾರಿ, ನಗರತ್ನಮ್ಮ, ಮುರಳಿ ಮೋಹನ್, ಹರೀಶ್, ಸುಬ್ರಮಣ್ಯ ಚಾರಿ, ಚಲಪತಿ, ಸರ್ವಜ್ಞ ಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಲಕ್ಷ್ಮಿ ಸೇರಿದಂತೆ ಸಮುದಾಯದವರು ಇತರರು ಇದ್ದರು. ರಂಗಮಂದಿರದಲ್ಲಿ ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮ. ಕೋಲಾರ : ನಗರದ ರಂಗಮಂದಿರದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಗವಾನ್ ಶ್ರೀ ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪ ಮಾಲಾರ್ಪಣೆ ಮಾಡಿ ವಿಶೇಷ ಪೂಜೆ ಸಲ್ಲಿಸಿ ಸಿಹಿ ನೀಡುವ ಮುಖಾಂತರ ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಆಚರಣೆ ಮಾಡಿದರು. ಕಾರ್ಯಕ್ರಮ ಉದ್ದೇಶಿಸಿ ಸಮುದಾಯದ ಮುಖಂಡರು ಮಾತನಾಡಿ ಭಗವಾನ್ ಶ್ರೀ ವಿಶ್ವಕರ್ಮರನ್ನು ಹಿಂದೂ ಪರಂಪರೆಯಲ್ಲಿ ದೇವತೆಗಳ ದಿವ್ಯ ಶಿಲ್ಪಿ ಮತ್ತು ನಿರ್ಮಾತೃ ಎಂದು ಪೂಜಿಸಲಾಗುತ್ತದೆ. ಶಿಲ್ಪಕಲೆ, ವಾಸ್ತುಶಿಲ್ಪ, ಕರಕುಶಲತೆ ಹಾಗೂ ನಿರ್ಮಾಣ ಕೌಶಲ್ಯದ ಪ್ರತೀಕವಾಗಿ ವಿಶ್ವಕರ್ಮರನ್ನು ಗೌರವಿಸಲಾಗುತ್ತದೆ. ಪ್ರತಿ ವರ್ಷ ಸೆಪ್ಟೆಂಬರ್ 17ರಂದು ವಿಶ್ವಕರ್ಮ ಜಯಂತಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಬಡಗಿಗಳು, ಕಮ್ಮಾರರು, ಅಕ್ಕಸಾಲಿಗರು, ಕುಂಬಾರರು, ಶಿಲ್ಪಿಗಳು ಸೇರಿದಂತೆ ವಿವಿಧ ಸಾಂಪ್ರದಾಯಿಕ ಕುಶಲಕರ್ಮಿಗಳು ತಮ್ಮ ಉಪಕರಣಗಳು ಮತ್ತು ವೃತ್ತಿ ಸಾಧನಗಳಿಗೆ ಪೂಜೆ ಸಲ್ಲಿಸಿ ಭಗವಾನ್ ವಿಶ್ವಕರ್ಮರನ್ನು ಸ್ಮರಿಸುತ್ತಾರೆ. ವಿಶ್ವಕರ್ಮ ಜಯಂತಿಯು ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ, ಕೈಚಳಕ, ಕೌಶಲ್ಯ ಮತ್ತು ಪರಿಶ್ರಮದಿಂದ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವ ಕಾರ್ಮಿಕರು ಹಾಗೂ ಕುಶಲಕರ್ಮಿಗಳಿಗೆ ಗೌರವ ಸಲ್ಲಿಸುವ ದಿನವಾಗಿಯೂ ಪರಿಗಣಿಸಲಾಗುತ್ತದೆ. “ಕೌಶಲ್ಯವೇ ಶಕ್ತಿ, ಪರಿಶ್ರಮವೇ ಪ್ರಗತಿಯ ದಾರಿ” ಎಂಬ ಸಂದೇಶದೊಂದಿಗೆ ವಿಶ್ವಕರ್ಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ ಎಂದರು. ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಗೌರವಧನ ನೀಡಿದರು. ಈ ಸಂದರ್ಭದಲ್ಲಿ ಪ್ರಭಾಕಾರ್ ಚಾರಿ, ಪುರುಷೋತ್ತಮ್ ಚಾರಿ, ಜಗಧೀಶ್ವರ ಚಾರಿ, ಗೋಪಿಕೃಷ್ಣ, ಮುರಳಿ, ಸೋಮಶೇಖರ್ ಚಾರಿ, ಮಂಜುನಾಥ್ ಚಾರಿ, ನಗರತ್ನಮ್ಮ, ಮುರಳಿ ಮೋಹನ್, ಹರೀಶ್, ಸುಬ್ರಮಣ್ಯ ಚಾರಿ, ಚಲಪತಿ, ಸರ್ವಜ್ಞ ಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಲಕ್ಷ್ಮಿ ಸೇರಿದಂತೆ ಸಮುದಾಯದವರು ಇತರರು ಇದ್ದರು.
    1
    ರಂಗಮಂದಿರದಲ್ಲಿ ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮ.

ಕೋಲಾರ : ನಗರದ ರಂಗಮಂದಿರದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಗವಾನ್ ಶ್ರೀ ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪ ಮಾಲಾರ್ಪಣೆ ಮಾಡಿ ವಿಶೇಷ ಪೂಜೆ ಸಲ್ಲಿಸಿ ಸಿಹಿ ನೀಡುವ ಮುಖಾಂತರ ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಆಚರಣೆ ಮಾಡಿದರು.

ಕಾರ್ಯಕ್ರಮ ಉದ್ದೇಶಿಸಿ ಸಮುದಾಯದ ಮುಖಂಡರು ಮಾತನಾಡಿ ಭಗವಾನ್ ಶ್ರೀ ವಿಶ್ವಕರ್ಮರನ್ನು ಹಿಂದೂ ಪರಂಪರೆಯಲ್ಲಿ ದೇವತೆಗಳ ದಿವ್ಯ ಶಿಲ್ಪಿ ಮತ್ತು ನಿರ್ಮಾತೃ ಎಂದು ಪೂಜಿಸಲಾಗುತ್ತದೆ. ಶಿಲ್ಪಕಲೆ, ವಾಸ್ತುಶಿಲ್ಪ, ಕರಕುಶಲತೆ ಹಾಗೂ ನಿರ್ಮಾಣ ಕೌಶಲ್ಯದ ಪ್ರತೀಕವಾಗಿ ವಿಶ್ವಕರ್ಮರನ್ನು ಗೌರವಿಸಲಾಗುತ್ತದೆ. 
ಪ್ರತಿ ವರ್ಷ ಸೆಪ್ಟೆಂಬರ್ 17ರಂದು ವಿಶ್ವಕರ್ಮ ಜಯಂತಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಬಡಗಿಗಳು, ಕಮ್ಮಾರರು, ಅಕ್ಕಸಾಲಿಗರು, ಕುಂಬಾರರು, ಶಿಲ್ಪಿಗಳು ಸೇರಿದಂತೆ ವಿವಿಧ ಸಾಂಪ್ರದಾಯಿಕ ಕುಶಲಕರ್ಮಿಗಳು ತಮ್ಮ ಉಪಕರಣಗಳು ಮತ್ತು ವೃತ್ತಿ ಸಾಧನಗಳಿಗೆ ಪೂಜೆ ಸಲ್ಲಿಸಿ ಭಗವಾನ್ ವಿಶ್ವಕರ್ಮರನ್ನು ಸ್ಮರಿಸುತ್ತಾರೆ. 

ವಿಶ್ವಕರ್ಮ ಜಯಂತಿಯು ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ, ಕೈಚಳಕ, ಕೌಶಲ್ಯ ಮತ್ತು ಪರಿಶ್ರಮದಿಂದ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವ ಕಾರ್ಮಿಕರು ಹಾಗೂ ಕುಶಲಕರ್ಮಿಗಳಿಗೆ ಗೌರವ ಸಲ್ಲಿಸುವ ದಿನವಾಗಿಯೂ ಪರಿಗಣಿಸಲಾಗುತ್ತದೆ. 
“ಕೌಶಲ್ಯವೇ ಶಕ್ತಿ, ಪರಿಶ್ರಮವೇ ಪ್ರಗತಿಯ ದಾರಿ” ಎಂಬ ಸಂದೇಶದೊಂದಿಗೆ ವಿಶ್ವಕರ್ಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ ಎಂದರು.

ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಗೌರವಧನ ನೀಡಿದರು.

ಈ ಸಂದರ್ಭದಲ್ಲಿ ಪ್ರಭಾಕಾರ್ ಚಾರಿ, ಪುರುಷೋತ್ತಮ್ ಚಾರಿ, ಜಗಧೀಶ್ವರ ಚಾರಿ, ಗೋಪಿಕೃಷ್ಣ, ಮುರಳಿ, ಸೋಮಶೇಖರ್ ಚಾರಿ, ಮಂಜುನಾಥ್ ಚಾರಿ, ನಗರತ್ನಮ್ಮ, ಮುರಳಿ ಮೋಹನ್, ಹರೀಶ್, ಸುಬ್ರಮಣ್ಯ ಚಾರಿ, ಚಲಪತಿ, ಸರ್ವಜ್ಞ ಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಲಕ್ಷ್ಮಿ ಸೇರಿದಂತೆ ಸಮುದಾಯದವರು ಇತರರು ಇದ್ದರು.

    user_Kg. shivakumar
    Kg. shivakumar
    Local News Reporter ಕೋಲಾರ, ಕೋಲಾರ, ಕರ್ನಾಟಕ•
    11 hrs ago
  • * ಜಾಲಪ್ಪ ಆಸ್ಪತ್ರೆಯ ಕ್ಯಾಂಪಸ್ ನಲ್ಲಿ ಎಸ್.ಡಿ.ಯು.ಎಂ.ಸಿ ವಿನಾಯಕ ಮಕ್ಕಳ ಬಳಗದಿಂದ ಐದು ದಿನಗಳ ಗಣೇಶ ಹಬ್ಬ ಆಚರಣೆ * ಕೋಲಾರ : ನಗರ ಹೊರವಲಯದ ಟಮಕ ಬಳಿಯ ಆರ್ ಎಲ್ ಜಾಲಪ್ಪ ಆಸ್ಪತ್ರೆಯ ಕ್ಯಾಂಪಸ್ ನಲ್ಲಿ ಕಳೆದ 15 ವರ್ಷಗಳಿಂದ ಎಸ್.ಡಿ.ಯು.ಎಂ.ಸಿ. ವಿನಾಯಕ ಮಕ್ಕಳ ಬಳಗ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾ ಬರುತ್ತಿದೆ. ಕ್ಯಾಂಪಸ್ ನ ಕಾಂತರಾಜು ರವರು ಮಾತನಾಡಿ ಒಂದು ಅಡಿ ಗಣೇಶ ವಿಗ್ರಹ ಇಡುವ ಮೂಲಕ ಪ್ರಾರಂಭವಾದ ಗಣೇಶ ಹಬ್ಬದ ಆಚರಣೆ ಈ ಬಾರಿಯೂ ಮುಂದುವರೆದಿದ್ದು ಈ ಬಾರಿ 10 ಅಡಿಗಳ ಗಣೇಶ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ ಐದು ದಿನಗಳ ಕಾಲ ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಕ್ಯಾಂಪಸ್ ನಲ್ಲಿರುವ ಮಕ್ಕಳೊಂದಿಗೆ   ಕುಟುಂಬದ ಸದಸ್ಯರುಗಳು ಸೇರಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಾ ಬರುತ್ತಿದ್ದು,ಪ್ರತಿದಿನ ಮಕ್ಕಳಿಗೆ ಮಕ್ಕಳಿಂದಲೇ ಮನರಂಜನೆ ಕಾರ್ಯಕ್ರಮಗಳನ್ನು ಹಾಗೂ ಕ್ರೀಡೆಗಳನ್ನು ಐದೂ ದಿನ ನಡೆಸಲಾಗುವುದು ಹಾಗೂ ಪ್ರತಿದಿನ ಪ್ರಸಾದ ಮತ್ತು ಅನ್ನಸಂತರ್ಪಣೆ ಏರ್ಪಡಿಸಲಾಗುತ್ತದೆ ಎಂದು ತಿಳಿಸಿದರು. ಮಕ್ಕಳಿಗೆ ನಮ್ಮ ಸಂಸ್ಕೃತಿ ಮತ್ತು ಆಚಾರ ವಿಚಾರಗಳನ್ನು ಚಿಕ್ಕಂದಿನಿಂದಲೇ ತಿಳಿಸುವ ಕೆಲಸ ಮಾಡುತ್ತಾ ಬರುತ್ತಿದ್ದೇವೆ ಮುಂದಿನ ವರ್ಷಗಳಲ್ಲಿ ಮಕ್ಕಳೇ ನಮ್ಮ ಧರ್ಮ ಉಳಿಸಿ ಬೆಳಸಲಿ ಹಾಗೂ ಗಣೇಶೋತ್ಸವನ್ನು ಇನ್ನೂ ಅದ್ದೂರಿಯಾಗಿ ಆಚರಣೆ ಮಾಡುವಂತಾಗಲಿ ಎಂದು ಆಶಿಸಿದರು. ಶುಕ್ರವಾರ ಸಂಜೆ ಗಣೇಶನ ವಿಸರ್ಜನೆ ಕಾರ್ಯಕ್ರಮ ಇದ್ದು ಅವತ್ತು ಅದ್ದೂರಿಯಾಗಿ ಮೆರವಣಿಗೆ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು. ಈ ಸಂಧರ್ಭದಲ್ಲಿ ಮಹಿಮಾ ಕೆಲ್,ರಮೇಶ್ ಕೆಲ್,ಹೀಮಂತ್, ಹೀತಾ,ಸಂಜಯ್,ಸುಮತಿ, ಯಶಸ್ಸು ಆರ್,ಪುನೀತ್,ಚೇತನ್, ಪ್ರಜ್ವಲ್ ,ರಾಜೇಂದ್ರ ಕುಮಾರ್, ತಲೀಶ್,ಚಿರಾಗ್,ಹರಿಶಿತಾ, ಹಾಗೂ ಕ್ಯಾಂಪಸ್ ನ ಮಕ್ಕಳು ಉಪಸ್ಥಿತರಿದ್ದರು.
    2
    * ಜಾಲಪ್ಪ ಆಸ್ಪತ್ರೆಯ ಕ್ಯಾಂಪಸ್ ನಲ್ಲಿ ಎಸ್.ಡಿ.ಯು.ಎಂ.ಸಿ ವಿನಾಯಕ ಮಕ್ಕಳ ಬಳಗದಿಂದ ಐದು ದಿನಗಳ ಗಣೇಶ ಹಬ್ಬ ಆಚರಣೆ *

ಕೋಲಾರ : ನಗರ ಹೊರವಲಯದ ಟಮಕ ಬಳಿಯ ಆರ್ ಎಲ್ ಜಾಲಪ್ಪ ಆಸ್ಪತ್ರೆಯ ಕ್ಯಾಂಪಸ್ ನಲ್ಲಿ ಕಳೆದ 15 ವರ್ಷಗಳಿಂದ ಎಸ್.ಡಿ.ಯು.ಎಂ.ಸಿ. ವಿನಾಯಕ ಮಕ್ಕಳ ಬಳಗ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾ ಬರುತ್ತಿದೆ.
ಕ್ಯಾಂಪಸ್ ನ ಕಾಂತರಾಜು ರವರು ಮಾತನಾಡಿ ಒಂದು ಅಡಿ ಗಣೇಶ ವಿಗ್ರಹ ಇಡುವ ಮೂಲಕ ಪ್ರಾರಂಭವಾದ ಗಣೇಶ ಹಬ್ಬದ ಆಚರಣೆ ಈ ಬಾರಿಯೂ ಮುಂದುವರೆದಿದ್ದು ಈ ಬಾರಿ 10 ಅಡಿಗಳ ಗಣೇಶ ವಿಗ್ರಹವನ್ನು ಪ್ರತಿಷ್ಠಾಪನೆ
ಮಾಡಿ ಐದು ದಿನಗಳ ಕಾಲ ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಕ್ಯಾಂಪಸ್ ನಲ್ಲಿರುವ ಮಕ್ಕಳೊಂದಿಗೆ  
ಕುಟುಂಬದ ಸದಸ್ಯರುಗಳು ಸೇರಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ
ಮಾಡುತ್ತಾ ಬರುತ್ತಿದ್ದು,ಪ್ರತಿದಿನ ಮಕ್ಕಳಿಗೆ
ಮಕ್ಕಳಿಂದಲೇ ಮನರಂಜನೆ ಕಾರ್ಯಕ್ರಮಗಳನ್ನು ಹಾಗೂ ಕ್ರೀಡೆಗಳನ್ನು ಐದೂ ದಿನ ನಡೆಸಲಾಗುವುದು ಹಾಗೂ ಪ್ರತಿದಿನ ಪ್ರಸಾದ ಮತ್ತು ಅನ್ನಸಂತರ್ಪಣೆ ಏರ್ಪಡಿಸಲಾಗುತ್ತದೆ
ಎಂದು ತಿಳಿಸಿದರು.
ಮಕ್ಕಳಿಗೆ ನಮ್ಮ ಸಂಸ್ಕೃತಿ ಮತ್ತು ಆಚಾರ ವಿಚಾರಗಳನ್ನು ಚಿಕ್ಕಂದಿನಿಂದಲೇ ತಿಳಿಸುವ ಕೆಲಸ ಮಾಡುತ್ತಾ ಬರುತ್ತಿದ್ದೇವೆ ಮುಂದಿನ ವರ್ಷಗಳಲ್ಲಿ ಮಕ್ಕಳೇ ನಮ್ಮ ಧರ್ಮ ಉಳಿಸಿ ಬೆಳಸಲಿ ಹಾಗೂ ಗಣೇಶೋತ್ಸವನ್ನು ಇನ್ನೂ
ಅದ್ದೂರಿಯಾಗಿ ಆಚರಣೆ ಮಾಡುವಂತಾಗಲಿ ಎಂದು ಆಶಿಸಿದರು.
ಶುಕ್ರವಾರ ಸಂಜೆ ಗಣೇಶನ ವಿಸರ್ಜನೆ ಕಾರ್ಯಕ್ರಮ ಇದ್ದು ಅವತ್ತು ಅದ್ದೂರಿಯಾಗಿ ಮೆರವಣಿಗೆ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಮಹಿಮಾ ಕೆಲ್,ರಮೇಶ್ ಕೆಲ್,ಹೀಮಂತ್,
ಹೀತಾ,ಸಂಜಯ್,ಸುಮತಿ,
ಯಶಸ್ಸು ಆರ್,ಪುನೀತ್,ಚೇತನ್,
ಪ್ರಜ್ವಲ್ ,ರಾಜೇಂದ್ರ ಕುಮಾರ್,
ತಲೀಶ್,ಚಿರಾಗ್,ಹರಿಶಿತಾ,
ಹಾಗೂ ಕ್ಯಾಂಪಸ್ ನ ಮಕ್ಕಳು ಉಪಸ್ಥಿತರಿದ್ದರು.
    user_ಎಸ್.ಎನ್.ಪ್ರಕಾಶ್
    ಎಸ್.ಎನ್.ಪ್ರಕಾಶ್
    ಕೋಲಾರ, ಕೋಲಾರ, ಕರ್ನಾಟಕ•
    17 hrs ago
  • ಕಲಬುರಗಿಯಲ್ಲಿ ರಾತ್ರೋರಾತ್ರಿ ಸಿದ್ದರಾಮಯ್ಯ ಪ್ರತಿಮೆ ಸ್ಥಾಪನೆ ಅನುಮತಿ ಇಲ್ಲದ ಪ್ರತಿಮೆ ಪಾಲಿಕೆ ಸಿಬ್ಬಂದಿಯಿಂದ ತೆರವು ಕಲಬುರಗಿಯಲ್ಲಿ ರಾತ್ರೋರಾತ್ರಿ ಸಿದ್ದರಾಮಯ್ಯ ಪ್ರತಿಮೆ ಸ್ಥಾಪನೆ ಅನುಮತಿ ಇಲ್ಲದ ಪ್ರತಿಮೆ ಪಾಲಿಕೆ ಸಿಬ್ಬಂದಿಯಿಂದ ತೆರವು
    1
    ಕಲಬುರಗಿಯಲ್ಲಿ ರಾತ್ರೋರಾತ್ರಿ ಸಿದ್ದರಾಮಯ್ಯ ಪ್ರತಿಮೆ ಸ್ಥಾಪನೆ
ಅನುಮತಿ ಇಲ್ಲದ ಪ್ರತಿಮೆ ಪಾಲಿಕೆ ಸಿಬ್ಬಂದಿಯಿಂದ ತೆರವು
ಕಲಬುರಗಿಯಲ್ಲಿ ರಾತ್ರೋರಾತ್ರಿ ಸಿದ್ದರಾಮಯ್ಯ ಪ್ರತಿಮೆ ಸ್ಥಾಪನೆ
ಅನುಮತಿ ಇಲ್ಲದ ಪ್ರತಿಮೆ ಪಾಲಿಕೆ ಸಿಬ್ಬಂದಿಯಿಂದ ತೆರವು
    user_Veega News Kannada
    Veega News Kannada
    Technical service ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    6 hrs ago
  • ಮುಂದಿನ ಚುನಾವಣೆಗೆ ಬಿಜೆಪಿಯಿಂದ ಕೆಆರ್ ಪುರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರಾ ಎಂಬ ಚರ್ಚೆ ವಿಚಾರ ಮಾಜಿ ಶಾಸಕ ನಂದೀಶ್ ರೆಡ್ಡಿ ಏನ್ ಹೇಳಿದ್ರು ಗೊತ್ತಾ!
    1
    ಮುಂದಿನ ಚುನಾವಣೆಗೆ ಬಿಜೆಪಿಯಿಂದ ಕೆಆರ್ ಪುರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರಾ ಎಂಬ ಚರ್ಚೆ ವಿಚಾರ ಮಾಜಿ ಶಾಸಕ ನಂದೀಶ್ ರೆಡ್ಡಿ ಏನ್ ಹೇಳಿದ್ರು ಗೊತ್ತಾ!
    user_The Reporter
    The Reporter
    Local News Reporter ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    12 hrs ago
  • ಮಾಜಿ ಕೈ ಶಾಸಕ ವೆಂಕಟರಮಣಯ್ಯ ಮತ್ತು ಹಾಲಿ ಬಿಜೆಪಿ ಶಾಸಕ ಧೀರಜ್ ಮುನಿರಾಜು ಟಾಕ್ ಫೈಟ್ ಬೆಂಗಳೂರು:ಮಾಜಿ ಕೈ ಶಾಸಕ ವೆಂಕಟರಮಣಯ್ಯ ಮತ್ತು ಹಾಲಿ ಬಿಜೆಪಿ ಶಾಸಕ ಧೀರಜ್ ಮುನಿರಾಜು ನಡುವೆ ದೊಡ್ಡಬಳ್ಳಾಪುರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಟಾಕ್ ವಾರ್ ನಡೆದಿದೆ.ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಭಾಷಣ ಮಾಡುವ ವಿಚಾರವಾಗಿ ಜಟಾಪಟಿ ನಡೆದಿದೆ.ನಾನು ಜನರಿಂದ ಆಯ್ಕೆಯಾದ ಪ್ರತಿನಿಧಿ, ನಾನು ಹೇಳಿದ ಹಾಗೆ ಕಾರ್ಯಕ್ರಮ ಆಗಬೇಕು,ಮೊದಲು ಶಾಸಕನಾಗಿ ನಾನು ಮಾತನಾಡಬೇಕು,ನೀವು ಹೇಳಿದ ಹಾಗೆ ಸಭೆ ಮಾಡಲು ಆಗೋದಿಲ್ಲ ಎಂದು ಶಾಸಕ ಧೀರಜ್ ಕಿಡಿಕಾರಿದ್ದಾರೆ.ಪ್ರೋಟೋಕಾಲ್ ಪ್ರಕಾರ ಅಧ್ಯಕ್ಷರ ಭಾಷಣ ಕೊನೆಯದಾಗಿರುತ್ತದೆ,ಎಲ್ಲಾ ಸ್ಥಳೀಯ ಜನಪ್ರತಿನಿಧಿಗಳು, ಪ್ರಾಧಿಕಾರದ ಅಧ್ಯಕ್ಷರು ಮೊದಲು ಮಾತನಾಡಬೇಕು,ನಂತರ ಶಾಸಕರಾದ ನೀವು ಕೊನೆಯದಾಗಿ ಅಧ್ಯಕ್ಷರ ಭಾಷಣ ಮಾಡಬೇಕು,ಹಾಗಾಗಿ ಕೊನೆ ಭಾಷಣ ನೀವು ಮಾಡಬೇಕು ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.ಇದರಿಂದ ಕೋಪಗೊಂಡ ಬಿಜೆಪಿ ಶಾಸಕ ಧೀರಜ್ ಮುನಿರಾಜು ಕೈ ನಾಯಕರ ಮೇಲೆ ಕಿಡಿಕಾರಿದ್ದಾರೆ.
    1
    ಮಾಜಿ ಕೈ ಶಾಸಕ ವೆಂಕಟರಮಣಯ್ಯ ಮತ್ತು ಹಾಲಿ ಬಿಜೆಪಿ ಶಾಸಕ ಧೀರಜ್ ಮುನಿರಾಜು ಟಾಕ್ ಫೈಟ್
ಬೆಂಗಳೂರು:ಮಾಜಿ ಕೈ ಶಾಸಕ ವೆಂಕಟರಮಣಯ್ಯ ಮತ್ತು ಹಾಲಿ ಬಿಜೆಪಿ ಶಾಸಕ ಧೀರಜ್ ಮುನಿರಾಜು ನಡುವೆ ದೊಡ್ಡಬಳ್ಳಾಪುರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಟಾಕ್ ವಾರ್ ನಡೆದಿದೆ.ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಭಾಷಣ ಮಾಡುವ ವಿಚಾರವಾಗಿ ಜಟಾಪಟಿ ನಡೆದಿದೆ.ನಾನು ಜನರಿಂದ ಆಯ್ಕೆಯಾದ ಪ್ರತಿನಿಧಿ, ನಾನು ಹೇಳಿದ ಹಾಗೆ ಕಾರ್ಯಕ್ರಮ ಆಗಬೇಕು,ಮೊದಲು ಶಾಸಕನಾಗಿ ನಾನು ಮಾತನಾಡಬೇಕು,ನೀವು ಹೇಳಿದ ಹಾಗೆ ಸಭೆ ಮಾಡಲು ಆಗೋದಿಲ್ಲ ಎಂದು ಶಾಸಕ ಧೀರಜ್ ಕಿಡಿಕಾರಿದ್ದಾರೆ.ಪ್ರೋಟೋಕಾಲ್ ಪ್ರಕಾರ ಅಧ್ಯಕ್ಷರ ಭಾಷಣ ಕೊನೆಯದಾಗಿರುತ್ತದೆ,ಎಲ್ಲಾ ಸ್ಥಳೀಯ ಜನಪ್ರತಿನಿಧಿಗಳು, ಪ್ರಾಧಿಕಾರದ ಅಧ್ಯಕ್ಷರು ಮೊದಲು ಮಾತನಾಡಬೇಕು,ನಂತರ ಶಾಸಕರಾದ ನೀವು ಕೊನೆಯದಾಗಿ ಅಧ್ಯಕ್ಷರ ಭಾಷಣ ಮಾಡಬೇಕು,ಹಾಗಾಗಿ ಕೊನೆ ಭಾಷಣ ನೀವು ಮಾಡಬೇಕು ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.ಇದರಿಂದ ಕೋಪಗೊಂಡ ಬಿಜೆಪಿ ಶಾಸಕ ಧೀರಜ್ ಮುನಿರಾಜು ಕೈ ನಾಯಕರ ಮೇಲೆ ಕಿಡಿಕಾರಿದ್ದಾರೆ.
    user_ಶಿವನಿ
    ಶಿವನಿ
    Fruit & Vegetable Exporter ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    15 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.