ಶಿವಮೊಗ್ಗ-ರಾಷ್ಟ್ರಮಟ್ಟದ ಬಯಲು ಕುಸ್ತಿ: ಅಖಾಡದಲ್ಲಿ ಸೆಣಸಿದ ಮಹಿಳಾ ಕುಸ್ತಿಪಟುಗಳು ಶಿವಮೊಗ್ಗ: ಮಾರಿ ಜಾತ್ರೆಯ ಪ್ರಯುಕ್ತ ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿ ರುವ ಮೂರು ದಿನಗಳ ಹೊನಲು ಬೆಳಕಿನ ರಾಷ್ಟ್ರಮಟ್ಟದ ಬಯಲು ಕುಸ್ತಿ ಪಂದ್ಯಾವಳಿಯ ಅಖಾಡ ದಲ್ಲಿ ಮಹಿಳಾ ಕುಸ್ತಿಪಟುಗಳು ಅಖಾಡದಲ್ಲಿ ಸೆಣಸಿ ಗಮನ ಸೆಳೆದರು. ಎರಡು ದಿನದಲ್ಲಿ 10ಕ್ಕೂ ಹೆಚ್ಚು ಜೋಡಿ ಮಹಿಳಾ ಕುಸ್ತಿಗಳು ನಡೆದಿದೆ. ಮಹಿಳಾ ಕುಸ್ತಿಪಟು ಮೃದುಲಾ ಮಾತನಾಡಿ, ನಾವು ಬೆಡ್ ಮೇಲೆ ಕುಸ್ತಿ ಅಭ್ಯಾಸ ಮಾಡುತ್ತೇವೆ. ಆದರೆ ಮಣ್ಣಿನಲ್ಲಿ ಕುಸ್ತಿ ಆಡಿದ್ದು ನನಗೆ ಹೊಸ ಅನುಭವ ನೀಡಿದೆ. ನಮ್ಮಂತಹ ಮಹಿಳಾ ಕುಸ್ತಿಪಟು ಗಳಿಗೆ ಒಳ್ಳೆಯ ವ್ಯವಸ್ಥೆ ಮಾಡಿ ಕೊಟ್ಟಿದ್ದಾರೆ. ನಮಗೆ ಎಲ್ಲಾ ರೀತಿಯ ಸೌಲಭ್ಯವನ್ನು ಆಯೋಜಕರು ಮಾಡಿಕೊಟ್ಟಿ ದ್ದಾರೆ. ನಾವೆಲ್ಲಾ ಬೆಡ್ ಮೇಲೆ ಪಾಯಿಂಟ್ಗಾಗಿ ಕುಸ್ತಿ ಆಡುತ್ತೇವೆ. ಅದೇ ಇಲ್ಲಿ ಡೈರೆಕ್ಟ್ ಚಿತ್ ಮಾಡುವ ತನಕ ಆಟ ಆಡುತ್ತೇವೆ. ಬೆಡ್ನಲ್ಲಿ ಆಟ ಆಡಿ ಇಲ್ಲಿ ಮಣ್ಣಲ್ಲಿ ಕುಸ್ತಿ ಆಡಲು ಯಾವುದೇ ಸಮಸ್ಯೆ ಆಗಲ್ಲ. ಇಲ್ಲಿ ಕುಸ್ತಿ ಆಡಿದ್ದು ಖುಷಿ ಯಾಗಿದೆ ಎಂದರು. ಮಣ್ಣಿನಲ್ಲಿ ಕುಸ್ತಿ ಆಡಲು ಹಾಗೂ ನೋಡಲು ಖುಷಿ ಆಗುತ್ತದೆ. ನಾನು ಇದೇ ವರ್ಷದಿಂದ ಕುಸ್ತಿ ಪ್ರಾರಂಭ ಮಾಡಿದ್ದೇನೆ. ಶಿವಮೊಗ್ಗದಲ್ಲಿ ಮಹಿಳೆಯರಿಗೆ ಕುಸ್ತಿ ಆಡಲು ತುಂಬ ಒಳ್ಳೆಯ ವ್ಯವಸ್ಥೆ ಮಾಡಿ ಕೊಟ್ಟಿದ್ದಾರೆ. ನಾವೆಲ್ಲಾ ಆಳ್ವಾಸ್ನಿಂದ ಬಂದಿದ್ದೇವೆ. ಅಲ್ಲಿ ನಮಗೆ ಅಭ್ಯಾಸವನ್ನು ಮಾಡಿಸುತ್ತಾರೆ. ಬೆಡ್ನಲ್ಲಿ ಕುಸ್ತಿಯಾಡಿ ಇದೀಗ ಮಣ್ಣಿನಲ್ಲಿ ಕುಸ್ತಿಯಾಡಲು ಸ್ವಲ್ಪ ಕಷ್ಟ ಆಗುತ್ತದೆ. ಆದರೆ ಅದು ಅಭ್ಯಾಸವಾದ್ರೆ ಏನೂ ಅನಿಸುವು ದಿಲ್ಲ. ಕುಸ್ತಿ ಎಲ್ಲಿ ಆಯೋಜಿಸುತ್ತಾ ರೆಯೋ ಅಲ್ಲಿಗೆಲ್ಲಾ ನಮ್ಮನ್ನು ಕರೆದುಕೊಂಡು ಹೋಗುತ್ತಾರೆ ಎಂದು ಹೇಳಿದರು.
ಶಿವಮೊಗ್ಗ-ರಾಷ್ಟ್ರಮಟ್ಟದ ಬಯಲು ಕುಸ್ತಿ: ಅಖಾಡದಲ್ಲಿ ಸೆಣಸಿದ ಮಹಿಳಾ ಕುಸ್ತಿಪಟುಗಳು ಶಿವಮೊಗ್ಗ: ಮಾರಿ ಜಾತ್ರೆಯ ಪ್ರಯುಕ್ತ ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿ ರುವ ಮೂರು ದಿನಗಳ ಹೊನಲು ಬೆಳಕಿನ ರಾಷ್ಟ್ರಮಟ್ಟದ ಬಯಲು ಕುಸ್ತಿ ಪಂದ್ಯಾವಳಿಯ ಅಖಾಡ ದಲ್ಲಿ ಮಹಿಳಾ ಕುಸ್ತಿಪಟುಗಳು ಅಖಾಡದಲ್ಲಿ ಸೆಣಸಿ ಗಮನ ಸೆಳೆದರು. ಎರಡು ದಿನದಲ್ಲಿ 10ಕ್ಕೂ ಹೆಚ್ಚು ಜೋಡಿ ಮಹಿಳಾ ಕುಸ್ತಿಗಳು ನಡೆದಿದೆ. ಮಹಿಳಾ ಕುಸ್ತಿಪಟು ಮೃದುಲಾ ಮಾತನಾಡಿ, ನಾವು ಬೆಡ್ ಮೇಲೆ ಕುಸ್ತಿ ಅಭ್ಯಾಸ ಮಾಡುತ್ತೇವೆ. ಆದರೆ ಮಣ್ಣಿನಲ್ಲಿ ಕುಸ್ತಿ ಆಡಿದ್ದು ನನಗೆ ಹೊಸ ಅನುಭವ ನೀಡಿದೆ. ನಮ್ಮಂತಹ ಮಹಿಳಾ ಕುಸ್ತಿಪಟು ಗಳಿಗೆ ಒಳ್ಳೆಯ ವ್ಯವಸ್ಥೆ ಮಾಡಿ ಕೊಟ್ಟಿದ್ದಾರೆ. ನಮಗೆ ಎಲ್ಲಾ ರೀತಿಯ ಸೌಲಭ್ಯವನ್ನು ಆಯೋಜಕರು ಮಾಡಿಕೊಟ್ಟಿ ದ್ದಾರೆ. ನಾವೆಲ್ಲಾ ಬೆಡ್ ಮೇಲೆ ಪಾಯಿಂಟ್ಗಾಗಿ
ಕುಸ್ತಿ ಆಡುತ್ತೇವೆ. ಅದೇ ಇಲ್ಲಿ ಡೈರೆಕ್ಟ್ ಚಿತ್ ಮಾಡುವ ತನಕ ಆಟ ಆಡುತ್ತೇವೆ. ಬೆಡ್ನಲ್ಲಿ ಆಟ ಆಡಿ ಇಲ್ಲಿ ಮಣ್ಣಲ್ಲಿ ಕುಸ್ತಿ ಆಡಲು ಯಾವುದೇ ಸಮಸ್ಯೆ ಆಗಲ್ಲ. ಇಲ್ಲಿ ಕುಸ್ತಿ ಆಡಿದ್ದು ಖುಷಿ ಯಾಗಿದೆ ಎಂದರು. ಮಣ್ಣಿನಲ್ಲಿ ಕುಸ್ತಿ ಆಡಲು ಹಾಗೂ ನೋಡಲು ಖುಷಿ ಆಗುತ್ತದೆ. ನಾನು ಇದೇ ವರ್ಷದಿಂದ ಕುಸ್ತಿ ಪ್ರಾರಂಭ ಮಾಡಿದ್ದೇನೆ. ಶಿವಮೊಗ್ಗದಲ್ಲಿ ಮಹಿಳೆಯರಿಗೆ ಕುಸ್ತಿ ಆಡಲು ತುಂಬ ಒಳ್ಳೆಯ ವ್ಯವಸ್ಥೆ ಮಾಡಿ ಕೊಟ್ಟಿದ್ದಾರೆ. ನಾವೆಲ್ಲಾ ಆಳ್ವಾಸ್ನಿಂದ ಬಂದಿದ್ದೇವೆ. ಅಲ್ಲಿ ನಮಗೆ ಅಭ್ಯಾಸವನ್ನು ಮಾಡಿಸುತ್ತಾರೆ. ಬೆಡ್ನಲ್ಲಿ ಕುಸ್ತಿಯಾಡಿ ಇದೀಗ ಮಣ್ಣಿನಲ್ಲಿ ಕುಸ್ತಿಯಾಡಲು ಸ್ವಲ್ಪ ಕಷ್ಟ ಆಗುತ್ತದೆ. ಆದರೆ ಅದು ಅಭ್ಯಾಸವಾದ್ರೆ ಏನೂ ಅನಿಸುವು ದಿಲ್ಲ. ಕುಸ್ತಿ ಎಲ್ಲಿ ಆಯೋಜಿಸುತ್ತಾ ರೆಯೋ ಅಲ್ಲಿಗೆಲ್ಲಾ ನಮ್ಮನ್ನು ಕರೆದುಕೊಂಡು ಹೋಗುತ್ತಾರೆ ಎಂದು ಹೇಳಿದರು.
- ಕಂಬದಾಳ್ ಹೊಸೂರು ಕ್ಯಾಂಪ್ ಆಟದ ಮೈದಾನ ಆವರಣದಲ್ಲಿ ನಡೆದ ಕಂಬದಾಳ್ ಹೊಸೂರು ಗ್ರಾಮ ಪಂಚಾಯಿತಿ ಮತ್ತು ತಾವರಗಟ್ಟ ಗ್ರಾಮ ಪಂಚಾಯಿತಿಯ ಗೋಡಿಬೀಡು ಮತ್ತು ಮಲ್ಲಿಗೆನಹಳ್ಳಿ ಗ್ರಾಮಗಳ ವ್ಯಾಪ್ತಿಯ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಸಮಿತಿ ಸಭೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರನ್ನು ಕಂಡು ಮನತುಂಬಿ ಬಂತು, ಈ ಕಾರ್ಯಕ್ರಮಕ್ಕೆ ಇಡೀ ಗ್ರಾಮವನ್ನೇ ಹಬ್ಬದ ರೀತಿಯಲ್ಲಿ ಸಿಂಗರಿಸಿ ಹಗಲಿರುಳು ಶ್ರಮಿಸಿದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕಂಬದಾಳ್ ಹೊಸೂರು ಗ್ರಾಮ ಪಂಚಾಯಿತಿಯ ಮತ್ತು ತಾವರಗಟ್ಟ ಗ್ರಾಮ ಪಂಚಾಯಿತಿಯ ಗೋಡಿಬೀಡು ಮತ್ತು ಮಲ್ಲಿಗೆನಹಳ್ಳಿ ಗ್ರಾಮಗಳ ಮಾಜಿ ಅಧ್ಯಕ್ಷರು, ಮಾಜಿ ಉಪಾಧ್ಯಕ್ಷರು, ಮಾಜಿ ಸದಸ್ಯರುಗಳು, ಸರ್ಕಾರಿ ಅಧಿಕಾರಿಗಳು ಮತ್ತು ಆರಕ್ಷಕ ಅಧಿಕಾರಿಗಳಿಗೂ ವಿಶೇಷ ಧನ್ಯವಾದಗಳು. ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಒಂದೇಡೆ ಸೇರಿಸಿ ಜನರ ಕುಂದುಕೊರತೆಗಳನ್ನು ಆಲಿಸಿ ಸ್ಥಳದಲ್ಲೆ ಪರಿಹಾರ ಮಾಡುವಲ್ಲಿ ಯಶಸ್ವಿಗೊಳ್ಳಲಾಯಿತು.ನಿಮ್ಮ ಈ ಪ್ರೀತಿ ಅಭಿಮಾನ ಚಿರಕಾಲ ನಮ್ಮ ಕುಟುಂಬದ ಮೇಲೆ ಇರಲಿ ಎಂದು ಬಯಸುತ್ತೆನೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಟ್ಟ ಪ್ರತಿಯೊಬ್ಬ ಕಾರ್ಯಕರ್ತರಿಗೂ ಮತ್ತು ನಮ್ಮ ಕುಟುಂಬದ ಅಭಿಮಾನಿಗಳಿಗೂ ನನ್ನ ಸಾಷ್ಟಂಗ ನಮಸ್ಕಾರ1
- ಕಡೂರು: ವಿಧಾನ ಸೌಧದಲ್ಲಿ ನಡೆಯುತ್ತಿರುವ ಕರ್ನಾಟಕ ಸರ್ಕಾರದ ಬಜೆಟ್ ಅಧಿವೇಶನದಲ್ಲಿ ಕಡೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್.ಆನಂದ್ ಬೆಂಕಿ ಅವಘಡದಲ್ಲಿ ಸುಟ್ಟು ಹೋದ ಮನೆಗಳಿಗೆ ಪರಿಹಾರವನ್ನು ನೀಡಲಾಗುತ್ತಿದೆ. ಆದರೆ ಅಗ್ನಿ ಅವಘಡ ಯಾಕೆ ಆಯಿತು ಎಂಬ ಕಾರಣ ತಿಳಿಯದೆ ಮನೆಗಳು ಸುಟ್ಟು ಹೋದಾಗ ಜನರಿಗೆ ಪರಿಹಾರ ದೊರೆಯದೇ ಅತ್ಯಂತ ಕಷ್ಟವಾಗುತ್ತಿದ್ದು ಮನೆ ಸುಟ್ಟು ಹೋಗಲು ಸ್ಪಷ್ಟ ಕಾರಣ ತಿಳಿಯದೇ ಹೋದಾಗ ಕೂಡಾ ಆ ಮನೆಗಳಿಗೆ ಎಸ್ಡಿಆರ್ ಎಫ್ ಹಾಗೂ ಎನ್ ಡಿ ಆರ್ ಎಫ್ ಮೂಲಕ ಪರಿಹಾರ ನೀಡಬೇಕಾಗಿ ಸದನದಲ್ಲಿ ಮನವಿ ಮಾಡಿದರು. ಕಳೆದ ಆರು ತಿಂಗಳಲ್ಲಿ ಕಡೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಕಸ್ಮಿಕ ಬೆಂಕಿ ಅನಾಹುತಗಳಿಗೆ ಸುಮಾರು 7 ಮನೆಗಳು ಸುಟ್ಟು ಹೋಗಿದ್ದು ಈ ರೀತಿ ಬೆಂಕಿ ಅವಘಡಗಳಿಗೆ ಸುಟ್ಟು ಹೋದ ಮನೆಗಳಿಗೆ ಸರ್ಕಾರ ಹೆಚ್ಚಿನ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡಬೇಕಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರಲ್ಲಿ ಒತ್ತಾಯಿಸಿದರು.1
- ದಾವಣಗೆರೆ : ದಾವಣಗೆರೆ ದಕ್ಷಿಣ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಬಿಟ್ಟ ವಿಚಾರ. ಯುಗಾದಿ ಹಬ್ಬದ ನಂತರ ನೋಡೋಣ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು. ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಎಸ್ . ಮಲ್ಲಿಕಾರ್ಜುನ್ ಅವರು ರೂ.1061 ಲಕ್ಷಗಳ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಭೂಮಿ ಪೂಜೆ ಸಮಾರಂಭದಲ್ಲಿ ಭಾಗವಹಿಸಿ ನಂತರ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದರು.1
- ತೋಡ್ಲರಹಟ್ಟಿ ಗ್ರಾಮದಲ್ಲಿ ಮಕ್ಕಳ ಕಳ್ಳಿಯೆಂದು ಅನುಮಾನಗೊಂಡು ಮಹಿಳೆಗೆ ಧರ್ಮದೇಟು ಕೊಟ್ಟ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ತೋಡ್ಲರಹಟ್ಟಿ ಗ್ರಾಮದಲ್ಲಿ ಸೋಮವಾರ ಘಟನೆ ನಡೆದಿದ್ದು ಪ್ರಖರಣ ತಡವಾಗಿ ಬೆಳಕಿಗೆ ಬಂದಿದೆ. ಮಕ್ಕಳು ಕಳ್ಳಿಯೆಂದು ಅನುಮಾನಗೊಂಡ ಗ್ರಾಮದ ಮಹಿಳೆಯರು ಮಹಿಳೆಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲ್ಲೂಕಿನ ನನ್ನಿವಾಳ ಗ್ರಾಪಂ ವ್ಯಾಪ್ತಿಯ ತೋಡ್ಲರಹಟ್ಟಿಯಲ್ಲಿ ನಡೆದಿದೆ1
- ಇತ್ತೀಚಿನ ದಿನಗಳಲ್ಲಿ ಮಣ್ಣಿನ ಮನೆಗಳ ನಿರ್ಮಾಣ ಇಲ್ಲದ ಕಾರಣ ಸಿಮೆಂಟು ಮನೆಗಳ ನಿರ್ಮಾಣದಿಂದಾಗಿ ಮನೆಗಳಿಗೆ ಸುಣ್ಣ ಬದಲು ಬಣ್ಣಗಳ ಮರೆ ಹೋಗುತ್ತಿರುವುದರಿಂದ ಸುಣ್ಣಗಾರರ ಬದುಕು ಬಣ್ಣ ಕಳೆದುಕೊಳ್ಳುತ್ತಿದೆ... ಸುಣ್ಣಗಾರರ ಬದಕು ಕುರಿತು ಒಂದು ವರದಿ . ಸುರೇಶ ಬೆಳಗೆರೆ 97398757291
- ನಾಯಕನಹಟ್ಟಿಯಲ್ಲಿ ಶ್ರೀ ಗುರು ತಿಪ್ಪೇಶನ ದರ್ಶನಕ್ಕೆ ಭಕ್ತರ ಸಾಗರ ನಾಯಕನಹಟ್ಟಿಯಲ್ಲಿ ಸೋಮವಾರ ಶ್ರೀ ಗುರು ತಿಪ್ಪೇಶನ ಸ್ವಾಮಿ ದರ್ಶನ ಪಡೆಯಲು ವಿವಿಧ ಕಡೆಗಳಿಂದ ಭಕ್ತರು ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಭಕ್ತಿಭಾವದಿಂದ ದರ್ಶನ ಪಡೆದರು. ಭಕ್ತರು ದೇವರ ಬಳಿ ಮನಸಿನ ಹರಕೆ ತೀರಿಸಲು ಗೊಬರಿ ಸುಡುವ ಮೂಲಕ ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬೇತೂರು ಗ್ರಾಮದ ಉದ್ಯಮಿಯೊಬ್ಬರು ಅನ್ನದಾಸೋಹ ವ್ಯವಸ್ಥೆ ಮಾಡಿದ್ದರೆ, ದಾವಣಗೆರೆ ಮೂಲದ ಉದ್ಯಮಿಯೊಬ್ಬರು ಭಕ್ತರಿಗೆ ಉಚಿತ ಲಾಡು ವಿತರಣೆ ಮಾಡಿದರು. ಕಾರ್ಯಕ್ರಮದ ವೇಳೆ ಆಡಳಿತಾಧಿಕಾರಿ ಗಂಗಾಧರಪ್ಪ, ಸಿಬ್ಬಂದಿ ಸತೀಶ್ ಸೇರಿದಂತೆ ಇತರರು ಭಕ್ತರಿಗೆ ಲಾಡು ವಿತರಣೆ ಮಾಡಿ ಸೇವೆಯಲ್ಲಿ ಭಾಗವಹಿಸಿದರು.1
- ಬ್ರೇಕ್ ಇನ್ಸ್ಪೆಕ್ಟರ್ ಎಡವಟ್ಟಿಗೆ ತುಮಕೂರು ಆರ್ ಟಿ ಓ ಕಚೇರಿ ಮರ್ಯಾದೆ ಹರಾಜು #onlinetv24x7 #tumkur #tumkurrto #tumkursp #tumkurdc #tumkurmp #kpcc #bjp #aicc #aap #krs1
- ಚಳ್ಳಕೆರೆ ತಾಲ್ಲೂಕು ವಿಶ್ವಕರ್ಮ ಸಮಾಜದ ವತಿಯಿಂದ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ವಡ್ಡನಾಹಾಳ್‌ನ ಶ್ರೀ ವಿಶ್ವಕರ್ಮ ಮಹಾ ಸಂಸ್ಥಾನ ಸರಸ್ವತಿ ಪೀಠದಲ್ಲಿ 2026ರ ಏಪ್ರಿಲ್ 19ರಂದು ನಡೆಯಲಿರುವ ಶ್ರೀ ಗಾಯತ್ರಿ ಮಹಾಯಜ್ಞ ಹಾಗೂ ಸಾವಿತ್ರೀ ದೇವಸ್ಥಾನದ ಅಡಿಗಲ್ಲು ಸಮಾರಂಭದ ಪೂರ್ವಸಿದ್ಧತೆ ಕುರಿತು ಸಭೆ ನಡೆಯಿತು.1