Shuru
Apke Nagar Ki App…
ಹುಳಿಯಾರಿನ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ರವೀಂದ್ರ ಚಾರ್ ಮಾತನಾಡಿದರು
Huliyarkiran
ಹುಳಿಯಾರಿನ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ರವೀಂದ್ರ ಚಾರ್ ಮಾತನಾಡಿದರು
More news from ಕರ್ನಾಟಕ and nearby areas
- ಹುಳಿಯಾರಿನ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ರವೀಂದ್ರ ಚಾರ್ ಮಾತನಾಡಿದರು1
- ಜಾತ್ಯಾತೀತವಾಗಿ ಕೂಡಿ ಬಾಳಿದರೆ ಸ್ವರ್ಗ ಸುಖ ಈ ವಿಡಿಯೋದಲ್ಲಿ ಕೂಡಿ ಬಾಳಿ ಎಂಬ ಒಳ್ಳೆ ಸಂದೇಶವಿದೆ1
- 3 ತಿಂಗಳ ಬಳಿಕ ಕೊರಟಗೆರೆಗೆ ವರುಣನ ದರ್ಶನ: ಅರ್ಧ ಗಂಟೆ ಸುರಿದ ಮಳೆಗೆ ಜನರ ಮಿಶ್ರ ಪ್ರತಿಕ್ರಿಯೆ 3 ತಿಂಗಳ ಬಳಿಕ ಕೊರಟಗೆರೆಗೆ ವರುಣನ ದರ್ಶನ: ಅರ್ಧ ಗಂಟೆ ಸುರಿದ ಮಳೆಗೆ ಜನರ ಮಿಶ್ರ ಪ್ರತಿಕ್ರಿಯೆ *ಕೊರಟಗೆರೆ, ಸೆ.17:* ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನಲ್ಲಿ ಸುಮಾರು ಮೂರು ತಿಂಗಳಿನಿಂದ ಮಳೆ ಇಲ್ಲದೆ ಕಂಗಾಲಾಗಿದ್ದ ಜನರಿಗೆ ಇಂದು ಸಂಜೆ ವರುಣ ದೇವ ಕೊನೆಗೂ ದರ್ಶನ ನೀಡಿದ್ದಾನೆ. ಇಂದು ಸಂಜೆ ಸುಮಾರು ಅರ್ಧ ಗಂಟೆ ಕಾಲ ಸಾಧಾರಣ ಮಳೆ ಸುರಿದಿದ್ದು, ಬಿಸಿಲಿನ ಝಳದಿಂದ ಬಳಲಿದ್ದ ಜನರಿಗೆ ಕೊಂಚ ತಂಪೆರೆದಂತಾಗಿದೆ. ದೀರ್ಘ ಬರದ ನಂತರ ಬಿದ್ದ ಈ ಮಳೆಯನ್ನು ಕೆಲವರು "ಉತ್ತರೆ ಮಳೆ" ಎಂದು ಸಂಭ್ರಮಿಸಿದರು. ಆದರೆ ಬೆಳೆ ಒಣಗಿ ನಷ್ಟ ಅನುಭವಿಸಿರುವ ರೈತರು ಮಾತ್ರ ಮಳೆರಾಯನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. "ಈಗ ಮಳೆ ಬಂದು ಏನು ಪ್ರಯೋಜನ? ಬೆಳೆದಿದ್ದ ಬೆಳೆ ಎಲ್ಲಾ ಒಣಗಿ ಹೋಗಿದೆ. ಸಮಯಕ್ಕೆ ಬಾರದ ಮಳೆಯಿಂದ ರೈತನ ಬದುಕು ಹಾಳಾಗಿದೆ" ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ತಿಂಗಳುಗಳ ನಂತರ ಸುರಿದ ಮಳೆಯಿಂದ ವಾತಾವರಣ ತಂಪಾಗಿದ್ದರೂ, ರೈತರ ಮೊಗದಲ್ಲಿ ಮಾತ್ರ ನಿರೀಕ್ಷಿತ ಖುಷಿ ಕಾಣಲಿಲ್ಲ.2
- ಕೊರಟಗೆರೆ ತಾಲೂಕಿನ ತುಮಕೂರು ಜಿಲ್ಲೆ ನರಸಯ್ಯನಪಾಳ್ಯ ಕುರುಕ್ಷೇತ್ರ ನಾಟಕ1
- ಕುಣಿಗಲ್ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಕುಣಿಗಲ್ ಟು ಬೆಂಗಳೂರು ವಜ್ರ ವಿಸ್ತಾರ ಬಸ್ಗೆ ಚಾಲನೆ ನೀಡಿದರು ಪಟ್ಟಣದ ಎನ್ ಹುಚ್ಚು ಮಸ್ತಿ ಗೌಡ ವೃತ್ತದಲ್ಲಿ ಕುಣಿಗಲ್ ಟು ಬೆಂಗಳೂರು ವಜ್ರ ವಿಸ್ತಾರ ಬಸ್ ಸಾರಿಗೆ ಸಚಿವರಾದ ಬೈರತಿ ಸುರೇಶ್ ಮತ್ತು ನಿಕಟಪೂರ್ವ ಸಂಸದರಾದ ಡಿಕೆ ಸುರೇಶ್ ಮತ್ತು ಶಾಸಕರಾದ ಡಾಕ್ಟರ್ ಎಚ್ ಡಿ ರಂಗನಾಥ್ ರವರು ಚಾಲನೆ ನೀಡಿದರು1
- ಪ್ರಧಾನಿ ಜನ್ಮದಿನವನ್ನು ರಾಷ್ಟ್ರೀಯ ನಿರುದ್ಯೋಗ ದಿನವಾಗಿ ಆಚರಿಸಿದ ಯುವ ಕಾಂಗ್ರೆಸ್: ತರಕಾರಿ ಮಾರಿ ಕೇಂದ್ರದ ವಿರುದ್ಧ ವಿನೂತನ ಪ್ರತಿಭಟನೆ ಚಳ್ಳಕೆರೆ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು 'ರಾಷ್ಟ್ರೀಯ ನಿರುದ್ಯೋಗ ದಿನ'ವನ್ನಾಗಿ ಆಚರಿಸುವ ಮೂಲಕ ಚಳ್ಳಕೆರೆ ವಿಧಾನಸಭಾ ಯುವ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಬೀದಿಬದಿಯಲ್ಲಿ ತರಕಾರಿ ಮಾರಾಟ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ನಗರದಲ್ಲಿ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಜಮಾಯಿಸಿದ ಕಾರ್ಯಕರ್ತರು, 'ಯುವಕರಿಗೆ ಉದ್ಯೋಗ – ದೇಶದ ಯುವಶಕ್ತಿಗೆ ಭವಿಷ್ಯದ ಭರವಸೆ' ಎಂಬ ಘೋಷವಾಕ್ಯದಡಿ ಸರ್ಕಾರದ ನೀತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಉನ್ನತ ವ್ಯಾಸಂಗ ಮಾಡಿದ ಯುವಕರಿಗೆ ಉದ್ಯೋಗವಿಲ್ಲದೆ ಬೀದಿಯಲ್ಲಿ ತರಕಾರಿ ಮಾರುವ ಪರಿಸ್ಥಿತಿ ಬಂದೊದಗಿದೆ ಎಂಬುದನ್ನು ಸಾಂಕೇತಿಕವಾಗಿ ಪ್ರದರ್ಶಿಸುವ ಮೂಲಕ ಕೇಂದ್ರದ ಗಮನ ಸೆಳೆಯುವ ಯತ್ನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಯುವ ಕಾಂಗ್ರೆಸ್ ಮುಖಂಡರು,ಕೇಂದ್ರ ಸರ್ಕಾರವು ದೇಶದ ಯುವಕರಿಗೆ ಉದ್ಯೋಗ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ದಿನೇ ದಿನೇ ನಿರುದ್ಯೋಗ ಸಮಸ್ಯೆ ಮಿತಿಮೀರುತ್ತಿದ್ದು, ಪದವಿ ಪಡೆದ ಯುವಕರು ಅನಿವಾರ್ಯವಾಗಿ ತರಕಾರಿ ಮಾರುವ ಹಾಗೂ ಕೂಲಿ ಕೆಲಸ ಮಾಡುವ ದುಸ್ಥಿತಿ ನಿರ್ಮಾಣವಾಗಿದೆ. ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ಅಧಿಕಾರಕ್ಕೇರಿದ ಸರ್ಕಾರ, ಇದೀಗ ದೇಶದ ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು. ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಪಟೇಲ್, ಉಪಾಧ್ಯಕ್ಷ ಎಸ್.ಜಿ. ವೀರೇಶ್, ಅಸೆಂಬ್ಲಿ ಪ್ರಧಾನ ಕಾರ್ಯದರ್ಶಿಗಳಾದ ಮಹಮ್ಮದ್ ಹರ್ಬರ್ಜ್, ಪುರುಷೋತ್ತಮ್, ಮಂಜುನಾಥ್ ಜಿ.ಕೆ., ನಿಂಗೇಗೌಡ, ಹರೀಶ್, ಅರುಣ್ ಯಾದವ್, ನಟರಾಜ್, ತಿರುಮಲೇಶ್, ಗಣೇಶ್, ಮನು ಚೌಳೂರು, ಪ್ರಭು, ಏಕಾಂತ್ ಸೇರಿದಂತೆ ಹಲವು ಯುವ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ಥಳೀಯ ಯುವಕರು ಪಾಲ್ಗೊಂಡಿದ್ದರು.3
- ಕೃತಕ ಬುದ್ಧಿಮತ್ತೆಯಿಂದ ಕೃಷಿಯಲ್ಲಿ ಕಡಿಮೆ ವೆಚ್ಚ, ಹೆಚ್ಚಿನ ಆದಾಯ ಸಾಧ್ಯ-- ಡಾ. ಪಿ. ಉಮಾಮಹೇಶ್ವರಪ್ಪ. ಜೆಸಿಐ ಪ್ರತಿಬಿಂಬ ಸಪ್ತಾಹದ ಅಂಗವಾಗಿ ಕೃತಕ ಬುದ್ಧಿಮತ್ತೆ ಹಾಗೂ ಕೃಷಿ ಕ್ಷೇತ್ರದ ಕುರಿತು ಕಾರ್ಯಕ್ರಮ ಮೂಡಿಗೆರೆ: ಕೃಷಿ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ಕಡಿಮೆ ಒಳಹೂಡಿಕೆಯಲ್ಲಿ ಹೆಚ್ಚಿನ ಉತ್ಪಾದನೆ ಹಾಗೂ ಆದಾಯ ಪಡೆಯಲು ಸಾಧ್ಯವಿದೆ ಎಂದು ಕೆವಿಕೆ ಹಿರಿಯ ಮುಖ್ಯಸ್ಥ ಡಾ. ಉಮಾಮಹೇಶ್ವರಪ್ಪ ಹೇಳಿದರು. ಪಟ್ಟಣದ ಜೆಸಿಐ ಭವನದಲ್ಲಿ ಜೆಸಿಐ ಪ್ರತಿಬಿಂಬ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ‘ಕೃತಕ ಬುದ್ಧಿಮತ್ತೆಯ ಸ್ವರೂಪ ಮತ್ತು ಕೃಷಿ ಕ್ಷೇತ್ರದಲ್ಲಿ ಅದರ ಬಳಕೆ’ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಿಖರ ಕೃಷಿ, ಹವಾಮಾನ ಮುನ್ಸೂಚನೆ, ಮಣ್ಣಿನ ಗುಣಮಟ್ಟದ ವಿಶ್ಲೇಷಣೆ, ಬೆಳೆಗಳಿಗೆ ಅಗತ್ಯವಿರುವ ಪೋಷಕಾಂಶಗಳ ಪ್ರಮಾಣ ನಿರ್ಧಾರ, ಕೀಟ ಹಾಗೂ ರೋಗಗಳ ಪತ್ತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ಪ್ರಮುಖ ಪಾತ್ರ ವಹಿಸುತ್ತಿದೆ. ಅಗತ್ಯವಿರುವ ಸಮಯದಲ್ಲಿ ಅಗತ್ಯ ಪ್ರಮಾಣದ ಒಳಹೂಡಿಕೆ ನೀಡುವ ಮೂಲಕ ಕೃಷಿ ವೆಚ್ಚ ಕಡಿಮೆ ಮಾಡಿ ಉತ್ಪಾದಕತೆ ಹೆಚ್ಚಿಸಬಹುದು ಎಂದರು. ಭಾರತದಲ್ಲಿ ಒಂದು ಎಕರೆ ಪ್ರದೇಶದಲ್ಲಿ ಟೊಮೆಟೊ ಬೆಳೆಯಿಂದ ಉತ್ತಮ ಇಳುವರಿ ಪಡೆಯಲಾಗುತ್ತಿದ್ದರೂ, ಜಪಾನ್‌ನಂತಹ ದೇಶಗಳಲ್ಲಿ ಆಧುನಿಕ ತಂತ್ರಜ್ಞಾನ, ನಿಖರ ಕೃಷಿ ಪದ್ಧತಿ ಹಾಗೂ ಸ್ವಯಂಚಾಲಿತ ವ್ಯವಸ್ಥೆಗಳನ್ನು ಬಳಸಿಕೊಂಡು ಇನ್ನಷ್ಟು ಹೆಚ್ಚಿನ ಉತ್ಪಾದನೆ ಪಡೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನಗಳು ಕೃಷಿಯ ಸ್ವರೂಪವನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿವೆ ಎಂದು ಹೇಳಿದರು. ವಿದ್ಯಾರ್ಥಿಗಳು, ರೈತರೊಂದಿಗೆ ಬೆರೆಯುವ ಮನೋಭಾವ ಅಗತ್ಯ ತಾವು ಕೆವಿಕೆ ಮುಖ್ಯಸ್ಥರಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ತರಬೇತಿಗೆ ಆಗಮಿಸುವ ವಿದ್ಯಾರ್ಥಿಗಳು ಹಾಗೂ ರೈತರೊಂದಿಗೆ ಹೆಚ್ಚಿನ ಸಂವಹನಕ್ಕೆ ಆದ್ಯತೆ ನೀಡಲಾಗುತ್ತಿದೆ. ದೂರದ ಊರುಗಳಿಂದಲೂ ರೈತರು ತರಬೇತಿ ಹಾಗೂ ಕೃಷಿ ಸಲಹೆ ಪಡೆಯಲು ಆಗಮಿಸುತ್ತಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಪ್ರತಿಯೊಬ್ಬ ಕೃಷಿ ವಿಜ್ಞಾನಿ ಹಾಗೂ ತರಬೇತುದಾರರಲ್ಲಿ ಇರಬೇಕು ಎಂದು ತಿಳಿಸಿದರು. ತಮ್ಮ ವಿದ್ಯಾರ್ಥಿ ಜೀವನವನ್ನು ನೆನಪಿಸಿಕೊಂಡ ಅವರು, ಬಡತನ ಹಾಗೂ ಹಲವು ಕಷ್ಟಗಳ ನಡುವೆಯೂ ವಿದ್ಯಾಭ್ಯಾಸ ಮುಂದುವರಿಸಿದ್ದಾಗಿ ಹೇಳಿದರು. ಪದವಿ ಪೂರ್ಣಗೊಳಿಸಿದ ನಂತರ ಐದು ಸರ್ಕಾರಿ ಉದ್ಯೋಗಾವಕಾಶಗಳು ದೊರೆತಿದ್ದರೂ, ಪ್ರಾಧ್ಯಾಪಕರಾಗಬೇಕೆಂಬ ಕನಸಿನಿಂದ ತೋಟಗಾರಿಕೆಯಲ್ಲಿ ಬಿ.ಎಸ್ಸಿ., ಎಂ.ಎಸ್ಸಿ. ಹಾಗೂ ಪಿಎಚ್‌ಡಿ ಪದವಿ ಪಡೆದು ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಅವಕಾಶ ದೊರೆತಿರುವುದು ಹೆಮ್ಮೆಯ ಸಂಗತಿ ಎಂದರು. ವಿದ್ಯಾರ್ಥಿ ಜೀವನದಲ್ಲಿ ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ತಿಂಗಳಿಗೆ ಕೇವಲ ₹1,500 ದೊರೆಯುತ್ತಿತ್ತು. ಆದರೂ ಗುರಿ ಸಾಧಿಸುವ ಛಲದಿಂದ ಮುನ್ನಡೆದು ಇಂದು ಕೆವಿಕೆ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ತಮ್ಮ ಅನುಭವ ಹಂಚಿಕೊಂಡರು. ಸ್ವಾವಲಂಬಿ ಬದುಕಿಗೆ ಆದ್ಯತೆ ನೀಡಬೇಕು ‘ನಾವು ತಿನ್ನುವ ಅನ್ನ ಬೆವರಿನಿಂದ ಬಂದಿರಬೇಕು; ಬೇರೆಯವರ ಹಂಗಿನಲ್ಲಿ ಬದುಕಬಾರದು’ ಎಂಬ ಡಿ.ವಿ.ಜಿ. ಅವರ ಆಶಯದಂತೆ ಪ್ರತಿಯೊಬ್ಬರೂ ಸ್ವಾವಲಂಬಿ ಜೀವನಕ್ಕೆ ಆದ್ಯತೆ ನೀಡಬೇಕು. ಕೃಷಿಯನ್ನೂ ಆಧುನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸುವ ಮೂಲಕ ಯುವಜನತೆ ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಅಧ್ಯಕ್ಷ ಸುನೀಲ್ ಎಂ.ಎಲ್. ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುನ್ನಳ್ಳಿ, ಜೆಸಿಐ ಪದಾಧಿಕಾರಿಗಳು, ಕೃಷಿ ಪರಿಕರಗಳ ಮಾರಾಟಗಾರರ ಅಧ್ಯಕ್ಷ ನಾಗೇಶ್ ನಾಯ್ಕ್, ದೇಸಿ ಸಂಯೋಜಕ ರಾಮಚಂದ್ರಪ್ಪ, ಮುಖ್ಯ ಅತಿಥಿ ಪುರ್ಣೆಶ್, ತರಬೇತುದಾರ ನಂಜೇಶ್, ದೇಸಿ ತರಬೇತಿದಾರರು, ರೈತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ವರದಿ: ಪ್ರದೀಪ್ ಹೆಚ್ ಈ. ತರೀಕೆರೆ4
- ಹುಳಿಯಾರು ಪಟ್ಟಣ ಪಂಚಾಯಿತಿಯ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಕೆರೆ ಸೂರಗೊಂಡನಹಳ್ಳಿ ಸರ್ವೆ ನಂಬರ್ 32 ರ ಹೊಸಹಳ್ಳಿ ಕೈಮರದ ಬಳಿ ಐದು ಎಕರೆ ಜಾಗ ಮಂಜೂರು1