Shuru
Apke Nagar Ki App…
ಹೊಸಪೇಟೆ ಹತ್ತಿರ ಕಮಲಾಪುರ ಬಳಿ ಇರುವ ಹಂಪಿಯಲ್ಲಿ ರಾತ್ರಿ ಲೇಟಿನ ತೊಂದರೆ ಇದೆ ಪ್ಲೀಸ್ ಸರಿ ಮಾಡಿ
Mohammed yusuf
ಹೊಸಪೇಟೆ ಹತ್ತಿರ ಕಮಲಾಪುರ ಬಳಿ ಇರುವ ಹಂಪಿಯಲ್ಲಿ ರಾತ್ರಿ ಲೇಟಿನ ತೊಂದರೆ ಇದೆ ಪ್ಲೀಸ್ ಸರಿ ಮಾಡಿ
More news from ಕರ್ನಾಟಕ and nearby areas
- ಹೊಸಪೇಟೆ ಹತ್ತಿರ ಕಮಲಾಪುರ ಬಳಿ ಇರುವ ಹಂಪಿಯಲ್ಲಿ ರಾತ್ರಿ ಲೇಟಿನ ತೊಂದರೆ ಇದೆ ಪ್ಲೀಸ್ ಸರಿ ಮಾಡಿ1
- ಕುಷ್ಟಗಿ PWD ನೌಕರ ಮುಜೀಬ್ ಅಹ್ಮದ್ ಅವರು ಗುರುವಾರ ಅಕಾಲಿಕ ನಿಧನರಾಗಿದ್ದಾರೆ. ಕುಷ್ಟಗಿ ನಗರದ ನಿವಾಸಿ ಹಾಗೂ PWD ಇಲಾಖೆಯ ನೌಕರರಾದ ಮುಜೀಬ್ ಅಹ್ಮದ್ ಅವರು ಗುರುವಾರ ಅಕಾಲಿಕವಾಗಿ ನಿಧನ ಹೊಂದಿದ್ದಾರೆ. ಮೃತರು ಜಮಾಅತೆ ಇಸ್ಲಾಮೀ ಹಿಂದ್‌ನ ವಿವಿಧ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಹಿಂದೆ ಕುಷ್ಟಗಿ ನಗರದಲ್ಲಿ ಬುಕ್‌ಸ್ಟಾಲ್ ನಡೆಸುತ್ತಿದ್ದ ಅವರು ಕ್ರೀಡಾಪ್ರೇಮಿಯಾಗಿಯೂ ಗುರುತಿಸಿಕೊಂಡಿದ್ದರು. ಮೃತರ ಅಂತ್ಯಕ್ರಿಯೆಯನ್ನು ಗುರುವಾರ ವಣಗೇರಿ ರಸ್ತೆಯಲ್ಲಿರುವ ಖಬರಸ್ತಾನ್‌ನಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗ ಹಾಗೂ ಸ್ನೇಹಿತರನ್ನು ಅಗಲಿದ್ದಾರೆ. ಮೃತರ ಅಗಲಿಕೆಗೆ ಸಂತಾಪ ಸೂಚಿಸುವುದರೊಂದಿಗೆ, ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಸ್ನೇಹಿತರು ತಿಳಿಸಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗ ಹಾಗೂ ಸ್ನೇಹಿತರನ್ನು ಅಗಲಿದ್ದಾರೆ. ಮೃತರ ಅಗಲಿಕೆಗೆ ಸಂತಾಪ ಸೂಚಿಸುವುದರೊಂದಿಗೆ, ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಸ್ನೇಹಿತರು ತಿಳಿಸಿದ್ದಾರೆ. ನಮ್ಮ ಆತ್ಮೀಯ ಸ್ನೇಹಿತರಾಗಿದ್ದ ಕುಷ್ಟಗಿ ನಗರದ ಮುಜೀಬ್ ಅಹ್ಮದ್ ಅವರು ಇಂದು ಗುರುವಾರದಂದು ಅಕಾಲೀಕವಾಗಿ ಮರಣ ಹೊಂದಿರುತ್ತಾರೆ. ಮೃತರು PWD ಇಲಾಖೆಯ ನೌಕರರಾಗಿದ್ದು, ಜಮಾಅತೆ ಇಸ್ಲಾಮೀ ಹಿಂದ್ ನ ಎಲ್ಲಾ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವವರಾಗಿದ್ದರು. ಹಿಂದೆ ಕುಷ್ಟಗಿ ನಗರದಲ್ಲಿ ಬುಕ್ ಸ್ಟಾಲ್ ತೆರೆದಿದ್ದ ಇವರು ಕ್ರೀಡಾ ಪ್ರೇಮಿಯಾಗಿದ್ದರು. ಇಂದು ಮೃತರ ಅಂತ್ಯಕ್ರಿಯೆಯೂ ವಣಗೇರ ರಸ್ತೆಯಲ್ಲಿರುವ ಖಬರಸ್ತಾನ್ ನಲ್ಲಿ ದಫನ್ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರಿಗೆ ಹೆಂಡತಿ ಹಾಗೂ ಒಂದು ಗಂಡು ಒಂದು ಹೆಣ್ಣು ಮಗುವಿದ್ದು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬದವರಿಗೆ ಸಾವಿನ ದುಃಖವನ್ನು ಮರೆಯುವ ಶಕ್ತಿ ಕೊಡಲಿ....2
- ಕೊರಚರಹಟ್ಟಿಯಲ್ಲಿ ಶ್ರೀ ನೂಲಿ ಚಂದಯ್ಯ ಅವರ ಜಯಂತಿ ಅದ್ದೂರಿ ಆಚರಣೆ ಕೂಡ್ಲಿಗಿ: ತಾಲೂಕಿನ ಕೊರಚರಹಟ್ಟಿ ಗ್ರಾಮದಲ್ಲಿ ನೂಲಿ ಚಂದಯ್ಯ ಜಯಂತಿಯನ್ನು ಶುಕ್ರವಾರ ಅದ್ದೂರಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಜಯಂತಿ ಉತ್ಸವದ ಪ್ರಯುಕ್ತ ವಿವಿಧ ವಾದ್ಯ ಮೇಳಗಳೊಂದಿಗೆ ನಂದಿಕೋಲು ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಗ್ರಾಮದ ಪ್ರಮುಖ ಬೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ಉತ್ಸವದ ಸಂಭ್ರಮ ಮತ್ತಷ್ಟು ಕಳೆಗಟ್ಟಿತ್ತು. ವಾದ್ಯ ಮೇಳಗಳ ನಾದಕ್ಕೆ ನಂದಿಕೋಲು ಕುಣಿತ ಪ್ರದರ್ಶನ ಜನರ ಗಮನ ಸೆಳೆಯಿತು. ಗ್ರಾಮಸ್ಥರು ಹಾಗೂ ಸಮುದಾಯದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನೂಲಿ ಚಂದಯ್ಯ ಅವರ ಜಯಂತಿಯನ್ನು ಸಂಭ್ರಮದಿಂದ ಆಚರಿಸಿದರು.1
- ಶಾಸಕ ರೇವಣ್ಣ ವಿರುದ್ಧ ಕೂಡ್ಲಿಗಿ ತಾಲೂಕಿನ ವಾಲ್ಮೀಕಿ ಸಂಘಟನೆ ವತಿಯಿಂದ ಪ್ರತಿಭಟನೆ ಶಾಸಕ ರೇವಣ್ಣ ವಿರುದ್ಧ ಕೂಡ್ಲಿಗಿ ತಾಲೂಕಿನ ವಾಲ್ಮೀಕಿ ಸಂಘಟನೆ ವತಿಯಿಂದ ಪ್ರತಿಭಟನೆ *ಕೂಡ್ಲಿಗಿ*: ದಲಿತ ಮಹಿಳೆ ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅವರ ಕುರಿತು ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್.ಡಿ. ರೇವಣ್ಣ ಅವರು ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ, ಕೂಡ್ಲಿಗಿ ತಾಲ್ಲೂಕಿನ ಮಹರ್ಷಿ ವಾಲ್ಮೀಕಿ ನಾಯಕ ಸಮುದಾಯದ ಮುಖಂಡರು ಹಾಗೂ ವಿವಿಧ ನಾಯಕ ಸಂಘಟನೆಗಳ ಸಹಯೋಗದಲ್ಲಿ ಶುಕ್ರವಾರ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು. ಪಟ್ಟಣದ ಪ್ರವಾಸಿ ಮಂದಿರದಿಂದ ಡಾ. ಬಿ. ಆರ್. ಅಂಬೇಡ್ಕರ್ ಸರ್ಕಲ್, ಮದಕರಿ ನಾಯಕ ವೃತ್ತದಿಂದ ಸಾಗಿದ ಪ್ರತಿಭಟನಾಕಾರರು ಮೆರವಣಿಗೆ ಮುಖಾಂತರ ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ನೀಡಿದರು. ಮಹಿಳಾ ಅಧಿಕಾರಿಯ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ ಕೂಡಲೇ ಶಾಸಕ ರೇವಣ್ಣ ರಾಜೀನಾಮೆ ನೀಡಬೇಕು, ಜಿಲ್ಲಾಧಿಕಾರಿ ಲತಾಕುಮಾರಿ ಅವರಿಗೆ ಕ್ಷಮೆ ಕೇಳಬೇಕು, ಮುಂದಿನ ದಿನಗಳಲ್ಲಿ ನಮ್ಮ ನಾಯಕ ಜನಾಂಗಷತಕ್ಕ ಪಾಠ ಕಲಿಸಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಾರ್ವಜನಿಕ ಜೀವನದಲ್ಲಿರುವ ಜನಪ್ರತಿನಿಧಿಗಳು ಮಹಿಳೆಯರು ಹಾಗೂ ಅಧಿಕಾರಿಗಳ ಬಗ್ಗೆ ಗೌರವಯುತವಾಗಿ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಅವಹೇಳನಕಾರಿ ಹೇಳಿಕೆ ನೀಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಕೂಡ್ಲಿಗಿ ತಾಲೂಕಿನ ಮಹರ್ಷಿ ವಾಲ್ಮೀಕಿ ನಾಯಕ ಸಮುದಾಯದ ನಿವೃತ್ತ ಇಒ ಜಿ. ಬಸಣ್ಣ, ತಳವಾರ್ ಶರಣಪ್ಪ, ಜಿಂಕಲ್ ನಾಗಮಣಿ, ಗುನ್ನಳ್ಳಿ ರಾಘವೇಂದ್ರ, ಕಾವಲಿ ಶಿವಪ್ಪನಾಯಕ, ವಾಲ್ಮೀಕಿ ಸಂಘದ ಅದ್ಯಕ್ಷ ಸುರೇಶ್, ಜಯರಾಮ್ ನಾಯಕ್, ಹುಡೇಂ ಪಾಪನಾಯಕ, ಅಶೋಕ್,ಕಾಟೇರ್ ಹಾಲೇಶ್, ರೖತಸಂಘದ ಮಹೇಶಪ್ಪ, ವಕೀಲ ಓಂಕಾರಪ್ಪ, ಮಹದೇವಪುರ ಓಬಯ್ಯ, ನಿವೃತ್ತ ಪ್ರಾಂಶುಪಾಲೆ ಕೋತ್ಲಮ್ಮ,ಹಾಲಸಾಗರ ಮಂಜಣ್ಣ, ಅಜಯ್, ಪಾಪಯ್ಯ, ಸಣ್ಣೊಬಯ್ಯ,ಗುಂಡುಮುಣಗು ಮಂಜಣ್ಣ, ಡಾ. ಸಿದ್ದೇಶ್, ಚಿರತಗುಂಡು ದಡ್ಡಯ್ಯ, ಗೋವಿಂದ ರೆಡ್ಡಿ, ರಾಮಸಾಗರ ರಾಜಶೇಖರ್, ಸೇರಿದಂತೆ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.1
- ಭಾವೈಕ್ಯತೆಯ ರಕ್ಷಾಬಂಧನ: ಮುಸ್ಲಿಂ ಸಹೋದರರಿಗೆ ರಾಖಿ ಕಟ್ಟಿದ ಹಿಂದೂ ಸಹೋದರಿಯರು ಇಳಕಲ್: ಭಾವೈಕ್ಯತೆ ಮತ್ತು ಸೌಹಾರ್ದತೆಗೆ ಸಾಕ್ಷಿಯೆಂಬಂತೆ, ನಗರದಲ್ಲಿ ಹಿಂದೂ ಮಹಿಳೆಯರು ಮುಸ್ಲಿಂ ಸಹೋದರರಿಗೆ ರಾಖಿ ಕಟ್ಟುವ ಮೂಲಕ ರಕ್ಷಾಬಂಧನ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ನಗರದ ವಾರ್ಡ್ ನಂ. ೬ ರ ಗುಗ್ಗರಿಪೇಟೆಯ ಶ್ರೀ ಬಹೋತ್ತಮ ಪದ್ಮಶಾಲಿ ಸಂಘದ ಮಹಿಳೆಯರು ತಮ್ಮ ವಾರ್ಡಿನ ಮುಸ್ಲಿಂ ಬಾಂಧವರಿಗೆ ಸಾಮೂಹಿಕವಾಗಿ ರಾಖಿ ಕಟ್ಟಿ, ಆರತಿ ಬೆಳಗಿ ಶುಭ ಹಾರೈಸಿದರು. ಜಾತಿ-ಮತ ಭೇದ ಮರೆತು ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಸೋದರತ್ವವನ್ನು ಸಾರಿದ ಈ ಕಾರ್ಯಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.2
- ಇಳಕಲ್ ನಗರದಲ್ಲಿ ಭಾವೈಕ್ಯತೆಗೆ ಸಾಕ್ಷಿಯಾದ ರಕ್ಷಾ ಬಂಧನ ಕಾಯ೯ಕ್ರಮ ಭಾವೈಕ್ಯತೆಗೆ ಸಾಕ್ಷಿಯಾದ ರಕ್ಷಾ ಬಂಧನ ಇಳಕಲ್ ; ಇಳಕಲ್ ನಗರದ ಗುಗುರುಪೇಟೆಯ ಶ್ರೀ ಮಹೋತ್ತಮ ಪದ್ಮಶಾಲಿ ಸಂಘದ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ವಿಶೇಷತೆ ಏನೆಂದರೆ ಮುಸ್ಲಿಂ ಸಹೋದರರಿಗೆ ಇಂದು ಸಹೋದರಿಯರು ರಕ್ಷಾಬಂಧನ ಕಟ್ಟುವ ಮೂಲಕ ಭಾವೈಕ್ಯತೆ ಮೆರೆದರು. ಈ ಭಾವೈಕ್ಯತೆಯ ಕಾರ್ಯಕ್ರಮಕ್ಕೆ ಗುಗ್ಗರಿಪೇಟೆಯ ಗುರು ಹಿರಿಯರು ಯುವ ಮಿತ್ರರು ಸಾಕ್ಷಿಯಾದರು.2
- ತಪ್ಪು ಮಾಡಿದನ್ನ ಕೇಳಿ ದಂಡ ಹಾಕಿದರು. ಅದೇ ಇಲಾಖಾ ಸಿಬ್ಬಂದಿ ಬಾಡಿ ಕ್ಯಾಮ್ ಹಾಕದೆ ಇರೋದ್ನ ಪ್ರಶ್ನೆ ಮಾಡ್ತಾವ್ರೆ ಇವರಿಗೆ ದಂಡ ಹಾಕೊವ್ರು ಶಿಕ್ಷಿಸೊವ್ರು ಇಲ್ವೆ...ಐಜಿಪಿ/ಡಿಜಿಪಿ ಸಾಹೇಬ್ರೆ..!? ಜನಸಾಮಾನ್ಯರಿಗೊಂದು ಕಾನೂನು...ಮತ್ತೊಬ್ಬರಿಗೆ ಒಂದು ಕಾನೂನಾ..!? ಅದ್ಕೆ ಹೇಳೋದು ಶೀಘ್ರವಾಗಿ ಕ್ಯಾಮರಾ ಚಾಲಿತ ಮಾಡಿ ದಂಡ ಹಾಕೋ ಕೆಲಸ ಮಾಡಿ’ಅಂತ..!1
- ಹುಬ್ಬಳ್ಳಿಯಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ; ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಹಾಡಹಗಲೇ ರಸ್ತೆಯ ಮಧ್ಯದಲ್ಲಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಸಂಚಲನ ಮೂಡಿಸಿದೆ. ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ದೇಶ್ವರ ಪಾರ್ಕ್ ಬಳಿ ಈ ಘಟನೆ ನಡೆದಿದ್ದು, ಆ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಘಟನೆಯ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸ್ಥಳಕ್ಕೆ ಭೇಟಿ ನೀಡಿ ವಿದ್ಯಾನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆಯಲಾಗಿದೆ. ಕೊಲೆಗೆ ಕಾರಣ ಮತ್ತು ಮೃತರ ಗುರುತು ಸೇರಿದಂತೆ ಘಟನೆಯ ಸಂಪೂರ್ಣ ವಿವರಗಳು ಸದ್ಯಕ್ಕೆ ಲಭ್ಯವಿಲ್ಲ. ಕೊಲೆಯ ಆರೋಪಿಗಳನ್ನು ಹುಡುಕಲು ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪೊಲೀಸ್ ತನಿಖೆಯ ನಂತರವೇ ಘಟನೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕು. ಹುಬ್ಬಳ್ಳಿಯಲ್ಲಿ ಹಾಡಹಗಲೇ ನಡೆದ ಬರ್ಬರ ಹತ್ಯೆ ಪ್ರಕರಣ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.**1