logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

*ಶರಣರ ಕಾಯಕ ತತ್ವವು ಸಮಾನತೆಯ ಸಮಾಜ ನಿರ್ಮಾಣಕ್ಕೆ ದಾರಿದೀಪ: ಪ್ರಭುಲಿಂಗ ಮಹಾಸ್ವಾಮಿಗಳು* ಸುರಪುರ: ಶರಣರ ಕಾಯಕ ತತ್ವವು ಸಮಾಜದಲ್ಲಿ ಬೇರೂರಿರುವ ಲಿಂಗ ಅಸಮಾನತೆ, ಮೇಲು–ಕೀಳು, ದೊಡ್ಡದು–ಸಣ್ಣದು ಹಾಗೂ ಜಾತಿ ಆಧಾರಿತ ಅಸಮಾನತೆಗಳನ್ನು ಹೋಗಲಾಡಿಸಿ ಸಂಪೂರ್ಣ ಸಮಾನತೆಯನ್ನು ನೆಲೆಗೊಳಿಸುವ ಪ್ರಮುಖ ಅಸ್ತ್ರವಾಗಿತ್ತು. ಇಂದು ನಾವು ಶರಣ ಧರ್ಮದ ಪರಿಪಾಲನೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಶರಣರ ಕಾಯಕ ತತ್ವವನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ ಎಂದು ಶ್ರೀ ನಿಷ್ಠಿ ಕಡ್ಲಪ್ಪನವರ ವಿರಕ್ತಮಠದ ಶ್ರೀ ಮ.ನಿ.ಪ್ರ.ಸ್ವ. ಪ್ರಭುಲಿಂಗ ಮಹಾಸ್ವಾಮಿಗಳು ಹೇಳಿದರು. ಶ್ರೀ ನಿಷ್ಠಿ ಕಡ್ಲಪ್ಪನವರ ವಿರಕ್ತಮಠದಲ್ಲಿ ಜರುಗಿದ ಶ್ರಾವಣ ಶಿವಾನುಭವ ಚಿಂತನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಶರಣರ ಕಾಯಕ ತತ್ವದಲ್ಲಿ ಜಾತಿ, ವರ್ಗ ಹಾಗೂ ಧರ್ಮಗಳ ಆಧಾರದ ಮೇಲಿನ ತಾರತಮ್ಯಕ್ಕೆ ಯಾವುದೇ ಅವಕಾಶವಿಲ್ಲ. ಶ್ರಮಕ್ಕೆ ಗೌರವ, ಆಧ್ಯಾತ್ಮಿಕತೆ, ಧಾರ್ಮಿಕತೆ, ಸಾಮಾಜಿಕ ಸಮಾನತೆ, ಆರ್ಥಿಕ ಸಮಾನತೆ ಹಾಗೂ ದಾಸೋಹದಂತಹ ಮೌಲ್ಯಗಳು ಕಾಯಕ ತತ್ವದಲ್ಲಿ ಅಡಕವಾಗಿವೆ. ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಕಾಯಕದಲ್ಲಿ ತೊಡಗಿಸಿಕೊಂಡು ಸಮಾಜದ ಒಳಿತಿಗೆ ಶ್ರಮಿಸಬೇಕು ಎಂದು ತಿಳಿಸಿದರು. ‘ಕಾಯಕ ತತ್ವದಲ್ಲಿ ಸಮನ್ವಯತೆ’ ಎಂಬ ವಿಷಯದ ಕುರಿತು ಶಿವಾನುಭವ ಚಿಂತನ ನೀಡಿದ ಸಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಭೀಮರೆಡ್ಡಿ ಪೊಲೀಸ್ ಪಾಟೀಲ್ ಮಾತನಾಡಿ, ಕಾಯಕವು ಮನುಷ್ಯನ ಜೀವಾಳವಾಗಿದೆ. ಕಾಯಕ ತತ್ವದಲ್ಲಿ ಲಿಂಗ, ಜಾತಿ ಹಾಗೂ ವರ್ಣಭೇದಗಳಿಗೆ ಯಾವುದೇ ಸ್ಥಾನವಿಲ್ಲ. ಇಲ್ಲಿ ಎಲ್ಲರೂ ಸಮಾನರು. ನಾವು ಮಾಡುವ ಕಾಯಕ ಸಣ್ಣದಾಗಲಿ, ದೊಡ್ಡದಾಗಲಿ ಎಂಬ ಭೇದಭಾವ ಮಾಡದೆ ಅದನ್ನು ಶ್ರದ್ಧೆ, ಪ್ರಾಮಾಣಿಕತೆ ಹಾಗೂ ಸಮರ್ಪಣಾ ಭಾವದಿಂದ ನಿರ್ವಹಿಸಬೇಕು ಎಂದರು. ಶರಣರು, ವಚನಕಾರರು ಹಾಗೂ ದಾರ್ಶನಿಕರು ತಮ್ಮ ಬದುಕಿನಲ್ಲಿ ಕಾಯಕಕ್ಕೆ ಮಹತ್ವ ನೀಡಿ, ತಾವು ಕೈಗೊಂಡ ವೃತ್ತಿಗೆ ನ್ಯಾಯ ಒದಗಿಸುವ ಮೂಲಕ ಸಮಾಜಕ್ಕೆ ಕಾಯಕದ ಮಹತ್ವವನ್ನು ಸಾರಿದರು. ‘ನಾನು ಮಾಡಿದೆ’ ಎಂಬ ಅಹಂಭಾವವನ್ನು ಬಿಟ್ಟು, ಕಾಯಕದ ಫಲವನ್ನು ಸಮಾಜದ ಒಳಿತಿಗಾಗಿ ಬಳಸುವ ಮನೋಭಾವ ಬೆಳೆಸಿಕೊಳ್ಳಬೇಕು. ಕಾಯಕ ಮತ್ತು ದಾಸೋಹದ ಸಮನ್ವಯದಿಂದ ಸಮಾನತೆ ಹಾಗೂ ಸಹಬಾಳ್ವೆಯ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ಬಲ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಬಸವರಾಜ ಜಾಲಹಳ್ಳಿ ಉಪಸ್ಥಿತರಿದ್ದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಚ್.ವೈ. ರಾಠೋಡ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ವೆಂಕಟೇಶ ಪಾಟೀಲ್ ಸ್ವಾಗತಿಸಿದರು. ಜಗದೀಶ್ ಮಾನು ಪ್ರಾರ್ಥನೆ ನೆರವೇರಿಸಿದರು. ಪ್ರಾಣೇಶ ರಾವ್ ಕುಲಕರ್ಣಿ ಹಾಗೂ ಬಸಲಿಂಗಯ್ಯ ಸ್ವಾಮಿ ಕಡ್ಲಪ್ಪನವರ ಮಠ ಅವರು ಮಂಗಳಗೀತೆ ಹಾಡಿದರು. ಶಿವಾನುಭವ ಚಿಂತನದ ಆರಂಭದಲ್ಲಿ ಮೋಹನರಾವ್ ಮಾಳದಕರ್, ಉಮೇಶ್ ಯಾದವ್, ರಮೇಶ್ ಕುಲಕರ್ಣಿ, ಸುರೇಶ್ ಅಂಬುರೆ, ಶರಣಬಸವ ಕೊಂಗಂಡಿ ಸೇರಿದಂತೆ ಹಲವಾರು ಕಲಾವಿದರು ಸಂಗೀತ ಸೇವೆ ಸಲ್ಲಿಸಿದರು. ಮಾನಪ್ಪ ಭಜಂತ್ರಿ ಅವರ ಕೊಳಲು ವಾದನ, ಉಮೇಶ್ ಯಾದವ್ ಅವರ ಹಾರ್ಮೋನಿಯಂ ಹಾಗೂ ರಮೇಶ್ ಕುಲಕರ್ಣಿ ಅವರ ತಬಲಾ ಜುಗಲ್‌ಬಂದಿ ನೆರೆದಿದ್ದವರ ಮನಸೂರೆಗೊಂಡಿತು. ಕಾರ್ಯಕ್ರಮದಲ್ಲಿ ವೀರೇಶ ನಿಷ್ಠಿ ದೇಶಮುಖ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶರಣಬಸಪ್ಪ ಯಾಳವಾರ, ರಸ್ತಾಪುರದ ಬಸವರಾಜಗೌಡ ಬ್ಯಾಲಾಳ್, ಶಿವಕುಮಾರ ಮಸ್ಕಿ, ಸಂಗಮೇಶ ಗುಳಗಿ, ಸುಭಾಷ್ ಹೂಗಾರ್, ಉಪನ್ಯಾಸಕರಾದ ದೇವು ಹೆಬ್ಬಾಳ್, ವಿಜಯಕುಮಾರ ಬಣಗಾರ, ಮಾನಪ್ಪ ಹೂಗಾರ, ಮಹೇಂದ್ರ ಅಂಗಡಿ, ಡಾ. ಶರಣಬಸವ ಹೂಗಾರ, ಬಸವರಾಜ ಗೋಗಿ, ಮಲ್ಲಿಕಾರ್ಜುನ್ ಬೇವಿನಮಟ್ಟಿ ಬಸವಲಿಂಗಯ್ಯ ಸ್ವಾಮಿ, ಶರಣಪ್ಪ ಮಗಲಿ, ಭೀಮಾಶಂಕರ್ ಕಳಿಮನಿ, ಶೇಖರ ಕುಂಬಾರ, ಕೊಟ್ರಯ್ಯ ಸ್ವಾಮಿ ಕೊಟ್ರಯ್ಯ ಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

17 hrs ago
user_ಎಚ್ ಎಮ್ ಹವಾಲ್ದಾರ
ಎಚ್ ಎಮ್ ಹವಾಲ್ದಾರ
Farmer ಶೋರಾಪುರ, ಯಾದಗಿರಿ, ಕರ್ನಾಟಕ•
17 hrs ago
b4a17330-ebcf-40c5-a066-0553dc30ebd4

More news from ಕರ್ನಾಟಕ and nearby areas
  • ಜಯರಾಜ್ ಅಧ್ಯಕ್ಷರು ರಕ್ಷಣಾ ವೇದಿಕೆ ದೇವದುರ್ಗ ನಗರದಲ್ಲಿ ನೂತನ ಲ್ಯಾಂಡ್ರಿ ಶಾಪ್ ಪ್ರಾರಂಭ
    1
    ಜಯರಾಜ್   ಅಧ್ಯಕ್ಷರು ರಕ್ಷಣಾ ವೇದಿಕೆ   ದೇವದುರ್ಗ ನಗರದಲ್ಲಿ ನೂತನ ಲ್ಯಾಂಡ್ರಿ ಶಾಪ್ ಪ್ರಾರಂಭ
    user_Hasan Anjal
    Hasan Anjal
    ದೇವದುರ್ಗ, ರಾಯಚೂರು, ಕರ್ನಾಟಕ•
    15 min ago
  • ಆಗಸ್ಟ್ 27ರಂದು ಬರಗಾಲ ಪ್ರಯುಕ್ತ ಹುಟ್ಟುಹಬ್ಬ ಆಚರಣೆ ಮಾಡದಿರುವುದಾಗಿ ನಿರ್ಧಾರ ಶ್ರೀಮತಿ ಕರೆಮ್ಮ ಜಿ ನಾಯಕ ದೇವದುರ್ಗ ಶಾಸಕರು
    1
    ಆಗಸ್ಟ್ 27ರಂದು ಬರಗಾಲ ಪ್ರಯುಕ್ತ ಹುಟ್ಟುಹಬ್ಬ ಆಚರಣೆ ಮಾಡದಿರುವುದಾಗಿ ನಿರ್ಧಾರ ಶ್ರೀಮತಿ ಕರೆಮ್ಮ ಜಿ ನಾಯಕ ದೇವದುರ್ಗ ಶಾಸಕರು
    user_ನಾಗರಾಜ ವಾರದ
    ನಾಗರಾಜ ವಾರದ
    Newsagent ದೇವದುರ್ಗ, ರಾಯಚೂರು, ಕರ್ನಾಟಕ•
    1 hr ago
  • ಸಿರವಾರ ಪಟ್ಟಣದಲ್ಲಿ ಈದ್ ಮಿಲಾದ್ ಹಬ್ಬ ಅದ್ಧೂರಿ ಆಚರಣೆ. ಗಮನ ಸೆಳೆದ ಡಿಜೆ, ಸ್ತಬ್ಧಚಿತ್ರ ಬೃಹತ್ ಮೆರವಣಿಗೆ. ಸಿರವಾರ ಪಟ್ಟಣದಲ್ಲಿ ಈದ್ ಮಿಲಾದ್ ಹಬ್ಬ ಅದ್ಧೂರಿ ಆಚರಣೆ. ಗಮನ ಸೆಳೆದ ಡಿಜೆ, ಸ್ತಬ್ಧಚಿತ್ರ ಬೃಹತ್ ಮೆರವಣಿಗೆ. ಸಿರವಾರ: ಪಟ್ಟಣದಲ್ಲಿಂದು ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಸಮುದಾಯದವರು ಸಡಗರ ಸಂಭ್ರಮದಿಂದ ಆಚರಿಸಿದರು. ಹಬ್ಬದ ಪ್ರಯುಕ್ತ ಪಟ್ಟಣದ ನೂರಾನಿ ಮಸೀದ್ ಯಿಂದ ಆರಂಭಗೊಂಡ ಮೆಕ್ಕಾ, ಮದೀನಗಳ ಸ್ತಬ್ಧಚಿತ್ರಗಳ ಬೃಹತ್ ಮೆರವಣಿಗೆಯು ಬಸವೇಶ್ವರ ವೃತ್ತ, ಬಸ್ ನಿಲ್ದಾಣ ತಲುಪಿ ನಂತರ ಪುನಃ ನೂರಾನಿ ಮಸೀದಿ ತಲುಪಿತು. ಇದೇ ವೇಳೆ ವಿಶೇಷ ಭೋಜನಕೂಟ ಏರ್ಪಡಿಸಿ ಸಡಗರ ಸಂಭ್ರಮದೊಂದಿಗೆ ಈದ್ ಮಿಲಾದ್ ಹಬ್ಬ ಆಚರಿದರು. ಅದ್ಧೂರಿ ಮೆರವಣಿಗೆ: ಇದೇ ವೇಳೆ ಡಿಜೆ ಮೆರವಣಿಗೆಯೊಂದಿಗೆ ಸ್ತಬ್ಧ ಚಿತ್ರಗಳ ಅದ್ಧೂರಿ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಹಿರಿಯರು, ಯುವಕರು ಇದ್ದರು.
    4
    ಸಿರವಾರ ಪಟ್ಟಣದಲ್ಲಿ ಈದ್ ಮಿಲಾದ್ ಹಬ್ಬ ಅದ್ಧೂರಿ ಆಚರಣೆ. 

ಗಮನ ಸೆಳೆದ ಡಿಜೆ, ಸ್ತಬ್ಧಚಿತ್ರ ಬೃಹತ್ ಮೆರವಣಿಗೆ.
ಸಿರವಾರ ಪಟ್ಟಣದಲ್ಲಿ ಈದ್ ಮಿಲಾದ್ ಹಬ್ಬ ಅದ್ಧೂರಿ ಆಚರಣೆ. 
ಗಮನ ಸೆಳೆದ ಡಿಜೆ, ಸ್ತಬ್ಧಚಿತ್ರ ಬೃಹತ್ ಮೆರವಣಿಗೆ.
ಸಿರವಾರ: ಪಟ್ಟಣದಲ್ಲಿಂದು ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಸಮುದಾಯದವರು ಸಡಗರ ಸಂಭ್ರಮದಿಂದ ಆಚರಿಸಿದರು.
ಹಬ್ಬದ ಪ್ರಯುಕ್ತ ಪಟ್ಟಣದ ನೂರಾನಿ ಮಸೀದ್ ಯಿಂದ ಆರಂಭಗೊಂಡ ಮೆಕ್ಕಾ, ಮದೀನಗಳ ಸ್ತಬ್ಧಚಿತ್ರಗಳ ಬೃಹತ್ ಮೆರವಣಿಗೆಯು ಬಸವೇಶ್ವರ ವೃತ್ತ, ಬಸ್ ನಿಲ್ದಾಣ ತಲುಪಿ ನಂತರ  ಪುನಃ ನೂರಾನಿ ಮಸೀದಿ ತಲುಪಿತು.
ಇದೇ ವೇಳೆ ವಿಶೇಷ ಭೋಜನಕೂಟ ಏರ್ಪಡಿಸಿ ಸಡಗರ ಸಂಭ್ರಮದೊಂದಿಗೆ ಈದ್ ಮಿಲಾದ್ ಹಬ್ಬ ಆಚರಿದರು.
ಅದ್ಧೂರಿ ಮೆರವಣಿಗೆ: ಇದೇ ವೇಳೆ ಡಿಜೆ ಮೆರವಣಿಗೆಯೊಂದಿಗೆ ಸ್ತಬ್ಧ ಚಿತ್ರಗಳ ಅದ್ಧೂರಿ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಹಿರಿಯರು, ಯುವಕರು ಇದ್ದರು.
    user_Mallikarjun Athnoor
    Mallikarjun Athnoor
    ಸಿರ್ವಾರ, ರಾಯಚೂರು, ಕರ್ನಾಟಕ•
    43 min ago
  • "೨೦೨೭ರ ಒಳಗಡೆ ಪರಿಶಿಷ್ಟ ಪಂಗಡದ ಮಾನ್ಯತೆ ಸಿಗದಿದ್ದರೆ ಹೊಸ ಹೋರಾಟ"- ಉಮೇಶ ಕೆ. ಮುದ್ನಾಳ್ ಕಲ್ಯಾಣ ವಾರ್ತೆ -ಯಾದಗಿರಿ ನಿಜಶರಣ ಅಂಬಿಗರ ಚೌಡಯ್ಯನವರ ಮತ್ತು ಮಾತಾ ಮಾಣಿಕೇಶ್ವರಿ ಭಾವ ಚಿತ್ರಕ್ಕೆ ಶ್ರಾವಣದ ನಿಮಿತ್ತ ಪೂಜಾ ಅಭಿಯಾನ ಕಾರ್ಯಕ್ರಮ ಜರಗಿತು. ಬಹು ಸಂಖ್ಯಾತರಾಗಿದ್ದು ರಾಜ್ಯದಲ್ಲಿ ಹಿಂದುಳಿದಿರುವ ಕೋಲಿ ಸಮಾಜವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಕೂಡಲೇ ೨೦೨೭ರ ಒಳಗಡೆ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ್ ಆಗ್ರಹಿಸಿದರು. ೧೨ನೇ ಮಾಸದಲ್ಲಿ ಶ್ರೇಷ್ಠವಾದ ಮಾಸ ಶ್ರಾವಣ ಮಾಸದ ನಿಮಿತ್ತ ನಿಜಶರಣ ಅಂಬಿಗರ ಚೌಡಯ್ಯ ಮತ್ತು ಮಾತಾ ಮಾಣಿಕೇಶ್ವರಿ ಭಾವ ಚಿತ್ರಕೆ ವಿಶೇಷ ಪೂಜೆ ಕಾರ್ಯಕ್ರಮವು ಮಂಗಳವಾರ ತಾಲೂಕಿನ ಹೆಡಗಿಮದ್ರಿ ಗ್ರಾಮದಲ್ಲಿ ಹಮ್ಮಿಕೊಂಡು ಜಾಗೃತಿ ಕಾರ್ಯಕ್ರಮ ಉದೇಶಿಸಿ ಮಾತನಾಡಿದ ಅವರು, ನಮ್ಮ ಬೇಡಿಕೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈಡೇರಿಸಲು ಒತ್ತಾಯಿಸುವುದೇ ಈ ಅಭಿಯಾನದ ಮೂಲ ಉದ್ದೇಶವಾಗಿದೆ ಎಂದರು. ದೇಶದಲ್ಲಿಯೇ ಕೋಲಿ ಸಮಾಜ ೧೬ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ, ೯ ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡಗಳಲ್ಲಿದ್ದರೂ ಸಹ ಕರ್ನಾಟಕದಲ್ಲಿ ನಮ್ಮ ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕಿದೆ. ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಟ್ಟು ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು. ಕಾರ್ಯಕ್ರಮದಲ್ಲಿ ಸಮಾಜದ ಮರೆಪ್ಪ ಶಿವಪ್ಪ ಪೂಜಾರಿ, ಪವನ ಶಾಣಪ್ಪ,ಬಸವರಾಜ ಪೂಜಾರಿ,ಮಲ್ಲಪ್ಪ,ತಿರುಪತಿ, ದಸ್ತಗೀರ್,ಚಂದಪ್ಪ,ದೇವಪ್ಪ, ಯಲ್ಲಪ್ಪ, ಸಿದ್ದಪ್ಪ,ವಿರೂಪಾಕ್ಷ, ಬಸಪ್ಪ,ಹನುಮಾನ್, ರವಿ, ನಿಂಗಪ್ಪ, ಸಿದ್ದಪ್ಪ,ಶೇಕಪ್ಪ, ರವಿ ರಾಮು,ಮೈಲಾರಿ, ಮರೆಪ್ಪ, ಶಾಣಪ್ಪ,ಸಾಬೂ, ರೇಣುಕಮ್ಮ, ಶಾಣಮ್ಮ,ಮಾರೆಮ್ಮ, ಸುಸಲಮ್ಮ,ಸಿದ್ದಮ್ಮ,ಹಂಪಮ್ಮ, ಹನಮವ್ವ,ಕಮಲಮ್ಮ, ಶಾಂತಮ್ಮ,ಮಹಾದೇವಿ ಮುಂತಾದವರು ಉಪಸ್ಥಿತರಿದ್ದರು. *ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ, ಸೇರ್ಪಡೆಗಾಗಿ ದಿ.ವಿಠ್ಠಲ್ ಹೇರೂರ ಅವರು ಸಾಕಷ್ಟು ಹೋರಾಟ ಮಾಡಿದರು.ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿರ್ಲಕ್ಷದಿಂದ,ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ ೨೦೨೭ರ ಒಳಗೆ ವಿಠ್ಠಲ್ ಹೇರೂರ ಅವರ ಕನಸು, ನನಸಾಗಬೇಕೆಂಬುದು ಕೋಲಿ ಸಮಾಜದ ಆಶಯವಾಗಿದೆ*-" *ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ*
    1
    "೨೦೨೭ರ ಒಳಗಡೆ ಪರಿಶಿಷ್ಟ ಪಂಗಡದ ಮಾನ್ಯತೆ ಸಿಗದಿದ್ದರೆ ಹೊಸ ಹೋರಾಟ"- ಉಮೇಶ ಕೆ. ಮುದ್ನಾಳ್ 

ಕಲ್ಯಾಣ ವಾರ್ತೆ -ಯಾದಗಿರಿ 
ನಿಜಶರಣ ಅಂಬಿಗರ ಚೌಡಯ್ಯನವರ ಮತ್ತು ಮಾತಾ ಮಾಣಿಕೇಶ್ವರಿ ಭಾವ ಚಿತ್ರಕ್ಕೆ ಶ್ರಾವಣದ ನಿಮಿತ್ತ ಪೂಜಾ ಅಭಿಯಾನ ಕಾರ್ಯಕ್ರಮ ಜರಗಿತು. ಬಹು ಸಂಖ್ಯಾತರಾಗಿದ್ದು ರಾಜ್ಯದಲ್ಲಿ ಹಿಂದುಳಿದಿರುವ ಕೋಲಿ ಸಮಾಜವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಕೂಡಲೇ ೨೦೨೭ರ ಒಳಗಡೆ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ್ ಆಗ್ರಹಿಸಿದರು. 
೧೨ನೇ ಮಾಸದಲ್ಲಿ ಶ್ರೇಷ್ಠವಾದ ಮಾಸ ಶ್ರಾವಣ ಮಾಸದ ನಿಮಿತ್ತ ನಿಜಶರಣ ಅಂಬಿಗರ ಚೌಡಯ್ಯ ಮತ್ತು ಮಾತಾ ಮಾಣಿಕೇಶ್ವರಿ ಭಾವ ಚಿತ್ರಕೆ ವಿಶೇಷ ಪೂಜೆ ಕಾರ್ಯಕ್ರಮವು ಮಂಗಳವಾರ ತಾಲೂಕಿನ ಹೆಡಗಿಮದ್ರಿ ಗ್ರಾಮದಲ್ಲಿ ಹಮ್ಮಿಕೊಂಡು ಜಾಗೃತಿ ಕಾರ್ಯಕ್ರಮ ಉದೇಶಿಸಿ ಮಾತನಾಡಿದ ಅವರು, ನಮ್ಮ ಬೇಡಿಕೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈಡೇರಿಸಲು ಒತ್ತಾಯಿಸುವುದೇ ಈ ಅಭಿಯಾನದ ಮೂಲ ಉದ್ದೇಶವಾಗಿದೆ ಎಂದರು. ದೇಶದಲ್ಲಿಯೇ ಕೋಲಿ ಸಮಾಜ ೧೬ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ, ೯ ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡಗಳಲ್ಲಿದ್ದರೂ ಸಹ ಕರ್ನಾಟಕದಲ್ಲಿ ನಮ್ಮ ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕಿದೆ. ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಟ್ಟು ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ ಮರೆಪ್ಪ ಶಿವಪ್ಪ ಪೂಜಾರಿ, ಪವನ ಶಾಣಪ್ಪ,ಬಸವರಾಜ ಪೂಜಾರಿ,ಮಲ್ಲಪ್ಪ,ತಿರುಪತಿ, ದಸ್ತಗೀರ್,ಚಂದಪ್ಪ,ದೇವಪ್ಪ, ಯಲ್ಲಪ್ಪ, ಸಿದ್ದಪ್ಪ,ವಿರೂಪಾಕ್ಷ, ಬಸಪ್ಪ,ಹನುಮಾನ್, ರವಿ, ನಿಂಗಪ್ಪ, ಸಿದ್ದಪ್ಪ,ಶೇಕಪ್ಪ, ರವಿ ರಾಮು,ಮೈಲಾರಿ, ಮರೆಪ್ಪ, ಶಾಣಪ್ಪ,ಸಾಬೂ, ರೇಣುಕಮ್ಮ, ಶಾಣಮ್ಮ,ಮಾರೆಮ್ಮ, ಸುಸಲಮ್ಮ,ಸಿದ್ದಮ್ಮ,ಹಂಪಮ್ಮ, ಹನಮವ್ವ,ಕಮಲಮ್ಮ, ಶಾಂತಮ್ಮ,ಮಹಾದೇವಿ ಮುಂತಾದವರು ಉಪಸ್ಥಿತರಿದ್ದರು.
*ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ, ಸೇರ್ಪಡೆಗಾಗಿ ದಿ.ವಿಠ್ಠಲ್ ಹೇರೂರ ಅವರು ಸಾಕಷ್ಟು ಹೋರಾಟ ಮಾಡಿದರು.ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿರ್ಲಕ್ಷದಿಂದ,ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ 
೨೦೨೭ರ ಒಳಗೆ ವಿಠ್ಠಲ್ ಹೇರೂರ ಅವರ ಕನಸು, ನನಸಾಗಬೇಕೆಂಬುದು  ಕೋಲಿ ಸಮಾಜದ ಆಶಯವಾಗಿದೆ*-"
*ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ*
    user_DR. S.S. NAYAK
    DR. S.S. NAYAK
    Local News Reporter ಯಾದಗಿರಿ, ಯಾದಗಿರಿ, ಕರ್ನಾಟಕ•
    17 hrs ago
  • ವಿಜಯಪುರ ನಗರದಲ್ಲಿ ಮಂಗಳವಾರ ಈದ್ ಮಿಲಾದ ಅಂಗವಾಗಿ ಮುಸ್ಲೀಮ ಭಾಂದವರು ಭವ್ಯ ಮೆರೆವಣಿಗೆ ನಡೆಯತು
    1
    ವಿಜಯಪುರ ನಗರದಲ್ಲಿ ಮಂಗಳವಾರ ಈದ್ ಮಿಲಾದ ಅಂಗವಾಗಿ ಮುಸ್ಲೀಮ ಭಾಂದವರು ಭವ್ಯ ಮೆರೆವಣಿಗೆ ನಡೆಯತು
    user_Sharanugouda Patil
    Sharanugouda Patil
    Muddebihal, Vijayapura•
    4 hrs ago
  • ಸಿಂಧನೂರು ಕ್ಷೇತ್ರದಲ್ಲಿ 43,115 ಮತದಾರರ ಹೆಸರು ಪಟ್ಟಿಯಿಂದ ಡಿಲೀಟ್ ಸಿಂಧನೂರು: ರಾಷ್ಟ್ರೀಯ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನದ ಬಳಿಕ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 43,115 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ತಹಶೀಲ್ದಾರ್ ಹಾಗೂ ಸಹಾಯಕ ಚುನಾವಣಾಧಿಕಾರಿ ಅರುಣ್ ಕುಮಾರ್ ದೇಸಾಯಿ ತಿಳಿಸಿದ್ದಾರೆ. ಮಂಗಳವಾರ ನಗರದ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕ್ಷೇತ್ರದಲ್ಲಿ 2,40,941 ಮತದಾರರಿದ್ದರು. ಪರಿಷ್ಕರಣೆ ವೇಳೆ ಮೃತಪಟ್ಟ 6,778, ಶಾಶ್ವತವಾಗಿ ಸ್ಥಳಾಂತರಗೊಂಡ 31,954, ಗೈರುಹಾಜರಿದ್ದ 1,555 ಹಾಗೂ ಡಬಲ್ ಮತದಾರರಾಗಿದ್ದ 2,805 ಮಂದಿಯ ಹೆಸರುಗಳನ್ನು ತೆಗೆದುಹಾಕಲಾಗಿದೆ. ಇತರ ಕಾರಣಗಳಿಂದ 23 ಮತದಾರರ ಹೆಸರನ್ನೂ ಡಿಲೀಟ್ ಮಾಡಲಾಗಿದೆ. 2025ರ ಮತದಾರರ ಪಟ್ಟಿಗೆ ಹೋಲಿಸಿದರೆ ಒಟ್ಟು 17.90ರಷ್ಟು ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಈ ಪೈಕಿ ನಗರ ವ್ಯಾಪ್ತಿಯಲ್ಲಿ 20,799 ಹಾಗೂ ಗ್ರಾಮೀಣ ಪ್ರದೇಶದಲ್ಲಿ 22,351 ಮತದಾರರ ಹೆಸರುಗಳು ಡಿಲೀಟ್ ಆಗಿವೆ. ಅರ್ಹ ಮತದಾರರ ಹೆಸರು ವಿವಿಧ ಕಾರಣಗಳಿಂದ ಪಟ್ಟಿಯಿಂದ ಕೈಬಿಡಲ್ಪಟ್ಟಿದ್ದರೆ, ನಿಗದಿತ 13 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಸಲ್ಲಿಸಿ ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅವಕಾಶವಿದೆ ಎಂದು ಅವರು ತಿಳಿಸಿದರು. ಈ ಹಿಂದೆ ಕ್ಷೇತ್ರದಲ್ಲಿ 269 ಮತಗಟ್ಟೆಗಳಿದ್ದವು. 1,200ಕ್ಕೂ ಅಧಿಕ ಮತದಾರರಿರುವ ಕಾರಣ ಮಾಡಶಿರವಾರ, ಪಗಡದಿನ್ನಿ ಹಾಗೂ ಬೂದಿಹಾಳ ಗ್ರಾಮಗಳಲ್ಲಿ ಹೆಚ್ಚುವರಿ ಮತಗಟ್ಟೆಗಳನ್ನು ಆರಂಭಿಸಲಾಗಿದೆ. ಸಾರ್ವಜನಿಕರು ವಿ.ಹೆಚ್.ಎ. ಆ್ಯಪ್ ಮೂಲಕ ಮತದಾರರ ಸೇರ್ಪಡೆ ಸೇರಿದಂತೆ ವಿವಿಧ ಪ್ರಕ್ರಿಯೆಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಅರುಣ್ ಕುಮಾರ್ ದೇಸಾಯಿ ಹೇಳಿದರು.
    1
    ಸಿಂಧನೂರು ಕ್ಷೇತ್ರದಲ್ಲಿ 43,115 ಮತದಾರರ ಹೆಸರು ಪಟ್ಟಿಯಿಂದ ಡಿಲೀಟ್
ಸಿಂಧನೂರು: ರಾಷ್ಟ್ರೀಯ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನದ ಬಳಿಕ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 43,115 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ತಹಶೀಲ್ದಾರ್ ಹಾಗೂ ಸಹಾಯಕ ಚುನಾವಣಾಧಿಕಾರಿ ಅರುಣ್ ಕುಮಾರ್ ದೇಸಾಯಿ ತಿಳಿಸಿದ್ದಾರೆ.
ಮಂಗಳವಾರ ನಗರದ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕ್ಷೇತ್ರದಲ್ಲಿ 2,40,941 ಮತದಾರರಿದ್ದರು. ಪರಿಷ್ಕರಣೆ ವೇಳೆ ಮೃತಪಟ್ಟ 6,778, ಶಾಶ್ವತವಾಗಿ ಸ್ಥಳಾಂತರಗೊಂಡ 31,954, ಗೈರುಹಾಜರಿದ್ದ 1,555 ಹಾಗೂ ಡಬಲ್ ಮತದಾರರಾಗಿದ್ದ 2,805 ಮಂದಿಯ ಹೆಸರುಗಳನ್ನು ತೆಗೆದುಹಾಕಲಾಗಿದೆ. ಇತರ ಕಾರಣಗಳಿಂದ 23 ಮತದಾರರ ಹೆಸರನ್ನೂ ಡಿಲೀಟ್ ಮಾಡಲಾಗಿದೆ.
2025ರ ಮತದಾರರ ಪಟ್ಟಿಗೆ ಹೋಲಿಸಿದರೆ ಒಟ್ಟು 17.90ರಷ್ಟು ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಈ ಪೈಕಿ ನಗರ ವ್ಯಾಪ್ತಿಯಲ್ಲಿ 20,799 ಹಾಗೂ ಗ್ರಾಮೀಣ ಪ್ರದೇಶದಲ್ಲಿ 22,351 ಮತದಾರರ ಹೆಸರುಗಳು ಡಿಲೀಟ್ ಆಗಿವೆ.
ಅರ್ಹ ಮತದಾರರ ಹೆಸರು ವಿವಿಧ ಕಾರಣಗಳಿಂದ ಪಟ್ಟಿಯಿಂದ ಕೈಬಿಡಲ್ಪಟ್ಟಿದ್ದರೆ, ನಿಗದಿತ 13 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಸಲ್ಲಿಸಿ ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅವಕಾಶವಿದೆ ಎಂದು ಅವರು ತಿಳಿಸಿದರು.
ಈ ಹಿಂದೆ ಕ್ಷೇತ್ರದಲ್ಲಿ 269 ಮತಗಟ್ಟೆಗಳಿದ್ದವು. 1,200ಕ್ಕೂ ಅಧಿಕ ಮತದಾರರಿರುವ ಕಾರಣ ಮಾಡಶಿರವಾರ, ಪಗಡದಿನ್ನಿ ಹಾಗೂ ಬೂದಿಹಾಳ ಗ್ರಾಮಗಳಲ್ಲಿ ಹೆಚ್ಚುವರಿ ಮತಗಟ್ಟೆಗಳನ್ನು ಆರಂಭಿಸಲಾಗಿದೆ. ಸಾರ್ವಜನಿಕರು ವಿ.ಹೆಚ್.ಎ. ಆ್ಯಪ್ ಮೂಲಕ ಮತದಾರರ ಸೇರ್ಪಡೆ ಸೇರಿದಂತೆ ವಿವಿಧ ಪ್ರಕ್ರಿಯೆಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಅರುಣ್ ಕುಮಾರ್ ದೇಸಾಯಿ ಹೇಳಿದರು.
    user_K2 kannada News
    K2 kannada News
    ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
    19 hrs ago
  • ಅಫಜಲಪುರ: ಹೆದ್ದಾರಿಯ ಮೇಲೆ ನಿಂತು ಬಸ್ಸಿಗಾಗಿ ಕಾಯುತ್ತಿರುವ ಪ್ರಯಾಣಿಕರು: ಬಸ್ ನಿಲ್ದಾಣದ ನಿರ್ಮಾಣಕ್ಕೆ ಗ್ರಾಮಸ್ಥರ ಮನವಿ. ಅಫಜಲಪುರ: ಹೆದ್ದಾರಿಯ ಮೇಲೆ ನಿಂತು ಬಸ್ಸಿಗಾಗಿ ಕಾಯುತ್ತಿರುವ ಪ್ರಯಾಣಿಕರು: ಬಸ್ ನಿಲ್ದಾಣದ ನಿರ್ಮಾಣಕ್ಕೆ ಗ್ರಾಮಸ್ಥರ ಮನವಿ.
    1
    ಅಫಜಲಪುರ: ಹೆದ್ದಾರಿಯ ಮೇಲೆ ನಿಂತು ಬಸ್ಸಿಗಾಗಿ ಕಾಯುತ್ತಿರುವ ಪ್ರಯಾಣಿಕರು: ಬಸ್ ನಿಲ್ದಾಣದ ನಿರ್ಮಾಣಕ್ಕೆ ಗ್ರಾಮಸ್ಥರ ಮನವಿ.
ಅಫಜಲಪುರ: ಹೆದ್ದಾರಿಯ ಮೇಲೆ ನಿಂತು ಬಸ್ಸಿಗಾಗಿ ಕಾಯುತ್ತಿರುವ ಪ್ರಯಾಣಿಕರು: ಬಸ್ ನಿಲ್ದಾಣದ ನಿರ್ಮಾಣಕ್ಕೆ ಗ್ರಾಮಸ್ಥರ ಮನವಿ.
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    5 hrs ago
  • ಕರೆಮ್ಮ ಜಿ ನಾಯಕ್ ಶಾಸಕರು ವಿಧಾನ ಸಭಾ ಕ್ಷೇತ್ರ ಇವರಿಂದ ನಮ್ಮ ಚಾನೆಲ್
    2
    ಕರೆಮ್ಮ ಜಿ ನಾಯಕ್ ಶಾಸಕರು ವಿಧಾನ ಸಭಾ ಕ್ಷೇತ್ರ ಇವರಿಂದ ನಮ್ಮ ಚಾನೆಲ್
    user_Hasan Anjal
    Hasan Anjal
    ದೇವದುರ್ಗ, ರಾಯಚೂರು, ಕರ್ನಾಟಕ•
    57 min ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.