### ಹನೂರಿನಲ್ಲಿ ಕನಕದಾಸರ ಜಯಂತಿ ಆಚರಣೆ **ಹನೂರು:** ತಾಲೂಕು ಆಡಳಿತದ ವತಿಯಿಂದ ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿಗೃಹದ ಸಭಾಂಗಣದಲ್ಲಿ ಕನಕದಾಸರ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಶಾಸಕ ಮಂಜುನಾಥ್ ಅವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ಕನಕದಾಸರು ತಮ್ಮ ಸಾಹಿತ್ಯ ಹಾಗೂ ಕೀರ್ತನೆಗಳ ಮೂಲಕ ಸಮಾನತೆ, ಮಾನವೀಯತೆ ಮತ್ತು ಸಹಬಾಳ್ವೆಯ ಸಂದೇಶ ಸಾರಿದ್ದಾರೆ. ಅವರ ಆದರ್ಶಗಳನ್ನು ಯುವಜನತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಚಪ್ಪ, ತಹಸೀಲ್ದಾರ್ ಚೈತ್ರಾ, ಬಿಇಒ ಪ್ರತಿಭಾ, ತಾಪಂ ಅಧಿಕಾರಿ ರವೀಂದ್ರ, ಚೆಸ್ಕಾಂ ಎಇಇ ರಂಗಸ್ವಾಮಿ, ಶಿವಮಲ್ಲು, ಶಿಕ್ಷಕರಾದ ರಾಜು, ವೆಂಕಟರಾಜು ಹಾಗೂ ಮುಖಂಡರು, ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ### ಹನೂರಿನಲ್ಲಿ ಕನಕದಾಸರ ಜಯಂತಿ ಆಚರಣೆ **ಹನೂರು:** ತಾಲೂಕು ಆಡಳಿತದ ವತಿಯಿಂದ ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿಗೃಹದ ಸಭಾಂಗಣದಲ್ಲಿ ಕನಕದಾಸರ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಶಾಸಕ ಮಂಜುನಾಥ್ ಅವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ಕನಕದಾಸರು ತಮ್ಮ ಸಾಹಿತ್ಯ ಹಾಗೂ ಕೀರ್ತನೆಗಳ ಮೂಲಕ ಸಮಾನತೆ, ಮಾನವೀಯತೆ ಮತ್ತು ಸಹಬಾಳ್ವೆಯ ಸಂದೇಶ ಸಾರಿದ್ದಾರೆ. ಅವರ ಆದರ್ಶಗಳನ್ನು ಯುವಜನತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಚಪ್ಪ, ತಹಸೀಲ್ದಾರ್ ಚೈತ್ರಾ, ಬಿಇಒ ಪ್ರತಿಭಾ, ತಾಪಂ ಅಧಿಕಾರಿ ರವೀಂದ್ರ, ಚೆಸ್ಕಾಂ ಎಇಇ ರಂಗಸ್ವಾಮಿ, ಶಿವಮಲ್ಲು, ಶಿಕ್ಷಕರಾದ ರಾಜು, ವೆಂಕಟರಾಜು ಹಾಗೂ ಮುಖಂಡರು, ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
### ಹನೂರಿನಲ್ಲಿ ಕನಕದಾಸರ ಜಯಂತಿ ಆಚರಣೆ **ಹನೂರು:** ತಾಲೂಕು ಆಡಳಿತದ ವತಿಯಿಂದ ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿಗೃಹದ ಸಭಾಂಗಣದಲ್ಲಿ ಕನಕದಾಸರ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಶಾಸಕ ಮಂಜುನಾಥ್ ಅವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ಕನಕದಾಸರು ತಮ್ಮ ಸಾಹಿತ್ಯ ಹಾಗೂ ಕೀರ್ತನೆಗಳ ಮೂಲಕ ಸಮಾನತೆ, ಮಾನವೀಯತೆ ಮತ್ತು ಸಹಬಾಳ್ವೆಯ ಸಂದೇಶ ಸಾರಿದ್ದಾರೆ. ಅವರ ಆದರ್ಶಗಳನ್ನು ಯುವಜನತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ
ಸಮಿತಿ ಅಧ್ಯಕ್ಷ ರಾಚಪ್ಪ, ತಹಸೀಲ್ದಾರ್ ಚೈತ್ರಾ, ಬಿಇಒ ಪ್ರತಿಭಾ, ತಾಪಂ ಅಧಿಕಾರಿ ರವೀಂದ್ರ, ಚೆಸ್ಕಾಂ ಎಇಇ ರಂಗಸ್ವಾಮಿ, ಶಿವಮಲ್ಲು, ಶಿಕ್ಷಕರಾದ ರಾಜು, ವೆಂಕಟರಾಜು ಹಾಗೂ ಮುಖಂಡರು, ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ### ಹನೂರಿನಲ್ಲಿ ಕನಕದಾಸರ ಜಯಂತಿ ಆಚರಣೆ **ಹನೂರು:** ತಾಲೂಕು ಆಡಳಿತದ ವತಿಯಿಂದ ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿಗೃಹದ ಸಭಾಂಗಣದಲ್ಲಿ ಕನಕದಾಸರ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಶಾಸಕ ಮಂಜುನಾಥ್ ಅವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ,
ಕನಕದಾಸರು ತಮ್ಮ ಸಾಹಿತ್ಯ ಹಾಗೂ ಕೀರ್ತನೆಗಳ ಮೂಲಕ ಸಮಾನತೆ, ಮಾನವೀಯತೆ ಮತ್ತು ಸಹಬಾಳ್ವೆಯ ಸಂದೇಶ ಸಾರಿದ್ದಾರೆ. ಅವರ ಆದರ್ಶಗಳನ್ನು ಯುವಜನತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಚಪ್ಪ, ತಹಸೀಲ್ದಾರ್ ಚೈತ್ರಾ, ಬಿಇಒ ಪ್ರತಿಭಾ, ತಾಪಂ ಅಧಿಕಾರಿ ರವೀಂದ್ರ, ಚೆಸ್ಕಾಂ ಎಇಇ ರಂಗಸ್ವಾಮಿ, ಶಿವಮಲ್ಲು, ಶಿಕ್ಷಕರಾದ ರಾಜು, ವೆಂಕಟರಾಜು ಹಾಗೂ ಮುಖಂಡರು, ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
- ### ಹನೂರಿನಲ್ಲಿ ಕನಕದಾಸರ ಜಯಂತಿ ಆಚರಣೆ **ಹನೂರು:** ತಾಲೂಕು ಆಡಳಿತದ ವತಿಯಿಂದ ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿಗೃಹದ ಸಭಾಂಗಣದಲ್ಲಿ ಕನಕದಾಸರ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಶಾಸಕ ಮಂಜುನಾಥ್ ಅವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ಕನಕದಾಸರು ತಮ್ಮ ಸಾಹಿತ್ಯ ಹಾಗೂ ಕೀರ್ತನೆಗಳ ಮೂಲಕ ಸಮಾನತೆ, ಮಾನವೀಯತೆ ಮತ್ತು ಸಹಬಾಳ್ವೆಯ ಸಂದೇಶ ಸಾರಿದ್ದಾರೆ. ಅವರ ಆದರ್ಶಗಳನ್ನು ಯುವಜನತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಚಪ್ಪ, ತಹಸೀಲ್ದಾರ್ ಚೈತ್ರಾ, ಬಿಇಒ ಪ್ರತಿಭಾ, ತಾಪಂ ಅಧಿಕಾರಿ ರವೀಂದ್ರ, ಚೆಸ್ಕಾಂ ಎಇಇ ರಂಗಸ್ವಾಮಿ, ಶಿವಮಲ್ಲು, ಶಿಕ್ಷಕರಾದ ರಾಜು, ವೆಂಕಟರಾಜು ಹಾಗೂ ಮುಖಂಡರು, ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ### ಹನೂರಿನಲ್ಲಿ ಕನಕದಾಸರ ಜಯಂತಿ ಆಚರಣೆ **ಹನೂರು:** ತಾಲೂಕು ಆಡಳಿತದ ವತಿಯಿಂದ ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿಗೃಹದ ಸಭಾಂಗಣದಲ್ಲಿ ಕನಕದಾಸರ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಶಾಸಕ ಮಂಜುನಾಥ್ ಅವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ಕನಕದಾಸರು ತಮ್ಮ ಸಾಹಿತ್ಯ ಹಾಗೂ ಕೀರ್ತನೆಗಳ ಮೂಲಕ ಸಮಾನತೆ, ಮಾನವೀಯತೆ ಮತ್ತು ಸಹಬಾಳ್ವೆಯ ಸಂದೇಶ ಸಾರಿದ್ದಾರೆ. ಅವರ ಆದರ್ಶಗಳನ್ನು ಯುವಜನತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಚಪ್ಪ, ತಹಸೀಲ್ದಾರ್ ಚೈತ್ರಾ, ಬಿಇಒ ಪ್ರತಿಭಾ, ತಾಪಂ ಅಧಿಕಾರಿ ರವೀಂದ್ರ, ಚೆಸ್ಕಾಂ ಎಇಇ ರಂಗಸ್ವಾಮಿ, ಶಿವಮಲ್ಲು, ಶಿಕ್ಷಕರಾದ ರಾಜು, ವೆಂಕಟರಾಜು ಹಾಗೂ ಮುಖಂಡರು, ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.3
- ಕೊಳ್ಳೇಗಾಲ ಬಸ್ ನಿಲ್ದಾಣದ ಬಳಿ ಬಾಯ್ತೆರೆದ ಮ್ಯಾನ್‌ಹೋಲ್: ಕಡ್ಡಿಗೆ ಪ್ಲಾಸ್ಟಿಕ್ ಕವರ್ ಕಟ್ಟಿ ಎಚ್ಚರಿಕೆ ನೀಡುತ್ತಿರುವ ಸಾರ್ವಜನಿಕರು! ಕೊಳ್ಳೇಗಾಲ: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಬಸ್ ನಿಲ್ದಾಣದ ಸಮೀಪವಿರುವ ಡಾ. ವಿಷ್ಣುವರ್ಧನ್ ರಸ್ತೆಯ ಮಧ್ಯಭಾಗದಲ್ಲೇ ಮ್ಯಾನ್‌ಹೋಲ್ (ಒಳಚರಂಡಿ ಗುಂಡಿ) ಮುಚ್ಚಳ ಕುಸಿದು ಬಿದ್ದಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ. ನಗರದ ಅತ್ಯಂತ ಜನನಿಬಿಡ ಪ್ರದೇಶವಾಗಿರುವ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಬಸ್‌ಗಳು, ಆಟೋಗಳು, ದ್ವಿಚಕ್ರ ವಾಹನಗಳು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಆದರೆ, ರಸ್ತೆಯ ನಡುವೆಯೇ ಮ್ಯಾನ್‌ಹೋಲ್ ಮುಚ್ಚಳ ಒಡೆದು ಕಬ್ಬಿಣದ ಸರಳುಗಳು ಹಾಗೂ ಕಲ್ಲುಗಳು ಮೇಲೆದ್ದು ನಿಂತಿವೆ. ಇದರಿಂದ ಅಪಘಾತ ಸಂಭವಿಸುವ ಭೀತಿ ಎದುರಾಗಿರುವುದರಿಂದ, ಸಾರ್ವಜನಿಕರೇ ಎಚ್ಚೆತ್ತುಕೊಂಡು ಗುಂಡಿಯ ಬಳಿ ಕಡ್ಡಿಗೆ ನೀಲಿ ಬಣ್ಣದ ಪ್ಲಾಸ್ಟಿಕ್ ಕವರ್ ಕಟ್ಟಿ ವಾಹನ ಸವಾರರಿಗೆ ಎಚ್ಚರಿಕೆ ನೀಡುವಂತಹ ದುಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ವೇಳೆ ಅಥವಾ ಮಳೆ ಬಂದಾಗ ಈ ಗುಂಡಿ ಕಾಣಿಸದೆ ದ್ವಿಚಕ್ರ ವಾಹನ ಸವಾರರು ಬಿದ್ದು ಪ್ರಾಣಾಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿದೆ. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ದೊಡ್ಡ ಅನಾಹುತ ಸಂಭವಿಸುವ ಮುನ್ನವೇ ತಕ್ಷಣ ಎಚ್ಚೆತ್ತುಕೊಂಡು ಮ್ಯಾನ್‌ಹೋಲ್ ದುರಸ್ತಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.1
- ### ಕಪಿಲಾ ನದಿಯಲ್ಲಿ ವಿಜೃಂಭಿಸಿದ ಶ್ರೀಕಂಠೇಶ್ವರ ಸ್ವಾಮಿಯ ತೆಪ್ಪೋತ್ಸವ **ನಂಜನಗೂಡು, ನ.27:** ದಕ್ಷಿಣ ಕಾಶಿ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ (ನಂಜುಂಡೇಶ್ವರ) ಸ್ವಾಮಿ ದೇವಾಲಯದ ವಾರ್ಷಿಕ ಚಿಕ್ಕಜಾತ್ರಾ ಮಹೋತ್ಸವದ ಸಮಾರೋಪದ ಅಂಗವಾಗಿ ಶುಕ್ರವಾರ ಸಂಜೆ ಪವಿತ್ರ ಕಪಿಲಾ ನದಿಯಲ್ಲಿ ತೆಪ್ಪೋತ್ಸವ ವಿಜೃಂಭಣೆಯಿಂದ ನೆರವೇರಿತು. ಪಾರ್ವತಿ ಸಮೇತ ಶ್ರೀಕಂಠೇಶ್ವರ ಸ್ವಾಮಿಯ ವಜ್ರ, ಮುತ್ತು ಹಾಗೂ ನವರತ್ನ ಖಚಿತ ಆಭರಣಗಳಿಂದ ಅಲಂಕೃತ ಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ನದಿಯ ಸ್ನಾನಘಟ್ಟಕ್ಕೆ ತರಲಾಯಿತು. ವಿಶೇಷ ದೀಪಾಲಂಕೃತ ತೆಪ್ಪದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಕಪಿಲಾ ನದಿಯಲ್ಲಿ ಮೂರು ಬಾರಿ ಪ್ರದಕ್ಷಿಣೆ ಹಾಕಲಾಯಿತು. ಸಾವಿರಾರು ಭಕ್ತರು ನದಿಯ ಇಕ್ಕೆಲಗಳಲ್ಲಿ ನೆರೆದು ಸ್ವಾಮಿಯ ಜಯಘೋಷ ಮೊಳಗಿಸುತ್ತಾ ತೆಪ್ಪೋತ್ಸವದ ವೈಭವವನ್ನು ಕಣ್ತುಂಬಿಕೊಂಡರು. ನವೆಂಬರ್ 22ರಂದು ಆರಂಭವಾಗಿದ್ದ ಆರು ದಿನಗಳ ಚಿಕ್ಕಜಾತ್ರಾ ಮಹೋತ್ಸವವು ತೆಪ್ಪೋತ್ಸವದೊಂದಿಗೆ ಸಂಭ್ರಮದಿಂದ ಸಮಾಪ್ತಿಗೊಂಡಿತು.1
- ಹಲಗೂರಿನ ಗ್ರಾಮದೇವತೆ ಶ್ರೀ ಪಟ್ಟಲದಮ್ಮನವರ 15ನೇ ವರ್ಷದ ವಾರ್ಷಿಕೋತ್ಸವ ಮಳವಳ್ಳಿ: ಗ್ರಾಮದೇವತೆ ಶ್ರೀ ಪಟ್ಟಲದಮ್ಮನವರ 15ನೇ ವರ್ಷದ ವಾರ್ಷಿಕೋತ್ಸವ ಹಾಗೂ ಕಾರ್ತಿಕ ಮಾಸದ ವಿಶೇಷ ಪೂಜಾ ಸಮಾರಂಭವು ಹಲಗೂರು ಮತ್ತು ವಳಗೆರೆದೊಡ್ಡಿ ಗ್ರಾಮಸ್ಥರು ಹಾಗೂ ಭಕ್ತಾದಿಗಳ ಸಹಕಾರದೊಂದಿಗೆ ಭಕ್ತಿಭಾವದಿಂದ ನೆರವೇರಿತು. ಶ್ರೀ ಪಟ್ಟಲದಮ್ಮನವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಮತ್ತು ಶ್ರೀ ಪಟ್ಟಲದಮ್ಮನವರ ಯುವಕರ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇವಿಗೆ ವಿಶೇಷ ಪೂಜೆ, ಹೋಮ, ಮಹಾಭಿಷೇಕ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಪ್ರಧಾನ ಕಳಸ ಸ್ಥಾಪನೆ, ಸಪ್ತ ಮಾತೃಕಾ ದೇವಿ ಪೂಜೆ, ದುರ್ಗಾ ಹೋಮ, ಮಹಾಭಿಷೇಕ, ಕಲಾಹೋಮ, ಜಯಾಧಿ ಹೋಮ, ಪೂರ್ಣಾಹುತಿ, ಕಳಶಾಭಿಷೇಕ ಹಾಗೂ ದೇವಿಗೆ ವಿಶೇಷ ಅಲಂಕಾರ ಮತ್ತು ಮಹಾ ನೈವೇದ್ಯ ಸಮರ್ಪಿಸಲಾಯಿತು. ಕನಕಪುರ ಮುಖ್ಯ ರಸ್ತೆಯ ಸೋನಿ ಪೆಟ್ರೋಲ್ ಬಂಕ್‌ನಿಂದ ಪೂರ್ಣಕುಂಭ ಮೇಳದೊಂದಿಗೆ ಶ್ರೀ ಹೆಬ್ಬೆಟ್ಟದ ಬಸವೇಶ್ವರಸ್ವಾಮಿ, ಶ್ರೀ ವೀರಭದ್ರಸ್ವಾಮಿ, ಶ್ರೀ ಸಿದ್ದಪ್ಪಾಜಿ, ಶ್ರೀ ಪಟ್ಟಲದಮೃತಾಯಿ, ಶ್ರೀ ಪಟ್ಟಲದಮ್ಮ ಬಸಪ್ಪ ಹಾಗೂ ಶ್ರೀ ಭದ್ರಕಾಳಿ ಬಸಪ್ಪನವರ ಪಲ್ಲಕ್ಕಿಗಳ ಭವ್ಯ ಮೆರವಣಿಗೆ ನಡೆಯಿತು. ಮಹಿಳೆಯರು ಮತ್ತು ಮಕ್ಕಳು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ವೀರಗಾಸೆ, ಪೂಜಾ ಕುಣಿತ ಹಾಗೂ ಡೊಳ್ಳು ಕುಣಿತ ಮೆರವಣಿಗೆಗೆ ನೋಡುಗರಿಗೆ ವಿಶೇಷ ಮೆರುಗು ನೀಡಿದವು. ಹಲಗೂರಿನ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸಿ ದೇವಿಯ ದರ್ಶನ ಪಡೆದರು. ಮೆರವಣಿಗೆ ದೇವಸ್ಥಾನದ ಸನ್ನಿಧಿಗೆ ತಲುಪಿದ ಬಳಿಕ ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ತೀರ್ಥಪ್ರಸಾದ ವಿನಿಯೋಗಿಸಲಾಯಿತು. ಸಾವಿರಾರು ಭಕ್ತಾದಿಗಳಿಗೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.ಗ್ರಾಮದೇವತೆ ಶ್ರೀ ಪಟ್ಟಲದಮ್ಮನವರ ವಾರ್ಷಿಕೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಹಲಗೂರು ಮತ್ತು ವಳಗೆರೆದೊಡ್ಡಿ ಗ್ರಾಮಸ್ಥರು, ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶಿವಮಾದು, ಎಚ್.ಎಂ. ಆನಂದ್ ಕುಮಾರ್, ಶಿವಸ್ವಾಮಿ, ಜಗದೀಶ್, ದರ್ಶನ್, ಸಿದ್ದರಾಜು, ಸಂತೋಷ್, ಮಹದೇವು, ಕ್ಯಾಟ್ ಉಮೇಶ್, ಆನಂದ್, ಶೇಖರ್, ಮಂಜು, ಚಿಕ್ಕಮೊಗ, ದಿಲೀಪ್, ಅರ್ಚಕ ಕೃಷ್ಣಪ್ಪ, ಮುತ್ತುರಾಜು, ಮಧು, ಪೃಥ್ವಿ, ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.1
- ಕನಕದಾಸರ ನಾಡಲ್ಲಿ ಮೌಡ್ಯತೆ ತಾಂಡವಾಡುತ್ತಿರುವುದು ದುರಾದೃಷ್ಟಕರ, ಪಟ್ಟಣದಲ್ಲಿ ಸಚಿವ ನರೇಂದ್ರಸ್ವಾಮಿ ವಿಷಾಧ ಮಳವಳ್ಳಿ : ಕನಕದಾಸರಂತ ಮಹನೀಯರು ಹುಟ್ಟಿ ಸಮಾಜದಲ್ಲಿನ ಮೌಡ್ಯತೆ ವಿರುದ್ದ ಕ್ರಾಂತಿಯನ್ನೇ ಮೊಳಗಿ ಸಿದ ಈ ಸಮಾಜದಲ್ಲಿ ಈಗಲೂ ಮೂಢ ನಂಬಿಕೆ, ಕಂದಾಚಾರ, ತುಂಬಿ ತುಳುಕುತ್ತಿ ರುವುದು ದುರಾದೃಷ್ಟಕರ ಎಂದು ಕೃಷಿ ಸಚಿವ ಪಿ ಎಂ ನರೇಂದ್ರಸ್ವಾಮಿ ವಿಷಾಧಿಸಿ ದ್ದಾರೆ. ಮಳವಳ್ಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತ ಆಯೋಜಿಸಿದ್ದ ದಾಸಶ್ರೇಷ್ಠ ಸಂತ ಮಹಾನ್ ಕ್ರಾಂತಿಕಾರಿ ಪುರುಷ ಶ್ರೀ ಭಕ್ತ ಕನಕದಾಸರ 539ನೇ ಜಯಂತೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಇದರ ಜೊತೆಗೆ ಇಂತಹ ಪುಣ್ಯ ಪುರುಷರ ಜಯಂತಿಯನ್ನು ಆಯಾ ವರ್ಗದ ಜನರು ಆಚರಿಸಲಿ ಎಂಬ ಮನಸ್ಥಿತಿ ಕನಕದಾಸರ ವಿಚಾರಧಾರೆಗಳಿಗೆ ವಿರುದ್ದವಾಗಿದೆ ಎಂದರು. ಬಸವಣ್ಣ ಕನಕದಾಸ ಅಂಬೇಡ್ಕರ್ ರಂತಹ ಮಹನೀ ಯರ ವಿಚಾರಧಾರೆಗಳನ್ನು ಕೇವಲ ಒಂದು ದಿನದ ಆಚರಣೆಗೆ ಸೀಮಿತ ಮಾಡಿ ಕೊಂಡು ಜೊತೆಗೆ ಅಂತಹ ಮಹನೀಯರನ್ನು ಒಂದೊಂದು ಜಾತಿಗೆ ಸಮೀತ ಮಾಡಿಕೊಳ್ಳು ತ್ತಿರುವುದು ಅವರ ವಿಚಾರೆಧಾರೆ ಗಳಿಗೆ ಮಾಡುತ್ತಿರುವ ಅಪಮಾ ನವಾಗಿದೆ ಎಂದರು. ಮಾರಿ ಹಬ್ಬ ಜಾತ್ರೆ ಉತ್ಸವಗಳಿಗೆ ಕಿಕ್ಕಿರಿದು ನೆರೆಯುವ ಜನ ಇಂತಹ ಮಹನೀಯರ ಜಯಂತಿಗಳಿಗೆ ನಿರಾಶಕ್ತಿ ತೋರುತ್ತಿರುವುದು ಶೋಚ ನೀಯ ಎಂದ ಅವರು ಕನಕದಾಸರಂತಹ ಪುಣ್ಯ ಪುರುಷರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊ ಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ತಿಳಿಸಿದರು. ಉಪನ್ಯಾಶಕರಾದ ಪವಿತ್ರ ಕನಕದಾಸರ ವಿಚಾರಧಾರೆ ಗಳನ್ನು ವಿವರಿಸಿದರು. ಇದೇ ವೇಳೆ ಹಲವು ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ತಹಸೀಲ್ದಾರ್ ಲೋಕೇಶ್, ತಾ ಪಂ ಇಒ ಶ್ರೀನಿವಾಸ್, ಡಿವೈಎಸ್ಪಿ ಯಶವಂತ್ ಕುಮಾರ್, ಬಿಇಒ ಉಮಾ, ಮುಖ್ಯಾಧಿಕಾರಿ ನಾಗರತ್ನ, ಹಾಪ್ ಕಾಮ್ಸ್ ಅಧ್ಯಕ್ಷರೂ ಮನ್ ಮುಲ್ ನಿರ್ಧೇಶಕರು ಆದ ಡಿ ಕೃಷ್ಣೇ ಗೌಡ, ಆರ್ ಎನ್ ವಿಶ್ವಾಸ್, ಕೆಡಿಪಿ ಸದಸ್ಯ ಶಶಿರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ ಪಿ ರಾಜು, ದೊಡ್ಡಯ್ಯ, ಖಜಾಂಚಿ ಬಿ ಮಹದೇವು,ಮೈಸೂರು ವಸ್ತು ಪ್ರದರ್ಶನ ಪ್ರಾಧಿಕಾರದ ನಿರ್ಧೇಶಕ ಕೆ ಜೆ ದೇವರಾಜು, ಕಾಡಾ ನಿರ್ಧೇಶಕ ಕೆ ಎಸ್ ಪ್ರಕಾಶ್, ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮದ ನಿರ್ಧೇಶಕ ಶಿವರಾಜ್ ನಾಯಕ್ ಟಿಎಪಿಸಿ ಎಂಎಸ್ ಅಧ್ಯಕ್ಷ ಲಿಂಗರಾಜು ನಿರ್ಧೇಶಕ ಪುಟ್ಟಬಸವಯ್ಯ, ವಿಶ್ವ, ಗ್ಯಾರೆಂಟಿ ಸಮಿತಿ ಅಧ್ಯಕ್ಷ ಮಾದೇಶ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ನಾಗರಾಜು, ಸಿದ್ದು ಸೇನಾ ಸಮಿತಿ ಅಧ್ಯಕ್ಷ ಕಲ್ಲಾರೆ ಪುರ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಮಂಚನಹಳ್ಳಿ ಸಿದ್ದರಾಜು, ಮತ್ತಿತರರ ಸಮಾರಂಭದಲ್ಲಿ ಹಾಜರಿದ್ದರು.1
- ಕನಕದಾಸರ ತತ್ವ, ಭಕ್ತಿಯೇ ಸಮಾಜಕ್ಕೆ ದೊಡ್ಡ ಸಂದೇಶ: ಸಚಿವ ಸಿ.ಪುಟ್ಟರಂಗಶೆಟ್ಟಿ ವರದಿ:ಹೊಮ್ಮನಂಜುಂಡನಾಯಕ ಕನಕದಾಸರ ತತ್ವ, ಭಕ್ತಿಯೇ ಸಮಾಜಕ್ಕೆ ದೊಡ್ಡ ಸಂದೇಶ: ಸಚಿವ ಸಿ.ಪುಟ್ಟರಂಗಶೆಟ್ಟಿ ಚಾಮರಾಜನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಯೋಜಿಸಿದ ಭಕ್ತಶ್ರೇಷ್ಠ ಶ್ರೀಕನಕದಾಸರ ಜಯಂತಿ ಆಚರಣೆ. ಚಾಮರಾಜನಗರ: ಭಕ್ತ ಶ್ರೇಷ್ಠ ಶ್ರೀ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿದ್ದ ಅಂಕು-ಡೊಂಕುಗಳನ್ನು ಮತ್ತು ಅಸಮಾನತೆಯನ್ನು ತಿದ್ದಲು ನಿರಂತರವಾಗಿ ಪ್ರಯತ್ನಿಸಿದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದರು. ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ಭಕ್ತ ಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. 16ನೇ ಶತಮಾನದ ಭಕ್ತಿ ಚಳವಳಿಯ ಪ್ರಮುಖ ಹರಿದಾಸರಾದ ಕನಕದಾಸರು, ಸಾಮಾನ್ಯ ಜನರಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ಸಮಾಜ ಸುಧಾರಣೆಯ ಸಂದೇಶಗಳನ್ನು ಸಾರಿದರು.ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ.ಎಂಬ ಕೀರ್ತನೆಯ ಮೂಲಕ ಹುಟ್ಟಿನಿಂದ ಯಾರೂ ಮೇಲಲ್ಲ ಅಥವಾ ಕೀಳಲ್ಲ, ಎಲ್ಲರೂ ಭಗವಂತನ ಮಕ್ಕಳು ಎಂಬ ಸಮಾನತೆಯ ಸಂದೇಶ ನೀಡಿದರು ಎಂದರು. ಪ್ರಾಧ್ಯಾಪಕ ರಾಜಶೇಖರ ಜಮದಂಡಿ ಮುಖ್ಯ ಭಾಷಣ ಮಾಡಿದರು. ಕಾಡಾಧ್ಯಕ್ಷ ಪಿ.ಮರಿಸ್ವಾಮಿ, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಜಿಲ್ಲಾಧಿಕಾರಿ ಶ್ರೀರೂಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಚೂಡಾಧ್ಯಕ್ಷ ಮಹಮ್ಮದ್ ಅಸ್ಗರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜು, ಎಡಿಸಿ ಪ್ರಿಯದರ್ಶಿನಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಉಮೇಶ್ ಎಸ್ ಪಿಕೆ, ಗೌರವಾಧ್ಯಕ್ಷ ಬೆಳ್ಳೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಇತರರು ಹಾಜರಿದ್ದರು. ವರದಿ: ಹೊಮ್ಮನಂಜುಂಡನಾಯಕ ಪ್ರಜಾಪವರ್ ಟಿವಿ ಚಾಮರಾಜನಗರ. •4
- ಭಾರತ್ ಕೋ ಜಾನೋ ರಸಪ್ರಶ್ನೆ ಸ್ಪರ್ಧೆ ಭಾರತೀಯ ಸಂಸ್ಕೃತಿ, ಇತಿಹಾಸದ ಅರಿವು ಮೂಡಿಸಲು ರಸಪ್ರಶ್ನೆ ಸಹಕಾರಿ ಮಕ್ಕಳಲ್ಲಿ ಪುಸ್ತಕ ಓದುವ ಆಸಕ್ತಿ ಬೆಳೆಸುವ ಜತೆಗೆ ಭಾರತೀಯ ಸಂಸ್ಕೃತಿ, ಇತಿಹಾಸ ಹಾಗೂ ದೇಶದ ಬಗ್ಗೆ ಜ್ಞಾನ ಹೆಚ್ಚಿಸಲು ಭಾರತ ವಿಕಾಸ ಪರಿಷತ್ ಆಯೋಜಿಸುವ ಕಾರ್ಯಕ್ರಮಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಕಾರಿಯಾಗಲಿವೆ ಎಂದು ಪರಿಷತ್ ಕಾರ್ಯದರ್ಶಿ ಎಸ್.ಬಿ. ನಾಗರಾಜು ತಿಳಿಸಿದರು. ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ ಶ್ರೀಕಾಲಭೈರವೇಶ್ವರ ಸಮುದಾಯ ಭವನದಲ್ಲಿ ಭಾರತ ವಿಕಾಸ ಪರಿಷತ್ ಬೌದ್ಧಯಾನ ಶಾಖೆ ಹಾಗೂ ಚಿಕ್ಕರಸಿನಕೆರೆ ಸರ್ಕಾರಿ ಪ್ರೌಢಶಾಲೆ ಆಶ್ರಯದಲ್ಲಿ ನಡೆದ ಹೋಬಳಿ ಮಟ್ಟದ ರಾಷ್ಟ್ರೀಯ ಸಮೂಹ ಗೀತಗಾಯನ ಮತ್ತು ‘ಭಾರತ್ ಕೋ ಜಾನೋ’ ರಸಪ್ರಶ್ನೆ ಸ್ಪರ್ಧೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಯಜಮಾನ್ ಶಿವಲಿಂಗೇಗೌಡ ಉದ್ಘಾಟಿಸಿದರು. ಎಂ. ಮಾಯಪ್ಪ ಮಾತನಾಡಿದರು. ಬಹುಮಾನ ವಿಜೇತರು: ರಾಷ್ಟ್ರೀಯ ಸಮೂಹ ಗೀತಗಾಯನ ಸ್ಪರ್ಧೆಯಲ್ಲಿ ಜ್ಞಾನಮುದ್ರ ಶಾಲೆ ಪ್ರಥಮ, ಅನಿಕೇತ ಶಾಲೆ ದ್ವಿತೀಯ ಹಾಗೂ ಚಿಕ್ಕರಸಿನಕೆರೆ ಸರ್ಕಾರಿ ಪ್ರೌಢಶಾಲೆ ತೃತೀಯ ಸ್ಥಾನ ಪಡೆದವು. ‘ಭಾರತ್ ಕೋ ಜಾನೋ’ ರಸಪ್ರಶ್ನೆ ಸ್ಪರ್ಧೆಯಲ್ಲಿ ಚಿಕ್ಕರಸಿನಕೆರೆ ಸರ್ಕಾರಿ ಪ್ರೌಢಶಾಲೆ ಪ್ರಥಮ, ಜ್ಞಾನಮುದ್ರ ಶಾಲೆ ದ್ವಿತೀಯ ಹಾಗೂ ಚಂದೂಪುರ ಡಿ.ಕೆ. ಗೌಡ ಪ್ರೌಢಶಾಲೆ ತೃತೀಯ ಸ್ಥಾನ ಗಳಿಸಿದವು. 16 ಶಾಲೆಗಳ 128 ವಿದ್ಯಾರ್ಥಿಗಳು ಭಾಗವಹಿಸಿದ್ದು, ಎಲ್ಲರಿಗೂ ಪ್ರೋತ್ಸಾಹ ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕರು, ಪರಿಷತ್ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.3
- ಕನಕದಾಸರ ಕೀರ್ತನೆ ಹಾಗೂ ತತ್ವವನ್ನುಆಳವಡಿಸಿಕೊಂಡು ಸಮಾಜ ಸುಧಾರಣೆ ಮಾಡಲು ಶ್ರಮಿಸೋಣ: ಜಯರಾಮು ಸಮಾಜದ ಸುಧಾರಣೆಗೆ ಸುಮಾರು 240 ಕ್ಕೂ ಹೆಚ್ಚು ವಚನಗಳನ್ನು ದೇಶಕ್ಕೆ ಸಾರಿದವರು ಕನಕದಾಸರು ಎಂದು ಜೆಡಿಎಸ್ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಜಯರಾಮು ತಿಳಿಸಿದರು. ಮಳವಳ್ಳಿ ಪಟ್ಟಣದ ಅನಂತರಾಂ ವೃತ್ತದಲ್ಲಿ ಜೆಡಿಎಸ್ ಪಕ್ಷದವತಿಯಿಂದ ನಡೆದ ಕನಕದಾಸ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕನಕದಾಸರ ಕೀರ್ತನೆ ಹಾಗೂ ತತ್ವವನ್ನುಆಳವಡಿಸಿಕೊಂಡು ಸಮಾಜ ಸುಧಾರಣೆ ಮಾಡಲು ಶ್ರಮಿಸೋಣ ಎಂದರು. ಇದೇ ವೇಳೆ ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ರವಿ ಕಂಸಾಗರ ಮಾತನಾಡಿ, ಕನಕದಾಸರು ಹಾಕಿಹೊಟ್ಟ ಭಕ್ತಿಯ ಮಾರ್ಗವಾಗಬಹುದು ಜಾತಿ ವ್ಯವಸ್ಥೆಯನ್ನು ಬದಿಗೊತ್ತಿ ಸಮಾಜದಲ್ಲಿ ಎಲ್ಲರೂ ಒಗ್ಗೂಡಿ ಬದುಕುಬೇಕು ಎಂಬ ಆಶ್ರಯದಂತೆ ನಾವೆಲ್ಲರೂ ನಡೆಯಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಅನ್ನದಾನಿ, ಜೆಡಿಎಸ್ ಅಧ್ಯಕ್ಷ ಹನುಮಂತು, ನಂದಕುಮಾರ, ಚಂದಹಳ್ಳಿಶ್ರೀಧರ್, ಟೌನ್ ಅಧ್ಯಕ್ಷ ಪ್ರಭು, ಕಾಂತರಾಜು, ಮಹಿಳಾ ಅಧ್ಯಕ್ಷ ಪದ್ಮ ಸೇರಿದಂತೆ ಹಲವರು ಇದ್ದರು.1