ಮಲೆ ಮಹದೇಶ್ವರ ಬೆಟ್ಟದಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಗ್ರಾಮ ಸಭೆ. ಹನೂರು : ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತ್ 2024/25 ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆ ಕಾರ್ಯಕ್ರಮ ಮಹದೇಶ್ವರ ಬೆಟ್ಟದ ಸ್ಮಾರಕ ಭವನದಲ್ಲಿ ನಡೆಯಿತು. ಸಭೆಯಲ್ಲಿ ತಾಲೂಕು ನರೇಗಾ ಸಂಯೋಜಕ ನಾರಾಯಣ್ ಮಾತನಾಡುತ್ತಾ ಗ್ರಾಮ ಪಂಚಾಯಿತಿ ವತಿಯಿಂದ ಸಿಗುವ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ನಿಮ್ಮ ಗ್ರಾಮದಲ್ಲಿ ಎಲ್ಲಿ ಯಾವ ಕೆಲಸಗಳು ಆಗಿವೆ ಎಂದು ಎಲ್ಲರಿಗೂ ತಿಳಿಸುವುದೇ ಗ್ರಾಮ ಸಭೆಯ ಮುಖ್ಯ ಉದ್ದೇಶವಾಗಿದೆ. ಯಾವ ಇಲಾಖೆಗಳಿಂದ ಎಷ್ಟು ಕಾಮಗಾರಿ ನಡೆದಿದೆ, ಎಷ್ಟು ಹಣ ಖರ್ಚಾಗಿದೆ, ನಡೆದಿರುವ ಕಾಮಗಾರಿಗಳು ಪಾರದರ್ಶಕವಾಗಿದೆಯೇ, ಇಲ್ಲವೇ ಎಂಬುದನ್ನ ಈ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಉದ್ಯೋಗ ಖಾತ್ರಿ ಯೋಜನೆ ಅಡಿ ಒಂದು ಕುಟುಂಬಕ್ಕೆ 100 ದಿನ ಕೆಲಸವನ್ನು ನೀಡಲಾಗುತ್ತದೆ. ಪ್ರತಿಯೊಬ್ಬರಿಗೂ ಒಂದು ದಿನಕ್ಕೆ 379ರು ಹಣವನ್ನು ನೇರವಾಗಿ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದರು. ಮಲೆ ಮಹದೇಶ್ವರ ಬೆಟ್ಟದ ಗ್ರಾಮ ಪಂ. ವತಿಯಿಂದ ನರೇಗಾ ಯೋಜನೆಯಡಿ 174 ಕಾಮಗಾರಿಗಳು ನಡೆದಿದ್ದು, ಅದರಲ್ಲಿ ಕೂಲಿ ಮೊತ್ತ 1,11,24,968 ರೂ ಹಾಗೂ ಕೂಲಿ ಮೊತ್ತ 60,43,937 ರೂ ಒಟ್ಟು 1,71,68,905 ರೂ ಖರ್ಚಾಗಿದೆ. ತಾಲೂಕು ಪಂ. ವತಿಯಿಂದ 12 ಕಾಮಗಾರಿಗಳು ನಡೆದಿದ್ದು 27,86,851 ರ ಖರ್ಚಾಗಿದೆ ಮತ್ತು ಜಿಲ್ಲಾ ಪಂ. ವತಿಯಿಂದ 50 ಕಾಮಗಾರಿಗಳು ನಡೆದಿದ್ದು ಒಟ್ಟು 23,18,297 ರೂ ಖರ್ಚಾಗಿದೆ ಎಂದು ಸವಿವರವಾಗಿ ಮಂಡಿಸಿದರು. ಪಿಡಿಒ ಕಿರಣ್ ಮಾತನಾಡಿ ಮಲೆ ಮಾದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಮತ್ತು ಚರಂಡಿ ಸ್ವಚ್ಛತೆಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ. ಪಂಚಾಯತಿ ವತಿಯಿಂದ ಯಾವುದಾದರೂ ಕಾಮಗಾರಿಗಳು ಮಾಡುವುದಾದರೆ ಅರ್ಜಿ ಸಲ್ಲಿಸಬಹುದು. ಸಾರ್ವಜನಿಕರು ಸಲ್ಲಿಸುವ ದೂರು ಸಮಸ್ಯೆಗಳನ್ನು ಬಗೆಹರಿಸಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಮಲೆ ಮಹದೇಶ್ವರ ಬೆಟ್ಟದಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಗ್ರಾಮ ಸಭೆ. ಹನೂರು : ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತ್ 2024/25 ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆ ಕಾರ್ಯಕ್ರಮ ಮಹದೇಶ್ವರ ಬೆಟ್ಟದ ಸ್ಮಾರಕ ಭವನದಲ್ಲಿ ನಡೆಯಿತು. ಸಭೆಯಲ್ಲಿ ತಾಲೂಕು ನರೇಗಾ ಸಂಯೋಜಕ ನಾರಾಯಣ್ ಮಾತನಾಡುತ್ತಾ ಗ್ರಾಮ ಪಂಚಾಯಿತಿ ವತಿಯಿಂದ
ಸಿಗುವ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ನಿಮ್ಮ ಗ್ರಾಮದಲ್ಲಿ ಎಲ್ಲಿ ಯಾವ ಕೆಲಸಗಳು ಆಗಿವೆ ಎಂದು ಎಲ್ಲರಿಗೂ ತಿಳಿಸುವುದೇ ಗ್ರಾಮ ಸಭೆಯ ಮುಖ್ಯ ಉದ್ದೇಶವಾಗಿದೆ. ಯಾವ ಇಲಾಖೆಗಳಿಂದ ಎಷ್ಟು ಕಾಮಗಾರಿ ನಡೆದಿದೆ, ಎಷ್ಟು ಹಣ ಖರ್ಚಾಗಿದೆ, ನಡೆದಿರುವ ಕಾಮಗಾರಿಗಳು ಪಾರದರ್ಶಕವಾಗಿದೆಯೇ, ಇಲ್ಲವೇ ಎಂಬುದನ್ನ ಈ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಉದ್ಯೋಗ ಖಾತ್ರಿ ಯೋಜನೆ ಅಡಿ ಒಂದು ಕುಟುಂಬಕ್ಕೆ 100 ದಿನ ಕೆಲಸವನ್ನು ನೀಡಲಾಗುತ್ತದೆ. ಪ್ರತಿಯೊಬ್ಬರಿಗೂ
ಒಂದು ದಿನಕ್ಕೆ 379ರು ಹಣವನ್ನು ನೇರವಾಗಿ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದರು. ಮಲೆ ಮಹದೇಶ್ವರ ಬೆಟ್ಟದ ಗ್ರಾಮ ಪಂ. ವತಿಯಿಂದ ನರೇಗಾ ಯೋಜನೆಯಡಿ 174 ಕಾಮಗಾರಿಗಳು ನಡೆದಿದ್ದು, ಅದರಲ್ಲಿ ಕೂಲಿ ಮೊತ್ತ 1,11,24,968 ರೂ ಹಾಗೂ ಕೂಲಿ ಮೊತ್ತ 60,43,937 ರೂ ಒಟ್ಟು 1,71,68,905 ರೂ ಖರ್ಚಾಗಿದೆ. ತಾಲೂಕು ಪಂ. ವತಿಯಿಂದ 12 ಕಾಮಗಾರಿಗಳು ನಡೆದಿದ್ದು 27,86,851 ರ ಖರ್ಚಾಗಿದೆ ಮತ್ತು ಜಿಲ್ಲಾ
ಪಂ. ವತಿಯಿಂದ 50 ಕಾಮಗಾರಿಗಳು ನಡೆದಿದ್ದು ಒಟ್ಟು 23,18,297 ರೂ ಖರ್ಚಾಗಿದೆ ಎಂದು ಸವಿವರವಾಗಿ ಮಂಡಿಸಿದರು. ಪಿಡಿಒ ಕಿರಣ್ ಮಾತನಾಡಿ ಮಲೆ ಮಾದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಮತ್ತು ಚರಂಡಿ ಸ್ವಚ್ಛತೆಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ. ಪಂಚಾಯತಿ ವತಿಯಿಂದ ಯಾವುದಾದರೂ ಕಾಮಗಾರಿಗಳು ಮಾಡುವುದಾದರೆ ಅರ್ಜಿ ಸಲ್ಲಿಸಬಹುದು. ಸಾರ್ವಜನಿಕರು ಸಲ್ಲಿಸುವ ದೂರು ಸಮಸ್ಯೆಗಳನ್ನು ಬಗೆಹರಿಸಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
- User4618ಆಲೂರು, ಹಾಸನ, ಕರ್ನಾಟಕ🙏on 22 December
- *ಭಾರತ ನಲ್ಲಿ ವೈರಲ್*1
- ಇಂದು ರಾಜ್ಯಾದ್ಯಂತ ಎಲ್ಲಾ ರೈಲ್ವೆ ನಿಲ್ದಾಣ ಮುಂದೆ ಕರವೇ ಪ್ರತಿಭಟನೆ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಮುಂಭಾಗ & MDDTI ಟ್ರೈನಿಂಗ್ ಸೆಂಟರ್ ಮುಂದೆ ಪ್ರತಿಭಟನೆ ಪ್ರತಿಭಟನೆ ಹಿನ್ನಲ್ಲೆ ರೈಲ್ವೆ ನಿಲ್ದಾಣ ಮುಂಭಾಗ ಬೀಗಿ ಪೊಲೀಸ್ ಬಂದೋಬಸ್ತ್ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ರೈಲ್ವೆ ನಿಲ್ದಾಣ ಮುಂಭಾಗ ಐವತ್ತಕ್ಕೂ ಹೆಚ್ಚು ಪೋಲೀಸ್ ಸಿಬ್ಬಂದಿ ನಿಯೋಜನೆ ಎರಡು ಬಿಎಂಟಿಸಿ ಬಸ್ ಗಳನ್ನ ನೀಯೋಜನೆ ಮಾಡಲಾಗಿದೆ. ಡಿವಿಜನಲ್ ರೈಲ್ವೆ ಮ್ಯಾನೇಜರ್ ಕಛೇರಿ ಮುಂದೆ ಕರವೇ ಕಾರ್ಯಕರ್ತರು ಪ್ರತಿಭಟನೆ.*ರಾಜ್ಯದ ಕೇಂದ್ರ ಮಂತ್ರಿಗಳ ವಿರುದ್ದ ಘೋಷಣೆ ಕೂಗಿ ಪ್ರತಿಭಟನೆ ಕೇಂದ್ರ ಸರ್ಕಾರ ಕನ್ನಡಗರಿಗೆ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ..ಬೇಕೆ ಬೇಕೆ ನ್ಯಾಯ ಬೇಕು ಎನ್ನುತ್ತಿರುವ ಕಾರ್ಯಕರ್ತರು ರೈಲ್ವೆ ಇಲಾಖೆಗೆ ದಿಕ್ಕಾರ ಕೂಗಿದ ಪ್ರತಿಭಟನೆಕಾರರು.* ಮುಂಬಡ್ತಿಯ ನಡ್ಸತಿರೋ ಪರೀಕ್ಷೆ ಬರಿ ಹಿಂದಿ ಇಂಗ್ಲಿಷ್ ಅಲ್ಲಿ ಮಾಡ್ತಿದ್ದಾರೆ ಕನ್ನಡ ವಿದ್ಯಾರ್ಥಿಗಳ ಬಾಯಿಗೆ ಮಣ್ಣು ಹಾಕುವ ಕೆಲಸ ಮಾಡ್ತಿದ್ದಾರೆ ಕುಮಾರಸ್ವಾಮಿ, ಶೋಬಾ ಕರಂದ್ಲಾಜ್,ಪ್ರಹ್ಲಾದ ಜೋಶಿ, ಯಾಕೆ ಈ ಬಗ್ಗೆ ಮಾತಾಡ್ತಿಲ್ಲ ರಾಜ್ಯ ಸಚಿವರ ಮನೆ ಮುಂದೆ ಹೋರಾಟ ಮಾಡ್ತಾರೆ ರೈಲ್ವೆಯಲ್ಲಿ ಕೆಲಸ ಮಾಡ್ತಿರುವ ಕನ್ನಡಿಗರಿಗೆ ಹಿಂದಿ ಬರೋದಿಲ್ಲ ಉತ್ತರ ಭಾರತದವರಿಗೆ ಮಾತ್ರ ಅನುಕೂಲ ಆಗುವಂತೆ ಹಿಂದಿ ಇಂಗ್ಲಿಷ್ ಅಲ್ಲಿ ಪರೀಕ್ಷೆ ಕನ್ನಡ ಅಭ್ಯರ್ಥಿಗಳಿಗೆ ಮೋಸ ಆಗಲು ಬಿಡಲ್ಲ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ಮಾಡುತ್ತೇವೆ ಬೈಟ್ : ಸಣ್ಣೀರಪ್ಪ, ಕನ್ನಡಪರ ಹೋರಟಗಾರ1
- Post by ಅರವಿಂದ್ ರಾಜೀವ್1
- ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠ, ಶ್ರೀಕ್ಷೇತ್ರ ಚಿಕ್ಕ ಬೊಮ್ಮನಹಳ್ಳಿ,ಕೊಣನೂರು ಹೋಬಳಿ ಅರಕಲಗೂಡು ತಾಲ್ಲೂಕು ಹಾಸನ ಜಿಲ್ಲೆ "ಬೃಹತ್ ಜಾತ್ರಾ ಮಹೋತ್ಸವ ವನ್ನು ದಿನಾಂಕ 12/3/2026 ರಿಂದ 14/03/2026ರ ಶನಿವಾರದ ವರೆಗೆ ಹಾಗೂ 13/03/2026ನೇ ಶುಕ್ರವಾರ ದಂದು ಧಾರ್ಮಿಕ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದು ಶ್ರೀ ಶ್ರೀ ಶ್ರೀ ಶಂಭುನಾಥ ಸ್ವಾಮೀಜಿ ತಿಳಿಸಿದರು.2
- ಬೆಂಗಳೂರು : ಮತ್ತಿಕೆರೆಯ ಜೆ.ಪಿ.ಪಾರ್ಕ್ ಬಳಿಯ ಕ್ರೀಡಾಂಗಣದಲ್ಲಿ ಸಾಮಾಜಿಕ ಕಾರ್ಯಕರ್ತ ವೆಂಕಟೇಶಮೂರ್ತಿ, ಪಾಲಿಕೆ ಮಾಜಿ ಸದಸ್ಯ ವೇಲುನಾಯಕರ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಎಲ್ಲಿ ನೋಡಿದರೂ ಜನಸಾಗರ, ಸಹಸ್ರಾರು ಭಕ್ತಾಧಿಗಳ ಜಯಘೋಷಣೆಗಳ ಮುಗಿಲು ಮುಟ್ಟಿದವು. ಗೋವಿಂದಾ.... ಗೋವಿಂದಾ... ಶ್ರೀನಿವಾಸ... ವೆಂಕಟೇಶ್ವರ ಘೋಷಣೆಗಳು ಕೂಗುತ್ತಾ ದೇವರ ಸ್ಮರಣೆಯನ್ನು ಮಾಡಿದರೆ ಭಕ್ತಾಧಿಗಳು ದೇವರ ಸ್ಮರಣೆಯಲ್ಲಿ ತಲೆದೂಗಿದರು. ಶ್ರೀ ಲಕ್ಷ್ಮಿ ವೆಂಕಟೇಶ್ವರಸ್ವಾಮಿಯ ದೇವಾಲಯದಿಂದ ಶ್ರೀ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ರಥೋತ್ಸವ, ಉತ್ಸವಮೂರ್ತಿಯ ಮೆರವಣಿಗೆ ಮತ್ತಿಕೆರೆ, ಯಶವಂತಪುರ ವ್ಯಾಪ್ತಿಯ ಪ್ರಮುಖ ರಸ್ತೆ ರಾಜ ಬೀದಿಗಳಲ್ಲಿ ಸಾಗಿಬಂದಾಗ ರಸ್ತೆಯ ಎರಡು ಬದಿಯಲ್ಲಿ ಭಕ್ತಾಧಿಗಳು ನಿಂತು ದೇವರ ದರ್ಶನ ಪಡೆದು ಪುನೀತರಾದರು ಹಾಗೂ ವಿವಿಧ ದೇವರುಗಳ ಪೂಜಾಕುಣಿತ, ಜಾನಪದ ಕಲೆಗಳ ಪ್ರದರ್ಶನ ನೋಡಿ ಕಣ್ತುಂಬಿಕೊಂಡರು. ರಥೋತ್ಸವ ಸಾಗಿ ಬಂದ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ, ತಳಿರು-ತೋರಣ, ಬಣ್ಣಬಣ್ಣಗಳಿಂದ ಹೂವಿನ ಚಿತ್ತಾರ ಬಾಳೆಕಂದುಗಳನ್ನು ಕಂಬ-ಕಂಬಗಳಿಗೆ ಕಟ್ಟಿ ರಸ್ತೆಗಳನ್ನು ಶೃಂಗಾರ ಮಾಡಲಾಯಿತ್ತು. ಅದ್ದೂರಿ ಶ್ರೀನಿವಾಸ ಕಲ್ಯಾಣ ಮಹೋತ್ಸವಕ್ಕೆ ತಿರುಮಲ ದೇವಾಲಯದಿಂದ ಅರ್ಚಕರನ್ನು ಕರೆಯಿಸಲಾಯಿತು. ಶ್ರೀನಿವಾಸ ಕಲ್ಯಾಣೋತ್ಸವ ಪ್ರಾರಂಭವಾಗುತ್ತಿದ್ದಂತೆ ನೆರೆದಿದ್ದ ಭಕ್ತರು ಶ್ರೀನಿವಾಸನ ಸ್ಮರಣೆ ಮಾಡುತ್ತಾ ದೇವರ ಧ್ಯಾನ ಮಾಡಿದರು. ಈ ಕಾರ್ಯಕ್ರಮದಲ್ಲಿ ಹಿಂದೂಗಳ ಜೊತೆಗೆ ನೂರಾರು ಮುಸ್ಲೀಮರು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು. ನೆರೆದಿದ್ದ ಭಕ್ತಾಧಿಗಳಿಗೆ ತೊಂದರೆಯಾಂತೆ ಅವರಿದ್ದ ಸ್ಥಳಗಳಿಗೆ ತೆರಳಿ ಕುಡಿಯುವ ನೀರು ವಿತರಿಸಿದರು. ಅನ್ನಪ್ರಸಾದದ ಕೌಂಟರ್‌ನಲ್ಲಿ ಜನಸಂದಣಿ ಜಾಸ್ತಿಯಾಗುತ್ತಿದ್ದಂತೆ ಸ್ವಯಂ ಸೇವಕರಿಗೆ ಮುಸ್ಲೀಮರು ಸಾಥ್ ನೀಡಿದರು. ಮುಸ್ಲೀಂ ಮುಖಂಡ ಸೋಯಲ್ ಅಹಮ್ಮದ್ ಅವರು ವೈಯಕ್ತಿಕವಾಗಿ ನೀರಿನ ಬಾಟಲಿಗಳನ್ನು ಭಕ್ತರಿಗೆ ವಿತರಿಸಿದರು. ಸಾಮಾಜಿಕ ಕಾರ್ಯಕರ್ತ ವೆಂಕಟೇಶಮೂರ್ತಿ ಮಾತನಾಡಿ ಪ್ರತಿವರ್ಷ ಶ್ರೀನಿವಾಸ ಕಲ್ಯಾಣೋತ್ಸವ ನಡೆಸಿಕೊಂಡು ಬರಲಾಗುತ್ತಿದ್ದು, ಈ ವರ್ಷ ವೇಲುನಾಯಕರ್ ಮತ್ತು ಕೆಪಿಸಿಸಿ ವಕ್ತಾರೆ ಎಚ್.ಕುಸುಮಾ ಕುಸುಮಾ ಕುಟುಂಬ ಭಾಗಿಯಾಗಿ ಶ್ರೀನಿವಾಸ ಕಲ್ಯಾಣೋತ್ಸವ ಅದ್ದೂರಿಯಾಗಿ ನಡೆಯಲು ಸಹಕಾರ ನೀಡಿರುವುದರಿಂದ ಲಕ್ಷಾಂತರ ಭಕ್ತಾಧಿಗಳು ಪಾಲ್ಗೊಂಡಿದ್ದಾರೆ. ಎಲ್ಲರಿಗೂ ತಿರುಪತಿಯ ಲಡ್ಡು, ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಭಕ್ತರಿಗೆ ಭಗವಂತ ಒಳಿತು ಮಾಡಿ ಆರೋಗ್ಯ, ನೆಮ್ಮದಿ, ಶಾಂತಿಗೋಸ್ಕರ ಶ್ರೀನಿವಾಸಕಲ್ಯಾಣೋತ್ಸವ ನಡೆಸಲಾಗಿದೆ ಎಂದರು. ಕೆಪಿಸಿಸಿ ವಕ್ತಾರೆ ಕುಸುಮಾ ಮಾತನಾಡಿ ಧಾರ್ಮಿಕ ಕಾರ್ಯಕ್ರಮಗಳಿಂದ ಹಿಂದೂತ್ವ ಮತ್ತು ನಮ್ಮ ಧಾರ್ಮಿಕ ಪರಂಪರೆ ಮತ್ತಷ್ಟು ಗಟ್ಟಿಯಾಗಲು ನಾವೆಲ್ಲರೂ ಪ್ರೀತಿ ವಿಶ್ವಾಸ ನೆಮ್ಮದಿಯಿಂದ ಸಾಗಲು ದೇವರ ಉತ್ಸವಗಳು ಸಹಕಾರಿಯಾಗಿವೆ. ಬಿಬಿಎಂಪಿ ಮಾಜಿ ಸದಸ್ಯ ವೇಲುನಾಯರ್ ಕ್ಷೇತ್ರದ ಜನರು ಮತ್ತು ನಾಡಿನ ಜನರಿಗೆ ಭಗವಂತನ ಶ್ರೀರಕ್ಷೆ, ಒಳ್ಳೆಯದನ್ನು ಮಾಡಲಿ ಎಂದು ಕಾರ್ಯಕ್ರಮ ಆಯೋಜಿಸಲಾಗಿತು ಎಂದರು. ಎಲ್ಲಾ ಭಕ್ತಾಧಿಗಳಿಗೆ ಸೋಯಲ್ ಅಹಮ್ಮದ್ ಕುಡಿಯುವ ನೀರಿನ ಬಾಟಲ್‌ಗಳನ್ನು ವಿತರಿಸಿ ಮಾತನಾಡಿ, ಈ ಭಾಗದಲ್ಲಿ ಹಿಂದೂ, ಮುಸ್ಲೀಂಮರು ಅಣ್ಣ ತಮ್ಮಂದಿರಂತೆ ಜೀವನ ಸಾಗಿಸುತ್ತಿದ್ದು, ಶ್ರೀನಿವಾಸ ಕಲ್ಯಾಣೋತ್ಸವ ಯಶಸ್ವಿಯಾಗಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಭಾಗವಹಿಸಿದ್ದೇವೆ ಎಂದರು. ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಶಾಸಕರಾದ ಎಸ್.ಟಿ.ಸೋಮಶೇಖರ್, ಡಾ.ಎಚ್.ಡಿ.ರಂಗನಾಥ್, ಪುಟ್ಟಣ್ಣ, ಕೆ.ಪಿ.ಸಿ.ಸಿ. ವಕ್ತಾರೆ ಎಚ್.ಕುಸುಮಾ, ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹನುಮಂತರಾಯಪ್ಪ, ಪಾಲಿಕೆಯ ಮಾಜಿ ಸದಸ್ಯರಾದ ಬಿ.ಆರ್.ನಂಜುಂಡಪ್ಪ, ರೂಪಲಿಂಗೇಶ್, ಲಗ್ಗೆರೆ ನಾರಾಯಣಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಕೃಷ್ಣ, ಬಿಎಂಐಸಿಪಿ ಅಧ್ಯಕ್ಷ ರಘುನಂದನ್ ರಾಮಣ್ಣ, ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ, ಮತ್ತಿಕೆರೆ ಮಸೀದಿ ಅಧ್ಯಕ್ಷ ಸಮೀವುಲ್ಲಾ ಖಾನ್, ಚಿತ್ರ ನಿರ್ಮಾಪಕ ಚಿನ್ನೇಗೌಡ ಕಾರ್ಯಕ್ರಮದ ಭಾಗವಹಿಸಿದ್ದರು.1
- Post by SUDHUR CHAULANI NEWS1
- *ಭಾರತ ನಲ್ಲಿ ವೈರಲ್*1
- *ವಿವಿಧ ಹೂಗಳಿಂದ ಅಲಂಕೃತಗೊಂಡ ಅಪ್ಪು ಸಮಾಧಿ...*ಅಪ್ಪು ಸ್ಮಾರಕದತ್ತ ಅಪ್ಪು ಅಭಿಮಾನಿಗಳು ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿರುವ ಅಭಿಮಾನಿಗಳು ಕೈಯಲ್ಲಿ ಗುಲಾಬಿ ಹೂ ಹಿಡಿದು ಅಪ್ಪುಗೆ ನಮನ *ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ವಿವಿಧ ಸಮಾಜಮುಖಿ ಕಾರ್ಯಕ್ರಮ* *ರಕ್ತದಾನ, ಅನ್ನದಾನ, ಹಾಗೂ ಉಚಿತವಾಗಿ ಸಸಿಗಳ ದಾನ ಮಾಡುವ ಕಾರ್ಯಗಳು ನಡೆಯುತ್ತಿವೆ.* ಪ್ರತಿವರ್ಷದಂತೆ ಈ ವರ್ಷವೂ ಹುಟ್ಟುಹಬ್ಬಕ್ಕೆ ವಿಶೇಷ ಕಾರ್ಯಕ್ರಮ ಅಪ್ಪು ಸಮಾಧಿಗೆ ಕುಟುಂಬಸ್ಥರಿಂದ ಪೂಜೆ ಪೂಜೆಯಲ್ಲಿ ರಾಘವೇಂದ್ರ ರಾಜ್ ಕುಮಾರ್, ರಾಘಣ್ಣ ಪತ್ನಿ ಮಂಗಳಾ, ವಿನಯ್ ರಾಜ್ ಕುಮಾರ್, ಯುವ ರಾಜ್ ಕುಮಾರ್ ಸೇರಿ ಮುಂತಾದವ್ರು ಭಾಗಿ1
- ಮಧ್ಯಪ್ರದೇಶದ ಅದಾನಿ ಗ್ರೂಪಿನ ಕಾರ್ಖಾನೆಯಲ್ಲಿ ಕಾರ್ಮಿಕನೊಬ್ಬ ಮೇಲಿನಿಂದ ಬಿದ್ದು ಮರಣ ಹೊಂದಿರುತ್ತಾನೆ, ಈ ಸಂಬಂಧ ಕಾರ್ಮಿಕರು ನ್ಯಾಯ ಕೇಳಿದಾಗ ಉಡಾಫೆ ಮಾತನಾಡಿದ ಅಧಿಕಾರಿಗಳು, ಆತನ ಶವವನ್ನು ಮುಚ್ಚಿಡಲು ಪ್ರಯತ್ನಿಸಿದಾಗ ರೊಚ್ಚಿಗೆದ್ದ ಕಾರ್ಮಿಕರು ಪೊಲೀಸ್ ಜೀಪ್ ಸೇರಿದಂತೆ ವಾಹನಗಳು, ಕಾರ್ಖಾನೆಯನ್ನು ಉಡೀಸ್ ಮಾಡಿದ್ದಾರೆ ಎನ್ನಲಾಗಿದೆ...1