Shuru
Apke Nagar Ki App…
Manjunatha j c
More news from ಕರ್ನಾಟಕ and nearby areas
- Post by Manjunatha j c1
- ಅರಕಲಗೂಡು: ಮಹಾಪುರುಷರು ಯಾವುದೇ ಒಂದು ಸಮುದಾಯಕ್ಕೆ ಸೀಮಿತರಲ್ಲ, ಸಮಾಜದ ಅಭ್ಯದಯಕ್ಕಾಗಿಕ್ಕೆ ಶ್ರಮಿಸಿದ ಇವರ ಜಯಂತಿಯನ್ನು ಎಲ್ಲ ಸಮುದಾಯವರೂ ಒಟ್ಟಾಗಿ ಆಚರಿಸಿದಾಗ ಮಾತ್ರ ಮುಂದಿನ ಪೀಳಿಗೆಗೆ ದಾರಿದೀಪವಾಗುತ್ತದೆ ಎಂದು ಶಾಸಕ ಎ. ಮಂಜು ತಿಳಿಸಿದರು. ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಬಸವೇಶ್ವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಸವಣ್ಣ, ಬುದ್ದ, ಕುವೆಂಪು, ಅಂಬೇಡ್ಕರ್ ಅವರಂತಹ ಸಮಾಜ ಸುಧಾರಕರನ್ನು ಯಾವುದೇ ಸಮುದಾಯ, ಜಾತಿಗಳಿಗೆ ಸೀಮಿತ ಗೊಳಿಸಬಾರದು, 12 ನೇ ಶತಮಾನದಲ್ಲೆ ಜಾತ್ಯಾತೀತ ಸಮಾಜದ ಕನಸು ಕಂಡ ಬಸವಣ್ಣನವರು ಕ್ರಾಂತಿಯನ್ನೆ ಮಾಡಿದ್ದರು. ವಿದ್ಯಾಂತರಾದಂತೆ ಜಾತೀಯತೆಯೂ ಹೆಚ್ಚುತ್ತಿರುವುದು ವಿಷಾದಕರ ಸಂಗತಿ, ಬಸವಣ್ಣನವರ ಆದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಿಸಲು ಮುಂದಾಗಬೇಕಿದೆ ಎಂದರು.1
- ಶಿವಮೊಗ್ಗ: ನಮ್ಮೂರ ಬಳಗ ವತಿಯಿಂದ ಅಲ್ಲಮಪ್ರಭು ಮೈದಾನ ಫ್ರೀಡಂ ಪಾರ್ಕ್ ನಲ್ಲಿ ಶಿವಮೊಗ್ಗ ಕಿಡ್ನಿ ಆಸ್ಪತ್ರೆ ಮತ್ತು ವಾಸನ್ ಕಣ್ಣಿನ ಆಸ್ಪತ್ರೆ ಸಹ ಯೋಗದೊಂದಿಗೆ ವಿಶ್ವಗುರು ಸಾಂಸ್ಕೃತಿಕ ನಾಯಕ "ಬಸವ ಜಯಂತಿಯ" ಅಂಗವಾಗಿ ಆರೋಗ್ಯ ಹಾಗೂ ಕಣ್ಣಿನ ತಪಾಸಣಾ ಶಿಬಿರ ಹಮ್ಮಿಕೊಳ್ಳ ಲಾಗಿತ್ತು. ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ,ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಳಗದ ಸಂಚಾಲಕ ಹೆಚ್ ಪಿ ಗಿರೀಶ್, 12ನೇ ಶತಮಾನದಲ್ಲಿಯೇ ಸಮ ಸಮಾಜದ ನಿರ್ಮಾಣಕ್ಕೆ ಅನು ಭವ ಮಂಟಪದ ಮೂಲಕ ಸಂವಿಧಾನದ ಪರಿಕಲ್ಪನೆ , ಶಿಕ್ಷಣ, ದಾಸೋಹ ಸೇವೆ ಇಂದಿಗೂ ನಮಗೆಲ್ಲರಿಗೂ ಸ್ಪೂರ್ತಿದಾಯಕ ವಚನ ಬಂಡಾರದ ಮುಖಾಂತರ ವಿಶ್ವ ಗುರು ಬಸವಣ್ಣನವರು ಮೂಡಿಸಿದ ವಚನ ಕ್ರಾಂತಿಯು ಇಡೀ ಪ್ರಪಂಚಕ್ಕೆ ಅತ್ಯವಶ್ಯ ವಾಗಿದೆ ಎಂದರು. ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಿ.ವಿ.ಎಸ್ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ನಾಗರಾಜ್ ರಾವ್ ಅವರು ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಯನ್ನೇ ಮಾಡಿದ, ಮೇಲು-ಕೀಳು ಎಂಬ ಸಾಮಾಜಿಕ ಪಿಡುಗುಗಳ ನಿರ್ಮೂಲನೆಗೆ ಅವಿರತವಾಗಿ ಶ್ರಮಿಸಿದ ಕಾಯಕ ಯೋಗಿ, ಬಸವಣ್ಣನವರ ಕಾರ್ಯ ಹಾಗೂ ಆದರ್ಶಗಳು ನಮಗೆ ಸದಾ ಸ್ಪೂರ್ತಿ. ಅದರಂತೆ ನಮ್ಮೂರ ಬಳಗದಿಂದ ಬಸವೇಶ್ವರ ಜಯಂತಿ ಅಂಗವಾಗಿ ಆರೋಗ್ಯ ಶಿಬಿರ ಮಾಡುತ್ತಿರುವುದು ಶ್ಲಾಘನೀಯ ವಿಚಾರ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಮ್ಮೂರ ಬಳಗದ ಪ್ರಧಾನ ಸಂಚಾಲಕರಾದ ಕೆ ರಂಗನಾಥ್, ಗೌರವ ಸಂಚಾಲಕ ರುಗಳಾದ ನಾಗರಾಜ್ ಕಂಕಾರಿ, ಸಿ ರವಿ, ಸಂಚಾಲಕರುಗಳಾದ ಕೆ ಆರ್ ಸುರೇಶ್, ರಾಜೇಶ್ ಮಂದಾರ, ಟಿ ಗುರುಪ್ರಸಾದ್, ಆರ್ ಕಿರಣ್, ಎಂ ರಾಕೇಶ್, ಕೇಬಲ್ ಲೋಕೇಶ್, ರಾಘವೇಂದ್ರ ರಾವ್, ಸುಬ್ರಮಣಿ, ಎಸ್ ಬಸವರಾಜ್,ಮನ್ವಿಕ್ ಜೈನ್, ಎಮ್ ಸುಹಾಸ್, ಜಯಪ್ರಕಾಶ್, ಮುರಳಿ ಸಣ್ಣಕ್ಕಿ, ಕೇಶವಮೂರ್ತಿ, ಶಿ ವಿ ಯೋಗೀಶ್,ಭವಾನಿರಾವ್, ನಂದನ್, ಕೇಶವ ಸೀಗೆಹಟ್ಟಿ, ಸಂದೇಶ್ ಇತರರು ಇದ್ದರು.1
- ಮುಗ್ರೋಡಿ ಸಂಜಯನಗರ ಬಳಿ ಸುಲೋಚನರವರ ಮನೆಗೆ ವಿದ್ಯುತ್ ಸ್ಪರ್ಶದಿಂದ ಬೆಂಕಿ ತಗಲಿ ಮನೆಯ ಎಲ್ಲಾ ಸೊತ್ತುಗಳು ನಾಶವಾಗಿದ್ದು, ಅಪಾರ ನಷ್ಟವಾಗಿರುವ ಬಗ್ಗೆ ಅಧಿಕಾರಿಗಳಾದ ಮೆಸ್ಕಾಂ AEE ಶಿವಕುಮಾರ್, JE ಸುಬ್ರಹ್ಮಣ್ಯ ಹಾಗೂ ಗ್ರಾಮ ಲೆಕ್ಕಾಧಿಕಾರಿ ಧರ್ಮ ಇವರುಗಳೊಂದಿಗೆ ಭೇಟಿ ನೀಡಿ ಚರ್ಚೆ ನಡೆಸಿದರು. ಮತ್ತು ನಷ್ಟ ಉಂಟಾದ ಬಗ್ಗೆ ಗ್ರಾಮ ಲೆಕ್ಕಾಧಿಕಾರಿ, ಮೆಸ್ಕಾಂ,ಅಧಿಕಾರಿಗಳ ವರದಿಯನ್ನು ಪಡೆದು ಕೂಡಲೇ ಪರಿಹಾರವನ್ನು ಒದಗಿಸಿಕೊಡಬೇಕೆಂದು ಸೂಚಿಸಿದರು. ಈ ಪ್ರದೇಶದಲ್ಲಿ ಅನೇಕ ಎಲೆಕ್ಟ್ರಿಕ್ ಕಂಬಗಳ ವಯರ್‌ಗಳು ನೇತಾಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕರು ಇದನ್ನು ಸರಿಪಡಿಸದೇ ನಿರ್ಲಕ್ಷತನ ವಹಿಸಿದರೇ, ಇಲಾಖೆಯು ದಂಡ ತೆರಬೇಕೆಂದು ಎಚ್ಚರಿಕೆಯನ್ನು ನೀಡಿದರು. ಈ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾದ ಬಗ್ಗೆ ತನಿಖೆ ನಡೆಸಿ, ಮನೆಯವರ ಬಟ್ಟೆ ಬರೆ ಶಾಲಾ ಫೀಸ್ ಕಟ್ಟುವಂತಹ ಹಣ ಎಲ್ಲಾ ದಾಖಲೆಗಳು ಬೆಂಕಿಗೆ ಅಹುತಿಯಾಗಿದ್ದು, ಈ ಬಗ್ಗೆ ಪರಿಹಾರ ಒದಗಿಸಿಕೊಡಬೇಕೆಂದು ಇಲಾಖೆಗೆ ಸೂಚಿಸಿದರು ಇದೇ ರೀತಿ ಮಹಾಕಾಳಿಪಡ್ಪು ಜೆಪ್ಪು ಇಲ್ಲಿ ಇತ್ತೀಚೆಗೆ ಮೃತರಾಗಿದ್ದ, ವರುಣ್‌ರವರಿಗೆ ಈ ವರೆಗೆ ಪರಿಹಾರ ಒದಗಿಸಿಲ್ಲ ಎಂದು ತೀವ್ರ ಅಸಮಾದಾನ ವ್ಯಕ್ತಪಡಿಸಿದರು.ಕೂಡಲೇ ಪರಿಹಾರ ಒದಗಿಸಿಕೊಡಬೇಕೆಂದು ಸೂಚಿಸಿದರು.1
- Post by Suresh Belagere1
- ಚಿತ್ರದುರ್ಗದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಸಂಸದ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ದಾರೆ. ಪತ್ರಿಕಾಗೋಷ್ಠಿ ನಡೆಸಿದ ಸಂಸದ ಗೋವಿಂದ ಕಾರಜೋಳ ಅವರು ಮಾತನಾಡಿದ್ದು ಪ್ರಧಾನಿ ನರೇಂದ್ರ ಮೋದಿಯವರು ಮೂರು ದಿನಗಳ ಕಾಲ ಲೋಕಸಭಾ ಅಧಿವೇಶನ ಕರದಿದ್ದು ವಿಶೇಷ ಅಧಿವೇಶನವಾಗಿತ್ತು. ಮಹಿಳೆಯರ ವಿಶೇಷ ಮೀಸಲಾತಿ ಸೌಲಭ್ಯವನ್ನ ತಕ್ಷಣದಿಂದ ಜಾರಿಗೆ ಬರಲು ದೇಶದಲ್ಲಿ ಕಾನೂನು ರೂಪಿಸಲು ಕರೆದಿಧ್ದರು. 2029 ರ ನಂತರ ಎಂಬ ಬಾವನೆ ಇದ್ದು ಅದನ್ನ ತಿದ್ದುಪಡಿ ಮಾಡಿ ತರಲು ಹೊರಟಿದ್ದು ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿ ಬಿಲ್ ಅನ್ನ ಪಾಸ್ ಮಾಡಲು ಬಿಡಲಿಲ್ಲ ಎಂದು ತಿಳಿಸಿದರು1
- 🚩🚩🚩🚩3
- ಅರಕಲಗೂಡು : ರಾಮನಾಥಪುರದಿಂದ ಸಾಲಿಗ್ರಾಮ ಕ್ಕೆ ತೆರಳುವ ಮಾರ್ಗ ಮಧ್ಯೆ ಎರಡು ಕಾರುಗಳು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪೋಟೋಗ್ರಾಫರ್ ಸ್ಥಳದಲ್ಲೇ ಮೃತ. ಅರಕಲಗೂಡು ತಾಲ್ಲೂಕಿನ ಕಟ್ಟೇಪುರ ಗ್ರಾಮದ ನವೀನ (30) ಪೋಟೋಗ್ರಾಫರ್ ಮೃತ ವ್ಯಕ್ತಿ ಕುಟುಂಬಸ್ಥರ ಆಕ್ರಂದನ ಮುಗಿಲಮಟ್ಟಿದೆ. ಅರಕಲಗೂಡು ತಾಲ್ಲೂಕು ಛಾಯಾಗ್ರಾಹಕರ ಸಂಘ ಸಂತಾಪ ಸೂಚಿಸಿದೆ #caraccidents #photographer #Salegrama #Kattepura #Arkalgud1