logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಹಿರಿಯೂರು ಗಡಿಬಾಗದ ಜವಗೊಂಡನಹಳ್ಳಿ ಬಳಿ ನೂತನ ಸಚಿವ ಟಿ ರಘೂಮೂರ್ತಿ ಗೆ ಜಿಲ್ಲಾಡಳಿತದ ವತಿಯಿಂದ ಸ್ವಾಗತ ಹಿರಿಯೂರು ಗಡಿಬಾಗದ ಜವಗೊಂಡನಹಳ್ಳಿ ಬಳಿ ನೂತನ ಸಚಿವ ಟಿ ರಘೂಮೂರ್ತಿ ಗೆ ಜಿಲ್ಲಾಡಳಿತದ ವತಿಯಿಂದ ಸ್ವಾಗತ ದೊರೆತಿದೆ.‌ ಇನ್ನೂ ಸಚಿವರಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಟಿ ರಘೂಮೂರ್ತಿ ಆಗಮಿಸಿದ್ದಾರೆ. ಡಿ ಕೆ ಶಿವಕುಮಾರ್ ನೂತನ ಸಂಪುಟದಲ್ಲಿ ಸಚಿವರಾದ ಶಾಸಕ ಟಿ ರಘೂಮೂರ್ತಿ ಹಿರಿಯೂರು ನಗರಕ್ಕೆ ಆಗಮಿಸಿದ್ದು ಜಿಲ್ಲೆಯ ಶಾಸಕರ ಜೊತೆ ಬರ ವೀಕ್ಷಣೆ ನಡೆಸಿದ ಟಿ ರಘೂಮೂರ್ತಿ ಅವರಿಗೆ ಚಿತ್ರದುರ್ಗದ ಗಡಿಯ ಜವಗೊಂಡನಹಳ್ಳಿ ಬಳಿ ನೂತನ ಸಚಿವರನ್ನ ಜಿಲ್ಲಾಡಳಿತದ ವತಿಯಿಂದ ಬರಮಾಡಿಕೊಂಡಿದ್ದಾರೆ.

2 hrs ago
user_Vinay P palekar
Vinay P palekar
ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
2 hrs ago

ಹಿರಿಯೂರು ಗಡಿಬಾಗದ ಜವಗೊಂಡನಹಳ್ಳಿ ಬಳಿ ನೂತನ ಸಚಿವ ಟಿ ರಘೂಮೂರ್ತಿ ಗೆ ಜಿಲ್ಲಾಡಳಿತದ ವತಿಯಿಂದ ಸ್ವಾಗತ ಹಿರಿಯೂರು ಗಡಿಬಾಗದ ಜವಗೊಂಡನಹಳ್ಳಿ ಬಳಿ ನೂತನ ಸಚಿವ ಟಿ ರಘೂಮೂರ್ತಿ ಗೆ ಜಿಲ್ಲಾಡಳಿತದ ವತಿಯಿಂದ ಸ್ವಾಗತ ದೊರೆತಿದೆ.‌ ಇನ್ನೂ ಸಚಿವರಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಟಿ ರಘೂಮೂರ್ತಿ ಆಗಮಿಸಿದ್ದಾರೆ. ಡಿ ಕೆ ಶಿವಕುಮಾರ್ ನೂತನ ಸಂಪುಟದಲ್ಲಿ ಸಚಿವರಾದ ಶಾಸಕ ಟಿ ರಘೂಮೂರ್ತಿ ಹಿರಿಯೂರು ನಗರಕ್ಕೆ ಆಗಮಿಸಿದ್ದು ಜಿಲ್ಲೆಯ ಶಾಸಕರ ಜೊತೆ ಬರ ವೀಕ್ಷಣೆ ನಡೆಸಿದ ಟಿ ರಘೂಮೂರ್ತಿ ಅವರಿಗೆ ಚಿತ್ರದುರ್ಗದ ಗಡಿಯ ಜವಗೊಂಡನಹಳ್ಳಿ ಬಳಿ ನೂತನ ಸಚಿವರನ್ನ ಜಿಲ್ಲಾಡಳಿತದ ವತಿಯಿಂದ ಬರಮಾಡಿಕೊಂಡಿದ್ದಾರೆ.

More news from ಕರ್ನಾಟಕ and nearby areas
  • ಚಿತ್ರದುರ್ಗದ ಮುರುಘಾ ಮಠದಲ್ಲಿ 36 ನೇ ವರ್ಷದ ಎಂಟನೇ ತಿಂಗಳ ಸಾಮೋಹಿಕ ಕಲ್ಯಾಣ ಮಹೋತ್ಸವ ಚಿತ್ರದುರ್ಗದ ಮುರುಘಾ ಮಠದಲ್ಲಿ ಸಾಮೋಹಿಕ ಕಲ್ಯಾಣ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು. ಮುರುಘಾ ಮಠದಲ್ಲಿ 36ನೇ ವರ್ಷದ ಎಂಟನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ 03 ಜೋಡಿಗಳ ವಿವಾಹ ನೆರವೇರಿದ್ದು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಮುರುಘರಾಜೇಂದ್ರ ಬೃಹನ್ಮಠ ಹಾಗೂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಅವರು ಮಾತನಾಡಿದ್ದು ಮನುಷ್ಯ ಶ್ವಾಸ ಇರುವವರೆಗೂ ವಿಶ್ವಾಸ ಬಿಡಬಾರದು, ಸತಿ-ಪತಿಗಳು ಗುರು-ಶಿಷ್ಯರು ಸ್ನೇಹಿತರು ಸಂಬಂಧದಲ್ಲಿ ವಿಶ್ವಾಸವಿಟ್ಟುಕೊಂಡರೆ ಜಗತ್ತೇ ಆನಂದವಾಗಿರುತ್ತದೆ ಎಂದು ಶ್ರೀ ಜಗದ್ಗುರು ಹೇಳಿದರು. ಲಿಂ. ಮಲ್ಲಿಕಾರ್ಜುನ ಶ್ರೀಗಳು ಶ್ರೀಮಠದಲ್ಲಿ ಸಾಮೂಹಿಕ ಕಲ್ಯಾಣ ನಡೆಯಲು ಕಾರಣೀಭೂತರು. ಜಾತಕ, ಗಳಿಗೆ, ರಾಶಿ ನೋಡದೇ ಇಂದು ಮದುವೆಯಾದ ವಧು ವರರು ಹಾಗೂ ಅವರ ಕುಟುಂಬವರ್ಗದವರು ಬಸವಾದಿ ಪ್ರಮಥರ ಕರುಣೆಗೆ ಪಾತ್ರರಾಗಿದ್ದಾರೆ ಅವರೆಲ್ಲ ಅಭಿನಂದನಾರ್ಹರು. ಶ್ರೀಮಠವು ಮಹಾಲಯ ಅಮಾವಾಸ್ಯೆ ದಿನ 180 ಜೋಡಿ ಮದುವೆ ಮಾಡಿದ ಉದಾಹರಣೆಯಿದೆ ಎಂದು ತಿಳಿಸಿದರು.
    1
    ಚಿತ್ರದುರ್ಗದ ಮುರುಘಾ ಮಠದಲ್ಲಿ 36 ನೇ ವರ್ಷದ ಎಂಟನೇ ತಿಂಗಳ ಸಾಮೋಹಿಕ ಕಲ್ಯಾಣ ಮಹೋತ್ಸವ
ಚಿತ್ರದುರ್ಗದ ಮುರುಘಾ ಮಠದಲ್ಲಿ ಸಾಮೋಹಿಕ ಕಲ್ಯಾಣ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು. ಮುರುಘಾ ಮಠದಲ್ಲಿ 36ನೇ ವರ್ಷದ ಎಂಟನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ 03 ಜೋಡಿಗಳ ವಿವಾಹ ನೆರವೇರಿದ್ದು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಮುರುಘರಾಜೇಂದ್ರ ಬೃಹನ್ಮಠ ಹಾಗೂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಅವರು ಮಾತನಾಡಿದ್ದು ಮನುಷ್ಯ ಶ್ವಾಸ ಇರುವವರೆಗೂ ವಿಶ್ವಾಸ ಬಿಡಬಾರದು, ಸತಿ-ಪತಿಗಳು ಗುರು-ಶಿಷ್ಯರು ಸ್ನೇಹಿತರು ಸಂಬಂಧದಲ್ಲಿ ವಿಶ್ವಾಸವಿಟ್ಟುಕೊಂಡರೆ ಜಗತ್ತೇ ಆನಂದವಾಗಿರುತ್ತದೆ ಎಂದು ಶ್ರೀ ಜಗದ್ಗುರು ಹೇಳಿದರು.
ಲಿಂ. ಮಲ್ಲಿಕಾರ್ಜುನ ಶ್ರೀಗಳು ಶ್ರೀಮಠದಲ್ಲಿ ಸಾಮೂಹಿಕ ಕಲ್ಯಾಣ ನಡೆಯಲು ಕಾರಣೀಭೂತರು. ಜಾತಕ, ಗಳಿಗೆ, ರಾಶಿ ನೋಡದೇ ಇಂದು ಮದುವೆಯಾದ ವಧು ವರರು ಹಾಗೂ ಅವರ ಕುಟುಂಬವರ್ಗದವರು ಬಸವಾದಿ ಪ್ರಮಥರ ಕರುಣೆಗೆ ಪಾತ್ರರಾಗಿದ್ದಾರೆ ಅವರೆಲ್ಲ ಅಭಿನಂದನಾರ್ಹರು. ಶ್ರೀಮಠವು ಮಹಾಲಯ ಅಮಾವಾಸ್ಯೆ ದಿನ 180 ಜೋಡಿ ಮದುವೆ ಮಾಡಿದ ಉದಾಹರಣೆಯಿದೆ ಎಂದು ತಿಳಿಸಿದರು.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    11 min ago
  • ಚಳ್ಳಕೆರ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ಗೆಲುವು ಸಾಧಿಸಿದ ಟಿ. ರಘುಮೂರ್ತಿಗೆ ಒಲಿದ ಮಂತ್ರಿ ಸ್ಥಾನ. ಚಳ್ಳಕೆರೆ ವಿಧಾನಸಭ ಕ್ಷೇತ್ರದಲ್ಲಿ ಮೂರು ಬಾರಿ ಗೆದ್ದು ಕ್ಷೇತ್ರವನ್ನೇ ಅಭಿವೃದ್ಧಿ ಪಥದತ್ತ ಕೊಂಡೈದಿರುವ ಟಿ ರಘುಮೂರ್ತಿಗೆ ಸಚಿವ ಸ್ಥಾನದ ಭಾಗ್ಯ ದೊರೆತಿದೆ.
    1
    ಚಳ್ಳಕೆರ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ಗೆಲುವು ಸಾಧಿಸಿದ ಟಿ. ರಘುಮೂರ್ತಿಗೆ ಒಲಿದ ಮಂತ್ರಿ ಸ್ಥಾನ.
ಚಳ್ಳಕೆರೆ ವಿಧಾನಸಭ ಕ್ಷೇತ್ರದಲ್ಲಿ ಮೂರು ಬಾರಿ ಗೆದ್ದು ಕ್ಷೇತ್ರವನ್ನೇ ಅಭಿವೃದ್ಧಿ ಪಥದತ್ತ ಕೊಂಡೈದಿರುವ  ಟಿ ರಘುಮೂರ್ತಿಗೆ ಸಚಿವ ಸ್ಥಾನದ ಭಾಗ್ಯ ದೊರೆತಿದೆ.
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    11 hrs ago
  • ಕೂಡ್ಲಿಗಿ : ಸಾರ್ವಜನಿಕ ಆಸ್ಪತ್ರೆಯಲ್ಲಿಯೇ ತಾಯಿ ಮಕ್ಕಳ ಆಸ್ಪತ್ರೆ , ಅನಿರ್ಯ ಹಾಗೂ ತುರ್ತಾಗಿ ನಿರ್ಮಾಣವಾಗಬೇಕಿದೆ _ ಸಾರ್ವಜನಿಕರ ಹೋರಾಟಗಾರರ ಅಭಿಮತ *ಕೂಡ್ಲಿಗಿ : ಸಾರ್ವಜನಿಕ ಆಸ್ಪತ್ರೆಯಲ್ಲಿಯೇ ತಾಯಿ ಮಕ್ಕಳ ಆಸ್ಪತ್ರೆ , ಅನಿರ್ಯ ಹಾಗೂ ತುರ್ತಾಗಿ ನಿರ್ಮಾಣವಾಗಬೇಕಿದೆ _ ಸಾರ್ವಜನಿಕರ ಹೋರಾಟಗಾರರ ಅಭಿಮತ*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣದಲ್ಲಿನ 100ಹಾಸಿಗೆ ಆಸ್ಪತ್ರೆಯನ್ನು , 150 ಹಾಸಿಗೆ ಆಸ್ಪತ್ರೆಯಾಗಿ ಉನ್ನತೀಕರಿಸಿ. ತಾಯಿ ಮಕ್ಕಳ ಆಸ್ಪತ್ರೆಯನ್ನು , ಹಾಲಿ ಇರುವ ಆಸ್ಪತ್ರೆಗೆ ಹೊಂದಿಕೊಂಡಂತೆ ನಿರ್ಮಿಸಿ. ಆಸ್ಪತ್ರೆಯನ್ನು ವಿಭಾಗಿಯ ಆಸ್ಪತ್ರೆಯನ್ನಾಗಿಸುವ ನಿಟ್ಟಿನಲ್ಲಿ , ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರ ಅಭಿವೃದ್ಧಿಯ ದಿಟ್ಟ ಹೆಜ್ಜೆಗೆ. ಸಾರ್ವಜನಿಕ ವಲಯದಲ್ಲಿ ಕೂಡ ಉತ್ತಮ ಪ್ರತಿಕ್ರಿಯೆ ದೊರಕಿದೆ , ಸಾರ್ವಜನಿಕರು ಕೂಡ ಶಾಸಕರಿಗೆ ನಡೆಗೆ ಪೂರಕ ಅಭಿಮತ ನೀಡೊ ಮೂಲಕ ಸಾಥ್ ನೀಡಿದ್ದಾರೆ. ಸಂಬಂಧಿಸಿದಂತೆ ಸಾರ್ವಜನಿಕ ವಲಯದ ಅಭಿಪ್ರಾಯ ಸಂಗ್ರಹಿಸಿದಾಗ , ಬಹುತೇಕ ಸಾರ್ವಜನಿಕರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ತುರ್ತುಸೇ‍ವಾ ಸಿಬ್ಬಂದಿಯವರು , ಮುಖಂಡರು , ಸಾರ್ವಜನಿಕರು ಶಾಸಕರ ಈ ನಡೆಯನ್ನು ಶ್ಲಾಘಿಸಿದ್ದಾರೆ. ತಾಯಿ ಮಕ್ಕಳ ಮರಣ ಪ್ರಮ‍ಾಣ ತಗ್ಗಿಸಲು , ತಾಯಿ ಮಕ್ಕಳಿಗೆ ಅಗತ್ಯ ತುರ್ತು ಚಿಕಿತ್ಸೆ ಒದಗಿಸಲು. ತಾಯಿ ಮಕ್ಕಳ ಆಸ್ಪತ್ರೆಯು , ಹಾಲಿ ಇರುವ ಆಸ್ಪತ್ರೆಗೆ ಹೊಂದಿಕೊಂಡಿರುವುದು. ಎಲ್ಲಾ ರೀತಿಯಿಂದ ತುಂಬಾ ಅನುಕೂಲವಾಗಲಿದ್ದು , ಅದು ಅತ್ಯಅಗತ್ಯವಿದೆ ಎಂದು ಸ್ತ್ರೀರೋಗ ತಜ್ಞ ವೈದ್ಯರಾದ ನಾಗರಾಜರವರು ತಿಳಿಸಿದ್ದಾರೆ. ಸಂಘಟನೆಗಳ ಮುಖಂಡರು ಮಾತನಾಡಿ , ತಾಯಿ ಮಕ್ಕಳ ಆಸ್ಪತ್ರೆ ಕೂಡ್ಲಿಗಿ ಗೆ ಮಾತ್ರ ಸೀಮಿತವಾಗಲ್ಲ. ನೆರೆ ಹೊರೆ ತಾಲೂಕುಗಳಿಗೂ ಸಹಕಾರಿಯಾಗಲಿದೆ , ಸಹೃದಯವಂತ ಶಾಸಕರನ್ನು ಜನಾನುರಾಗಿ ಶಾಸಕರನ್ನು ಪಡೆದಿರುವುದು ನಮ್ಮ ಭಾಗ್ಯ ಎಂದಿದ್ದಾರೆ. ಆಶಕಾರ್ಯಕರ್ತರು ಮಾತನಾಡಿ , ಕೆಲ ಅನಿವಾರ್ಯ ಕಾರಣಗಳಿಗೆ ಹೆರಿಗೆ ಪ್ರಕಣಗಳನ್ನು. ಕೂಡ್ಲಗಿಯಿಂದ ಹೊಸಪೇಟೆ , ಬಳ್ಳಾರಿ , ಕೊಪ್ಪಳ , ದ‍‍ಾವಣಗೆರೆ ಆಸ್ಪತ್ರೆಗೆ ಶಿಪಾರಸ್ಸು ಮಾಡೋದು ಸಹಜವಾಗಿದೆ. ಅದರಿಂದಾಗಿ ಎಲ್ಲಾ ರೀತಿಯ ನಷ್ಟಗಳನ್ನು ಸಂಕಷ್ಟಗಳನ್ನು ಅನುಭವಿಸುವಂತಾಗಿತ್ತು , ಅದೆಲ್ಲಾ ತಪ್ಪಲಿದೆ ಹಾಗೂ ತಾಯಿ ಮಕ್ಕಳು ಸುರಕ್ಷಿತವಾಗಿರಲು ಆಸ್ಪತ್ರೆ ಹತ್ತಿರದಲ್ಲಿಯೇ ಆಗಬೇಕಿದೆ ಎಂದಿದ್ದಾರೆ. ದಲಿತ ಮುಖಂಡರು ಹೋರಾಟಗಾರರು ಮಾತನಾಡಿ , ಮಾಜಿ ಶಾಸಕರಾದ ದಿವಂತ ಎನ್ ಟಿ ಬೊಮ್ಮಣ್ಣರವರು. ಅಂದರೆ ಶಾಸಕರ ತಂದೆಯವರು ಶಾಸಕರಾದಾಗ , 100ಹಾಸಿಗೆ ಆಸ್ಪತ್ರೆ ನಿರ್ಮಿಸಿ ದಾಖಲು ಮಾಡಿದ್ದಾರೆ. ಅಂತೆಯೆ ಅವರ ಪುತ್ರರಾದ ಶಾಸಕರಾದ , ಡಾ ॥ ಎನ್ ಟಿ ಶ್ರೀನಿವಾಸ್ ರವರು 150 ಹಾಸಿಗೆ ಆಸ್ಪತ್ರೆಯಾಗಿ ಉನ್ನತೀಕರಿಸಿದ್ದಾರೆ. ಅದು ವಿಭಾಗ ಮಟ್ಟದ ಸುಸಜ್ಜಿತ ತಾಯಿ ಮಕ್ಕಳ ಆಸ್ಪತ್ರೆಯಾಗಿ , ಉನ್ನತೀಕರಿಸಿ ಅಭಿವೃದ್ಧಿ ಪಡಿಸುತ್ತಿರುವುದು ಶ್ಲಾಘನೀಯವಾದದ್ದು. ಈ ಮೂಲಕ ಅಸಂಖ್ಯಾತ ತಾಯಿ ಮಕ್ಕಳ , ಆರೈಕೆಗೆ ಹಾಗೂ ತುರ್ತು ಚಿಕಿತ್ಸೆಗೆ ಅಗತ್ಯ ವಾತಾವರಣ ನಿರ್ಮಿಸುತ್ತಿದ್ದಾರೆ. ತಾಯಿ ಮಕ್ಕಳ ಆಸ್ಪತ್ರೆ ಪಟ್ಟಣ ತಾಲೂಕು ಮಾತ್ರವಲ್ಲ , ವಿಜಯನಗರ ಜಿಲ್ಲೆಗೆ ಮಾದರಿ ಆಸ್ಪತ್ರೆಯಾಗಲಿದೆ. ಅದು ವಿಜಯನಗರ ಜಿಲ್ಲೆಯ ನವಜಾತ ಶಿಶು ಹಾಗೂ ತಾಯಿಯರಿಗೆ ಸಂಜೀವಿನಯಾಗಲಿದೆಎಂದು ಹಿರಿಯ ನಾಗರೀಕರು ಬಣ್ಣಿಸಿದ್ದಾರೆ. ಅದುದರಿಂದಾಗಿ ಈ ಆಸ್ಪತ್ರೆಯು , ಹಾಲಿ ನಿಗದಿಪಡಿಸಿರುವ ಸಾರ್ವಜನಿಕ ಆಸ್ಪತ್ರೆಗೆ ಹೊಂದಿಕೊಂಡ ಜಾಗದಲ್ಲಿಯೇ ನಿರ್ಮ‍ಾಣವಾಗಬೇಕಿದೆ ಎಂದು ಅಭಿಮತ ವ್ಯೆಕ್ತಪಡಿಸಿದ್ದಾರೆ. ಪಟ್ಟಣ ತಾಲೂಕು ನೆರೆ ಹೊರೆ ತಾಲೂಕುಗಳಿಂದ ತಿಂಗಳೊಂದಕ್ಕೆ 50 - 75 ಹೆರಿಗೆ ಪ್ರಕರಣಗಳು , ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆ ಅರಸಿ ಬರಲಿದ್ದು. ಇದು ಎಲ್ಲರಿಗೂ ತುಂಬಾ ಅನುಕೂಲವಾಗಲಿದೆ , ಶಾಸಕರ ದೂರ ದೃಷ್ಟಿ ಹಾಗೂ ಜನಪರ ಕಾಳಜಿಯನ್ನು ಸಾಬೀತುಪಡಿಸಿದೆ ಎಂದಿದ್ದಾರೆ. ಶಾಸಕರ ಜನಪರ ಕಾಳಜಿ ಮಕ್ಕಳ ಮಹಿಳೆಯರ ಪರ ಇರುವ ನಿಲುವಿಗೆ ನಿದರ್ಶನವಾಗಿದ್ದು , ಈ ಮೂಲಕ ಅವರು ತಾಯಿಯ ಮಮತೆಯ ಸಹೃದಯವಂತಿಕೆ ತೋರಿದ್ದಾರೆ. ತಾಯಿ ಮಕ್ಕಳ ಆಸ್ಪತ್ರೆ ಹಾಲಿ ಇರುವ ಆಸ್ಪತ್ರೆಗೆ ಹೊಂದಿಕೊಂಡಿದ್ದಲ್ಲಿ , ಎಲ್ಲರಿಗೂ ಎಲ್ಲಾ ರೀತಿಯಲ್ಲಿ ಸಾಕಷ್ಟು ಅನುಕೂಕವಾಗಲಿದೆ. ಶಾಸಕರ ಕಾಳಜಿ ಹಾಗೂ ಅಂತಃಕರಣ ಪೂರ್ವಕ ಹೃದಯ ಶ್ರೀಮಂತಿಕೆಗೆ , ತಾಯಿ ಮಕ್ಕಳ ಆಸ್ಪತ್ರೆಯೇ ಸಾಕ್ಷಿಯಾಗಿದೆ. ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರ , ಈ ಮಹಾ ಕಾರ್ಯಕ್ಕೆ ಅವರೊಂದಿಗೆ ತಾವು ಸದಾ ಇರುತ್ತೇವೆಂದು. ಕೂಡ್ಲಿಗಿ ಪಟ್ಟಣದ ನಾಗರೀಕರು , ಸಾರ್ವಜನಿಕರು , ಹೋರಾಟಗಾರರು , ವಿವಿದ ಸಂಘಟನೆಗಳ ಪದಾಧಿಕಾರಿಗಳು. ಮಹಿಳಾ ಸಂಘ ,ರೈತ ಸಂಘ , ಕಾರ್ಮಿಕರ ಸಂಘ , ಕನ್ನಡ ಪರ ಸಂಘಟನೆಗಳು , ದಲಿತಪರ ಸಂಘಟನೆಗಳು , ತಾಲೂಕಿನ ಬಹುತೇಕ ಸಂಘಟನೆಗಳ ಪದಾಧಿಕಾರಿಗಳು ಅಭಿಮತ ವ್ಯಕ್ತಪಡಿಸಿದ್ದಾರೆ.✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    4
    ಕೂಡ್ಲಿಗಿ : ಸಾರ್ವಜನಿಕ ಆಸ್ಪತ್ರೆಯಲ್ಲಿಯೇ ತಾಯಿ ಮಕ್ಕಳ ಆಸ್ಪತ್ರೆ , ಅನಿರ್ಯ ಹಾಗೂ ತುರ್ತಾಗಿ ನಿರ್ಮಾಣವಾಗಬೇಕಿದೆ _  ಸಾರ್ವಜನಿಕರ ಹೋರಾಟಗಾರರ ಅಭಿಮತ
*ಕೂಡ್ಲಿಗಿ : ಸಾರ್ವಜನಿಕ ಆಸ್ಪತ್ರೆಯಲ್ಲಿಯೇ ತಾಯಿ ಮಕ್ಕಳ ಆಸ್ಪತ್ರೆ , ಅನಿರ್ಯ ಹಾಗೂ ತುರ್ತಾಗಿ ನಿರ್ಮಾಣವಾಗಬೇಕಿದೆ _  ಸಾರ್ವಜನಿಕರ ಹೋರಾಟಗಾರರ ಅಭಿಮತ*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣದಲ್ಲಿನ 100ಹಾಸಿಗೆ ಆಸ್ಪತ್ರೆಯನ್ನು , 150 ಹಾಸಿಗೆ ಆಸ್ಪತ್ರೆಯಾಗಿ ಉನ್ನತೀಕರಿಸಿ. ತಾಯಿ ಮಕ್ಕಳ ಆಸ್ಪತ್ರೆಯನ್ನು , ಹಾಲಿ ಇರುವ ಆಸ್ಪತ್ರೆಗೆ ಹೊಂದಿಕೊಂಡಂತೆ ನಿರ್ಮಿಸಿ. ಆಸ್ಪತ್ರೆಯನ್ನು ವಿಭಾಗಿಯ ಆಸ್ಪತ್ರೆಯನ್ನಾಗಿಸುವ ನಿಟ್ಟಿನಲ್ಲಿ , ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರ ಅಭಿವೃದ್ಧಿಯ ದಿಟ್ಟ ಹೆಜ್ಜೆಗೆ.  ಸಾರ್ವಜನಿಕ ವಲಯದಲ್ಲಿ ಕೂಡ ಉತ್ತಮ ಪ್ರತಿಕ್ರಿಯೆ ದೊರಕಿದೆ , ಸಾರ್ವಜನಿಕರು ಕೂಡ ಶಾಸಕರಿಗೆ ನಡೆಗೆ ಪೂರಕ ಅಭಿಮತ ನೀಡೊ ಮೂಲಕ ಸಾಥ್ ನೀಡಿದ್ದಾರೆ. ಸಂಬಂಧಿಸಿದಂತೆ  ಸಾರ್ವಜನಿಕ ವಲಯದ ಅಭಿಪ್ರಾಯ ಸಂಗ್ರಹಿಸಿದಾಗ , ಬಹುತೇಕ ಸಾರ್ವಜನಿಕರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ತುರ್ತುಸೇ‍ವಾ ಸಿಬ್ಬಂದಿಯವರು , ಮುಖಂಡರು , ಸಾರ್ವಜನಿಕರು ಶಾಸಕರ ಈ ನಡೆಯನ್ನು ಶ್ಲಾಘಿಸಿದ್ದಾರೆ. ತಾಯಿ ಮಕ್ಕಳ ಮರಣ ಪ್ರಮ‍ಾಣ ತಗ್ಗಿಸಲು , ತಾಯಿ ಮಕ್ಕಳಿಗೆ ಅಗತ್ಯ ತುರ್ತು ಚಿಕಿತ್ಸೆ ಒದಗಿಸಲು. ತಾಯಿ ಮಕ್ಕಳ ಆಸ್ಪತ್ರೆಯು , ಹಾಲಿ ಇರುವ ಆಸ್ಪತ್ರೆಗೆ ಹೊಂದಿಕೊಂಡಿರುವುದು. ಎಲ್ಲಾ ರೀತಿಯಿಂದ ತುಂಬಾ ಅನುಕೂಲವಾಗಲಿದ್ದು , ಅದು ಅತ್ಯಅಗತ್ಯವಿದೆ ಎಂದು ಸ್ತ್ರೀರೋಗ ತಜ್ಞ ವೈದ್ಯರಾದ ನಾಗರಾಜರವರು ತಿಳಿಸಿದ್ದಾರೆ. ಸಂಘಟನೆಗಳ ಮುಖಂಡರು ಮಾತನಾಡಿ , ತಾಯಿ ಮಕ್ಕಳ ಆಸ್ಪತ್ರೆ ಕೂಡ್ಲಿಗಿ ಗೆ ಮಾತ್ರ ಸೀಮಿತವಾಗಲ್ಲ. ನೆರೆ ಹೊರೆ ತಾಲೂಕುಗಳಿಗೂ ಸಹಕಾರಿಯಾಗಲಿದೆ , ಸಹೃದಯವಂತ ಶಾಸಕರನ್ನು ಜನಾನುರಾಗಿ ಶಾಸಕರನ್ನು ಪಡೆದಿರುವುದು ನಮ್ಮ ಭಾಗ್ಯ ಎಂದಿದ್ದಾರೆ. ಆಶಕಾರ್ಯಕರ್ತರು ಮಾತನಾಡಿ , ಕೆಲ ಅನಿವಾರ್ಯ ಕಾರಣಗಳಿಗೆ ಹೆರಿಗೆ ಪ್ರಕಣಗಳನ್ನು. ಕೂಡ್ಲಗಿಯಿಂದ ಹೊಸಪೇಟೆ , ಬಳ್ಳಾರಿ , ಕೊಪ್ಪಳ , ದ‍‍ಾವಣಗೆರೆ ಆಸ್ಪತ್ರೆಗೆ ಶಿಪಾರಸ್ಸು ಮಾಡೋದು ಸಹಜವಾಗಿದೆ. ಅದರಿಂದಾಗಿ ಎಲ್ಲಾ ರೀತಿಯ ನಷ್ಟಗಳನ್ನು ಸಂಕಷ್ಟಗಳನ್ನು ಅನುಭವಿಸುವಂತಾಗಿತ್ತು , ಅದೆಲ್ಲಾ ತಪ್ಪಲಿದೆ ಹಾಗೂ ತಾಯಿ ಮಕ್ಕಳು ಸುರಕ್ಷಿತವಾಗಿರಲು ಆಸ್ಪತ್ರೆ ಹತ್ತಿರದಲ್ಲಿಯೇ ಆಗಬೇಕಿದೆ ಎಂದಿದ್ದಾರೆ. ದಲಿತ ಮುಖಂಡರು ಹೋರಾಟಗಾರರು ಮಾತನಾಡಿ , ಮಾಜಿ ಶಾಸಕರಾದ ದಿವಂತ ಎನ್ ಟಿ ಬೊಮ್ಮಣ್ಣರವರು. ಅಂದರೆ ಶಾಸಕರ ತಂದೆಯವರು ಶಾಸಕರಾದಾಗ , 100ಹಾಸಿಗೆ ಆಸ್ಪತ್ರೆ ನಿರ್ಮಿಸಿ ದಾಖಲು ಮಾಡಿದ್ದಾರೆ. ಅಂತೆಯೆ ಅವರ ಪುತ್ರರಾದ ಶಾಸಕರಾದ , ಡಾ ॥ ಎನ್ ಟಿ ಶ್ರೀನಿವಾಸ್ ರವರು 150 ಹಾಸಿಗೆ ಆಸ್ಪತ್ರೆಯಾಗಿ ಉನ್ನತೀಕರಿಸಿದ್ದಾರೆ. ಅದು ವಿಭಾಗ ಮಟ್ಟದ ಸುಸಜ್ಜಿತ ತಾಯಿ ಮಕ್ಕಳ ಆಸ್ಪತ್ರೆಯಾಗಿ , ಉನ್ನತೀಕರಿಸಿ ಅಭಿವೃದ್ಧಿ ಪಡಿಸುತ್ತಿರುವುದು ಶ್ಲಾಘನೀಯವಾದದ್ದು. ಈ ಮೂಲಕ ಅಸಂಖ್ಯಾತ ತಾಯಿ ಮಕ್ಕಳ , ಆರೈಕೆಗೆ ಹಾಗೂ ತುರ್ತು ಚಿಕಿತ್ಸೆಗೆ ಅಗತ್ಯ ವಾತಾವರಣ ನಿರ್ಮಿಸುತ್ತಿದ್ದಾರೆ. ತಾಯಿ ಮಕ್ಕಳ ಆಸ್ಪತ್ರೆ ಪಟ್ಟಣ ತಾಲೂಕು ಮಾತ್ರವಲ್ಲ , ವಿಜಯನಗರ ಜಿಲ್ಲೆಗೆ ಮಾದರಿ ಆಸ್ಪತ್ರೆಯಾಗಲಿದೆ. ಅದು ವಿಜಯನಗರ ಜಿಲ್ಲೆಯ ನವಜಾತ ಶಿಶು ಹಾಗೂ ತಾಯಿಯರಿಗೆ ಸಂಜೀವಿನಯಾಗಲಿದೆಎಂದು ಹಿರಿಯ ನಾಗರೀಕರು ಬಣ್ಣಿಸಿದ್ದಾರೆ.  ಅದುದರಿಂದಾಗಿ ಈ ಆಸ್ಪತ್ರೆಯು , ಹಾಲಿ ನಿಗದಿಪಡಿಸಿರುವ ಸಾರ್ವಜನಿಕ ಆಸ್ಪತ್ರೆಗೆ ಹೊಂದಿಕೊಂಡ ಜಾಗದಲ್ಲಿಯೇ ನಿರ್ಮ‍ಾಣವಾಗಬೇಕಿದೆ ಎಂದು ಅಭಿಮತ ವ್ಯೆಕ್ತಪಡಿಸಿದ್ದಾರೆ. ಪಟ್ಟಣ ತಾಲೂಕು ನೆರೆ ಹೊರೆ ತಾಲೂಕುಗಳಿಂದ ತಿಂಗಳೊಂದಕ್ಕೆ 50 - 75 ಹೆರಿಗೆ ಪ್ರಕರಣಗಳು , ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆ ಅರಸಿ ಬರಲಿದ್ದು. ಇದು ಎಲ್ಲರಿಗೂ ತುಂಬಾ ಅನುಕೂಲವಾಗಲಿದೆ , ಶಾಸಕರ ದೂರ ದೃಷ್ಟಿ ಹಾಗೂ ಜನಪರ ಕಾಳಜಿಯನ್ನು ಸಾಬೀತುಪಡಿಸಿದೆ ಎಂದಿದ್ದಾರೆ. ಶಾಸಕರ ಜನಪರ ಕಾಳಜಿ ಮಕ್ಕಳ ಮಹಿಳೆಯರ ಪರ ಇರುವ ನಿಲುವಿಗೆ ನಿದರ್ಶನವಾಗಿದ್ದು , ಈ ಮೂಲಕ ಅವರು ತಾಯಿಯ ಮಮತೆಯ ಸಹೃದಯವಂತಿಕೆ ತೋರಿದ್ದಾರೆ. ತಾಯಿ ಮಕ್ಕಳ ಆಸ್ಪತ್ರೆ ಹಾಲಿ ಇರುವ ಆಸ್ಪತ್ರೆಗೆ ಹೊಂದಿಕೊಂಡಿದ್ದಲ್ಲಿ , ಎಲ್ಲರಿಗೂ ಎಲ್ಲಾ ರೀತಿಯಲ್ಲಿ ಸಾಕಷ್ಟು ಅನುಕೂಕವಾಗಲಿದೆ. ಶಾಸಕರ ಕಾಳಜಿ ಹಾಗೂ ಅಂತಃಕರಣ ಪೂರ್ವಕ ಹೃದಯ ಶ್ರೀಮಂತಿಕೆಗೆ , ತಾಯಿ ಮಕ್ಕಳ ಆಸ್ಪತ್ರೆಯೇ ಸಾಕ್ಷಿಯಾಗಿದೆ. ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರ , ಈ ಮಹಾ ಕಾರ್ಯಕ್ಕೆ ಅವರೊಂದಿಗೆ ತಾವು ಸದಾ ಇರುತ್ತೇವೆಂದು. ಕೂಡ್ಲಿಗಿ ಪಟ್ಟಣದ ನಾಗರೀಕರು , ಸಾರ್ವಜನಿಕರು , ಹೋರಾಟಗಾರರು , ವಿವಿದ ಸಂಘಟನೆಗಳ ಪದಾಧಿಕಾರಿಗಳು. ಮಹಿಳಾ ಸಂಘ ,ರೈತ ಸಂಘ , ಕಾರ್ಮಿಕರ ಸಂಘ , ಕನ್ನಡ ಪರ ಸಂಘಟನೆಗಳು ,  ದಲಿತಪರ ಸಂಘಟನೆಗಳು , ತಾಲೂಕಿನ ಬಹುತೇಕ ಸಂಘಟನೆಗಳ ಪದಾಧಿಕಾರಿಗಳು ಅಭಿಮತ ವ್ಯಕ್ತಪಡಿಸಿದ್ದಾರೆ.✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    user_ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    5 hrs ago
  • ಕಾಲೇಜಿನ ಕೊನೆಯ ದಿನ ಸೆಕ್ಯೂರಿಟಿ ಗಾರ್ಡ್‌ನ ಆಶೀರ್ವಾದ ಪಡೆದ ವಿದ್ಯಾರ್ಥಿ ಕಾಲೇಜಿನ ಕೊನೆಯ ದಿನ ಸೆಕ್ಯೂರಿಟಿ ಗಾರ್ಡ್‌ನ ಆಶೀರ್ವಾದ ಪಡೆದ ವಿದ್ಯಾರ್ಥಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ದೃಶ್ಯಗಳು ಮನಸ್ಸಿಗೆ ಹತ್ತಿರವಾಗುತ್ತವೆ. ಇದೀಗ ವಿದ್ಯಾರ್ಥಿಯೊಬ್ಬ ಕಾಲೇಜಿನ ಕೊನೆಯ ದಿನದಂದು ಪ್ರತಿದಿನ ಗೇಟ್ ಮುಂದೆ ನಿಂತು ತನ್ನನ್ನು ನಗುತ್ತಾ ಸ್ವಾಗತಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ನ ಆಶೀರ್ವಾದ ಪಡೆದುಕೊಂಡಿದ್ದಾನೆ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗಿದೆ. ಕಾಲೇಜ್ ಲೈಫ್ (College life) ಇಸ್ ಗೋಲ್ಡನ್ ಲೈಫ್ ಅಂತಾರೆ. ಕಾಲೇಜಿನ ಕೊನೆಯ ದಿನದಂದು ಪ್ರತಿಯೊಬ್ಬ ವಿದ್ಯಾರ್ಥಿಯೂ ಜತೆಯಾಗಿ ಕಳೆದ ಸುಂದರ ಕ್ಷಣಗಳನ್ನು ಮೆಲುಕು ಹಾಕುವುದು ಸಹಜ. ಇನ್ನ ತನ್ನ ಪ್ರೀತಿಯ ಶಿಕ್ಷಕರಿಗೆ, ಸ್ನೇಹಿತರೊಂದಿಗೆ ಫೋಟೋ ಕ್ಲಿಕಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಪದವಿ ವಿದ್ಯಾರ್ಥಿ ಸೆಕ್ಯೂರಿಟಿ ಗಾರ್ಡ್‌ಗೆ ಕೃತಜ್ಞತೆ ಸಲ್ಲಿಸಿದ್ದಾನೆ. ಹೌದು, ಕಾಲೇಜ್ ಗೇಟ್ ಹತ್ತಿರ ಬರುತ್ತಿದ್ದಂತೆ ನಗುತ್ತಾ ಸ್ವಾಗತಿಸುತ್ತಿದ್ದ ಮಹಿಳಾ ಭದ್ರತಾ ಸಿಬ್ಬಂದಿಯ ಆಶೀರ್ವಾದ ಪಡೆದ ಕ್ಷಣದ ವಿಡಿಯೋ ವೈರಲ್ ಆಗಿದೆ. ಈ ಹೃದಯ ಸ್ಪರ್ಶಿ ದೃಶ್ಯ ಈ ವಿದ್ಯಾರ್ಥಿಯ ಸಂಸ್ಕಾರಯುತ ನಡವಳಿಕೆಯನ್ನು ಎತ್ತಿ ತೋರಿಸಿದೆ.ರೋಸಿ (Rosy) ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಕಾಲೇಜಿನ ಕೊನೆಯ ದಿನದಂದು ಮಹಿಳಾ ಭದ್ರತಾ ಸಿಬ್ಬಂದಿ ಕಾಲು ಮುಟ್ಟಿ ಆಶೀರ್ವಾದ ಪಡೆದುಕೊಳ್ಳುತ್ತಿರುವುದನ್ನು ನೋಡಬಹುದು. ಈ ವಿದ್ಯಾರ್ಥಿ ಕಾಲು ಮುಟ್ಟುತ್ತಿದ್ದಂತೆ ಸಿಬ್ಬಂದಿ ಭಾವುಕರಾಗಿದ್ದಾಳೆ. ಕೊನೆಗೆ ಈ ವಿದ್ಯಾರ್ಥಿ ತಬ್ಬಿಕೊಂಡು ಸೆಕ್ಯೂರಿಟಿ ಗಾರ್ಡ್‌ನನ್ನು ಸಮಾಧಾನ ಪಡಿಸುತ್ತಿರುವುದನ್ನು ನೀವು ಇಲ್ಲಿ ನೋಡಬಹುದು.ಆಗಸ್ಟ್ 1 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಇದುವರೆಗೆ ಆರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಭಾರತೀಯ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಿಜವಾದ ಜೆನ್ ಝೆಡ್ ಎಂದಿದ್ದಾರೆ. ಮತ್ತೊಬ್ಬರು, ಈ ವಿದ್ಯಾರ್ಥಿಯ ಗುಣ ನಡತೆ ಹೃದಯ ಹತ್ತಿರವಾಯ್ತು ಎಂದು ಕಾಮೆಂಟ್ ಮಾಡಿದ್ದಾರೆ.
    1
    ಕಾಲೇಜಿನ ಕೊನೆಯ ದಿನ ಸೆಕ್ಯೂರಿಟಿ ಗಾರ್ಡ್‌ನ ಆಶೀರ್ವಾದ ಪಡೆದ ವಿದ್ಯಾರ್ಥಿ
ಕಾಲೇಜಿನ ಕೊನೆಯ ದಿನ ಸೆಕ್ಯೂರಿಟಿ ಗಾರ್ಡ್‌ನ ಆಶೀರ್ವಾದ ಪಡೆದ ವಿದ್ಯಾರ್ಥಿ
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ದೃಶ್ಯಗಳು ಮನಸ್ಸಿಗೆ ಹತ್ತಿರವಾಗುತ್ತವೆ. ಇದೀಗ ವಿದ್ಯಾರ್ಥಿಯೊಬ್ಬ ಕಾಲೇಜಿನ ಕೊನೆಯ ದಿನದಂದು ಪ್ರತಿದಿನ ಗೇಟ್ ಮುಂದೆ ನಿಂತು ತನ್ನನ್ನು ನಗುತ್ತಾ ಸ್ವಾಗತಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ನ ಆಶೀರ್ವಾದ ಪಡೆದುಕೊಂಡಿದ್ದಾನೆ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗಿದೆ.
ಕಾಲೇಜ್ ಲೈಫ್ (College life) ಇಸ್ ಗೋಲ್ಡನ್ ಲೈಫ್ ಅಂತಾರೆ. ಕಾಲೇಜಿನ ಕೊನೆಯ ದಿನದಂದು ಪ್ರತಿಯೊಬ್ಬ ವಿದ್ಯಾರ್ಥಿಯೂ ಜತೆಯಾಗಿ ಕಳೆದ ಸುಂದರ ಕ್ಷಣಗಳನ್ನು ಮೆಲುಕು ಹಾಕುವುದು ಸಹಜ. ಇನ್ನ  ತನ್ನ ಪ್ರೀತಿಯ ಶಿಕ್ಷಕರಿಗೆ, ಸ್ನೇಹಿತರೊಂದಿಗೆ ಫೋಟೋ ಕ್ಲಿಕಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಪದವಿ ವಿದ್ಯಾರ್ಥಿ ಸೆಕ್ಯೂರಿಟಿ ಗಾರ್ಡ್‌ಗೆ ಕೃತಜ್ಞತೆ ಸಲ್ಲಿಸಿದ್ದಾನೆ.  ಹೌದು, ಕಾಲೇಜ್ ಗೇಟ್ ಹತ್ತಿರ ಬರುತ್ತಿದ್ದಂತೆ ನಗುತ್ತಾ ಸ್ವಾಗತಿಸುತ್ತಿದ್ದ ಮಹಿಳಾ ಭದ್ರತಾ ಸಿಬ್ಬಂದಿಯ ಆಶೀರ್ವಾದ ಪಡೆದ ಕ್ಷಣದ ವಿಡಿಯೋ ವೈರಲ್ ಆಗಿದೆ. ಈ ಹೃದಯ ಸ್ಪರ್ಶಿ ದೃಶ್ಯ ಈ ವಿದ್ಯಾರ್ಥಿಯ ಸಂಸ್ಕಾರಯುತ ನಡವಳಿಕೆಯನ್ನು ಎತ್ತಿ ತೋರಿಸಿದೆ.ರೋಸಿ (Rosy) ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಕಾಲೇಜಿನ ಕೊನೆಯ ದಿನದಂದು ಮಹಿಳಾ ಭದ್ರತಾ ಸಿಬ್ಬಂದಿ ಕಾಲು ಮುಟ್ಟಿ ಆಶೀರ್ವಾದ ಪಡೆದುಕೊಳ್ಳುತ್ತಿರುವುದನ್ನು ನೋಡಬಹುದು. ಈ ವಿದ್ಯಾರ್ಥಿ ಕಾಲು ಮುಟ್ಟುತ್ತಿದ್ದಂತೆ ಸಿಬ್ಬಂದಿ ಭಾವುಕರಾಗಿದ್ದಾಳೆ. ಕೊನೆಗೆ ಈ ವಿದ್ಯಾರ್ಥಿ ತಬ್ಬಿಕೊಂಡು ಸೆಕ್ಯೂರಿಟಿ ಗಾರ್ಡ್‌ನನ್ನು ಸಮಾಧಾನ ಪಡಿಸುತ್ತಿರುವುದನ್ನು ನೀವು ಇಲ್ಲಿ ನೋಡಬಹುದು.ಆಗಸ್ಟ್ 1 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಇದುವರೆಗೆ ಆರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಭಾರತೀಯ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಿಜವಾದ ಜೆನ್ ಝೆಡ್ ಎಂದಿದ್ದಾರೆ. ಮತ್ತೊಬ್ಬರು, ಈ ವಿದ್ಯಾರ್ಥಿಯ ಗುಣ ನಡತೆ ಹೃದಯ ಹತ್ತಿರವಾಯ್ತು ಎಂದು ಕಾಮೆಂಟ್ ಮಾಡಿದ್ದಾರೆ.
    user_ರಾಜಶೇಖರ್ GT
    ರಾಜಶೇಖರ್ GT
    ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    10 hrs ago
  • ಬರ ವೀಕ್ಷಣೆ ನಡೆಸಿದ ಸಚಿವ ಕೆ.ಹೆಚ್ ಮುನಿಯಪ್ಪ; ಬೆಳೆ ವಿಮೆ ಮಾಡಿಸಲು ರೈತರಲ್ಲಿ ಮನವಿ ಬೆಂಗಳೂರು ಗ್ರಾಮಾಂತರ ಜಿಲ್ಲೆ: ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕುಂದಾಣ ಹೋಬಳಿಯ ಆಲೂರು ದುದ್ದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀರಸಂದ್ರ ಗ್ರಾಮದಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿ ರಾಗಿ, ಜೋಳ ಬೆಳೆ ಸೇರಿದಂತೆ ವಿವಿಧ ಬೆಳೆಗಳನ್ನು ವೀಕ್ಷಿಸಿ ರೈತರಿಂದ, ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಮಾತನಾಡಿ ಜೂನ್, ಜುಲೈ ನಲ್ಲಿ ಕಡಿಮೆ ಮಳೆ ಆಗಿದೆ. ಜೂನ್ 1 ರಿಂದ ಆಗಸ್ಟ್ 4 ವರೆಗೆ 174.2 ಮಳೆ ಆಗಬೇಕಿತ್ತು, 116.3% ಮಳೆ ಮಾತ್ರ ಆಗಿದ್ದು ಶೇ.33% ರಷ್ಟು ಮಳೆ ಕೊರತೆ ಉಂಟಾಗಿದೆ. ಆಗಸ್ಟ್ 15 ರೊಳಗೆ ಮಳೆ ಬರದಿದ್ದಲ್ಲಿ ಬಿತ್ತನೆ ಆಗಿರುವ ಬೆಳೆಗಳಿಗೆ ತೊಂದರೆ ಆಗುತ್ತದೆ. ಸಾಧ್ಯವಾದಷ್ಟು ಶಾರ್ಟ್ ಟರ್ಮ್ ರಾಗಿ ಬೆಳೆ ಆಯ್ಕೆ ಮಾಡಿಕೊಳ್ಳಿ ಬೇಗ ಬೆಳೆ ಬರುತ್ತದೆ ಎಂದು ರೈತರಿಗೆ ಸಲಹೆ ನೀಡಿದರು. *ತಪ್ಪದೇ ಬೆಳೆ ವಿಮೆ ಮಾಡಿಸಿ* ಮಳೆ ಅಭಾವದಿಂದ ಬೆಳೆ ನಷ್ಟ ಆಗುವ ಸಂಭವವಿದೆ. ಹಾಗಾಗಿ ತಪ್ಪದೇ ಎಲ್ಲಾ ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿ ಇದರಿಂದ ನಷ್ಟ ಪರಿಹಾರ ಸರಿದೂಗಲಿದೆ ಎಂದರು. ಈಗಾಗಲೇ ಹಲವಾರು ರೈತರು ರಾಗಿ, ಜೋಳ ಬಿತ್ತನೆ ಮಾಡಿದ್ದಾರೆ. ಮಳೆ ಕೊರತೆಯಿಂದ ಸರಿಯಾಗಿ ಹುಟ್ಟಿಲ್ಲ. ಆಗಸ್ಟ್ 30 ವರೆಗೆ ಕಾದು ನೋಡಬೇಕು ಮಳೆ ಬರದಿದಲ್ಲಿ ಸರ್ಕಾರ ಪರಿಹಾರದ ಬಗ್ಗೆ ಚಿಂತನೆ ಮಾಡಲಿದೆ ಎಂದು ಸಚಿವರು ಹೇಳಿದರು. ಜಾನುವಾರುಗಳಿಗೆ ಮೇವಿಗೆ ಸಂಬಂಧಿಸಿದಂತೆ ರೈತರಿಗೆ ಮೇವು ಬಿತ್ತನೆ ಬೀಜ ಪೂರೈಕೆ ಮಾಡಿ. ಮೇವು ಕಿಟ್ ಗಳನ್ನು, ಸೈಲೇಜ್ ಆಹಾರದ ಬಗ್ಗೆ ರೈತರಿಗೆ ಅರಿವು ಮೂಡಿಸಿ, ಪ್ರಸ್ತುತ ಸನ್ನಿವೇಶದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ನೋಡಿಕೊಳ್ಳಿ ಎಂದು ಪಶುಸಂಗೋಪನೆ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಆಲೂರುದುದ್ದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬನ್ನಿಮಂಗಲ ಕೆರೆಯಲ್ಲಿ ವಾಸ್ತವ ಸ್ಥಿತಿ ಪರಿಶೀಲನೆ ನಡೆಸಿದರು. ಕೆರೆಗಳ ಹೂಳೆತ್ತುವ ಕೆಲಸ ಮೊದಲು ಆಗಬೇಕಿದೆ. ನಂತರ ನೀರು ತುಂಬಿಸುವ ಕೆಲಸ ಮಾಡಬೇಕು. ಕೆರೆಗಳಲ್ಲಿರುವ ಬಿದಿರು ತೆಗೆಯಬೇಕು. ಅರಣ್ಯ ಇಲಾಖೆ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕೆರೆಗೆ ಹುರಿದು ಬರುವ ನೀರಿನ ಕಾಲುವೆಗಳನ್ನು ಸ್ವಚ್ಚಗೊಳಿಸಿ ನೀರು ಸರಾಗವಾಗಿ ಹರಿಯಲು ಅನುಕೂಲವಾದರೆ ಮಳೆಗಾಲದಲ್ಲಿ ನೀರು ತುಂಬಲಿದೆ. ಎಲ್ಲಾ ಕೆರೆಗಳ ಸುತ್ತಲೂ ಬೌಂಡರಿ ಫಿಕ್ಸ್ ಮಾಡಿ ಸುತ್ತಲು ಟ್ರೆಂಚ್ ಅಗೆದು, ಹಣ್ಣಿನ ಗಿಡಗಳನ್ನು ಹಾಕಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ, ಜಿ.ಪಂ ಉಪಕಾರ್ಯದರ್ಶಿ ಶಿವಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಕಲಾವತಿ, ತೋಟಗಾರಿಕೆ, ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
    3
    ಬರ ವೀಕ್ಷಣೆ ನಡೆಸಿದ ಸಚಿವ ಕೆ.ಹೆಚ್ ಮುನಿಯಪ್ಪ; ಬೆಳೆ ವಿಮೆ ಮಾಡಿಸಲು ರೈತರಲ್ಲಿ ಮನವಿ
ಬೆಂಗಳೂರು ಗ್ರಾಮಾಂತರ ಜಿಲ್ಲೆ: ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕುಂದಾಣ ಹೋಬಳಿಯ ಆಲೂರು ದುದ್ದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀರಸಂದ್ರ ಗ್ರಾಮದಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿ ರಾಗಿ, ಜೋಳ ಬೆಳೆ ಸೇರಿದಂತೆ ವಿವಿಧ ಬೆಳೆಗಳನ್ನು ವೀಕ್ಷಿಸಿ ರೈತರಿಂದ, ಅಧಿಕಾರಿಗಳಿಂದ ಮಾಹಿತಿ ಪಡೆದರು.
ಬಳಿಕ ಮಾತನಾಡಿ ಜೂನ್, ಜುಲೈ ನಲ್ಲಿ ಕಡಿಮೆ ಮಳೆ ಆಗಿದೆ. ಜೂನ್ 1 ರಿಂದ ಆಗಸ್ಟ್ 4 ವರೆಗೆ 174.2 ಮಳೆ ಆಗಬೇಕಿತ್ತು, 116.3% ಮಳೆ ಮಾತ್ರ ಆಗಿದ್ದು ಶೇ.33% ರಷ್ಟು ಮಳೆ ಕೊರತೆ ಉಂಟಾಗಿದೆ. ಆಗಸ್ಟ್ 15 ರೊಳಗೆ ಮಳೆ ಬರದಿದ್ದಲ್ಲಿ ಬಿತ್ತನೆ ಆಗಿರುವ ಬೆಳೆಗಳಿಗೆ ತೊಂದರೆ ಆಗುತ್ತದೆ. ಸಾಧ್ಯವಾದಷ್ಟು ಶಾರ್ಟ್ ಟರ್ಮ್ ರಾಗಿ ಬೆಳೆ ಆಯ್ಕೆ ಮಾಡಿಕೊಳ್ಳಿ ಬೇಗ ಬೆಳೆ ಬರುತ್ತದೆ ಎಂದು ರೈತರಿಗೆ ಸಲಹೆ ನೀಡಿದರು.
*ತಪ್ಪದೇ ಬೆಳೆ ವಿಮೆ ಮಾಡಿಸಿ* ಮಳೆ ಅಭಾವದಿಂದ ಬೆಳೆ ನಷ್ಟ ಆಗುವ ಸಂಭವವಿದೆ. ಹಾಗಾಗಿ ತಪ್ಪದೇ ಎಲ್ಲಾ ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿ ಇದರಿಂದ ನಷ್ಟ ಪರಿಹಾರ ಸರಿದೂಗಲಿದೆ ಎಂದರು. ಈಗಾಗಲೇ ಹಲವಾರು ರೈತರು ರಾಗಿ, ಜೋಳ ಬಿತ್ತನೆ ಮಾಡಿದ್ದಾರೆ. ಮಳೆ ಕೊರತೆಯಿಂದ ಸರಿಯಾಗಿ ಹುಟ್ಟಿಲ್ಲ. ಆಗಸ್ಟ್ 30 ವರೆಗೆ ಕಾದು ನೋಡಬೇಕು ಮಳೆ ಬರದಿದಲ್ಲಿ ಸರ್ಕಾರ ಪರಿಹಾರದ ಬಗ್ಗೆ ಚಿಂತನೆ ಮಾಡಲಿದೆ ಎಂದು ಸಚಿವರು ಹೇಳಿದರು.
ಜಾನುವಾರುಗಳಿಗೆ ಮೇವಿಗೆ ಸಂಬಂಧಿಸಿದಂತೆ ರೈತರಿಗೆ ಮೇವು ಬಿತ್ತನೆ ಬೀಜ ಪೂರೈಕೆ ಮಾಡಿ. ಮೇವು ಕಿಟ್ ಗಳನ್ನು, ಸೈಲೇಜ್ ಆಹಾರದ ಬಗ್ಗೆ ರೈತರಿಗೆ ಅರಿವು ಮೂಡಿಸಿ, ಪ್ರಸ್ತುತ ಸನ್ನಿವೇಶದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ನೋಡಿಕೊಳ್ಳಿ ಎಂದು ಪಶುಸಂಗೋಪನೆ ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಆಲೂರುದುದ್ದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬನ್ನಿಮಂಗಲ ಕೆರೆಯಲ್ಲಿ ವಾಸ್ತವ ಸ್ಥಿತಿ ಪರಿಶೀಲನೆ ನಡೆಸಿದರು. ಕೆರೆಗಳ ಹೂಳೆತ್ತುವ ಕೆಲಸ ಮೊದಲು ಆಗಬೇಕಿದೆ. ನಂತರ ನೀರು ತುಂಬಿಸುವ ಕೆಲಸ ಮಾಡಬೇಕು. ಕೆರೆಗಳಲ್ಲಿರುವ ಬಿದಿರು ತೆಗೆಯಬೇಕು. ಅರಣ್ಯ ಇಲಾಖೆ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.  ಕೆರೆಗೆ ಹುರಿದು ಬರುವ ನೀರಿನ ಕಾಲುವೆಗಳನ್ನು ಸ್ವಚ್ಚಗೊಳಿಸಿ ನೀರು ಸರಾಗವಾಗಿ ಹರಿಯಲು ಅನುಕೂಲವಾದರೆ ಮಳೆಗಾಲದಲ್ಲಿ ನೀರು ತುಂಬಲಿದೆ. ಎಲ್ಲಾ ಕೆರೆಗಳ ಸುತ್ತಲೂ ಬೌಂಡರಿ ಫಿಕ್ಸ್ ಮಾಡಿ ಸುತ್ತಲು ಟ್ರೆಂಚ್ ಅಗೆದು, ಹಣ್ಣಿನ ಗಿಡಗಳನ್ನು ಹಾಕಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ, ಜಿ.ಪಂ ಉಪಕಾರ್ಯದರ್ಶಿ ಶಿವಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಕಲಾವತಿ, ತೋಟಗಾರಿಕೆ, ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
    user_Lavanya
    Lavanya
    Local News Reporter ಪಾವಗಡ, ತುಮಕೂರು, ಕರ್ನಾಟಕ•
    15 min ago
  • ಚಿಕ್ಕನಾಯಕನಹಳ್ಳಿಯ 7 ದಿನಗಳ ಹೇಮಾವತಿ ನೀರಾವರಿ ಹೋರಾಟ ತಾತ್ಕಾಲಿಕ ಅಂತ್ಯ – ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೋರಾಟಗಾರರ ನಿರ್ಧಾರ ಚಿಕ್ಕನಾಯಕನಹಳ್ಳಿಯ 7 ದಿನಗಳ ಹೇಮಾವತಿ ನೀರಾವರಿ ಹೋರಾಟ ತಾತ್ಕಾಲಿಕ ಅಂತ್ಯ – ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೋರಾಟಗಾರರ ನಿರ್ಧಾರ --------------------------- ​ಚಿಕ್ಕನಾಯಕನಹಳ್ಳಿ: ತಾಲೂಕಿಗೆ ಹೇಮಾವತಿ ನೀರು ಹರಿಸುವ ಕಾಮಗಾರಿ ವಿಳಂಬ ಖಂಡಿಸಿ ಹಾಗೂ ದಬ್ಬೇಘಟ್ಟದವರೆಗಿನ ಕಾಮಗಾರಿಯನ್ನು ತಕ್ಷಣವೇ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ಕಳೆದ 7 ದಿನಗಳಿಂದ ನಿರಂತರವಾಗಿ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ನೀರಾವರಿ ಹೋರಾಟ ಸಮಿತಿ ಇಂದು ತಾತ್ಕಾಲಿಕವಾಗಿ ಹಿಂಪಡೆದಿದೆ. ​ಕಳೆದ ಜುಲೈ 30 ರಿಂದ ಪ್ರಾರಂಭಗೊಂಡಿದ್ದ ಈ ಹೋರಾಟವು ಇಂದು (ಏಳನೇ ದಿನ) ಸುಖಾಂತ್ಯ ಕಂಡಿದೆ. ಗ್ಯಾರೇಹಳ್ಳಿಯಿಂದ ದಬ್ಬೇಘಟ್ಟದವರೆಗಿನ ನೀರಾವರಿ ಯೋಜನೆಯ ಕಾಮಗಾರಿಯು ಸಂಪೂರ್ಣವಾಗಿ (ಝೀರೋದಿಂದ ದಬ್ಬೇಘಟ್ಟದವರೆಗೆ) ಮುಕ್ತಾಯಗೊಂಡಿರುವುದನ್ನು ಖಾತರಿಪಡಿಸಿಕೊಂಡ ನಂತರ, ಹೋರಾಟಗಾರರು ತಮ್ಮ ಸತ್ಯಾಗ್ರಹವನ್ನು ಅಂತ್ಯಗೊಳಿಸುವುದಾಗಿ ಘೋಷಿಸಿದರು. ಪ್ರತಿಭಟನೆ ಆರಂಭವಾಗುವ ಮೊದಲು ಕಾಮಗಾರಿ ಅತ್ಯಂತ ಮಂದಗತಿಯಲ್ಲಿ ಸಾಗುತ್ತಿತ್ತು. ದಿನಕ್ಕೆ ಕೇವಲ 6 ರಿಂದ 7 ಗಂಟೆಗಳ ಕಾಲ ಕೆಲಸ ನಡೆಯುತ್ತಿದ್ದು, ಒಂದೇ ಒಂದು ಬ್ಲಾಸ್ಟಿಂಗ್ ಹಾಗೂ ಡಿಗ್ಗಿಂಗ್ ಮೆಷಿನ್ ಬಳಸಲಾಗುತ್ತಿತ್ತು. ಆದರೆ, 30 ನೇ ತಾರೀಖಿನಿಂದ ನೀರಾವರಿ ಹೋರಾಟ ಸಮಿತಿಯು ಧರಣಿ ಕುಳಿತ ತಕ್ಷಣವೇ ಆಡಳಿತ ಯಂತ್ರ ಎಚ್ಚೆತ್ತುಕೊಂಡಿತು. ​ಅಧಿಕಾರಿಗಳು ಯಂತ್ರೋಪಕರಣಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿ, ಸತತ 24 ಗಂಟೆಗಳ ಕಾಲ ಹಗಲು-ರಾತ್ರಿ ಕೆಲಸ ಮಾಡಿಸುವ ಮೂಲಕ ಗ್ಯಾರೇಹಳ್ಳಿಯಿಂದ ದಬ್ಬೇಘಟ್ಟದವರೆಗಿನ ಕಾಮಗಾರಿಯನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಿದ್ದಾರೆ. "ನಾವು ಅಜೆಂಡಾ ಇಟ್ಟುಕೊಂಡು ಬಂದಿದ್ದೆವು; ಕಾಮಗಾರಿ ಮುಗಿಯುವವರೆಗೆ ಜಾಗದಿಂದ ಕದಲುವುದಿಲ್ಲ ಎಂದಿದ್ದೆವು. ಅದರಂತೆ ಇವತ್ತು ಕೆಲಸ ಮುಗಿದಿರುವುದರಿಂದ ಪ್ರತಿಭಟನೆ ಮುಕ್ತಾಯಗೊಳಿಸುತ್ತಿದ್ದೇವೆ" ಎಂದು ಹೋರಾಟಗಾರರು ತಿಳಿಸಿದರು. ​ ​ಸ್ಥಳಕ್ಕೆ ಭೇಟಿ ನೀಡಿದ ಶಾಸಕರು, ತಹಶೀಲ್ದಾರ್, ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್‌ಗಳು ಹಾಗೂ ಜನಪ್ರತಿನಿಧಿಗಳು ಹೋರಾಟಗಾರರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಮುಖ್ಯ ನಾಲಾ ಕಾಲುವೆಯಲ್ಲಿ ಗ್ಯಾರೇಹಳ್ಳಿಯವರೆಗೆ ಇರುವ ಹೂಳನ್ನು (ಸ್ಲಶ್) ಮುಂದಿನ 5 ರಿಂದ 6 ದಿನಗಳ ಒಳಗಾಗಿ ಸಂಪೂರ್ಣವಾಗಿ ತೆರವುಗೊಳಿಸಿ ನೀರು ಹರಿಯಲು ಅನುವು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು. ​ಪ್ರತಿಯೊಂದು ಹಂತದ ಕಾಮಗಾರಿಯ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಪ್ರತಿ ಸೋಮವಾರ ಸಂಬಂಧಪಟ್ಟ ಮೂರೂ ಯೋಜನೆಗಳ ಅಧಿಕಾರಿಗಳು ಸಭೆ ನಡೆಸಿ, ವರ್ಕ್ ಶೆಡ್ಯೂಲ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಸುಧಾರಣೆಗಳ ಹಿನ್ನೆಲೆಯಲ್ಲಿ ಹೋರಾಟಗಾರರು ತಾತ್ಕಾಲಿಕವಾಗಿ ತಮ್ಮ ಧರಣಿಯನ್ನು ವಾಪಸ್ ಪಡೆದುಕೊಂಡಿದ್ದಾರೆ. ​ "ಅಧಿಕಾರಿಗಳು ಹಾಗೂ ಶಾಸಕರ ಭರವಸೆಯನ್ನು ನಂಬಿ ತಾತ್ಕಾಲಿಕವಾಗಿ ಹೋರಾಟ ಹಿಂಪಡೆದಿದ್ದೇವೆ. ಒಂದು ವೇಳೆ ಕೊಟ್ಟ ಮಾತಿನಂತೆ ಕೆಲಸ ಮುಗಿಸದೆ ನಮಗೆ ಯಾಮಾರಿಸಿದರೆ, ಮುಂದಿನ ದಿನಗಳಲ್ಲಿ ಕುರಿ, ಮೇಕೆಗಳೊಂದಿಗೆ ಬೀದಿಗೆ ಇಳಿದು ಎರಡರಷ್ಟು ಉಗ್ರವಾದ ಹೋರಾಟ ರೂಪಿಸಲಾಗುವುದು" ಎಂದು ಎಚ್ಚರಿಸಿದ್ದಾರೆ. ​ವಿಜಯದ ಸಂಕೇತವಾಗಿ ಹೋರಾಟಗಾರರು ಮಹಾತ್ಮ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರಿಗೆ ಜೈಕಾರ ಕೂಗಿದರು. ಈ 7 ದಿನಗಳ ಅಹೋರಾತ್ರಿ ಹೋರಾಟಕ್ಕೆ ಸಾಥ್ ನೀಡಿದ ವಿವಿಧ ಸಂಘಟನೆಗಳು, ಪೋಲಿಸ್ ಇಲಾಖೆ ಹಾಗೂ ಮಾಧ್ಯಮ ಮಿತ್ರರಿಗೆ ಧನ್ಯವಾದಗಳನ್ನು ಅರ್ಪಿಸಿದರು.
    1
    ಚಿಕ್ಕನಾಯಕನಹಳ್ಳಿಯ 7 ದಿನಗಳ ಹೇಮಾವತಿ ನೀರಾವರಿ ಹೋರಾಟ ತಾತ್ಕಾಲಿಕ ಅಂತ್ಯ – ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೋರಾಟಗಾರರ ನಿರ್ಧಾರ
ಚಿಕ್ಕನಾಯಕನಹಳ್ಳಿಯ 7 ದಿನಗಳ ಹೇಮಾವತಿ ನೀರಾವರಿ ಹೋರಾಟ ತಾತ್ಕಾಲಿಕ ಅಂತ್ಯ – ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೋರಾಟಗಾರರ ನಿರ್ಧಾರ
---------------------------
​ಚಿಕ್ಕನಾಯಕನಹಳ್ಳಿ: ತಾಲೂಕಿಗೆ ಹೇಮಾವತಿ ನೀರು ಹರಿಸುವ ಕಾಮಗಾರಿ ವಿಳಂಬ ಖಂಡಿಸಿ ಹಾಗೂ ದಬ್ಬೇಘಟ್ಟದವರೆಗಿನ ಕಾಮಗಾರಿಯನ್ನು ತಕ್ಷಣವೇ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ಕಳೆದ 7 ದಿನಗಳಿಂದ ನಿರಂತರವಾಗಿ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ನೀರಾವರಿ ಹೋರಾಟ ಸಮಿತಿ ಇಂದು ತಾತ್ಕಾಲಿಕವಾಗಿ ಹಿಂಪಡೆದಿದೆ.
​ಕಳೆದ ಜುಲೈ 30 ರಿಂದ ಪ್ರಾರಂಭಗೊಂಡಿದ್ದ ಈ ಹೋರಾಟವು ಇಂದು (ಏಳನೇ ದಿನ) ಸುಖಾಂತ್ಯ ಕಂಡಿದೆ. ಗ್ಯಾರೇಹಳ್ಳಿಯಿಂದ ದಬ್ಬೇಘಟ್ಟದವರೆಗಿನ ನೀರಾವರಿ ಯೋಜನೆಯ ಕಾಮಗಾರಿಯು ಸಂಪೂರ್ಣವಾಗಿ (ಝೀರೋದಿಂದ ದಬ್ಬೇಘಟ್ಟದವರೆಗೆ) ಮುಕ್ತಾಯಗೊಂಡಿರುವುದನ್ನು ಖಾತರಿಪಡಿಸಿಕೊಂಡ ನಂತರ, ಹೋರಾಟಗಾರರು ತಮ್ಮ ಸತ್ಯಾಗ್ರಹವನ್ನು ಅಂತ್ಯಗೊಳಿಸುವುದಾಗಿ ಘೋಷಿಸಿದರು.
ಪ್ರತಿಭಟನೆ ಆರಂಭವಾಗುವ ಮೊದಲು ಕಾಮಗಾರಿ ಅತ್ಯಂತ ಮಂದಗತಿಯಲ್ಲಿ ಸಾಗುತ್ತಿತ್ತು. ದಿನಕ್ಕೆ ಕೇವಲ 6 ರಿಂದ 7 ಗಂಟೆಗಳ ಕಾಲ ಕೆಲಸ ನಡೆಯುತ್ತಿದ್ದು, ಒಂದೇ ಒಂದು ಬ್ಲಾಸ್ಟಿಂಗ್ ಹಾಗೂ ಡಿಗ್ಗಿಂಗ್ ಮೆಷಿನ್ ಬಳಸಲಾಗುತ್ತಿತ್ತು. ಆದರೆ, 30 ನೇ ತಾರೀಖಿನಿಂದ ನೀರಾವರಿ ಹೋರಾಟ ಸಮಿತಿಯು ಧರಣಿ ಕುಳಿತ ತಕ್ಷಣವೇ ಆಡಳಿತ ಯಂತ್ರ ಎಚ್ಚೆತ್ತುಕೊಂಡಿತು.
​ಅಧಿಕಾರಿಗಳು ಯಂತ್ರೋಪಕರಣಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿ, ಸತತ 24 ಗಂಟೆಗಳ ಕಾಲ ಹಗಲು-ರಾತ್ರಿ ಕೆಲಸ ಮಾಡಿಸುವ ಮೂಲಕ ಗ್ಯಾರೇಹಳ್ಳಿಯಿಂದ ದಬ್ಬೇಘಟ್ಟದವರೆಗಿನ ಕಾಮಗಾರಿಯನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಿದ್ದಾರೆ.
"ನಾವು ಅಜೆಂಡಾ ಇಟ್ಟುಕೊಂಡು ಬಂದಿದ್ದೆವು; ಕಾಮಗಾರಿ ಮುಗಿಯುವವರೆಗೆ ಜಾಗದಿಂದ ಕದಲುವುದಿಲ್ಲ ಎಂದಿದ್ದೆವು. ಅದರಂತೆ ಇವತ್ತು ಕೆಲಸ ಮುಗಿದಿರುವುದರಿಂದ ಪ್ರತಿಭಟನೆ ಮುಕ್ತಾಯಗೊಳಿಸುತ್ತಿದ್ದೇವೆ" ಎಂದು ಹೋರಾಟಗಾರರು ತಿಳಿಸಿದರು.
​            ​ಸ್ಥಳಕ್ಕೆ ಭೇಟಿ ನೀಡಿದ ಶಾಸಕರು, ತಹಶೀಲ್ದಾರ್, ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್‌ಗಳು ಹಾಗೂ ಜನಪ್ರತಿನಿಧಿಗಳು ಹೋರಾಟಗಾರರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಮುಖ್ಯ ನಾಲಾ ಕಾಲುವೆಯಲ್ಲಿ  ಗ್ಯಾರೇಹಳ್ಳಿಯವರೆಗೆ ಇರುವ ಹೂಳನ್ನು (ಸ್ಲಶ್) ಮುಂದಿನ 5 ರಿಂದ 6 ದಿನಗಳ ಒಳಗಾಗಿ ಸಂಪೂರ್ಣವಾಗಿ ತೆರವುಗೊಳಿಸಿ ನೀರು ಹರಿಯಲು ಅನುವು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
​ಪ್ರತಿಯೊಂದು ಹಂತದ ಕಾಮಗಾರಿಯ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಪ್ರತಿ ಸೋಮವಾರ ಸಂಬಂಧಪಟ್ಟ ಮೂರೂ ಯೋಜನೆಗಳ ಅಧಿಕಾರಿಗಳು ಸಭೆ ನಡೆಸಿ, ವರ್ಕ್ ಶೆಡ್ಯೂಲ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಸುಧಾರಣೆಗಳ ಹಿನ್ನೆಲೆಯಲ್ಲಿ ಹೋರಾಟಗಾರರು ತಾತ್ಕಾಲಿಕವಾಗಿ ತಮ್ಮ ಧರಣಿಯನ್ನು ವಾಪಸ್ ಪಡೆದುಕೊಂಡಿದ್ದಾರೆ.
​             "ಅಧಿಕಾರಿಗಳು ಹಾಗೂ ಶಾಸಕರ ಭರವಸೆಯನ್ನು ನಂಬಿ ತಾತ್ಕಾಲಿಕವಾಗಿ ಹೋರಾಟ ಹಿಂಪಡೆದಿದ್ದೇವೆ. ಒಂದು ವೇಳೆ ಕೊಟ್ಟ ಮಾತಿನಂತೆ ಕೆಲಸ ಮುಗಿಸದೆ ನಮಗೆ ಯಾಮಾರಿಸಿದರೆ, ಮುಂದಿನ ದಿನಗಳಲ್ಲಿ ಕುರಿ, ಮೇಕೆಗಳೊಂದಿಗೆ ಬೀದಿಗೆ ಇಳಿದು ಎರಡರಷ್ಟು ಉಗ್ರವಾದ ಹೋರಾಟ ರೂಪಿಸಲಾಗುವುದು" ಎಂದು ಎಚ್ಚರಿಸಿದ್ದಾರೆ.
​ವಿಜಯದ ಸಂಕೇತವಾಗಿ ಹೋರಾಟಗಾರರು ಮಹಾತ್ಮ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರಿಗೆ ಜೈಕಾರ ಕೂಗಿದರು. ಈ 7 ದಿನಗಳ ಅಹೋರಾತ್ರಿ ಹೋರಾಟಕ್ಕೆ ಸಾಥ್ ನೀಡಿದ ವಿವಿಧ ಸಂಘಟನೆಗಳು, ಪೋಲಿಸ್ ಇಲಾಖೆ ಹಾಗೂ ಮಾಧ್ಯಮ ಮಿತ್ರರಿಗೆ ಧನ್ಯವಾದಗಳನ್ನು ಅರ್ಪಿಸಿದರು.
    user_Huliyarkiran
    Huliyarkiran
    ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
    30 min ago
  • ಸಚಿವ ಸ್ಥಾನ ಕೈತಪ್ಪಿ ಮುನಿಸಿಕೊಂಡ ಶಾಸಕರ ಬಗ್ಗೆ ಟಿ ರಘೂಮೂರ್ತಿ ಸ್ಪಷ್ಟನೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಶಾಸಕರ ಅಸಮಾಧಾನ ಕುರಿತು ಟಿ ರಘೂಮೂರ್ತಿ ಪ್ರತಿಕ್ರಿಯೆ ನೀಡಿ ಮಾತನಾಡಿದ್ದಾರೆ. ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿ ಗ್ರಾಮದಲ್ಲಿ ಸಚಿವ ಟಿ ರಘೂಮೂರ್ತಿ ಮಾತನಾಡಿದ್ದು ರಾಜ್ಯದ 136 ಶಾಸಕರಲ್ಲಿ 34 ಜನರಿಗೆ ಅವಕಾಶ ಕೊಟ್ಟಿದ್ದಾರೆ‌. ಸಚಿವ ಸ್ಥಾನ ಕೈತಪ್ಪಿದಲ್ಲಿ ಅಸಮಾಧಾನ ಬರುವುದು ಸಹಜ ಹಾಗಾಗಿ ಅವರ ಮನವೊಲುಸುವ ಕೆಲಸವನ್ನ ವರಿಷ್ಠರು ಹಾಗೂ ರಾಜ್ಯದ ನಾಯಕರು ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡುತ್ತಾರೆ ಎಂದು ಟಿ ರಘೂಮೂರ್ತಿ ಪ್ರತಿಕ್ರಿಯೆ ನೀಡಿದ್ದಾರೆ
    1
    ಸಚಿವ ಸ್ಥಾನ ಕೈತಪ್ಪಿ ಮುನಿಸಿಕೊಂಡ ಶಾಸಕರ ಬಗ್ಗೆ ಟಿ ರಘೂಮೂರ್ತಿ ಸ್ಪಷ್ಟನೆ
ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಶಾಸಕರ ಅಸಮಾಧಾನ ಕುರಿತು ಟಿ ರಘೂಮೂರ್ತಿ ಪ್ರತಿಕ್ರಿಯೆ ನೀಡಿ ಮಾತನಾಡಿದ್ದಾರೆ. ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿ ಗ್ರಾಮದಲ್ಲಿ ಸಚಿವ ಟಿ ರಘೂಮೂರ್ತಿ ಮಾತನಾಡಿದ್ದು ರಾಜ್ಯದ 136 ಶಾಸಕರಲ್ಲಿ 34 ಜನರಿಗೆ ಅವಕಾಶ ಕೊಟ್ಟಿದ್ದಾರೆ‌. ಸಚಿವ ಸ್ಥಾನ ಕೈತಪ್ಪಿದಲ್ಲಿ ಅಸಮಾಧಾನ ಬರುವುದು ಸಹಜ ಹಾಗಾಗಿ ಅವರ ಮನವೊಲುಸುವ ಕೆಲಸವನ್ನ ವರಿಷ್ಠರು ಹಾಗೂ ರಾಜ್ಯದ ನಾಯಕರು ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡುತ್ತಾರೆ ಎಂದು ಟಿ ರಘೂಮೂರ್ತಿ ಪ್ರತಿಕ್ರಿಯೆ ನೀಡಿದ್ದಾರೆ
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    2 hrs ago
  • ಮಾಡದಕರೆ ಎ ಕೆ ಹಟ್ಟಿ ಅಲ್ಲಿ ರಸ್ತೆಯಲ್ಲಿ ಇರುವ ಗುಂಡಿಯನ್ನು ಮುಚ್ಚಿ ಮಾಡದಕೆರೆ ಎ ಕೆ ಹಟ್ಟಿ ಅಲ್ಲಿ ರಸ್ತೆಯಲ್ಲಿ ದೊಡ್ಡ ಗುಂಡಿ ಇರುವ ಕಾರಣದಿಂದ ವಾಹನ ಚಾಲಕರಿಗೆ ಪರದಾಡುವತಿಂದೆ ದಯವಿಟ್ಟು ಈ ಗುಂಡಿಯನ್ನು ಮುಚ್ಚಿ ರಾತ್ರಿ ವೇಳೆ ಇಲ್ಲಿ ತುಂಬಾ ಅಪಘಾತ ಆಗಿವೆ ಅದರಿಂದ ಈ ಗುಂಡಿಯನ್ನು ಮುಚ್ಚಿ ಎಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ
    2
    ಮಾಡದಕರೆ ಎ ಕೆ ಹಟ್ಟಿ ಅಲ್ಲಿ ರಸ್ತೆಯಲ್ಲಿ ಇರುವ ಗುಂಡಿಯನ್ನು ಮುಚ್ಚಿ 
ಮಾಡದಕೆರೆ ಎ ಕೆ ಹಟ್ಟಿ ಅಲ್ಲಿ ರಸ್ತೆಯಲ್ಲಿ ದೊಡ್ಡ ಗುಂಡಿ ಇರುವ ಕಾರಣದಿಂದ ವಾಹನ ಚಾಲಕರಿಗೆ ಪರದಾಡುವತಿಂದೆ ದಯವಿಟ್ಟು ಈ ಗುಂಡಿಯನ್ನು ಮುಚ್ಚಿ  ರಾತ್ರಿ ವೇಳೆ ಇಲ್ಲಿ ತುಂಬಾ ಅಪಘಾತ ಆಗಿವೆ ಅದರಿಂದ ಈ ಗುಂಡಿಯನ್ನು ಮುಚ್ಚಿ ಎಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ
    user_Devaraj H M
    Devaraj H M
    ಹೊಸದುರ್ಗ, ಚಿತ್ರದುರ್ಗ, ಕರ್ನಾಟಕ•
    11 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.