ಅತ್ತಿಕಟ್ಟಿಯಲ್ಲಿ ಇಂದು ಮೇಗಲಮನಿ ಕುಟುಂಬದಿಂದ ಹಿರಿಯರ ಸವಿನೆನಪಿನ ಸನ್ಮಾನ ಸಮಾರಂಭ: ಗಣ್ಯರ ಸಮಾಗಮ ಮುಂಡರಗಿ: ತಾಲೂಕಿನ ಅತ್ತಿಕಟ್ಟಿ ಗ್ರಾಮದಲ್ಲಿ ಏಪ್ರಿಲ್ 18ರ ಶನಿವಾರದಂದು ಮೇಗಲಮನಿ ಕುಟುಂಬದ ವತಿಯಿಂದ ಹಿರಿಯರ ಸವಿನೆನಪಿಗಾಗಿ ಹಮ್ಮಿಕೊಂಡಿರುವ ವಿಶೇಷ ಸನ್ಮಾನ ಹಾಗೂ ಅಭಿನಂದನಾ ಸಮಾರಂಭವು ರಾಜ್ಯ ಮಟ್ಟದ ನಾಯಕರು ಹಾಗೂ ಉನ್ನತ ಅಧಿಕಾರಿಗಳ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ನೆರವೇರಲಿದೆ. ದಿವಂಗತ ಶ್ರೀಮತಿ ಫಕೀರಮ್ಮ ಹಾಗೂ ದಿವಂಗತ ಶ್ರೀ ಸೋಮಪ್ಪ ಮೇಗಲಮನಿ ಅವರ ಪುಣ್ಯಸ್ಮರಣಾರ್ಥ, ಅವರ ಸುಪುತ್ರರಾದ ಮುಂಡರಗಿ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸದಸ್ಯ ಶ್ರೀ ರಾಮಣ್ಣ ಸೋಮಪ್ಪ ಮೇಗಲಮನಿ ಹಾಗೂ ಕುಟುಂಬದವರು ಈ ಸಮಾರಂಭವನ್ನು ಆಯೋಜಿಸಿದ್ದಾರೆ. ರಾಜಕೀಯ ಗಣ್ಯರ ಉಪಸ್ಥಿತಿ: ಕಾರ್ಯಕ್ರಮದಲ್ಲಿ ರಾಜ್ಯದ ಸಚಿವರಾದ ಹೆಚ್.ಕೆ. ಪಾಟೀಲ ಹಾಗೂ ಶಾಸಕ ಜಿ.ಎಸ್. ಪಾಟೀಲ ಅವರೊಂದಿಗೆ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಜಿ.ಪಂ. ಮಾಜಿ ಅಧ್ಯಕ್ಷರಾದ ವಾಸಣ್ಣ ಕೆ. ಕುರಡಗಿ ಮತ್ತು ಶ್ರೀಮತಿ ಸುಜಾತಾ ಎನ್. ದೊಡ್ಡಮನಿ, ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ವೈ.ಎನ್. ಗೌಡರ, ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕೀರಪ್ಪ ಈ. ಹೆಬಸೂರ ಹಾಗೂ ಮುಖಂಡರಾದ ಶಶಧರ ರೋಣದ ಸೇರಿದಂತೆ ಗದಗ ಜಿಲ್ಲಾ ಮತ್ತು ಮುಂಡರಗಿ ತಾಲೂಕಿನ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಭಾಗವಹಿಸಲಿದ್ದಾರೆ. ಅಧಿಕಾರಿಗಳ ಅತಿಥ್ಯ: ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ (IAS), ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ (IPS), ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್ ಕೆಂಚಪ್ಪನ್ನವರ (IFS) ಆಗಮಿಸಲಿದ್ದಾರೆ. ಅಲ್ಲದೆ ಉಪವಿಭಾಗಾಧಿಕಾರಿ ಗಂಗಪ್ಪ ಎಂ., ತಹಶೀಲ್ದಾರ್ ಏದ್ರಿಬಾವಿ ಪಿ.ಎಸ್., ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿರುವರು. ಸಾಂಸ್ಕೃತಿಕ ಹಬ್ಬ: ಸಭಾ ಕಾರ್ಯಕ್ರಮದ ನಂತರ ಸಂಜೆ 7:30 ರಿಂದ 'ಸಿನಿಮಾ ಜೂನಿಯರ್' ಕಲಾತಂಡ ಹಾಗೂ ಜಾನಪದ ಕಲಾತಂಡಗಳಿಂದ 'ಸಂಗೀತ ರಸಮಂಜರಿ' ಕಾರ್ಯಕ್ರಮ ನಡೆಯಲಿದೆ. ನಾಗಪ್ಪ ಸೋಮಪ್ಪ ಮೇಗಲಮನಿ, ಮಹಾಲಿಂಗೇಶ್ವರ ಮೇಗಲಮನಿ, ಮಂಜುನಾಥ ಮೇಗಲಮನಿ, ಶರಣಪ್ಪ ಮೇಗಲಮನಿ ಹಾಗೂ ಸಮಸ್ತ ಮೇಗಲಮನಿ ಕುಟುಂಬದವರು ಅತ್ತಿಕಟ್ಟಿ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರನ್ನು ಈ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಸ್ವಾಗತಿಸಿದ್ದಾರೆ.
ಅತ್ತಿಕಟ್ಟಿಯಲ್ಲಿ ಇಂದು ಮೇಗಲಮನಿ ಕುಟುಂಬದಿಂದ ಹಿರಿಯರ ಸವಿನೆನಪಿನ ಸನ್ಮಾನ ಸಮಾರಂಭ: ಗಣ್ಯರ ಸಮಾಗಮ ಮುಂಡರಗಿ: ತಾಲೂಕಿನ ಅತ್ತಿಕಟ್ಟಿ ಗ್ರಾಮದಲ್ಲಿ ಏಪ್ರಿಲ್ 18ರ ಶನಿವಾರದಂದು ಮೇಗಲಮನಿ ಕುಟುಂಬದ ವತಿಯಿಂದ ಹಿರಿಯರ ಸವಿನೆನಪಿಗಾಗಿ ಹಮ್ಮಿಕೊಂಡಿರುವ ವಿಶೇಷ ಸನ್ಮಾನ ಹಾಗೂ ಅಭಿನಂದನಾ ಸಮಾರಂಭವು ರಾಜ್ಯ ಮಟ್ಟದ ನಾಯಕರು ಹಾಗೂ ಉನ್ನತ ಅಧಿಕಾರಿಗಳ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ನೆರವೇರಲಿದೆ. ದಿವಂಗತ ಶ್ರೀಮತಿ ಫಕೀರಮ್ಮ ಹಾಗೂ ದಿವಂಗತ ಶ್ರೀ ಸೋಮಪ್ಪ ಮೇಗಲಮನಿ ಅವರ ಪುಣ್ಯಸ್ಮರಣಾರ್ಥ, ಅವರ ಸುಪುತ್ರರಾದ ಮುಂಡರಗಿ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸದಸ್ಯ ಶ್ರೀ ರಾಮಣ್ಣ ಸೋಮಪ್ಪ ಮೇಗಲಮನಿ ಹಾಗೂ ಕುಟುಂಬದವರು ಈ ಸಮಾರಂಭವನ್ನು ಆಯೋಜಿಸಿದ್ದಾರೆ. ರಾಜಕೀಯ ಗಣ್ಯರ ಉಪಸ್ಥಿತಿ: ಕಾರ್ಯಕ್ರಮದಲ್ಲಿ ರಾಜ್ಯದ ಸಚಿವರಾದ ಹೆಚ್.ಕೆ. ಪಾಟೀಲ
ಹಾಗೂ ಶಾಸಕ ಜಿ.ಎಸ್. ಪಾಟೀಲ ಅವರೊಂದಿಗೆ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಜಿ.ಪಂ. ಮಾಜಿ ಅಧ್ಯಕ್ಷರಾದ ವಾಸಣ್ಣ ಕೆ. ಕುರಡಗಿ ಮತ್ತು ಶ್ರೀಮತಿ ಸುಜಾತಾ ಎನ್. ದೊಡ್ಡಮನಿ, ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ವೈ.ಎನ್. ಗೌಡರ, ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕೀರಪ್ಪ ಈ. ಹೆಬಸೂರ ಹಾಗೂ ಮುಖಂಡರಾದ ಶಶಧರ ರೋಣದ ಸೇರಿದಂತೆ ಗದಗ ಜಿಲ್ಲಾ ಮತ್ತು ಮುಂಡರಗಿ ತಾಲೂಕಿನ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಭಾಗವಹಿಸಲಿದ್ದಾರೆ. ಅಧಿಕಾರಿಗಳ ಅತಿಥ್ಯ: ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ (IAS), ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ (IPS), ಉಪ
ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್ ಕೆಂಚಪ್ಪನ್ನವರ (IFS) ಆಗಮಿಸಲಿದ್ದಾರೆ. ಅಲ್ಲದೆ ಉಪವಿಭಾಗಾಧಿಕಾರಿ ಗಂಗಪ್ಪ ಎಂ., ತಹಶೀಲ್ದಾರ್ ಏದ್ರಿಬಾವಿ ಪಿ.ಎಸ್., ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿರುವರು. ಸಾಂಸ್ಕೃತಿಕ ಹಬ್ಬ: ಸಭಾ ಕಾರ್ಯಕ್ರಮದ ನಂತರ ಸಂಜೆ 7:30 ರಿಂದ 'ಸಿನಿಮಾ ಜೂನಿಯರ್' ಕಲಾತಂಡ ಹಾಗೂ ಜಾನಪದ ಕಲಾತಂಡಗಳಿಂದ 'ಸಂಗೀತ ರಸಮಂಜರಿ' ಕಾರ್ಯಕ್ರಮ ನಡೆಯಲಿದೆ. ನಾಗಪ್ಪ ಸೋಮಪ್ಪ ಮೇಗಲಮನಿ, ಮಹಾಲಿಂಗೇಶ್ವರ ಮೇಗಲಮನಿ, ಮಂಜುನಾಥ ಮೇಗಲಮನಿ, ಶರಣಪ್ಪ ಮೇಗಲಮನಿ ಹಾಗೂ ಸಮಸ್ತ ಮೇಗಲಮನಿ ಕುಟುಂಬದವರು ಅತ್ತಿಕಟ್ಟಿ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರನ್ನು ಈ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಸ್ವಾಗತಿಸಿದ್ದಾರೆ.
- Post by Onlinetv24x71
- Post by ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊1
- ತಾಲೂಕಿನ ಕ್ಯಾಸನೂರ್ ಗ್ರಾಮದಲ್ಲಿ ಘಟನೆ. ಸುಭಾನ್ ಗೌಡ ಪಾಟೀಲ ಎಂಬುವವರಿಗೆ ಸೇರಿದ್ದ ಮೂರು ಎಕರೆ ಜಮೀನಿನಲ್ಲಿ ಇಟ್ಟಿದ್ದ ನಾಲ್ಕು ಜೇನು ಪೆಟ್ಟಿಗೆ ಹಾಳು ಮಾಡಿವೆ. ಒಟ್ಟು ಮೂರು ಕರಡಿಗಳು ಪ್ರತ್ಯಕ್ಷ ರೈತರಲ್ಲಿ ಆತಂಕ.1
- ಹೆಬ್ಬಳ್ಳಿ ಜಿಲ್ಲಾ ಪಂಚಾಯತ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣದ ಹೋರಾಟದಲ್ಲಿ ಪಾಲ್ಗೊಂಡು ಜಯಗಳಿಸಿದ ಹೆಮ್ಮೆ ನನಗಿದೆ ಎಂದು ಜನ ಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಹೇಳಿದರು. ಧಾರವಾಡದಲ್ಲಿ ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗ ವಿನಯ್ ಕುಲಕರ್ಣಿ ಸೇರಿದಂತೆ 16 ಜನರಿಗೆ ಶಿಕ್ಷೆಯಾಗಿದೆ. ಇದು ಮುಂದೆ ಹೈಕೋರ್ಟ್, ಸುಪ್ರೀಂ ಕೋರ್ಟ್‌ವರೆಗೂ ಹೋಗುವ ಪ್ರಕ್ರಿಯೆ. ಆದರೆ, ಐತಿಹಾಸಿಕ ಹೋರಾಟದಲ್ಲಿ ಪಾಲ್ಗೊಂಡ ಹೆಮ್ಮೆ ನನಗಿದೆ ಎಂದರು. ನಾನು ಈ ಕೊಲೆ ಬಗ್ಗೆ ಮೊದಲ ಪತ್ರಿಕಾಗೋಷ್ಠಿ ನಡೆಸಿದಾಗಿನಿಂದಲೂ ನನಗೆ ಪ್ರತ್ಯಕ್ಷ ಮತ್ತು ಪರೋಕ್ಷ ಬೆದರಿಕೆ ಇದ್ದೇ ಇವೆ. ಈಗಲೂ ಇವೆ. ಮುಂದೆಯೂ ಇರಲಿವೆ. ಇದು ನನಗೆ ಗೊತ್ತು. ಇಂತಹ ದೊಡ್ಡ ಕೊಲೆ ಪ್ರಕರಣದಲ್ಲಿ ಹೋರಾಟ ಮಾಡಿದವರಿಗೆ ಈ ರೀತಿಯ ಬೆದರಿಕೆ ಇದ್ದೇ ಇರುತ್ತವೆ. ನಾನು ಸೆಕ್ಯುರಿಟಿಯನ್ನೂ ಕೇಳಿಲ್ಲ. ಅದರ ಅವಶ್ಯಕತೆಯೂ ಇಲ್ಲ. ಎಲ್ಲಿಯವರೆಗೂ ನನ್ನ ಹಣೆಬರಹ ಗಟ್ಟಿ ಇದೆಯೋ ಅಲ್ಲಿಯವರೆಗೂ ನಾನು ಇರಲಿದ್ದೇನೆ. ಹಣೆಬರಹ ಮುಗಿದ ಮೇಲೆ ಸಾಯುತ್ತೇನೆ. ಹೀಗಾಗಿ ನನಗೆ ಸೆಕ್ಯುರಿಟಿ ಅವಶ್ಯಕತೆ ಇಲ್ಲ. ಈ ಹೋರಾಟ ನಿರಂತರವಾಗಿರಲಿದೆ ಎಂದು ತಿಳಿಸಿದರು.1
- ನೀಲಗಿರಿ ಅಪಘಾತ: ಕೂನೂರು ಬಳಿ ಪ್ರವಾಸಿ ವಾಹನ ಪಲ್ಟಿ, 8 ಪ್ರವಾಸಿಗರು ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ" ಊಟಿ ಪ್ರವಾಸ ಮುಗಿಸಿ ಮರಳುವಾಗ ಭೀಕರ ದುರಂತ: 50 ಅಡಿ ಆಳದ ಕಂದಕಕ್ಕೆ ಉರುಳಿದ ವಾಹನ; ಎಂಟು ಮಂದಿ ಸಾವು1
- ಹಸೆ ಮಣೆ ಹೇರಲು ವಾರ ಬಾಕಿ ಇರುವಾಗಲೇ ಸಿದ್ದಾಪುರ ಗ್ರಾಮದಲ್ಲಿ ಬಿರುಗಾಳಿಗೆ ಯುವತಿಯ ಕನಸು ಚೂರಾಗಿದೆ. ಚಳ್ಳಕೆರೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಬೀಸಿದ ಬಿರುಗಾಳಿಯಿಂದ ದುರ್ಘಟನೆ ಸಂಭವಿಸಿದೆ.1
- Post by ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊1
- ಧಾರವಾಡ: ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದರು. ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಧಾರವಾಡ ಜಿಲ್ಲೆಯ ಗ್ರಾಮೀಣ ಕುಟುಂಬಗಳಿಗೆ 100 ದಿನಗಳ ಉದ್ಯೋಗ ಖಾತರಿ ನೀಡಬೇಕು. ರೈತರಿಗೆ ಸರಿಯಾಗಿ ರಸಗೊಬ್ಬರ ಪೂರೈಕೆ ಮಾಡಬೇಕು. ರೈತರ ಪಂಪ್ ಸೆಟ್ ಗಳಿಗೆ ಸರಿಯಾಗಿ ವಿದ್ಯುತ್ ಪೂರೈಸಬೇಕು. ರೈತರ ಸಾಲಮನ್ನಾ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷೆ ದೀಪಾ ಧಾರವಾಡ, ಕಾರ್ಯದರ್ಶಿ ಶರಣು ಗೋನವಾರ, ಜಿಲ್ಲಾ ಸಮಿತಿ ಸದಸ್ಯ ರಾಣಪ್ಪ ಸಾವಂತನೂರ, ಬಸವರಾಜ ಹೊಗೆಣ್ಣವರ, ಮಂಜುನಾಥ ತಿಮ್ಮಾಪುರ, ಶಂಕ್ರಪ್ಪ ಸೇರಿದಂತೆ ಇತರರಿದ್ದರು.1
- ದೊಡ್ಡೇರಿ ಗ್ರಾಮದಲ್ಲಿ ಬಿರುಗಾಳಿಗೆ ಮನೆಯ ಮೇಲ್ಚಾವಣಿ ಕುಸಿದು ಹಾನಿ ಉಂಟಾಗಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ಗುರುವಾರ ಸಂಜೆ ಬಾರಿ ಬಿರುಗಾಳಿ ಸಹಿತ ಮಳೆ ಸುರಿದ್ದು ಈ ವೇಳೆ ಗ್ರಾಮದ ರೆಹಮತ್ ಉಲ್ಲ ಎಂಬುವವರ ಮನೆಯ ಮೇಲ್ಚಾವಣಿಯ ಶೀಟ್ ಗಳು ಬಾರಿ ಬಿರುಗಾಳಿಗೆ ಹಾರಿ ಹೋಗಿ ಹಾನಿ ಉಂಟಾಗಿದೆ.1