Shuru
Apke Nagar Ki App…
ನಾಳೆ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವರ ಜಿಲ್ಲಾ ಪ್ರವಾಸ ಸಂಜೆ ಮಂಗಲಶಿವಕುಮಾರ್ ಪುತ್ರನ ವಿವಾಹದಲ್ಲಿ ಭಾಗವಹಿಸಲಿದ್ದಾರೆ ಆ. 29ರಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವರ ಜಿಲ್ಲಾ ಪ್ರವಾಸ ಚಾಮರಾಜನಗರ: ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಆಗಸ್ಟ್ 29ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಸಂಜೆ 6.45 ಗಂಟೆಗೆ ರೈಲಿನ ಮೂಲಕ ಚಾಮರಾಜನಗರ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ರೈಲು ನಿಲ್ದಾಣದಲ್ಲಿ ಪ್ರಗತಿಯಲ್ಲಿರುವ ಅಮೃತ್ ಭಾರತ್ ಸ್ಟೇಷನ್ ಯೋಜನೆ ಕಾಮಗಾರಿ ಪರಿಶೀಲಿಸುವರು. ಬಳಿಕ ನಗರದ ರೈಲು ನಿಲ್ದಾಣದ ಬಳಿ ಇರುವ ಮಾಂಗಲ್ಯ ಕನ್ವೆನ್ಷನ್ ಹಾಲ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ರಾತ್ರಿ 7.30 ಗಂಟೆಗೆ ಮೈಸೂರಿಗೆ ತೆರಳುವರು ಎಂದು ಪ್ರಕಟಣೆ ತಿಳಿಸಿದೆ.
Nanjunda Nayak
ನಾಳೆ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವರ ಜಿಲ್ಲಾ ಪ್ರವಾಸ ಸಂಜೆ ಮಂಗಲಶಿವಕುಮಾರ್ ಪುತ್ರನ ವಿವಾಹದಲ್ಲಿ ಭಾಗವಹಿಸಲಿದ್ದಾರೆ ಆ. 29ರಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವರ ಜಿಲ್ಲಾ ಪ್ರವಾಸ ಚಾಮರಾಜನಗರ: ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಆಗಸ್ಟ್ 29ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಸಂಜೆ 6.45 ಗಂಟೆಗೆ ರೈಲಿನ ಮೂಲಕ ಚಾಮರಾಜನಗರ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ರೈಲು ನಿಲ್ದಾಣದಲ್ಲಿ ಪ್ರಗತಿಯಲ್ಲಿರುವ ಅಮೃತ್ ಭಾರತ್ ಸ್ಟೇಷನ್ ಯೋಜನೆ ಕಾಮಗಾರಿ ಪರಿಶೀಲಿಸುವರು. ಬಳಿಕ ನಗರದ ರೈಲು ನಿಲ್ದಾಣದ ಬಳಿ ಇರುವ ಮಾಂಗಲ್ಯ ಕನ್ವೆನ್ಷನ್ ಹಾಲ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ರಾತ್ರಿ 7.30 ಗಂಟೆಗೆ ಮೈಸೂರಿಗೆ ತೆರಳುವರು ಎಂದು ಪ್ರಕಟಣೆ ತಿಳಿಸಿದೆ.
More news from ಕರ್ನಾಟಕ and nearby areas
- ಗುಂಡ್ಲುಪೇಟೆ: ಪಾಳುಬಿದ್ದ ದಂಡಾಧಿಕಾರಿಗಳ ವಸತಿಗೃಹವನ್ನು ಕನ್ನಡಭವನಕ್ಕೆ ನೀಡಲು ಮನವಿ. ಗುಂಡ್ಲುಪೇಟೆ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಮೈಸೂರು–ಊಟಿ ಮುಖ್ಯ ರಸ್ತೆಯಲ್ಲಿರುವ ತಾಲ್ಲೂಕು ಕಚೇರಿ ಪಕ್ಕದ ಹಲವು ವರ್ಷಗಳಿಂದ ಬಳಕೆಯಾಗದೆ ಪಾಳುಬಿದ್ದಿರುವ ದಂಡಾಧಿಕಾರಿಗಳ ವಸತಿಗೃಹವನ್ನು ಕನ್ನಡಭವನವಾಗಿ ಬಳಸಲು ಅವಕಾಶ ನೀಡುವಂತೆ ಕರ್ನಾಟಕ ಕಾವಲು ಪಡೆ ಮನವಿ ಮಾಡಿದೆ. ಗುರುವಾರ ಕರ್ನಾಟಕ ಕಾವಲು ಪಡೆಯ ತಾಲ್ಲೂಕು ಅಧ್ಯಕ್ಷ ಎ. ಅಬ್ದುಲ್ ಮಾಲಿಕ್ ಅವರು ಪುರಸಭೆ ಮುಖ್ಯಾಧಿಕಾರಿ ಎಸ್. ಸರವಣ ಅವರಿಗೆ ಮನವಿ ಸಲ್ಲಿಸಿದರು. ಬಳಕೆಯಾಗದೆ ಇರುವ ಕಟ್ಟಡದ ಸುತ್ತಮುತ್ತ ಮದ್ಯಪಾನ ಹಾಗೂ ಮೂತ್ರವಿಸರ್ಜನೆಯಿಂದ ಅಶುಚಿತ್ವ ಉಂಟಾಗಿದೆ. ಪಟ್ಟಣದಲ್ಲಿ ಕನ್ನಡಭವನ ಇಲ್ಲದ ಕಾರಣ ಕಟ್ಟಡವನ್ನು ಕನ್ನಡಪರ ಸಂಘಟನೆಗಳ ಸಭೆ–ಸಮಾರಂಭಗಳಿಗೆ ನೀಡಿದರೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು. ಮನವಿಗೆ ಸ್ಪಂದಿಸಿದ ಮುಖ್ಯಾಧಿಕಾರಿ ಎಸ್. ಸರವಣ ಅವರು ಕಟ್ಟಡದ ಸುತ್ತಮುತ್ತ ಶೀಘ್ರ ಸ್ವಚ್ಛತೆ ಕೈಗೊಂಡು, ಕನ್ನಡಭವನಕ್ಕೆ ನೀಡುವ ಕುರಿತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಂಚಾಲಕ ಮಿಮಿಕ್ರಿ ರಾಜು ಉಪಸ್ಥಿತರಿದ್ದರು.3
- ಯೋಗಾಭ್ಯಾಸ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ: ಶಿವಾನಂದ ಶಿವಾಚಾರ್ಯ ಮಹಾಸ್ವಾಮಿ ಮಳವಳ್ಳಿ: ಬೆಳದಿಂಗಳಲ್ಲಿ ಶರಣರ ಚಿಂತನಮಂಥನ ಸಮಿತಿ ವತಿಯಿಂದ ಹುಣ್ಣಿಮೆ ಪ್ರಯುಕ್ತ 142 ನೇ ಚಿಂತನ ಮಂಥನ ಕಾರ್ಯಕ್ರಮ ಮಳವಳ್ಳಿ ಪಟ್ಟಣದ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ಪೂರಿಗಾಲಿ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿ ಉದ್ಘಾಟಿಸಿ ಮಾತನಾಡಿ,ಪ್ರತಿ ದಿನ ಮನೆಯಲ್ಲಿ ಯೋಗಾಭ್ಯಾಸದಿಂದ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ ಎಂದರು. ಇದೇ ವೇಳೆ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಯೋಗಾಸನ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕಿ ಶಶಿಕಲಾ, ಯೋಗ ಶಿಕ್ಷಕ ಶ್ರೀನಿಧಿ, ಚಿಂತನ ಮಂಥನ ಸಮಿತಿ ಮಲ್ಲೇಶ್, ನಾಗರಾಜು, ಪರಶಿವಮೂರ್ತಿ,ನಟರಾಜಮೂರ್ತಿ ಸೇರಿದಂತೆ ಹಲವರು ಇದ್ದರು.1
- ಮೈಸೂರು : ಅರಣ್ಯ ಭವನದಲ್ಲಿ ನಮ್ಮ ದಸರಾ ಗಜಪಡೆ ಭರ್ಜರಿ ರಿಲ್ಯಾಕ್ಸ್ ನಾಡಹಬ್ಬ ದಸರಾ 2026 ಹಿನ್ನಲೆ ಮೈಸೂರಿಗೆ ಆಗಮಿಸಿದ ಗಜಪಡೆ ಅರಣ್ಯ ಭವನದಲ್ಲಿ ರಿಲ್ಯಾಕ್ಸ್ ಮೂಡ್ ನಲ್ಲಿದೆ.ಮೊದಲ ಹಂತದಲ್ಲಿ ಬಂದಿರುವ 9 ಆನೆಗಳ ತಂಡ ಅರಣ್ಯ ಭವನದಲ್ಲಿ ಬೀಡು ಬಿಟ್ಟಿವೆ. ಜಿಲ್ಲಾಡಳಿತ ಹಾಗೂ ಅರಮನೆ ಆಡಳಿತ ಮಂಡಳಿ ವತಿಯಿಂದ ಆನೆಗಳನ್ನ ಸಂಪ್ರದಾಯವಾಗಿ ಸ್ವಾಗತಿಸಲಾಗುತ್ತದೆ. ಅಕ್ಟೋಬರ್ 21 ರಂದು ನಡೆಯಲಿರುವ ಜಂಬೂಸವಾರಿಗೆ ಗಜಪಡೆ ಸಜ್ಜಾಗಲಿದೆ...1
- News by dailynews ಶಹೀನ್ ಷಾ ಅಹಮ್ಮದ್ ಬಹಿರಂಗ ಸವಾಲು: ಪೊಲೀಸರಿಗೆ ಬೆದರಿಕೆ ಹಾಕಿದ ಆಡಿಯೋ ಬಿಡುಗಡೆ ಮಾಡಿ ತೋರಿಸಿ! ಸಾಕ್ಷಿ ಎಲ್ಲಿದೆ?: ಪ್ರತಿಯೊಂದನ್ನೂ ರೆಕಾರ್ಡ್ ಮಾಡುವವರು, ಪೊಲೀಸರಿಗೆ ಧಮಕಿ ಹಾಕಿದ ವೀಡಿಯೊ ಅಥವಾ ಆಡಿಯೋ ಸಾಬೀತುಪಡಿಸಲಿ. #tanveersait #viral #mysuru #cmdkshivakumar #viralnews News by dailynews ಶಹೀನ್ ಷಾ ಅಹಮ್ಮದ್ ಬಹಿರಂಗ ಸವಾಲು: ಪೊಲೀಸರಿಗೆ ಬೆದರಿಕೆ ಹಾಕಿದ ಆಡಿಯೋ ಬಿಡುಗಡೆ ಮಾಡಿ ತೋರಿಸಿ! ಸಾಕ್ಷಿ ಎಲ್ಲಿದೆ?: ಪ್ರತಿಯೊಂದನ್ನೂ ರೆಕಾರ್ಡ್ ಮಾಡುವವರು, ಪೊಲೀಸರಿಗೆ ಧಮಕಿ ಹಾಕಿದ ವೀಡಿಯೊ ಅಥವಾ ಆಡಿಯೋ ಸಾಬೀತುಪಡಿಸಲಿ. #tanveersait #viral #mysuru #cmdkshivakumar #viralnews1
- ದೇಶದ ನಂಬರ್ ಒನ್ ವಿಐ Vi ಕಂಪನಿಯಿಂದ ಗ್ರಾಹಕರಿಗೆ ಧಮಾಕ ಕೊಡುಗೆ ದೇಶದ ನಂಬರ್ ಒನ್ ಬಿ ಐ ಕಂಪನಿಯಿಂದ ಗ್ರಾಹಕರಿಗೆ ಧಮಾಕ ಕೊಡುಗೆ ರೂ 325 ರಿಚಾರ್ಜ್ ಮಾಡಿಸಿದರೆ ಅನ್ಲಿಮಿಟೆಡ್ ಡಾಟಾ ಅನ್ಲಿಮಿಟೆಡ್ ಕರೆ 100 ಎಸ್ ಎಮ್ ಎಸ್ ಇಂದೇ ವಿಐ ಗ್ರಹಕರಾಗಿ ಕೊಡುಗೆ ತಮ್ಮದಾಗಿಸಿಕೊಳ್ಳಿ ವಿತರಕರ ವಿಶೇಷ ಪ್ರಕಟಣೆ1
- ಶಾಸಕ ಬಾಬು ಬಂಡಿಸಿದೇಗೌಡ ಕತ್ತೆ ಕೆಲಸ ಮಾಡುವ ವಿಡಿಯೋ ವೈರಲ್,ಏನಂದ್ರು ಗೊತ್ತಾ ನೆಟ್ಟಿಗರು ಮಂಡ್ಯ ಶ್ರೀರಂಗಪಟ್ಟಣ ಶಾಸಕ ಬಾಬು ಬಂಡಿ ಸಿದ್ದೇಗೌಡ ವ್ಯವಸಾಯ ಮಾಡುವ ವಿಡಿಯೋ ಆಗಿಸಿ ಸಾಮಾಜಿಕ ಜಾಲತಾಣದಲ್ಲಿ ಶಾಸಕರ ಗದ್ದೆ ಕೆಲಸ ಮಾಡುವ ವಿಡಿಯೋ ಬೈಕೇರಿ ಹೋಗುವ ಜೊತೆಯಲ್ಲಿ ಗುದ್ದಲಿ ಹಿಡಿದು ಗದ್ದೆಯಲ್ಲಿ ಕೆಲಸ ಮಾಡುವ ವಿಡಿಯೋಗೆ ನೆಟ್ಟಗಿರೋ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೆಲ್ಮೆಟ್ ಹಾಕದೆ ಗಾಡಿ ಓಡಿಸಬೇಕು ಕೆಲವರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ1
- ತಾಲೂಕು ಪಿಡಬ್ಲ್ಯೂಡಿ ಸಿವಿಲ್ ಗುತ್ತಿಗೆದಾರರ ಸಹಕಾರ ಸಂಘದ ಕಚೇರಿಯಲ್ಲಿ ಜಿ ಸೇವಾ ಕೇಂದ್ರ ಉದ್ಘಾಟನೆ ಜಿ ಸೇವಾ ಕೇಂದ್ರದಿಂದ ಗುತ್ತಿಗೆದಾರರಿಗೆ ಅನುಕೂಲ : ಪಿಡಬ್ಲ್ಯೂಡಿ ಇಇ ಕಿರಣ್ ತಾಲೂಕು ಪಿಡಬ್ಲ್ಯೂಡಿ ಸಿವಿಲ್ ಗುತ್ತಿಗೆದಾರರ ಸಹಕಾರ ಸಂಘದ ಕಚೇರಿಯಲ್ಲಿ ಜಿ ಸೇವಾ ಕೇಂದ್ರ ಉದ್ಘಾಟನೆ ಚಾಮರಾಜನಗರ: ತಾಲೂಕು ಲೋಕೋಪಯೋಗಿ ಇಲಾಖೆ ಸಿವಿಲ್ ಗುತ್ತಿಗೆದಾರರ ಸಹಕಾರ ಸಂಘದಲ್ಲಿ ಜಿ ಸೇವಾ ಕೇಂದ್ರ ಆರಂಭವಾಗಿರುವುದು ಗುತ್ತಿಗೆದಾರರಿಗೆ ಅನುಕೂಲವಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಕಿರಣ್ ಹೇಳಿದರು. ನಗರದ ತಾಲೂಕು ಲೋಕೋಪಯೋಗಿ ಇಲಾಖೆ ಸಿವಿಲ್ ಗುತ್ತಿಗೆದಾರರ ಸಹಕಾರ ಸಂಘದ ಕಚೇರಿಯಲ್ಲಿ ನೂತನವಾಗಿ ಆರಂಭಿಸಲಾದ ಜಿ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ತಾಲೂಕು ಲೋಕೋಪಯೋಗಿ ಇಲಾಖೆ ಸಿವಿಲ್ ಗುತ್ತಿಗೆದಾರರ ಸಹಕಾರ ಸಂಘವು ಪ್ರತಿ ವರ್ಷವೂ ಲಾಭಾಂಶದಲ್ಲಿ ನಡೆಯುತ್ತಿರುವುದು ತುಂಬಾ ಸಂತಸವಾಗಿದೆ. ಸಂಘದ ಪ್ರಗತಿ ನೋಡಿದರೆ ಮುಂದಿನ ದಿನಗಳಲ್ಲಿ ಸಂಘವು ಚೆನ್ನಾಗಿ ಬೆಳೆಯಲಿದೆ. ನಮಗೂ ನಿಮಗೂ ಜಿಲ್ಲೆಗೆ ಸಹಕಾರವಾಗಿದೆ. ಸ್ಟ್ಯಾಂಪ್ ಪೇಪರ್ ಲಾಭಾಂಶ ತರುವ ಕಾರ್ಯವಲ್ಲ. ಎಲ್ಲರೂ ಬರಲು, ಒಂದು ಕಡೆ ಸೇರುವ ಒಂದು ಜಾಗವಾಗಿದ್ದು, ಇಲ್ಲೇ ಗುತ್ತಿಗೆದಾರರು ಸ್ಟ್ಯಾಂಪ್ ಪೇಪರ್ ಖರೀದಿಸಿ ವ್ಯವಹಾರ ಮಾಡಲು ಅನುಕೂಲವಾಗುತ್ತದೆ. ಇದರಿಂದ ಚಾಮರಾಜನಗರದಲ್ಲಿ ವ್ಯಾಪಾರ ವಹಿವಾಟು ಜಾಸ್ತಿ ಯಾಗುತ್ತಿದ್ದು. ದಿನದಿನೇ ವ್ಯಾಪಾರ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಸ್ಟ್ಯಾಂಪ್ ಪೇಪರ್ ಹೆಚ್ಚಾಗಿ ಬೇಕಾಗುತ್ತದೆ. ಇದು ಒಂದು ಒಳ್ಳೆಯ ಕೆಲಸವಾಗಿದೆ ಎಂದರು. ಗುತ್ತಿಗೆದಾರರು ಯಂತ್ರೋಪಕರಣಕ್ಕಾಗಿ ಕಾಯುವ ಸ್ಥಿತಿ ಇದೆ. ಒಂದೇ ಸಮಯದಲ್ಲಿ ಕೆಲಸಗಳು ಆಗುವುದರಿಂದ ಯಂತ್ರೋಪಕರಣಗಳಿಗೆ ಡಿಮ್ಯಾಂಡ್ ಆಗುತ್ತದೆ. ಆಗಾಗಿ ಆದ್ಯತೆ ಮೇರೆಗೆ ಯಂತ್ರೋಪಕರಣ ಸಿಗುವಂತಹ ಕೆಲಸ ಆಗಬೇಕಾಗಿದೆ ಹಿಂದೆ ಇಲಾಖೆಯಿಂದ ಯಂತ್ರೋಪಕರಣಗಳನ್ನು ಗುತ್ತಿಗೆದಾರರಿಗೆ ಬಾಡಿಗೆ ರೂಪದಲ್ಲಿ ನೀಡಲಾಗುತ್ತಿತ್ತು ಅದನ್ನು ಈಗ ಕಡಿಮೆ ಮಾಡಲಾಗಿದೆ. ನಿಮಗೆ ಅದು ಅವಕಾಶ ಇದೆ.ಅಂತಹ ಯಂತ್ರೋಪಕರಣಗಳ ಸೇವಾ ಕೇಂದ್ರ ಮಾಡಿದರೆ ಸಂಘಕ್ಕೂ ಗುತ್ತಿಗೆದಾರರಿಗೂ ಹೆಚ್ಚಿನ ಅನುಕೂಲ ಆಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಚಾಮರಾಜನಗರ ತಾಲೂಕು ಲೋಕೋಪಯೋಗಿ ಇಲಾಖೆ ಸಿವಿಲ್ ಗುತ್ತಿಗೆದಾರರ ಸಹಕಾರ ಸಂಘದ ಅಧ್ಯಕ್ಷ ಅಯ್ಯನಪುರ ಶಿವಕುಮಾರ್ ಮಾತನಾಡಿ, ಸಂಘದ ಆಶಯದಂತೆ ಇಂದು ಜಿ ಸೇವಾ ಕೇಂದ್ರ ಆರಂಭಿಸಲಾಗಿದೆ. ಗುತ್ತಿಗೆದಾರರ ಸದಸ್ಯರು, ಸದುಪಯೋಗಪಡಿಸಿಕೊಂಡು ಸಂಘದ ಅಭಿವೃದ್ಧಿಗಾಗಿ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು. ಸಂಘದ ಪದಾಧಿಕಾರಿಗಳು. ಇದರ ಸದುಪಯೋಗ ಪಡಿಸಿಕೊಂಡು ಸಂಘದ ಅಭಿವೃದ್ಧಿ ಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಪಿಆರ್‌ಇಡಿ ಇಇ ರಮೇಶಕುಮಾರ್, ಆರ್‌ಡಬ್ಲ್ಯೂಎಸ್ ಇಇ ಸಂತೋಷ್ ಕುಮಾರ್, ಪಿಡಬ್ಲ್ಯೂಡಿ ಎಇಇ ಶಾಂತಮ್ಮ, ಟಿಎ ಮಾದೇಶ್, ಕ್ಯೂಸಿ ಎಇಇ ಮಹದೇವಸ್ವಾಮಿ ಎಇಇ ರಮೇಶ್, ಎಇಗಳಾದ ಕೃಷ್ಣಮೂರ್ತಿ, ರಘು, ರೇವಣ್ಣ, ಐಶ್ವರ್ಯ, ಚಾಮರಾಜನಗರ ತಾಲೂಕು ಲೋಕೋಪಯೋಗಿ ಇಲಾಖೆ ಸಿವಿಲ್ ಗುತ್ತಿಗೆದಾರರ ಸಹಕಾರ ಸಂಘದ ಉಪಾಧ್ಯಕ್ಷ ವೈ.ಪಿ.ರಾಜೇಂದ್ರಪ್ರಸಾದ್, ನಿರ್ದೇಶಕರಾದ ಎಂ.ರವಿ, ನಟರಾಜು, ಮಹದೇವಸ್ವಾಮಿ, ಶಿವಬಸವಣ್ಣ, ಎಂ.ಸಿ.ಸುರೇಂದ್ರ, ಎಂ.ಎಂ.ನಾಗರಾಜು, ನಂಜುಂಡಸ್ವಾಮಿ, ದೇವಾಜಮ್ಮಣಿ, ಸುಬ್ಬೇಗೌಡ, ಶಿವಕುಮಾರ್, ನಲ್ಲೂರು ಮಹಾದೇವಸ್ವಾಮಿ, ದೊರೆಸ್ವಾಮಿ, ಗುತ್ತಿಗೆದಾರ ಕೆ.ಎಂ.ಮಹದೇವಸ್ವಾಮಿ, ಹೆಚ್.ಹೆಚ್.ನಾಗರಾಜು, ನಾಗೇಶ್, ಗೋವಿಂದರಾಜು, ಹನುಮಂತು, ವಕೀಲ ಮಂಜು, ಮಹದೇವಸ್ವಾಮಿ, ಸಾಧಿಕ್ ಷರೀಫ್, ಹಾಗೂ ಮೂರು ಇಲಾಖೆಯ ಅಧಿಕಾರಿಗಳು, ಗುತ್ತಿಗೆದಾರರು ಹಾಜರಿದ್ದರು.4
- ಗುಂಡ್ಲುಪೇಟೆ:ಹೊನ್ನೇಗೌಡನಹಳ್ಳಿಯಲ್ಲಿ ಹಸುವಿನ ಮೇಲೆ ಹುಲಿ ದಾಳಿ; ರೈತರಲ್ಲಿ ಆತಂಕ. ಗುಂಡ್ಲುಪೇಟೆ: ತಾಲೂಕಿನ ಹೊನ್ನೇಗೌಡನಹಳ್ಳಿ ಗ್ರಾಮದ ರೈತ ನಾಗಪ್ಪ ಅವರ ಹಸುವಿನ ಮೇಲೆ ಶುಕ್ರವಾರ ಸಂಜೆ ಹುಲಿ ದಾಳಿ ನಡೆಸಿದೆ. ಹುಲಿ ಹಸುವಿನ ಮೇಲೆ ದಾಳಿ ಮಾಡುತ್ತಿದ್ದುದನ್ನು ಗಮನಿಸಿದ ರೈತರು ಜೋರಾಗಿ ಕೂಗಿದಾಗ, ಹೆದರಿದ ಹಸುವನ್ನು ಬಿಟ್ಟು ಕಾಡಿನತ್ತ ಓಡಿಹೋಗಿದೆ. ಘಟನೆಯಿಂದ ಗ್ರಾಮಸ್ಥರು ಹಾಗೂ ರೈತರಲ್ಲಿ ಆತಂಕ ಹೆಚ್ಚಾಗಿದೆ. ಗುಂಡ್ಲುಪೇಟೆ ಭಾಗದಲ್ಲಿ ಹುಲಿ ಹಾಗೂ ಚಿರತೆ ದಾಳಿಗಳು ಪದೇಪದೇ ನಡೆಯುತ್ತಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ದಾಳಿಗೆ ಒಳಗಾದ ಜಾನುವಾರುಗಳಿಗೆ ತಕ್ಷಣ ಚಿಕಿತ್ಸೆ ಹಾಗೂ ಪರಿಹಾರ ನೀಡಬೇಕು. ಹುಲಿ–ಚಿರತೆ ದಾಳಿ ನಿಯಂತ್ರಣಕ್ಕೆ ವಿಶೇಷ ಕ್ರಮ ಕೈಗೊಂಡು, ಪರಿಹಾರವನ್ನು ತ್ವರಿತವಾಗಿ ನೀಡಬೇಕು ಎಂದು ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.3
- ಒಂಟಿಸಲಗನ ಪುಂಡಾಟ: ಹಸು ಬಲಿ , ರೈತನಿಗೆ ತೀವ್ರಗಾಯ ಆಸ್ಪತ್ರೆಗೆ ದಾಖಲು ಮಳವಳ್ಳಿ: ಒಂಟಿ ಸಲಗದ ಪುಂಡಾಟಕ್ಕೆ ಒಂದು ಹಸು ಬಲಿಯಾಗಿ ರೈತನಿಗೆ ಕಾಲು ಮುರಿತಗೊಂಡಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಬಾಳೆಹೊನ್ನಿಗ ಬಳಿ ನಡೆದಿದೆ. ತಾಲ್ಲೂಕಿನ ಬಾಳೆಹೊನ್ನಿಗ ಗ್ರಾಮದ ರಾಜಶೇಖರರವರಿಗೆ ಸೇರಿದ ಹಸುವೇ ಸಾವನ್ನಪ್ಪಿದ್ದು , ಇದಲ್ಲದೇ ಎಲೆತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕುಳ್ಳಾಡಿ ಜೋಗಯ್ಯ ಎಂಬುವರ ಮೇಲೆ ದಾಳಿ ಮಾಡಿ ಕಾಲು ಮುರಿತಗೊಂಡಿದೆ. ಗಾಯಗೊಂಡ ವ್ಯಕ್ತಿಯನ್ನು ಅರಣ್ಯ ಇಲಾಖೆ ಅರಣ್ಯಾಧಿಕಾರಿ ಪ್ರಮೋದ್ ಹಾಗೂ ಸಿಬ್ಬಂದಿಗಳು ಹಲಗೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಅರಣ್ಯ ಇಲಾಖೆ ಆಧಿಕಾರಿ ಹಾಗೂ ಸಿಬ್ಬಂದಿಗಳು ಮತ್ತು ಹಲಗೂರು ಪೊಲೀಸರು ಕಾಡಾನೆಯನ್ನು ಬೀಮನಕಿಂಡಿ ಅರಣ್ಯ ಪ್ರದೇಶಕ್ಕೆ ಓಡಿಸಲು ಹರಸಾಹಸ ಪಟ್ಟರು ಎನ್ನಲಾಗಿದೆ.1