ಇಂಡಿಯನ್ ಗ್ಯಾಸ್ ವಿತರಣೆಯಲ್ಲಿ ಅಕ್ರಮ ತಡೆಯಲು ಜಯ ಕರ್ನಾಟಕ ಜನಪರ ವೇದಿಕೆಯಿಂದ ಮನವಿ. ಇಂಡಿಯನ್ ಗ್ಯಾಸ್ ವಿತರಣೆಯಲ್ಲಿ ಅಕ್ರಮ ತಡೆಯಲು ಜಯ ಕರ್ನಾಟಕ ಜನಪರ ವೇದಿಕೆಯಿಂದ ಮನವಿ. ಯಾದಗಿರಿ :ಗ್ಯಾಸ್ ವಿತರಣಾ ಕೇಂದ್ರದ ಸಂಗ್ರಹಣ ಗುದಾಮಿನಲ್ಲಿ ಗ್ರಾಹಕರಿಗೆ ನೀಡಬೇಕಾದ ಸಿಲೆಂಡರನಲ್ಲಿ ತೂಕದ ವ್ಯತ್ಯಾಸ, ಗ್ಯಾಸ್ ಕಳ್ಳತನ ಮಾಡುತ್ತಿರುವ ಕುರಿತು ಜಯ ಕರ್ನಾಟಕ ಜನಪರ ವೇದಿಕೆ ನೇರ ಆರೋಪ ಮಾಡಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೆ ಮನವಿ ಸಲ್ಲಿಸಿದರು. ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ಇಂಡಿಯನ್ ಗ್ಯಾಸ್ ಏಜೆನ್ಸಿಯವರ ವಿರುದ್ದ ಪ್ರತಿಭಟನೆ ನಡೆಸಿ ಪರಿಶೀಲನೆ ನಡೆಸಿ ಗ್ರಾಹಕರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಜಯ ಕರ್ನಾಟಕ ಜನಪರ ವೇದಿಕೆಯ ಪದಾಧಿಕಾರಿಗಳು ಸರ್ವ ಸದಸ್ಯರು ಜಿಲ್ಲಾ ಎಸ್ ಪಿ ಆಫಿಸಿಗೆ ತೆರಳಿ ಗುರುವಾರ ಮನವಿ ಸಲ್ಲಿಸುವ ಮೂಲಕ ವಿತರಣಾ ಕೇಂದ್ರದವಿರುದ್ಧ ಆಕ್ರೋಶ ಹೊರ ಹಾಕಿದರು. ಸಗರ ಗ್ರಾಮದ ಗ್ಯಾಸ್ ವಿತರಣಾ ಕೇಂದ್ರದಿಂದ ಗ್ರಾಹಕರು ಶಹಾಪುರ ಪೊಲೀಸ್ ಠಾಣೆಗೆ ಪರಿಶೀಲನೆಗಾಗಿ ಸಿಲೆಂಡರ್ ತಗೆದುಕೊಂಡು ಹೋಗಿ ಪೊಲೀಸ್ ಅಧಿಕಾರಿಗಳ ಮುಂದೆ ಪರೀಕ್ಷೆ ಮಾಡಿಸಿದಾಗ ಸಿಲೆಂಡರನಲ್ಲಿ ತೂಕದಲ್ಲಿ ಮೂರು ನಾಲ್ಕು ಕೇಜೆ ವ್ಯತ್ಯಾಸವಿರುವುದು ಕಂಡು ಬಂದರೂ ಕೂಡಾ ಅವರ ಮೇಲೆ ಯಾವುದೇ ಕ್ರಮ ಜರುಗಿಸದೆ ಇರುವುದರಿಂದ ಜಯ ಜನಪರ ವೇದಿಕೆ ಪೊಲೀಸ್ ಠಾಣೆ ವಿರುದ್ಧ ಆಕ್ರೋಶದ ಕಿಡಿಕಾರಿದರು. ಇದೆ ರೀತಿ ಸಾರ್ವಜನಿಕರಿಗೆ ಈ ಏಜೇನ್ಸಿಯವರು ಮೋಸ ವಂಚನೆ ಮಾಡುತ್ತಾ ಹೋದರೆ ನಾವು ಸುಮ್ಮನೆ ಕೂಡುವ ಮಾತೇ ಇಲ್ಲಾ ರಾಜ್ಯಾಧ್ಯಂತ ಬೃಹತ್ ಪ್ರತಿಭಟನೆ ಮಾಡುವುದಾಗಿ ಈ ಮೂಲಕ ಎಚ್ಚರಿಕೆ ನೀಡಲಾಗುವುದು ಎಂದು ಜಯ ಕರ್ನಾಟಕ ಜನಪರ ವೇದಿಕೆ ನೀಡಲಾಗುವುದು ಎಂದರು.
ಇಂಡಿಯನ್ ಗ್ಯಾಸ್ ವಿತರಣೆಯಲ್ಲಿ ಅಕ್ರಮ ತಡೆಯಲು ಜಯ ಕರ್ನಾಟಕ ಜನಪರ ವೇದಿಕೆಯಿಂದ ಮನವಿ. ಇಂಡಿಯನ್ ಗ್ಯಾಸ್ ವಿತರಣೆಯಲ್ಲಿ ಅಕ್ರಮ ತಡೆಯಲು ಜಯ ಕರ್ನಾಟಕ ಜನಪರ ವೇದಿಕೆಯಿಂದ ಮನವಿ. ಯಾದಗಿರಿ :ಗ್ಯಾಸ್ ವಿತರಣಾ ಕೇಂದ್ರದ ಸಂಗ್ರಹಣ ಗುದಾಮಿನಲ್ಲಿ ಗ್ರಾಹಕರಿಗೆ ನೀಡಬೇಕಾದ ಸಿಲೆಂಡರನಲ್ಲಿ ತೂಕದ ವ್ಯತ್ಯಾಸ, ಗ್ಯಾಸ್ ಕಳ್ಳತನ ಮಾಡುತ್ತಿರುವ ಕುರಿತು ಜಯ ಕರ್ನಾಟಕ ಜನಪರ ವೇದಿಕೆ ನೇರ ಆರೋಪ ಮಾಡಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೆ ಮನವಿ ಸಲ್ಲಿಸಿದರು. ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ಇಂಡಿಯನ್ ಗ್ಯಾಸ್ ಏಜೆನ್ಸಿಯವರ ವಿರುದ್ದ ಪ್ರತಿಭಟನೆ ನಡೆಸಿ ಪರಿಶೀಲನೆ ನಡೆಸಿ ಗ್ರಾಹಕರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಜಯ ಕರ್ನಾಟಕ ಜನಪರ ವೇದಿಕೆಯ ಪದಾಧಿಕಾರಿಗಳು ಸರ್ವ ಸದಸ್ಯರು ಜಿಲ್ಲಾ ಎಸ್ ಪಿ ಆಫಿಸಿಗೆ ತೆರಳಿ ಗುರುವಾರ
ಮನವಿ ಸಲ್ಲಿಸುವ ಮೂಲಕ ವಿತರಣಾ ಕೇಂದ್ರದವಿರುದ್ಧ ಆಕ್ರೋಶ ಹೊರ ಹಾಕಿದರು. ಸಗರ ಗ್ರಾಮದ ಗ್ಯಾಸ್ ವಿತರಣಾ ಕೇಂದ್ರದಿಂದ ಗ್ರಾಹಕರು ಶಹಾಪುರ ಪೊಲೀಸ್ ಠಾಣೆಗೆ ಪರಿಶೀಲನೆಗಾಗಿ ಸಿಲೆಂಡರ್ ತಗೆದುಕೊಂಡು ಹೋಗಿ ಪೊಲೀಸ್ ಅಧಿಕಾರಿಗಳ ಮುಂದೆ ಪರೀಕ್ಷೆ ಮಾಡಿಸಿದಾಗ ಸಿಲೆಂಡರನಲ್ಲಿ ತೂಕದಲ್ಲಿ ಮೂರು ನಾಲ್ಕು ಕೇಜೆ ವ್ಯತ್ಯಾಸವಿರುವುದು ಕಂಡು ಬಂದರೂ ಕೂಡಾ ಅವರ ಮೇಲೆ ಯಾವುದೇ ಕ್ರಮ ಜರುಗಿಸದೆ ಇರುವುದರಿಂದ ಜಯ ಜನಪರ ವೇದಿಕೆ ಪೊಲೀಸ್ ಠಾಣೆ ವಿರುದ್ಧ ಆಕ್ರೋಶದ ಕಿಡಿಕಾರಿದರು. ಇದೆ ರೀತಿ ಸಾರ್ವಜನಿಕರಿಗೆ ಈ ಏಜೇನ್ಸಿಯವರು ಮೋಸ ವಂಚನೆ ಮಾಡುತ್ತಾ ಹೋದರೆ ನಾವು ಸುಮ್ಮನೆ ಕೂಡುವ ಮಾತೇ ಇಲ್ಲಾ ರಾಜ್ಯಾಧ್ಯಂತ ಬೃಹತ್ ಪ್ರತಿಭಟನೆ ಮಾಡುವುದಾಗಿ ಈ ಮೂಲಕ ಎಚ್ಚರಿಕೆ ನೀಡಲಾಗುವುದು ಎಂದು ಜಯ ಕರ್ನಾಟಕ ಜನಪರ ವೇದಿಕೆ ನೀಡಲಾಗುವುದು ಎಂದರು.
- ತುಮಕೂರು ಈದ್ ಮಿಲಾದ್ ಹಬ್ಬದ ಆಚರಣೆಯಲ್ಲಿ ಕನ್ನಡ ಹಾಡಿಗೆ ಸ್ಟಪ್ ಹಾಕಿ ಸಂಭ್ರಮಿಸಿದ ಮುಸ್ಲಿಂ ಯುವಕರು1
- ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ಲಿ ಪೂಜೆ ನೆರವೇರಿಸಿದ ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ1
- ಧಾರವಾಡ ಮಾಳಾಪುರದ ಜಾಮಿಯಾ ಮಸೀದಿಯಲ್ಲಿ ಈದ್ ಮಿಲಾದ್ ವಿಶೇಷ ಕಾರ್ಯಕ್ರಮ ಈದ್ ಮಿಲಾದ್ ಹಬ್ಬದ ಅಂಗವಾಗಿ ಧಾರವಾಡ ಮಾಳಾಪುರದ ಜಾಮಿಯಾ ಮಸೀದಿಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೂ ಮುನ್ನ ಮಾಳಾಪುರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದವರು ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಸಂದೇಶ ಹಾಗೂ ಆದರ್ಶಗಳ ಕುರಿತು ಜಾಗೃತಿ ಮೂಡಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಧರ್ಮಗುರುಗಳು ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜೀವನ, ಆದರ್ಶ ಮತ್ತು ಸಮಾಜಕ್ಕೆ ನೀಡಿದ ಸಂದೇಶಗಳ ಕುರಿತು ಉಪನ್ಯಾಸ ನೀಡಿದರು.1
- ಇಳಕಲ್ಲ ಪೊಲೀಸ್ ಠಾಣೆಗೆ ಬೆಳಗಾವಿ ಉತ್ತರ ವಲಯ ವಿಭಾಗದ ಐಜಿಪಿ ಸಂದೀಪ್ ಪಾಟೀಲ್ ಭೇಟಿ ಇಳಕಲ್ಲ : ಇಲ್ಲಿನ ನಗರ ಮತ್ತು ಗ್ರಾಮೀಣ ಪೊಲೀಸ್ ಠಾಣೆಗಳಿಗೆ ಬೆಳಗಾವಿ ಉತ್ತರ ವಲಯದ ಐಜಿಪಿ ಸಂದೀಪ್ ಪಾಟೀಲ್ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಠಾಣೆಗೆ ಆಗಮಿಸಿದ ಐಜಿಪಿ ಅವರನ್ನು ಗ್ರಾಮೀಣ ಠಾಣೆಯ ಪಿಎಸ್‌ಐ ಮಲ್ಲಿಕಾರ್ಜುನ ಸತ್ತಿಗೌಡರ ಗೌರವ ಸಲ್ಲಿಸಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಡಿವೈಎಸ್‌ಪಿ ಸಂತೋಷ ಬನ್ನಟ್ಟಿ, ಸಿಪಿಐ ಸಂತೋಷ ಅಜೂರ, ಪಿಎಸ್‌ಐ ಮಂಜುನಾಥ ಪಾಟೀಲ, ಗ್ರಾಮೀಣ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಎಸ್.ಆರ್. ನಾಯಕ ಹಾಗೂ ಠಾಣೆಯ ಸಿಬ್ಬಂದಿ ಉಪಸ್ಥಿತರಿದ್ದರು.1
- ಬನಶಂಕರಿದೇವಿಗೆ ಹರಕೆ ; ಇಳಕಲ್ ದಿಂದ ಪಾದಯಾತ್ರೆ ಹೊರಟ ಕಾಶಪ್ಪನವರ ಅಭಿಮಾನಿಗಳು ಬನಶಂಕರಿದೇವಿಗೆ ಹರಕೆ ; ಇಳಕಲ್ ದಿಂದ ಪಾದಯಾತ್ರೆ ಹೊರಟ ಕಾಶಪ್ಪನವರ ಅಭಿಮಾನಿಗಳು ಇಳಕಲ್: ವಿಜಯಾನಂದ ಕಾಶಪ್ಪನವರ ಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ದೊರೆತ ಹಿನ್ನೆಲೆಯಲ್ಲಿ, ಈ ಹಿಂದೆ ಹೊತ್ತಿದ್ದ ಹರಕೆ ತೀರಿಸಲು ಅವರ ಅಭಿಮಾನಿಗಳು ಇಳಕಲ್ ದಿಂದ ಬನಶಂಕರಿ ದೇವಿಗೆ ಪಾದಯಾತ್ರೆ ಹೊರಟರು.4
- ಆಂಜನೇಯ ದೇವಾಲಯದ ಆವರಣದಲ್ಲಿ ಅಪವಿತ್ರ ಕೃತ್ಯ – ಸ್ವಯಂಪ್ರೇರಿತ ಬಂದ್‌ಗೆ ಅಭೂತಪೂರ್ವ ಬೆಂಬಲ; ಪೊಲೀಸ್ ಇಲಾಖೆಯ ಧೋರಣೆಗೆ ಬಿಜೆಪಿ ಆಕ್ರೋಶ ಆಂಜನೇಯ ದೇವಾಲಯದ ಆವರಣದಲ್ಲಿ ಅಪವಿತ್ರ ಕೃತ್ಯ – ಸ್ವಯಂಪ್ರೇರಿತ ಬಂದ್‌ಗೆ ಅಭೂತಪೂರ್ವ ಬೆಂಬಲ; ಪೊಲೀಸ್ ಇಲಾಖೆಯ ಧೋರಣೆಗೆ ಬಿಜೆಪಿ ಆಕ್ರೋಶ ಶಿಗ್ಗಾವಿ: ಪಟ್ಟಣದ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಅನ್ಯ ಕೋಮಿನ ಯುವಕನೊಬ್ಬ ಮೂತ್ರ ವಿಸರ್ಜನೆ ಮಾಡಿ, ಅಪವಿತ್ರಗೊಳಿಸಿದ ಘಟನೆಯನ್ನು ಖಂಡಿಸಿ ಪ್ರಮೋದ್ ಮುತಾಲಿಕ್ ಹಾಗೂ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅವರು ನೀಡಿದ್ದ ಬಂದ ಕರೆಗೆ ಸಾರ್ವಜನಿಕರು ಹಾಗೂ ವರ್ತಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎಂದು ಬಿಜೆಪಿ ತಾಲೂಕಾ ಅಧ್ಯಕ್ಷ ವಿಶ್ವನಾಥ ಹರವಿ ಹೇಳಿದರು. ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನದಲ್ಲಿ ನಡೆದ ಘಟನೆಯಿಂದ ಭಕ್ತಾದಿಗಳ ಮನಸ್ಸಿನಲ್ಲಿ ಆತಂಕ ಉಂಟಾಗಿದ್ದು, ಶಾಂತಿಯುತವಾಗಿ ಬಂದ್ ಆಚರಿಸುವ ಮೂಲಕ, ಆರೋಪಿಗೆ ಕಠಿಣಾತಿ ಕಠೀಣ ಶಿಕ್ಷೆ ಯಾಗಲೇಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಅಪರಾಧಿಗೆ ರಕ್ಷಣೆ ನೀಡುವ ಹುನ್ನಾರ ನಡೆದರೆ ಮತ್ತು ತಾಲೂಕಿನಲ್ಲಿ ಅವನಿಗೆ ನೀಡಿರುವ ಸೌಲತ್ತುಗಳನ್ನು ಹಿಂಪಡೆದು ಗಡಿಪಾರು ಮಾಡದಿದ್ದರೆ ಉಗ್ರ ಹೋರಾಟ ರೂಪಿಸಲಾಗುತ್ತದೆ ಎಂದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ನರಹರಿ ಕಟ್ಟಿ ಮಾತನಾಡಿ, ಘಟನೆಗೆ ಸಂಬಂಧವಿಲ್ಲದ ಸಣ್ಣ ಹುಡುಗರು, ಬಿಜೆಪಿ ನಾಯಕರು ಸೇರಿದಂತೆ ಇತರರಿಗೆ ಪೊಲೀಸ್ ನೋಟಿಸ್ ಜಾರಿ ಮಾಡಿ ನಮ್ಮ ಪ್ರತಿಭಟನೆಯ ಹಕ್ಕನ್ನು ಹತ್ತಿಕ್ಕಲು ಪೊಲೀಸರ ಮೂಲ ಪ್ರಯತ್ನಿಸಲಾಗಿದ್ದು ತೀವ್ರ ಖಂಡನೀಯ. ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಆದರೆ ಪೊಲೀಸ್ ಇಲಾಖೆಯು ರಾಜಕೀಯ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ಸಾರ್ವಜನಿಕರಿಗೆ ಹಾಗೂ ಭಕ್ತರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ರಾಜ್ಯ ನಾಯಕರ ನೇತೃತ್ವದಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರುಗಳಾದ ರೇಣಕನಗೌಡ ಪಾಟೀಲ, ಅನೀಲ ಸಾತಣ್ಣನವರ ಸೇರಿದಂತೆ ಇತರರಿದ್ದರು.4
- Four leopard cubs were found in the sugarcane garden of farmer Nagesh of Neralur village in Channapattana taluk on Wednesday morning. The leopards were found while the workers were harvesting sugarcane. #leopardcubs #leopard #channapattana #ramangaradistrict #bangaloresouthdistrict1
- ಧಾರವಾಡ ಉತ್ತರಾದಿಮಠದ ಹಯಗ್ರೀವದೇವರ ಭಾವಚಿತ್ರದ ಭವ್ಯ ಶೋಭಾಯಾತ್ರೆ ಧಾರವಾಡ ಉತ್ತರಾದಿಮಠದ ಶ್ರೀ ಹಯಗ್ರೀವದೇವರ ಸಪ್ತರಾತ್ರೋತ್ಸವದ ಅಂಗವಾಗಿ ಬುಧವಾರ ಸಂಜೆ ಎಮ್ಮಿಕೇರಿಯಿಂದ ಶ್ರೀಮಠದವರೆಗೆ ಹಯಗ್ರೀವದೇವರ ಭಾವಚಿತ್ರದ ಭವ್ಯ ಶೋಭಾಯಾತ್ರೆ ನಡೆಯಿತು. ಉತ್ತರಾದಿಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಶೋಭಾಯಾತ್ರೆಗೆ ಚಾಲನೆ ನೀಡಿದರು. ನೂರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಭಜನಾ ಮಂಡಳಿ ಸದಸ್ಯೆಯರು ದೇವರ ನಾಮಸ್ಮರಣೆ ಹಾಗೂ ಭಜನೆಗಳನ್ನು ಹಾಡುತ್ತ ಸಾಗಿದರು. ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಪಂ. ಪ್ರಹ್ಲಾದಾಚಾರ್ಯ ಗಲಗಲಿ, ಆರ್.ಎಂ. ಕುಲಕರ್ಣಿ, ಪಂ. ಕೇಶವಾಚಾರ್ಯ ಕೆರೂರ, ಜಯತೀರ್ಥಾಚಾರ್ಯ ಗಲಗಲಿ, ಹನುಮಂತ ಕೊಟಬಾಗಿ, ಶ್ರೀಹರಿ ಕೊಪ್ಪರ, ರವೀಂದ್ರ ದೇಶಪಾಂಡೆ, ಅಶೋಕ ಚಚಡಿ, ಸುರೇಶಾಚಾರ್ಯ ರಾಯಚೂರ, ದೇಶಮುಖ ಸೇರಿದಂತೆ ಹಲವರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.1