ಬೋಧಕ ವೃತ್ತಿಯ ಜೊತೆಗೆ ಲಾಭದಾಯಕ ಕೃಷಿಯಾಗಿ ಗುಲಾಬಿ ಹೂವು ಬೆಳೆದು ಅಥಿತಿಉಪನ್ಯಾಸಕ.. ಬೋಧಕ ವೃತ್ತಿಯ ಜೊತೆಗೆ ಲಾಭದಾಯಕ ಕೃಷಿಯಾಗಿ ಗುಲಾಬಿ ಹೂವು ಬೆಳೆದು ಅಥಿತಿಉಪನ್ಯಾಸಕ ಶಿವರಾಜ್. ಚಳ್ಳಕೆರೆ: ಅಲ್ಪ ವೇತನ ಮತ್ತು ಅನಿಶ್ಚಿತತೆ, ಸೇವಾ ಭದ್ರತೆಯ ಕೊರತೆ, ವೇತನದಲ್ಲಿ ವಿಳಂಬ, ಕೆಲಸದ ಒತ್ತಡ, ಈ ಎಲ್ಲಾ ಸಮಸ್ಯೆಗಳ ನಡುವೆ ಸಿಲುಕಿ ಸಂಕಷ್ಟದಲ್ಲಿರುವ ಅತಿಥಿ ಉಪನ್ಯಾಸರಿಗೆ ಮಾದರಿಯಾಗುವ ರೀತಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಲ್ಲೂರಹಳ್ಳಿ ಗ್ರಾಮದ ಶಿವರಾಜ್ ಸಿ ಬೋಧಕ ವೃತ್ತಿಯ ಜೊತೆಗೆ ಲಾಭದಾಯಕ ಕೃಷಿಯಾಗಿ ಗುಲಾಬಿ ಹೂವು ಬೆಳೆದು ತಿಂಗಳಿಗೆ 30 ರಿಂದ 40 ಸಾವಿರ ರೂಪಾಯಿ ಲಾಭ ಗಳಿಸುತ್ತಿದ್ದಾರೆ. ಸುಮಾರು 7 ವರ್ಷದಿಂದ ಶಿವರಾಜ್ ಸಿ ಬೆಳಗೆರೆಯ ಬಿ.ಸೀತಾರಾಮ ಶಾಸ್ತ್ರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಷಯದ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಪನ್ಯಾಸಕ ವೃತ್ತಿಯಲ್ಲಿ ಬರುವ ಕಡಿಮೆ ಸಂಬಳದಿಂದ ಮನೆ ನಡೆಸಲು ಆಗದೆ ಹಲವು ಬಾರಿ ಸಂಕಷ್ಟಕ್ಕೆ ಸಿಲುಕಿದ್ದ ಶಿವರಾಜ್, ಕೊನೆಗೆ ಇದನ್ನೇ ನಂಬಿ ಕೂತರೆ ಏನು ಆಗದು ಎಂದು ಅರಿತು ಒಂದು ವರ್ಷದ ಹಿಂದೆ ಕೃಷಿಯಲ್ಲಿ ನಿರತರಾಗಿ ಯಶಸ್ಸು ಕಂಡಿದ್ದಾರೆ. ತಮಿಳುನಾಡಿನಿಂದ 18 ರೂಪಾಯಿಗೆ ಒಂದರಂತೆ 1,500 ಮಿರಾಬಲ್ ತಳಿಯ ಗುಲಾಬಿ ಸಸಿಗಳನ್ನು ತರಿಸಿ ತಮ್ಮ ಅರ್ಧ ಎಕರೆ ಜಮೀನಿನಲ್ಲಿ ಸಾಲಿನಿಂದ ಸಾಲಿಗೆ 7 ಅಡಿ, ಸಸಿಯಿಂದ ಸಸಿಗೆ 3 ಹಂತರದಲ್ಲಿ ನಾಟಿ ಮಾಡಿದ್ದಾರೆ. ಮೊದಲು ಭೂಮಿ ಹದಮಾಡುವುದು, ಬೆಡ್ ಹೊಡೆಸುವುದು, ಡ್ರಿಪ್ ಹಾಕಿಸುವುದು, ಪೈಪ್ ಲೈನ್ ಸೇರಿ ಎಲ್ಲ ಸಿದ್ಧತೆ ಮಾಡಲು 1,00000 ಖರ್ಚು ಮಾಡಿದ್ದು, ಈಗ ಸಸಿ ನಾಟಿ ಮಾಡಿ 1 ವರ್ಷ 3 ತಿಂಗಳಾಗಿದ್ದು ಪ್ರತಿನಿತ್ಯ ಸುಮಾರು 40 ಕೆಜಿ ಗುಲಾಬಿ ಹೂವು ಸಿಗುತ್ತದೆ. ಹಬ್ಬದ ಸಮಯದಲ್ಲಿ ಹೂವಿನ ಬೆಲೆ ಹೆಚ್ಚಾಗುತ್ತದೆ ಹಬ್ಬ ಮುಗಿದ ಮೇಲೆ ಬೆಲೆಯಲ್ಲಿ ಏರಿಳಿತ ಆಗೋದು ಸಹಜ. ಆದರೂ ಒಂದೇ ವರ್ಷದಲ್ಲಿ 30.ಸಾವಿರದಿಂದ 40 ಸಾವಿದವರೆಗೆ ಲಾಭ ಗಳಿಸಿದ್ದಾರೆ. ಅಥಿತಿ ಉಪನ್ಯಾಸಕ ಶಿವರಾಜ್ ಮಾತನಾಡಿ.ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮಕ್ಕಳಿಗೆ ಪಾಠ ಮಾಡುತ್ತೇನೆ. ಮಧ್ಯಾಹ್ನ ಕಾಲೇಜಿನಿಂದ ಬಂದ ಕೂಡಲೇ ಸಂಜೆವರೆಗೆ ಹೊಲದಲ್ಲಿ ಕೆಲಸ ಮಾಡುತ್ತೇನೆ. ಒಂದು ವರ್ಷದಿಂದ ಕೃಷಿಯಲ್ಲಿ ತೊಡಗಿದ್ದು ಒಂದಷ್ಟು ಆರ್ಥಿಕವಾಗಿ ಸಧೃಡ ಆಗಲು ಕೃಷಿಯೇ ಸಹಕಾರಿಯಾಗಿದೆ. ಕೃಷಿಯಲ್ಲಿ ಖುಷಿಯಾಗಿದ್ದೇನೆ ಎಂದು ಶಿವರಾಜ್ ಹೇಳುತ್ತಾರೆ...

- ಒಳ ಮೀಸಲಾತಿ ಅನ್ಯಾಯದ ಬಗ್ಗೆ ನ್ಯಾಯಾ ಕೇಳಿದ ಬಂಜಾರ ಸಮಾಜದ 30 ಜನ ಬಂಜಾರ ಮಾಲಾಧಾರಿಗಳ ಮೇಲೆ ದಾವಣಗೆರೆ ಜಿಲ್ಲೆ ನ್ಯಾಮತಿ ಠಾಣೆಯಲ್ಲಿ ದಾಖಲಿಸಿದ ಎಫ್ ಐಆರ್ ರದ್ದುಪಡಿಸಬೇಕು.ಸರ್ಕಾರ ಕ್ಷಮೆ ಕೇಳಬೇಕು,ಇಲ್ಲವೆ ರಾಜ್ಯದಾದ್ಯಂತ ಆಂದೋಲನ ಮಾಡಲಾವುದೆಂದು ಬಂಜಾರ ಗುರುಪೀಠದ ಶ್ರೀ ಸೇವಲಾಲ್ ಸ್ವಾಮೀಜಿ ಎಚ್ಚರಿಕೆ ನೀಡಿದರು.1
- ತ್ರದುರ್ಗ: ಭಕ್ತಿ ನಂಬಿಕೆ ಆಧಾರಿಸಿದೆ. ಭಗವಂತನ ದರ್ಶನದ ಸಾಧನ ಭಕ್ತಿ. ಈ ಭಕ್ತಿಯಲ್ಲಿ ಶಕ್ತಿ ಅಡಗಿದೆ ಎಂದು ಆಂಧ್ರಪ್ರದೇಶದ ಉರುವಕೊಂಡ ಜಗದ್ಗುರು ಡಾ ಕರಿಬಸವೇಶ್ವರಾಜೇಂದ್ರ ಸ್ವಾಮೀಜಿಲ ಅಭಿಪ್ರಾಯಪಟ್ಟರು.. ಚಿತ್ರದುರ್ಗ ತಾಲ್ಲೂಕಿನ ಬೆಳಗಟ್ಟದಲ್ಲಿ ಗುರುವಾರ ನಡೆದ ಶ್ರೀಗುರುಕರಿಬಸವೇಶ್ವರಜ್ಜಯ್ಯಸ್ವಾಮಿಯ 25ನೇ ವರ್ಷದ ಮಹಾರಥೋತ್ಸವದ ಸಾನಿಧ್ಯ ವಹಿಸಿ ಮಾತನಾಡಿದರು.. ಕಬೀರಾನಂದ ಆಶ್ರಮದ ಶಿವಾಲಿಂಗಾನಂದ ಸ್ವಾಮೀಜಿ ಮಾತನಾಡಿ, ಮಹಾ ಭಕ್ತೆ ಮಹದೇವಮ್ಮ ಅವರು ಆಧ್ಯಾತ್ಮ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿರುವ ಸಾಧಕರು. ವ್ಯಕ್ತಿ ಮತ್ತು ಸಮಾಜದ ಸುಧಾರಣೆಗೆ ಸಂಪೂರ್ಣ ಸಮರ್ಪಿಸಿಕೊಂಡವರು. ಮಹದೇವಮ್ಮ ಬದುಕು ಆದರ್ಶ ಎಂದರು. ಚಳ್ಳಕೆರೆ ಶಾಸಕರು ಹಾಗೂ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ. ರಘುಮೂರ್ತಿ ಅವರು ಮಹದೇವಮ್ಮ ಅವರ ಸಾಧನೆಯ ಮಹತ್ವ ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀಗುರುಕರಿಬಸವೇಶ್ವರಜ್ಜಯ್ಯಸ್ವಾಮಿ ಮಠದ ಪೀಠಾಧ್ಯಕ್ಷರಾದ ಮಹದೇವಮ ಅಧ್ಯಕ್ಷತೆ ವಹಿಸಿದ್ದರು. ಡಾ ಪುರುಷೋತ್ತಮ ಪ್ರಾರ್ಥನೆ ಸಲ್ಲಿಸಿದರು. ಟಿ. ನಾಗೇಶ್ ಸ್ವಾಗತಿಸಿದರು. ಸೋಮೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ನಾಗೇಂದ್ರ ಆಚಾರ್ಯ, ಯುಗಧರ್ಮ ರಾಮಣ್ಣ ಇದ್ದರು.1
- 19/02/2026 ಹಿರಿಯೂರು: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಮಾರಿ ಕಣಿವೆ ಡ್ಯಾಮ್ ಸರ್ಕಲ್ ನಲ್ಲಿ ಇಂದು ಮಧ್ಯಾಹ್ನ ಸಾರ್ವಜನಿಕರು ಬೆಚ್ಚಿಬೀಳುವಂತಹ ಘಟನೆಯೊಂದು ಸಂಭವಿಸಿದೆ. ಮಚ್ಚು ಹಿಡಿದು ರಸ್ತೆಗಿಳಿದ ಪುಡಿ ರೌಡಿಯೊಬ್ಬ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾನೆ. ಇಂದು ಮಧ್ಯಾಹ್ನ ಸುಮಾರು 01:30 ಗಂಟೆಯ ವೇಳೆಗೆ ಮಾರಿ ಕಣಿವೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿಯೊಬ್ಬ ಕೈಯಲ್ಲಿ ಮಚ್ಚು ಹಿಡಿದು ಅಬ್ಬರಿಸುತ್ತಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸ್ ಕಾನ್ಸ್‌ಟೇಬಲ್ ಅವರಿಗೇ ಮಚ್ಚು ತೋರಿಸಿ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೆ, ಅಲ್ಲಿದ್ದ ಬೈಕ್‌ಗೆ ಮಚ್ಚಿನಿಂದ ಸೀಟ್ ಕಡಿದು ಜಖಂ ಮಾಡಿದ್ದಾನೆ. ಇಂತಹ ಕಿಡಿಗೇಡಿಗಳ ಪುಂಡಾಟಿಕೆಯಿಂದಾಗಿ ಸಾಮಾನ್ಯ ಜನರು ರಸ್ತೆಗಿಳಿಯಲು ಭಯಪಡುವಂತಾಗಿದೆ, ಹಿರಿಯೂರು ಭಾಗದಲ್ಲಿ ಇತ್ತೀಚೆಗೆ ಪುಡಿ ರೌಡಿಗಳ ಹಾವಳಿ ಹೆಚ್ಚಾಗುತ್ತಿದ್ದು, ಪೊಲೀಸ್ ಇಲಾಖೆ ತಕ್ಷಣ ಕ್ರಮಕೈಗೊಳ್ಳಬೇಕು . ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆಮಾಡಿ , ಆರೋಪಿಯನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಬಂದೋಬಸ್ತ್ ಮಾಡಬೇಕು ಎಂಬುದು ಸಾರ್ವಜನಿಕರ ಮತ್ತು ಪವರ್ ಫೋಕಸ್ ನ್ಯೂಸ್‌ನ ಆಶಯವಾಗಿದೆ. ವರದಿ: ಸುದ್ದಿ ವಿಭಾಗ, ಪವರ್ ಫೋಕಸ್ ನ್ಯೂಸ್.1
- ದಾವಣಗೆರೆ : ನಗರ ದೇವತೆ ದುಗ್ಗಮ್ಮ ಜಾತ್ರೆ ಫೆ22 ರಂದು ನಡೆಯಲಿದ್ದು, ರೌಡಿಶೀಟರ್ ಗಳಿಗೆ ಎಸ್ಪಿ ತೆಕ್ಕಣನವರ್ ಎಚ್ಚರಿಕೆ ನೀಡಿದರು. ದುಗ್ಗಮ್ಮ ದೇವಸ್ಥಾನ ಹಳೆ ಭಾಗದಲ್ಲಿ ಇದ್ದು, ಈ ಭಾಗದಲ್ಲಿಯೇ ಕೆಲ ದಿನಗಳ ಹಿಂದೆ ಕೈ ಮುಖಂಡ ಅಯ್ಯೂಬ್ ಪೈಲ್ವಾನ್ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿತ್ತು. ಅಲ್ಲದೇ ಆಜಾದ್ ನಗರ ಭಾಗದಲ್ಲಿ ಗಣಪತಿ ವಿಸರ್ಜನೆ ವೇಳೆ ಘರ್ಷಣೆ ನಡೆದಿತ್ತು..ಈ ಎಲ್ಲ ಕಾರಣಗಳಿಂದ ರೌಡಿ ಶೀಟರ್ ಮನೆಗಳಿಗೆ ಡಿಎಸ್ಪಿ ಹಾಗೂ ಸಿಪಿಐ ಉಮೇಶ್ ಸೇರಿದಂತೆ ಇತರ ಸಿಬ್ಬಂದಿಗಳು ಭೇಟಿ ನೀಡಿ ಎಚ್ಚರಿಕೆ ನೀಡಿದರು.4
- ಶಿವಮೊಗ್ಗ (ಭದ್ರಾವತಿ): ಹಿರಿಯ ಕಾರ್ಮಿಕ ಮುಖಂಡ, ಹೋರಾಟಗಾರ ಕಾಮ್ರೇಡ್ ಡಿ.ಸಿ ಮಾಯಣ್ಣನವರ ಹೆಸರನ್ನು ನಗರದಲ್ಲಿ ಯಾವುದಾದರೂ ಒಂದು ವೃತ್ತಕ್ಕೆ ಒಂದು ತಿಂಗಳಲ್ಲಿ ನಗರಸಭೆ ವತಿಯಿಂದ ನಾಮಕರಣಗೊಳಿಸಲಾಗುವುದು ಎಂದು ನಗರಸಭಾ ಸದಸ್ಯ ಬಿ.ಕೆ ಮೋಹನ್ ಹೇಳಿದರು. ಪ್ರಗತಿಪರ ಸಂಘಟನೆಗಳ ಒಕ್ಕೂಟ ವತಿಯಿಂದ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪ ದಲ್ಲಿ ಆಯೋಜಿಸಲಾಗಿದ್ದ ಈಚೆಗೆ ನಿಧನ ರಾದ ಕಾಮ್ರೇಡ್ ಡಿ.ಸಿ ಮಾಯಣ್ಣ ರವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಗತಿಪರ ಒಕ್ಕೂಟದ ಬೇಡಿಕೆಯಂತೆ, ಕ್ಷೇತ್ರದ ಪ್ರತಿಯೊಬ್ಬರ ಆಶಯದಂತೆ ನಗರದ ಯಾವುದಾದರೂ ಒಂದು ರಸ್ತೆ ಅಥವಾ ವೃತ್ತಕ್ಕೆ ಡಿ.ಸಿ ಮಾಯಣ್ಣನವರ ಹೆಸರು ನಾಮಕರಣಗೊಳಿಸಲಾಗುವುದು. ಒಂದು ತಿಂಗಳಲ್ಲಿ ಆದೇಶ ಪ್ರತಿ ನೀಡಲಾಗುವುದು. ಈ ಸಂಬಂಧ ಕಾರ್ಯಕ್ರಮ ಆಯೋಜಿಸಿ ಪ್ರಾಮಾಣಿಕವಾಗಿ ಅವರ ಹೆಸರನ್ನು ಶಾಶ್ವತ ವಾಗಿ ಉಳಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ಸಿಗುವಂತೆ ನಾವೆಲ್ಲರೂ ಕೈಜೋಡಿಸಿ ಕೆಲಸ ಮಾಡಬೇಕಾಗಿದೆ ಎಂದರು. ನಗರದಲ್ಲಿ ಆಶ್ರಯ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಮನೆಗಳಿಗೆ ಇನ್ನೂ ಬಹುತೇಕ ಮಂದಿ ಅರ್ಜಿ ಹಾಕಿಲ್ಲ. ಮನೆ ಇಲ್ಲದವರು ತಕ್ಷಣ ಅರ್ಜಿ ಹಾಕುವ ಮೂಲಕ ಸರ್ಕಾರ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಆಶ್ರಯ ಬಡಾವಣೆಗೆ ಡಿ.ಸಿ.ಮಾಯಣ್ಣನವರ ಹೆಸರನ್ನು ನಾಮಕರಣಗೊಳಿಸುವ ವಿಚಾರವನ್ನು ಎಲ್ಲರೂ ಸೇರಿ ಮತ್ತೊಮ್ಮೆ ಚರ್ಚಿಸಿ ತೀರ್ಮಾನಿಸಿ. ಒಂದು ವೇಳೆ ಸಾಧ್ಯವಾದರೆ ಬಡಾವಣೆಗೂ ಅವರ ಹೆಸರನ್ನು ನಾಮಕರಣಗೊಳಿಸಲಾಗುವುದು ಎಂದರು. ಇಂದಿನ ಯುವ ಪೀಳಿಗೆಗೆ ಡಿ.ಸಿ ಮಾಯಣ್ಣ ನವರ ಇತಿಹಾಸ ತಿಳಿದಿಲ್ಲ. ಈ ಹಿನ್ನಲೆಯಲ್ಲಿ ಕ್ಷೇತ್ರ ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಮಕ್ಕಳಿಗೆ ಡಿ.ಸಿ ಮಾಯಣ್ಣನವರ ಕುರಿತ ಇತಿಹಾಸ ತಿಳಿಸುವ ಮೂಲಕ ಅವರ ಆದರ್ಶತನ ನಾವೆಲ್ಲರೂ ಮೈಗೂಡಿಸಿ ಕೊಳ್ಳಬೇಕೆಂದರು. ಕಾರ್ಯಕ್ರಮದ ಆರಂಭದಲ್ಲಿ ಶಾಸಕ ಬಿ.ಕೆ. ಸಂಗಮೇಶ್ವರ್ ಕಾಮ್ರೇಡ್ ಡಿ.ಸಿ ಮಾಯಣ್ಣ ನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರ ಬದುಕು, ಹೋರಾಟ, ಆದರ್ಶತನ ಸ್ಮರಿಸಿದರು. ಒಕ್ಕೂಟದ ಅಧ್ಯಕ್ಷ ಪ್ರೊ.ಎಂ. ಚಂದ್ರಶೇಖರಯ್ಯ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರಮುಖರಾದ ಸತ್ಯ ಭದ್ರಾವತಿ, ಕೆ.ಎಲ್ ಅಶೋಕ್, ಶಿವಬಸಪ್ಪ, ಬಿ.ಕೆ.ಜಗನ್ನಾಥ್, ಬಸವರಾಜ ಬಿ. ಆನೇಕೊಪ್ಪ, ಸಾಗರ ಕಾರ್ವಾಕರ್ ರಾಘವೇಂದ್ರ, ಸುರೇಶ್, ಚಿನ್ನಯ್ಯ, ಜಿ. ರಾಜು, ಎಚ್. ರವಿಕುಮಾರ್, ವಿ. ವಿನೋದ್, ರಾಜೇಂದ್ರ, ದೊರೈ, ಯಲ್ಲೋಜಿರಾವ್, ಡಿ. ರಾಜು, ಹನುಮಕ್ಕ, ಎಸ್.ಕೆ ಸುಧೀಂದ್ರ, ಮೂರ್ತಿ, ಧರ್ಮರಾಜ್, ಕಾಣಿಕ್‌ರಾಜ್, ಸುಕನ್ಯ, ಉಮಾ, ತೀರ್ಥೇಶ್, ನಾರಾಯಣ, ಕುಮಾರಸ್ವಾಮಿ, ಐಸಾಕ್ ಇನ್ನಿತರರು ಉಪಸ್ಥಿತರಿದ್ದರು.1
- ಧಾರವಾಡದ ಕೇಂದ್ರ ಕಾರಾಗೃಹದಲ್ಲಿ 10, 12ನೇ ತರಗತಿ ಫೇಲಾದ ಕೈದಿಗಳಿದ್ದಾರೆ. ಅವರಿಗೆ ಓದಲು ಅವಕಾಶ ಕಲ್ಪಿಸುವ ಉದ್ದೇಶ ಇದೆ. ಕೆಲವರು ಐದನೇ ತರಗತಿ ಓದಿದವರೂ ಇದ್ದಾರೆ. ಇವರಿಗೆ ಒಳ್ಳೆಯ ಯೋಚನೆಗಳು ಬರಲಿ ಎಂಬ ಉದ್ದೇಶದಿಂದ ಈ ಚಿಂತನೆ ನಡೆಸಿದ್ದೇವೆ ಎಂದು ಕಾರಾಗೃಹ ಸುಧಾರಣಾ ಡಿಜಿಪಿ ಅಲೋಕ್‌ಕುಮಾರ್ ಹೇಳಿದರು. ಧಾರವಾಡ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಕಾರಾಗೃಹದಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ಜೈಲು ತಪಾಸಣೆಗೆ ಬಂದಿಲ್ಲ. ಕೇವಲ ಭೇಟಿಗಾಗಿ ಬಂದಿದ್ದೇನೆ. ಇಲ್ಲಿ ಯಾವೆಲ್ಲ ಸಮಸ್ಯೆಗಳಿವೆ ಎಂಬುದನ್ನು ಪರಿಶೀಲನೆ ಮಾಡಲು ಬಂದಿದ್ದೇನೆ. ಇಲ್ಲಿನ ಕೈದಿಗಳು ಅಂತಹ ದೊಡ್ಡ ಸಮಸ್ಯೆಗಳನ್ನೇನೂ ಹೇಳಿಲ್ಲ. ಆದರೆ, ಇಲ್ಲಿ ವೈದ್ಯರ ಸಮಸ್ಯೆ ಇದೆ. ಇಲ್ಲಿ ಕಾಯಂ ವೈದ್ಯರಿಲ್ಲ. ಕಳೆದ ತಿಂಗಳಷ್ಟೇ ಇಲ್ಲಿ ಓರ್ವ ಕೈದಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾರಾಗೃಹದಲ್ಲಿ ಕೈದಿಗಳಿಗೆ ಮಾನಸಿಕ ಒತ್ತಡ ಹೆಚ್ಚಾಗಿ ಇರುತ್ತದೆ. ಅದನ್ನು ಕಡಿಮೆ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದರು. ಇಲ್ಲಿ ಓದಲು ಇಚ್ಛಿಸುವ ಕೈದಿಗಳಿಗೆ ಓದುವ ವ್ಯವಸ್ಥೆ ಕಲ್ಪಿಸುವ ಚಿಂತನೆ ನಡೆದಿದೆ. ಮಾದಕ ವಸ್ತು ಮತ್ತು ಮೊಬೈಲ್ ಹಾವಳಿ ಕಾರಾಗೃಹದಲ್ಲಿ ಜೋರಾಗಿರುತ್ತದೆ. ಇದನ್ನು ತಪ್ಪಿಸುವ ಉದ್ದೇಶ ಮತ್ತು ಪ್ರಯತ್ನ ನಮ್ಮದಾಗಿದೆ. ಹೊಸದಾಗಿ ಕಾರಾಗೃಹಕ್ಕೆ ಬರುವ ಕೈದಿಗಳ ನಾರ್ಕೋಟಿಕ್ ಟೆಸ್ಟ್ ಕೂಡ ಮಾಡುತ್ತಿದ್ದೇವೆ. ಜೈಲಿನ ಒಳಗಡೆ ಇರುವ ಕೈದಿಗಳನ್ನೂ ತಪಾಸಣೆ ಮಾಡುತ್ತಿದ್ದೇವೆ. ಮೊದಲ ಬಾರಿ ಅಪರಾಧ ಮಾಡಿದ ಕೈದಿಗಳಿಗಾಗಿ ಪ್ರತ್ಯೇಕ ಸೆಲ್ ಮಾಡಿದ್ದೇವೆ. ಇಲ್ಲಿ ಜಾಮರ್ ವ್ಯವಸ್ಥೆ ಇದೆ. ಆದರೆ, ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂಬ ದೂರು ಸಹ ಕೇಳಿ ಬಂದಿವೆ. ಆ ಸಮಸ್ಯೆ ಆಗದಂತೆ ಪ್ರಯತ್ನ ಮಾಡುತ್ತೇವೆ ಎಂದರು. ಈ ಕಾರಾಗೃಹ ಶಹರದ ಮಧ್ಯೆ ಭಾಗದಲ್ಲೇ ಇರುವುದರಿಂದ ಜಾಮರ್ ಸಮಸ್ಯೆ ಆಗುತ್ತಿದೆ. ಈ ಸಮಸ್ಯೆ ಕಡಿಮೆ ಮಾಡಲು ನಾವು ಪ್ರಯತ್ನಿಸುತ್ತೇವೆ. ಧಾರವಾಡದ ಈ ಜೈಲಿನಲ್ಲಿ ಹೆಚ್ಚು ಕೈದಿಗಳು ಇಲ್ಲ. ಬೆಂಗಳೂರು, ಕೋಲಾರ ಹಾಗೂ ಕಲಬುರ್ಗಿ ಜಿಲ್ಲೆಯಲ್ಲಿ ಹೆಚ್ಚುವರಿ ಕೈದಿಗಳಿದ್ದಾರೆ. ಜೈಲಿನಲ್ಲಿ ಹಲ್ಲೆ ಮತ್ತು ಕಿಡಿಗೇಡಿತನ ಮಾಡಿದ ಕೈದಿಗಳನ್ನು ಬೇರೆ ಕಡೆಯೂ ನಾವು ವರ್ಗಾವಣೆ ಮಾಡುತ್ತೇವೆ ಎಂದರು.1
- Post by User52941
- ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಇವರ ಸಂಯುಕ್ತಾಶ್ರಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅಪರ ಜಿಲ್ಲಾಧಿಕಾರಿ ಬಿ ಟಿ ಕುಮಾರಸ್ವಾಮಿ ಅವರು ಆಗಮಿಸಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು.1