ಹೊಳಲ್ಕೆರೆ ಹೊರವಲಯದ ಕಣಿವೆ ಅಂಜನೇಯ ಸ್ವಾಮಿ ದೇವಸ್ಥಾನದ ಬಳಿ ಗೊಬ್ಬರ ತುಂಬಿದ ಲಾರಿ ಪಲ್ಟಿ ಹೊಡೆದು ಚಾಲಕನಿಗೆ ಗಾಯ ಹೊಳಲ್ಕೆರೆ ಹೊರವಲಯದ ಕಣಿವೆ ಅಂಜನೇಯ ಸ್ವಾಮಿ ದೇವಸ್ಥಾನದ ಬಳಿ ಗೊಬ್ಬರ ತುಂಬಿದ ಲಾರಿ ಪಲ್ಟಿ ಹೊಡೆದು ಚಾಲಕ ಗಾಯಗೊಂಡ ಘಟನೆ ನಡೆದಿದೆ. ಇನ್ನೂ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಹೊರವಲಯದ ಕಣಿವೆ ಅಂಜನೇಯ ಸ್ವಾಮಿ ದೇವಸ್ಥಾನದ ಬಳಿ ಮಂಗಳವಾರ ತಡರಾತ್ರಿ 12.30 ಕ್ಕೆ ಈ ಘಟನೆ ನಡೆದಿದ್ದು ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ಧಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನೂ ಗೊಬ್ಬರದ ಚೀಲಗಳನ್ನ ತುಂಬಿಕೊಂಡು ಹೋಗುತ್ತಿದ್ದ ಈ ಲಾರಿ ಹೊಳಲ್ಕೆರೆ ಹೊರವಲಯದ ಕಣಿವೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಬಂದಿದ್ದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಲಾರಿ ಸಂಪೂರ್ಣ ಜಖಂ ಗೊಂಡಿದ್ದು ಗೊಬ್ಬರದ ಚೀಲಗಳು ಚೆಲ್ಲಾಪಿಲ್ಲಿಯಾಗಿ ಬಿದ್ದು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನೂ ಹೊಳಲ್ಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಸಹ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಈ ಸಂಬಂದ ಪ್ರಖರಣ ಧಾಖಲಿಸಿಕೊಂಡಿದ್ದಾರೆ
ಹೊಳಲ್ಕೆರೆ ಹೊರವಲಯದ ಕಣಿವೆ ಅಂಜನೇಯ ಸ್ವಾಮಿ ದೇವಸ್ಥಾನದ ಬಳಿ ಗೊಬ್ಬರ ತುಂಬಿದ ಲಾರಿ ಪಲ್ಟಿ ಹೊಡೆದು ಚಾಲಕನಿಗೆ ಗಾಯ ಹೊಳಲ್ಕೆರೆ ಹೊರವಲಯದ ಕಣಿವೆ ಅಂಜನೇಯ ಸ್ವಾಮಿ ದೇವಸ್ಥಾನದ ಬಳಿ ಗೊಬ್ಬರ ತುಂಬಿದ ಲಾರಿ ಪಲ್ಟಿ ಹೊಡೆದು ಚಾಲಕ ಗಾಯಗೊಂಡ ಘಟನೆ ನಡೆದಿದೆ. ಇನ್ನೂ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಹೊರವಲಯದ ಕಣಿವೆ ಅಂಜನೇಯ ಸ್ವಾಮಿ ದೇವಸ್ಥಾನದ ಬಳಿ ಮಂಗಳವಾರ ತಡರಾತ್ರಿ 12.30 ಕ್ಕೆ ಈ ಘಟನೆ ನಡೆದಿದ್ದು ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ಧಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನೂ ಗೊಬ್ಬರದ ಚೀಲಗಳನ್ನ ತುಂಬಿಕೊಂಡು ಹೋಗುತ್ತಿದ್ದ ಈ ಲಾರಿ ಹೊಳಲ್ಕೆರೆ ಹೊರವಲಯದ ಕಣಿವೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಬಂದಿದ್ದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಲಾರಿ ಸಂಪೂರ್ಣ ಜಖಂ ಗೊಂಡಿದ್ದು ಗೊಬ್ಬರದ ಚೀಲಗಳು ಚೆಲ್ಲಾಪಿಲ್ಲಿಯಾಗಿ ಬಿದ್ದು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನೂ ಹೊಳಲ್ಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಸಹ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಈ ಸಂಬಂದ ಪ್ರಖರಣ ಧಾಖಲಿಸಿಕೊಂಡಿದ್ದಾರೆ
- ಚಿತ್ರದುರ್ಗದಲ್ಲಿ ‘ಸೀರತ್ ಅಭಿಯಾನ’! 🔥 ಪ್ರವಾದಿ ಮುಹಮ್ಮದ್ ﷺ ಸಂದೇಶ ಸಾರಲು ಸಜ್ಜು! #SeeratUnNabi #ಸೀರತ್_ಅಭಿಯಾನ #ಕ್ರಾಂತಿಯಜ್ಯೋತಿ #ಪ್ರವಾದಿಮುಹಮ್ಮದ್ﷺ #Muhammadﷺ #ProphetMuhammad #SeeratCampaign #JamaatEIslamiHind #ಚಿತ್ರದುರ್ಗ #Chitradurga #ChitradurgaNews #KarnatakaNews #KannadaNews #BreakingNews #ViralNews #LocalNews #CTownNews #CtownNews #NewsUpdate #ಸುದ್ದಿ #ಸುದ್ದಿವಾಹಿನಿ1
- ಚಳ್ಳಕೆರೆ ನಗರದಲ್ಲಿಂದು ಈದುಮಿಲಾದ್ ಅಂಗವಾಗಿ ಚಳ್ಳಕೆರೆ ನಗರದಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಯಿತು. ಚಳ್ಳಕೆರೆ ನಗರದಲ್ಲಿಂದು ಈದುಮಿಲಾದ್ ಅಂಗವಾಗಿ ಚಳ್ಳಕೆರೆ ನಗರದಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಯಿತು. ನಗರದ ಗಾಂಧಿನಗರದ ಮಸೀದಿ ಬಳಿ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಟಿ. ರಘುಮೂರ್ತಿ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಈದುಮಿಲಾದ್ ಹಬ್ಬವು ಪ್ರೀತಿ, ಸಹೋದರತೆ, ಶಾಂತಿ ಮತ್ತು ಸೌಹಾರ್ದತೆಯ ಸಂದೇಶ ಸಾರುವ ಪವಿತ್ರ ದಿನವಾಗಿದೆ. ಸಮಾಜದಲ್ಲಿ ಎಲ್ಲರೂ ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕಬೇಕು ಎಂದು ಕರೆ ನೀಡಿದರು. ಮೆರವಣಿಗೆಯಲ್ಲಿ ಮುಸ್ಲಿಂ ಸಮುದಾಯ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು. ಮುಖಂಡರು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮೆರವಣಿಗೆಯ ಮೆರುಗು ಹೆಚ್ಚಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು. ಈ ವೇಳೆ ಪೊಲೀಸ್ ಇಲಾಖೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಕೈಗೊಂಡಿತ್ತು. ಈದುಮಿಲಾದ್ ಮೂಲಕ ಶಾಂತಿ, ಸಹೋದರತೆ ಮತ್ತು ಸೌಹಾರ್ದತೆಯ ಸಂದೇಶ ಸಾರುವ ಮೂಲಕ ಚಳ್ಳಕೆರೆ ನಗರ ಗಮನ ಸೆಳೆಯಿತು.1
- ಗ್ರಾಮ ಪಂಚಾಯತಿ ಜಾಬ್ ಕಾರ್ಡ್ ಕೂಲಿ ಕಾರ್ಮಿಕರಿಂದ ಬೆಳಗೆರೆ ಕೆರೆ ಹಳ್ಳಗಳ ಪುನರ್ ಚೇತನ ಕಾಮಗಾರಿ. ಚಳ್ಳಕೆರೆ ತಾಲೂಕಿನ ಬೆಳೆಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಏಳು ಹಳ್ಳಿಗಳಲ್ಲಿರುವ 1545 ಉದ್ಯೋಗ ಖಾತ್ರಿ ಕಾರ್ಮಿಕರ ಅನುಕೂಲಕ್ಕಾಗಿ ಬಿವಿ ಜೀ ರಾಮ್ ಜೀ ಯೋಜನೆಯಡಿ ವೈಯಕ್ತಿಕ ಮತ್ತು ಸಮುದಾಯದ ಕಾಮಗಾರಿಗಳನ್ನು ಕೈಗೊಂಡು ಸ್ಥಳೀಯವಾಗಿ ಕೂಲಿ ಕೆಲಸ ನೀಡಲಾಗಿದೆ. ಸಮೀಪದ ಹುಲಿಕುಂಟೆ ಸರ್ಕಾರಿ ಗೋಮಾಳ ಭೂಮಿಯಲ್ಲಿ ಸುಮಾರು 10 ಲಕ್ಷ ವೆಚ್ಚದ ಸಮುದಾಯ ಕಾಮಗಾರಿ ಆರಂಭಿಸಲಾಗಿದೆ. ಪ್ರತಿ ದಿನ 109 ಜನ ಕೂಲಿ ಕಾರ್ಮಿಕರು ದುಡಿಯುತ್ತಿದ್ದಾರೆ. ಪಂಚಾಯತಿ ವ್ಯಾಪ್ತಿಯ ಬೆಳೆಗೆರೆ, ನಾರಾಯಣಪುರ, ರಂಗನಾಥಪುರ, ಕಲಮರಹಳ್ಳಿ, ಹುಲಿಕುಂಟೆ, ಭೋವಿ ಕಾಲನಿ, ಕ್ಯಾತನಮಾಳೆ ಸೇರಿದ ಹಳ್ಳಿಗಳಲ್ಲಿ ಒಟ್ಟು 1,545 ಕೂಲಿ ಕಾರ್ಮಿಕರಿಗೆ ಜಾಬ್ ಕಾರ್ಡುಗಳನ್ನು ವಿತರಿಸಲಾಗಿದೆ. ಪ್ರಸ್ತುತ ಜಾಬ್ ಕಾರ್ಡುಗಳನ್ನು ನವೀಕರಣ ಮಾಡಿಕೊಂಡು, ವಿಬಿ ರಾಮ್ ಜೀ ಯೋಜನೆಯ 318 ವಿವಿಧ ಕಾಮಗಾರಿಗಳಲ್ಲಿ ದನ,ಕುರಿ,ಮೆಕೆಗಳ ಶೆಡ್ ನಿರ್ಮಾಣ ಸೇರಿ ಕೃಷಿ ಹೊಂಡ ಮತ್ತು ವೈಯಕ್ತಿಕ ರೈತರ ಜಮೀನ ಅಭಿವೃದ್ಧಿ ಕಾಮಗಾರಿ ಹಾಗೂ ಕೆರೆ,ಹಳ್ಳಗಳ ಪುನರ್ ಚೇತನ ಕಾಮಗಾರಿಗಳನ್ನು ಜಾರಿ ಮಾಡಲಾಗಿದೆ. ಪ್ರತಿ ದಿನ 120 ಕೂಲಿ ಕಾರ್ಮಿಕರಿಗೆ 382 ರೂ ದಿನದ ಕೂಲಿಯಂತೆ ಕೆಲಸ ನೀಡಲಾಗಿದೆ. ಈ ವರ್ಷ ಸಕಾಲಕ್ಕೆ ಮುಂಗಾರು ಮಳೆ ಇಲ್ಲ. ರೈತರ ಹೊಲಗಳಲ್ಲಿ ಕೆಲಸ ಇಲ್ಲದಾಗಿದೆ. ಇದರಿಂದ ಇತರೆ ವರ್ಗದ ಕೂಲಿ ಕಾರ್ಮಿಕರಿಗೆ ಸ್ಥಳೀಯವಾಗಿ ಕೆಲಸ ಇಲ್ಲ. ವಲಸೆ ಹೋಗುವ ಪರಿಸ್ಥಿತಿಯಲ್ಲಿ ಸ್ಥಳೀಯ ಪಂಚಾಯತಿಯಿಂದ ದುಡಿಯುವ ಕೈಗಳಿಗೆ ಕೆಲಸ ಸಿಕ್ಕಿದೆ. ಅಂತರ್ಜಲಕ್ಕೆ ಒತ್ತು: ಕೆರೆಗಳ ಹೂಳು ಎತ್ತುವ ಮತ್ತು ಕೆರೆಗೆ ನೀರು ಹರಿದು ಬರುವ ಹಳ್ಳಗಳ ಪುನರ್ ಚೇತನ ಕಾಮಗಾರಿಗೆ ಮೊದಲ ಆದ್ಯತೆ ನೀಡಲಾಗಿದೆ. ಕೆರೆ,ಗೋಕಟ್ಟೆ ಅಭಿವೃದ್ಧಿಯಿಂದ ಹರಿಯುವ ಮಳೆ ನೀರು ತಡೆದು ನಿಲ್ಲಿಸುವ ಅನುಕೂಲ ಆಗುತ್ತದೆ. ಇದರಿಂದ ಅಡವಿಯಲ್ಲಿ ಜನ,ಜಾನುವಾರು ಸೇರಿ ಪ್ರಾಣಿ,ಪಕ್ಷಿಗಳಿಗೆ ಕುಡಿಯುವ ನೀರಿನ ಅನುಕೂಲ ಮತ್ತು ಅಂತರ್ಜಲ ವೃದ್ದಿಗೆ ಆಧಾರ ಆಗುತ್ತದೆ. ಬರಗಾಲ ಪರಿಸ್ಥಿತಿಗೆ ಕೆಲಸ ಹುಡುಕಿಕೊಂಡು ಬೇರೆ ಕಡೆ ಹೋಗದಂತೆ ಗ್ರಾಮ ಸಮೀಪ ಸಾಮೂಹಿಕವಾಗಿ ಮಾಡುವ ಸಮುದಾಯ ಕಾಮಗಾರಿ ಕೆಲಸ ನೀಡಲಾಗಿದೆ. ಕೆಲ ರೈತರು ವೈಯಕ್ತಿಕವಾಗಿಯೂ ತಮ್ಮ ಹೊಲಗಳಲ್ಲಿ ಅಭಿವೃದ್ಧಿ ಕೆಲಸ ಮಾಡಿಕೊಂಡರೂ ಕೂಲಿ ಸಿಗುತ್ತದೆ ಎನ್ನುತ್ತಾರೆ ಪಿಡಿಒ ಸಿ.ಎಂ. ದೇವೇಂದ್ರಪ್ಪ. ತಾಲೂಕಿನ 40 ಗ್ರಾಮ ಪಂಚಾಯತಿಗಳಲ್ಲಿ ವಿಬಿ ರಾಮ್ ಜೀ ಯೋಜನೆಯಡಿ ಒಟ್ಟು 8,026 ಕಾಮಗಾರಿಗಳ ಅನುಮೋದನೆ ಮಾಡಲಾಗಿದೆ. ಇದರಲ್ಲಿ 1626 ವೈಯಕ್ತಿಕ ಕಾಮಗಾರಿ ಸೇರಿ ಉಳಿದಂತೆ ಸಮೂಹ ಕಾಮಗಾರಿಗಳಿಗೆ ಅವಕಾಶ ಇದೆ. ಪ್ರತಿದಿನ ಸರಾಸರಿ 4 ಸಾವಿರ ಕಾರ್ಮಿಕರು ದುಡಿಯಲು ಅನುಕೂಲ ಮಾಡಲಾಗಿದೆ. ಕೆಲಸಕ್ಕಾಗಿ ಗೂಳೆ ಹೋಗದಂತೆ ಪಂಚಾಯತಿಯಲ್ಲಿ ಕೆಲಸ ಪಡೆಯುವ ಅವಕಾಶ ಇದೆ. ಕೆಲ ಗ್ರಾಮಗಳಲ್ಲಿ ಡಂಗೂರ ಸಾರಿ ಕಾರ್ಮಿಕರಿಗೆ ಸ್ಥಳೀಯ ಕೂಲಿ ಕೆಲಸದ ಬಗ್ಗೆ ಜಾಗೃತಿಗೆ ಕ್ರಮ ವಹಿಸಲಾಗಿದೆ_ ಎಚ್. ಶಶಿಧರ್, ತಾಪಂ, ಇಒ, ಚಳ್ಳಕೆರೆ.1
- ಚಳ್ಳಕೆರೆ ತಾಲೂಕು ಕಚೇರಿಯಲ್ಲಿ ಶಿರಸ್ತೆದಾರ್ ಸದಾಶಿವಪ್ಪ ಅವರಿಗೆ ಬೀಳ್ಕೊಡುಗೆ ಚಳ್ಳಕೆರೆ ನಗರದ ತಾಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿರಸ್ತೆದಾರ್ ಸದಾಶಿವಪ್ಪ ಅವರು ಹೊಳಲ್ಕೆರೆ ತಾಲೂಕು ಕಚೇರಿಗೆ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ, ತಾಲೂಕು ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು. ತಹಶೀಲ್ದಾರ್ ರೇಹಾನ್ ಪಾಷ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಸದಾಶಿವಪ್ಪ ಅವರನ್ನು ಸನ್ಮಾನಿಸಿ ಗೌರವದಿಂದ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ತಹಶೀಲ್ದಾರ್ ರೇಹಾನ್ ಪಾಷ, ವರ್ಗಾವಣೆಗೊಂಡ ಶಿರಸ್ತೆದಾರ್ ಸದಾಶಿವಪ್ಪ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಮಾತನಾಡಿ, ಸದಾಶಿವಪ್ಪ ಅವರ ಸೇವಾ ಅವಧಿಯ ಕರ್ತವ್ಯನಿಷ್ಠೆ ಹಾಗೂ ಸಹಕಾರವನ್ನು ಸ್ಮರಿಸಿದರು. ಸಹೋದ್ಯೋಗಿಗಳು ಶುಭ ಹಾರೈಸಿ, ಹೊಳಲ್ಕೆರೆ ತಾಲೂಕು ಕಚೇರಿಯಲ್ಲಿಯೂ ಉತ್ತಮ ಸೇವೆ ಸಲ್ಲಿಸುವಂತೆ ಹಾರೈಸಿದರು.4
- ಶೀತ, ಕೆಮ್ಮು, ಜ್ವರ ಹೆಚ್ಚಳ: ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾ ಆರೋಗ್ಯ ಇಲಾಖೆ ಸೂಚನೆ ಚಿತ್ರದುರ್ಗ:ರಾಜ್ಯಾದ್ಯಂತ ಕಳೆದ ಕೆಲವು ದಿನಗಳಿಂದ ಶೀತ, ಕೆಮ್ಮು ಹಾಗೂ ಜ್ವರ ಪ್ರಕರಣಗಳು ಏರಿಕೆಯಾಗುತ್ತಿದ್ದು, ಜಿಲ್ಲೆಯಲ್ಲೂ ಸಾಮಾನ್ಯ ಶೀತ, ಕೆಮ್ಮು ಮತ್ತು ಜ್ವರ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚನೆ ನೀಡಿದೆ. ಈ ರೋಗಲಕ್ಷಣಗಳು ಉಸಿರಾಟ, ಸೋಂಕಿತ ವ್ಯಕ್ತಿ ಉಪಯೋಗಿಸಿದ ವಸ್ತುಗಳು ಹಾಗೂ ಗಾಳಿಯಲ್ಲಿನ ಕಣಗಳ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ಈದ್ ಮಿಲಾದ್, ಗೌರಿ ಗಣೇಶ ಚತುರ್ಥಿ, ಓಣಂ, ದಸರಾ ಹಾಗೂ ದೀಪಾವಳಿ ಮುಂತಾದ ಹಬ್ಬಗಳು ಬರಲಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಜನರು ಸಾಮೂಹಿಕವಾಗಿ ಸೇರುವುದರಿಂದ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿಗೆ ಪ್ರಕರಣಗಳು ಕಂಡುಬರುವ ಅಪಾಯವಿದೆ. ಈ ಸಾಂಕ್ರಾಮಿಕ ರೋಗ ಹತೋಟಿಗಾಗಿ ಸಾರ್ವಜನಿಕರು ರೋಗಲಕ್ಷಣಗಳು ಕಂಡುಬಂದಲ್ಲಿ ಕೆಮ್ಮುವಾಗ ಅಥವಾ ಸೀನುವಾಗ ಕಡ್ಡಾಯವಾಗಿ ಮಾಸ್ಕ್ ಅಥವಾ ಕರವಸ್ತ್ರ ಧರಿಸಬೇಕು, ಹ್ಯಾಂಡ್ ಸ್ಯಾನಿಟೈಸರ್ ಬಳಸಬೇಕು ಹಾಗೂ ರೋಗಲಕ್ಷಣಗಳಿಗೆ ಅನುಸಾರವಾಗಿ ಪರೀಕ್ಷೆಗೆ ಒಳಗಾಗಬೇಕು. ಸರ್ಕಾರಿ ಕಚೇರಿ, ವಸತಿ ಸಮುಚ್ಚಯ, ಹೋಟೆಲ್, ದೇವಸ್ಥಾನ, ರೆಸ್ಟೋರೆಂಟ್, ಬಸ್ ಹಾಗೂ ರೈಲ್ವೆ ನಿಲ್ದಾಣ, ವಿದ್ಯಾ ಸಂಸ್ಥೆಗಳು ಮತ್ತು ಮಾರುಕಟ್ಟೆ ಮುಂತಾದ ಜನನಿಬಿಡ ಪ್ರದೇಶಗಳಲ್ಲಿ ಸೋಂಕಿತ ವ್ಯಕ್ತಿಗಳು ಅಂತರ ಕಾಯ್ದುಕೊಳ್ಳಬೇಕು ಹಾಗೂ ತಕ್ಷಣ ಸೂಕ್ತ ಚಿಕಿತ್ಸೆ ಪಡೆಯಬೇಕು. ರೋಗಲಕ್ಷಣಗಳು ಕಂಡುಬಂದಲ್ಲಿ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೆರಳಿ ರೋಗಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕು. ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಪ್ರತಿಯೊಬ್ಬರೂ ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ಸುನೀಲ್ ಕುಮಾರ್ ಕೋರಿದ್ದಾರೆ. (ಫೋಟೋ ಕಳುಹಿಸಿದೆ) ======== ಆ.28ರಂದು ನುಲಿಯ ಚಂದಯ್ಯ ಜಯಂತಿ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ******** ಚಿತ್ರದುರ್ಗ(ಕರ್ನಾಟಕ ವಾರ್ತೆ)ಆ.25: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಇವರುಗಳ ಸಂಯುಕ್ತಾಶ್ರಯದಲ್ಲಿ ಇದೇ ಆಗಸ್ಟ್ 28ರಂದು ಬೆಳಿಗ್ಗೆ 11ಕ್ಕೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶ್ರೀ ನುಲಿಯ ಚಂದಯ್ಯ ಜಯಂತಿ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ ಸಮಾರಂಭ ಏರ್ಪಡಿಸಲಾಗಿದೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಉದ್ಘಾಟನೆ ನೆರವೇರಿಸುವರು. ಹೊಸದುರ್ಗ ಶಾಸಕರು ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಬಿ.ಜಿ.ಗೋವಿಂದಪ್ಪ, ಸಂಸದ ಗೋವಿಂದ ಎಂ.ಕಾರಜೋಳ ಘನ ಉಪಸ್ಥಿತಿ ವಹಿಸುವರು. ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಧ್ಯಕ್ಷತೆ ವಹಿಸುವರು. ಗೌರವಾನ್ವಿತ ಅತಿಥಿಗಳಾಗಿ ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಡಾ.ಬಿ.ಯೋಗೇಶ್ ಬಾಬು, ಆದಿಜಾಂಬವ ಅಭಿವೃದ್ಧಿ ನಿಗಮ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗ ಅಧ್ಯಕ್ಷ ಪಿ.ರಘು, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್.ಮಂಜಪ್ಪ, ಮೊಳಕಾಲ್ಮುರು ಶಾಸಕ ಎನ್.ವೈ.ಗೋಪಾಲಕೃಷ್ಣ, ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ವಿಧಾನ ಪರಿಷತ್ ಶಾಸಕರಾದ ಚಿದಾನಂದ ಎಂ.ಗೌಡ, ಕೆ.ಎಸ್.ನವೀನ್, ಡಿ.ಟಿ.ಶ್ರೀನಿವಾಸ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಅರ್.ಶಿವಣ್ಣ, ಕೊರಮ ಸಮಾಜ ಜಿಲ್ಲಾ ಅಧ್ಯಕ್ಷ ಕೆ.ಕೃಷ್ಣಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದ್ವಾರಕನಾಥ್, ಜಿಲ್ಲಾ ಆರ್ಯ ಈಡಿಗರ ಸಂಘ ಅಧ್ಯಕ್ಷ ಹೆಚ್.ಜೀವನ್, ಪ್ರಧಾನ ಕಾರ್ಯದರ್ಶಿ ಟಿ.ಮಂಜುನಾಥ್, ಜಿಲ್ಲಾ ಆರ್ಯ ಈಡಿಗರ ಮಹಿಳಾ ಸಂಘದ ಅಧ್ಯಕ್ಷೆ ಅನುರಾಧ ರವಿಕುಮಾರ್, ಚಿತ್ರದುರ್ಗ ತಾಲ್ಲೂಕು ಆರ್ಯ ಈಡಿಗರ ಸಂಘ ಹಾಗೂ ವಕೀಲರ ಸಂಘ ಪ್ರಧಾನ ಕಾರ್ಯದರ್ಶಿ ಹೆಚ್.ಓ.ಜಗದೀಶ, ಆರ್ಯ ಈಡಿಗರ ಸೇವಾ ಸಂಘ ಅಧ್ಯಕ್ಷ ಇ.ಎನ್.ಲಕ್ಷ್ಮೀಕಾಂತ ಭಾಗವಹಿಸುವರು. ಚಿತ್ರದುರ್ಗದ ಉಮೇಶ್ ಪತ್ತಾರ ಮತ್ತು ತಂಡ ಹಾಗೂ ಆಯಿತೋಳು ಯಶವಂತ್ ಕುಮಾರ್ ಮತ್ತು ತಂಡದವರಿಂದ ಗೀತಗಾಯನ ನಡೆಯಲಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ ತಿಳಿಸಿದ್ದಾರೆ. ===========1
- ಈದ್ ಮಿಲಾದ್: ಶಾಂತಿ ಸುವ್ಯವಸ್ಥೆ ಕಾಪಾಡಲು ಚಳ್ಳಕೆರೆಯಲ್ಲಿ ಪೊಲೀಸರಿಂದ ಬೃಹತ್ ಪಥಸಂಚಲನ ಚಳ್ಳಕೆರೆ: ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಪೊಲೀಸ್ ಇಲಾಖೆ ವತಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಪಥಸಂಚಲನ ನಡೆಸಲಾಯಿತು. ನಗರದ ಪೊಲೀಸ್ ಠಾಣೆಯ ಮುಂಭಾಗದಿಂದ ಆರಂಭವಾದ ಈ ಶಿಸ್ತುಬದ್ಧ ಪಥಸಂಚಲನವು ಚಿತ್ರದುರ್ಗ ರಸ್ತೆ, ಅಂಬೇಡ್ಕರ್ ವೃತ್ತ, ಎಸ್.ಆರ್. ರಸ್ತೆ, ಬೆಂಗಳೂರು ರಸ್ತೆ, ಬಸವೇಶ್ವರ ವೃತ್ತ, ಹಳೆನಗರದ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಮೂಲಕ ಸಾಗಿ ಬಳ್ಳಾರಿ ರಸ್ತೆಯವರೆಗೆ ಜರುಗಿತು. ನಗರದ ಅಷ್ಟ ದಿಕ್ಕುಗಳಲ್ಲೂ ಸಂಚರಿಸಿದ ಪೊಲೀಸ್ ಪಡೆ, ಸಾರ್ವಜನಿಕರಲ್ಲಿ ಧೈರ್ಯ ಮತ್ತು ಭದ್ರತೆಯ ಭಾವನೆ ಮೂಡಿಸುವಲ್ಲಿ ಯಶಸ್ವಿಯಾಯಿತು. ಚಳ್ಳಕೆರೆ ವಿಭಾಗದ ಡಿವೈಎಸ್‌ಪಿ ಸತ್ಯನಾರಾಯಣ ರಾವ್ ಅವರ ನೇತೃತ್ವದಲ್ಲಿ ನಡೆದ ಈ ಪಥಸಂಚಲನದಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಕೆ. ಕುಮಾರ್, ಪಿಎಸ್‌ಐ ಶಿವರಾಜ್ ಸೇರಿದಂತೆ ಕೆಎಸ್‌ಆರ್‌ಪಿ , ಠಾಣೆಯ ಪೊಲೀಸ್ ಸಿಬ್ಬಂದಿ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಎಲ್ಲರೂ ಅನ್ಯೋನ್ಯತೆಯಿಂದ, ಶಾಂತಿ ಹಾಗೂ ಸೌಹಾರ್ದತೆಯಿಂದ ಈದ್ ಮಿಲಾದ್ ಹಬ್ಬವನ್ನು ಆಚರಿಸಬೇಕು,ಎಂದು ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.1
- ಮುಸ್ಲಿಂ ಭಾಂದವರಿಂದ ಸಂಭ್ರಮದಿಂದ ಈದ್ ಮಿಲಾದ್ ಹಬ್ಬದ ಆಚರಣೆ ಮೊಳಕಾಲ್ಮುರು ಸುದ್ದಿ ತಾಲ್ಲೂಕಿನ ನಾಗಸಮುದ್ರ ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಎಲ್ಲಾ ಸಹೋದರರು ಈದ್ ಮಿಲಾದ್ ಹಬ್ಬವನ್ನು ಬಹಳ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತದೆ. ಇದು ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಹಜರತ್ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಸಂಕೇತವಾಗಿ ಆಚರಿಸುವ ಪವಿತ್ರ ಹಬ್ಬ. ಮುಸ್ಲಿಂ ಭಾಂದವರು ಹೊಸ ಬಟ್ಟೆ ತೊಟ್ಟು ಪ್ರವಾದಿಗಳ ಬಗ್ಗೆ ಘೋಷಣೆ ಕೂಗುತ್ತಾ ಊರಲ್ಲಿ ಮೆರವಣಿಗೆ ಮಾಡುತ್ತಾರೆ. ಈ ದಿನದಂದು ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಮಸೀದಿಗಳನ್ನು, ಮನೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸುತ್ತಾರೆ. ಮೆರವಣಿಗೆಗಳನ್ನು ಏರ್ಪಡಿಸಿ ಪ್ರವಾದಿಯವರ ಜೀವನ, ಅವರ ಸಂದೇಶವಾದ ಶಾಂತಿ, ಸಹೋದರತ್ವ, ಕರುಣೆ, ಸಮಾನತೆಯ ಬಗ್ಗೆ ಉಪನ್ಯಾಸಗಳು ನಡೆಯುತ್ತವೆ. ಖುರಾನ್ ಪಠಣ ಹಾಗೂ ಪ್ರವಾದಿಯವರನ್ನು ಸ್ತುತಿಸುವ ಗೀತೆಗಳು ಹಾಡುತ್ತಾ ಮೆರವಣಿಗೆ ಮಾಡುತ್ತಾರೆ. ಈ ಹಬ್ಬವು ಕೇವಲ ಸಂಭ್ರಮವಲ್ಲ, ಪ್ರವಾದಿಯವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರತಿಜ್ಞೆಯ ದಿನ. ಬಡವರಿಗೆ ದಾನ, ಅನ್ನದಾನ ಮಾಡುವುದು ಈ ದಿನದ ವಿಶೇಷ. ಕರ್ನಾಟಕ ಸೇರಿದಂತೆ ಭಾರತದಾದ್ಯಂತ, ಅದರಲ್ಲೂ ಹೈದರಾಬಾದ್, ಬೆಂಗಳೂರು, ಮೈಸೂರು ಮುಂತಾದ ಕಡೆಗಳಲ್ಲಿ ಈ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ನಸೀರ್ ಅಹಮದ್ ಕೆ ಗ್ರಾಮ ಪಂಚಾಯತಿ ಮಾಜಿ ಸದಸ್ಯರು, ಎಂ ಆರ್ ಮೆಬೂಬ್ ಸಾಬ್, ಖಾಜಾ ಹುಸೇನ್, ಇಬ್ರಮ್ ಶಬ್ಬೀರ್ ಟಿ ಜಿಲಾನ್ ಭಾಷ, ಬೇಕರಿ ಭಾಷಾ, ಅಬ್ದುಲ್ ರಝಕ್, ಗುಲಾಮ್ ಮುಹಮ್ಮದ್, ಶಬ್ಬೀರ್ ಅಹಮದ್, ಮುಂತಾಜ್ ಅಹಮದ್, ಆಟೋ ನೂರ್ ಫಾರೂಕ್, ಇಸಾಕ್ ಅಹಮದ್ ಪೊಲೀಸ್ ಅನ್ವರ್ ಭಾಷ ಹಾಗೂ ಮುಸ್ಲಿಂ ಸಮುದಾಯದ ನಾಗರೀಕರು ಭಾಗವಹಿಸಿದ್ದರು.1
- ಚಿತ್ರದುರ್ಗ ನಗರದಲ್ಲಿಂದು ಮಹಮದ್ ಪೈಗಂಬರ್ ಜನ್ಮದಿನದ ಬೃಹತ್ ಮೆರವಣಿಗೆ ಚಿತ್ರದುರ್ಗ ನಗರದಲ್ಲಿಂದು ಮಹಮದ್ ಪೈಗಂಬರ್ ಜನ್ಮದಿನದ ಹಿನ್ನೆಲೆ 14 ಕಿಮೀಟರ್ ಮೆರವಣಿಗೆ ನಡೆಸಲಾಯಿತು. ಇನ್ನೂ ಬಡಾಮಕಾನ್ ನಿಂದ ಜಾಮೀಯಾ ಮಸೀದಿ ವರೆಗೂ ಮೆರವಣಿಗೆ ನಡೆಸಿದ್ದು ಇಸ್ಲಾಂ ಧರ್ಮದ ಸಂಕೇತಗಳನ್ನು ಮೆರವಣಿಗೆಯಲ್ಲಿ ಪ್ರದರ್ಶನ ಸಾಗಿದೆ. ಇನ್ನೂ ಇಸ್ಲಾಂ ಧರ್ಮಕ್ಕೆ ಜಯವಾಗಲಿ ಎಂದು ಘೋಷಣೆ ಹಾಕಿದ ಯುವಕರು ಹಸಿರು ಜಂಡಾಗಳನ್ನು ಹಿಡಿದು ಘೋಷಣೆ ಹಾಕುತ್ತಾ ಹೊರಟಿದ್ದಾರೆ. ಇನ್ನೂ ಮೆರವಣಿಗೆ ಹಿನ್ನೆಲೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋ ಬಸ್ತ್ ಅನ್ನ ಹಾಕಿದ್ದು ಇಸ್ಲಾಂ ಧರ್ಮದ ಪ್ರವಾದಿ ಮಹಮದ್ ಪೈಗಂಬರ್ ಜನ್ಮದಿನದ ಅಂಗವಾಗಿ, ಚಿತ್ರದುರ್ಗದ ಮುಸ್ಲಿಂ ಸಮುದಾಯವು, ನಗರದ ಬಡಾ ಮಕಾನ್ ನಿಂದ ನಗರದ ಗಲ್ಲಿ ಗಲ್ಲಿಗಳು ಸೇರಿದಂತೆ ಸುಮಾರು 14 ಕೀ ಮೀಟರ್ ದೂರದ ಮೆರವಣಿಗೆ ಆಜಾದ್ ನಗರ, ಉಮರ್ ಸರ್ಕಲ್ ಗೋಪಾಲಪುರ ರಸ್ತೆ, ಎಸ್ಬಿಎಂ ಸರ್ಕಲ್ ಗಾಂಧಿ ಸರ್ಕಲ್, ಪಾದದಗುಡಿ, ಕರುವಿನ ಕಟ್ಟೆ, ಸರ್ಕಲ್ ರಂಗಯ್ಯನ ಬಾಗಿಲು ದೊಡ್ಡ ಪೇಟೆ, ಚೋಳು ಗುಡ್ಡ ನೆಹರು ನಗರದ ಮೂಲಕ ಮೆರವಣಿಗೆಯಲ್ಲಿ ಹಿರಿಯರು ಕಿರಿಯರು ಯುವಕರು ಧರ್ಮದ ಗುರುಗಳು ಹಸಿರು ಝಂಡಾ ಹಿಡಿದು ಧರ್ಮದ ಘೋಷಣೆಗಳನ್ನು ಹಾಕುತ್ತಾ ಸಾಗಿದ್ದಾರೆ1