logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಶೆಟ್ಟಿಕೆರೆಯಲ್ಲಿ ಶನಿವಾರ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಜನಜಾಗೃತಿ ಧಾರ್ಮಿಕ ಸಮಾರಂಭ ಶೆಟ್ಟಿಕೆರೆಯಲ್ಲಿ ಶನಿವಾರ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಜನಜಾಗೃತಿ ಧಾರ್ಮಿಕ ಸಮಾರಂಭ ---------------------- ​ಹುಳಿಯಾರು: ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆಯಲ್ಲಿ  ಸೆಪ್ಟೆಂಬರ್ 19, 2026 ನೇ ಶನಿವಾರದಂದು ಚತುರಪೀಠಾಧಿಪತಿಗಳ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಜನ-ಜಾಗೃತಿ ಧಾರ್ಮಿಕ ಸಮಾರಂಭವು ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.   ​ಕಾರ್ಯಕ್ರಮದ ನಿಮಿತ್ತ ಅಂದು ಮಧ್ಯಾಹ್ನ 1:30 ಗಂಟೆಗೆ ಸುಕ್ಷೇತ್ರ ಕುಪ್ಪೂರು ಗದ್ದುಗೆ ಮಹಾಸಂಸ್ಥಾನ ಮಠದಿಂದ ಬೈಕ್ ರಾಲಿಯು ಆರಂಭಗೊಳ್ಳಲಿದೆ. ನಂತರ ಮಧ್ಯಾಹ್ನ 2:00 ಗಂಟೆಗೆ ಶ್ರೀಮದ್ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಅದ್ಧೂರಿ ಉತ್ಸವವು ನಂದಿಧ್ವಜ, ವೀರಾಸೆ, ಲಿಂಗದವೀರರು, ಡೊಳ್ಳುಕುಣಿತ, ಚಂಡೆ ವಾದ್ಯ ಹಾಗೂ ಸಕಲ ಬಿರುದಾವಳಿಗಳೊಂದಿಗೆ ಶೆಟ್ಟಿಕೆರೆ ಮಹಾಗ್ರಾಮದ ರಾಜಬೀದಿಗಳಲ್ಲಿ ಸಂಚರಿಸಲಿದೆ. ಬಳಿಕ ಗೌರಮ್ಮನವರ ದೇವಾಲಯದಲ್ಲಿ ಜಗದ್ಗುರುಗಳವರಿಗೆ ಪಾದಪೂಜೆ ನೆರವೇರಲಿದೆ.   ​ದಿವ್ಯ ಸಾನಿಧ್ಯ: ಸಂಜೆ 5:30 ಕ್ಕೆ ಜರುಗುವ ಜನಜಾಗೃತಿ ಧಾರ್ಮಿಕ ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀಮದ್ ರಂಭಾಪುರಿ ಪೀಠದ ಜಗದ್ಗುರು ಡಾ|| ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಶ್ರೀಮದ್ ಉಜ್ಜಯನಿ ಮಹಾಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಶ್ರೀಮದ್ ಶ್ರೀಶೈಲ ಮಹಾಪೀಠದ ಜಗದ್ಗುರು ಡಾ|| ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹಾಗೂ ಶ್ರೀಮದ್ ಕಾಶಿ ಮಹಾಪೀಠದ ಜಗದ್ಗುರು ಡಾ|| ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದರು ವಹಿಸಲಿದ್ದಾರೆ.   ​              ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆ.ಡಿ.ಎಸ್. ಶಾಸಕಾಂಗ ಪಕ್ಷದ ನಾಯಕರು ಹಾಗೂ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕರಾದ ಸಿ.ಬಿ. ಸುರೇಶ್ ಬಾಬು ವಹಿಸಲಿದ್ದು, ಮಾಜಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಗಣ್ಯರು ವಿಶೇಷ ಸನ್ಮಾನಿತರಾಗಿ ಹಾಗೂ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ​              ಕಾರ್ಯಕ್ರಮದ ದಿನದಂದು ಭಕ್ತಾದಿಗಳಿಗಾಗಿ ನಿರಂತರ ಮಹಾದಾಸೋಹದ ವ್ಯವಸ್ಥೆ ಮಾಡಲಾಗಿದೆ. ಸಮಸ್ತ ಭಕ್ತಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಜಗದ್ಗುರುಗಳವರ ಕೃಪೆಗೆ ಪಾತ್ರರಾಗಬೇಕಾಗಿ ಪ್ರಕಟಣೆಯಲ್ಲಿ ಕೋರಿದ್ದಾರೆ.

1 hr ago
user_Huliyarkiran
Huliyarkiran
ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
1 hr ago
dcdbc66e-c4e0-4330-973c-cdf75a008eec

ಶೆಟ್ಟಿಕೆರೆಯಲ್ಲಿ ಶನಿವಾರ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಜನಜಾಗೃತಿ ಧಾರ್ಮಿಕ ಸಮಾರಂಭ ಶೆಟ್ಟಿಕೆರೆಯಲ್ಲಿ ಶನಿವಾರ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಜನಜಾಗೃತಿ ಧಾರ್ಮಿಕ ಸಮಾರಂಭ ---------------------- ​ಹುಳಿಯಾರು: ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆಯಲ್ಲಿ  ಸೆಪ್ಟೆಂಬರ್ 19, 2026 ನೇ ಶನಿವಾರದಂದು ಚತುರಪೀಠಾಧಿಪತಿಗಳ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಜನ-ಜಾಗೃತಿ ಧಾರ್ಮಿಕ ಸಮಾರಂಭವು ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.   ​ಕಾರ್ಯಕ್ರಮದ ನಿಮಿತ್ತ ಅಂದು ಮಧ್ಯಾಹ್ನ 1:30 ಗಂಟೆಗೆ ಸುಕ್ಷೇತ್ರ ಕುಪ್ಪೂರು ಗದ್ದುಗೆ ಮಹಾಸಂಸ್ಥಾನ ಮಠದಿಂದ

0eae9839-35f1-4cb3-ad96-7e1c09a27adc

ಬೈಕ್ ರಾಲಿಯು ಆರಂಭಗೊಳ್ಳಲಿದೆ. ನಂತರ ಮಧ್ಯಾಹ್ನ 2:00 ಗಂಟೆಗೆ ಶ್ರೀಮದ್ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಅದ್ಧೂರಿ ಉತ್ಸವವು ನಂದಿಧ್ವಜ, ವೀರಾಸೆ, ಲಿಂಗದವೀರರು, ಡೊಳ್ಳುಕುಣಿತ, ಚಂಡೆ ವಾದ್ಯ ಹಾಗೂ ಸಕಲ ಬಿರುದಾವಳಿಗಳೊಂದಿಗೆ ಶೆಟ್ಟಿಕೆರೆ ಮಹಾಗ್ರಾಮದ ರಾಜಬೀದಿಗಳಲ್ಲಿ ಸಂಚರಿಸಲಿದೆ. ಬಳಿಕ ಗೌರಮ್ಮನವರ ದೇವಾಲಯದಲ್ಲಿ ಜಗದ್ಗುರುಗಳವರಿಗೆ ಪಾದಪೂಜೆ ನೆರವೇರಲಿದೆ.   ​ದಿವ್ಯ ಸಾನಿಧ್ಯ: ಸಂಜೆ 5:30 ಕ್ಕೆ ಜರುಗುವ ಜನಜಾಗೃತಿ ಧಾರ್ಮಿಕ ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀಮದ್ ರಂಭಾಪುರಿ ಪೀಠದ ಜಗದ್ಗುರು ಡಾ|| ವೀರಸೋಮೇಶ್ವರ ರಾಜದೇಶಿಕೇಂದ್ರ

3f26033d-0ee4-4364-844d-26312f3d68b1

ಶಿವಾಚಾರ್ಯ ಭಗವತ್ಪಾದರು, ಶ್ರೀಮದ್ ಉಜ್ಜಯನಿ ಮಹಾಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಶ್ರೀಮದ್ ಶ್ರೀಶೈಲ ಮಹಾಪೀಠದ ಜಗದ್ಗುರು ಡಾ|| ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹಾಗೂ ಶ್ರೀಮದ್ ಕಾಶಿ ಮಹಾಪೀಠದ ಜಗದ್ಗುರು ಡಾ|| ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದರು ವಹಿಸಲಿದ್ದಾರೆ.   ​              ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆ.ಡಿ.ಎಸ್. ಶಾಸಕಾಂಗ ಪಕ್ಷದ ನಾಯಕರು ಹಾಗೂ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕರಾದ ಸಿ.ಬಿ.

c7c7e28a-226e-4b7e-8b78-90dc67ba6ca4

ಸುರೇಶ್ ಬಾಬು ವಹಿಸಲಿದ್ದು, ಮಾಜಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಗಣ್ಯರು ವಿಶೇಷ ಸನ್ಮಾನಿತರಾಗಿ ಹಾಗೂ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ​              ಕಾರ್ಯಕ್ರಮದ ದಿನದಂದು ಭಕ್ತಾದಿಗಳಿಗಾಗಿ ನಿರಂತರ ಮಹಾದಾಸೋಹದ ವ್ಯವಸ್ಥೆ ಮಾಡಲಾಗಿದೆ. ಸಮಸ್ತ ಭಕ್ತಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಜಗದ್ಗುರುಗಳವರ ಕೃಪೆಗೆ ಪಾತ್ರರಾಗಬೇಕಾಗಿ ಪ್ರಕಟಣೆಯಲ್ಲಿ ಕೋರಿದ್ದಾರೆ.

More news from ಕರ್ನಾಟಕ and nearby areas
  • ಹುಳಿಯಾರಿನ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ರವೀಂದ್ರ ಚಾರ್ ಮಾತನಾಡಿದರು
    1
    ಹುಳಿಯಾರಿನ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ರವೀಂದ್ರ ಚಾರ್ ಮಾತನಾಡಿದರು
    user_Huliyarkiran
    Huliyarkiran
    ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
    18 min ago
  • ಜಾತ್ಯಾತೀತವಾಗಿ ಕೂಡಿ ಬಾಳಿದರೆ ಸ್ವರ್ಗ ಸುಖ ಈ ವಿಡಿಯೋದಲ್ಲಿ ಕೂಡಿ ಬಾಳಿ ಎಂಬ ಒಳ್ಳೆ ಸಂದೇಶವಿದೆ
    1
    ಜಾತ್ಯಾತೀತವಾಗಿ ಕೂಡಿ ಬಾಳಿದರೆ ಸ್ವರ್ಗ ಸುಖ ಈ ವಿಡಿಯೋದಲ್ಲಿ ಕೂಡಿ ಬಾಳಿ ಎಂಬ ಒಳ್ಳೆ ಸಂದೇಶವಿದೆ
    user_Onlinetv24x7
    Onlinetv24x7
    ತುಮಕೂರು, ತುಮಕೂರು, ಕರ್ನಾಟಕ•
    13 hrs ago
  • 3 ತಿಂಗಳ ಬಳಿಕ ಕೊರಟಗೆರೆಗೆ ವರುಣನ ದರ್ಶನ: ಅರ್ಧ ಗಂಟೆ ಸುರಿದ ಮಳೆಗೆ ಜನರ ಮಿಶ್ರ ಪ್ರತಿಕ್ರಿಯೆ 3 ತಿಂಗಳ ಬಳಿಕ ಕೊರಟಗೆರೆಗೆ ವರುಣನ ದರ್ಶನ: ಅರ್ಧ ಗಂಟೆ ಸುರಿದ ಮಳೆಗೆ ಜನರ ಮಿಶ್ರ ಪ್ರತಿಕ್ರಿಯೆ *ಕೊರಟಗೆರೆ, ಸೆ.17:* ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನಲ್ಲಿ ಸುಮಾರು ಮೂರು ತಿಂಗಳಿನಿಂದ ಮಳೆ ಇಲ್ಲದೆ ಕಂಗಾಲಾಗಿದ್ದ ಜನರಿಗೆ ಇಂದು ಸಂಜೆ ವರುಣ ದೇವ ಕೊನೆಗೂ ದರ್ಶನ ನೀಡಿದ್ದಾನೆ. ಇಂದು ಸಂಜೆ ಸುಮಾರು ಅರ್ಧ ಗಂಟೆ ಕಾಲ ಸಾಧಾರಣ ಮಳೆ ಸುರಿದಿದ್ದು, ಬಿಸಿಲಿನ ಝಳದಿಂದ ಬಳಲಿದ್ದ ಜನರಿಗೆ ಕೊಂಚ ತಂಪೆರೆದಂತಾಗಿದೆ. ದೀರ್ಘ ಬರದ ನಂತರ ಬಿದ್ದ ಈ ಮಳೆಯನ್ನು ಕೆಲವರು "ಉತ್ತರೆ ಮಳೆ" ಎಂದು ಸಂಭ್ರಮಿಸಿದರು. ಆದರೆ ಬೆಳೆ ಒಣಗಿ ನಷ್ಟ ಅನುಭವಿಸಿರುವ ರೈತರು ಮಾತ್ರ ಮಳೆರಾಯನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. "ಈಗ ಮಳೆ ಬಂದು ಏನು ಪ್ರಯೋಜನ? ಬೆಳೆದಿದ್ದ ಬೆಳೆ ಎಲ್ಲಾ ಒಣಗಿ ಹೋಗಿದೆ. ಸಮಯಕ್ಕೆ ಬಾರದ ಮಳೆಯಿಂದ ರೈತನ ಬದುಕು ಹಾಳಾಗಿದೆ" ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ತಿಂಗಳುಗಳ ನಂತರ ಸುರಿದ ಮಳೆಯಿಂದ ವಾತಾವರಣ ತಂಪಾಗಿದ್ದರೂ, ರೈತರ ಮೊಗದಲ್ಲಿ ಮಾತ್ರ ನಿರೀಕ್ಷಿತ ಖುಷಿ ಕಾಣಲಿಲ್ಲ.
    2
    3 ತಿಂಗಳ ಬಳಿಕ ಕೊರಟಗೆರೆಗೆ ವರುಣನ ದರ್ಶನ: ಅರ್ಧ ಗಂಟೆ ಸುರಿದ ಮಳೆಗೆ ಜನರ ಮಿಶ್ರ ಪ್ರತಿಕ್ರಿಯೆ

3 ತಿಂಗಳ ಬಳಿಕ ಕೊರಟಗೆರೆಗೆ ವರುಣನ ದರ್ಶನ: ಅರ್ಧ ಗಂಟೆ ಸುರಿದ ಮಳೆಗೆ ಜನರ ಮಿಶ್ರ ಪ್ರತಿಕ್ರಿಯೆ
*ಕೊರಟಗೆರೆ, ಸೆ.17:* ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನಲ್ಲಿ ಸುಮಾರು ಮೂರು ತಿಂಗಳಿನಿಂದ ಮಳೆ ಇಲ್ಲದೆ ಕಂಗಾಲಾಗಿದ್ದ ಜನರಿಗೆ ಇಂದು ಸಂಜೆ ವರುಣ ದೇವ ಕೊನೆಗೂ ದರ್ಶನ ನೀಡಿದ್ದಾನೆ.
ಇಂದು ಸಂಜೆ ಸುಮಾರು ಅರ್ಧ ಗಂಟೆ ಕಾಲ ಸಾಧಾರಣ ಮಳೆ ಸುರಿದಿದ್ದು, ಬಿಸಿಲಿನ ಝಳದಿಂದ ಬಳಲಿದ್ದ ಜನರಿಗೆ ಕೊಂಚ ತಂಪೆರೆದಂತಾಗಿದೆ. ದೀರ್ಘ ಬರದ ನಂತರ ಬಿದ್ದ ಈ ಮಳೆಯನ್ನು ಕೆಲವರು "ಉತ್ತರೆ ಮಳೆ" ಎಂದು ಸಂಭ್ರಮಿಸಿದರು.
ಆದರೆ ಬೆಳೆ ಒಣಗಿ ನಷ್ಟ ಅನುಭವಿಸಿರುವ ರೈತರು ಮಾತ್ರ ಮಳೆರಾಯನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. "ಈಗ ಮಳೆ ಬಂದು ಏನು ಪ್ರಯೋಜನ? ಬೆಳೆದಿದ್ದ ಬೆಳೆ ಎಲ್ಲಾ ಒಣಗಿ ಹೋಗಿದೆ. ಸಮಯಕ್ಕೆ ಬಾರದ ಮಳೆಯಿಂದ ರೈತನ ಬದುಕು ಹಾಳಾಗಿದೆ" ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ತಿಂಗಳುಗಳ ನಂತರ ಸುರಿದ ಮಳೆಯಿಂದ ವಾತಾವರಣ ತಂಪಾಗಿದ್ದರೂ, ರೈತರ ಮೊಗದಲ್ಲಿ ಮಾತ್ರ ನಿರೀಕ್ಷಿತ ಖುಷಿ ಕಾಣಲಿಲ್ಲ.
    user_ವಿಜಯ್ ಶಂಕರ್
    ವಿಜಯ್ ಶಂಕರ್
    Local News Reporter ಕೊರಟಗೆರೆ, ತುಮಕೂರು, ಕರ್ನಾಟಕ•
    1 hr ago
  • ಕೊರಟಗೆರೆ ತಾಲೂಕಿನ ತುಮಕೂರು ಜಿಲ್ಲೆ ನರಸಯ್ಯನಪಾಳ್ಯ ಕುರುಕ್ಷೇತ್ರ ನಾಟಕ
    1
    ಕೊರಟಗೆರೆ ತಾಲೂಕಿನ ತುಮಕೂರು ಜಿಲ್ಲೆ ನರಸಯ್ಯನಪಾಳ್ಯ ಕುರುಕ್ಷೇತ್ರ ನಾಟಕ
    user_Mutthuraj Raj
    Mutthuraj Raj
    Electrician ಕೊರಟಗೆರೆ, ತುಮಕೂರು, ಕರ್ನಾಟಕ•
    2 hrs ago
  • ಕುಣಿಗಲ್ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಕುಣಿಗಲ್ ಟು ಬೆಂಗಳೂರು ವಜ್ರ ವಿಸ್ತಾರ ಬಸ್ಗೆ ಚಾಲನೆ ನೀಡಿದರು ಪಟ್ಟಣದ ಎನ್ ಹುಚ್ಚು ಮಸ್ತಿ ಗೌಡ ವೃತ್ತದಲ್ಲಿ ಕುಣಿಗಲ್ ಟು ಬೆಂಗಳೂರು ವಜ್ರ ವಿಸ್ತಾರ ಬಸ್ ಸಾರಿಗೆ ಸಚಿವರಾದ ಬೈರತಿ ಸುರೇಶ್ ಮತ್ತು ನಿಕಟಪೂರ್ವ ಸಂಸದರಾದ ಡಿಕೆ ಸುರೇಶ್ ಮತ್ತು ಶಾಸಕರಾದ ಡಾಕ್ಟರ್ ಎಚ್ ಡಿ ರಂಗನಾಥ್ ರವರು ಚಾಲನೆ ನೀಡಿದರು
    1
    ಕುಣಿಗಲ್ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಕುಣಿಗಲ್ ಟು ಬೆಂಗಳೂರು ವಜ್ರ ವಿಸ್ತಾರ ಬಸ್ಗೆ ಚಾಲನೆ ನೀಡಿದರು 
ಪಟ್ಟಣದ ಎನ್ ಹುಚ್ಚು ಮಸ್ತಿ ಗೌಡ ವೃತ್ತದಲ್ಲಿ ಕುಣಿಗಲ್ ಟು ಬೆಂಗಳೂರು ವಜ್ರ ವಿಸ್ತಾರ ಬಸ್ ಸಾರಿಗೆ ಸಚಿವರಾದ ಬೈರತಿ ಸುರೇಶ್ ಮತ್ತು ನಿಕಟಪೂರ್ವ ಸಂಸದರಾದ ಡಿಕೆ ಸುರೇಶ್ ಮತ್ತು ಶಾಸಕರಾದ ಡಾಕ್ಟರ್ ಎಚ್ ಡಿ ರಂಗನಾಥ್ ರವರು ಚಾಲನೆ ನೀಡಿದರು
    user_Gopala N
    Gopala N
    Local News Reporter ಕುಣಿಗಲ್, ತುಮಕೂರು, ಕರ್ನಾಟಕ•
    7 hrs ago
  • ಪ್ರಧಾನಿ ಜನ್ಮದಿನವನ್ನು ರಾಷ್ಟ್ರೀಯ ನಿರುದ್ಯೋಗ ದಿನವಾಗಿ ಆಚರಿಸಿದ ಯುವ ಕಾಂಗ್ರೆಸ್: ತರಕಾರಿ ಮಾರಿ ಕೇಂದ್ರದ ವಿರುದ್ಧ ವಿನೂತನ ಪ್ರತಿಭಟನೆ ಚಳ್ಳಕೆರೆ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು 'ರಾಷ್ಟ್ರೀಯ ನಿರುದ್ಯೋಗ ದಿನ'ವನ್ನಾಗಿ ಆಚರಿಸುವ ಮೂಲಕ ಚಳ್ಳಕೆರೆ ವಿಧಾನಸಭಾ ಯುವ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಬೀದಿಬದಿಯಲ್ಲಿ ತರಕಾರಿ ಮಾರಾಟ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ನಗರದಲ್ಲಿ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಜಮಾಯಿಸಿದ ಕಾರ್ಯಕರ್ತರು, 'ಯುವಕರಿಗೆ ಉದ್ಯೋಗ – ದೇಶದ ಯುವಶಕ್ತಿಗೆ ಭವಿಷ್ಯದ ಭರವಸೆ' ಎಂಬ ಘೋಷವಾಕ್ಯದಡಿ ಸರ್ಕಾರದ ನೀತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಉನ್ನತ ವ್ಯಾಸಂಗ ಮಾಡಿದ ಯುವಕರಿಗೆ ಉದ್ಯೋಗವಿಲ್ಲದೆ ಬೀದಿಯಲ್ಲಿ ತರಕಾರಿ ಮಾರುವ ಪರಿಸ್ಥಿತಿ ಬಂದೊದಗಿದೆ ಎಂಬುದನ್ನು ಸಾಂಕೇತಿಕವಾಗಿ ಪ್ರದರ್ಶಿಸುವ ಮೂಲಕ ಕೇಂದ್ರದ ಗಮನ ಸೆಳೆಯುವ ಯತ್ನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಯುವ ಕಾಂಗ್ರೆಸ್ ಮುಖಂಡರು,ಕೇಂದ್ರ ಸರ್ಕಾರವು ದೇಶದ ಯುವಕರಿಗೆ ಉದ್ಯೋಗ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ದಿನೇ ದಿನೇ ನಿರುದ್ಯೋಗ ಸಮಸ್ಯೆ ಮಿತಿಮೀರುತ್ತಿದ್ದು, ಪದವಿ ಪಡೆದ ಯುವಕರು ಅನಿವಾರ್ಯವಾಗಿ ತರಕಾರಿ ಮಾರುವ ಹಾಗೂ ಕೂಲಿ ಕೆಲಸ ಮಾಡುವ ದುಸ್ಥಿತಿ ನಿರ್ಮಾಣವಾಗಿದೆ. ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ಅಧಿಕಾರಕ್ಕೇರಿದ ಸರ್ಕಾರ, ಇದೀಗ ದೇಶದ ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು. ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಪಟೇಲ್, ಉಪಾಧ್ಯಕ್ಷ ಎಸ್.ಜಿ. ವೀರೇಶ್, ಅಸೆಂಬ್ಲಿ ಪ್ರಧಾನ ಕಾರ್ಯದರ್ಶಿಗಳಾದ ಮಹಮ್ಮದ್ ಹರ್ಬರ್ಜ್, ಪುರುಷೋತ್ತಮ್, ಮಂಜುನಾಥ್ ಜಿ.ಕೆ., ನಿಂಗೇಗೌಡ, ಹರೀಶ್, ಅರುಣ್ ಯಾದವ್, ನಟರಾಜ್, ತಿರುಮಲೇಶ್, ಗಣೇಶ್, ಮನು ಚೌಳೂರು, ಪ್ರಭು, ಏಕಾಂತ್ ಸೇರಿದಂತೆ ಹಲವು ಯುವ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ಥಳೀಯ ಯುವಕರು ಪಾಲ್ಗೊಂಡಿದ್ದರು.
    3
    ಪ್ರಧಾನಿ ಜನ್ಮದಿನವನ್ನು ರಾಷ್ಟ್ರೀಯ ನಿರುದ್ಯೋಗ ದಿನವಾಗಿ ಆಚರಿಸಿದ ಯುವ ಕಾಂಗ್ರೆಸ್: ತರಕಾರಿ ಮಾರಿ ಕೇಂದ್ರದ ವಿರುದ್ಧ ವಿನೂತನ ಪ್ರತಿಭಟನೆ
ಚಳ್ಳಕೆರೆ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು 'ರಾಷ್ಟ್ರೀಯ ನಿರುದ್ಯೋಗ ದಿನ'ವನ್ನಾಗಿ ಆಚರಿಸುವ ಮೂಲಕ ಚಳ್ಳಕೆರೆ ವಿಧಾನಸಭಾ ಯುವ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಬೀದಿಬದಿಯಲ್ಲಿ ತರಕಾರಿ ಮಾರಾಟ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ನಗರದಲ್ಲಿ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಜಮಾಯಿಸಿದ ಕಾರ್ಯಕರ್ತರು, 'ಯುವಕರಿಗೆ ಉದ್ಯೋಗ – ದೇಶದ ಯುವಶಕ್ತಿಗೆ ಭವಿಷ್ಯದ ಭರವಸೆ' ಎಂಬ ಘೋಷವಾಕ್ಯದಡಿ ಸರ್ಕಾರದ ನೀತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಉನ್ನತ ವ್ಯಾಸಂಗ ಮಾಡಿದ ಯುವಕರಿಗೆ ಉದ್ಯೋಗವಿಲ್ಲದೆ ಬೀದಿಯಲ್ಲಿ ತರಕಾರಿ ಮಾರುವ ಪರಿಸ್ಥಿತಿ ಬಂದೊದಗಿದೆ ಎಂಬುದನ್ನು ಸಾಂಕೇತಿಕವಾಗಿ ಪ್ರದರ್ಶಿಸುವ ಮೂಲಕ ಕೇಂದ್ರದ ಗಮನ ಸೆಳೆಯುವ ಯತ್ನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯುವ ಕಾಂಗ್ರೆಸ್ ಮುಖಂಡರು,ಕೇಂದ್ರ ಸರ್ಕಾರವು ದೇಶದ ಯುವಕರಿಗೆ ಉದ್ಯೋಗ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ದಿನೇ ದಿನೇ ನಿರುದ್ಯೋಗ ಸಮಸ್ಯೆ ಮಿತಿಮೀರುತ್ತಿದ್ದು, ಪದವಿ ಪಡೆದ ಯುವಕರು ಅನಿವಾರ್ಯವಾಗಿ ತರಕಾರಿ ಮಾರುವ ಹಾಗೂ ಕೂಲಿ ಕೆಲಸ ಮಾಡುವ ದುಸ್ಥಿತಿ ನಿರ್ಮಾಣವಾಗಿದೆ. ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ಅಧಿಕಾರಕ್ಕೇರಿದ ಸರ್ಕಾರ, ಇದೀಗ ದೇಶದ ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಪಟೇಲ್, ಉಪಾಧ್ಯಕ್ಷ ಎಸ್.ಜಿ. ವೀರೇಶ್, ಅಸೆಂಬ್ಲಿ ಪ್ರಧಾನ ಕಾರ್ಯದರ್ಶಿಗಳಾದ ಮಹಮ್ಮದ್ ಹರ್ಬರ್ಜ್, ಪುರುಷೋತ್ತಮ್, ಮಂಜುನಾಥ್ ಜಿ.ಕೆ., ನಿಂಗೇಗೌಡ, ಹರೀಶ್, ಅರುಣ್ ಯಾದವ್, ನಟರಾಜ್, ತಿರುಮಲೇಶ್, ಗಣೇಶ್, ಮನು ಚೌಳೂರು, ಪ್ರಭು, ಏಕಾಂತ್ ಸೇರಿದಂತೆ ಹಲವು ಯುವ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ಥಳೀಯ ಯುವಕರು ಪಾಲ್ಗೊಂಡಿದ್ದರು.
    user_Kiran M J
    Kiran M J
    Local News Reporter ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
    52 min ago
  • ಕೃತಕ ಬುದ್ಧಿಮತ್ತೆಯಿಂದ ಕೃಷಿಯಲ್ಲಿ ಕಡಿಮೆ ವೆಚ್ಚ, ಹೆಚ್ಚಿನ ಆದಾಯ ಸಾಧ್ಯ-- ಡಾ. ಪಿ. ಉಮಾಮಹೇಶ್ವರಪ್ಪ. ಜೆಸಿಐ ಪ್ರತಿಬಿಂಬ ಸಪ್ತಾಹದ ಅಂಗವಾಗಿ ಕೃತಕ ಬುದ್ಧಿಮತ್ತೆ ಹಾಗೂ ಕೃಷಿ ಕ್ಷೇತ್ರದ ಕುರಿತು ಕಾರ್ಯಕ್ರಮ ಮೂಡಿಗೆರೆ: ಕೃಷಿ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ಕಡಿಮೆ ಒಳಹೂಡಿಕೆಯಲ್ಲಿ ಹೆಚ್ಚಿನ ಉತ್ಪಾದನೆ ಹಾಗೂ ಆದಾಯ ಪಡೆಯಲು ಸಾಧ್ಯವಿದೆ ಎಂದು ಕೆವಿಕೆ ಹಿರಿಯ ಮುಖ್ಯಸ್ಥ ಡಾ. ಉಮಾಮಹೇಶ್ವರಪ್ಪ ಹೇಳಿದರು. ಪಟ್ಟಣದ ಜೆಸಿಐ ಭವನದಲ್ಲಿ ಜೆಸಿಐ ಪ್ರತಿಬಿಂಬ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ‘ಕೃತಕ ಬುದ್ಧಿಮತ್ತೆಯ ಸ್ವರೂಪ ಮತ್ತು ಕೃಷಿ ಕ್ಷೇತ್ರದಲ್ಲಿ ಅದರ ಬಳಕೆ’ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಿಖರ ಕೃಷಿ, ಹವಾಮಾನ ಮುನ್ಸೂಚನೆ, ಮಣ್ಣಿನ ಗುಣಮಟ್ಟದ ವಿಶ್ಲೇಷಣೆ, ಬೆಳೆಗಳಿಗೆ ಅಗತ್ಯವಿರುವ ಪೋಷಕಾಂಶಗಳ ಪ್ರಮಾಣ ನಿರ್ಧಾರ, ಕೀಟ ಹಾಗೂ ರೋಗಗಳ ಪತ್ತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ಪ್ರಮುಖ ಪಾತ್ರ ವಹಿಸುತ್ತಿದೆ. ಅಗತ್ಯವಿರುವ ಸಮಯದಲ್ಲಿ ಅಗತ್ಯ ಪ್ರಮಾಣದ ಒಳಹೂಡಿಕೆ ನೀಡುವ ಮೂಲಕ ಕೃಷಿ ವೆಚ್ಚ ಕಡಿಮೆ ಮಾಡಿ ಉತ್ಪಾದಕತೆ ಹೆಚ್ಚಿಸಬಹುದು ಎಂದರು. ಭಾರತದಲ್ಲಿ ಒಂದು ಎಕರೆ ಪ್ರದೇಶದಲ್ಲಿ ಟೊಮೆಟೊ ಬೆಳೆಯಿಂದ ಉತ್ತಮ ಇಳುವರಿ ಪಡೆಯಲಾಗುತ್ತಿದ್ದರೂ, ಜಪಾನ್‌ನಂತಹ ದೇಶಗಳಲ್ಲಿ ಆಧುನಿಕ ತಂತ್ರಜ್ಞಾನ, ನಿಖರ ಕೃಷಿ ಪದ್ಧತಿ ಹಾಗೂ ಸ್ವಯಂಚಾಲಿತ ವ್ಯವಸ್ಥೆಗಳನ್ನು ಬಳಸಿಕೊಂಡು ಇನ್ನಷ್ಟು ಹೆಚ್ಚಿನ ಉತ್ಪಾದನೆ ಪಡೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನಗಳು ಕೃಷಿಯ ಸ್ವರೂಪವನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿವೆ ಎಂದು ಹೇಳಿದರು. ವಿದ್ಯಾರ್ಥಿಗಳು, ರೈತರೊಂದಿಗೆ ಬೆರೆಯುವ ಮನೋಭಾವ ಅಗತ್ಯ ತಾವು ಕೆವಿಕೆ ಮುಖ್ಯಸ್ಥರಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ತರಬೇತಿಗೆ ಆಗಮಿಸುವ ವಿದ್ಯಾರ್ಥಿಗಳು ಹಾಗೂ ರೈತರೊಂದಿಗೆ ಹೆಚ್ಚಿನ ಸಂವಹನಕ್ಕೆ ಆದ್ಯತೆ ನೀಡಲಾಗುತ್ತಿದೆ. ದೂರದ ಊರುಗಳಿಂದಲೂ ರೈತರು ತರಬೇತಿ ಹಾಗೂ ಕೃಷಿ ಸಲಹೆ ಪಡೆಯಲು ಆಗಮಿಸುತ್ತಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಪ್ರತಿಯೊಬ್ಬ ಕೃಷಿ ವಿಜ್ಞಾನಿ ಹಾಗೂ ತರಬೇತುದಾರರಲ್ಲಿ ಇರಬೇಕು ಎಂದು ತಿಳಿಸಿದರು. ತಮ್ಮ ವಿದ್ಯಾರ್ಥಿ ಜೀವನವನ್ನು ನೆನಪಿಸಿಕೊಂಡ ಅವರು, ಬಡತನ ಹಾಗೂ ಹಲವು ಕಷ್ಟಗಳ ನಡುವೆಯೂ ವಿದ್ಯಾಭ್ಯಾಸ ಮುಂದುವರಿಸಿದ್ದಾಗಿ ಹೇಳಿದರು. ಪದವಿ ಪೂರ್ಣಗೊಳಿಸಿದ ನಂತರ ಐದು ಸರ್ಕಾರಿ ಉದ್ಯೋಗಾವಕಾಶಗಳು ದೊರೆತಿದ್ದರೂ, ಪ್ರಾಧ್ಯಾಪಕರಾಗಬೇಕೆಂಬ ಕನಸಿನಿಂದ ತೋಟಗಾರಿಕೆಯಲ್ಲಿ ಬಿ.ಎಸ್ಸಿ., ಎಂ.ಎಸ್ಸಿ. ಹಾಗೂ ಪಿಎಚ್‌ಡಿ ಪದವಿ ಪಡೆದು ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಅವಕಾಶ ದೊರೆತಿರುವುದು ಹೆಮ್ಮೆಯ ಸಂಗತಿ ಎಂದರು. ವಿದ್ಯಾರ್ಥಿ ಜೀವನದಲ್ಲಿ ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ತಿಂಗಳಿಗೆ ಕೇವಲ ₹1,500 ದೊರೆಯುತ್ತಿತ್ತು. ಆದರೂ ಗುರಿ ಸಾಧಿಸುವ ಛಲದಿಂದ ಮುನ್ನಡೆದು ಇಂದು ಕೆವಿಕೆ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ತಮ್ಮ ಅನುಭವ ಹಂಚಿಕೊಂಡರು. ಸ್ವಾವಲಂಬಿ ಬದುಕಿಗೆ ಆದ್ಯತೆ ನೀಡಬೇಕು ‘ನಾವು ತಿನ್ನುವ ಅನ್ನ ಬೆವರಿನಿಂದ ಬಂದಿರಬೇಕು; ಬೇರೆಯವರ ಹಂಗಿನಲ್ಲಿ ಬದುಕಬಾರದು’ ಎಂಬ ಡಿ.ವಿ.ಜಿ. ಅವರ ಆಶಯದಂತೆ ಪ್ರತಿಯೊಬ್ಬರೂ ಸ್ವಾವಲಂಬಿ ಜೀವನಕ್ಕೆ ಆದ್ಯತೆ ನೀಡಬೇಕು. ಕೃಷಿಯನ್ನೂ ಆಧುನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸುವ ಮೂಲಕ ಯುವಜನತೆ ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಅಧ್ಯಕ್ಷ ಸುನೀಲ್ ಎಂ.ಎಲ್. ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುನ್ನಳ್ಳಿ, ಜೆಸಿಐ ಪದಾಧಿಕಾರಿಗಳು, ಕೃಷಿ ಪರಿಕರಗಳ ಮಾರಾಟಗಾರರ ಅಧ್ಯಕ್ಷ ನಾಗೇಶ್ ನಾಯ್ಕ್, ದೇಸಿ ಸಂಯೋಜಕ ರಾಮಚಂದ್ರಪ್ಪ, ಮುಖ್ಯ ಅತಿಥಿ ಪುರ್ಣೆಶ್, ತರಬೇತುದಾರ ನಂಜೇಶ್, ದೇಸಿ ತರಬೇತಿದಾರರು, ರೈತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ವರದಿ: ಪ್ರದೀಪ್ ಹೆಚ್ ಈ. ತರೀಕೆರೆ
    4
    ಕೃತಕ ಬುದ್ಧಿಮತ್ತೆಯಿಂದ ಕೃಷಿಯಲ್ಲಿ ಕಡಿಮೆ ವೆಚ್ಚ, ಹೆಚ್ಚಿನ ಆದಾಯ ಸಾಧ್ಯ-- ಡಾ. ಪಿ. ಉಮಾಮಹೇಶ್ವರಪ್ಪ.

ಜೆಸಿಐ ಪ್ರತಿಬಿಂಬ ಸಪ್ತಾಹದ ಅಂಗವಾಗಿ ಕೃತಕ ಬುದ್ಧಿಮತ್ತೆ ಹಾಗೂ ಕೃಷಿ ಕ್ಷೇತ್ರದ ಕುರಿತು ಕಾರ್ಯಕ್ರಮ

ಮೂಡಿಗೆರೆ: 

ಕೃಷಿ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ  ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ಕಡಿಮೆ ಒಳಹೂಡಿಕೆಯಲ್ಲಿ ಹೆಚ್ಚಿನ ಉತ್ಪಾದನೆ ಹಾಗೂ ಆದಾಯ ಪಡೆಯಲು ಸಾಧ್ಯವಿದೆ ಎಂದು ಕೆವಿಕೆ ಹಿರಿಯ ಮುಖ್ಯಸ್ಥ ಡಾ. ಉಮಾಮಹೇಶ್ವರಪ್ಪ ಹೇಳಿದರು.

ಪಟ್ಟಣದ ಜೆಸಿಐ ಭವನದಲ್ಲಿ ಜೆಸಿಐ ಪ್ರತಿಬಿಂಬ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ‘ಕೃತಕ ಬುದ್ಧಿಮತ್ತೆಯ ಸ್ವರೂಪ ಮತ್ತು ಕೃಷಿ ಕ್ಷೇತ್ರದಲ್ಲಿ ಅದರ ಬಳಕೆ’ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಿಖರ ಕೃಷಿ, ಹವಾಮಾನ ಮುನ್ಸೂಚನೆ, ಮಣ್ಣಿನ ಗುಣಮಟ್ಟದ ವಿಶ್ಲೇಷಣೆ, ಬೆಳೆಗಳಿಗೆ ಅಗತ್ಯವಿರುವ ಪೋಷಕಾಂಶಗಳ ಪ್ರಮಾಣ ನಿರ್ಧಾರ, ಕೀಟ ಹಾಗೂ ರೋಗಗಳ ಪತ್ತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ಪ್ರಮುಖ ಪಾತ್ರ ವಹಿಸುತ್ತಿದೆ. ಅಗತ್ಯವಿರುವ ಸಮಯದಲ್ಲಿ ಅಗತ್ಯ ಪ್ರಮಾಣದ ಒಳಹೂಡಿಕೆ ನೀಡುವ ಮೂಲಕ ಕೃಷಿ ವೆಚ್ಚ ಕಡಿಮೆ ಮಾಡಿ ಉತ್ಪಾದಕತೆ ಹೆಚ್ಚಿಸಬಹುದು ಎಂದರು.

ಭಾರತದಲ್ಲಿ ಒಂದು ಎಕರೆ ಪ್ರದೇಶದಲ್ಲಿ ಟೊಮೆಟೊ ಬೆಳೆಯಿಂದ ಉತ್ತಮ ಇಳುವರಿ ಪಡೆಯಲಾಗುತ್ತಿದ್ದರೂ, ಜಪಾನ್‌ನಂತಹ ದೇಶಗಳಲ್ಲಿ ಆಧುನಿಕ ತಂತ್ರಜ್ಞಾನ, ನಿಖರ ಕೃಷಿ ಪದ್ಧತಿ ಹಾಗೂ ಸ್ವಯಂಚಾಲಿತ ವ್ಯವಸ್ಥೆಗಳನ್ನು ಬಳಸಿಕೊಂಡು ಇನ್ನಷ್ಟು ಹೆಚ್ಚಿನ ಉತ್ಪಾದನೆ ಪಡೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನಗಳು ಕೃಷಿಯ ಸ್ವರೂಪವನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿವೆ ಎಂದು ಹೇಳಿದರು.

ವಿದ್ಯಾರ್ಥಿಗಳು, ರೈತರೊಂದಿಗೆ ಬೆರೆಯುವ ಮನೋಭಾವ ಅಗತ್ಯ
ತಾವು ಕೆವಿಕೆ ಮುಖ್ಯಸ್ಥರಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ತರಬೇತಿಗೆ ಆಗಮಿಸುವ ವಿದ್ಯಾರ್ಥಿಗಳು ಹಾಗೂ ರೈತರೊಂದಿಗೆ ಹೆಚ್ಚಿನ ಸಂವಹನಕ್ಕೆ ಆದ್ಯತೆ ನೀಡಲಾಗುತ್ತಿದೆ. ದೂರದ ಊರುಗಳಿಂದಲೂ ರೈತರು ತರಬೇತಿ ಹಾಗೂ ಕೃಷಿ ಸಲಹೆ ಪಡೆಯಲು ಆಗಮಿಸುತ್ತಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಪ್ರತಿಯೊಬ್ಬ ಕೃಷಿ ವಿಜ್ಞಾನಿ ಹಾಗೂ ತರಬೇತುದಾರರಲ್ಲಿ ಇರಬೇಕು ಎಂದು ತಿಳಿಸಿದರು.

ತಮ್ಮ ವಿದ್ಯಾರ್ಥಿ ಜೀವನವನ್ನು ನೆನಪಿಸಿಕೊಂಡ ಅವರು, ಬಡತನ ಹಾಗೂ ಹಲವು ಕಷ್ಟಗಳ ನಡುವೆಯೂ ವಿದ್ಯಾಭ್ಯಾಸ ಮುಂದುವರಿಸಿದ್ದಾಗಿ ಹೇಳಿದರು. ಪದವಿ ಪೂರ್ಣಗೊಳಿಸಿದ ನಂತರ ಐದು ಸರ್ಕಾರಿ ಉದ್ಯೋಗಾವಕಾಶಗಳು ದೊರೆತಿದ್ದರೂ, ಪ್ರಾಧ್ಯಾಪಕರಾಗಬೇಕೆಂಬ ಕನಸಿನಿಂದ ತೋಟಗಾರಿಕೆಯಲ್ಲಿ ಬಿ.ಎಸ್ಸಿ., ಎಂ.ಎಸ್ಸಿ. ಹಾಗೂ ಪಿಎಚ್‌ಡಿ ಪದವಿ ಪಡೆದು ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಅವಕಾಶ ದೊರೆತಿರುವುದು ಹೆಮ್ಮೆಯ ಸಂಗತಿ ಎಂದರು.

ವಿದ್ಯಾರ್ಥಿ ಜೀವನದಲ್ಲಿ ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ತಿಂಗಳಿಗೆ ಕೇವಲ ₹1,500 ದೊರೆಯುತ್ತಿತ್ತು. ಆದರೂ ಗುರಿ ಸಾಧಿಸುವ ಛಲದಿಂದ ಮುನ್ನಡೆದು ಇಂದು ಕೆವಿಕೆ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ತಮ್ಮ ಅನುಭವ ಹಂಚಿಕೊಂಡರು.

ಸ್ವಾವಲಂಬಿ ಬದುಕಿಗೆ ಆದ್ಯತೆ ನೀಡಬೇಕು
‘ನಾವು ತಿನ್ನುವ ಅನ್ನ ಬೆವರಿನಿಂದ ಬಂದಿರಬೇಕು; ಬೇರೆಯವರ ಹಂಗಿನಲ್ಲಿ ಬದುಕಬಾರದು’ ಎಂಬ ಡಿ.ವಿ.ಜಿ. ಅವರ ಆಶಯದಂತೆ ಪ್ರತಿಯೊಬ್ಬರೂ ಸ್ವಾವಲಂಬಿ ಜೀವನಕ್ಕೆ ಆದ್ಯತೆ ನೀಡಬೇಕು. ಕೃಷಿಯನ್ನೂ ಆಧುನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸುವ ಮೂಲಕ ಯುವಜನತೆ ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಅಧ್ಯಕ್ಷ ಸುನೀಲ್ ಎಂ.ಎಲ್. ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುನ್ನಳ್ಳಿ, ಜೆಸಿಐ ಪದಾಧಿಕಾರಿಗಳು, ಕೃಷಿ ಪರಿಕರಗಳ ಮಾರಾಟಗಾರರ ಅಧ್ಯಕ್ಷ ನಾಗೇಶ್ ನಾಯ್ಕ್, ದೇಸಿ ಸಂಯೋಜಕ ರಾಮಚಂದ್ರಪ್ಪ, ಮುಖ್ಯ ಅತಿಥಿ ಪುರ್ಣೆಶ್, ತರಬೇತುದಾರ ನಂಜೇಶ್, ದೇಸಿ ತರಬೇತಿದಾರರು, ರೈತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ವರದಿ: ಪ್ರದೀಪ್ ಹೆಚ್ ಈ. ತರೀಕೆರೆ
    user_ಪ್ರದೀಪ್ ಹೆಚ್ ಈ. ತರೀಕೆರೆ
    ಪ್ರದೀಪ್ ಹೆಚ್ ಈ. ತರೀಕೆರೆ
    ತರೀಕೆರೆ, ಚಿಕ್ಕಮಗಳೂರು, ಕರ್ನಾಟಕ•
    1 hr ago
  • ಹುಳಿಯಾರು ಪಟ್ಟಣ ಪಂಚಾಯಿತಿಯ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಕೆರೆ ಸೂರಗೊಂಡನಹಳ್ಳಿ ಸರ್ವೆ ನಂಬರ್ 32 ರ ಹೊಸಹಳ್ಳಿ ಕೈಮರದ ಬಳಿ ಐದು ಎಕರೆ ಜಾಗ ಮಂಜೂರು
    1
    ಹುಳಿಯಾರು ಪಟ್ಟಣ ಪಂಚಾಯಿತಿಯ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಕೆರೆ ಸೂರಗೊಂಡನಹಳ್ಳಿ ಸರ್ವೆ ನಂಬರ್ 32 ರ ಹೊಸಹಳ್ಳಿ ಕೈಮರದ ಬಳಿ ಐದು ಎಕರೆ ಜಾಗ ಮಂಜೂರು
    user_Huliyarkiran
    Huliyarkiran
    ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
    2 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.