ಕೋಲಾರ ಕ್ಲಾಕ್ ಟವರ್ ಗಡಿಯಾರ ವಿವಾದ: ಅಂಜುಮಾನ್ ಅಧ್ಯಕ್ಷ ಜಮೀರ್ ಪಾಷಾ ವಿರುದ್ಧ ಮಾಜಿ ಸಂಸದ ಎಸ್. ಮುನಿಸ್ವಾಮಿ ವಾಗ್ದಾಳಿ ಕೋಲಾರ: ನಗರದ ಐತಿಹಾಸಿಕ ಕ್ಲಾಕ್ ಟವರ್ ಗಡಿಯಾರ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಎದ್ದಿರುವ ವಿವಾದದ ಕುರಿತು ಮಾಜಿ ಸಂಸದ ಎಸ್. ಮುನಿಸ್ವಾಮಿ ಅವರು ಅಂಜುಮಾನ್ ಸಂಸ್ಥೆಯ ಅಧ್ಯಕ್ಷ ಜಮೀರ್ ಪಾಷಾ ಹಾಗೂ ಜಿಲ್ಲಾಡಳಿತದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಮುನಿಸ್ವಾಮಿ ಅವರು, ಕ್ಲಾಕ್ ಟವರ್ ಯಾವುದೇ ವ್ಯಕ್ತಿ ಅಥವಾ ಅವರ ಪೂರ್ವಿಕರ ವೈಯಕ್ತಿಕ ಆಸ್ತಿಯಲ್ಲ, ಬದಲಾಗಿ ಅದು ದೇಶ, ಸರ್ಕಾರ ಮತ್ತು ನಗರಸಭೆಗೆ ಸೇರಿದ ಸಾರ್ವಜನಿಕ ಆಸ್ತಿಯಾಗಿದೆ ಎಂದು ಸ್ಪಷ್ಟಪಡಿಸಿದರು. ಜಮೀರ್ ಪಾಷಾ ಅವರ ಪೂರ್ವಿಕರು ಮೈಸೂರು ಮಹಾರಾಜರ ಬಳಿ ಕೂಲಿ ಕೆಲಸ ಮಾಡುತ್ತಿದ್ದರು ಎಂಬ ಕಾರಣಕ್ಕೆ ಕ್ಲಾಕ್ ಟವರ್ ತಮ್ಮದು ಎಂದು ಹೇಳಿಕೊಳ್ಳುವುದು ಸರಿಯಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. ಗಡಿಯಾರ ಅಳವಡಿಕೆ ಮತ್ತು ತೆರವು ವಿವಾದ: ಎನ್ಡಿಎ ಸಂಸದ ಮಲ್ಲೇಶ್ ಬಾಬು ಅವರು ತಮ್ಮ ಸಂಸದರ ನಿಧಿಯಿಂದ (MPLAD) ಸುಮಾರು 14 ಲಕ್ಷ ರೂಪಾಯಿ ಖರ್ಚು ಮಾಡಿ, ಹೆಚ್ಎಂಟಿ (HMT) ಸಂಸ್ಥೆಯ ಮೂಲಕ ಅಳತೆ ಮಾಡಿಸಿ ಕ್ಲಾಕ್ ಟವರ್ಗೆ ಹೊಸ ಗಡಿಯಾರವನ್ನು ಅಳವಡಿಸಿದ್ದಾರೆ. ಆದರೆ, ಅದನ್ನು ತೆಗೆದುಹಾಕಲು ಮುಂದಾಗಿರುವ ಕ್ರಮವನ್ನು ಮುನಿಸ್ವಾಮಿ ಖಂಡಿಸಿದರು. ಕೋಲಾರದಲ್ಲಿ ಹಿಂದೂ ಮತ್ತು ಮುಸ್ಲಿಮರು ಅಣ್ಣತಮ್ಮಂದಿರಂತೆ ಅನ್ಯೋನ್ಯವಾಗಿದ್ದು, ಇಂತಹ ಹೇಳಿಕೆಗಳ ಮೂಲಕ ಸಮಾಜದಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡಬಾರದು ಎಂದು ಜಮೀರ್ ಪಾಷಾ ಅವರಿಗೆ ಎಚ್ಚರಿಕೆ ನೀಡಿದರು. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಎಚ್ಚರಿಕೆ: ಕಾನೂನನ್ನು ಕೈಗೆತ್ತಿಕೊಂಡು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಲು ಮುಂದಾದವರ ವಿರುದ್ಧ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (SP) ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮುನಿಸ್ವಾಮಿ ಒತ್ತಾಯಿಸಿದರು. ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಅಂದಿನ ಜಿಲ್ಲಾಧಿಕಾರಿ ವೆಂಕಟರಾಜು ಮತ್ತು ಎಸ್ಪಿ ದೇವರಾಜ್ ಅವರ ಸಹಕಾರದೊಂದಿಗೆ ಕ್ಲಾಕ್ ಟವರ್ ಮೇಲೆ ರಾಷ್ಟ್ರಧ್ವಜ ಹಾರಿಸಲಾಗಿತ್ತು ಎಂದು ನೆನಪಿಸಿಕೊಂಡರು. ಪ್ರಸ್ತುತ ಜಿಲ್ಲಾಡಳಿತವು ಕಾಂಗ್ರೆಸ್ ಸರ್ಕಾರದ ಕೈಗೊಂಬೆಯಂತೆ ಏಕಪಕ್ಷೀಯವಾಗಿ ವರ್ತಿಸುತ್ತಿದೆ ಎಂದು ಆರೋಪಿಸಿದ ಅವರು, ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕರೇ ಮುಂದೆ ನಿಂತು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

- ಮೈಸೂರು ಮಹಾರಾಜರ ಬಳಿ ಕೂಲಿ ಕೆಲಸ ಮಾಡ್ತಿದ್ರಾ ಹಾಜಿ ಮುಸ್ತಫಾ ಸಾಹೇಬರು? ಏನಿದು ಸಂಸದ ಮುನಿಸ್ವಾಮಿಯ ಲೆಕ್ಕಾಚಾರ?” “ಕ್ಲಾಕ್ ಟವರ್ ನಮ್ಮ ತಾತ ಕಟ್ಟಿಸಿದ್ದು! – ಜಮೀರ್ ಅಹ್ಮದ್ ಹೇಳಿಕೆ | ಹಾಜಿ ಮುಸ್ತಫಾ ಬಗ್ಗೆ ಮುನಿಸ್ವಾಮಿ ವ್ಯಂಗ್ಯ!” ಕೋಲಾರದ ಐತಿಹಾಸಿಕ ಕ್ಲಾಕ್ ಟವರ್ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಕ್ಲಾಕ್ ಟವರ್ ನಿರ್ಮಾಣದ ಹಿಂದೆ ತಮ್ಮ ತಾತ ಹಾಜಿ ಮೊಹಮ್ಮದ್ ಮುಸ್ತಫಾ ಸಾಹೇಬರ ಕೊಡುಗೆ ಇದೆ ಎಂದು ಅಂಜುಮಾನ್ ಇಸ್ಲಾಮಿಯಾ ಅಧ್ಯಕ್ಷ ಜಮೀರ್ ಅಹ್ಮದ್ ಹೇಳಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಕ್ಲಾಕ್ ಟವರ್ ತಮ್ಮ ತಾತ ನಿರ್ಮಿಸಿರುವ ಗೋಪುರವಾಗಿದ್ದು, ಕಟ್ಟಡ ಇರುವವರೆಗೂ ಹಾಜಿ ಮೊಹಮ್ಮದ್ ಮುಸ್ತಫಾ ಅವರ ಹೆಸರಿನೊಂದಿಗೆ ಗುರುತಿಸಬೇಕು ಎಂಬ ಅಭಿಪ್ರಾಯವನ್ನು ಜಮೀರ್ ಅಹ್ಮದ್ ವ್ಯಕ್ತಪಡಿಸಿದ್ದಾರೆ. ಈ ಗೋಪುರವನ್ನು ನಿರ್ವಹಣೆಗಾಗಿ ನಗರಸಭೆಗೆ ನೀಡಲಾಗಿದೆ, ಕುಟುಂಬದ ಆಸ್ತಿಯೆಂದು ಹೇಳುತ್ತಿಲ್ಲ ಎಂಬ ರೀತಿಯಲ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ. ಇನ್ನೊಂದೆಡೆ, ಸಂಸದ ಮಲ್ಲೇಶ್ ಬಾಬು ಅವರ ನಿಧಿಯಿಂದ ಸುಮಾರು ₹15 ಲಕ್ಷ ವೆಚ್ಚದಲ್ಲಿ ಕ್ಲಾಕ್ ಟವರ್ಗೆ ಗಡಿಯಾರ ಅಳವಡಿಸುವ ಸಂದರ್ಭದಲ್ಲಿ ಗಡಿಯಾರದಲ್ಲಿ ಸಂಸದರ ಹೆಸರು ನಮೂದಿಸಿರುವ ವಿಚಾರಕ್ಕೆ ವಿರೋಧ ವ್ಯಕ್ತವಾಗಿತ್ತು. ಈ ವಿವಾದದ ಬಳಿಕ ಗಡಿಯಾರ ತೆರವುಗೊಳಿಸಿರುವ ವಿಚಾರವೂ ಚರ್ಚೆಯಲ್ಲಿದೆ. ಇದೇ ವಿಚಾರವಾಗಿ ಮಾತನಾಡಿರುವ ಮಾಜಿ ಸಂಸದ ಮುನಿಸ್ವಾಮಿ, ಕ್ಲಾಕ್ ಟವರ್ ದೇಶದ ಆಸ್ತಿ, ನಗರಸಭೆಯ ಆಸ್ತಿ, ಜನರ ಆಸ್ತಿ ಎಂದು ಹೇಳುವ ಜೊತೆಗೆ, ಹಾಜಿ ಮೊಹಮ್ಮದ್ ಮುಸ್ತಫಾ ಸಾಹೇಬರು ಮೈಸೂರು ಮಹಾರಾಜರ ಬಳಿ ಕೂಲಿ ಕೆಲಸ ಮಾಡುತ್ತಿದ್ದರು ಎಂಬ ರೀತಿಯಲ್ಲಿ ವ್ಯಂಗ್ಯವಾಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಕ್ಲಾಕ್ ಟವರ್ ವಿವಾದದ ನಡುವೆ ಹಾಜಿ ಮೊಹಮ್ಮದ್ ಮುಸ್ತಫಾ ಸಾಹೇಬರ ಇತಿಹಾಸದ ಕುರಿತು ರಾಜಕೀಯ ವಾಕ್ಸಮರ ಆರಂಭವಾಗಿದ್ದು, ಈ ಹೇಳಿಕೆ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. KOLAR PULSE — ಜನರ ನಾಡಿ ಮಿಡಿತ.1
- ಸಂವಿಧಾನದ ಮೌಲ್ಯಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು: ಸತೀಶ್ ರಾಜಣ್ಣ ಸಂವಿಧಾನದ ಮೌಲ್ಯಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು: ಸತೀಶ್ ರಾಜಣ್ಣ ಟೇಕಲ್ / ಯಲವಗುಳಿ (ನ. 26): ಸಂವಿಧಾನದ ಆಶಯಗಳು, ಸಮಾನತೆ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯದ ತತ್ವಗಳನ್ನು ಪ್ರತಿಯೊಬ್ಬ ನಾಗರಿಕನೂ ತನ್ನ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸತೀಶ್ ರಾಜಣ್ಣ ಕರೆ ನೀಡಿದರು. ಟೇಕಲ್ ಮತ್ತು ಯಲವಗುಳಿ ಭಾಗದಲ್ಲಿ ನೂರಾರು ಸ್ನೇಹಿತರು ಹಾಗೂ ಸಮುದಾಯದ ಮುಖಂಡರು ಒಟ್ಟಾಗಿ ಸೇರಿ ಆಚರಿಸಿದ ಅದ್ದೂರಿ ಸಂವಿಧಾನ ದಿನಾಚರಣೆಯಲ್ಲಿ ಭಾಗವಹಿಸಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸತೀಶ್ ರಾಜಣ್ಣ ಮಾತನಾಡಿದರು. "ಭಾರತದ ಸಂವಿಧಾನ ಕೇವಲ ಒಂದು ಕಾನೂನು ಪುಸ್ತಕವಲ್ಲ; ಜಾತಿ, ಧರ್ಮ, ಮತ, ಲಿಂಗ ಭೇದವಿಲ್ಲದೆ ಪ್ರತಿಯೊಬ್ಬ ಪ್ರಜೆಗೂ ಗೌರವ, ಸ್ವಾತಂತ್ರ್ಯ ಮತ್ತು ಸಮಾನ ಅವಕಾಶಗಳನ್ನು ಕಲ್ಪಿಸಿಕೊಟ್ಟ ಶ್ರೇಷ್ಠ ಗ್ರಂಥವಾಗಿದೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಅಧ್ಯಕ್ಷತೆಯ ಕರಡು ಸಮಿತಿಯ ದೂರದೃಷ್ಟಿ ಮತ್ತು ಸುದೀರ್ಘ ಶ್ರಮದಿಂದ 1949ರ ನವೆಂಬರ್ 26ರಂದು ಸಂವಿಧಾನ ಅಂಗೀಕಾರಗೊಂಡಿತು. ಆ ಐತಿಹಾಸಿಕ ದಿನದ ಸ್ಮರಣಾರ್ಥ ಆಚರಿಸುವ ಸಂವಿಧಾನ ದಿನ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದೆ." "ನಮಗೆ ದೊರೆತಿರುವ ಮೂಲಭೂತ ಹಕ್ಕುಗಳ ಬಗ್ಗೆ ಎಷ್ಟು ಜಾಗೃತರಾಗಿರುತ್ತೇವೆಯೋ, ಅಷ್ಟೇ ಜವಾಬ್ದಾರಿಯಿಂದ ನಮ್ಮ ಮೂಲಭೂತ ಕರ್ತವ್ಯಗಳನ್ನೂ ಪಾಲಿಸಬೇಕು. ಶಿಕ್ಷಣ, ಕೌಶಲ್ಯ, ಒಗ್ಗಟ್ಟು ಮತ್ತು ಪರಸ್ಪರ ಸಹಕಾರದ ಮೂಲಕ ನಮ್ಮ ಟೇಕಲ್ ಹಾಗೂ ಯಲವಗುಳಿ ಭಾಗದ ಯುವಕರು ಮತ್ತು ಸಮುದಾಯಗಳು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಬೇಕು." "ಸಂವಿಧಾನದ ಆಶಯಗಳನ್ನು ಕೇವಲ ವೇದಿಕೆ ಭಾಷಣಗಳು ಮತ್ತು ಆಚರಣೆಗಳಿಗೆ ಸೀಮಿತಗೊಳಿಸದೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ, ಶಿಕ್ಷಣ ಮತ್ತು ಗೌರವ ಸಿಗುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ." ಸಾಮೂಹಿಕ ಪೀಠಿಕೆ ವಾಚನ ಮತ್ತು ಸಹಭಾಗಿತ್ವ ಕಾರ್ಯಕ್ರಮದಲ್ಲಿ ನೆರೆದಿದ್ದ ನೂರಾರು ಸ್ನೇಹಿತರು, ಸಮುದಾಯದ ಹಿರಿಯ ಮುಖಂಡರು ಮತ್ತು ಗ್ರಾಮಸ್ಥರು ಸಾಮೂಹಿಕವಾಗಿ ಸಂವಿಧಾನದ ಪೀಠಿಕೆ ವಾಚಿಸಿ, ಸಂವಿಧಾನದ ಮೌಲ್ಯಗಳನ್ನು ರಕ್ಷಿಸುವ ಪ್ರತಿಜ್ಞೆ ಕೈಗೊಂಡರು. ಟೇಕಲ್ ಮತ್ತು ಯಲವಗುಳಿ ಭಾಗದ ವಿವಿಧ ಸಮುದಾಯಗಳ ಮುಖಂಡರು, ಹಿರಿಯರು ಹಾಗೂ ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.3
- KOLAR KI.AWAAZ KOUSAR NEWS1
- ಪ್ರಜಾಸೇವಾ ಕಾರ್ಯಕ್ರಮ ಪ್ರಚಾರದ ಕೊರತೆ ತಾಲೂಕು ಆಡಳಿತದ ವಿರುದ್ಧ ಕೆಆರ್ಎಸ್ ಮುಖಂಡ ಶಿವರೆಡ್ಡಿ ಆಕ್ರೋಶ ಪ್ರಜಾಸೇವಾ ಕಾರ್ಯಕ್ರಮ ಪ್ರಚಾರದ ಕೊರತೆ ತಾಲೂಕು ಆಡಳಿತದ ವಿರುದ್ಧ ಕೆಆರ್ಎಸ್ ಮುಖಂಡ ಶಿವರೆಡ್ಡಿ ಆಕ್ರೋಶ1
- ಜಮೀರ್ ಅಹ್ಮದ್ ಕ್ಲಾಕ್ ಟವರ್ ನಿಮ್ಮ ಅಪ್ಪದು ಅಲ್ಲ,ನಿಮ್ಮ ತಾತದು ಅಲ್ಲ.S.ಮುನಿಸ್ವಾಮಿ ಮಾಜಿ ಸಂಸದ ಹೇಳಿಕೆ ಜಮೀರ್ ಅಹ್ಮದ್ ಕ್ಲಾಕ್ ಟವರ್ ನಿಮ್ಮ ಅಪ್ಪದು ಅಲ್ಲ,ನಿಮ್ಮ ತಾತದು ಅಲ್ಲ.S.ಮುನಿಸ್ವಾಮಿ ಮಾಜಿ ಸಂಸದ ಹೇಳಿಕೆ1
- ಕೋಲಾರ ಕ್ಲಾಕ್ ಟವರ್ ಗಡಿಯಾರ ವಿವಾದ: ಅಂಜುಮಾನ್ ಅಧ್ಯಕ್ಷ ಜಮೀರ್ ಪಾಷಾ ವಿರುದ್ಧ ಮಾಜಿ ಸಂಸದ ಎಸ್. ಮುನಿಸ್ವಾಮಿ ವಾಗ್ದಾಳಿ ಕೋಲಾರ: ನಗರದ ಐತಿಹಾಸಿಕ ಕ್ಲಾಕ್ ಟವರ್ ಗಡಿಯಾರ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಎದ್ದಿರುವ ವಿವಾದದ ಕುರಿತು ಮಾಜಿ ಸಂಸದ ಎಸ್. ಮುನಿಸ್ವಾಮಿ ಅವರು ಅಂಜುಮಾನ್ ಸಂಸ್ಥೆಯ ಅಧ್ಯಕ್ಷ ಜಮೀರ್ ಪಾಷಾ ಹಾಗೂ ಜಿಲ್ಲಾಡಳಿತದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಮುನಿಸ್ವಾಮಿ ಅವರು, ಕ್ಲಾಕ್ ಟವರ್ ಯಾವುದೇ ವ್ಯಕ್ತಿ ಅಥವಾ ಅವರ ಪೂರ್ವಿಕರ ವೈಯಕ್ತಿಕ ಆಸ್ತಿಯಲ್ಲ, ಬದಲಾಗಿ ಅದು ದೇಶ, ಸರ್ಕಾರ ಮತ್ತು ನಗರಸಭೆಗೆ ಸೇರಿದ ಸಾರ್ವಜನಿಕ ಆಸ್ತಿಯಾಗಿದೆ ಎಂದು ಸ್ಪಷ್ಟಪಡಿಸಿದರು. ಜಮೀರ್ ಪಾಷಾ ಅವರ ಪೂರ್ವಿಕರು ಮೈಸೂರು ಮಹಾರಾಜರ ಬಳಿ ಕೂಲಿ ಕೆಲಸ ಮಾಡುತ್ತಿದ್ದರು ಎಂಬ ಕಾರಣಕ್ಕೆ ಕ್ಲಾಕ್ ಟವರ್ ತಮ್ಮದು ಎಂದು ಹೇಳಿಕೊಳ್ಳುವುದು ಸರಿಯಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. ಗಡಿಯಾರ ಅಳವಡಿಕೆ ಮತ್ತು ತೆರವು ವಿವಾದ: ಎನ್ಡಿಎ ಸಂಸದ ಮಲ್ಲೇಶ್ ಬಾಬು ಅವರು ತಮ್ಮ ಸಂಸದರ ನಿಧಿಯಿಂದ (MPLAD) ಸುಮಾರು 14 ಲಕ್ಷ ರೂಪಾಯಿ ಖರ್ಚು ಮಾಡಿ, ಹೆಚ್ಎಂಟಿ (HMT) ಸಂಸ್ಥೆಯ ಮೂಲಕ ಅಳತೆ ಮಾಡಿಸಿ ಕ್ಲಾಕ್ ಟವರ್ಗೆ ಹೊಸ ಗಡಿಯಾರವನ್ನು ಅಳವಡಿಸಿದ್ದಾರೆ. ಆದರೆ, ಅದನ್ನು ತೆಗೆದುಹಾಕಲು ಮುಂದಾಗಿರುವ ಕ್ರಮವನ್ನು ಮುನಿಸ್ವಾಮಿ ಖಂಡಿಸಿದರು. ಕೋಲಾರದಲ್ಲಿ ಹಿಂದೂ ಮತ್ತು ಮುಸ್ಲಿಮರು ಅಣ್ಣತಮ್ಮಂದಿರಂತೆ ಅನ್ಯೋನ್ಯವಾಗಿದ್ದು, ಇಂತಹ ಹೇಳಿಕೆಗಳ ಮೂಲಕ ಸಮಾಜದಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡಬಾರದು ಎಂದು ಜಮೀರ್ ಪಾಷಾ ಅವರಿಗೆ ಎಚ್ಚರಿಕೆ ನೀಡಿದರು. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಎಚ್ಚರಿಕೆ: ಕಾನೂನನ್ನು ಕೈಗೆತ್ತಿಕೊಂಡು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಲು ಮುಂದಾದವರ ವಿರುದ್ಧ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (SP) ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮುನಿಸ್ವಾಮಿ ಒತ್ತಾಯಿಸಿದರು. ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಅಂದಿನ ಜಿಲ್ಲಾಧಿಕಾರಿ ವೆಂಕಟರಾಜು ಮತ್ತು ಎಸ್ಪಿ ದೇವರಾಜ್ ಅವರ ಸಹಕಾರದೊಂದಿಗೆ ಕ್ಲಾಕ್ ಟವರ್ ಮೇಲೆ ರಾಷ್ಟ್ರಧ್ವಜ ಹಾರಿಸಲಾಗಿತ್ತು ಎಂದು ನೆನಪಿಸಿಕೊಂಡರು. ಪ್ರಸ್ತುತ ಜಿಲ್ಲಾಡಳಿತವು ಕಾಂಗ್ರೆಸ್ ಸರ್ಕಾರದ ಕೈಗೊಂಬೆಯಂತೆ ಏಕಪಕ್ಷೀಯವಾಗಿ ವರ್ತಿಸುತ್ತಿದೆ ಎಂದು ಆರೋಪಿಸಿದ ಅವರು, ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕರೇ ಮುಂದೆ ನಿಂತು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.1
- *ಪತ್ರಕರ್ತರ ಮೇಲಿನ ದೌರ್ಜನ್ಯ ಖಂಡಿಸಿ ಬೆಳಗಾವಿ ಚಲೋ’: ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಅಸ್ಲಾಂ ಪಾಷಾ ಮನವಿ* ಚಿಂತಾಮಣಿ:ಪತ್ರಕರ್ತರ ಹಕ್ಕುಗಳು ಮತ್ತು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಗಮನ ಸೆಳೆಯಲು ‘ಬೆಳಗಾವಿ ಚಲೋ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು,ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕು ಮಟ್ಟದ ಪತ್ರಕರ್ತರು ಮತ್ತು ಸಂಘಟನೆಯ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ತಾಲೂಕು ಅಧ್ಯಕ್ಷ ಸೈಯದ್ ಅಸ್ಲಾಂ ಪಾಷಾ ಕಳಕಳಿಯ ಮನವಿ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಬೆಳಗಾವಿ ಚಲೋ ಹೋರಾಟವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.ಇತ್ತೀಚಿನ ದಿನಗಳಲ್ಲಿ ಪತ್ರಕರ್ತರ ಮೇಲೆ ದೌರ್ಜನ್ಯ ಮತ್ತು ದಬ್ಬಾಳಿಕೆ ನಡೆಯುತ್ತಿರುವ ಹಲವಾರು ಘಟನೆಗಳು ನಮ್ಮ ಮುಂದಿದ್ದು,ಪತ್ರಕರ್ತರ ಹಕ್ಕುಗಳ ರಕ್ಷಣೆ ಹಾಗೂ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂಬುದು ಈ ಹೋರಾಟದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ವಿವರಿಸಿದ್ದಾರೆ. *ಪತ್ರಕರ್ತರ ಮೇಲಿನ ದೌರ್ಜನ್ಯ ಖಂಡಿಸಿ ಬೆಳಗಾವಿ ಚಲೋ’: ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಅಸ್ಲಾಂ ಪಾಷಾ ಮನವಿ* ಚಿಂತಾಮಣಿ:ಪತ್ರಕರ್ತರ ಹಕ್ಕುಗಳು ಮತ್ತು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಗಮನ ಸೆಳೆಯಲು ‘ಬೆಳಗಾವಿ ಚಲೋ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು,ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕು ಮಟ್ಟದ ಪತ್ರಕರ್ತರು ಮತ್ತು ಸಂಘಟನೆಯ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ತಾಲೂಕು ಅಧ್ಯಕ್ಷ ಸೈಯದ್ ಅಸ್ಲಾಂ ಪಾಷಾ ಕಳಕಳಿಯ ಮನವಿ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಬೆಳಗಾವಿ ಚಲೋ ಹೋರಾಟವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.ಇತ್ತೀಚಿನ ದಿನಗಳಲ್ಲಿ ಪತ್ರಕರ್ತರ ಮೇಲೆ ದೌರ್ಜನ್ಯ ಮತ್ತು ದಬ್ಬಾಳಿಕೆ ನಡೆಯುತ್ತಿರುವ ಹಲವಾರು ಘಟನೆಗಳು ನಮ್ಮ ಮುಂದಿದ್ದು,ಪತ್ರಕರ್ತರ ಹಕ್ಕುಗಳ ರಕ್ಷಣೆ ಹಾಗೂ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂಬುದು ಈ ಹೋರಾಟದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ವಿವರಿಸಿದ್ದಾರೆ.2
- ಚಿನ್ನಕೋಟೆ ಕೆರೆಯಲ್ಲಿ ಮುಳುಗಿ 10ನೇ ತರಗತಿ ವಿದ್ಯಾರ್ಥಿ ಸಾವು ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಬಾಲಕ; ಪೋಷಕರ ಆಕ್ರಂದನ ಮುಗಿಲುಮುಟ್ಟಿತು ಬಂಗಾರಪೇಟೆ: ಕೆರೆಯಲ್ಲಿ ಈಜಲು ತೆರಳಿದ್ದ 10ನೇ ತರಗತಿ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಚಿನ್ನಕೋಟೆ ಕೆರೆಯಲ್ಲಿ ನಡೆದಿದೆ. ತಾಲ್ಲೂಕಿನ ಕತ್ತಿಹಳ್ಳಿ ಗ್ರಾಮದ ಯುವನೇಶ್ (15) ಮೃತಪಟ್ಟ ಬಾಲಕ. ಈತ ಚಿನ್ನಕೋಟೆ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರ ಪುತ್ರ ಎಂದು ತಿಳಿದುಬಂದಿದೆ. ಯುವನೇಶ್ ತನ್ನ ಸ್ನೇಹಿತರೊಂದಿಗೆ ಚಿನ್ನಕೋಟೆ ಕೆರೆಗೆ ಈಜಲು ತೆರಳಿದ್ದನು. ಮೂವರು ಸ್ನೇಹಿತರು ಕೆರೆಯ ಹೊಂಡದಲ್ಲಿ ಈಜಾಡುತ್ತಿದ್ದಾಗ ಯುವನೇಶ್ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾನೆ. ಇದನ್ನು ಗಮನಿಸಿದ ಸ್ನೇಹಿತರು ಆತಂಕಗೊಂಡಿದ್ದು, ಯುವನೇಶ್ನನ್ನು ರಕ್ಷಿಸಲು ಸಾಧ್ಯವಾಗದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಬಾಲಕನ ಅಕಾಲಿಕ ಸಾವಿನಿಂದ ಕತ್ತಿಹಳ್ಳಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಘಟನಾ ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.2