ಶಿವಮೊಗ್ಗ-ಅಲ್ಪಸಂಖ್ಯಾತರ ವಾರ್ಡ್‌ಗಳಲ್ಲಿ ಮೂಲ ಭೂತ ಸೌಲಭ್ಯ ಕಲ್ಪಿಸಲು ಅಗ್ರಹ ಶಿವಮೊಗ್ಗ, ನಗರದ ಅಲ್ಪಸಂಖ್ಯಾತರ ವಾರ್ಡ್‌ಗಳಲ್ಲಿ ಮೂಲಭೂತ ಸೌಲಭ್ಯ ಗಳನ್ನು ತಕ್ಷಣ ಕಲ್ಪಿಸುವ ಕುರಿತು ಅಲ್ಲಿನ ಮುಖಂಡರು ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ನಗರದ ಅಲ್ಪಸಂಖ್ಯಾತರು ವಾಸಿಸುವ ಹಲವು ವಾರ್ಡ್‌ಗಳಲ್ಲಿ ಮೂಲಭೂತ ಸೌಲಭ್ಯಗಳ ತೀವ್ರ ಕೊರತೆ ಉಂಟಾಗಿದ್ದು ಸಾರ್ವಜನಿಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿಶೇಷವಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಚರಂಡಿ ಸ್ವಚ್ಛತೆ, ಬೀದಿ ದೀಪಗಳು, ರಸ್ತೆ, ಯುಜಿಡಿ ವ್ಯವಸ್ಥೆಗಳು ಸಮರ್ಪಕ ವಾಗಿ ಇಲ್ಲದಿರುವುದರಿಂದ ಸಾರ್ವಜನಿಕರ ದೈನಂದಿನ ಜೀವನಕ್ಕೆ ತೀವ್ರ ತೊಂದರೆ ಉಂಟಾಗಿದೆ. ಇದರ ಜೊತೆಗೆ, ಪೂರೈಕೆಯಾಗುತ್ತಿರುವ ಕುಡಿಯುವ ನೀರು ಕುಲುಷಿತವಾಗಿ ಬರುತ್ತಿದ್ದು, ಶುದ್ಧವಾಗದೆ ಕೆಂಪು ಬಣ್ಣದ ನೀರು ಬರುತ್ತಿರುವ ಬಗ್ಗೆ ಸಾರ್ವಜನಿಕರು ದೂರು ನೀಡುತ್ತಿದ್ದಾರೆ ಎಂದು ದೂರಿದರು. ಒಂದು ದಿನ ನೀರು ಬಂದರೆ ಮೂರು ನಾಲ್ಕು ದಿನ ಬರುವುದಿಲ್ಲ. ಈ ನೀರನ್ನು ಕುಡಿಯು ವುದರಿಂದ ಜನರು ಅನಾರೋಗ್ಯಕ್ಕೆ ಒಳ ಗಾಗುತ್ತಿರುವ ಪರಿಸ್ಥಿತಿಯೂ ಉಂಟಾಗಿದೆ. ಆದ್ದರಿಂದ ಈ ಸಮಸ್ಯೆಯ ಕುರಿತು ಕೂಡ ತಕ್ಷಣ ಗಮನಹರಿಸಿ ಶುದ್ಧ ಕುಡಿಯುವ ನೀರಿನ ಪೂರೈಕೆಯನ್ನು ಖಚಿತಪಡಿಸ ಬೇಕಾಗಿ ವಿನಂತಿಸಿದರು. ಚರಂಡಿಗಳ ಸ್ವಚ್ಛತೆ ಸರಿಯಾಗಿ ನಡೆಯದ ಕಾರಣ ಸೊಳ್ಳೆ, ನೊಣ ಹಾಗೂ ಕ್ರಿಮಿ-ಕೀಟ ಗಳು ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ವಿವಿಧ ರೋಗಗಳು ಉಂಟಾಗುವ ಆತಂಕ ವಿದೆ. ಮುಂದೆ ಮಳೆಗಾಲ ಸಮೀಪಿಸುತ್ತಿ ರುವ ಹಿನ್ನೆಲೆಯಲ್ಲಿ ಚರಂಡಿ ನಿರ್ವಹಣೆ ಸರಿಯಾಗಿ ಮಾಡದಿದ್ದರೆ ಮಳೆ ನೀರು ಸರಿಯಾಗಿ ಹರಿಯದೆ ಮನೆಗಳೊಳಗೆ ನುಗ್ಗುವ ಸಾಧ್ಯತೆಯೂ ಇದೆ. ವಿಶೇಷವಾಗಿ ಆರ್.ಎಂ.ಎಲ್ ನಗರ, ಇಲ್ಯಾಸ್ ನಗರ, ಟಿಪ್ಪು ನಗರ, ಹಳೆ ಮಂಡ್ಲಿ, ವಾದಿಹುದಾ, ಸೂಳೇಬೈಲ್ ಹಾಗೂ ಹಳೆ ಶಿವಮೊಗ್ಗ ಸೇರಿದಂತೆ ಅಲ್ಪಸಂಖ್ಯಾತರು ವಾಸಿಸುವ ಎಲ್ಲಾ ವಾರ್ಡ್‌ಗಳಲ್ಲಿ ಮೂಲಭೂತ ಸೌಲಭ್ಯಗಳ ತೀವ್ರ ಕೊರತೆ ಇದೆ ಎಂದರು. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ವಾರ್ಡ್‌ಗಳನ್ನು ತಕ್ಷಣ ಭೇಟಿ ನೀಡಿ ಪರಿಶೀಲನೆ ನಡೆಸಿ, ಶುದ್ಧ ಕುಡಿಯುವ ನೀರು, ಚರಂಡಿ ಸ್ವಚ್ಛತೆ, ಬೀದಿ ದೀಪಗಳು, ರಸ್ತೆ, ಯುಜಿಡಿ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ತುರ್ತುವಾಗಿ ಕಲ್ಪಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿ ವಿನಂತಿಸಿದರು. ಜಿಲ್ಲಾ ಕಾಂಗ್ರೆಸ್ ಸಮಿತಿ, ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಸೈಯದ್ ವಾಹಿದ್ (ಅಡ್ಡು), ರಿಯಾಜ್ ಅಹಮದ್, ಸ್ಟೆಲ್ಲಾ , ಸಂಧ್ಯಾ, ನಜೀರ್ಮೊ ಅಹ್ಮದ್ ಮೊದಲಾದವರಿದ್ದರು.

- Post by Suresh Belagere1
- ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸಚಿವ ಹೆಚ್ ಆಂಜನೇಯ ಅವರು ಮಾತನಾಡಿದ್ದು ದಲಿತರಿಗೆ ಅಗ್ರಸ್ಥಾನ ಕೊಟ್ಟ ಪಕ್ಷ ಅದು ಕಾಂಗ್ರೆಸ್ ಆಗಿದೆ. ಕೇಂದ್ರದ ನಾಯಕರು ದಲಿತರು, ರಾಜ್ಯಸಭಾ ವಿರೋಧ ಪಕ್ಷದ ನಾಯಕರು ಕೂಡ ದಲಿತರು, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೊಟ್ಟಿದ್ದಾರೆ.ರಾಜ್ಯದಲ್ಲೂ ಕೂಡ ದಲಿತರಿಗೆ ಅವಕಾಶ ಕೊಟ್ಟಿದ್ದಾರೆ. ಬಿಜೆಪಿಯವರು ಎಷ್ಟು ಬಾರಿ ರಾಜ್ಯ ಘಟಕದ ಅಧ್ಯಕ್ಷರನ್ನ ದಲಿತರಿಗೆ ಕೊಟ್ಟಿದ್ದಾರೆ ಮಿಸ್ಟರ್ ಕಾರಜೋಳ್ ಎಂದು ಹೆಚ್ ಆಂಜನೇಯ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಎಂದರೆ ಎಂದರೆ ಸಾಮಾಜಿಕ ನ್ಯಾಯ, ಸಾಮಾಜಿಕ ನ್ಯಾಯ ಎಂದರೆ ಕಾಂಗ್ರೆಸ್ ಆಗಿದೆ ಎಂದು ಹೆಚ್ ಆಂಜನೇಯ ಪ್ರತಿಕ್ರಿಯೆ ನೀಡಿದ್ದಾರೆ1
- ವಿಜಯನಗರ: ಔಷಧಿಗಳ ಅಂಗಡಿಗಳಿಗೆ ವಿಜಯನಗರ ಡಿಸಿ, ಎಸ್ಪಿ ದಿಡೀರ್ ಭೇಟಿ, ನೀಡಿ ಪರಿಶೀಲನೆ ನಡೆಸಿದರು. ವಿಜಯನಗರ ಡಿಸಿ ಕವಿತಾ ಮನ್ನಿಕೇರಿ, ಎಸ್ಪಿ ಜಾಹ್ನವಿ, ಡ್ರಗ್ ಕಂಟ್ರೋಲ್ ಆಫೀಸರ್ ಭೇಟಿ ನೀಡಿದರು. ಮಾದಕ ವ್ಯಸನಿಗಳು, ಡ್ರಗ್ ಅಡಿಕ್ಟರ್ ಔಷಧಿಗಳ ಬಳಕೆಗೆ ಮುಂದಾಗುತ್ತಿರೋ ಮಾಹಿತಿ ಮೇರೆಗೆ, ಔಷಧಿಗಳ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವೈದ್ಯರ ಬರೆದಿರೋ ಔಷಧಿಗಳ ರಸೀದಿ ಇಲ್ಲದೇ ಮಾತ್ರೆ, ಔಷಧಿಗಳನ್ನ ನೀಡದಂತೆ ತಾಕೀತು ಮಾಡಿದರು. ಔಷಧಿ ಅಂಗಡಿಗಳ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ ಡಿಸಿ, ಎಸ್ಪಿ, ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಬಸ್ ನಿಲ್ದಾಣದ ಬಳಿಯ ಮೆಡಿಕಲ್ ಶಾಪ್ ಗಳಿಗೆ ವಿಸಿಟ್ ಮಾಡಿ ಮಾಲೀಕರಿಗೆ ವಾರ್ನ್ ನೀಡಿದರು. ಔಷಧಿ ಅಂಗಡಿಗಳ ಮುಂದೆ ಕಡ್ಡಾಯವಾಗಿ ಇಲಾಖೆ ನೀಡಿರೋ ಸೂಚನಾ ಫಲಕ ಅಳವಡಿಸುವಂತೆ ಸೂಚನೆ ನೀಡಿದ ಎಸ್ಪಿ, ಔಷಧಿಗಳ ವಹಿವಾಟನ್ನ ಕಂಪ್ಯೂಟರ್ ಹಾಗೂ ರಿಜಿಸ್ಟರ್ ಬುಕ್ ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು, ವೈದ್ಯರ ರಸೀದಿಯಿಲ್ಲದೇ ಮಾತ್ರೆ, ಔಷಧಿಗಳನ್ನ ನೀಡಿವಂತಿಲ್ಲ, ಒಂದು ವೇಳೆ ವೈದ್ಯರ ರಸೀದಿ ಇಲ್ಲದೇ ಮಾತ್ರೆಗಳನ್ನ ನೀಡಿದ್ರೆ ಕಠಿಣ ಕ್ರಮ ಜರುಗಿಸಲಾಗುವದು ಎಂದರು.1
- *ಕಪ್ಪತ್ತ ಮಲ್ಲಣ್ಣನ ದರ್ಶನಕ್ಕೆ ಹಾದಿಯಿಲ್ಲ*.. ಭಕ್ತರ ಕಷ್ಟಕ್ಕೆ ಕೊನೆಯಿಲ್ಲ*! 🙏💔 *ಕಪ್ಪತ್ತಗುಡ್ಡದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಅಭಿವೃದ್ಧಿಗಾಗಿ ಭಕ್ತರ ಆಗ್ರಹ. ಸಚಿವ ಹೆಚ್.ಕೆ. ಪಾಟೀಲರ ಪುತ್ರನಿಗೆ ಮನವಿ1
- ತುಮಕೂರು : ಕರ್ನಾಟಕದಲ್ಲಿ ರೈಲ್ವೆ ಪೊಲೀಸ್ ರವರಿಂದ ಅಮೋಘವಾದ ಪ್ರಯತ್ನ ತಾವೇ ಸ್ವತಹ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಮಹಿಳಾ ಪೊಲೀಸ್ ಅಧಿಕಾರಿ ಯೊಬ್ಬರು ರೈಲಿನ ಕಿಟಕಿ ಯಲ್ಲಿ ಮಲಗಿದ್ದ ವ್ಯಕ್ತಿ ಯನ್ನು ಮಾತಾಡಿಸಿ ಕಳ್ಳತನದ ಬಗ್ಗೆ ಅರಿವು ಮೂಡಿಸಿ , ರೈಲ್ವೆ ನಿಲ್ದಾಣದಲ್ಲಿ ಏನೆಲ್ಲ ಆಗುತ್ತೆ ಎಂದು ವಿವರವಾಗಿ ಅರಿವು ಮೂಡಿಸಿದರು. ಈ ರೀತಿಯಾಗಿ ಎಲ್ಲ ಭಾರತೀಯ ರೈಲ್ವೆ ನಿಲ್ದಾಣದಲ್ಲಿ ಅರಿವು ಮೂಡಿಸಿದರೆ ಸಾರ್ವಜನಿಕರು ಎಚ್ಚರಗೊಳ್ಳುತ್ತಾರೆ.1
- ಬಾಯಿಗೆ ರುಚಿನೀಡುವ: ನಾಲಿಗೆಗೆ ರುಚಿ ನೀಡುವ ಅಥವಾ ರುಚಿಕರವಾದ (Tasty to the tongue). ತಂಪು ಪಾನೀಯ: ಕೋಲ್ಡ್ ಡ್ರಿಂಕ್ಸ್ ಅಥವಾ ತಂಪು ಪಾನೀಯಗಳು (Soft drinks/Cold drinks). ಕುಡಿಯೋ ಮುನ್ನ: ಕುಡಿಯುವ ಮೊದಲು (Before drinking). ಈ ವಿಡಿಯೋ ನೋಡಿ: ಈ ವಿಡಿಯೋವನ್ನು ವೀಕ್ಷಿಸಿ (Watch this video). ಸಂದರ್ಭ (Context) ಇದು ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಸುದ್ದಿ ವಾಹಿನಿಗಳಲ್ಲಿ ಕಂಡುಬರುವ 'ಎಚ್ಚರಿಕೆ' (Cautionary) ಸಂದೇಶವಾಗಿದೆ. ತಂಪು ಪಾನೀಯಗಳಲ್ಲಿರುವ1
- Post by Karibasava Balal1
- Post by Suresh Belagere1
- ಚಿತ್ರದುರ್ಗದ ಭೋವಿ ಅಭಿವೃದ್ಧಿ ನಿಗಮದ ಕಚೇರಿಗೆ ನಿಗಮದ ಅಧ್ಯಕ್ಷರಾದ ಎಂ.ರಾಮಪ್ಪ ಅನಿರೀಕ್ಷಿತ ಬೇಟಿ ನೀಡಿದ್ದಾರೆ. ಈ ವೇಳೆ ಅವರು ಕಚೇರಿಯ ಖಡತಗಳನ್ನ ಪರಿಶೀಲನೆ ನಡೆಸಿದ್ದು ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳನ್ನ ಸರೊಯಾದ ರೀತಿಯಲ್ಲಿ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.1