Shuru
Apke Nagar Ki App…
ಸೋಮಲಾಪುರದ ಬಸವೇಶ್ವರ ಜಾತ್ರೆಯಲ್ಲಿ ; 2026 ನೇ ಸಾಲಿನ ಬಸವಸಿರಿ ಪ್ರಶಸ್ತಿ ಪ್ರಧಾನ ಪಾರ್ಶ್ವವಾಯು (ಲಕ್ವ) ರೋಗನಿವಾರಣಿಯ ಧನ್ವಂತರಿ ಸುಕ್ಷೇತ್ರ ಸೋಮಲಾಪುರ ಬಸವೇಶ್ವರ ಜಾತ್ರೆಯಲ್ಲಿ ಶ್ರೀ ಬಸವರಾಜ ಉಮಾರಾಣಿ ರವರಿಗೆ ಶ್ರೀ ಡಾ ಅಭಿನವ ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಸೋಮಲಾಪುರದ ಶ್ರೀ ಬಸವೇಶ್ವರ ಜಾತ್ರಾ ಸಮಿತಿಯ ವತಿಯಿಂದ ಬಸವ ಸಿರಿ ಪ್ರಶಸ್ತಿ ನೀಡಿ ಗೌರವಿಸಿದರು.
ಶರಣಗೌಡ ಕಂದಕೂರ
ಸೋಮಲಾಪುರದ ಬಸವೇಶ್ವರ ಜಾತ್ರೆಯಲ್ಲಿ ; 2026 ನೇ ಸಾಲಿನ ಬಸವಸಿರಿ ಪ್ರಶಸ್ತಿ ಪ್ರಧಾನ ಪಾರ್ಶ್ವವಾಯು (ಲಕ್ವ) ರೋಗನಿವಾರಣಿಯ ಧನ್ವಂತರಿ ಸುಕ್ಷೇತ್ರ ಸೋಮಲಾಪುರ ಬಸವೇಶ್ವರ ಜಾತ್ರೆಯಲ್ಲಿ ಶ್ರೀ ಬಸವರಾಜ ಉಮಾರಾಣಿ ರವರಿಗೆ ಶ್ರೀ ಡಾ ಅಭಿನವ ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಸೋಮಲಾಪುರದ ಶ್ರೀ ಬಸವೇಶ್ವರ ಜಾತ್ರಾ ಸಮಿತಿಯ ವತಿಯಿಂದ ಬಸವ ಸಿರಿ ಪ್ರಶಸ್ತಿ ನೀಡಿ ಗೌರವಿಸಿದರು.
More news from ಕರ್ನಾಟಕ and nearby areas
- ಸೋಮಲಾಪುರದ ಬಸವೇಶ್ವರ ಜಾತ್ರೆಯಲ್ಲಿ ; 2026 ನೇ ಸಾಲಿನ ಬಸವಸಿರಿ ಪ್ರಶಸ್ತಿ ಪ್ರಧಾನ ಪಾರ್ಶ್ವವಾಯು (ಲಕ್ವ) ರೋಗನಿವಾರಣಿಯ ಧನ್ವಂತರಿ ಸುಕ್ಷೇತ್ರ ಸೋಮಲಾಪುರ ಬಸವೇಶ್ವರ ಜಾತ್ರೆಯಲ್ಲಿ ಶ್ರೀ ಬಸವರಾಜ ಉಮಾರಾಣಿ ರವರಿಗೆ ಶ್ರೀ ಡಾ ಅಭಿನವ ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಸೋಮಲಾಪುರದ ಶ್ರೀ ಬಸವೇಶ್ವರ ಜಾತ್ರಾ ಸಮಿತಿಯ ವತಿಯಿಂದ ಬಸವ ಸಿರಿ ಪ್ರಶಸ್ತಿ ನೀಡಿ ಗೌರವಿಸಿದರು.2
- ಅಶೋಕ್‌ಗೆ ವಿಪಕ್ಷ ನಾಯಕ ಆಗ್ತೀಯಾ ಎಂದು ಹೇಳಿದ್ದೇ ನಾನು ಎಂದ ರಾಯರೆಡ್ಡಿ ಅಶೋಕ್ ಅವರೇ, ನೀವು ವಿಪಕ್ಷ ನಾಯಕರಾಗುತ್ತೀರಾ ಎಂದು ಹೇಳಿದ್ದೇ ನಾನು’ ಎಂದು ಸಚಿವ ಶಿವರಾಜ ತಂಗಡಗಿ ಅವರ ಸಮ್ಮುಖದಲ್ಲಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ರಾಜ್ಯ ರಾಜಕಾರಣದಲ್ಲಿ ವಿಪಕ್ಷ ನಾಯಕನ ಆಯ್ಕೆ ಕುರಿತು ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ರಾಯರೆಡ್ಡಿ ಅವರ ಈ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ. ಯಲಬುರ್ಗಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಅಶೋಕ್ ಅವರೊಂದಿಗೆ ನಡೆದ ಹಿಂದಿನ ಮಾತುಕತೆಯನ್ನು ಪ್ರಸ್ತಾಪಿಸಿ ಈ ಹೇಳಿಕೆ ನೀಡಿದರು. ವಿಪಕ್ಷ ನಾಯಕ ಸ್ಥಾನಕ್ಕೆ ಸಂಬಂಧಿಸಿದಂತೆ ಪಕ್ಷದೊಳಗೆ ನಡೆಯುತ್ತಿರುವ ಬೆಳವಣಿಗೆಗಳ ನಡುವೆಯೇ ರಾಯರೆಡ್ಡಿ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.1
- ಬೆಂಗಳೂರ ಪ್ರೀಡಮ್ ಪ್ರಾರ್ಕನಲ್ಲಿ ಕನಿಷ್ಠ ವೇತನ ಮರುಪರಿಶೀಲನೆ ರಾಜ್ಯ ಮಟ್ಟದ ಆಹೋರಾತ್ರಿ ಪ್ರತಿಬಟನಾ ದರಣಿ1
- ಶಾಲೆಯ ಮೇಲ್ಛಾವಣಿ ಕುಸಿತ: ಐವರು ವಿದ್ಯಾರ್ಥಿಗಳಿಗೆ ಗಾಯ, ಕೂಡಲೇ ಶಾಲಾ ಕಟ್ಟಡ ದುರಸ್ತಿಗೆ ಆಡಳಿತ ಮಂಡಳಿಗೆ ಸೂಚನೆ: ಸಿಇಓ ಗಜಾನನ ಬಾಲೆ1
- ಬಳ್ಳಾರಿ ಚಲೋ — ಜನರಿಗಾಗಿ, ನ್ಯಾಯಕ್ಕಾಗಿ, ಕರ್ನಾಟಕಕ್ಕಾಗಿ! ಬಳ್ಳಾರಿ ಚಲೋ — ಜನರಿಗಾಗಿ, ನ್ಯಾಯಕ್ಕಾಗಿ, ಕರ್ನಾಟಕಕ್ಕಾಗಿ! ಇಂದು ಬಳ್ಳಾರಿ ಚಲೋ ಯಾತ್ರೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ಬಿ.ವೈ. ವಿಜಯೇಂದ್ರ ಜಿ, ಶ್ರೀ ಎನ್. ರವಿಕುಮಾರ್ ಜಿ, ಶ್ರೀ ಸಿ.ಟಿ. ರವಿ ಜಿ, ಶ್ರೀ ಶ್ರೀರಾಮುಲು ಜಿ ಸೇರಿದಂತೆ ಅನೇಕ ಹಿರಿಯ ನಾಯಕರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಭಾಗವಹಿಸಿ, ಕಾಂಗ್ರೆಸ್ ಸರ್ಕಾರದ ವಿರುದ್ಧದ ಜನಾಂದೋಲನಕ್ಕೆ ಧ್ವನಿಗೂಡಿಸಿದೆ. ಕರ್ನಾಟಕದ ರೈತರು, ಮಹಿಳೆಯರು, ದಲಿತರು, ಯುವಕರು ಹಾಗೂ ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಕಾಂಗ್ರೆಸ್ ಸರ್ಕಾರ ಇಂದು ಆಡಳಿತ ನಡೆಸುವುದಕ್ಕಿಂತ ಭ್ರಷ್ಟಾಚಾರ ಮತ್ತು ಲೂಟಿಯಲ್ಲಿ ತೊಡಗಿದೆ ಎಂಬುದು ರಾಜ್ಯದ ಜನರ ಆರೋಪವಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ, ರೈತರ ಸಮಸ್ಯೆಗಳ ನಿರ್ಲಕ್ಷ್ಯ, ಮಹಿಳಾ ವಿರೋಧಿ ನೀತಿಗಳು, ದಲಿತ ವಿರೋಧಿ ನಡೆ, ಯುವಕರಿಗೆ ಉದ್ಯೋಗದ ಕೊರತೆ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿನ ವೈಫಲ್ಯ—ಇವೆಲ್ಲವೂ ಕಾಂಗ್ರೆಸ್ ಸರ್ಕಾರದ ಆಡಳಿತದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿವೆ. ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ, ಮಳೆಯ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ರೈತರ ಕಣ್ಣೀರನ್ನು ಒರೆಸಬೇಕಾದ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ. ಇದು ಕೇವಲ ಒಂದು ಯಾತ್ರೆಯಲ್ಲ; ಇದು ರೈತರ ಧ್ವನಿ, ಯುವಕರ ಧ್ವನಿ, ಮಹಿಳೆಯರ ಧ್ವನಿ, ದಲಿತರ ಧ್ವನಿ ಮತ್ತು ಕರ್ನಾಟಕದ ಸಾಮಾನ್ಯ ಜನರ ಧ್ವನಿ! ಜನವಿರೋಧಿ, ರೈತವಿರೋಧಿ ಮತ್ತು ಭ್ರಷ್ಟಾಚಾರದ ಆರೋಪಗಳಿಂದ ಕೂಡಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿರಂತರ. ಬಳ್ಳಾರಿ ಚಲೋ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಸ್ಪಷ್ಟ ಸಂದೇಶ — ಜನರ ಹಕ್ಕುಗಳಿಗಾಗಿ, ಕರ್ನಾಟಕದ ಅಭಿವೃದ್ಧಿಗಾಗಿ ಮತ್ತು ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಹೋರಾಟ ಸದಾ ಮುಂದುವರಿಯಲಿದೆ! ಬಳ್ಳಾರಿ ಚಲೋ — ಜನರಿಗಾಗಿ, ನ್ಯಾಯಕ್ಕಾಗಿ, ಕರ್ನಾಟಕಕ್ಕಾಗಿ!1
- “ಪರಿಹಾರ ಸಿಕ್ಕರೆ ಸಚಿವರ ಮನೆಯ ತೊಲೆಬಾಗಿಲಿಗೆ ಬಂದು ಸಾಷ್ಟಾಂಗ ನಮಸ್ಕಾರ ಹಾಕುವೆ” — ಸಂತ್ರಸ್ತ ವೃದ್ಧನ ಮಾತು! “ಪರಿಹಾರ ಸಿಕ್ಕರೆ ಸಚಿವರ ಮನೆಯ ತೊಲೆಬಾಗಿಲಿಗೆ ಬಂದು ಸಾಷ್ಟಾಂಗ ನಮಸ್ಕಾರ ಹಾಕುವೆ” — ಸಂತ್ರಸ್ತ ವೃದ್ಧನ ಮಾತು! ಬಾಗಲಕೋಟೆ: ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದಲ್ಲಿ ಹಿನ್ನೀರು ಮತ್ತು ಪ್ರವಾಹ ಸಂತ್ರಸ್ತರು ನಡೆಸುತ್ತಿರುವ ಹೋರಾಟದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ್ ಭೇಟಿ ನೀಡಿದ ವೇಳೆ ಭಾವುಕ ಘಟನೆ ನಡೆಯಿತು. ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ, ವಸತಿ ಮತ್ತು ಪುನರ್ನಿರ್ಮಾಣ ಇಲಾಖೆಯ ಕಚೇರಿಗಳಿಗೆ ಅಲೆದಾಡಿ ಸುಸ್ತಾಗಿರುವುದಾಗಿ ವೃದ್ಧ ಸಂತ್ರಸ್ತ ಸಚಿವರ ಮುಂದೆ ಅಳಲು ತೋಡಿಕೊಂಡರು. “ಪ್ರತಿದಿನ ಹಣ ಖರ್ಚು ಮಾಡಿಕೊಂಡು ಬಾಗಲಕೋಟೆ ಕಚೇರಿಗೆ ಅಲೆದಾಡಬೇಕು. ನಮಗೆ ಸೂಕ್ತ ಪರಿಹಾರ ಕಲ್ಪಿಸಿಕೊಡಿ. ಅಧಿಕಾರಿಗಳಿಗೆ ನಮ್ಮ ಮುಂದೆಯೇ ಸೂಚನೆ ನೀಡಿ” ಎಂದು ಮನವಿ ಮಾಡಿದರು. ವೃದ್ಧನ ಅಳಲು ಆಲಿಸಿದ ಸಚಿವ ವಿಜಯಾನಂದ ಕಾಶಪ್ಪನವರ್, “ನೀವು ಇನ್ನು ಮುಂದೆ ಅಲೆದಾಡುವುದು ಬೇಕಾಗಿಲ್ಲ. ಅಧಿಕಾರಿಗಳೇ ಇಲ್ಲಿಗೆ ಬಂದು ಪರಿಹಾರ ಕಲ್ಪಿಸುತ್ತಾರೆ” ಎಂದು ಭರವಸೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ವೃದ್ಧ ಸಂತ್ರಸ್ತ, “ಆಗ ಹಾಗೇನಾದರೂ ಆದರೆ, ನಿನ್ನ ಮನೆಯ ತೊಲೆಬಾಗಿಲಿಗೆ ಬಂದು ಸಾಷ್ಟಾಂಗ ನಮಸ್ಕಾರ ಹಾಕುವೆ” ಎಂದು ಸಚಿವರಿಗೆ ಭಾವುಕವಾಗಿ ಹೇಳಿದರು. “ಇಲ್ಲವಾದರೆ ಮುಂದೆ ಅಧಿಕಾರಿಗಳನ್ನು ಪ್ರಶ್ನಿಸುತ್ತೇನೆ” ಎಂದು ಹೇಳಿ ವೃದ್ಧ ಸಂತ್ರಸ್ತ ಸುಮ್ಮನಾದರು. ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದಲ್ಲಿ ನಡೆದ ಈ ಘಟನೆ ಇದೀಗ ಗಮನ ಸೆಳೆದಿದೆ.1
- ಹಿಂದುಳಿದ ವರ್ಗಗಳ ಇಲಾಖೆ ಕಚೇರಿಯಲ್ಲಿ ತಡರಾತ್ರಿ 11 ಗಂಟೆಗೆ ರಹಸ್ಯ ಚಟುವಟಿಕೆ! ಬಾಗಲಕೋಟೆ ಜಿಲ್ಲೆಯ ಹಿಂದುಳಿದ ವರ್ಗಗಳ ಇಲಾಖೆ ತಾಲೂಕು ಕಚೇರಿಯಲ್ಲಿ ನಡೆದಿದೆ ಎನ್ನಲಾದ ಅನುಮಾನಾಸ್ಪದ ಹಾಗೂ ಬೇಜವಾಬ್ದಾರಿತನದ ಘಟನೆಯ ಸಂಪೂರ್ಣ ವಿವರ ಇಲ್ಲಿದೆ. ಹಗಲು ಹೊತ್ತು ಸಾರ್ವಜನಿಕರನ್ನು ಸತಾಯಿಸುವ ಸರ್ಕಾರಿ ಕಚೇರಿಗಳು ರಾತ್ರಿ ವೇಳೆಯಲ್ಲಿ ಯಾರ ಕಂಟ್ರೋಲ್‌ನಲ್ಲಿರುತ್ತವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ರಾತ್ರಿ 11 ಗಂಟೆಯಾದರೂ ಕಚೇರಿಯ ದೀಪಗಳು ಆರಿಲ್ಲ. ಆದರೆ ಒಳಗೆ ಕೆಲಸ ಮಾಡುತ್ತಿರುವುದು ಸರ್ಕಾರಿ ನೌಕರರಲ್ಲ, ಬದಲಿಗೆ ಕಂಪ್ಯೂಟರ್ ಆಪರೇಟರ್ ಕೋಲಕರ್ ಅವರು ಹೊರಗುತ್ತಿಗೆ ವ್ಯಕ್ತಿಯೊಬ್ಬನ ಕೈಗೆ ಕಚೇರಿಯ ಕೀ ನೀಡಿ ರಹಸ್ಯವಾಗಿ ಕೆಲಸ ಮಾಡಿಸುತ್ತಿದ್ದಾರೆ. ವಿದ್ಯಾರ್ಥಿಗಳ ದಾಖಲೆಗಳು ಹಾಗೂ ಗೌಪ್ಯ ದತ್ತಾಂಶಗಳು ಇರುವ ಇಲಾಖೆಯಲ್ಲಿ ಈ ರೀತಿಯ ಅತಿರೇಕದ ವರ್ತನೆ ನಡೆಯುತ್ತಿದ್ದರೂ, ಜವಾಬ್ದಾರಿಯುತ ತಾಲೂಕು ಅಧಿಕಾರಿ ಬಡಿಗೇರ ಅವರು ಸಾರ್ವಜನಿಕರ ಮತ್ತು ಮಾಧ್ಯಮದವರ ಕರೆಗಳನ್ನು ಸ್ವೀಕರಿಸದೆ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸರ್ಕಾರಿ ಕಚೇರಿಯನ್ನು ರಾತ್ರಿ ಅಡ್ಡೆಯಂತೆ ಬಳಸಿಕೊಳ್ಳುತ್ತಿರುವವರ ವಿರುದ್ಧ ಹಾಗೂ ಕರ್ತವ್ಯ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಈ ವಿಡಿಯೋ ಮೂಲಕ ಒತ್ತಾಯಿಸಲಾಗಿದೆ.1
- ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿದ ಶ್ರೀ ಬಸವೇಶ್ವರ ರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿದ ಶ್ರೀ ಬಸವೇಶ್ವರ ರಥೋತ್ಸವ ಬಾಗಲಕೋಟೆ ಜಿಲ್ಲೆಯ ಇಳ್ಕಲ್ ತಾಲೂಕಿನ ಪಾಶ್ವ೯ ವಾಯು ನಿವಾರಣೆಯ ಧನ್ವಂತರಿ ಸುಕ್ಷೇತ್ರ ಸೋಮಲಾಪುರ ಗ್ರಾಮದ ಶ್ರೀ ಬಸವೇಶ್ವರ ದೇವರ ಜಾತ್ರಾ ಮಹೋತ್ಸವದ ದಿನ ಅಪಾರ ಭಕ್ತರ ಸಮ್ಮುಖದಲ್ಲಿ ರಥೋತ್ಸವ ಜರುಗಿತು.4