logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಬೇಡ BRO – ಡ್ರಗ್ಸ್ | ಬೇಕು BRO – ಲೈಫ್ Operation RISE – ವ್ಯಸನಮುಕ್ತ ಸಮಾಜದತ್ತ ನಮ್ಮ ಸಂಕಲ್ಪ 🚫 ಇಂದು ದಿನಾಂಕ 28.07.2026ರಂದು, ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಾದಕ ವಸ್ತುಗಳ ದುರುಪಯೋಗ ಕುರಿತು ಜಾಗೃತಿ ಕಾರ್ಯಗಾರವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಯಾದಗಿರಿ ಮತಕ್ಷೇತ್ರದ ಶಾಸಕರಾದ ಶ್ರೀ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ, ವ್ಯಸನದಿಂದ ದೂರವಿದ್ದು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಯಾದಗಿರಿ ಉಪವಿಭಾಗದ ಡಿವೈಎಸ್ಪಿ ಶ್ರೀ ಸುರೇಶ್ ನಾಯಕ್, ತಾಲೂಕು ಆರೋಗ್ಯಾಧಿಕಾರಿಗಳಾದ ಶ್ರೀಮತಿ ರಾಜೇಶ್ವರಿ ಗುತ್ತೇದಾರ್, ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಶಾಂತ ಸಜ್ಜನ್, ವಡಗೇರಾ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀ ಮೆಹಬೂಬ್ ಅಲಿ, ಪೊಲೀಸ್ ಸಿಬ್ಬಂದಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮಾದಕ ವಸ್ತುಗಳಿಗೆ ಇಲ್ಲ ಎನ್ನಿ – ಆರೋಗ್ಯಕರ, ಸುರಕ್ಷಿತ ಮತ್ತು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ.

2 hrs ago
user_Anand Kumar
Anand Kumar
Fitness Trainer ಯಾದಗಿರಿ, ಯಾದಗಿರಿ, ಕರ್ನಾಟಕ•
2 hrs ago
171078db-9ed3-4d12-88ab-319507a2d889

ಬೇಡ BRO – ಡ್ರಗ್ಸ್ | ಬೇಕು BRO – ಲೈಫ್ Operation RISE – ವ್ಯಸನಮುಕ್ತ ಸಮಾಜದತ್ತ ನಮ್ಮ ಸಂಕಲ್ಪ 🚫 ಇಂದು ದಿನಾಂಕ 28.07.2026ರಂದು, ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಾದಕ ವಸ್ತುಗಳ ದುರುಪಯೋಗ ಕುರಿತು ಜಾಗೃತಿ ಕಾರ್ಯಗಾರವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಯಾದಗಿರಿ ಮತಕ್ಷೇತ್ರದ ಶಾಸಕರಾದ ಶ್ರೀ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ, ವ್ಯಸನದಿಂದ ದೂರವಿದ್ದು

897d3938-3107-4256-bef5-5d2fc4876e94

ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಯಾದಗಿರಿ ಉಪವಿಭಾಗದ ಡಿವೈಎಸ್ಪಿ ಶ್ರೀ ಸುರೇಶ್ ನಾಯಕ್, ತಾಲೂಕು ಆರೋಗ್ಯಾಧಿಕಾರಿಗಳಾದ ಶ್ರೀಮತಿ ರಾಜೇಶ್ವರಿ ಗುತ್ತೇದಾರ್, ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಶಾಂತ ಸಜ್ಜನ್, ವಡಗೇರಾ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀ ಮೆಹಬೂಬ್ ಅಲಿ, ಪೊಲೀಸ್ ಸಿಬ್ಬಂದಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮಾದಕ ವಸ್ತುಗಳಿಗೆ ಇಲ್ಲ ಎನ್ನಿ – ಆರೋಗ್ಯಕರ, ಸುರಕ್ಷಿತ ಮತ್ತು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ.

More news from ಕರ್ನಾಟಕ and nearby areas
  • ಸಿಸಿ ರಸ್ತೆ ಕಾಮಾಗಾರಿ ವೇಳೆ ಐತಿಹಾಸಿಕ ಪುರಾತನ ಮೂರ್ತಿ ಪತ್ತೆ* ಸಿಸಿ ರಸ್ತೆ ಕಾಮಗಾರಿ ಮಾಡುವೆ ವೇಳೆಯಲ್ಲಿ ಐರಿಹಾಸಿಕ ಪುರಾತನದ ಮೂರ್ತಿ ಪತ್ತೆಯಾಗಿದ್ದು ಶ್ರೀ ಸೂರ್ಯನಾರಾಯಣ ದೇವರ ಶಿಲಾ ಮೂರ್ತಿ ‌ಎಂದು ತಿಳಿದು ಬಂದಿದೆ.ರುಕ್ಮಿಣಿ - ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಹೊಲಕುಂದಾ ಗ್ರಾಮದ ವಿಠ್ಠಲ ದೇವಸ್ಥಾನದ ಆವರಣದಲ್ಲಿನ ಸಿಸಿ ರಸ್ತೆ ಕಾಮಾಗಾರಿ ವೇಳೆ ಪತ್ತೆಯಾಗಿದೆ.2.1 ಅಡಿ ಎತ್ತರದ ಕಪ್ಪು ಶಿಲೆಯ ಮೂರ್ತಿ , ಎರಡೂ ಕೈಗಳಲ್ಲಿ ಕಮಲ ಹೂವುಗಳು ಹೊಂದಿರುವ‌ ಮೂರ್ತಿಯಾಗಿದ್ದು, ಸಂಧ್ಯಾದೇವಿ, ಛಾಯಾದೇವಿ ಹಾಗೂ ಸಪ್ತ ಅಶ್ವಗಳ ಕೆತ್ತನೆ ಒಳಗೊಂಡಿದೆ. ಸಂಶೋಧಕರ ಪ್ರಾಥಮಿಕ ಅಭಿಪ್ರಾಯದಂತೆ ರಾಷ್ಟ್ರಕೂಟರ ಕಾಲದ ಶಿಲ್ಪ ಎನ್ನುವ ಸಾಧ್ಯತೆ ಇದೆ
    1
    ಸಿಸಿ ರಸ್ತೆ ಕಾಮಾಗಾರಿ ವೇಳೆ ಐತಿಹಾಸಿಕ ಪುರಾತನ ಮೂರ್ತಿ ಪತ್ತೆ*
ಸಿಸಿ ರಸ್ತೆ ಕಾಮಗಾರಿ ಮಾಡುವೆ ವೇಳೆಯಲ್ಲಿ ಐರಿಹಾಸಿಕ ಪುರಾತನದ ಮೂರ್ತಿ ಪತ್ತೆಯಾಗಿದ್ದು ಶ್ರೀ ಸೂರ್ಯನಾರಾಯಣ ದೇವರ  ಶಿಲಾ ಮೂರ್ತಿ ‌ಎಂದು ತಿಳಿದು ಬಂದಿದೆ.ರುಕ್ಮಿಣಿ - ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಹೊಲಕುಂದಾ ಗ್ರಾಮದ ವಿಠ್ಠಲ ದೇವಸ್ಥಾನದ ಆವರಣದಲ್ಲಿನ ಸಿಸಿ ರಸ್ತೆ ಕಾಮಾಗಾರಿ ವೇಳೆ ಪತ್ತೆಯಾಗಿದೆ.2.1 ಅಡಿ ಎತ್ತರದ ಕಪ್ಪು ಶಿಲೆಯ ಮೂರ್ತಿ , ಎರಡೂ ಕೈಗಳಲ್ಲಿ ಕಮಲ ಹೂವುಗಳು ಹೊಂದಿರುವ‌ ಮೂರ್ತಿಯಾಗಿದ್ದು, ಸಂಧ್ಯಾದೇವಿ, ಛಾಯಾದೇವಿ ಹಾಗೂ ಸಪ್ತ ಅಶ್ವಗಳ ಕೆತ್ತನೆ ಒಳಗೊಂಡಿದೆ. ಸಂಶೋಧಕರ ಪ್ರಾಥಮಿಕ ಅಭಿಪ್ರಾಯದಂತೆ ರಾಷ್ಟ್ರಕೂಟರ ಕಾಲದ ಶಿಲ್ಪ ಎನ್ನುವ ಸಾಧ್ಯತೆ ಇದೆ
    user_MAHESH
    MAHESH
    ಚಿತ್ತಾಪುರ, ಕಲಬುರಗಿ, ಕರ್ನಾಟಕ•
    4 hrs ago
  • ಜನಪ್ರತಿನಿಧಿಗಳ ನಿರ್ದೇಶನ ಜಾರಿಗೆ ಒತ್ತಾಯ: ಮಾನ್ವಿ ನಾಗರಿಕ ವೇದಿಕೆ ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ಮಾನ್ವಿ ಪಟ್ಟಣದಲ್ಲಿ ವತಿಯಿಂದ ನಡೆಯುತ್ತಿರುವ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಂಬಂಧಿತ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಮಾನ್ವಿ ನಾಗರಿಕ ಹಿತ ರಕ್ಷಣಾ ವೇದಿಕೆ ಆರೋಪಿಸಿದೆ. ಸಭೆಯಲ್ಲಿ ನಿರ್ದೇಶನ, ಆದರೆ ಜಾರಿಯಿಲ್ಲ : ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯ ರಾದ ಎನ್. ಎಸ್. ಬೋಸರಾಜು ಮತ್ತು ಮಾನ್ಸಿ ಶಾಸಕರಾದ ಶ್ರೀ ಜಿ. ಹಂಪಯ್ಯ ನಾಯಕ ಸಾಹುಕಾರ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ 8 ಪ್ರಮುಖ ಬೇಡಿಕೆಗಳ ಕುರಿತು ಚರ್ಚಿಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾ ಗಿತ್ತು. ಆದರೆ ಆ ನಿರ್ದೇಶನಗಳು ಇದುವರೆಗೆ ಜಾರಿಯಾಗಿಲ್ಲ ಎಂದು ವೇದಿಕೆ ತಿಳಿಸಿದೆ. ಆಟೋ ನಗರದಿಂದ ಹೌಸಿಂಗ್ ಬೋರ್ಡ್ ವರೆಗೆ 2002ರಲ್ಲಿ ಭೂಸ್ವಾ ಧೀನ ಮಾಡಿಕೊಂಡ ಜಾಗದಲ್ಲಿ ತಕ್ಷಣ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಸರ್ವೇ ನಡೆಸಬೇಕು. ರಸ್ತೆ ಮಧ್ಯದಲ್ಲಿರುವ ಅಪಾಯಕಾರಿ ಹಾಗೂ ವಿಷಕಾರಿ ಮರಗಳನ್ನು ತೆರವುಗೊಳಿಸಬೇಕು. ರಸ್ತೆ ಅಗಲೀಕರಣ ಕಡಿಮೆ ಮಾಡಿರುವ ಸ್ಥಳಗಳನ್ನು ಮರುಪರಿಶೀಲಿಸಿ ಸರಿಪಡಿಸಬೇಕು. ಬಸವೇಶ್ವರ, ಅಂಬೇಡ್ಕರ್, ಗಾಂಧಿ ಜಿ, ವಾಲ್ಮೀಕಿ, ಮೇಜರ್ ಶಾನವಾ ಜ್ ಖಾನ್ ವೃತ್ತಗಳ ಅಗಲೀಕರಣ ಮತ್ತು ಸುಂದರೀಕರಣ ಕಾಮಗಾರಿ ಆರಂಭಿಸಬೇಕು. ವೈಜ್ಞಾನಿಕ ಡೈನೇ ಜ್ ವ್ಯವಸ್ಥೆ ನಿರ್ಮಿಸಿ ಮಳೆ ನೀರು ಸರಾಗವಾಗಿ ಮಾಡಬೇಕು. ಹರಿಯುವಂತೆ ಸಿಂಧನೂರು ಮಾದರಿಯಲ್ಲಿ ಭೂಗತ ವಿದ್ಯುತ್ ಕೇಬಲ್ ಅಳವಡಿಸಿ, ತೂಗು ತಂತಿ ತೆರವುಗೊಳಿಸಬೇಕು. ಕಾಮಗಾರಿಯ ಪ್ರತಿ ಹಂತದಲ್ಲೂ ನಾಗರಿಕ ವೇದಿಕೆಯೊಂದಿಗೆ ಸಮನ್ವಯ ಸಾಧಿಸಬೇಕು. 8. ವರದಿ: ನೀಡಿದ ನಿರ್ದೇಶನಗಳ ಅನುಷ್ಠಾನದ ಕುರಿತು ಲಿಖಿತ ಮಾಹಿತಿ ನೀಡಬೇಕು. ಸಭೆಯಲ್ಲಿ ಭರವಸೆಗಳು ಹಾಗೂ ನಿರ್ದೇ ಶನಗಳನ್ನು ನಿಗದಿತ ಕಾಲಮಿತಿಯಲ್ಲಿ ನೀಡಿದ ಅನುಷ್ಠಾನಗೊಳಿಸದಿದ್ದರೆ, ಒಂದು ವಾರದ ನಂತರ ಮಾನ್ವಿ ಜನತೆಯೊಂ ದಿಗೆ ಸೇರಿ ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಉಗ್ರ ಹೋರಾಟ ಹಮ್ಮಿ ಕೊಳ್ಳಲಾಗುವುದು ಎಂದು ಮಾನ್ವಿನಾಗರಿಕ ಹಿತ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ. ಈ ಕುರಿತು ತಹಸೀಲ್ದಾರರಿಗೆ ಲಿಖಿತ ಮನವಿಯನ್ನು ಸಲ್ಲಿಸಲಾಗಿದೆ. ಈ ವಿಳಂಬದಿಂದ ಉಂಟಾಗುವ ಎಲ್ಲಾ ಬೆಳವಣಿಗೆಗಳಿಗೆ ಆಡಳಿತ ವರ್ಗ ಹಾಗೂ ಸಂಬಂಧಿಸಿದ ಅಧಿಕಾರಿಗಳೇ ಹೊಣೆಗಾರರಾ ಗಿರುತ್ತಾರೆ ಎಂದು ವೇದಿಕೆ ತಿಳಿಸಿದೆ.
    3
    ಜನಪ್ರತಿನಿಧಿಗಳ ನಿರ್ದೇಶನ ಜಾರಿಗೆ ಒತ್ತಾಯ: ಮಾನ್ವಿ ನಾಗರಿಕ ವೇದಿಕೆ ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ
ಮಾನ್ವಿ ಪಟ್ಟಣದಲ್ಲಿ ವತಿಯಿಂದ ನಡೆಯುತ್ತಿರುವ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಂಬಂಧಿತ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಮಾನ್ವಿ ನಾಗರಿಕ ಹಿತ ರಕ್ಷಣಾ ವೇದಿಕೆ ಆರೋಪಿಸಿದೆ.
ಸಭೆಯಲ್ಲಿ ನಿರ್ದೇಶನ, ಆದರೆ ಜಾರಿಯಿಲ್ಲ : ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯ
ರಾದ ಎನ್. ಎಸ್. ಬೋಸರಾಜು ಮತ್ತು ಮಾನ್ಸಿ ಶಾಸಕರಾದ ಶ್ರೀ ಜಿ. ಹಂಪಯ್ಯ ನಾಯಕ ಸಾಹುಕಾರ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ 8 ಪ್ರಮುಖ ಬೇಡಿಕೆಗಳ ಕುರಿತು ಚರ್ಚಿಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾ ಗಿತ್ತು. ಆದರೆ ಆ ನಿರ್ದೇಶನಗಳು ಇದುವರೆಗೆ ಜಾರಿಯಾಗಿಲ್ಲ ಎಂದು ವೇದಿಕೆ ತಿಳಿಸಿದೆ.
ಆಟೋ ನಗರದಿಂದ ಹೌಸಿಂಗ್ ಬೋರ್ಡ್ ವರೆಗೆ 2002ರಲ್ಲಿ ಭೂಸ್ವಾ ಧೀನ ಮಾಡಿಕೊಂಡ
ಜಾಗದಲ್ಲಿ ತಕ್ಷಣ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಸರ್ವೇ ನಡೆಸಬೇಕು. ರಸ್ತೆ ಮಧ್ಯದಲ್ಲಿರುವ ಅಪಾಯಕಾರಿ ಹಾಗೂ ವಿಷಕಾರಿ ಮರಗಳನ್ನು ತೆರವುಗೊಳಿಸಬೇಕು.
ರಸ್ತೆ ಅಗಲೀಕರಣ ಕಡಿಮೆ ಮಾಡಿರುವ ಸ್ಥಳಗಳನ್ನು ಮರುಪರಿಶೀಲಿಸಿ ಸರಿಪಡಿಸಬೇಕು. ಬಸವೇಶ್ವರ, ಅಂಬೇಡ್ಕರ್, ಗಾಂಧಿ ಜಿ, ವಾಲ್ಮೀಕಿ, ಮೇಜರ್ ಶಾನವಾ ಜ್ ಖಾನ್ ವೃತ್ತಗಳ ಅಗಲೀಕರಣ ಮತ್ತು ಸುಂದರೀಕರಣ ಕಾಮಗಾರಿ ಆರಂಭಿಸಬೇಕು. ವೈಜ್ಞಾನಿಕ ಡೈನೇ ಜ್ ವ್ಯವಸ್ಥೆ ನಿರ್ಮಿಸಿ ಮಳೆ ನೀರು
ಸರಾಗವಾಗಿ ಮಾಡಬೇಕು. ಹರಿಯುವಂತೆ
ಸಿಂಧನೂರು ಮಾದರಿಯಲ್ಲಿ ಭೂಗತ ವಿದ್ಯುತ್ ಕೇಬಲ್ ಅಳವಡಿಸಿ, ತೂಗು ತಂತಿ ತೆರವುಗೊಳಿಸಬೇಕು. ಕಾಮಗಾರಿಯ ಪ್ರತಿ ಹಂತದಲ್ಲೂ ನಾಗರಿಕ ವೇದಿಕೆಯೊಂದಿಗೆ ಸಮನ್ವಯ ಸಾಧಿಸಬೇಕು. 8. ವರದಿ: ನೀಡಿದ ನಿರ್ದೇಶನಗಳ ಅನುಷ್ಠಾನದ ಕುರಿತು ಲಿಖಿತ ಮಾಹಿತಿ ನೀಡಬೇಕು.
ಸಭೆಯಲ್ಲಿ ಭರವಸೆಗಳು ಹಾಗೂ ನಿರ್ದೇ ಶನಗಳನ್ನು ನಿಗದಿತ ಕಾಲಮಿತಿಯಲ್ಲಿ ನೀಡಿದ
ಅನುಷ್ಠಾನಗೊಳಿಸದಿದ್ದರೆ, ಒಂದು ವಾರದ ನಂತರ ಮಾನ್ವಿ ಜನತೆಯೊಂ ದಿಗೆ ಸೇರಿ ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಉಗ್ರ ಹೋರಾಟ ಹಮ್ಮಿ ಕೊಳ್ಳಲಾಗುವುದು ಎಂದು ಮಾನ್ವಿನಾಗರಿಕ ಹಿತ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.
ಈ ಕುರಿತು ತಹಸೀಲ್ದಾರರಿಗೆ ಲಿಖಿತ ಮನವಿಯನ್ನು ಸಲ್ಲಿಸಲಾಗಿದೆ. ಈ ವಿಳಂಬದಿಂದ ಉಂಟಾಗುವ ಎಲ್ಲಾ ಬೆಳವಣಿಗೆಗಳಿಗೆ ಆಡಳಿತ ವರ್ಗ ಹಾಗೂ ಸಂಬಂಧಿಸಿದ ಅಧಿಕಾರಿಗಳೇ ಹೊಣೆಗಾರರಾ ಗಿರುತ್ತಾರೆ ಎಂದು ವೇದಿಕೆ ತಿಳಿಸಿದೆ.
    user_Shivakumar Sajjan
    Shivakumar Sajjan
    Local News Reporter ಮಾನ್ವಿ, ರಾಯಚೂರು, ಕರ್ನಾಟಕ•
    10 hrs ago
  • ಹೂ ಮಳೆ ಸುರಿದು ಪೊಲೀಸ್ ಅಧಿಕಾರಿಗೆ ಅದ್ದೂರಿಯಾಗಿ ಬೀಳ್ಕೋಡುಗೆ ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು. ಅಫಜಲಪುರ ತಾಲೂಕಿನ ರೇವೂರ ಪೊಲೀಸ್ ಠಾಣೆ ಪಿ.ಎಸ್.ಐ.ಕಮಲು ಅವರಿಗೆ ಠಾಣಾ ಸಿಬ್ಬಂದಿಗಳು ಹೂ ಮಳೆ ಸುರಿದು ಅಭಿನಂದನೆ ಸಲ್ಲಿಸಿ ಅದ್ದೂರಿಯಾಗಿ ಬೀಲಕ್ಕೋಡುಗೆ ಮಾಡಿದರು.
    1
    ಹೂ ಮಳೆ ಸುರಿದು ಪೊಲೀಸ್ ಅಧಿಕಾರಿಗೆ ಅದ್ದೂರಿಯಾಗಿ ಬೀಳ್ಕೋಡುಗೆ ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.
ಅಫಜಲಪುರ ತಾಲೂಕಿನ ರೇವೂರ ಪೊಲೀಸ್ ಠಾಣೆ ಪಿ.ಎಸ್.ಐ.ಕಮಲು ಅವರಿಗೆ ಠಾಣಾ ಸಿಬ್ಬಂದಿಗಳು ಹೂ ಮಳೆ ಸುರಿದು ಅಭಿನಂದನೆ ಸಲ್ಲಿಸಿ ಅದ್ದೂರಿಯಾಗಿ ಬೀಲಕ್ಕೋಡುಗೆ ಮಾಡಿದರು.
    user_Afzalapur today news kannada
    Afzalapur today news kannada
    Local News Reporter ಅಫ್ಜಲಪುರ, ಕಲಬುರಗಿ, ಕರ್ನಾಟಕ•
    1 hr ago
  • ಕರಜಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಮಕ್ಕಳಿಗೆ ಕಲುಷಿತ ಆಹಾರ ನೀಡಿದವರ ಮೇಲೆ ಸೂಕ್ತ ಕ್ರಮ ಜರುಗಿಸಲು ನಿತೀನ ಗುತ್ತೇದಾರ ಆಗ್ರಹ ಕರಜಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಮಕ್ಕಳಿಗೆ ಕಲುಷಿತ ಆಹಾರ ನೀಡಿದವರ ಮೇಲೆ ಸೂಕ್ತ ಕ್ರಮ ಜರುಗಿಸಲು ನಿತೀನ ಗುತ್ತೇದಾರ ಆಗ್ರಹ
    1
    ಕರಜಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಮಕ್ಕಳಿಗೆ ಕಲುಷಿತ ಆಹಾರ ನೀಡಿದವರ ಮೇಲೆ ಸೂಕ್ತ ಕ್ರಮ ಜರುಗಿಸಲು ನಿತೀನ ಗುತ್ತೇದಾರ ಆಗ್ರಹ
ಕರಜಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಮಕ್ಕಳಿಗೆ ಕಲುಷಿತ ಆಹಾರ ನೀಡಿದವರ ಮೇಲೆ ಸೂಕ್ತ ಕ್ರಮ ಜರುಗಿಸಲು ನಿತೀನ ಗುತ್ತೇದಾರ ಆಗ್ರಹ
    user_Y..k.pujari
    Y..k.pujari
    Local News Reporter ಅಫ್ಜಲಪುರ, ಕಲಬುರಗಿ, ಕರ್ನಾಟಕ•
    6 hrs ago
  • ಮಹಾನ್ ಗುರು ಎಚ್ ಟಿ ಕುಲಕರ್ಣಿ ಅವರಿಗೆ ಅನಂತ ಕೋಟಿ ನಮನಗಳು ಎಚ್ ಟಿ ಕುಲಕರ್ಣಿ ಗುರುಗಳ ಅಂತಿಮ ಸಂಸ್ಕಾರ
    1
    ಮಹಾನ್ ಗುರು ಎಚ್ ಟಿ ಕುಲಕರ್ಣಿ ಅವರಿಗೆ ಅನಂತ ಕೋಟಿ ನಮನಗಳು ಎಚ್ ಟಿ ಕುಲಕರ್ಣಿ ಗುರುಗಳ ಅಂತಿಮ ಸಂಸ್ಕಾರ
    user_ABU NEWS CHANNEL ಸಂಪಾದಕರು
    ABU NEWS CHANNEL ಸಂಪಾದಕರು
    Pharmacist ಸಿಂದಗಿ, ವಿಜಯಪುರ, ಕರ್ನಾಟಕ•
    10 hrs ago
  • ಕೋಲಿ ಸಮಾಜದ ಯುವ ಅಟೋ ಚಾಲಕ ದತ್ತು ಖುರ್ಚಿ ಮೇಲೆ ಗಂಭೀರ ಮಾರಣಾಂತಿಕ ಹಲ್ಲೆ ಖಂಡಿಸಿ ಬೃಹತ್ ಪ್ರತಿಭಟನೆ
    1
    ಕೋಲಿ ಸಮಾಜದ ಯುವ ಅಟೋ ಚಾಲಕ ದತ್ತು ಖುರ್ಚಿ ಮೇಲೆ ಗಂಭೀರ ಮಾರಣಾಂತಿಕ ಹಲ್ಲೆ ಖಂಡಿಸಿ ಬೃಹತ್ ಪ್ರತಿಭಟನೆ
    user_Nava karnataka News channel
    Nava karnataka News channel
    Local News Reporter ಅಫ್ಜಲಪುರ, ಕಲಬುರಗಿ, ಕರ್ನಾಟಕ•
    17 hrs ago
  • ವ್ಯಸನ ಮುಕ್ತ ಸಮಾಜ ಕಟ್ಟಲು ಪಣ ತೊಡಬೇಕು : ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ ಮದ್ಯ ಹಾಗೂ ಮಾದಕ ವಸ್ತುಗಳ ಸೇವೆಯಿಂದ ಅನೇಕ ಕುಟುಂಬಗಳು ವಿವಿಧ ರೀತಿಯ ಸಮಸ್ಯೆಗಳು ಎದುರಿಸುತ್ತಿದ್ದು, ಎಲ್ಲರೂ ವ್ಯಸನ ಮುಕ್ತ ಸಮಾಜ ಕಟ್ಟಲು ಪಣ ತೊಡಬೇಕು ಎಂದು ರಾಯಚೂರು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ ಅವರು ಹೇಳಿದರು. ಆಗಸ್ಟ್ 01ರ ಶನಿವಾರ ದಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಯಚೂರು ಹಾಗೂ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಸಂಯುಕ್ತಾಶ್ರದಲ್ಲಿ ಡಾ.ಮಹಾಂತ ಶಿವಯೋಗಿ ಅವರ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಲಕ್ಷಾಂತರ ಜನರು ವಿವಿಧ ರೀತಿಯ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಕಾಲೇಜಿನ ಹಂತದಲ್ಲಿಯೇ ಮಾದಕ ವ್ಯಸನಕ್ಕೆ ಬಲಿಯಾದ ಯುವಕರು ಅದರಿಂದ ಹೊರಬರಲಾಗದೆ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ದೇಶದ ಭವಿಷ್ಯ ರೂಪಿಸಬೇಕಾದ ಯುವ ಸಮೂಹ ಮೋಜಿಗಾಗಿ ಮಾದಕ ವ್ಯಸನಿಗಳಾಗುತ್ತಿರುವುದು ವಿಷಾದನೀಯ ಎಂದರು. ಪದವಿ ಕಾಲೇಜಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಅರ್ಥಪೂರ್ಣವಾಗಿದೆ. ಇಗಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಉತ್ತಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ತಂದೆ, ತಾಯಿಯರ ಆಸೆಗಳನ್ನು ಈಡೇರಿಸಲು ವಿಫಲವಾಗುತ್ತಾರೆ. ಮಹಾಂತ್ ಶಿವಯೋಗಿಗಳು ಮಹಾಂತ್ ಜೋಳಿಗೆಯನ್ನು ಸ್ಥಾಪಿಸಿ. ಸಮಾಜದಲ್ಲಿ ಆನೇಕ ಕುಟುಂಬಗಳನ್ನು ದುಶ್ಚಟಗಳಿಂದ ಹೊರತಂದರು. ಅವರು ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಸಾಮಾಜಿಕ ಕಾರ್ಯಗಳನ್ನು ‌ಮಾಡಿದ್ದಾರೆ ಎಂದರು. ಡ್ರಗ್ಸ್ ಮುಕ್ತ ರಾಜ್ಯಕ್ಕಾಗಿ ಆಪರೇಷನ್ ರೈಸಿ ಈಗಾಗಲೇ ಸರ್ಕಾರದಿಂದ ಪ್ರಾರಂಭವಾಗಿದೆ. ಸಾರ್ವಜನಿಕರಿಗೆ ಡ್ರಗ್ಸ್ ಕುರಿತು ಮಾಹಿತಿ ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವ ಮೂಲಕ ಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಎಲ್ಲರೂ ಸಹಕರಿಸಬೇಕು. ಅಲ್ಲದೆ ‌ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಅತ್ಯಂತ ಶ್ರದ್ಧೆಯಿಂದ ಚೆನ್ನಾಗಿ ಓದಿ ಉನ್ನತ ಮಟ್ಟದ ಅಧಿಕಾರಿಗಳಾಗಿ ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ನಂತರ ಉಪನ್ಯಾಸಕರಾಗಿ ಮನೋ ವೈದ್ಯರಾದ ಡಾ.ವಿ.ಎ.ಮಾಲಿ ಪಾಟೀಲ್ ಅವರು ಮಾತನಾಡಿ, ಡಾ.ಮಹಾಂತ ಶಿವಯೋಗಿಗಳ ಜನ್ಮದಿನವು ಬಹಳಷ್ಟು ಮಹತ್ವ ಪೂರ್ಣವಾಗಿದ್ದು, ಜೀವನದಲ್ಲಿ ಅವರು ಮಹಾಂತ ಜೋಳಿಗೆ ದುಶ್ಚಟಗಳ ಭಿಕ್ಷೆ ಎನ್ನುವಂತೆ ಪ್ರತಿಯೊಬ್ಬರೂ ಇವರ ರೀತಿಯ ಜೀವನವನ್ನು ನಡೆಸಿದರೆ ಯುವಜನತೆಯು ವ್ಯಸನಗಳಿಂದ ಮುಕ್ತರಾಗಿ ಒಳ್ಳೆಯ ಜೀವನವನ್ನು ನಡೆಸಲು ಅನುಕೂಲವಾಗುತ್ತದೆ ಎಂದರು.
    1
    ವ್ಯಸನ ಮುಕ್ತ ಸಮಾಜ ಕಟ್ಟಲು ಪಣ ತೊಡಬೇಕು : ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್
ಮದ್ಯ ಹಾಗೂ ಮಾದಕ ವಸ್ತುಗಳ ಸೇವೆಯಿಂದ ಅನೇಕ ಕುಟುಂಬಗಳು ವಿವಿಧ ರೀತಿಯ ಸಮಸ್ಯೆಗಳು ಎದುರಿಸುತ್ತಿದ್ದು, ಎಲ್ಲರೂ ವ್ಯಸನ ಮುಕ್ತ ಸಮಾಜ ಕಟ್ಟಲು ಪಣ ತೊಡಬೇಕು ಎಂದು ರಾಯಚೂರು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ ಅವರು ಹೇಳಿದರು.
ಆಗಸ್ಟ್ 01ರ ಶನಿವಾರ ದಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಯಚೂರು ಹಾಗೂ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಸಂಯುಕ್ತಾಶ್ರದಲ್ಲಿ ಡಾ.ಮಹಾಂತ ಶಿವಯೋಗಿ ಅವರ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಲಕ್ಷಾಂತರ ಜನರು ವಿವಿಧ ರೀತಿಯ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಕಾಲೇಜಿನ ಹಂತದಲ್ಲಿಯೇ ಮಾದಕ ವ್ಯಸನಕ್ಕೆ ಬಲಿಯಾದ ಯುವಕರು ಅದರಿಂದ ಹೊರಬರಲಾಗದೆ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ದೇಶದ ಭವಿಷ್ಯ ರೂಪಿಸಬೇಕಾದ ಯುವ ಸಮೂಹ ಮೋಜಿಗಾಗಿ ಮಾದಕ ವ್ಯಸನಿಗಳಾಗುತ್ತಿರುವುದು ವಿಷಾದನೀಯ ಎಂದರು.
ಪದವಿ ಕಾಲೇಜಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಅರ್ಥಪೂರ್ಣವಾಗಿದೆ. ಇಗಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ದುಶ್ಚಟಗಳಿಗೆ ಬಲಿಯಾಗಿ  ತಮ್ಮ ಉತ್ತಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.  ತಂದೆ, ತಾಯಿಯರ ಆಸೆಗಳನ್ನು ಈಡೇರಿಸಲು ವಿಫಲವಾಗುತ್ತಾರೆ. ಮಹಾಂತ್ ಶಿವಯೋಗಿಗಳು ಮಹಾಂತ್ ಜೋಳಿಗೆಯನ್ನು ಸ್ಥಾಪಿಸಿ. ಸಮಾಜದಲ್ಲಿ ಆನೇಕ ಕುಟುಂಬಗಳನ್ನು  ದುಶ್ಚಟಗಳಿಂದ ಹೊರತಂದರು. ಅವರು ವಿವಿಧ  ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಸಾಮಾಜಿಕ ಕಾರ್ಯಗಳನ್ನು ‌ಮಾಡಿದ್ದಾರೆ ಎಂದರು.
ಡ್ರಗ್ಸ್ ಮುಕ್ತ ರಾಜ್ಯಕ್ಕಾಗಿ ಆಪರೇಷನ್ ರೈಸಿ ಈಗಾಗಲೇ ಸರ್ಕಾರದಿಂದ ಪ್ರಾರಂಭವಾಗಿದೆ. ಸಾರ್ವಜನಿಕರಿಗೆ ಡ್ರಗ್ಸ್ ಕುರಿತು ಮಾಹಿತಿ ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವ ಮೂಲಕ ಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಎಲ್ಲರೂ ಸಹಕರಿಸಬೇಕು. ಅಲ್ಲದೆ ‌ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಅತ್ಯಂತ ಶ್ರದ್ಧೆಯಿಂದ ಚೆನ್ನಾಗಿ ಓದಿ ಉನ್ನತ ಮಟ್ಟದ ಅಧಿಕಾರಿಗಳಾಗಿ ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಂತರ ಉಪನ್ಯಾಸಕರಾಗಿ ಮನೋ ವೈದ್ಯರಾದ ಡಾ.ವಿ.ಎ.ಮಾಲಿ ಪಾಟೀಲ್ ಅವರು ಮಾತನಾಡಿ, ಡಾ.ಮಹಾಂತ ಶಿವಯೋಗಿಗಳ ಜನ್ಮದಿನವು ಬಹಳಷ್ಟು ಮಹತ್ವ ಪೂರ್ಣವಾಗಿದ್ದು, ಜೀವನದಲ್ಲಿ ಅವರು ಮಹಾಂತ ಜೋಳಿಗೆ ದುಶ್ಚಟಗಳ ಭಿಕ್ಷೆ ಎನ್ನುವಂತೆ ಪ್ರತಿಯೊಬ್ಬರೂ ಇವರ ರೀತಿಯ ಜೀವನವನ್ನು ನಡೆಸಿದರೆ ಯುವಜನತೆಯು ವ್ಯಸನಗಳಿಂದ ಮುಕ್ತರಾಗಿ ಒಳ್ಳೆಯ ಜೀವನವನ್ನು ನಡೆಸಲು ಅನುಕೂಲವಾಗುತ್ತದೆ ಎಂದರು.
    user_K2 kannada News
    K2 kannada News
    ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
    1 hr ago
  • ಕೈದಿಗಳು ಪರಾರಿಯಾಗದಂತೆ ಮತ್ತು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳಿಗೆ ಖಡಕ್ ಸೂಚನೆ- ಡಿಜಿಪಿ‌ ಅಲೋಕ್ ಕಲಬುರಗಿ ಸೆಂಟ್ರಲ್ ಜೈಲಿಗೆ ಡಿಜಿಪಿ ಅಲೋಕಕುಮಾರ ಭೇಟಿ‌ನೀಡಿ ಬಳಿಕ ಡಿಜಿಪಿ ಅಲೋಕಕುಮಾರ ಅವರು ಮಾಧ್ಯಮದವರಿಗೆ ಪ್ರತಿಕ್ರಿಯೆ‌ ನೀಡಿದ್ದು.ಜೈಲಿನಿಂದ ಮೂವರು ಕೈದಿಗಳ ಪರಾರಿ ಘಟನೆ ಗಂಭೀರವಾಗಿ ಪರಿಗಣಿಸಲಾಗಿದೆ, ಈಗಾಗಲೇ ಪೊಲೀಸರು ಇಬ್ಬರನ್ನ ಬಂಧಿಸಿದ್ದಾರೆ, ಮಸ್ತಾನ್ ಬಂಧನಕ್ಕೆ ಹುಡುಕಾಟ ನಡೆಸ್ತಿದಾರೆ,ಘಟನೆಗೆ ಸಂಬಂಧಿಸಿದಂತೆ ಜೈಲು ಅಧಿಕಾರಿಗಳನ್ನ ಮತ್ತು ಸಿಬ್ಬಂದಿಗಳನ್ನ ಅಮಾನತು ಮಾಡಲಾಗಿದೆ,ಜೈಲಿನ ಭದ್ರತೆ ಹೆಚ್ಚಿಸಲು ಅಧಿಕಾರಿಗಳ ಜೊತೆ ಚರ್ಚಿಸಿಲಾಗಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ,ಜೈಲಿನ ತಂತಿ ಬೇಲಿ ಸುಸ್ಥಿತಿಯಲ್ಲಿಡಲು ಸೂಚಿಸಲಾಗಿದೆ,ಜೈಲು ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯಿದೆ. ಶೀಘ್ರದಲ್ಲೇ ಸಿಬ್ಬಂದಿಗಳ ನೇಮಕ ಮಾಡಿಕೊಳ್ಳಲಾಗುವುದು, ಇನ್ನು ಕೈದಿಗಳು ಪರಾರಿಯಾಗದಂತೆ ಮತ್ತು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ ಎಂದು ಹೇಳಿದರು
    1
    ಕೈದಿಗಳು ಪರಾರಿಯಾಗದಂತೆ ಮತ್ತು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳಿಗೆ ಖಡಕ್ ಸೂಚನೆ- ಡಿಜಿಪಿ‌ ಅಲೋಕ್ 
ಕಲಬುರಗಿ ಸೆಂಟ್ರಲ್ ಜೈಲಿಗೆ ಡಿಜಿಪಿ ಅಲೋಕಕುಮಾರ ಭೇಟಿ‌ನೀಡಿ ಬಳಿಕ ಡಿಜಿಪಿ ಅಲೋಕಕುಮಾರ ಅವರು ಮಾಧ್ಯಮದವರಿಗೆ ಪ್ರತಿಕ್ರಿಯೆ‌ ನೀಡಿದ್ದು.ಜೈಲಿನಿಂದ ಮೂವರು ಕೈದಿಗಳ ಪರಾರಿ ಘಟನೆ ಗಂಭೀರವಾಗಿ ಪರಿಗಣಿಸಲಾಗಿದೆ, ಈಗಾಗಲೇ ಪೊಲೀಸರು ಇಬ್ಬರನ್ನ ಬಂಧಿಸಿದ್ದಾರೆ, ಮಸ್ತಾನ್ ಬಂಧನಕ್ಕೆ ಹುಡುಕಾಟ ನಡೆಸ್ತಿದಾರೆ,ಘಟನೆಗೆ ಸಂಬಂಧಿಸಿದಂತೆ ಜೈಲು ಅಧಿಕಾರಿಗಳನ್ನ ಮತ್ತು ಸಿಬ್ಬಂದಿಗಳನ್ನ ಅಮಾನತು ಮಾಡಲಾಗಿದೆ,ಜೈಲಿನ ಭದ್ರತೆ ಹೆಚ್ಚಿಸಲು ಅಧಿಕಾರಿಗಳ ಜೊತೆ ಚರ್ಚಿಸಿಲಾಗಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ,ಜೈಲಿನ ತಂತಿ ಬೇಲಿ ಸುಸ್ಥಿತಿಯಲ್ಲಿಡಲು ಸೂಚಿಸಲಾಗಿದೆ,ಜೈಲು ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯಿದೆ. ಶೀಘ್ರದಲ್ಲೇ ಸಿಬ್ಬಂದಿಗಳ ನೇಮಕ ಮಾಡಿಕೊಳ್ಳಲಾಗುವುದು, ಇನ್ನು ಕೈದಿಗಳು ಪರಾರಿಯಾಗದಂತೆ ಮತ್ತು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ ಎಂದು ಹೇಳಿದರು
    user_MAHESH
    MAHESH
    ಚಿತ್ತಾಪುರ, ಕಲಬುರಗಿ, ಕರ್ನಾಟಕ•
    9 hrs ago
  • ಹೋರಾಟವೇ ಜೀವನ – ಕೋಲಿ ಸಮಾಜದ ಧ್ವನಿಯಾಗಿ ಸಂತೋಷ್ ಬೆಣ್ಣೂರು ಅವರ ಪಯಣ
    1
    ಹೋರಾಟವೇ ಜೀವನ – ಕೋಲಿ ಸಮಾಜದ ಧ್ವನಿಯಾಗಿ ಸಂತೋಷ್ ಬೆಣ್ಣೂರು ಅವರ ಪಯಣ
    user_Nava karnataka News channel
    Nava karnataka News channel
    Local News Reporter ಅಫ್ಜಲಪುರ, ಕಲಬುರಗಿ, ಕರ್ನಾಟಕ•
    23 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.