Shuru
Apke Nagar Ki App…
ಚಳ್ಳಕೆರ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ಗೆಲುವು ಸಾಧಿಸಿದ ಟಿ. ರಘುಮೂರ್ತಿಗೆ ಒಲಿದ ಮಂತ್ರಿ ಸ್ಥಾನ. ಚಳ್ಳಕೆರೆ ವಿಧಾನಸಭ ಕ್ಷೇತ್ರದಲ್ಲಿ ಮೂರು ಬಾರಿ ಗೆದ್ದು ಕ್ಷೇತ್ರವನ್ನೇ ಅಭಿವೃದ್ಧಿ ಪಥದತ್ತ ಕೊಂಡೈದಿರುವ ಟಿ ರಘುಮೂರ್ತಿಗೆ ಸಚಿವ ಸ್ಥಾನದ ಭಾಗ್ಯ ದೊರೆತಿದೆ.
Suresh Belagere
ಚಳ್ಳಕೆರ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ಗೆಲುವು ಸಾಧಿಸಿದ ಟಿ. ರಘುಮೂರ್ತಿಗೆ ಒಲಿದ ಮಂತ್ರಿ ಸ್ಥಾನ. ಚಳ್ಳಕೆರೆ ವಿಧಾನಸಭ ಕ್ಷೇತ್ರದಲ್ಲಿ ಮೂರು ಬಾರಿ ಗೆದ್ದು ಕ್ಷೇತ್ರವನ್ನೇ ಅಭಿವೃದ್ಧಿ ಪಥದತ್ತ ಕೊಂಡೈದಿರುವ ಟಿ ರಘುಮೂರ್ತಿಗೆ ಸಚಿವ ಸ್ಥಾನದ ಭಾಗ್ಯ ದೊರೆತಿದೆ.
More news from ಕರ್ನಾಟಕ and nearby areas
- ಚಳ್ಳಕೆರೆ ನಗರದಲ್ಲಿ ‘ಹೋಳಿಗೆ ಅಮ್ಮ’ ಹಬ್ಬ ಶ್ರದ್ಧಾ–ಭಕ್ತಿಯಿಂದ ಆಚರಣೆ ನಗರದ ಗ್ರಾಮೀಣ ಭಾಗದಲ್ಲಿ ಸಾಂಕ್ರಾಮಿಕ ರೋಗ ರುಜೀನಗಳ ಹರಡದಿರಲಿ ಹಾಗೂ ಊರಿನ ಒಳಿತಿಗಾಗಿ ಪ್ರಾರ್ಥಿಸಿ ಆಷಾಢ ಮಾಸದ ಮಂಗಳವಾರ ಚಳ್ಳಕೆರೆ ನಗರದಲ್ಲಿ ‘ಹೋಳಿಗೆ ಅಮ್ಮ’ ಹಬ್ಬವನ್ನು ಭಕ್ತರು ಶ್ರದ್ಧಾ–ಭಕ್ತಿಯಿಂದ ಆಚರಿಸಿದರು.. ಯಾವುದೇ ಜಾತಿ ಭೇದವಿಲ್ಲದೆ ಹೋಳಿಗೆ ಅಮ್ಮನನ್ನು ಶತಮಾನಗಳಿಂದಲೂ ಬುಡಕಟ್ಟು ಸಂಪ್ರದಾಯ, ಸಂಸ್ಕೃತಿಯ ನೆಲದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ ಭಾಗದಲ್ಲಿ ಅಷ್ಟೇ ಅಲ್ಲದೆ ನಗರದಲ್ಲೂ ಸಹ ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಲಾಗುತ್ತದೆ. . ಪ್ರತಿಯೊಂದು ಹಬ್ಬ, ಆಚರಣೆಗೆ ಅದರದೇ ಆದ ನಂಬಿಕೆ ಇದೆ. ಸಂಪ್ರದಾಯ ಹಾಗೂ ಸಂಸ್ಕೃತಿಯ ನೆಲೆಯಿದೆ. ಅದರಲ್ಲಿ ಹೋಳಿಗೆ ಅಮ್ಮ ಹಬ್ಬ ಕೂಡ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ಮಂಗಳವಾರ ಬೆಳಿಗ್ಗೆಯಿಂದಲೇ ನಗರದಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು ಚಳ್ಳಕೆರೆ ನಗರದ ಅಂಬೇಡ್ಕರ್ ನಗರ ಗಾಂಧಿನಗರ ಸೋಮುಗುದ್ದು ರಸ್ತೆ ತ್ಯಾಗರಾಜನಗರ ಹಳೆ ಟೌನ್ ಹೌಸಿಂಗ್ ಬೋರ್ಡ.ಸೇರಿದಂತೆ ನಗರದಲ್ಲಿ ಹೋಳಿಗೆ ತಯಾರಿಸಿ ಅದನ್ನು ಅರಿಸಿಣ, ಕುಂಕುಮ, ಬಳೆ, ಬೇವಿನ ಸೊಪ್ಪು, ತೆಂಗಿನಕಾಯಿ ಹೋಳುಗಳನ್ನು ಮೊರದಲ್ಲಿ ಇಟ್ಟು ಮನೆಯಲ್ಲಿ ಪೂಜೆ ಸಲ್ಲಿಸಿದರು. ಬಳಿಕ ನಿಗದಿಪಡಿಸಿದ ಮಾರಮ್ಮನ ದೇವಸ್ಥಾನ ಎಲ್ಲಮ್ಮನ. ದೇವಸ್ಥಾನ. ಕಡಿಮೆ ಮಾರಮ್ಮನ ದೇವಸ್ಥಾನ . ಸುಂಕುದ್ ರಸ್ತೆಯ ಮಾರಮ್ಮನ ದೇವಸ್ಥಾನ ಗಳಲ್ಲಿ ಅವುಗಳನ್ನು ಇಟ್ಟು ಸಾಂಕ್ರಾಮಿಕ ರೋಗ ರಜಿನಾ ಬಾರದಂತೆ ಉತ್ತಮ ಮಳೆ ಬೆಳೆಯಾಗಲಿ ಚಿಕ್ಕ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಮಕ್ಕಳನ್ನು ಕಾಪಾಡು ತಾಯಿ ಎಂದು ನಮಿಸಿದರು. ಇನ್ನು ಎಲ್ಲರೂ ಪ್ರಸಾದವನ್ನು ತಾಯಿಗೆ ಅರ್ಪಿಸಿದ ನಂತರ ಒಂದು ಬಿದುರಿನ ಬುಟ್ಟಿಯಲ್ಲಿ ಹೋಳಿಗೆ ಮತ್ತೊಂದು ಬುಟ್ಟಿಯಲ್ಲಿ ಅನ್ನ ಸಾಂಬಾರು ಹಾಗೂ ತೆಂಗಿನಕಾಯಿ ಬಾಳೆಹಣ್ಣು ತುಂಬಿಕೊಂಡು ಊರ ಹೊರಗಿನ ಹಸಿರು ಮರದ ಕೆಳಗೆ ಇಟ್ಟುಮನೆಯಲ್ಲಿರುವ ಮಕ್ಕಳಿಗೆ ಅಮ್ಮ, ಧಡಾರ, ಸಿಡುಬು ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡದಂತೆ, ದುಷ್ಟಶಕ್ತಿ ಊರೊಳಗೆ ಬರದಂತೆ ಹಾಗೂ ಕಾಲಕಾಲಕ್ಕೆ ಮಳೆಯಾಗಿ ಊರು ಸಮೃದ್ಧವಾಗಲಿ ಎಂದು ಬೇಡಿಕೊಳ್ಳಾಯಿತು. ಈ ಹೋಳಿಗಮ್ಮ ಹಬ್ಬದಲ್ಲಿ ದಿನಕರ ಹಾಗೂ ಅಂಬೇಡ್ಕರ್ ನಗರದ ಯುವಕರು ವಾಲಗ ವಾಧ್ಯಕ್ಕೆ.ತಕ್ಕ ಹೆಜ್ಜೆ ಹಾಕಿದ್ದರು.1
- ಬಂಗಾರಕ್ಕನಹಳ್ಳಿ ಗಡಿ ದಾಟುವ 'ಹೋಳಿಗೆ ಅಮ್ಮ', ಆಷಾಢದಲ್ಲಿ ಆಚರಿಸಲಾಗುತ್ತೆ ಈ ವಿಶಿಷ್ಟ ಹಬ್ಬ..! ಚಿತ್ರದುರ್ಗ: ಆಷಾಢ ಮಾಸ ಬಂದರೆ ಮಧ್ಯ ಕರ್ನಾಟಕದ ಗ್ರಾಮೀಣ ಭಾಗದಲ್ಲಿ 'ಹೋಳಿಗೆ ಅಮ್ಮ' ಹಬ್ಬ ಆಚರಿಸುವ ಸಂಭ್ರಮ ಮನೆಮಾಡುತ್ತದೆ. ಜೇಷ್ಠ ಹಾಗೂ ಆಷಾಢ ಮಾಸ ರೈತಾಪಿ ಜನರಿಗೆ ಬಿತ್ತುವ ಕಾಲ. ಈ ಮಾಸದ ಮಂಗಳವಾರ ಅಥವಾ ಶುಕ್ರವಾರ ಅನುಕೂಲವಾದ ಯಾವುದಾದರೂ ಒಂದು ದಿನ ಮೀಸಲಿಟ್ಟು ಭಯ ಭಕ್ತಿಯಿಂದ 'ಹೋಳಿಗೆ ಅಮ್ಮ'ನ ಹಬ್ಬ ಆಚರಿಸುವುದು ವಾಡಿಕೆ. ಚಿತ್ರದುರ್ಗ ತಾಲೂಕಿನ ಬಂಗಾರಕ್ಕನಹಳ್ಳಿ ಹಾಗೂ ಇತರ ಗ್ರಾಮಗಳ ಜನ ತಮ್ಮದೇ ಆದ ಬೇಡಿಕೆಗಳನ್ನು ಸಲ್ಲಿಸುವ ಮೂಲಕ ಈ ಹಬ್ಬ ಆಚರಿಸುತ್ತಾರೆ. ಆಯಾ ಊರ ಮುಂದಿನ ಗಡಿ (ಎಲ್ಲೆ) ಇರುವ ಒಂದು ಬೇವಿನ ಮರದ ಕೆಳಗೆ ಹೋಳಿಗೆ ಎಡೆಯನ್ನು ಇಟ್ಟು ಅಮ್ಮನನ್ನು ಕಳಿಸಿ, ಕೈ ಮುಗಿದು ಹಿಂದಿರುಗಿ ನೋಡದಂತೆ ಬರುವುದು ಸಂಪ್ರದಾಯ. ಹಬ್ಬದ ಆಚರಣೆ ಗೊತ್ತಾದ ದಿನ ಬೆಳಗ್ಗಿನಿಂದಲೇ ಮನೆಯ ಮಹಿಳೆಯರು ಹೋಳಿಗೆ ಮಾಡಿ ಹಬ್ಬದ ಸಿದ್ಧತೆಯಲ್ಲಿ ತೊಡಗುತ್ತಾರೆ. ಪುರುಷರು ಸ್ನಾನ ಮಾಡಿ ಪೂಜೆಗೆ ಸಜ್ಜಾಗುತ್ತಾರೆ. ಒಂದು ಪುಟ್ಟ ಮೊರದಲ್ಲಿ ಹೋಳಿಗೆ, ಕೊಬ್ಬರಿ ಬಟ್ಟಲು, ಬೇವಿನ ಸೊಪ್ಪು, ಬಾಳೆಹಣ್ಣು, ಅರಿಷಿಣ, ಕುಂಕುಮ, ಹಸಿರು ಗಾಜಿನ ಬಳೆ ಇರಿಸುತ್ತಾರೆ. ಇದನ್ನೇ 'ಹೋಳಿಗೆ ಅಮ್ಮ' ಎಂಬ ಹೆಸರಲ್ಲಿ ಪೂಜೆ ಮಾಡುತ್ತಾರೆ. ಜನರನ್ನು, ಹಾಗೂ ಜಾನುವಾರುಗಳನ್ನು ಯಾವುದೇ ಕಾಯಿಲೆ ಬರದಂತೆ ಕಾಪಾಡಮ್ಮ ಎಂದು ಬೇಡಿಕೊಂಡು ಎಲ್ಲರೂ ಆ ಮೊರಕ್ಕೆ ನಮಿಸುತ್ತಾರೆ.1
- ಕೂಡ್ಲಿಗಿ : ಹರಪನಹಳ್ಳಿ ಶಾಸಕರಾದ ಶ್ರೀಮತಿ ಲತಾ ಮಲ್ಲಿಕಾರ್ಜುನ ರವರಿಗೆ ಸಚಿವೆ ಸ್ಥಾನ ನೀಡಬೇಕು - ವಂದೇ ಮಾತರಂ ಜಾಗೃತಿ ವೇದಿಕೆ ಮಹಿಳಾ ಮುಖಂಡರ ಹಕ್ಕೊತ್ತಾಯ- ವಿಜಯನಗರ ಜಿಲ್ಲೆ ಕೂಡ್ಲಿಗಿ *ಕೂಡ್ಲಿಗಿ : ಹರಪನಹಳ್ಳಿ ಶಾಸಕರಾದ ಶ್ರೀಮತಿ ಲತಾ ಮಲ್ಲಿಕಾರ್ಜುನ ರವರಿಗೆ ಸಚಿವೆ ಸ್ಥಾನ ನೀಡಬೇಕು - ವಂದೇ ಮಾತರಂ ಜಾಗೃತಿ ವೇದಿಕೆ ಮಹಿಳಾ ಮುಖಂಡರ ಹಕ್ಕೊತ್ತಾಯ*- ವಿಜಯನಗರ ಜಿಲ್ಲೆ ಕೂಡ್ಲಿಗಿ : ಹರಪನಹಳ್ಳಿ ಕ್ಷೇತ್ರದ ಶಾಸಕರಾದ ಶ್ರೀಮತಿ ಲತಾಮಲ್ಲಿಕಾರ್ಜುನರವರಿಗೆ ಸಚಿವೆ ಸ್ಥಾನ ನೀಡಬೇಕೆಂದು. ವಂದೇ ಮಾತರಂ ಜಾಗೃತಿ ವೇದಿಕೆ ವಿಜಯನಗರ ಜಿಲ್ಲಾ ಮಹಿಳಾ ಮುಖಂಡರು , ಜಿಲ್ಲಾ ಮುಖಂಡರಾದ ವಿ.ಜಿ.ವೃಷಭೇಂದ್ರ ನೇತೃತ್ವದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರವರಿಗೆ ಈ ಮೂಲಕ ಮನವಿ ಮಾಡಿದ್ದಾರೆ. ಶ್ರೀಮತಿ ಲತಾ ಮಲ್ಲಿಕಾರ್ಜುನ ರವರು , ಮಾಜಿ ಉಪಮುಖ್ಯಮಂತ್ರಿ ಹಾಗೂ ದಿವಂಗತ ಎಂ.ಪಿ.ಪ್ರಕಾಶರವರ ಪುತ್ರಿಯಾಗಿದ್ದು. ರಾಜ್ಯದಲ್ಲಿ ಕಾಂಗ್ರೇಸ್ ಬಲಗೊಳ್ಳಲು , ಎಂ.ಪಿ.ಪ್ರಕಾಶ ರವರು ಹಾಗೂ ಅವರ ಪುತ್ರ ಎಂ.ಪಿ.ರವಿಯವರು ಶ್ರಮಿಸಿದ್ದಾರೆ. ಅಂತಯೇ ಶ್ರೀಲತಾ ಮಲ್ಲಿಕಾರ್ಜುನ ರವರು , ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಶಾಸಕರಾಗಿದ್ದು. ಮಹಿಳಾ ಖೋಟದಲ್ಲಿ ಹಾಗೂ ವಿಜಯನಗರ ಜಿಲ್ಲೆಯರೇ ಆದ ಅವರನ್ನು , ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರವರು ತಮ್ಮ ಮಂತ್ರಿಮಂಡಲದಲ್ಲಿ ಸಚಿವೆ ಸ್ಥಾನ ನೀಡಬೇಕಿದೆ. ಇದರಿಂದಾಗಿ ವಿಜಯನಗರ ಉಸ್ತುವಾರಿಯನ್ನು ಸ್ಥಳೀಯರಿಗೆ ನೀಡಿದ , ಹಾಗೂ ಕಲ್ಯಾಣ ಕರ್ನಾಟಕದ ವಿಜಯನಗರ ಜಿಲ್ಲೆಗೆ ಮಹಿಳಾ ಪ್ರಾತಿನಿಧ್ಯ ನೀಡಿದ ಹೆಗ್ಗಳಿಕೆ ಮುಖ್ಯಮಂತ್ರಿಗಳದ್ದಾಗುತ್ತೆ ಎಂದು ಮಹಿಳಾ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಶ್ರೀಮತಿ ಲತಾ ಮಲ್ಲಿಕಾರ್ಜುನ ರವರು , ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಪಡಿಸುವುದಕ್ಕಾಗಿ. ಮತ್ತು ಕಾಂಗ್ರೆಸ್ ಪಕ್ಷದಲ್ಲಿ , ಮಹಿಳೆಯರನ್ನು ಸಂಘಟಿಸಿ ಮುಂದಿನ ಚುನಾವಣೆಯಲ್ಲಿ ಮಹಿಳಾ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಪ್ರಯತ್ನಿಸಲು ಪ್ರೇರೇಪಿಸಿದಂತಾಗುತ್ತದೆ. ವೀರಶೈವ ಜಂಗಮ ಸಮುದಾಯದ ಶಾಸಕರಾದ ಶ್ರೀಮತಿ ಲತಾ ಮಲ್ಲಿಕಾರ್ಜುನ ರವರು , ಸಚಿವರಾದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ವೀರಶೈವ ಜಂಗಮ ಸಮಾಜಕ್ಕೆ ಸೂಕ್ತ ಸ್ಥಾನಮಾನಕ್ಕೆ ಗೌರವ ನೀಡಿದ ಕೀರ್ತಿ ಮುಖ್ಯಮಂತ್ರಿಗಳದ್ದಾಗುತ್ತದೆ. ಮತ್ತು ಕಾಂಗ್ರೆಸ್ ಪಕ್ಷವು , ವೀರಶೈವ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿದಂತಾಗುತ್ತದೆ. ಕಾರಣ ಕಾಂಗ್ರೇಸ್ ಪಕ್ಷದ ವರಿಷ್ಠರು , ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರವರು ಕೂಲಂಕುಷವಾಗಿ ಪರಾಮರ್ಶಿಸಿ ಸೂಕ್ತ ನಿರ್ಧಾರ ಕೈಗೊಂಡು. ಸಂಪುಟದಲ್ಲಿ ಹರಪನಹಳ್ಳಿ ಶಾಸಕರಾದ ಶ್ರೀಮತಿ ಲತಾ ಮಲ್ಲಿಕಾರ್ಜುನ ರವರಿಗೆ , ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಬೇೆಕೆಂದು. ವಂದೇ ಮಾತರಂ ಜಾಗೃತಿ ವೇದಿಕೆ , ವಿಜಯನಗರ ಜಿಲ್ಲಾ ಮಹಿಳಾ ಘಟಕ ಈ ಮೂಲಕ. ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ , ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರವರಲ್ಲಿವಮನವಿ ಮಾಡಿದೆ. ವಂದೇ ಮಾತರಂ ಜಾಗೃತಿ ವೇದಿಕೆಯ ಕೂಡ್ಲಿಗಿ ಹಾಗೂ ವಿಜಯನಗರ ಜಿಲ್ಲಾ ಘಟಕದ ಮಹಿಳಾ ಮುಖಂಡರು ಉಪಸ್ಥಿತರಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- ಚಿಕ್ಕನಾಯಕನಹಳ್ಳಿ ಹೇಮಾವತಿ ಹೋರಾಟದ ಆರನೇ ದಿನದ ರಾತ್ರಿ ಹೋರಾಟಗಾರರು ಭಜನೆಯಲ್ಲಿ ತಲ್ಲಿನರಾಗಿರುವುದು1
- ಬಿಡದಿ ಟೌನ್‌ಶಿಪ್ ವಿರೋಧಿಸಿ ಬೃಹತ್ ಪಾದಯಾತ್ರೆ: ನಮ್ಮ ಭೂಮಿ, ನಮ್ಮ ಹಕ್ಕು!1
- ಹಿರಿಯೂರು ಗಡಿಬಾಗದ ಜವಗೊಂಡನಹಳ್ಳಿ ಬಳಿ ನೂತನ ಸಚಿವ ಟಿ ರಘೂಮೂರ್ತಿ ಗೆ ಜಿಲ್ಲಾಡಳಿತದ ವತಿಯಿಂದ ಸ್ವಾಗತ ಹಿರಿಯೂರು ಗಡಿಬಾಗದ ಜವಗೊಂಡನಹಳ್ಳಿ ಬಳಿ ನೂತನ ಸಚಿವ ಟಿ ರಘೂಮೂರ್ತಿ ಗೆ ಜಿಲ್ಲಾಡಳಿತದ ವತಿಯಿಂದ ಸ್ವಾಗತ ದೊರೆತಿದೆ. ಇನ್ನೂ ಸಚಿವರಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಟಿ ರಘೂಮೂರ್ತಿ ಆಗಮಿಸಿದ್ದಾರೆ. ಡಿ ಕೆ ಶಿವಕುಮಾರ್ ನೂತನ ಸಂಪುಟದಲ್ಲಿ ಸಚಿವರಾದ ಶಾಸಕ ಟಿ ರಘೂಮೂರ್ತಿ ಹಿರಿಯೂರು ನಗರಕ್ಕೆ ಆಗಮಿಸಿದ್ದು ಜಿಲ್ಲೆಯ ಶಾಸಕರ ಜೊತೆ ಬರ ವೀಕ್ಷಣೆ ನಡೆಸಿದ ಟಿ ರಘೂಮೂರ್ತಿ ಅವರಿಗೆ ಚಿತ್ರದುರ್ಗದ ಗಡಿಯ ಜವಗೊಂಡನಹಳ್ಳಿ ಬಳಿ ನೂತನ ಸಚಿವರನ್ನ ಜಿಲ್ಲಾಡಳಿತದ ವತಿಯಿಂದ ಬರಮಾಡಿಕೊಂಡಿದ್ದಾರೆ.1
- ತುಮಕೂರು ಜಿಲೆಯಲ್ಲಿ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಬಿಜೆಪಿ ನಾಯಕರು ತುಮಕೂರು: ಕರ್ನಾಟಕದಾದ್ಯಂತ ಬರ ಪರಿಸ್ಥಿತಿಯನ್ನು ನಿರ್ಣಯಿಸಲು ಬಿಜೆಪಿ ಪಕ್ಷದ ಮುಖಂಡರ ನೇತೃತ್ವದಲ್ಲಿ ಏಳು ತಂಡಗಳನ್ನು ಮಾಡಿ ರಾಜ್ಯದ ಬೇರೆ ಜಿಲ್ಲೆಗಳಿಗೆ ಬರ ಅಧ್ಯಯನಕ್ಕೆ ಪ್ರವಾಸ ಕೈಗೊಂಡಿದ್ದಾರೆ. ಬರದ ನೈಜ ಸ್ಥಿತಿಯನ್ನು ತಿಳಿದು ರೈತರ ಸಂಕಷ್ಟ ಆಲಿಸುತ್ತಿದ್ದೇವೆ, ರೈತರನ್ನು ಮಾತನಾಡಿಸಿ ವಾಸ್ತವಿಕ ಸತ್ಯ ತಿಳಿಯಲಾಗುತ್ತಿದೆ ಎಂದು ಶಾಸಕ ಬಿ ಸುರೇಶ್ ಗೌಡ ಅವರು ತಿಳಿಸಿದರು.1
- ಹುಳಿಯಾರು: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಡಗರದ 'ಚಾಮುಂಡೇಶ್ವರಿ ವರ್ಧಂತಿ' ಆಚರಣೆ ಹುಳಿಯಾರು: ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ವರ್ಧಂತಿ ಮಹೋತ್ಸವದ ಪ್ರಯುಕ್ತ, ಮಂಗಳವಾರ ಪಟ್ಟಣದ ಗ್ರಾಮ ದೇವತೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಅತ್ಯಂತ ಶ್ರದ್ಧಾ-ಭಕ್ತಿಗಳಿಂದ ಜರುಗಿದವು. ದೇವಸ್ಥಾನದಲ್ಲಿ ಎಲ್ಲಾ ಧಾರ್ಮಿಕ ವಿಧಿವಿಧಾನಗಳು ಸಾಂಗವಾಗಿ ನೆರವೇರಿದವು. ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ಭಕ್ತರ ದಂಡು ನೆರೆದಿತ್ತು. ಬೆಳಗಿನ ವಿಶೇಷ ಪೂಜೆಗಳು: ಮುಂಜಾನೆ ಅಮ್ಮನವರಿಗೆ ವಿಶೇಷ ಅಭಿಷೇಕ ಹಾಗೂ ಕುಂಕುಮಾರ್ಚನೆ ನೆರವೇರಿತು. ಪೂಜಾ ಸಮಯದಲ್ಲಿ 'ಲಲಿತಾ ಸಹಸ್ರನಾಮ' ಪಠಣ ನಡೆಯಿತು. ನಂತರ ನಡೆದ ಮಹಾಮಂಗಳಾರತಿಯಲ್ಲಿ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾದಿಗಳು ಪಾಲ್ಗೊಂಡು ದೇವಿಯ ದರ್ಶನ ಪಡೆದರು. ಪೂಜಾ ಕೈಂಕರ್ಯಗಳ ನಂತರ ನೆರೆದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ವಿಶೇಷ ಅಲಂಕಾರ:ವರ್ಧಂತಿ ಮಹೋತ್ಸವದ ಅಂಗವಾಗಿ ಅಮ್ಮನವರಿಗೆ ವಿಶೇಷವಾಗಿ ಸಿಂಹವಾಹಿನಿ ಅಲಂಕಾರ ಮಾಡಲಾಗಿದ್ದಯ ಭಕ್ತರ ಮನಸೆಳೆಯುವಂತಿತ್ತು. ಸಂಜೆ ಸ್ಥಳೀಯ ಭಜನಾ ತಂಡದಿಂದ ಸುಮಧುರವಾದ ಭಜನಾ ಕಾರ್ಯಕ್ರಮ ಜರುಗಿತು. ತದನಂತರ ಅಮ್ಮನವರ 'ಮದಾಲ್‌ಸಿ ಉತ್ಸವ'ವು ವಿಜೃಂಭಣೆಯಿಂದ ನಡೆಯಿತು. ಉತ್ಸವದ ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು. ಗಣ್ಯರ ಉಪಸ್ಥಿತಿ:ಈ ಧಾರ್ಮಿಕ ಕಾರ್ಯಕ್ರಮದಲ್ಲಿ ದೇವಸ್ಥಾನದ ಧರ್ಮದರ್ಶಿಗಳಾದ ಎಸ್. ಆರ್. ಎಸ್. ದಯಾನಂದ್, ಕನ್ವಿನಿಯರ್ ಪಟೇಲ್ ರಾಜಣ್ಣ, ಹಾಗೂ ದೇವಾಲಯದ ಗೌಡರುಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ದೇವರ ಕೃಪೆಗೆ ಪಾತ್ರರಾದರು. ದಿನಪೂರ್ತಿ ನಡೆದ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ನೂರಾರು ಭಕ್ತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.1
- ಸರ್ಕಾರಿ ಬಸ್ ನಲ್ಲಿ ಹೃದಯ ಘಾತ ರಸ್ತೆಯಲ್ಲೇ ಆಸ್ಪತ್ರೆಗೆ ದಾಖಲು ತುಮಕೂರು ನಿಂದ ಶಿರಾ ಭಾಗಕ್ಕೆ ತೆರಳುತ್ತಿದ್ದಂತಹ ಸರ್ಕಾರಿ ಬಸ್ಸಿನಲ್ಲಿ ಪ್ಯಾಸೆಂಜರ್ ಒಬ್ಬರಿಗೆ ಹೃದಯಘಾತ ಕಾಣಿಸಿಕೊಂಡ ಕೂಡಲೇ ಬಸ್ ನಿಲ್ಲಿಸಿ ಸ್ಥಳದಲ್ಲೇ ಇದ್ದ ಪ್ರಯಾಣಕರು ಕೊಡಲೇ ಖಾಸಗಿ ಆಸ್ಪತ್ರೆಗೆ ಸೇರಿಸುವ ಮೂಲಕ ಜೀವ ಉಳಿಸುವ ಕೆಲಸ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.1