Shuru
Apke Nagar Ki App…
ಹುಬ್ಬಳ್ಳಿ: ಕಾಡು ಪ್ರಾಣಿ ಪುನುಗಬೆಕ್ಕು ಪತ್ತೆ: ರಕ್ಷಣೆ ಮಾಡಿ ಹುಬ್ಬಳ್ಳಿ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಕಾಡಿಗೆ ಬಿಟ್ಟ ಸಂಗಮೇಶ ಹುಬ್ಬಳ್ಳಿಯಲ್ಲಿ ಅಪರೂಪದ ಕಾಡು ಪ್ರಾಣಿ ಪುನುಗಬೆಕ್ಕು ಪತ್ತೆಯಾಗಿದ್ದು, ಪ್ರಾಣಿ ರಕ್ಷಕ ಸಂಗಮೇಶ ಚಕ್ರಸಾಲಿ ಪ್ರಾಣಿಯನ್ನು ರಕ್ಷಿಸಿ ಹುಬ್ಬಳ್ಳಿ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಕಾಡಿಗೆ ಬಿಟ್ಟಿದ್ದಾರೆ. ಹೌದು... ಈ ಅಪರೂಪದ ಪುನಗಬೆಕ್ಕು ಹುಬ್ಬಳ್ಳಿಯ ಸಿಲ್ವರ್ ಟೌನ್‌ದಲ್ಲಿರುವ ವಿ.ಜಿ ಬ್ಯಾಹಟ್ಟಿ ಎಂಬುವವರ ಮನೆ ಒಳಗೆ ನುಗ್ಗಿತ್ತು. ಇದರ ಶಬ್ದಕ್ಕೆ ಕೇಳಿದ ಮನೆಯವರು ಆ ಪುನಗುಬೆಕ್ಕು ನೋಡಿ ಭಯಗೊಂಡು ಕೂಡಲೇ ಪ್ರಾಣಿ ರಕ್ಷಕ ಸಂಗಮೇಶ ಅವರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದು ಆ ಕಾಡು ಪ್ರಾಣಿಯನ್ನು ರಕ್ಷಣೆ ಮಾಡಿ ಹುಬ್ಬಳ್ಳಿ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಕಾಡಿಗೆ ಬಿಟ್ಟಿದ್ದಾರೆ.
Manjunath kavali
ಹುಬ್ಬಳ್ಳಿ: ಕಾಡು ಪ್ರಾಣಿ ಪುನುಗಬೆಕ್ಕು ಪತ್ತೆ: ರಕ್ಷಣೆ ಮಾಡಿ ಹುಬ್ಬಳ್ಳಿ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಕಾಡಿಗೆ ಬಿಟ್ಟ ಸಂಗಮೇಶ ಹುಬ್ಬಳ್ಳಿಯಲ್ಲಿ ಅಪರೂಪದ ಕಾಡು ಪ್ರಾಣಿ ಪುನುಗಬೆಕ್ಕು ಪತ್ತೆಯಾಗಿದ್ದು, ಪ್ರಾಣಿ ರಕ್ಷಕ ಸಂಗಮೇಶ ಚಕ್ರಸಾಲಿ ಪ್ರಾಣಿಯನ್ನು ರಕ್ಷಿಸಿ ಹುಬ್ಬಳ್ಳಿ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಕಾಡಿಗೆ ಬಿಟ್ಟಿದ್ದಾರೆ. ಹೌದು... ಈ ಅಪರೂಪದ ಪುನಗಬೆಕ್ಕು ಹುಬ್ಬಳ್ಳಿಯ ಸಿಲ್ವರ್ ಟೌನ್‌ದಲ್ಲಿರುವ ವಿ.ಜಿ ಬ್ಯಾಹಟ್ಟಿ ಎಂಬುವವರ ಮನೆ ಒಳಗೆ ನುಗ್ಗಿತ್ತು. ಇದರ ಶಬ್ದಕ್ಕೆ ಕೇಳಿದ ಮನೆಯವರು ಆ ಪುನಗುಬೆಕ್ಕು ನೋಡಿ ಭಯಗೊಂಡು ಕೂಡಲೇ ಪ್ರಾಣಿ ರಕ್ಷಕ ಸಂಗಮೇಶ ಅವರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದು ಆ ಕಾಡು ಪ್ರಾಣಿಯನ್ನು ರಕ್ಷಣೆ ಮಾಡಿ ಹುಬ್ಬಳ್ಳಿ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಕಾಡಿಗೆ ಬಿಟ್ಟಿದ್ದಾರೆ.
More news from ಕರ್ನಾಟಕ and nearby areas
- ಚಿಕ್ಕೋಡಿ ಬ್ರೇಕಿಂಗ್... ಹುಕ್ಕೇರಿ ಪೊಲೀಸರಿಂದ ಭರ್ಜರಿ ಕಾರ್ಯಚರಣೆ ಖತರ್ನಾಕ್ ಕಳ್ಳರನ್ನು ಬಂಧಿಸಿ 15.45 ಲಕ್ಷ ಚಿನ್ನಾಭರಣ 9 ಬೈಕ ವಶಕ್ಕೆ ಪಡೆದ ಹುಕ್ಕೇರಿ ಪೊಲೀಸರು ಹುಕ್ಕೇರಿ ಪೊಲೀಸರ ಭರ್ಜರಿ ಕಾರ್ಯಾಚರಣೆಯ ಮೂಲಕ ಹುಕ್ಕೇರಿ ಠಾಣೆಯ 6 ಪ್ರಕರಣಗಳು ಹಾಗೂ ಇತರ ಠಾಣಾ ವ್ಯಾಪ್ತಿಯ 9 ಪ್ರಕರಣಗಳು ಭೇದಿಸಿ ಒಟ್ಟು 15.45ಲಕ್ಷ ಮೂಲದ ಸ್ವತ್ತನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು ಹುಕ್ಕೇರಿ ಪಟ್ಟಣದ ಬೆಲ್ಲದ ಬಾಗೇವಾಡಿ ಕ್ರಾಸ್ ಬಳಿ ನಂಬರ್ ಪ್ಲೇಟ್ ಇಲ್ಲದ ಬೈಕ್ ಸವಾರ ಮಾಡುತ್ತಿದ್ದ ಸೌಸಯಸ್ಪದ ವ್ಯಕ್ತಿ ಉಮೇಶ್ ಹನುಮಂತ ಗಾಡಿ ವಡ್ಡರ ಬಂದಿಸಿ ವಿಚಾರಣೆ ಮಾಡಿದಾಗ ಅಂತರಾಜ ಕಳ್ಳತನದ ಜಾಲ ಬೆಳಕಿಗೆ ಬಂದಿದೆ ಈತನಿಂದ ಗೋಕಾಕ ಕಾಗಲ ಸೆಂಕೇಶ್ವರ್ ಹುಕ್ಕೇರಿ ಬೆಳಗಾವಿ ಕೇ.ಎಲ್.ಇ. ಆಸ್ಪತ್ರೆ ನಿಪ್ಪಾಣಿ ಬಾಗಗಳಲ್ಲಿ ಕಳವು ಮಾಡಿದ್ ಸುಮಾರು 6ಲಕ್ಷದ ಮೌಲ್ಯದ 9 ಬೈಕಗಳನ್ನು ವಶಪಡಿಸಿಕೊಂಡ ಹಾಗೂ 1ಟ್ರಾಕ್ಟರ್ ಟ್ರೋಲಿ ವಶಕ್ಕೆ ಪಡೆಸಿಕೊಂಡರು ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ರಾಮಗೊಂಡ ಬಸರಗಿ ಹಾಗೂ ಗೋಕಾಕ್ ಡಿ. ಎಸ್. ಪಿ.ರವಿ ನಾಯಕ ಮಾರ್ಗದರ್ಶನದಲ್ಲಿ ಹುಕ್ಕೇರಿ ಪೊಲೀಸ್ ನಿರೀಕ್ಷರಾದ ಮಹಾಂತೇಶ್ ಬಸ್ಸಾಪುರೆ ಅವರ್ ತಂಡದವರಾದ ಮಂಜುನಾಥ್ ಕಬ್ಬುರೆ ಅಜಿತ್ ನಾಯಿಕ್ ಅರ್ಜುನ್ ಮಸರಗುಪ್ಪಿ ಭರ್ಜರಿ ಕಾರ್ಯಾಚರಣೆ ನಡಸಿ ವಿವಿಧ ಕಳವು ಪ್ರಕರಣಗಳಲ್ಲಿ ಬಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿಗಳಾದ ಕೆ. ರಾಮರಾಜನ್ ಶ್ಲಾಘನೀಯ ವ್ಯಕ್ತ ಪಡಿಸಿದ್ದಾರೆ.1
- ಗದಗ ಜಿಲ್ಲೆ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಗ್ರಾಮ ದೇವತೆ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ1
- ಬಾಗಲಕೋಟೆ:625ಕ್ಕೆ 621 ಅಂಕಗಳಿಸಿದ ಬಾಗಲಕೋಟೆಯ ಸಮೃದ್ಧಿ ಗುರುಕುಲ ಶಾಲೆಯ ವಿದ್ಯಾರ್ಥಿ ಆದರ್ಶ ಶಿಪ್ಪರಮಟ್ಟಿ ಅವರ ಸಾಧನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅವರ ಈ ಅದ್ಭುತ ಸಾಧನೆಗೆ ಕುಟುಂಬಸ್ಥರು, ಶಿಕ್ಷಕರು ಹಾಗೂ ಸ್ನೇಹಿತರು ಹರ್ಷ ವ್ಯಕ್ತಪಡಿಸಿ ಸಂಭ್ರಮಿಸಿದರು. ಶಾಲೆಯ ಶಿಕ್ಷಕರು ವಿದ್ಯಾರ್ಥಿಯ ಪರಿಶ್ರಮ, ನಿಯಮಿತ ಅಧ್ಯಯನ ಹಾಗೂ ಶಿಸ್ತುಬದ್ಧ ಜೀವನ ಶೈಲಿಯೇ ಈ ಯಶಸ್ಸಿನ ಗುಟ್ಟು ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿ ಆದರ್ಶ ಶಿಪ್ಪರಮಟ್ಟಿ ಅವರು, ತಮ್ಮ ಯಶಸ್ಸಿಗೆ ತಂದೆ-ತಾಯಿ ಹಾಗೂ ಗುರುಗಳ ಮಾರ್ಗದರ್ಶನವೇ ಪ್ರಮುಖ ಕಾರಣ ಎಂದು ತಿಳಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆ ಮಾಡಲು ಸಂಕಲ್ಪ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಹೆಮ್ಮೆ ಮೂಡಿಸಿದ ಈ ಸಾಧನೆಗೆ ಎಲ್ಲೆಡೆಯಿಂದ ಅಭಿನಂದನೆಗಳ ಸುರಿಮಳೆ ಹರಿದು ಬರುತ್ತಿದೆ.1
- ಸಮಾಜ ಘಾತಕ ಡ್ರಗ್ಸ್ ಬಳಕೆ ದಂಡನೀಯ ಅಪರಾಧ. ಆರೋಗ್ಯಕರ ಸಮಾಜಕ್ಕಾಗಿ ಡ್ರಗ್ಸ್ ಮುಕ್ತ ಕರ್ನಾಟಕ ಅತ್ಯಗತ್ಯ. ಮಾದಕ ವ್ಯಸನದಿಂದ ದೂರವಿದ್ದು ಸುರಕ್ಷಿತ ಜೀವನ ಸಾಗಿಸುವುದು ಇಂದಿನ ಯುವ ಪೀಳಿಗೆಯ ಕರ್ತವ್ಯ" ಎಂದುಮುಧೋಳ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕರಾದ ಚನ್ನವೀರ ಚಲವಾದಿ ಹೇಳಿದರು ನಗರದ ಇಂದಿರಾ ಕ್ಯಾಂಟೀನ್ ಹತ್ತಿರದ ಕಾಲೇಜ್ ರಸ್ತೆಯಲ್ಲಿ ಮಂಗಳವಾರ ಅವರು ಪದವಿ ಕಾಲೇಜು ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಹಾಗೂ ಜೀವನದ ಮೌಲ್ಯಗಳ ಕುರಿತು ಪ್ರೇರಣಾದಾಯಕ ಮಾತುಗಳನ್ನಾಡಿದರು. ನಂತರ ಬಾಗಲಕೋಟೆ ಜಿಲ್ಲಾ ಪೊಲೀಸ್ ಮತ್ತು ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ANTF) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ಅಭಿಯಾನದಲ್ಲಿ ಅವರು ವಿದ್ಯಾರ್ಥಿನಿಯರಿಗೆ ಕರಪತ್ರಗಳನ್ನು ವಿತರಿಸಿ ಮಾಹಿತಿ ನೀಡಿ"ಪದವಿ ಶಿಕ್ಷಣವು ನಿಮ್ಮ ಜೀವನದ ಕೊನೆಯ ಘಟ್ಟ ಮತ್ತು ಭವಿಷ್ಯದ ಬುನಾದಿ. ಈ ಹಂತದಲ್ಲಿ ನೀವು ಮಾಡುವ ಕಠಿಣ ಪರಿಶ್ರಮ ನಿಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ತಂದೆ-ತಾಯಿಗಳು ತಮ್ಮ ತುತ್ತನ್ನು ಮಾರಿ ನಿಮಗೆ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ಅವರ ಕಣ್ಣಲ್ಲಿ ನೀರು ಬರಿಸದಂತೆ, ಅವರ ಪ್ರೀತಿ ಮತ್ತು ವಿಶ್ವಾಸಕ್ಕೆ ದಕ್ಕೆ ತರದಂತೆ ಚೆನ್ನಾಗಿ ಓದಿ ಉತ್ತಮ ನಾಗರಿಕರಾಗಿ ಹೊರಹೊಮ್ಮಿ, ಮಾದಕ ವ್ಯಸನದ ಬಗ್ಗೆ ದೂರು ನೀಡಲು ಇಲಾಖೆಯ ಸಹಾಯವಾಣಿ '1933' ಮತ್ತು ತುರ್ತು ಪರಿಸ್ಥಿತಿಗೆ '112' ಸಂಖ್ಯೆಯನ್ನು ಬಳಸುವಂತೆ ಮನವರಿಕೆ ಮಾಡಿಕೊಟ್ಟರು. 'ಬ್ರೇಕ್ ದಿ ಚೈನ್ - ಸೇ ನೋ ಟು ಡ್ರಗ್ಸ್' ಎಂಬ ಘೋಷವಾಕ್ಯದೊಂದಿಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ದಾನಮ್ಮದೇವಿ ಹಾಗೂ ಎಸ್ ಅರ್.ಕಂಠಿ ಕಾಲೇಜು ಪದವಿ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು ಇದ್ದರು.2
- ಗಮನಿಸಬೇಕಾದ ಅಂಶಗಳು: ಇಂತಹ ಕೃತ್ಯಗಳು ಸಾರ್ವಜನಿಕ ಆರೋಗ್ಯ ಮತ್ತು ಸ್ವಚ್ಛತೆಯ ದೃಷ್ಟಿಯಿಂದ ತಪ್ಪು. ದಂಡ: ಸಾರ್ವಜನಿಕ ಸ್ಥಳಗಳಲ್ಲಿ ಗಲೀಜು ಮಾಡುವುದು ಅಥವಾ ಮೂತ್ರ ವಿಸರ್ಜನೆ ಮಾಡುವುದು ಕಾನೂನುಬಾಹಿರ ಮತ್ತು ಸ್ಥಳೀಯ ಸಂಸ್ಥೆಗಳು (Municipality) ಇದಕ್ಕೆ ದಂಡ ವಿಧಿಸಬಹುದು. ನಾಗರಿಕ ಜವಾಬ್ದಾರಿ: ರಸ್ತೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಇಂತಹ ಘಟನೆಗಳು ಕಂಡುಬಂದಲ್ಲಿ ಸ್ಥಳೀಯರಿಗೆ ತಿಳಿಹೇಳುವುದು ಅಥವಾ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದು ಸೂಕ್ತ.1
- Post by @april14news1
- ಧಾರವಾಡ: ದ್ವಿಭಾಷಾ ಮಾಧ್ಯಮದ ಹೆಸರಿನಲ್ಲಿ ಕನ್ನಡ ಮಾಧ್ಯಮವನ್ನು ಕಿತ್ತುಹಾಕಿ ಇಂಗ್ಲಿಷ್ ಮಾಧ್ಯಮವನ್ನು ಕಡ್ಡಾಯ ಮಾಡುತ್ತಿರುವ ರಾಜ್ಯ ಸರ್ಕಾರದ ಅವೈಜ್ಞಾನಿಕ ಹಾಗೂ ಜನವಿರೋಧಿ ನೀತಿಯನ್ನು ಖಂಡಿಸಿ ಎ.ಐ.ಡಿ.ಎಸ್.ಓ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದರು. ಧಾರವಾಡ ನಗರದ ವಿವೇಕಾನಂದ ವೃತ್ತದಲ್ಲಿ ಗುರುವಾರ ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗುತ್ತ ಎ.ಐ.ಡಿ.ಎಸ್.ಓ ಸಂಘಟನೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ರಾಜ್ಯ ಮುಖಂಡ ವಿನಯ ಚಂದ್ರ, ಮಲ್ಲೇಶ ಕಟಗಿ, ಸಿಂಧು ಕೌದಿ, ಶಶಿಕಲಾ ಮೇಟಿ, ಶರಣಬಸವ ಗೋನವಾರ, ಭುವನ ಬಳ್ಳಾರಿ, ಗಂಗಾ ಕೋಕರೆ, ಸಿದ್ದು ಚಿಪ್ಪಲಕಟ್ಟಿ, ಶಾಂತೇಶ್ ಸೇರಿದಂತೆ ಇತರರಿದ್ದರು.1
- *ಬಡತನದ ನಡುವೆಯೂ ಅರಳಿದ ಪ್ರತಿಭೆ ಪಲ್ಲವಿ ಹಳ್ಳಿಕೇರಿ ಮನೆಗೆ ಶಿಕ್ಷಣಾಧಿಕಾರಿಗಳ ಭೇಟಿ, ಉನ್ನತ ವ್ಯಾಸಂಗದ ಜವಾಬ್ದಾರಿ* ಬಡತನವು ಪ್ರತಿಭೆಗೆ ಅಡ್ಡಿಯಾಗಬಾರದು ಎನ್ನುವುದಕ್ಕೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಈ ಘಟನೆ ಸಾಕ್ಷಿಯಾಗಿದೆ. ಆರ್ಥಿಕ ಮುಗ್ಗಟ್ಟಿನಿಂದ ಶಿಕ್ಷಣವೇ ಬೇಡವೆಂದು ನಿರ್ಧರಿಸಿದ್ದ ವಿದ್ಯಾರ್ಥಿನಿಯೊಬ್ಬಳು ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿ ಸಾಧನೆ ಮಾಡಿದ್ದಾಳೆ. ಈಕೆಯ ಬೆನ್ನೆಲುಬಾಗಿ ನಿಂತಿರುವ ಶಿಕ್ಷಣಾಧಿಕಾರಿಗಳ ತಂಡ, ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ ಮುಂದಿನ ವ್ಯಾಸಂಗದ ಭರವಸೆ ನೀಡಿದೆ. ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಪೇಠಾಲೂರು ಗ್ರಾಮದ ಪ್ರತಿಭೆ ಪಲ್ಲವಿ ಹಳ್ಳಿಕೇರಿ ಇಂದು ಇಡೀ ಗ್ರಾಮಕ್ಕೆ ಹೆಮ್ಮೆಯಾಗಿದ್ದಾಳೆ. ಬರದೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಈಕೆ, ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದಾಗಿ ಒಂದು ಹಂತದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಿಂದಲೇ ದೂರ ಉಳಿಯಲು ನಿರ್ಧರಿಸಿದ್ದಳು. ಆದರೆ ಕ್ಷೇತ್ರ ಶಿಕ್ಷೆಣಾಧಿಕಾರಿಗಳ ಮತ್ತು ಶಿಕ್ಷಕರ ಪ್ರೋತ್ಸಾಹದಿಂದ ಪರೀಕ್ಷೆ ಎದುರಿಸಿದ ಪಲ್ಲವಿ, ಇಂದು 73.47% ಅಂಕಗಳನ್ನು ಪಡೆಯುವ ಮೂಲಕ "ಛಲವಿದ್ದರೆ ಸಾಧನೆ ಸಾಧ್ಯ" ಎಂಬುದನ್ನು ತೋರಿಸಿಕೊಟ್ಟಿದ್ದಾಳೆ. ವಿದ್ಯಾರ್ಥಿನಿಯ ಸಾಧನೆಯನ್ನು ಗುರುತಿಸಿ ಇಂದು ಮುಂಡರಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ (BEO) ಗಂಗಾಧರ ಹಣ್ಣಿಗೇರಿ ಅವರ ನೇತೃತ್ವದ ತಂಡ ಹಾಗೂ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ನಾಗರಾಜ ಹಳ್ಳಿಕೇರಿ ಅವರು ಪೇಠಾಲೂರು ಗ್ರಾಮದಲ್ಲಿರುವ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕ್ಷೆತ್ರ ಶಿಕ್ಷಣಾಧಿಕಾರಿಗಳು ಪಲ್ಲವಿಗೆ ಗೌರವ ಧನ ನೀಡಿ ಸನ್ಮಾನಿಸಿದರು. ಅಷ್ಟೇ ಅಲ್ಲದೆ, ಹಣದ ಕೊರತೆಯಿಂದ ಶಿಕ್ಷಣ ನಿಲ್ಲಬಾರದು ಎಂಬ ಉದ್ದೇಶದಿಂದ, ವಿದ್ಯಾರ್ಥಿನಿಯ ಮುಂದಿನ ಉನ್ನತ ವ್ಯಾಸಂಗಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ವಿವಿಧ ಇಲಾಖೆಯ ಉನ್ನತ ಅಧಿಕಾರಿಗಳು ಭರಿಸುವುದಾಗಿ ಭರವಸೆ ನೀಡಿದ್ದಾರೆ ಯಂದು ಹೇಳಿದರು.1
- ಬಾಗಲಕೋಟೆ ಜಿಲ್ಲೆಯ ಕೆರೂರು ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಜನರ ಆಕ್ರೋಶ ಸ್ಫೋಟಗೊಂಡ ಅಪರೂಪದ ಘಟನೆ ನಡೆದಿದೆ. ಲೋಕಾಯುಕ್ತ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಪಿಎಸ್ಐ ಭೀಮಪ್ಪ ರಬಕವಿ ಮತ್ತು ಒಬ್ಬ ಪೊಲೀಸ್ ಪೇದೆ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಪಟ್ಟಣದ ಜನರು ಠಾಣೆಯ ಮುಂದೆ ಜಮಾಯಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.1