Shuru
Apke Nagar Ki App…
ಅನುವಾದ (Translation) "ಬಾಯಿಗೆ ರುಚಿನೀಡುವ ತಂಪು ಪಾನೀಯ ಕುಡಿಯೋ ಮುನ್ನ ಈ ವಿಡಿಯೋ ನೋಡಿ." " ಬಾಯಿಗೆ ರುಚಿನೀಡುವ: ನಾಲಿಗೆಗೆ ರುಚಿ ನೀಡುವ ಅಥವಾ ರುಚಿಕರವಾದ (Tasty to the tongue). ತಂಪು ಪಾನೀಯ: ಕೋಲ್ಡ್ ಡ್ರಿಂಕ್ಸ್ ಅಥವಾ ತಂಪು ಪಾನೀಯಗಳು (Soft drinks/Cold drinks). ಕುಡಿಯೋ ಮುನ್ನ: ಕುಡಿಯುವ ಮೊದಲು (Before drinking). ಈ ವಿಡಿಯೋ ನೋಡಿ: ಈ ವಿಡಿಯೋವನ್ನು ವೀಕ್ಷಿಸಿ (Watch this video). ಸಂದರ್ಭ (Context) ಇದು ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಸುದ್ದಿ ವಾಹಿನಿಗಳಲ್ಲಿ ಕಂಡುಬರುವ 'ಎಚ್ಚರಿಕೆ' (Cautionary) ಸಂದೇಶವಾಗಿದೆ. ತಂಪು ಪಾನೀಯಗಳಲ್ಲಿರುವ
Vv Vv
ಅನುವಾದ (Translation) "ಬಾಯಿಗೆ ರುಚಿನೀಡುವ ತಂಪು ಪಾನೀಯ ಕುಡಿಯೋ ಮುನ್ನ ಈ ವಿಡಿಯೋ ನೋಡಿ." " ಬಾಯಿಗೆ ರುಚಿನೀಡುವ: ನಾಲಿಗೆಗೆ ರುಚಿ ನೀಡುವ ಅಥವಾ ರುಚಿಕರವಾದ (Tasty to the tongue). ತಂಪು ಪಾನೀಯ: ಕೋಲ್ಡ್ ಡ್ರಿಂಕ್ಸ್ ಅಥವಾ ತಂಪು ಪಾನೀಯಗಳು (Soft drinks/Cold drinks). ಕುಡಿಯೋ ಮುನ್ನ: ಕುಡಿಯುವ ಮೊದಲು (Before drinking). ಈ ವಿಡಿಯೋ ನೋಡಿ: ಈ ವಿಡಿಯೋವನ್ನು ವೀಕ್ಷಿಸಿ (Watch this video). ಸಂದರ್ಭ (Context) ಇದು ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಸುದ್ದಿ ವಾಹಿನಿಗಳಲ್ಲಿ ಕಂಡುಬರುವ 'ಎಚ್ಚರಿಕೆ' (Cautionary) ಸಂದೇಶವಾಗಿದೆ. ತಂಪು ಪಾನೀಯಗಳಲ್ಲಿರುವ
More news from Karnataka and nearby areas
- ಬಾಯಿಗೆ ರುಚಿನೀಡುವ: ನಾಲಿಗೆಗೆ ರುಚಿ ನೀಡುವ ಅಥವಾ ರುಚಿಕರವಾದ (Tasty to the tongue). ತಂಪು ಪಾನೀಯ: ಕೋಲ್ಡ್ ಡ್ರಿಂಕ್ಸ್ ಅಥವಾ ತಂಪು ಪಾನೀಯಗಳು (Soft drinks/Cold drinks). ಕುಡಿಯೋ ಮುನ್ನ: ಕುಡಿಯುವ ಮೊದಲು (Before drinking). ಈ ವಿಡಿಯೋ ನೋಡಿ: ಈ ವಿಡಿಯೋವನ್ನು ವೀಕ್ಷಿಸಿ (Watch this video). ಸಂದರ್ಭ (Context) ಇದು ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಸುದ್ದಿ ವಾಹಿನಿಗಳಲ್ಲಿ ಕಂಡುಬರುವ 'ಎಚ್ಚರಿಕೆ' (Cautionary) ಸಂದೇಶವಾಗಿದೆ. ತಂಪು ಪಾನೀಯಗಳಲ್ಲಿರುವ1
- *ಕಪ್ಪತ್ತ ಮಲ್ಲಣ್ಣನ ದರ್ಶನಕ್ಕೆ ಹಾದಿಯಿಲ್ಲ*.. ಭಕ್ತರ ಕಷ್ಟಕ್ಕೆ ಕೊನೆಯಿಲ್ಲ*! 🙏💔 *ಕಪ್ಪತ್ತಗುಡ್ಡದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಅಭಿವೃದ್ಧಿಗಾಗಿ ಭಕ್ತರ ಆಗ್ರಹ. ಸಚಿವ ಹೆಚ್.ಕೆ. ಪಾಟೀಲರ ಪುತ್ರನಿಗೆ ಮನವಿ1
- ಕುಷ್ಟಗಿ:- ಪಟ್ಟಣದ ತಾವರಗೇರಾ ರಸ್ತೆಯ ಪಂಚಪೀಠಾಧಿಪತಿಗಳ ಸಮುಖ್ಯದಲ್ಲಿ ಇಲ್ಲಿನ ಶ್ರೀ ಮದ್ದಾನೇಶ್ವರ ಹಿರೇಮಠ ಇವರ ಕುಟುಂಬದ ಸಮಾಜ ಸೇವಕ ರವಿಕುಮಾರ ಹಿರೇಮಠ ಹಾಗೂ ವಿಜಯಕುಮಾರ ಹಿರೇಮಠ ಇವರ ಮಗನ ಮದುವೆ ಸಮಾರಂಭದಲ್ಲಿ ಬಾಳೇಹೊನ್ನೂರಿನ ಶ್ರೀ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಶೈಲ ಪೀಠದ ಚನ್ನಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಶೈಲ ಹಾಗೂ ಶ್ರೀ ಷ.ಬ್ರ ಕರಿಬಸ ಶಿವಾಚಾರ್ಯ ಮಹಾಸ್ವಾಮಿಗಳು ಮದ್ದಾನಿ ಹಿರೇಮಠ, ಶ್ರೀ ಷ.ಬ್ರ.ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಚಂದ್ರಶೇಖರ ಮಾಹಾಸ್ವಾಮಿಗಳು, ಶ್ರೀ ಶಿವಲಿಂಗ ಮಾಹಾಸ್ವಾಮಿಗಳ ನೇತೃತ್ವದಲ್ಲಿ ಸುಮಾರು 51 ಸರ್ವ ಧರ್ಮಗಳ ನವ ಜೋಡಿಗಳು ತಮ್ಮ ದಾಂಪತ್ಯ ಜೀವನಕ್ಕೆ ಗುರುವಾರ ಶ್ರೀಗಳ ಆಶೀರ್ವಾದ ಪಡೆಯುವ ಮೂಲಕ ಕಾಲಿಟ್ಟರು. ಈ ಸಂದರ್ಭದಲ್ಲಿ 51 ಸರ್ವ ಧರ್ಮಗಳ ಉಚಿತ ಸಾಮೂಹಿಕ ಕಾರ್ಯಕ್ರಮ ಅತ್ಯಂತ ಅದ್ಧೂರಿಯಾಗಿ ನೆಡೆದವು. ತದ ನಂತರ ಸಾಮೂಹಿಕ ಕಾರ್ಯಕ್ರಮ ಕುರಿತು ಶ್ರೀ ಜಗದ್ಗುರು ಬಾಳೆಹೊನ್ನೂರಿನ ರೇಣುಕಾಚಾರ್ಯ ವೀರಸೋಮಶ್ವರ ಮಾಹಾಸ್ವಾಮಿಗಳು ಮಾತನಾಡಿ ರವಿಕುಮಾರ ಹಿರೇಮಠ ಇವರು ತಮ್ಮ ಮಗನ ಮದುವೆ ಸಮಾರಂಭದಲ್ಲಿ 51 ಉಚಿತ ಸಾಮೂಹಿಕ ಮದುವೆ ಮಾಡುವಂತದ್ದು ಇದು ಒಂದು ದೊಡ್ಡ ಕಾರ್ಯವಾಗಿದೆ ಆದ್ದರಿಂದ ಸತಿ ಪತಿಗಳು ಒಂದಾಗಿ ಸುಗಮ ಸಂಸಾರ ನೆಡೆಸುವ ಮೂಲಕ ತಮ್ಮ ಉತ್ತಮ ದಾಂಪತ್ಯ ಜೀವನ ನೆಡೆಸಬೇಕು ಎಂದರು. ನಂತರ ಶ್ರೀಶೈಲ ಪೀಠದ ಜಗದ್ಗುರು ಚನ್ನಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶ್ರೀ ಷ.ಬ್ರ. ವೀರಸಂಗಮೇಶ್ವ ಶಿವಾಚಾರ್ಯ ಮಾಹಾ ಸ್ವಾಮೀಗಳು ಚಳಗೇರಿ, ಶ್ರೀ. ಷ.ಬ್ರ. ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಮದ್ದಾನಿ ಹಿರೇಮಠ ಕುಷ್ಟಗಿ, ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಕೇಸೂರು, ಶ್ರೀ ಶಿವಲಿಂಗ ಮಹಾಸ್ವಾಮಿಗಳು ಬಿಜಕಲ್, ಹೊನ್ನಳ್ಳಿ ಮಾಜಿ ಸಚಿವ ಹಾಗೂ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ, ಮಾಜಿ ಸಚಿವ ಹಾಗೂ ಮಾಜಿ ಶಾಸಕ ಮತ್ತು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪೂರ, ಇವರ ಸಮುಖ್ಯದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ನೆಡೆದವು. ನಂತರ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ದೊಡ್ಡನಗೌಡ ಪಾಟೀಲ ಮತ್ತು ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪೂರ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಧು ವರರ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ 51 ನವ ಜೋಡಿಗಳಿಗೆ ದೊಡ್ಡ ವೇದಿಕೆಯಲ್ಲಿ ಸಂಪ್ರದಾಯವಾಗಿ ನವ ಜೋಡಿಗಳ ವಿವಾಹ ಕಾರ್ಯಕ್ರಮವನ್ನು ಮಾಡಲಾಯಿತು. ಸುಮಾರು 25 ಸಾವಿರಕ್ಕೂ ಹೆಚ್ಚು ಜನ ಸಂಖ್ಯೆಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಮಾಡಲಾಯಿತು.4
- Post by Onlinetv24x71
- *ತ್ರಿಶಂಕು ಸ್ಥಿತಿಯಲ್ಲಿ ಸುಂಕದಕಲ್ಲು : ಅಭಿವೃದ್ಧಿಗೊಳಿಸುವ ಭಗೀರಥ ಪ್ರಯತ್ನದಲ್ಲಿ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್*- ವಿಜಯನಗರ ಕೂಡ್ಲಿಗಿ : ಈ ಹಿಂದಿನ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿದ್ದು , ಸದ್ಯ ಕೊಟ್ಟೂರು ಹೋಬಳಿಯಲ್ಲಿರುವ. ಹಗರಿಬೊಮ್ಮನಹಳ್ಳಿಯ ರಾಂಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಸುಂಕದಕಲ್ಲು ಗ್ರಾಮ. ಆಡಳಿತಾತ್ಮಕವಾಗಿ ತೀರಾ ನಿರ್ಲಕ್ಷ್ಯಕ್ಕೀಡಾಗಿದ್ದು , ಅಭಿವೃದ್ಧಿ ಕಾಣದ ಕುಗ್ರಾಮವಗಿದೆ. ತ್ರಿಶಂಕು ಸ್ಥಿತಿಯಲ್ಲಿರುವ ಗ್ರಾಮ ಅನಾಧಾರಕ್ಕೀಡಾಗಿದ್ದು , ಗ್ರಾಮವನ್ನು ಸರ್ವತೋಮುಖವಾಗಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದಾಗಿ , ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು ಶಪಥ ಮಾಡಿದ್ದಾರೆ. ಮತ್ತು ಈ ನಿಟ್ಟಿನಲ್ಲಿ ಅವರು ಕಾರ್ಯಗತರಾಗಿದ್ದು , ಪ್ರಥಮವಾಗಿ ಕೆಕೆ ಆರ್ ಡಿಬಿ ಅನುದಾನದಲ್ಲಿ 1 ಕೋಟಿ ರೂ ವೆಚ್ಚದಲ್ಲಿ , ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಈ ಮೂಲಕ ಆಡಳಿತಾತ್ಮಕ ಅಸಹಕಾರ , ಹಾಗೂ ತಾಂತ್ರಿಕ ದೋಷಪೂರಿತವಾಗಿ ಅನಾಧಾರಕ್ಕೀಡಾಗಿರುವ. ಕುಗ್ರಾಮ ಸುಂಕದಕಲ್ಲು ಗ್ರಾಮವನ್ನು , ಮಾದರಿ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಭಗೀರಥ ಪ್ರಯತ್ನ ನಡೆಸಿ ದಾಪುಗಾಲನ್ನಿಟ್ಟಿದ್ದಾರೆ. ಮೂಲಭೂತ ಸೌಕರ್ಯಗಳ ಕೊರತೆ , ಅಧಿಕಾರಿಗಳ ಅಸಹಕಾರ ಹಾಗೂ ನಿರ್ಲಕ್ಷ್ಯ ಧೋರಣೆ ಯಿಂದ , ಹಾಗೂ ಇತರೆ ಕೊರೆತೆಗಳಿಂದ ಮುಕ್ತಗೊಳಿಸುವಲ್ಲಿ ಮೊದಲ ಆಧ್ಯತೆ ನೀಡುವುದಾಗಿ ಶಾಸಕರು ಭರವಸೆ ನೀಡಿದರು. *25ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಜಟಿಲ ಸಮಸ್ಯೆ ಬಗೆಹರಿಸುವಂತೆ ಶಾಸಕರಿಂದ ಸೂಚನೆ*- ಸುಂಕದಕಲ್ಲು ಗ್ರಾಮದ (ಕ್ಯಾಂಪ್ ) ಗುಂಪು ಮನೆ ಯೋಜನೆಯ ಫಲಾನುಭವಿಗಳು , ಶಾಸಕರಲ್ಲಿ ತಮ್ಮ ಅಳಲು ತೋಡಿಕೊಂಡರು. ತಾವು ಕಳೆದ 25 ವರ್ಷಗಳಿಂದ ವಾಸವಿದ್ದರೂ ಸಹ , ಈವರೆಗೆ ಇಲಾಖೆಗಳಿಂದ ಹಕ್ಕು ಪತ್ರ ನೀಡಿಲ್ಲ. ಮೂಲ ಭೂತ ಸೌಕರ್ಯಗಳು ತಮಗೆ ಗಗನ ಕುಸುಮವಾಗಿದ್ದು , ಕೂಡಲೇ ಹಕ್ಕು ಪತ್ರ ನೀಡಬೇಕು ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪುಸಿಕೊಡುವಂತೆ ಶಾಸಕರಲ್ಲಿ ನಿವಾಸಿಗಳು ಕೋರಿದರು. ಕೂಡಲೇ ಸ್ಪಂದಿಸಿದ ಶಾಸಕರು ಸ್ಥಳದಲ್ಲಿಯೇ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದರು , ಮತ್ತು ಶೀಘ್ರವೇ ಹಕ್ಕು ಪತ್ರ ವಿತರಣೆಗೆ ಅಗತ್ಯ ಕ್ರಮಕ್ಕೆ ಸೂಚಿಸಿದರು. *ಗ್ರಾಮಸ್ಥರಿಗೆ ಸ್ಪಂದಿಸದ ಪಿಡಿಓ ಅಮಾನತ್ತುಗೊಳಿಸಿ - ಶಾಸಕ ಡಾ ಎನ್ ಟಿ ಶ್ರೀನಿವಾಸ್ ಶಿಪಾರಸ್ಸು*- ಸುಂಕದಕಲ್ಲು ಗ್ರಾಮದಲ್ಲಿ , ಪಿಡಿಓ ವಿರುದ್ಧ ಇಡೀ ಗ್ರಾಮಸ್ಥರಿಂದ ಗಂಭೀರ ಆರೋಪಗಳು ಕೇಳಿಬಂದಿರುವ ಹಿನ್ನಲೆಯಲ್ಲಿ. ಕೂಡಲೇ ಶಾಸಕರು ಸ್ಥಳದಲ್ಲಿಯೇ ಇಲಾಖೆಯ , ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಮೊಬೈಲ್ ಮೂಲಕ ಸಂಪರ್ಕಿಸಿದ್ದು. ಇಡೀ ಗ್ರಾಮಕ್ಕೆ ಗ್ರಾಮವೇ ಪಿಡಿಒ ವಿರುದ್ಧ ಗಂಭೀರವಾಗಿ ಆರೋಪಗಳ ಸುರಿಮಳೆಗೈದಿದ್ದಾರೆ. ಪರಿಣಾಮ ಗ್ರಾಮಸ್ಥರ ಹಕ್ಕೊತ್ತಾಯದ ಮೇರೆಗೆ ಪಿಡಿಒ ರನ್ನು ಕೂಡಲೇ ಅಮಾನತ್ತುಗೊಳಿಸಿ ಆದೇಶಿಸುವಂತೆ. ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ , ಗ್ರಾಮಸ್ಥರ ಉಪಸ್ಥಿತಿಯಲ್ಲಿಯೇ ಶಾಸಕರು ಮೌಕಿಕ ಶಿಪಾರಸ್ಸು ನೀಡಿದರು. ಶಾಸಕರಾದ ತಾವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ದಾವಿಸಿದಾಗ ಕೂಡ , ಪಿಡಿಒರವರು ಗೈರು ಹಾಜರಿದ್ದರು ಇದು ಗ್ರಾಮಸ್ಥರ ಆರೋಪಕ್ಕೆ ಮತ್ತಷ್ಟು ಪುಷ್ಠಿ ನೀಡಿತ್ತು. ಅವರು ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ , ಗ್ರಾಮದ ಸಂದುಗೊಂದಲುಗಳಲ್ಲಿ ಸಂಚರಿಸಿದರು. ಗ್ರಾಮದ ಗಲ್ಲಿ ಗಲ್ಲಿಗಳಲ್ಕಿನ ದುಸ್ಥಿತಿ ಖುದ್ದು ವೀಕ್ಷಿಸಿದರು , ಗ್ರಾಮದೆಲ್ಲೆಡೆ ತೆರಳಿ ಗ್ರಾಮಸ್ಥರ ಅಹವಾಲುಗಳನ್ನು ಸ್ವತಃ ಅವರೇ ಆಲಿಸಿದರು. ಈ ಸಂದರ್ಭದಲ್ಲಿ ಪಿಡಿಒ ರವರು ಗ್ರಾಮವನ್ನು , ತೀರಾ ನಿರ್ಲಕ್ಷ್ಯಿಸಿದ್ದು ಗ್ರಾಮಸ್ಥರ ಅಹವಾಲುಗಳನ್ನು ಆಲಿಸುತ್ತಿಲ್ಲ. ಗ್ರಾಮಸ್ಥರೊಂದಿಗೆ ಅಹಿತಕರವಾಗಿ ವರ್ತಿಸುತ್ತಿದ್ದು. ಗ್ರಾಮದಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುತ್ತಿಲ್ಲ , ಮತ್ತು ಸ್ಪಂದಿಸುತ್ತಿಲ್ಲ ಎಂದು ದೂರಿದರು. ಪಿಡಿಒರವರೇ ಗ್ರಾಮಸ್ಥರೊಂದಿಗೆ ಅನಾಗರೀಕ ರೀತಿಯಲ್ಲಿ ವರ್ತಿಸುತ್ತಿದ್ದು , ತಮ್ಮ ಗ್ರಾಮವನ್ನು ಆನಾಥವನ್ನಾಗಿಸಿದ್ದಾರೆ. ತಾಲೂಕು ಪಂಚಾಯ್ತಿ ಅಧಿಕಾರಿ ಹಾಗೂ ಪಿಡಿಒರವರು , ಗ್ರಾಮವನ್ನು ನಿರ್ಲಕ್ಷ್ಯ ದಿಂದ ಕಾಣುತ್ತಿದ್ದು , ತಮ್ಮನ್ನು ತೀರಾ ಆನಾದಾರಕ್ಕೀಡು ಮಾಡಿದ್ದಾರೆ ಎಂದು ಶಾಸಕರಲ್ಲಿ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು. ಶಾಸಕರು ಗ್ರಾಮಸ್ಥರ ಹಾಗೂ ನೆರೆದಂತಹ ನೂರಾರು ಮಹಿಳೆಯರ , ಗಂಭೀರ ಆರೋಪಗಳ ಸುರಿಮಳೆಯ ಪರಿಣಾಮ. ಮತ್ತು ಗ್ರಾಮದ ಮುಖಂಡರ , ಯುವಕರ ಹೋರಾಟಗಾರರ ಹಕ್ಕೊತ್ತಾಯದ ಮೇರೆಗೆ. ಶಾಸಕರಾದ ತಾವು ಗ್ರಾಮಕ್ಕೆ ಭೇಟಿ ನೀಡಿ ಕಾಮಗಾರಿಗೆ ಚಾಲನೆ ನೀಡುವಲ್ಲಿ ತೊಡಗಿದ್ದಾಗಿಯೂ ಕೂಡ ಗೈರಾಗಿದ್ದು , ಹಾಗೂ ತಾವೇ ಖುದ್ದಾಗಿ ಗ್ರಾಮಸ್ಥರೆದುರಲ್ಲೇ ಪಿಡಿಒರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಅಲಭ್ಯವಾದ ಪಿಡಿಒರನ್ನು. ಕೂಡಲೇ ಅಮಾನತ್ತು ಮಾಡುವಂತೆ ಇಲಾಖೆಯ ಉನ್ನತಾಧಿಕಾರಿಗೆ , ಶಾಸಕರು ಸ್ಥಳದಲ್ಲಿಯೇ ದೂರವಾಣಿ ಮೂಲಕ ಶಿಪಾರಸ್ಸು ಮಾಡಿದ್ದಾರೆ. ಈ ಸಂದರ್ಭದಲ್ಲಿ ಇಒ ಆನಂದಪ್ಪ ಹಾಜರಿದ್ದರು , ಗ್ರಾಮದ ಮುಖಂಡರು , ಮಹಿಳೆಯರು , ವೃದ್ಧರು , ಯುವಕರು , ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು , ಗ್ರಾಮದ ಹಿರಿಯರು , ವಿವಿದ ಸಮುದಾಯಗಳ ಪ್ರಮುಖರು ಉಪಸ್ಥಿತರಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- ಬಳ್ಳಾರಿ, ಏ.30: ನಗರದ ಶ್ರೇಷ್ಠ ಇಂಟರ್ ನ್ಯಾಷನಲ್ ಸ್ಕೂಲ್ ವತಿಯಿಂದ ಮೇ 9ರಂದು “ಆರೋಗ್ಯಕ್ಕಾಗಿ ಸಿಹಿ” ಎಂಬ ವಿಶೇಷ ಮಧುಮೇಹ ಜಾಗೃತಿ ಕಾರ್ಯಕ್ರಮ ಹಾಗೂ ಸಿರಿಧಾನ್ಯಗಳ ಅಡುಗೆ ಸ್ಪರ್ಧೆ ಆಯೋಜಿಸಲಾಗಿದೆ. ನಗರದ ಸಂಗನಕಲ್ಲು ರಸ್ತೆಯಲ್ಲಿರುವ ಶಂಕರ್ ಮಠದ ಭಾರತಿ ತೀರ್ಥ ಸಭಾಂಗಣದಲ್ಲಿ ಸಂಜೆ 4 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಶಾಲೆಯ ಸಂಸ್ಥಾಪಕ ಬ್ರಹ್ಮಯ್ಯ ನಾಯ್ಡು ಈ ಕುರಿತು ಮಾಹಿತಿ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಖ್ಯಾತ ಆರೋಗ್ಯ ತಜ್ಞರಾದ ಡಾ. ಪರಿಮಳಾ ಜಗೇಶ್, ಸಾಧನಾ ಯೋಗ ಕೇಂದ್ರದ ಸಂಸ್ಥಾಪಕಿ ಶ್ರೀಮತಿ ರೂಪಾ ಹಾಗೂ ಡಾ. ಪ್ರವೀಣ್ ಕುಮಾರ್ ಭಾಗವಹಿಸಿ ಮಧುಮೇಹ ನಿಯಂತ್ರಣ, ಆಹಾರ ಪದ್ಧತಿ ಹಾಗೂ ಆರೋಗ್ಯಕರ ಜೀವನಶೈಲಿಯ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಮಹಿಳೆಯರಿಗಾಗಿ ಸಿರಿಧಾನ್ಯಗಳ ಅಡುಗೆ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಸಿಹಿ ಮತ್ತು ಖಾರ ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಕೃತಕ ಬಣ್ಣಗಳು ಮತ್ತು ಮೈದಾ ಬಳಕೆ ನಿಷೇಧಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ವಿಜೇತರಿಗೆ ಒಟ್ಟು 8,500 ರೂ. ನಗದು ಬಹುಮಾನ ನೀಡಲಾಗುತ್ತದೆ. ಪ್ರಥಮ ಬಹುಮಾನವಾಗಿ 5,000 ರೂ., ದ್ವಿತೀಯ ಬಹುಮಾನವಾಗಿ 2,500 ರೂ. ಮತ್ತು ತೃತೀಯ ಬಹುಮಾನವಾಗಿ 1,000 ರೂ. ನಿಗದಿಪಡಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ಇರುವ ಮಹಿಳೆಯರು 9686 9686 99 ಸಂಖ್ಯೆಗೆ ಕರೆ ಮಾಡುವ ಮೂಲಕ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ www.sisballari.com� ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಸಂಘಟಕರು ಮನವಿ ಮಾಡಿದ್ದಾರೆ. ಆರೋಗ್ಯದ ಬಗ್ಗೆ ಕಾಳಜಿ ಇರುವವರು ಹಾಗೂ ಅಡುಗೆಯಲ್ಲಿ ಆಸಕ್ತಿ ಹೊಂದಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಸ್ಥೆ ಕೋರಿದೆ.2
- ಶಿಗ್ಗಾಂವಿ ತಾಲೂಕು ಹುಲಿಕಟ್ಟಿ ಗ್ರಾಮದಲ್ಲಿ ಸಿಡಿಲು ಬಡಿತಕ್ಕೆ ಸಾವನ್ನಪ್ಪಿದ ಕುರಿಗಾಹಿ ದಿ.ಮಾಳಪ್ಪ ಸೋಮಣ್ಣ ಗಡ್ಡೆ ಅವರ ಕುಟುಂಬದ ಸದಸ್ಯರನ್ನು ಶಿಗ್ಗಾಂವ ಸವಣೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಾಸೀರ್ ಖಾನ್ ಪಠಾಣ ಭೇಟಿ ಮಾಡಿ ಸಾಂತ್ವಾನ ಹೇಳಿ ₹4,00,000/- ಲಕ್ಷ ರೂಪಾಯಿಗಳ ಪರಿಹಾರದ ಚೆಕ್ ವಿತರಣೆ ಮಾಡಲಾಯಿತು. ಈ ವೇಳೆ ಗಾಯಗೊಂಡ ಶ್ರೀ ಆಕಾಶ ಮಾಳಪ್ಪ ಗಡ್ಡೆ ಅವರ ಆರೋಗ್ಯ ವಿಚಾರಿಸಿ ಚಿಕಿತ್ಸೆಯ ವೆಚ್ಚ ಸರ್ಕಾರದಿಂದ ಭರಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ತಹಶೀಲ್ದಾರ್ ಶ್ರೀ ರವಿ ಕೊರವರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.1
- “I sincerely request the Government of Karnataka to please help me. My house is a kutcha (temporary) house, and I do not have enough money to build a proper one. I request the government to provide some assistance. Right now, we are living in a house made of tin sheets and iron, and my children are suffering a lot due to the heat. There is hardly any ventilation, and no one here is listening to our problems. I humbly appeal to the government to please support us in building a proper house.”1