Shuru
Apke Nagar Ki App…
hubblli Dharwad HDMC corruptions
Madan halli
hubblli Dharwad HDMC corruptions
More news from ಕರ್ನಾಟಕ and nearby areas
- ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ನೀರಿನ ವಿಚಾರವಾಗಿ ಶುರುವಾದ ಗಲಾಟೆ ವಿಕೋಪಕ್ಕೆ ಹೋಗಿ ಕೈ ಕೈ ಮಿಗಿಲಾಯಿಸಿ ಮುಂಡರಗಿ ಪೊಲೀಸ್ ಠಾಣಾ ಮೆಟ್ಟಿಲೇರಿದೆ ಎರಡು ಸಮುದಾಯದ ನಡುವೆ ನಡೆದ ಗಲಾಟೆಯಲ್ಲಿ ಗಾಯ ಗೊಂಡವರು ಗದಗ ಜಿಲ್ಲಾ ಆಸ್ಪತ್ರೆ ಮತ್ತು ಮುಂಡರಗಿ ತಾಲೂಕ ಆಸ್ಪತ್ರೆ ಯಲ್ಲಿ ಚಿಕಿಸ್ತೆ ಪಡೆಯುತ್ತಿದ್ದಾರೆ1
- ಇಳಕಲ್ಲ : ಮಾಜಿ ಸಚಿವ ಹಾಗೂ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರನ್ನು ನಗರಕ್ಕೆ ರಡ್ಡಿ ಸಮಾಜ ಭಾಂದವರು ಶನಿವಾರ ಅದ್ದೂರಿಯಾಗಿ ಸ್ವಾಗತಿಸಿಕೊಂಡರು. ತಾಲೂಕಿನ ಚಿಕ್ಕ ಓತಗೇರಿ ಗ್ರಾಮದಲ್ಲಿ ನೂತನವಾಗಿ ಉದ್ಘಾಟನೆಗೊಂಡ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಗಾಲಿ ಜನಾರ್ಧನ್ ರೆಡ್ಡಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿ ಮನುಕುಲಕ್ಕೆ ಒಳಿತನ್ನು ಬಯಸಿದ ಮಹಾನ ದೇವತೆ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ದರ್ಶನ ಪಡೆದಿದ್ದು ನನ್ನ ಪುಣ್ಯ, ಸುಂದರವಾಗಿ ದೇವಸ್ಥಾನ ನಿರ್ಮಾಣವಾಗಿದೆ ಆ ತಾಯಿ ಗ್ರಾಮಸ್ಥರು ಎಲ್ಲರಿಗೂ ಒಳಿತನ್ನ ಮಾಡಲಿ ಎಂದು ಮಾತನಾಡಿದರು. ಗ್ರಾಮಸ್ಥರ ಪರವಾಗಿ ಮಾಜಿ ಸಚಿವರನ್ನು ಸತ್ಕರಿಸಿದರು. ಈ ಸಂದರ್ಭದಲ್ಲಿ ಮನೋಹರಗೌಡ ಗೌಡರ, ಮಲ್ಲನಗೌಡ ಮರಿಗೌಡರ, ಗೋವಿಂದ ಗೌಡರ, ಶರಣಪ್ಪ ಗುಡಿಹಾಳ,ಗ್ಯಾನಪ್ಪ ಕಂದಕೂರ, ಮಹಾಂತೇಶ ಕಂದಕೂರ, ಶಿವಪ್ಪ ಮೂಲಿಮನಿ,ಬಸವರಾಜ ಕಂದಕೂರ ಹಾಗೂ ಗ್ರಾಮದ ಗುರುಹಿರಿಯರು ಮತ್ತು ರಡ್ಡಿ ಸಮಾಜದವರು ಇದ್ದರು.1
- ಬಾಗಲಕೋಟೆ ಉಪಚುನಾವಣೆ ಎಫೆಕ್ಟ್ ದಿನದಿನೇ ರಂಗೇರಿತಿದೆ. ಐಪಿಎಲ್ ಟಿಕೆಟ್ ವಿಚಾರವಾಗಿ ಶಾಸಕ ವಿಜಯಾನಂದ ಕಾಶಪ್ಪನವರ್ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ ಚುನಾವಣಾ ಪ್ರಚಾರದಲ್ಲಿ ವ್ಯಂಗ್ಯ ಹೇಳಿಕೆಗೆ ಶಾಸಕ ವಿಜಯಾನಂದ ಕಾಶಪ್ಪನವರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಯತ್ನಾಳ ಒಬ್ಬ ಕಾಮಿಡಿ ಪೀಸ್ ನಗೋದಕ್ಕೆ ಜನ ಸೇರ್ತಾರೆ ಎಂದು ಹೇಳಿದರು1
- ll ಸಾರ್ವಜನಿಕ ಹನುಮಾನ ಮಂದಿರ ಹಾಗೂ ಜಮಖಂಡಿ ರಸ್ತೆ, ಅಂಬೇಡ್ಕರ್ ನಗರ ಹಾಗೂ ವಿವಿಧ 9 ಹನುಮಾನ್ ಮಂದಿರಗಳಲ್ಲಿ ಹೂವು ತರಿಳು ತೋರಣಗಳಿಂದ ಅಲಂಕರಿಸಿ ಬಾಲ ಹನುಮನನ್ನು ತೊಟ್ಟಿಲಲ್ಲಿ ಹಾಕಿ ನಾಮಕರಣ ಮಾಡಿ ಆಚರಣೆ ಮಾಡಿದರು. ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ಭಕ್ತರು ದಿನಪೂರ್ತಿ ಹನುಮಂತನ ದರ್ಶನ ಪಡೆದು, ಸಕಲ ಜೀವಿಗಳ ಕಲ್ಯಾಣಕ್ಕಾಗಿ ವಿಶೇಷ ಪೂಜೆಗಳನ್ನು ಸಲ್ಲಿಸಿ, ವಿವಿಧ ಅರ್ಪಣೆಗಳನ್ನು ಮಾಡುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಂಡರು. ಹೋಮ-ಹವನ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಜಮಖಂಡಿ ರಸ್ತೆಗಿರುವ ಹನುಮಾನ್ ಮಂದಿರದಲ್ಲಿ ಮಧ್ಯಾಹ್ನ ಸಹಸ್ರಾರು ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ 6ಗಂಟೆಗೆ ಎಲ್ಲ ಹನುಮಾನ್ ಮಂದಿರಗಳು ಹಾಗೂ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಸಮಸ್ತ ಹನುಮ ಭಕ್ತರಿಂದ ಹನುಮಾನ್ ಮೂರ್ತಿ ಪಲ್ಲಕ್ಕಿ, ಹನುಮಾನ್ ಹಾಗೂ ಶ್ರೀರಾಮನ ಭವ್ಯ ಭೃಹತ್ ಪ್ರತಿಮೆಗಳನ್ನು ಜಮಖಂಡಿ ರಸ್ತೆಗಿರುವ ಹನುಮಾನ್ ಮಂದಿರದಿಂದ ಪೂಜೆ ಸಲ್ಲಿಸುವ ಮೂಲಕ ಸಾಂಸ್ಕೃತಿಕ ಸಂಭಳ ವಾದ್ಯ ಹಾಗೂ ಹಲಗೆ ಲೇಜೀಮ ವಾದ್ಯಗಳೊಂದಿಗೆ ಪವನಪುತ್ರ ಹನುಮಾನಕಿ, ಜೈ ಶ್ರೀರಾಮ್ ಘೋಷಣೆ ಕೂಗುತ್ತ ಕೇಸರಿ ಧ್ವಜಗಳನ್ನು ರಾರಾಜಿಸುತ್ತ, ಪಟಾಕಿಗಳನ್ನು ಸಿಡಿಸುತ್ತ ಮೆರವಣಿಗೆಯು ರೇಲ್ವೆ ಮೇಲ್ಸೆತುವೆ, ಕರ್ನಾಟಕ ವೃತ್ತ ಮಾಸಾಬಿ ವೃತ್ತ, ಡಿಸಿಸಿ ಬ್ಯಾಂಕ್ ರೈಲು ನಿಲ್ದಾಣ ಬೆಲ್ಲದ ಕಾರ್ನರ್ ಮೂಲಕ ಸಾರ್ವಜನಿಕ ಹನುಮಾನ ಮಂದಿರಕ್ಕೆ ತಲುಪಿತು. ಈ ಸಂದರ್ಭದಲ್ಲಿ ಸಾರ್ವಜನಿಕ ಹನುಮಾನ ಮಂದಿರ ಅರ್ಚಕರಾದ ದಯಾನಂದ ಮಠಪತಿ, ಲಕ್ಷಟ್ಟಿ ತೇಲಿ, ಸಿದ್ಧಾನಿ ಸಣ್ಣಕ್ಕಿ,ಜಯಕುಮಾರ ಸನದಿ, ಶ್ರೀಮಾನ್ ನಾಯಿಕ, ಸದಾಶಿವ ಗಿಣಿಮೂಗೆ, ಪ್ರದೀಪ್ ಭಾವಿ, ಶೇಖರ್ ದಳವಾಯಿ, ಶಿವಾನಂದ ಲಖ್ಖನಗಾವ, ಯಲ್ಲಪ್ಪ ವಡ್ಡರ, ಡಾ.ಸಚಿನ ಮನಗುತ್ತಿ, ಅಮೀತ ನಾಯಿಕ, ಪ್ರೇಮ ಗುಪ್ತೆ, ಜಗ್ಗು ಮಂಗಸೂಳಿ, ಶೀತಲ ಲೋಹಾರ,ಕಾರ್ತಿಕ ರಾಜಮಾನೆ, ಚೇತನ್ ಸುತಾರ, ವರ್ಧಮಾನ ಶೆಟ್ಟಿ, ಸಚೀನ ತೇಲಿ, ಆನಂದ ಸಣ್ಣಕ್ಕಿ, ಪ್ರಕಾಶ್ ದಾವಣೆ, ನಾಗೇಶ ಕೌಲಗುಡ್ಡ, ಕೃಷ್ಣಾ ರೆಡ್ಡಿ ಸರ್ವ ಹನುಮಾನ್ ಭಕ್ತರು ಭಾಗಿಯಾಗಿದ್ದರು. ಮೆರಣಿಗೆಗೆ ಪಿಎಸಐ ಪ್ರೀತಮ್ ನಾಯಿಕ ನೇತೃತ್ವದಲ್ಲಿ ಎಎಸಐ ಇಂಚಲ, ಬಾನಪ್ಪಾ ಖೋತ, ಪೈಗಂಬರ್ ಗಡ್ಡೇಕರ,ಎಂ.ಬಿ.ಪಾಟೀಲ ಸೂಕ್ತ ಬಂದುಬಸ್ತಿ ಒದಗಿಸಿದ್ದರು.2
- Post by Santa Dsouza2
- Post by Sharanugouda Patil1
- ಧಾರವಾಡದಲ್ಲಿ ಆಟೊ ಗ್ಯಾಸ್ ಬಂಕ್ ನಲ್ಲಿ ಗ್ಯಾಸ್ ಸಿಗದೇ ಆಟೋ ರಿಕ್ಷಾ ಚಾಲಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೌದು... ಧಾರವಾಡ ನಗರದಲ್ಲಿ ಇರುವ ಎಲ್ಲ ಆಟೋ ಗ್ಯಾಸ್ ಬಂಕ್‌ಗಳು ಬಂದ್ ಆಗಿವೆ. ಇದರ ಮಧ್ಯೆ ರಾಯಾಪುರದಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ನಲ್ಲಿ ಮಾತ್ರ ಆಟೊ ಎಲ್.ಪಿ.ಜಿ ಗ್ಯಾಸ್ ಸಿಗುತ್ತಿದ್ದು, ಇದಕ್ಕಾಗಿ ಆಟೋ ಚಾಲಕರು ಬೆಳಿಗ್ಗೆಯಿಂದಲೇ ಕ್ಯೂ ನಿಂತಿದ್ದಾರೆ. ಧಾರವಾಡ ರಾಯಾಪುರದಲ್ಲಿರುವ ಇಂಡಿಯನ್ ಆಯಿಲ್ ಬಂಕ್‌ನಲ್ಲಿ ಆಟೋ ಎಲ್.ಪಿ.ಜಿ ಸಿಗುತ್ತಿದ್ದು, ಇದಕ್ಕಾಗಿ ಕಿಲೋ ಮೀಟರ್‌ಗಟ್ಟಲೇ ಆಟೊಗಳು ಕ್ಯೂ ನಿಂತಿವೆ. ಇಲ್ಲಿ 94 ರೂಪಾಯಿಗೆ ಒಂದು ಕೆಜಿ ಎಲ್.ಪಿ.ಜಿ ಗ್ಯಾಸ್ ಸಿಗುತ್ತಿದ್ದು, ಇದು ಆಟೊ ಚಾಲಕರಿಗೆ ಹೊರೆಯಾಗಿದೆ. ಈ ಬಂಕ್‌ನಲ್ಲೂ ಗ್ಯಾಸ್ ಖಾಲಿಯಾಗುತ್ತ ಬಂದಿದ್ದು, ಕೇವಲ 40 ಆಟೊಗಳಿಗೆ ಆಗುವಷ್ಟೇ ಗ್ಯಾಸ್ ಇದೆ. ಹೀಗಾಗಿ ಆಟೋ ಚಾಲಕರು ಗ್ಯಾಸ್ ತುಂಬಿಸಿಕೊಳ್ಳಲು ಮುಗಿಬಿದ್ದಿದ್ದು, ಸರ್ಕಾರ ಈ ಸಮಸ್ಯೆ ಬಗೆಹರಿಸಿಕೊಡಬೇಕು ಎಂದು ಆಟೊ ಚಾಲಕರು ಆಗ್ರಹಿಸುತ್ತಿದ್ದಾರೆ.1
- ಕಪ್ಪತ ಗುಡ್ಡ ದಲ್ಲಿ ವನ್ಯ ಜೀವಿಗಳಿಗೆ ನೀರಿನ ತೊಟ್ಟಿಗಳಲ್ಲಿ ಶೇಕರಿಸುವ ಕಾರ್ಯ ವನ್ನ ಕಪ್ಪತ ಹಿಲ್ಸ್ RFO ಮಂಜುನಾಥ ಮೆಗಲಮನಿ ಅವರು ಮಾಡುತಿದ್ದರೆ ಅರಣ್ಯ ಪ್ರದೇಶ ದಲ್ಲಿ ಅಲ್ಲಲ್ಲಿ ನೀರಿನ ಹೊಂಡ ಗಳನ್ನ ಮಾಡಿ ನೀರು ತುಂಬಿಸುವ ಕೆಲಸ ಮಾಡುತಿದ್ದಾರೆ1
- ಬಾಗಲಕೋಟೆ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪರ ಸಿಎಂ ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರ ಅಂಗವಾಗಿ ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಅವರ ಮಾತಿನಲ್ಲಿ ಸತ್ಯವಿಲ್ಲ ಹಾಗೂ ಹೇಳಿದಂತೆ ನಡೆದುಕೊಳ್ಳುತ್ತಿಲ್ಲವಾದ್ದರಿಂದ ಅವರ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡಲಿಚ್ಚಿಸುವುದಿಲ್ಲ ಎಂದು ಹೇಳಿದರು. ಬಾಗಲಕೋಟೆ ಕ್ಷೇತ್ರದಲ್ಲಿ ಬಿಜೆಪಿ ಸೋಲುತ್ತಿದೆ ಎಂಬ ಭಯದಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದರು.1