logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

### ಕಪಿಲಾ ನದಿಯಲ್ಲಿ ವಿಜೃಂಭಿಸಿದ ಶ್ರೀಕಂಠೇಶ್ವರ ಸ್ವಾಮಿಯ ತೆಪ್ಪೋತ್ಸವ **ನಂಜನಗೂಡು, ನ.27:** ದಕ್ಷಿಣ ಕಾಶಿ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ (ನಂಜುಂಡೇಶ್ವರ) ಸ್ವಾಮಿ ದೇವಾಲಯದ ವಾರ್ಷಿಕ ಚಿಕ್ಕಜಾತ್ರಾ ಮಹೋತ್ಸವದ ಸಮಾರೋಪದ ಅಂಗವಾಗಿ ಶುಕ್ರವಾರ ಸಂಜೆ ಪವಿತ್ರ ಕಪಿಲಾ ನದಿಯಲ್ಲಿ ತೆಪ್ಪೋತ್ಸವ ವಿಜೃಂಭಣೆಯಿಂದ ನೆರವೇರಿತು. ಪಾರ್ವತಿ ಸಮೇತ ಶ್ರೀಕಂಠೇಶ್ವರ ಸ್ವಾಮಿಯ ವಜ್ರ, ಮುತ್ತು ಹಾಗೂ ನವರತ್ನ ಖಚಿತ ಆಭರಣಗಳಿಂದ ಅಲಂಕೃತ ಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ನದಿಯ ಸ್ನಾನಘಟ್ಟಕ್ಕೆ ತರಲಾಯಿತು. ವಿಶೇಷ ದೀಪಾಲಂಕೃತ ತೆಪ್ಪದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಕಪಿಲಾ ನದಿಯಲ್ಲಿ ಮೂರು ಬಾರಿ ಪ್ರದಕ್ಷಿಣೆ ಹಾಕಲಾಯಿತು. ಸಾವಿರಾರು ಭಕ್ತರು ನದಿಯ ಇಕ್ಕೆಲಗಳಲ್ಲಿ ನೆರೆದು ಸ್ವಾಮಿಯ ಜಯಘೋಷ ಮೊಳಗಿಸುತ್ತಾ ತೆಪ್ಪೋತ್ಸವದ ವೈಭವವನ್ನು ಕಣ್ತುಂಬಿಕೊಂಡರು. ನವೆಂಬರ್ 22ರಂದು ಆರಂಭವಾಗಿದ್ದ ಆರು ದಿನಗಳ ಚಿಕ್ಕಜಾತ್ರಾ ಮಹೋತ್ಸವವು ತೆಪ್ಪೋತ್ಸವದೊಂದಿಗೆ ಸಂಭ್ರಮದಿಂದ ಸಮಾಪ್ತಿಗೊಂಡಿತು.

10 hrs ago
user_ಹೊಂಗಿರಣ ನ್ಯೂಸ್
ಹೊಂಗಿರಣ ನ್ಯೂಸ್
Farmer Chamarajanagar, Chamarajanagara•
10 hrs ago

### ಕಪಿಲಾ ನದಿಯಲ್ಲಿ ವಿಜೃಂಭಿಸಿದ ಶ್ರೀಕಂಠೇಶ್ವರ ಸ್ವಾಮಿಯ ತೆಪ್ಪೋತ್ಸವ **ನಂಜನಗೂಡು, ನ.27:** ದಕ್ಷಿಣ ಕಾಶಿ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ (ನಂಜುಂಡೇಶ್ವರ) ಸ್ವಾಮಿ ದೇವಾಲಯದ ವಾರ್ಷಿಕ ಚಿಕ್ಕಜಾತ್ರಾ ಮಹೋತ್ಸವದ ಸಮಾರೋಪದ ಅಂಗವಾಗಿ ಶುಕ್ರವಾರ ಸಂಜೆ ಪವಿತ್ರ ಕಪಿಲಾ ನದಿಯಲ್ಲಿ ತೆಪ್ಪೋತ್ಸವ ವಿಜೃಂಭಣೆಯಿಂದ ನೆರವೇರಿತು. ಪಾರ್ವತಿ ಸಮೇತ ಶ್ರೀಕಂಠೇಶ್ವರ ಸ್ವಾಮಿಯ ವಜ್ರ, ಮುತ್ತು ಹಾಗೂ ನವರತ್ನ ಖಚಿತ ಆಭರಣಗಳಿಂದ ಅಲಂಕೃತ ಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ನದಿಯ ಸ್ನಾನಘಟ್ಟಕ್ಕೆ ತರಲಾಯಿತು. ವಿಶೇಷ ದೀಪಾಲಂಕೃತ ತೆಪ್ಪದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಕಪಿಲಾ ನದಿಯಲ್ಲಿ ಮೂರು ಬಾರಿ ಪ್ರದಕ್ಷಿಣೆ ಹಾಕಲಾಯಿತು. ಸಾವಿರಾರು ಭಕ್ತರು ನದಿಯ ಇಕ್ಕೆಲಗಳಲ್ಲಿ ನೆರೆದು ಸ್ವಾಮಿಯ ಜಯಘೋಷ ಮೊಳಗಿಸುತ್ತಾ ತೆಪ್ಪೋತ್ಸವದ ವೈಭವವನ್ನು ಕಣ್ತುಂಬಿಕೊಂಡರು. ನವೆಂಬರ್ 22ರಂದು ಆರಂಭವಾಗಿದ್ದ ಆರು ದಿನಗಳ ಚಿಕ್ಕಜಾತ್ರಾ ಮಹೋತ್ಸವವು ತೆಪ್ಪೋತ್ಸವದೊಂದಿಗೆ ಸಂಭ್ರಮದಿಂದ ಸಮಾಪ್ತಿಗೊಂಡಿತು.

More news from Chamarajanagara and nearby areas
  • ### ಕಪಿಲಾ ನದಿಯಲ್ಲಿ ವಿಜೃಂಭಿಸಿದ ಶ್ರೀಕಂಠೇಶ್ವರ ಸ್ವಾಮಿಯ ತೆಪ್ಪೋತ್ಸವ **ನಂಜನಗೂಡು, ನ.27:** ದಕ್ಷಿಣ ಕಾಶಿ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ (ನಂಜುಂಡೇಶ್ವರ) ಸ್ವಾಮಿ ದೇವಾಲಯದ ವಾರ್ಷಿಕ ಚಿಕ್ಕಜಾತ್ರಾ ಮಹೋತ್ಸವದ ಸಮಾರೋಪದ ಅಂಗವಾಗಿ ಶುಕ್ರವಾರ ಸಂಜೆ ಪವಿತ್ರ ಕಪಿಲಾ ನದಿಯಲ್ಲಿ ತೆಪ್ಪೋತ್ಸವ ವಿಜೃಂಭಣೆಯಿಂದ ನೆರವೇರಿತು. ಪಾರ್ವತಿ ಸಮೇತ ಶ್ರೀಕಂಠೇಶ್ವರ ಸ್ವಾಮಿಯ ವಜ್ರ, ಮುತ್ತು ಹಾಗೂ ನವರತ್ನ ಖಚಿತ ಆಭರಣಗಳಿಂದ ಅಲಂಕೃತ ಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ನದಿಯ ಸ್ನಾನಘಟ್ಟಕ್ಕೆ ತರಲಾಯಿತು. ವಿಶೇಷ ದೀಪಾಲಂಕೃತ ತೆಪ್ಪದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಕಪಿಲಾ ನದಿಯಲ್ಲಿ ಮೂರು ಬಾರಿ ಪ್ರದಕ್ಷಿಣೆ ಹಾಕಲಾಯಿತು. ಸಾವಿರಾರು ಭಕ್ತರು ನದಿಯ ಇಕ್ಕೆಲಗಳಲ್ಲಿ ನೆರೆದು ಸ್ವಾಮಿಯ ಜಯಘೋಷ ಮೊಳಗಿಸುತ್ತಾ ತೆಪ್ಪೋತ್ಸವದ ವೈಭವವನ್ನು ಕಣ್ತುಂಬಿಕೊಂಡರು. ನವೆಂಬರ್ 22ರಂದು ಆರಂಭವಾಗಿದ್ದ ಆರು ದಿನಗಳ ಚಿಕ್ಕಜಾತ್ರಾ ಮಹೋತ್ಸವವು ತೆಪ್ಪೋತ್ಸವದೊಂದಿಗೆ ಸಂಭ್ರಮದಿಂದ ಸಮಾಪ್ತಿಗೊಂಡಿತು.
    1
    ### ಕಪಿಲಾ ನದಿಯಲ್ಲಿ ವಿಜೃಂಭಿಸಿದ ಶ್ರೀಕಂಠೇಶ್ವರ ಸ್ವಾಮಿಯ ತೆಪ್ಪೋತ್ಸವ
**ನಂಜನಗೂಡು, ನ.27:** ದಕ್ಷಿಣ ಕಾಶಿ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ (ನಂಜುಂಡೇಶ್ವರ) ಸ್ವಾಮಿ ದೇವಾಲಯದ ವಾರ್ಷಿಕ ಚಿಕ್ಕಜಾತ್ರಾ ಮಹೋತ್ಸವದ ಸಮಾರೋಪದ ಅಂಗವಾಗಿ ಶುಕ್ರವಾರ ಸಂಜೆ ಪವಿತ್ರ ಕಪಿಲಾ ನದಿಯಲ್ಲಿ ತೆಪ್ಪೋತ್ಸವ ವಿಜೃಂಭಣೆಯಿಂದ ನೆರವೇರಿತು.
ಪಾರ್ವತಿ ಸಮೇತ ಶ್ರೀಕಂಠೇಶ್ವರ ಸ್ವಾಮಿಯ ವಜ್ರ, ಮುತ್ತು ಹಾಗೂ ನವರತ್ನ ಖಚಿತ ಆಭರಣಗಳಿಂದ ಅಲಂಕೃತ ಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ನದಿಯ ಸ್ನಾನಘಟ್ಟಕ್ಕೆ ತರಲಾಯಿತು. ವಿಶೇಷ ದೀಪಾಲಂಕೃತ ತೆಪ್ಪದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಕಪಿಲಾ ನದಿಯಲ್ಲಿ ಮೂರು ಬಾರಿ ಪ್ರದಕ್ಷಿಣೆ ಹಾಕಲಾಯಿತು.
ಸಾವಿರಾರು ಭಕ್ತರು ನದಿಯ ಇಕ್ಕೆಲಗಳಲ್ಲಿ ನೆರೆದು ಸ್ವಾಮಿಯ ಜಯಘೋಷ ಮೊಳಗಿಸುತ್ತಾ ತೆಪ್ಪೋತ್ಸವದ ವೈಭವವನ್ನು ಕಣ್ತುಂಬಿಕೊಂಡರು. ನವೆಂಬರ್ 22ರಂದು ಆರಂಭವಾಗಿದ್ದ ಆರು ದಿನಗಳ ಚಿಕ್ಕಜಾತ್ರಾ ಮಹೋತ್ಸವವು ತೆಪ್ಪೋತ್ಸವದೊಂದಿಗೆ ಸಂಭ್ರಮದಿಂದ ಸಮಾಪ್ತಿಗೊಂಡಿತು.
    user_ಹೊಂಗಿರಣ ನ್ಯೂಸ್
    ಹೊಂಗಿರಣ ನ್ಯೂಸ್
    Farmer Chamarajanagar, Chamarajanagara•
    10 hrs ago
  • ಕನಕದಾಸರ ತತ್ವ, ಭಕ್ತಿಯೇ ಸಮಾಜಕ್ಕೆ ದೊಡ್ಡ ಸಂದೇಶ: ಸಚಿವ ಸಿ.ಪುಟ್ಟರಂಗಶೆಟ್ಟಿ ವರದಿ:ಹೊಮ್ಮನಂಜುಂಡನಾಯಕ ಕನಕದಾಸರ ತತ್ವ, ಭಕ್ತಿಯೇ ಸಮಾಜಕ್ಕೆ ದೊಡ್ಡ ಸಂದೇಶ: ಸಚಿವ ಸಿ.ಪುಟ್ಟರಂಗಶೆಟ್ಟಿ ಚಾಮರಾಜನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಅಯೋಜಿಸಿದ ಭಕ್ತಶ್ರೇಷ್ಠ  ಶ್ರೀಕನಕದಾಸರ ಜಯಂತಿ ಆಚರಣೆ. ಚಾಮರಾಜನಗರ: ಭಕ್ತ ಶ್ರೇಷ್ಠ ಶ್ರೀ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿದ್ದ ಅಂಕು-ಡೊಂಕುಗಳನ್ನು ಮತ್ತು ಅಸಮಾನತೆಯನ್ನು ತಿದ್ದಲು ನಿರಂತರವಾಗಿ ಪ್ರಯತ್ನಿಸಿದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದರು. ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ವತಿಯಿಂದ ನಡೆದ ಭಕ್ತ ಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. 16ನೇ ಶತಮಾನದ ಭಕ್ತಿ ಚಳವಳಿಯ ಪ್ರಮುಖ ಹರಿದಾಸರಾದ ಕನಕದಾಸರು, ಸಾಮಾನ್ಯ ಜನರಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ಸಮಾಜ ಸುಧಾರಣೆಯ ಸಂದೇಶಗಳನ್ನು ಸಾರಿದರು.ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ.ಎಂಬ ಕೀರ್ತನೆಯ ಮೂಲಕ ಹುಟ್ಟಿನಿಂದ ಯಾರೂ ಮೇಲಲ್ಲ ಅಥವಾ ಕೀಳಲ್ಲ, ಎಲ್ಲರೂ ಭಗವಂತನ ಮಕ್ಕಳು ಎಂಬ ಸಮಾನತೆಯ ಸಂದೇಶ ನೀಡಿದರು ಎಂದರು. ಪ್ರಾಧ್ಯಾಪಕ ರಾಜಶೇಖರ ಜಮದಂಡಿ ಮುಖ್ಯ ಭಾಷಣ ಮಾಡಿದರು. ಕಾಡಾಧ್ಯಕ್ಷ ಪಿ.ಮರಿಸ್ವಾಮಿ, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಜಿಲ್ಲಾಧಿಕಾರಿ ಶ್ರೀರೂಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಚೂಡಾಧ್ಯಕ್ಷ ಮಹಮ್ಮದ್ ಅಸ್ಗರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜು,  ಎಡಿಸಿ ಪ್ರಿಯದರ್ಶಿನಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ  ಉಮೇಶ್ ಎಸ್ ಪಿಕೆ, ಗೌರವಾಧ್ಯಕ್ಷ ಬೆಳ್ಳೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಇತರರು ಹಾಜರಿದ್ದರು. ವರದಿ: ಹೊಮ್ಮನಂಜುಂಡನಾಯಕ ಪ್ರಜಾಪವರ್ ಟಿವಿ ಚಾಮರಾಜನಗರ. •
    4
    ಕನಕದಾಸರ ತತ್ವ, ಭಕ್ತಿಯೇ ಸಮಾಜಕ್ಕೆ ದೊಡ್ಡ ಸಂದೇಶ: ಸಚಿವ ಸಿ.ಪುಟ್ಟರಂಗಶೆಟ್ಟಿ
ವರದಿ:ಹೊಮ್ಮನಂಜುಂಡನಾಯಕ
ಕನಕದಾಸರ ತತ್ವ, ಭಕ್ತಿಯೇ ಸಮಾಜಕ್ಕೆ ದೊಡ್ಡ ಸಂದೇಶ: ಸಚಿವ ಸಿ.ಪುಟ್ಟರಂಗಶೆಟ್ಟಿ
ಚಾಮರಾಜನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಅಯೋಜಿಸಿದ ಭಕ್ತಶ್ರೇಷ್ಠ  ಶ್ರೀಕನಕದಾಸರ ಜಯಂತಿ ಆಚರಣೆ.
ಚಾಮರಾಜನಗರ: ಭಕ್ತ ಶ್ರೇಷ್ಠ ಶ್ರೀ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿದ್ದ ಅಂಕು-ಡೊಂಕುಗಳನ್ನು ಮತ್ತು ಅಸಮಾನತೆಯನ್ನು ತಿದ್ದಲು ನಿರಂತರವಾಗಿ ಪ್ರಯತ್ನಿಸಿದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ವತಿಯಿಂದ ನಡೆದ ಭಕ್ತ ಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
16ನೇ ಶತಮಾನದ ಭಕ್ತಿ ಚಳವಳಿಯ ಪ್ರಮುಖ ಹರಿದಾಸರಾದ ಕನಕದಾಸರು, ಸಾಮಾನ್ಯ ಜನರಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ಸಮಾಜ ಸುಧಾರಣೆಯ ಸಂದೇಶಗಳನ್ನು ಸಾರಿದರು.ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ.ಎಂಬ ಕೀರ್ತನೆಯ ಮೂಲಕ ಹುಟ್ಟಿನಿಂದ ಯಾರೂ ಮೇಲಲ್ಲ ಅಥವಾ ಕೀಳಲ್ಲ, ಎಲ್ಲರೂ ಭಗವಂತನ ಮಕ್ಕಳು ಎಂಬ ಸಮಾನತೆಯ ಸಂದೇಶ ನೀಡಿದರು ಎಂದರು.
ಪ್ರಾಧ್ಯಾಪಕ ರಾಜಶೇಖರ ಜಮದಂಡಿ ಮುಖ್ಯ ಭಾಷಣ ಮಾಡಿದರು.
ಕಾಡಾಧ್ಯಕ್ಷ ಪಿ.ಮರಿಸ್ವಾಮಿ, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಜಿಲ್ಲಾಧಿಕಾರಿ ಶ್ರೀರೂಪ ಮಾತನಾಡಿದರು.
ಕಾರ್ಯಕ್ರಮದಲ್ಲಿ ಚೂಡಾಧ್ಯಕ್ಷ ಮಹಮ್ಮದ್ ಅಸ್ಗರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜು,  ಎಡಿಸಿ ಪ್ರಿಯದರ್ಶಿನಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ  ಉಮೇಶ್ ಎಸ್ ಪಿಕೆ, ಗೌರವಾಧ್ಯಕ್ಷ ಬೆಳ್ಳೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಇತರರು ಹಾಜರಿದ್ದರು.
ವರದಿ: ಹೊಮ್ಮನಂಜುಂಡನಾಯಕ
ಪ್ರಜಾಪವರ್ ಟಿವಿ ಚಾಮರಾಜನಗರ.
•
    user_Nanjunda Nayak
    Nanjunda Nayak
    Photographer ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    18 hrs ago
  • ### ಹನೂರಿನಲ್ಲಿ ಕನಕದಾಸರ ಜಯಂತಿ ಆಚರಣೆ **ಹನೂರು:** ತಾಲೂಕು ಆಡಳಿತದ ವತಿಯಿಂದ ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿಗೃಹದ ಸಭಾಂಗಣದಲ್ಲಿ ಕನಕದಾಸರ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಶಾಸಕ ಮಂಜುನಾಥ್ ಅವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ಕನಕದಾಸರು ತಮ್ಮ ಸಾಹಿತ್ಯ ಹಾಗೂ ಕೀರ್ತನೆಗಳ ಮೂಲಕ ಸಮಾನತೆ, ಮಾನವೀಯತೆ ಮತ್ತು ಸಹಬಾಳ್ವೆಯ ಸಂದೇಶ ಸಾರಿದ್ದಾರೆ. ಅವರ ಆದರ್ಶಗಳನ್ನು ಯುವಜನತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಚಪ್ಪ, ತಹಸೀಲ್ದಾರ್ ಚೈತ್ರಾ, ಬಿಇಒ ಪ್ರತಿಭಾ, ತಾಪಂ ಅಧಿಕಾರಿ ರವೀಂದ್ರ, ಚೆಸ್ಕಾಂ ಎಇಇ ರಂಗಸ್ವಾಮಿ, ಶಿವಮಲ್ಲು, ಶಿಕ್ಷಕರಾದ ರಾಜು, ವೆಂಕಟರಾಜು ಹಾಗೂ ಮುಖಂಡರು, ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ### ಹನೂರಿನಲ್ಲಿ ಕನಕದಾಸರ ಜಯಂತಿ ಆಚರಣೆ **ಹನೂರು:** ತಾಲೂಕು ಆಡಳಿತದ ವತಿಯಿಂದ ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿಗೃಹದ ಸಭಾಂಗಣದಲ್ಲಿ ಕನಕದಾಸರ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಶಾಸಕ ಮಂಜುನಾಥ್ ಅವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ಕನಕದಾಸರು ತಮ್ಮ ಸಾಹಿತ್ಯ ಹಾಗೂ ಕೀರ್ತನೆಗಳ ಮೂಲಕ ಸಮಾನತೆ, ಮಾನವೀಯತೆ ಮತ್ತು ಸಹಬಾಳ್ವೆಯ ಸಂದೇಶ ಸಾರಿದ್ದಾರೆ. ಅವರ ಆದರ್ಶಗಳನ್ನು ಯುವಜನತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಚಪ್ಪ, ತಹಸೀಲ್ದಾರ್ ಚೈತ್ರಾ, ಬಿಇಒ ಪ್ರತಿಭಾ, ತಾಪಂ ಅಧಿಕಾರಿ ರವೀಂದ್ರ, ಚೆಸ್ಕಾಂ ಎಇಇ ರಂಗಸ್ವಾಮಿ, ಶಿವಮಲ್ಲು, ಶಿಕ್ಷಕರಾದ ರಾಜು, ವೆಂಕಟರಾಜು ಹಾಗೂ ಮುಖಂಡರು, ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
    3
    ### ಹನೂರಿನಲ್ಲಿ ಕನಕದಾಸರ ಜಯಂತಿ ಆಚರಣೆ

**ಹನೂರು:** ತಾಲೂಕು ಆಡಳಿತದ ವತಿಯಿಂದ ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿಗೃಹದ ಸಭಾಂಗಣದಲ್ಲಿ ಕನಕದಾಸರ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಶಾಸಕ ಮಂಜುನಾಥ್ ಅವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ಕನಕದಾಸರು ತಮ್ಮ ಸಾಹಿತ್ಯ ಹಾಗೂ ಕೀರ್ತನೆಗಳ ಮೂಲಕ ಸಮಾನತೆ, ಮಾನವೀಯತೆ ಮತ್ತು ಸಹಬಾಳ್ವೆಯ ಸಂದೇಶ ಸಾರಿದ್ದಾರೆ. ಅವರ ಆದರ್ಶಗಳನ್ನು ಯುವಜನತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಚಪ್ಪ, ತಹಸೀಲ್ದಾರ್ ಚೈತ್ರಾ, ಬಿಇಒ ಪ್ರತಿಭಾ, ತಾಪಂ ಅಧಿಕಾರಿ ರವೀಂದ್ರ, ಚೆಸ್ಕಾಂ ಎಇಇ ರಂಗಸ್ವಾಮಿ, ಶಿವಮಲ್ಲು, ಶಿಕ್ಷಕರಾದ ರಾಜು, ವೆಂಕಟರಾಜು ಹಾಗೂ ಮುಖಂಡರು, ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

### ಹನೂರಿನಲ್ಲಿ ಕನಕದಾಸರ ಜಯಂತಿ ಆಚರಣೆ
**ಹನೂರು:** ತಾಲೂಕು ಆಡಳಿತದ ವತಿಯಿಂದ ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿಗೃಹದ ಸಭಾಂಗಣದಲ್ಲಿ ಕನಕದಾಸರ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಶಾಸಕ ಮಂಜುನಾಥ್ ಅವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ಕನಕದಾಸರು ತಮ್ಮ ಸಾಹಿತ್ಯ ಹಾಗೂ ಕೀರ್ತನೆಗಳ ಮೂಲಕ ಸಮಾನತೆ, ಮಾನವೀಯತೆ ಮತ್ತು ಸಹಬಾಳ್ವೆಯ ಸಂದೇಶ ಸಾರಿದ್ದಾರೆ. ಅವರ ಆದರ್ಶಗಳನ್ನು ಯುವಜನತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಚಪ್ಪ, ತಹಸೀಲ್ದಾರ್ ಚೈತ್ರಾ, ಬಿಇಒ ಪ್ರತಿಭಾ, ತಾಪಂ ಅಧಿಕಾರಿ ರವೀಂದ್ರ, ಚೆಸ್ಕಾಂ ಎಇಇ ರಂಗಸ್ವಾಮಿ, ಶಿವಮಲ್ಲು, ಶಿಕ್ಷಕರಾದ ರಾಜು, ವೆಂಕಟರಾಜು ಹಾಗೂ ಮುಖಂಡರು, ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
    user_ಹನೂರು ನ್ಯೂಸ್ ಅಡ್ಡ
    ಹನೂರು ನ್ಯೂಸ್ ಅಡ್ಡ
    Farmer ಹನೂರು, ಚಾಮರಾಜನಗರ, ಕರ್ನಾಟಕ•
    15 hrs ago
  • ಕೊಳ್ಳೇಗಾಲ ಬಸ್ ನಿಲ್ದಾಣದ ಬಳಿ ಬಾಯ್ತೆರೆದ ಮ್ಯಾನ್‌ಹೋಲ್: ಕಡ್ಡಿಗೆ ಪ್ಲಾಸ್ಟಿಕ್ ಕವರ್ ಕಟ್ಟಿ ಎಚ್ಚರಿಕೆ ನೀಡುತ್ತಿರುವ ಸಾರ್ವಜನಿಕರು! ​ಕೊಳ್ಳೇಗಾಲ: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಬಸ್ ನಿಲ್ದಾಣದ ಸಮೀಪವಿರುವ ಡಾ. ವಿಷ್ಣುವರ್ಧನ್ ರಸ್ತೆಯ ಮಧ್ಯಭಾಗದಲ್ಲೇ ಮ್ಯಾನ್‌ಹೋಲ್ (ಒಳಚರಂಡಿ ಗುಂಡಿ) ಮುಚ್ಚಳ ಕುಸಿದು ಬಿದ್ದಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ. ​ನಗರದ ಅತ್ಯಂತ ಜನನಿಬಿಡ ಪ್ರದೇಶವಾಗಿರುವ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಬಸ್‌ಗಳು, ಆಟೋಗಳು, ದ್ವಿಚಕ್ರ ವಾಹನಗಳು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಆದರೆ, ರಸ್ತೆಯ ನಡುವೆಯೇ ಮ್ಯಾನ್‌ಹೋಲ್ ಮುಚ್ಚಳ ಒಡೆದು ಕಬ್ಬಿಣದ ಸರಳುಗಳು ಹಾಗೂ ಕಲ್ಲುಗಳು ಮೇಲೆದ್ದು ನಿಂತಿವೆ. ಇದರಿಂದ ಅಪಘಾತ ಸಂಭವಿಸುವ ಭೀತಿ ಎದುರಾಗಿರುವುದರಿಂದ, ಸಾರ್ವಜನಿಕರೇ ಎಚ್ಚೆತ್ತುಕೊಂಡು ಗುಂಡಿಯ ಬಳಿ ಕಡ್ಡಿಗೆ ನೀಲಿ ಬಣ್ಣದ ಪ್ಲಾಸ್ಟಿಕ್ ಕವರ್ ಕಟ್ಟಿ ವಾಹನ ಸವಾರರಿಗೆ ಎಚ್ಚರಿಕೆ ನೀಡುವಂತಹ ದುಸ್ಥಿತಿ ನಿರ್ಮಾಣವಾಗಿದೆ. ​ರಾತ್ರಿ ವೇಳೆ ಅಥವಾ ಮಳೆ ಬಂದಾಗ ಈ ಗುಂಡಿ ಕಾಣಿಸದೆ ದ್ವಿಚಕ್ರ ವಾಹನ ಸವಾರರು ಬಿದ್ದು ಪ್ರಾಣಾಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿದೆ. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ದೊಡ್ಡ ಅನಾಹುತ ಸಂಭವಿಸುವ ಮುನ್ನವೇ ತಕ್ಷಣ ಎಚ್ಚೆತ್ತುಕೊಂಡು ಮ್ಯಾನ್‌ಹೋಲ್ ದುರಸ್ತಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
    1
    ಕೊಳ್ಳೇಗಾಲ ಬಸ್ ನಿಲ್ದಾಣದ ಬಳಿ ಬಾಯ್ತೆರೆದ ಮ್ಯಾನ್‌ಹೋಲ್: ಕಡ್ಡಿಗೆ ಪ್ಲಾಸ್ಟಿಕ್ ಕವರ್ ಕಟ್ಟಿ ಎಚ್ಚರಿಕೆ ನೀಡುತ್ತಿರುವ ಸಾರ್ವಜನಿಕರು!
​ಕೊಳ್ಳೇಗಾಲ: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಬಸ್ ನಿಲ್ದಾಣದ ಸಮೀಪವಿರುವ ಡಾ. ವಿಷ್ಣುವರ್ಧನ್ ರಸ್ತೆಯ ಮಧ್ಯಭಾಗದಲ್ಲೇ ಮ್ಯಾನ್‌ಹೋಲ್ (ಒಳಚರಂಡಿ ಗುಂಡಿ) ಮುಚ್ಚಳ ಕುಸಿದು ಬಿದ್ದಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ. 
​ನಗರದ ಅತ್ಯಂತ ಜನನಿಬಿಡ ಪ್ರದೇಶವಾಗಿರುವ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಬಸ್‌ಗಳು, ಆಟೋಗಳು, ದ್ವಿಚಕ್ರ ವಾಹನಗಳು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಆದರೆ, ರಸ್ತೆಯ ನಡುವೆಯೇ ಮ್ಯಾನ್‌ಹೋಲ್ ಮುಚ್ಚಳ ಒಡೆದು ಕಬ್ಬಿಣದ ಸರಳುಗಳು ಹಾಗೂ ಕಲ್ಲುಗಳು ಮೇಲೆದ್ದು ನಿಂತಿವೆ. ಇದರಿಂದ ಅಪಘಾತ ಸಂಭವಿಸುವ ಭೀತಿ ಎದುರಾಗಿರುವುದರಿಂದ, ಸಾರ್ವಜನಿಕರೇ ಎಚ್ಚೆತ್ತುಕೊಂಡು ಗುಂಡಿಯ ಬಳಿ ಕಡ್ಡಿಗೆ ನೀಲಿ ಬಣ್ಣದ ಪ್ಲಾಸ್ಟಿಕ್ ಕವರ್ ಕಟ್ಟಿ ವಾಹನ ಸವಾರರಿಗೆ ಎಚ್ಚರಿಕೆ ನೀಡುವಂತಹ ದುಸ್ಥಿತಿ ನಿರ್ಮಾಣವಾಗಿದೆ. 
​ರಾತ್ರಿ ವೇಳೆ ಅಥವಾ ಮಳೆ ಬಂದಾಗ ಈ ಗುಂಡಿ ಕಾಣಿಸದೆ ದ್ವಿಚಕ್ರ ವಾಹನ ಸವಾರರು ಬಿದ್ದು ಪ್ರಾಣಾಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿದೆ. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ದೊಡ್ಡ ಅನಾಹುತ ಸಂಭವಿಸುವ ಮುನ್ನವೇ ತಕ್ಷಣ ಎಚ್ಚೆತ್ತುಕೊಂಡು ಮ್ಯಾನ್‌ಹೋಲ್ ದುರಸ್ತಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
    user_ಉಸ್ಮಾನ್ ಖಾನ್
    ಉಸ್ಮಾನ್ ಖಾನ್
    Local News Reporter ಹನೂರು, ಚಾಮರಾಜನಗರ, ಕರ್ನಾಟಕ•
    15 hrs ago
  • All About,Vested interests who wants to become famous overnight by spreading selfish propaganda *ಭಾರತ ನಲ್ಲಿ ವೈರಲ್*
    1
    All About,Vested interests who wants to become famous overnight by spreading selfish propaganda 
*ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    11 hrs ago
  • ಕಪಿಲಾ ನದಿಯಲ್ಲಿ ನಂಜುಂಡೇಶ್ವರನ ತೆಪ್ಪೋತ್ಸವ: ಚಿಕ್ಕ ಜಾತ್ರಾ ಮಹೋತ್ಸವಕ್ಕೆ ತೆರೆ ನಂಜನಗೂಡು: ಕಪಿಲಾ ನದಿಯಲ್ಲಿ ನಂಜುಂಡೇಶ್ವರನ ತೆಪ್ಪೋತ್ಸವದ ವೈಭವ... ಪಟಾಕಿಗಳ ಬೆಳಕಿನಲ್ಲಿ ಕಂಗೊಳಿಸಿದ ನದಿ ತೀರ... ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು... ಹೌದು... ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಚಿಕ್ಕ ಜಾತ್ರಾ ಮಹೋತ್ಸವದ ಅಂಗವಾಗಿ ಪಾರ್ವತಿ ಸಮೇತ ಶ್ರೀಕಂಠೇಶ್ವರ ಸ್ವಾಮಿಯವರ ತೆಪ್ಪೋತ್ಸವ ಶುಕ್ರವಾರ ರಾತ್ರಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ದೇವಾಲಯದ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ಅವರ ನೇತೃತ್ವದಲ್ಲಿ ಅರ್ಚಕರು ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ವಜ್ರಾಭರಣ ಹಾಗೂ ವಿವಿಧ ಆಭರಣಗಳಿಂದ ಅಲಂಕೃತಗೊಂಡ ಉತ್ಸವ ಮೂರ್ತಿಗಳನ್ನು ಮಂಗಳವಾದ್ಯಗಳೊಂದಿಗೆ ಪಲ್ಲಕ್ಕಿಯಲ್ಲಿ ಕಪಿಲಾ ನದಿಯ ಸ್ನಾನಘಟ್ಟಕ್ಕೆ ತರಲಾಯಿತು. ನದಿ ದಂಡೆಯಲ್ಲಿ ಸಂಕಲ್ಪ, ವಿಶೇಷ ಪೂಜೆ, ವೇದಮಂತ್ರ ಪಠಣ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಪುಷ್ಪಾಲಂಕಾರ ಮತ್ತು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದ ತೇಲುವ ದೇವಾಲಯದ ಮಾದರಿಯ ತೆಪ್ಪದಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. ನಂತರ ಪಾರ್ವತಿ ಸಮೇತ ನಂಜುಂಡೇಶ್ವರ ಸ್ವಾಮಿಯವರ ತೆಪ್ಪವು ಕಪಿಲಾ ನದಿಯಲ್ಲಿ ಮೂರು ಬಾರಿ ಪ್ರದಕ್ಷಿಣೆ ಹಾಕಿತು. ತೆಪ್ಪ ಸಾಗುತ್ತಿದ್ದಂತೆ ಭಕ್ತರು ನಂಜುಂಡೇಶ್ವರನಿಗೆ ಜಯಘೋಷ ಮೊಳಗಿಸಿ ಭಕ್ತಿಭಾವ ಮೆರೆದರು. ಇತ್ತ ಪಟಾಕಿಗಳ ಸಿಡಿಮದ್ದು ಆಕಾಶದಲ್ಲಿ ಬಣ್ಣದ ಚಿತ್ತಾರ ಮೂಡಿಸಿದರೆ, ಅತ್ತ ದೀಪಾಲಂಕಾರದಿಂದ ಕಂಗೊಳಿಸಿದ ತೆಪ್ಪ ಭಕ್ತರ ಕಣ್ಮನ ಸೆಳೆಯಿತು. ಸಾವಿರಾರು ಭಕ್ತರು ಈ ಅಪರೂಪದ ಧಾರ್ಮಿಕ ವೈಭವವನ್ನು ಕಣ್ತುಂಬಿಕೊಂಡರು. ಭಕ್ತರ ಸುರಕ್ಷತೆ ಹಾಗೂ ಜನದಟ್ಟಣೆ ನಿಯಂತ್ರಣಕ್ಕಾಗಿ ಪೊಲೀಸ್ ಇಲಾಖೆ ಬಿಗಿ ಭದ್ರತೆ ಕೈಗೊಂಡಿತ್ತು. ಮೂರು ರಥಗಳ ಮಹಾರಥೋತ್ಸವ ಸೇರಿದಂತೆ ಆರು ದಿನಗಳ ಕಾಲ ನಡೆದ ನಂಜನಗೂಡಿನ ಚಿಕ್ಕ ಜಾತ್ರಾ ಮಹೋತ್ಸವಕ್ಕೆ ಕಪಿಲಾ ನದಿಯ ತೆಪ್ಪೋತ್ಸವದೊಂದಿಗೆ ಭಕ್ತಿಪೂರ್ವಕ ತೆರೆ ಬಿದ್ದಿತು.
    4
    ಕಪಿಲಾ ನದಿಯಲ್ಲಿ ನಂಜುಂಡೇಶ್ವರನ ತೆಪ್ಪೋತ್ಸವ: ಚಿಕ್ಕ ಜಾತ್ರಾ ಮಹೋತ್ಸವಕ್ಕೆ ತೆರೆ
ನಂಜನಗೂಡು: ಕಪಿಲಾ ನದಿಯಲ್ಲಿ ನಂಜುಂಡೇಶ್ವರನ ತೆಪ್ಪೋತ್ಸವದ ವೈಭವ... ಪಟಾಕಿಗಳ ಬೆಳಕಿನಲ್ಲಿ ಕಂಗೊಳಿಸಿದ ನದಿ ತೀರ... ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು...
ಹೌದು... ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಚಿಕ್ಕ ಜಾತ್ರಾ ಮಹೋತ್ಸವದ ಅಂಗವಾಗಿ ಪಾರ್ವತಿ ಸಮೇತ ಶ್ರೀಕಂಠೇಶ್ವರ ಸ್ವಾಮಿಯವರ ತೆಪ್ಪೋತ್ಸವ ಶುಕ್ರವಾರ ರಾತ್ರಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ದೇವಾಲಯದ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ಅವರ ನೇತೃತ್ವದಲ್ಲಿ ಅರ್ಚಕರು ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ವಜ್ರಾಭರಣ ಹಾಗೂ ವಿವಿಧ ಆಭರಣಗಳಿಂದ ಅಲಂಕೃತಗೊಂಡ ಉತ್ಸವ ಮೂರ್ತಿಗಳನ್ನು ಮಂಗಳವಾದ್ಯಗಳೊಂದಿಗೆ ಪಲ್ಲಕ್ಕಿಯಲ್ಲಿ ಕಪಿಲಾ ನದಿಯ ಸ್ನಾನಘಟ್ಟಕ್ಕೆ ತರಲಾಯಿತು.
ನದಿ ದಂಡೆಯಲ್ಲಿ ಸಂಕಲ್ಪ, ವಿಶೇಷ ಪೂಜೆ, ವೇದಮಂತ್ರ ಪಠಣ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಪುಷ್ಪಾಲಂಕಾರ ಮತ್ತು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದ ತೇಲುವ ದೇವಾಲಯದ ಮಾದರಿಯ ತೆಪ್ಪದಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು.
ನಂತರ ಪಾರ್ವತಿ ಸಮೇತ ನಂಜುಂಡೇಶ್ವರ ಸ್ವಾಮಿಯವರ ತೆಪ್ಪವು ಕಪಿಲಾ ನದಿಯಲ್ಲಿ ಮೂರು ಬಾರಿ ಪ್ರದಕ್ಷಿಣೆ ಹಾಕಿತು. ತೆಪ್ಪ ಸಾಗುತ್ತಿದ್ದಂತೆ ಭಕ್ತರು ನಂಜುಂಡೇಶ್ವರನಿಗೆ ಜಯಘೋಷ ಮೊಳಗಿಸಿ ಭಕ್ತಿಭಾವ ಮೆರೆದರು.
ಇತ್ತ ಪಟಾಕಿಗಳ ಸಿಡಿಮದ್ದು ಆಕಾಶದಲ್ಲಿ ಬಣ್ಣದ ಚಿತ್ತಾರ ಮೂಡಿಸಿದರೆ, ಅತ್ತ ದೀಪಾಲಂಕಾರದಿಂದ ಕಂಗೊಳಿಸಿದ ತೆಪ್ಪ ಭಕ್ತರ ಕಣ್ಮನ ಸೆಳೆಯಿತು. ಸಾವಿರಾರು ಭಕ್ತರು ಈ ಅಪರೂಪದ ಧಾರ್ಮಿಕ ವೈಭವವನ್ನು ಕಣ್ತುಂಬಿಕೊಂಡರು.
ಭಕ್ತರ ಸುರಕ್ಷತೆ ಹಾಗೂ ಜನದಟ್ಟಣೆ ನಿಯಂತ್ರಣಕ್ಕಾಗಿ ಪೊಲೀಸ್ ಇಲಾಖೆ ಬಿಗಿ ಭದ್ರತೆ ಕೈಗೊಂಡಿತ್ತು.
ಮೂರು ರಥಗಳ ಮಹಾರಥೋತ್ಸವ ಸೇರಿದಂತೆ ಆರು ದಿನಗಳ ಕಾಲ ನಡೆದ ನಂಜನಗೂಡಿನ ಚಿಕ್ಕ ಜಾತ್ರಾ ಮಹೋತ್ಸವಕ್ಕೆ ಕಪಿಲಾ ನದಿಯ ತೆಪ್ಪೋತ್ಸವದೊಂದಿಗೆ ಭಕ್ತಿಪೂರ್ವಕ ತೆರೆ ಬಿದ್ದಿತು.
    user_ಸುಗಂಧ ನ್ಯೂಸ್
    ಸುಗಂಧ ನ್ಯೂಸ್
    Voice of people Mysuru, Karnataka•
    12 hrs ago
  • ಹಲಗೂರಿನ ಗ್ರಾಮದೇವತೆ ಶ್ರೀ ಪಟ್ಟಲದಮ್ಮನವರ 15ನೇ ವರ್ಷದ ವಾರ್ಷಿಕೋತ್ಸವ ಮಳವಳ್ಳಿ: ಗ್ರಾಮದೇವತೆ ಶ್ರೀ ಪಟ್ಟಲದಮ್ಮನವರ 15ನೇ ವರ್ಷದ ವಾರ್ಷಿಕೋತ್ಸವ ಹಾಗೂ ಕಾರ್ತಿಕ ಮಾಸದ ವಿಶೇಷ ಪೂಜಾ ಸಮಾರಂಭವು ಹಲಗೂರು ಮತ್ತು ವಳಗೆರೆದೊಡ್ಡಿ ಗ್ರಾಮಸ್ಥರು ಹಾಗೂ ಭಕ್ತಾದಿಗಳ ಸಹಕಾರದೊಂದಿಗೆ ಭಕ್ತಿಭಾವದಿಂದ ನೆರವೇರಿತು. ಶ್ರೀ ಪಟ್ಟಲದಮ್ಮನವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಮತ್ತು ಶ್ರೀ ಪಟ್ಟಲದಮ್ಮನವರ ಯುವಕರ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇವಿಗೆ ವಿಶೇಷ ಪೂಜೆ, ಹೋಮ, ಮಹಾಭಿಷೇಕ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಪ್ರಧಾನ ಕಳಸ ಸ್ಥಾಪನೆ, ಸಪ್ತ ಮಾತೃಕಾ ದೇವಿ ಪೂಜೆ, ದುರ್ಗಾ ಹೋಮ, ಮಹಾಭಿಷೇಕ, ಕಲಾಹೋಮ, ಜಯಾಧಿ ಹೋಮ, ಪೂರ್ಣಾಹುತಿ, ಕಳಶಾಭಿಷೇಕ ಹಾಗೂ ದೇವಿಗೆ ವಿಶೇಷ ಅಲಂಕಾರ ಮತ್ತು ಮಹಾ ನೈವೇದ್ಯ ಸಮರ್ಪಿಸಲಾಯಿತು. ಕನಕಪುರ ಮುಖ್ಯ ರಸ್ತೆಯ ಸೋನಿ ಪೆಟ್ರೋಲ್ ಬಂಕ್‌ನಿಂದ ಪೂರ್ಣಕುಂಭ ಮೇಳದೊಂದಿಗೆ ಶ್ರೀ ಹೆಬ್ಬೆಟ್ಟದ ಬಸವೇಶ್ವರಸ್ವಾಮಿ, ಶ್ರೀ ವೀರಭದ್ರಸ್ವಾಮಿ, ಶ್ರೀ ಸಿದ್ದಪ್ಪಾಜಿ, ಶ್ರೀ ಪಟ್ಟಲದಮೃತಾಯಿ, ಶ್ರೀ ಪಟ್ಟಲದಮ್ಮ ಬಸಪ್ಪ ಹಾಗೂ ಶ್ರೀ ಭದ್ರಕಾಳಿ ಬಸಪ್ಪನವರ ಪಲ್ಲಕ್ಕಿಗಳ ಭವ್ಯ ಮೆರವಣಿಗೆ ನಡೆಯಿತು. ಮಹಿಳೆಯರು ಮತ್ತು ಮಕ್ಕಳು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ವೀರಗಾಸೆ, ಪೂಜಾ ಕುಣಿತ ಹಾಗೂ ಡೊಳ್ಳು ಕುಣಿತ ಮೆರವಣಿಗೆಗೆ ನೋಡುಗರಿಗೆ ವಿಶೇಷ ಮೆರುಗು ನೀಡಿದವು. ಹಲಗೂರಿನ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸಿ ದೇವಿಯ ದರ್ಶನ ಪಡೆದರು. ಮೆರವಣಿಗೆ ದೇವಸ್ಥಾನದ ಸನ್ನಿಧಿಗೆ ತಲುಪಿದ ಬಳಿಕ ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ತೀರ್ಥಪ್ರಸಾದ ವಿನಿಯೋಗಿಸಲಾಯಿತು. ಸಾವಿರಾರು ಭಕ್ತಾದಿಗಳಿಗೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.ಗ್ರಾಮದೇವತೆ ಶ್ರೀ ಪಟ್ಟಲದಮ್ಮನವರ ವಾರ್ಷಿಕೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಹಲಗೂರು ಮತ್ತು ವಳಗೆರೆದೊಡ್ಡಿ ಗ್ರಾಮಸ್ಥರು, ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶಿವಮಾದು, ಎಚ್.ಎಂ. ಆನಂದ್ ಕುಮಾರ್, ಶಿವಸ್ವಾಮಿ, ಜಗದೀಶ್, ದರ್ಶನ್, ಸಿದ್ದರಾಜು, ಸಂತೋಷ್, ಮಹದೇವು, ಕ್ಯಾಟ್ ಉಮೇಶ್, ಆನಂದ್, ಶೇಖರ್, ಮಂಜು, ಚಿಕ್ಕಮೊಗ, ದಿಲೀಪ್, ಅರ್ಚಕ ಕೃಷ್ಣಪ್ಪ, ಮುತ್ತುರಾಜು, ಮಧು, ಪೃಥ್ವಿ, ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
    1
    ಹಲಗೂರಿನ ಗ್ರಾಮದೇವತೆ ಶ್ರೀ ಪಟ್ಟಲದಮ್ಮನವರ 15ನೇ ವರ್ಷದ ವಾರ್ಷಿಕೋತ್ಸವ
ಮಳವಳ್ಳಿ: ಗ್ರಾಮದೇವತೆ ಶ್ರೀ ಪಟ್ಟಲದಮ್ಮನವರ 15ನೇ ವರ್ಷದ ವಾರ್ಷಿಕೋತ್ಸವ ಹಾಗೂ ಕಾರ್ತಿಕ ಮಾಸದ ವಿಶೇಷ ಪೂಜಾ ಸಮಾರಂಭವು ಹಲಗೂರು ಮತ್ತು ವಳಗೆರೆದೊಡ್ಡಿ ಗ್ರಾಮಸ್ಥರು ಹಾಗೂ ಭಕ್ತಾದಿಗಳ ಸಹಕಾರದೊಂದಿಗೆ ಭಕ್ತಿಭಾವದಿಂದ ನೆರವೇರಿತು.
ಶ್ರೀ ಪಟ್ಟಲದಮ್ಮನವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಮತ್ತು ಶ್ರೀ ಪಟ್ಟಲದಮ್ಮನವರ ಯುವಕರ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇವಿಗೆ ವಿಶೇಷ ಪೂಜೆ, ಹೋಮ, ಮಹಾಭಿಷೇಕ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಪ್ರಧಾನ ಕಳಸ ಸ್ಥಾಪನೆ, ಸಪ್ತ ಮಾತೃಕಾ ದೇವಿ ಪೂಜೆ, ದುರ್ಗಾ ಹೋಮ, ಮಹಾಭಿಷೇಕ, ಕಲಾಹೋಮ, ಜಯಾಧಿ ಹೋಮ, ಪೂರ್ಣಾಹುತಿ, ಕಳಶಾಭಿಷೇಕ ಹಾಗೂ ದೇವಿಗೆ ವಿಶೇಷ ಅಲಂಕಾರ ಮತ್ತು ಮಹಾ ನೈವೇದ್ಯ ಸಮರ್ಪಿಸಲಾಯಿತು. ಕನಕಪುರ ಮುಖ್ಯ ರಸ್ತೆಯ ಸೋನಿ ಪೆಟ್ರೋಲ್ ಬಂಕ್‌ನಿಂದ ಪೂರ್ಣಕುಂಭ ಮೇಳದೊಂದಿಗೆ ಶ್ರೀ ಹೆಬ್ಬೆಟ್ಟದ ಬಸವೇಶ್ವರಸ್ವಾಮಿ, ಶ್ರೀ ವೀರಭದ್ರಸ್ವಾಮಿ, ಶ್ರೀ ಸಿದ್ದಪ್ಪಾಜಿ, ಶ್ರೀ ಪಟ್ಟಲದಮೃತಾಯಿ, ಶ್ರೀ ಪಟ್ಟಲದಮ್ಮ ಬಸಪ್ಪ ಹಾಗೂ ಶ್ರೀ ಭದ್ರಕಾಳಿ ಬಸಪ್ಪನವರ ಪಲ್ಲಕ್ಕಿಗಳ ಭವ್ಯ ಮೆರವಣಿಗೆ ನಡೆಯಿತು. ಮಹಿಳೆಯರು ಮತ್ತು ಮಕ್ಕಳು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ವೀರಗಾಸೆ, ಪೂಜಾ ಕುಣಿತ ಹಾಗೂ ಡೊಳ್ಳು ಕುಣಿತ ಮೆರವಣಿಗೆಗೆ ನೋಡುಗರಿಗೆ ವಿಶೇಷ ಮೆರುಗು ನೀಡಿದವು. ಹಲಗೂರಿನ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸಿ ದೇವಿಯ ದರ್ಶನ ಪಡೆದರು.
ಮೆರವಣಿಗೆ ದೇವಸ್ಥಾನದ ಸನ್ನಿಧಿಗೆ ತಲುಪಿದ ಬಳಿಕ ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ತೀರ್ಥಪ್ರಸಾದ ವಿನಿಯೋಗಿಸಲಾಯಿತು. ಸಾವಿರಾರು ಭಕ್ತಾದಿಗಳಿಗೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.ಗ್ರಾಮದೇವತೆ ಶ್ರೀ ಪಟ್ಟಲದಮ್ಮನವರ ವಾರ್ಷಿಕೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಹಲಗೂರು ಮತ್ತು ವಳಗೆರೆದೊಡ್ಡಿ ಗ್ರಾಮಸ್ಥರು, ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶಿವಮಾದು, ಎಚ್.ಎಂ. ಆನಂದ್ ಕುಮಾರ್, ಶಿವಸ್ವಾಮಿ, ಜಗದೀಶ್, ದರ್ಶನ್, ಸಿದ್ದರಾಜು, ಸಂತೋಷ್, ಮಹದೇವು, ಕ್ಯಾಟ್ ಉಮೇಶ್, ಆನಂದ್, ಶೇಖರ್, ಮಂಜು, ಚಿಕ್ಕಮೊಗ, ದಿಲೀಪ್, ಅರ್ಚಕ ಕೃಷ್ಣಪ್ಪ, ಮುತ್ತುರಾಜು, ಮಧು, ಪೃಥ್ವಿ, ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
    user_ಎ.ಎನ್ ಲೋಕೇಶ್  ವರದಿಗಾರರು
    ಎ.ಎನ್ ಲೋಕೇಶ್ ವರದಿಗಾರರು
    ಮಳವಳ್ಳಿ, ಮಂಡ್ಯ, ಕರ್ನಾಟಕ•
    12 hrs ago
  • ಚಾಮರಾಜನಗರದಲ್ಲಿ ಭಕ್ತಕನಕದಾಸರ ಭಾವಚಿತ್ರದ ಅದ್ದೂರಿ ಮೆರವಣಿಗೆ ವರದಿ: ಹೊಮ್ಮನಂಜುಂಡನಾಯಕ ಚಾಮರಾಜನಗರದಲ್ಲಿ ಭಕ್ತಕನಕದಾಸರ ಭಾವಚಿತ್ರದ ಅದ್ದೂರಿ ಮೆರವಣಿಗೆ ಚಾಮರಾಜನಗರ: ನಗರದಲ್ಲಿ ಭಕ್ತ ಕನಕದಾಸರ ಭಾವಚಿತ್ರ ಮೆರವಣಿಗೆ ನಾನಾ ಕಲಾತಂಡಗಳೊಂದಿಗೆ ಅದ್ದೂರಿಯಾಗಿ ನಡೆಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕನಕದಾಸರ ಜಯಂತ್ಯುತ್ಸವದ ಅಂಗವಾಗಿ ಅಯೋಜಿಸಿದ ಭಾವಚಿತ್ರದ ಭವ್ಯ ಮೆರವಣಿಗೆ   ಪ್ರವಾಸಿ ಮಂದಿರದ ಮುಂಭಾಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು. ಮೆರವಣಿಯುದ್ದಕ್ಕೂ ಡೊಳ್ಳು, ಕಂಸಾಳೆ, ನಾದಸ್ವರದ ಸದ್ದು ಮತ್ತು ವೀರಗಾಸೆ, ಗೊರವರ ಕುಣಿತದಂತಹ ಜಾನಪದ ಕಲಾ ಪ್ರದರ್ಶನಗಳು ಗಮನ ಸೆಳೆದವು. ನಗರದ ಪ್ರಮುಖ ರಸ್ತೆಗಳಲ್ಲಿ ಕನಕದಾಸರ ಭಾವಚಿತ್ರದ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಶಾಸಕ ಎ. .ಆರ್.ಕೃಷ್ಣಮೂರ್ತಿ, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ.ರವಿಕುಮಾರ್, ಚೂಡಾಧ್ಯಕ್ಷ ಮಹಮ್ಮದ್ ಅಸ್ಗರ್, ಜಿಲ್ಲಾಧಿಕಾರಿ ಶ್ರೀರೂಪ,  ಎಸ್ಪಿ ಎಂ.ಮುತ್ತುರಾಜು, ಎಡಿಸಿ ಪ್ರಿಯದರ್ಶಿನಿ, ಎಎಸ್ಪಿ ಶಶಿಧರ್, ತಹಸೀಲ್ದಾರ್ ನವೀನ್ ಕುಮಾರ್, ಎಪಿಎಂಸಿ ಅಧ್ಯಕ್ಷ ಗುರುಸ್ವಾಮಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಉಮೇಶ್ ಎಸ್ ಪಿಕೆ, ಗೌರವಾಧ್ಯಕ್ಷ ಬೆಳ್ಳೇಗೌಡ, ಕುದೇರುಲಿಂಗಣ್ಣ, ಸೊತ್ತನಹುಂಡಿ ಸೋಮಣ್ಣ, ಜಿ.ಪಂ.ಮಾಜಿ ಸದಸ್ಯ ಬಾಲರಾಜು,ವಕೀಲ ನಾಗರಾಜು, ಶಿವರಾಮು,ರಾಷ್ಟ್ರೀಯ ಅಹಿಂದ ಜಿಲ್ಲಾಧ್ಯಕ್ಷ ಕೆರೆಹಳ್ಳಿ ರೇವಣ್ಣ, ಬಸಪ್ಪನಪಾಳ್ಯ ರಾಜಶೇಖರ, ಕುಮಾರ್ ಇತರರು ಭಾಗವಹಿಸಿದ್ದರು. ವರದಿ; ಹೊಮ್ಮನಂಜುಂಡನಾಯಕ ಪ್ರಜಾಪವರ್ ಟಿವಿ ಚಾಮರಾಜನಗರ.
    4
    ಚಾಮರಾಜನಗರದಲ್ಲಿ
ಭಕ್ತಕನಕದಾಸರ ಭಾವಚಿತ್ರದ ಅದ್ದೂರಿ ಮೆರವಣಿಗೆ
ವರದಿ: ಹೊಮ್ಮನಂಜುಂಡನಾಯಕ
ಚಾಮರಾಜನಗರದಲ್ಲಿ
ಭಕ್ತಕನಕದಾಸರ ಭಾವಚಿತ್ರದ ಅದ್ದೂರಿ ಮೆರವಣಿಗೆ
ಚಾಮರಾಜನಗರ: ನಗರದಲ್ಲಿ ಭಕ್ತ ಕನಕದಾಸರ ಭಾವಚಿತ್ರ ಮೆರವಣಿಗೆ ನಾನಾ ಕಲಾತಂಡಗಳೊಂದಿಗೆ
ಅದ್ದೂರಿಯಾಗಿ ನಡೆಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ
ಕನಕದಾಸರ ಜಯಂತ್ಯುತ್ಸವದ ಅಂಗವಾಗಿ ಅಯೋಜಿಸಿದ ಭಾವಚಿತ್ರದ ಭವ್ಯ ಮೆರವಣಿಗೆ  
ಪ್ರವಾಸಿ ಮಂದಿರದ ಮುಂಭಾಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು.
ಮೆರವಣಿಯುದ್ದಕ್ಕೂ ಡೊಳ್ಳು, ಕಂಸಾಳೆ, ನಾದಸ್ವರದ ಸದ್ದು ಮತ್ತು ವೀರಗಾಸೆ, ಗೊರವರ ಕುಣಿತದಂತಹ ಜಾನಪದ ಕಲಾ ಪ್ರದರ್ಶನಗಳು ಗಮನ ಸೆಳೆದವು. ನಗರದ ಪ್ರಮುಖ ರಸ್ತೆಗಳಲ್ಲಿ ಕನಕದಾಸರ ಭಾವಚಿತ್ರದ ಮೆರವಣಿಗೆ ನಡೆಯಿತು.
ಮೆರವಣಿಗೆಯಲ್ಲಿ ಶಾಸಕ ಎ.
.ಆರ್.ಕೃಷ್ಣಮೂರ್ತಿ, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ  ಬಿ.ಕೆ.ರವಿಕುಮಾರ್,  ಚೂಡಾಧ್ಯಕ್ಷ ಮಹಮ್ಮದ್ ಅಸ್ಗರ್, ಜಿಲ್ಲಾಧಿಕಾರಿ ಶ್ರೀರೂಪ,  ಎಸ್ಪಿ ಎಂ.ಮುತ್ತುರಾಜು, ಎಡಿಸಿ ಪ್ರಿಯದರ್ಶಿನಿ, ಎಎಸ್ಪಿ ಶಶಿಧರ್, ತಹಸೀಲ್ದಾರ್ ನವೀನ್ ಕುಮಾರ್, ಎಪಿಎಂಸಿ ಅಧ್ಯಕ್ಷ ಗುರುಸ್ವಾಮಿ,
ತಾಲೂಕು ಕುರುಬರ ಸಂಘದ ಅಧ್ಯಕ್ಷ ಉಮೇಶ್ ಎಸ್ ಪಿಕೆ, ಗೌರವಾಧ್ಯಕ್ಷ  ಬೆಳ್ಳೇಗೌಡ, ಕುದೇರುಲಿಂಗಣ್ಣ, ಸೊತ್ತನಹುಂಡಿ ಸೋಮಣ್ಣ, ಜಿ.ಪಂ.ಮಾಜಿ ಸದಸ್ಯ ಬಾಲರಾಜು,ವಕೀಲ ನಾಗರಾಜು, ಶಿವರಾಮು,ರಾಷ್ಟ್ರೀಯ ಅಹಿಂದ ಜಿಲ್ಲಾಧ್ಯಕ್ಷ ಕೆರೆಹಳ್ಳಿ ರೇವಣ್ಣ, ಬಸಪ್ಪನಪಾಳ್ಯ ರಾಜಶೇಖರ, ಕುಮಾರ್ ಇತರರು ಭಾಗವಹಿಸಿದ್ದರು.
ವರದಿ; ಹೊಮ್ಮನಂಜುಂಡನಾಯಕ
ಪ್ರಜಾಪವರ್ ಟಿವಿ ಚಾಮರಾಜನಗರ.
    user_Nanjunda Nayak
    Nanjunda Nayak
    Photographer ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    21 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.