logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಶಿವಮೊಗ್ಗ-ಕಾಮ್ರೇಡ್ ಡಿ.ಸಿ ಮಾಯಣ್ಣ ವೃತ್ತ ನಾಮಕರಣ: ಬಿ.ಕೆ. ಮೋಹನ್ ಶಿವಮೊಗ್ಗ (ಭದ್ರಾವತಿ): ಹಿರಿಯ ಕಾರ್ಮಿಕ ಮುಖಂಡ, ಹೋರಾಟಗಾರ ಕಾಮ್ರೇಡ್ ಡಿ.ಸಿ ಮಾಯಣ್ಣನವರ ಹೆಸರನ್ನು ನಗರದಲ್ಲಿ ಯಾವುದಾದರೂ ಒಂದು ವೃತ್ತಕ್ಕೆ ಒಂದು ತಿಂಗಳಲ್ಲಿ ನಗರಸಭೆ ವತಿಯಿಂದ ನಾಮಕರಣಗೊಳಿಸಲಾಗುವುದು ಎಂದು ನಗರಸಭಾ ಸದಸ್ಯ ಬಿ.ಕೆ ಮೋಹನ್ ಹೇಳಿದರು. ಪ್ರಗತಿಪರ ಸಂಘಟನೆಗಳ ಒಕ್ಕೂಟ ವತಿಯಿಂದ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪ ದಲ್ಲಿ ಆಯೋಜಿಸಲಾಗಿದ್ದ ಈಚೆಗೆ ನಿಧನ ರಾದ ಕಾಮ್ರೇಡ್ ಡಿ.ಸಿ ಮಾಯಣ್ಣ ರವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಗತಿಪರ ಒಕ್ಕೂಟದ ಬೇಡಿಕೆಯಂತೆ, ಕ್ಷೇತ್ರದ ಪ್ರತಿಯೊಬ್ಬರ ಆಶಯದಂತೆ ನಗರದ ಯಾವುದಾದರೂ ಒಂದು ರಸ್ತೆ ಅಥವಾ ವೃತ್ತಕ್ಕೆ ಡಿ.ಸಿ ಮಾಯಣ್ಣನವರ ಹೆಸರು ನಾಮಕರಣಗೊಳಿಸಲಾಗುವುದು. ಒಂದು ತಿಂಗಳಲ್ಲಿ ಆದೇಶ ಪ್ರತಿ ನೀಡಲಾಗುವುದು. ಈ ಸಂಬಂಧ ಕಾರ್ಯಕ್ರಮ ಆಯೋಜಿಸಿ ಪ್ರಾಮಾಣಿಕವಾಗಿ ಅವರ ಹೆಸರನ್ನು ಶಾಶ್ವತ ವಾಗಿ ಉಳಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ಸಿಗುವಂತೆ ನಾವೆಲ್ಲರೂ ಕೈಜೋಡಿಸಿ ಕೆಲಸ ಮಾಡಬೇಕಾಗಿದೆ ಎಂದರು. ನಗರದಲ್ಲಿ ಆಶ್ರಯ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಮನೆಗಳಿಗೆ ಇನ್ನೂ ಬಹುತೇಕ ಮಂದಿ ಅರ್ಜಿ ಹಾಕಿಲ್ಲ. ಮನೆ ಇಲ್ಲದವರು ತಕ್ಷಣ ಅರ್ಜಿ ಹಾಕುವ ಮೂಲಕ ಸರ್ಕಾರ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಆಶ್ರಯ ಬಡಾವಣೆಗೆ ಡಿ.ಸಿ.ಮಾಯಣ್ಣನವರ ಹೆಸರನ್ನು ನಾಮಕರಣಗೊಳಿಸುವ ವಿಚಾರವನ್ನು ಎಲ್ಲರೂ ಸೇರಿ ಮತ್ತೊಮ್ಮೆ ಚರ್ಚಿಸಿ ತೀರ್ಮಾನಿಸಿ. ಒಂದು ವೇಳೆ ಸಾಧ್ಯವಾದರೆ ಬಡಾವಣೆಗೂ ಅವರ ಹೆಸರನ್ನು ನಾಮಕರಣಗೊಳಿಸಲಾಗುವುದು ಎಂದರು. ಇಂದಿನ ಯುವ ಪೀಳಿಗೆಗೆ ಡಿ.ಸಿ ಮಾಯಣ್ಣ ನವರ ಇತಿಹಾಸ ತಿಳಿದಿಲ್ಲ. ಈ ಹಿನ್ನಲೆಯಲ್ಲಿ ಕ್ಷೇತ್ರ ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಮಕ್ಕಳಿಗೆ ಡಿ.ಸಿ ಮಾಯಣ್ಣನವರ ಕುರಿತ ಇತಿಹಾಸ ತಿಳಿಸುವ ಮೂಲಕ ಅವರ ಆದರ್ಶತನ ನಾವೆಲ್ಲರೂ ಮೈಗೂಡಿಸಿ ಕೊಳ್ಳಬೇಕೆಂದರು. ಕಾರ್ಯಕ್ರಮದ ಆರಂಭದಲ್ಲಿ ಶಾಸಕ ಬಿ.ಕೆ. ಸಂಗಮೇಶ್ವರ್ ಕಾಮ್ರೇಡ್ ಡಿ.ಸಿ ಮಾಯಣ್ಣ ನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರ ಬದುಕು, ಹೋರಾಟ, ಆದರ್ಶತನ ಸ್ಮರಿಸಿದರು. ಒಕ್ಕೂಟದ ಅಧ್ಯಕ್ಷ ಪ್ರೊ.ಎಂ. ಚಂದ್ರಶೇಖರಯ್ಯ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರಮುಖರಾದ ಸತ್ಯ ಭದ್ರಾವತಿ, ಕೆ.ಎಲ್ ಅಶೋಕ್, ಶಿವಬಸಪ್ಪ, ಬಿ.ಕೆ.ಜಗನ್ನಾಥ್, ಬಸವರಾಜ ಬಿ. ಆನೇಕೊಪ್ಪ, ಸಾಗರ ಕಾರ್ವಾಕರ್ ರಾಘವೇಂದ್ರ, ಸುರೇಶ್, ಚಿನ್ನಯ್ಯ, ಜಿ. ರಾಜು, ಎಚ್. ರವಿಕುಮಾರ್, ವಿ. ವಿನೋದ್, ರಾಜೇಂದ್ರ, ದೊರೈ, ಯಲ್ಲೋಜಿರಾವ್, ಡಿ. ರಾಜು, ಹನುಮಕ್ಕ, ಎಸ್.ಕೆ ಸುಧೀಂದ್ರ, ಮೂರ್ತಿ, ಧರ್ಮರಾಜ್, ಕಾಣಿಕ್‌ರಾಜ್, ಸುಕನ್ಯ, ಉಮಾ, ತೀರ್ಥೇಶ್, ನಾರಾಯಣ, ಕುಮಾರಸ್ವಾಮಿ, ಐಸಾಕ್ ಇನ್ನಿತರರು ಉಪಸ್ಥಿತರಿದ್ದರು.

5 hrs ago
user_ಆರ್.ವಿ.ಕೃಷ್ಣ
ಆರ್.ವಿ.ಕೃಷ್ಣ
Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
5 hrs ago

ಶಿವಮೊಗ್ಗ-ಕಾಮ್ರೇಡ್ ಡಿ.ಸಿ ಮಾಯಣ್ಣ ವೃತ್ತ ನಾಮಕರಣ: ಬಿ.ಕೆ. ಮೋಹನ್ ಶಿವಮೊಗ್ಗ (ಭದ್ರಾವತಿ): ಹಿರಿಯ ಕಾರ್ಮಿಕ ಮುಖಂಡ, ಹೋರಾಟಗಾರ ಕಾಮ್ರೇಡ್ ಡಿ.ಸಿ ಮಾಯಣ್ಣನವರ ಹೆಸರನ್ನು ನಗರದಲ್ಲಿ ಯಾವುದಾದರೂ ಒಂದು ವೃತ್ತಕ್ಕೆ ಒಂದು ತಿಂಗಳಲ್ಲಿ ನಗರಸಭೆ ವತಿಯಿಂದ ನಾಮಕರಣಗೊಳಿಸಲಾಗುವುದು ಎಂದು ನಗರಸಭಾ ಸದಸ್ಯ ಬಿ.ಕೆ ಮೋಹನ್ ಹೇಳಿದರು. ಪ್ರಗತಿಪರ ಸಂಘಟನೆಗಳ ಒಕ್ಕೂಟ ವತಿಯಿಂದ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪ ದಲ್ಲಿ ಆಯೋಜಿಸಲಾಗಿದ್ದ ಈಚೆಗೆ ನಿಧನ ರಾದ ಕಾಮ್ರೇಡ್ ಡಿ.ಸಿ ಮಾಯಣ್ಣ ರವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಗತಿಪರ ಒಕ್ಕೂಟದ ಬೇಡಿಕೆಯಂತೆ, ಕ್ಷೇತ್ರದ ಪ್ರತಿಯೊಬ್ಬರ ಆಶಯದಂತೆ ನಗರದ ಯಾವುದಾದರೂ ಒಂದು ರಸ್ತೆ ಅಥವಾ ವೃತ್ತಕ್ಕೆ ಡಿ.ಸಿ ಮಾಯಣ್ಣನವರ ಹೆಸರು ನಾಮಕರಣಗೊಳಿಸಲಾಗುವುದು. ಒಂದು ತಿಂಗಳಲ್ಲಿ ಆದೇಶ ಪ್ರತಿ ನೀಡಲಾಗುವುದು. ಈ ಸಂಬಂಧ ಕಾರ್ಯಕ್ರಮ ಆಯೋಜಿಸಿ ಪ್ರಾಮಾಣಿಕವಾಗಿ ಅವರ ಹೆಸರನ್ನು ಶಾಶ್ವತ ವಾಗಿ ಉಳಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ಸಿಗುವಂತೆ ನಾವೆಲ್ಲರೂ ಕೈಜೋಡಿಸಿ ಕೆಲಸ ಮಾಡಬೇಕಾಗಿದೆ ಎಂದರು. ನಗರದಲ್ಲಿ ಆಶ್ರಯ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಮನೆಗಳಿಗೆ ಇನ್ನೂ ಬಹುತೇಕ ಮಂದಿ ಅರ್ಜಿ ಹಾಕಿಲ್ಲ. ಮನೆ ಇಲ್ಲದವರು ತಕ್ಷಣ ಅರ್ಜಿ ಹಾಕುವ ಮೂಲಕ ಸರ್ಕಾರ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಆಶ್ರಯ ಬಡಾವಣೆಗೆ ಡಿ.ಸಿ.ಮಾಯಣ್ಣನವರ ಹೆಸರನ್ನು ನಾಮಕರಣಗೊಳಿಸುವ ವಿಚಾರವನ್ನು ಎಲ್ಲರೂ ಸೇರಿ ಮತ್ತೊಮ್ಮೆ ಚರ್ಚಿಸಿ ತೀರ್ಮಾನಿಸಿ. ಒಂದು ವೇಳೆ ಸಾಧ್ಯವಾದರೆ ಬಡಾವಣೆಗೂ ಅವರ ಹೆಸರನ್ನು ನಾಮಕರಣಗೊಳಿಸಲಾಗುವುದು ಎಂದರು. ಇಂದಿನ ಯುವ ಪೀಳಿಗೆಗೆ ಡಿ.ಸಿ ಮಾಯಣ್ಣ ನವರ ಇತಿಹಾಸ ತಿಳಿದಿಲ್ಲ. ಈ ಹಿನ್ನಲೆಯಲ್ಲಿ ಕ್ಷೇತ್ರ ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಮಕ್ಕಳಿಗೆ ಡಿ.ಸಿ ಮಾಯಣ್ಣನವರ ಕುರಿತ ಇತಿಹಾಸ ತಿಳಿಸುವ ಮೂಲಕ ಅವರ ಆದರ್ಶತನ ನಾವೆಲ್ಲರೂ ಮೈಗೂಡಿಸಿ ಕೊಳ್ಳಬೇಕೆಂದರು. ಕಾರ್ಯಕ್ರಮದ ಆರಂಭದಲ್ಲಿ ಶಾಸಕ ಬಿ.ಕೆ. ಸಂಗಮೇಶ್ವರ್ ಕಾಮ್ರೇಡ್ ಡಿ.ಸಿ ಮಾಯಣ್ಣ ನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರ ಬದುಕು, ಹೋರಾಟ, ಆದರ್ಶತನ ಸ್ಮರಿಸಿದರು. ಒಕ್ಕೂಟದ ಅಧ್ಯಕ್ಷ ಪ್ರೊ.ಎಂ. ಚಂದ್ರಶೇಖರಯ್ಯ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರಮುಖರಾದ ಸತ್ಯ ಭದ್ರಾವತಿ, ಕೆ.ಎಲ್ ಅಶೋಕ್, ಶಿವಬಸಪ್ಪ, ಬಿ.ಕೆ.ಜಗನ್ನಾಥ್, ಬಸವರಾಜ ಬಿ. ಆನೇಕೊಪ್ಪ, ಸಾಗರ ಕಾರ್ವಾಕರ್ ರಾಘವೇಂದ್ರ, ಸುರೇಶ್, ಚಿನ್ನಯ್ಯ, ಜಿ. ರಾಜು, ಎಚ್. ರವಿಕುಮಾರ್, ವಿ. ವಿನೋದ್, ರಾಜೇಂದ್ರ, ದೊರೈ, ಯಲ್ಲೋಜಿರಾವ್, ಡಿ. ರಾಜು, ಹನುಮಕ್ಕ, ಎಸ್.ಕೆ ಸುಧೀಂದ್ರ, ಮೂರ್ತಿ, ಧರ್ಮರಾಜ್, ಕಾಣಿಕ್‌ರಾಜ್, ಸುಕನ್ಯ, ಉಮಾ, ತೀರ್ಥೇಶ್, ನಾರಾಯಣ, ಕುಮಾರಸ್ವಾಮಿ, ಐಸಾಕ್ ಇನ್ನಿತರರು ಉಪಸ್ಥಿತರಿದ್ದರು.

More news from ಕರ್ನಾಟಕ and nearby areas
  • ಬೋಧಕ ವೃತ್ತಿಯ ಜೊತೆಗೆ ಲಾಭದಾಯಕ ಕೃಷಿಯಾಗಿ ಗುಲಾಬಿ ಹೂವು ಬೆಳೆದು ಅಥಿತಿ‌ಉಪನ್ಯಾಸಕ ಶಿವರಾಜ್. ಚಳ್ಳಕೆರೆ: ಅಲ್ಪ ವೇತನ ಮತ್ತು ಅನಿಶ್ಚಿತತೆ, ಸೇವಾ ಭದ್ರತೆಯ ಕೊರತೆ, ವೇತನದಲ್ಲಿ ವಿಳಂಬ, ಕೆಲಸದ ಒತ್ತಡ, ಈ ಎಲ್ಲಾ ಸಮಸ್ಯೆಗಳ ನಡುವೆ ಸಿಲುಕಿ ಸಂಕಷ್ಟದಲ್ಲಿರುವ ಅತಿಥಿ ಉಪನ್ಯಾಸರಿಗೆ ಮಾದರಿಯಾಗುವ ರೀತಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಲ್ಲೂರಹಳ್ಳಿ ಗ್ರಾಮದ ಶಿವರಾಜ್ ಸಿ ಬೋಧಕ ವೃತ್ತಿಯ ಜೊತೆಗೆ ಲಾಭದಾಯಕ ಕೃಷಿಯಾಗಿ ಗುಲಾಬಿ ಹೂವು ಬೆಳೆದು ತಿಂಗಳಿಗೆ 30 ರಿಂದ 40 ಸಾವಿರ ರೂಪಾಯಿ ಲಾಭ ಗಳಿಸುತ್ತಿದ್ದಾರೆ. ಸುಮಾರು 7 ವರ್ಷದಿಂದ ಶಿವರಾಜ್ ಸಿ ಬೆಳಗೆರೆಯ ಬಿ.ಸೀತಾರಾಮ ಶಾಸ್ತ್ರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಷಯದ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಪನ್ಯಾಸಕ ವೃತ್ತಿಯಲ್ಲಿ ಬರುವ ಕಡಿಮೆ ಸಂಬಳದಿಂದ ಮನೆ ನಡೆಸಲು ಆಗದೆ ಹಲವು ಬಾರಿ ಸಂಕಷ್ಟಕ್ಕೆ ಸಿಲುಕಿದ್ದ ಶಿವರಾಜ್, ಕೊನೆಗೆ ಇದನ್ನೇ ನಂಬಿ ಕೂತರೆ ಏನು ಆಗದು ಎಂದು ಅರಿತು ಒಂದು ವರ್ಷದ ಹಿಂದೆ ಕೃಷಿಯಲ್ಲಿ ನಿರತರಾಗಿ ಯಶಸ್ಸು ಕಂಡಿದ್ದಾರೆ. ತಮಿಳುನಾಡಿನಿಂದ 18 ರೂಪಾಯಿಗೆ ಒಂದರಂತೆ 1,500 ಮಿರಾಬಲ್ ತಳಿಯ ಗುಲಾಬಿ ಸಸಿಗಳನ್ನು ತರಿಸಿ ತಮ್ಮ ಅರ್ಧ ಎಕರೆ ಜಮೀನಿನಲ್ಲಿ ಸಾಲಿನಿಂದ ಸಾಲಿಗೆ 7 ಅಡಿ, ಸಸಿಯಿಂದ ಸಸಿಗೆ 3 ಹಂತರದಲ್ಲಿ ನಾಟಿ ಮಾಡಿದ್ದಾರೆ. ಮೊದಲು ಭೂಮಿ ಹದಮಾಡುವುದು, ಬೆಡ್ ಹೊಡೆಸುವುದು, ಡ್ರಿಪ್ ಹಾಕಿಸುವುದು, ಪೈಪ್ ಲೈನ್ ಸೇರಿ ಎಲ್ಲ ಸಿದ್ಧತೆ ಮಾಡಲು 1,00000 ಖರ್ಚು ಮಾಡಿದ್ದು, ಈಗ ಸಸಿ ನಾಟಿ ಮಾಡಿ 1 ವರ್ಷ 3 ತಿಂಗಳಾಗಿದ್ದು ಪ್ರತಿನಿತ್ಯ ಸುಮಾರು 40 ಕೆಜಿ ಗುಲಾಬಿ ಹೂವು ಸಿಗುತ್ತದೆ. ಹಬ್ಬದ ಸಮಯದಲ್ಲಿ ಹೂವಿನ ಬೆಲೆ ಹೆಚ್ಚಾಗುತ್ತದೆ ಹಬ್ಬ ಮುಗಿದ ಮೇಲೆ ಬೆಲೆಯಲ್ಲಿ ಏರಿಳಿತ ಆಗೋದು ಸಹಜ. ಆದರೂ ಒಂದೇ ವರ್ಷದಲ್ಲಿ 30.ಸಾವಿರದಿಂದ 40 ಸಾವಿದವರೆಗೆ ಲಾಭ ಗಳಿಸಿದ್ದಾರೆ. ಅಥಿತಿ‌‌ ಉಪನ್ಯಾಸಕ ಶಿವರಾಜ್ ಮಾತನಾಡಿ.ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮಕ್ಕಳಿಗೆ ಪಾಠ ಮಾಡುತ್ತೇನೆ. ಮಧ್ಯಾಹ್ನ ಕಾಲೇಜಿನಿಂದ ಬಂದ ಕೂಡಲೇ ಸಂಜೆವರೆಗೆ ಹೊಲದಲ್ಲಿ ಕೆಲಸ ಮಾಡುತ್ತೇನೆ. ಒಂದು ವರ್ಷದಿಂದ ಕೃಷಿಯಲ್ಲಿ ತೊಡಗಿದ್ದು ಒಂದಷ್ಟು ಆರ್ಥಿಕವಾಗಿ ಸಧೃಡ ಆಗಲು ಕೃಷಿಯೇ ಸಹಕಾರಿಯಾಗಿದೆ. ಕೃಷಿಯಲ್ಲಿ ಖುಷಿಯಾಗಿದ್ದೇನೆ ಎಂದು ಶಿವರಾಜ್ ಹೇಳುತ್ತಾರೆ...
    1
    ಬೋಧಕ ವೃತ್ತಿಯ ಜೊತೆಗೆ ಲಾಭದಾಯಕ ಕೃಷಿಯಾಗಿ ಗುಲಾಬಿ ಹೂವು ಬೆಳೆದು ಅಥಿತಿ‌ಉಪನ್ಯಾಸಕ ಶಿವರಾಜ್.
ಚಳ್ಳಕೆರೆ: ಅಲ್ಪ ವೇತನ ಮತ್ತು ಅನಿಶ್ಚಿತತೆ, ಸೇವಾ ಭದ್ರತೆಯ ಕೊರತೆ, ವೇತನದಲ್ಲಿ ವಿಳಂಬ, ಕೆಲಸದ ಒತ್ತಡ, ಈ ಎಲ್ಲಾ ಸಮಸ್ಯೆಗಳ ನಡುವೆ ಸಿಲುಕಿ ಸಂಕಷ್ಟದಲ್ಲಿರುವ ಅತಿಥಿ ಉಪನ್ಯಾಸರಿಗೆ ಮಾದರಿಯಾಗುವ ರೀತಿಯಲ್ಲಿ  ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಲ್ಲೂರಹಳ್ಳಿ ಗ್ರಾಮದ ಶಿವರಾಜ್ ಸಿ ಬೋಧಕ ವೃತ್ತಿಯ ಜೊತೆಗೆ ಲಾಭದಾಯಕ ಕೃಷಿಯಾಗಿ ಗುಲಾಬಿ ಹೂವು ಬೆಳೆದು ತಿಂಗಳಿಗೆ 30 ರಿಂದ 40 ಸಾವಿರ ರೂಪಾಯಿ ಲಾಭ ಗಳಿಸುತ್ತಿದ್ದಾರೆ.  
ಸುಮಾರು 7 ವರ್ಷದಿಂದ ಶಿವರಾಜ್ ಸಿ ಬೆಳಗೆರೆಯ  ಬಿ.ಸೀತಾರಾಮ ಶಾಸ್ತ್ರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಷಯದ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಪನ್ಯಾಸಕ ವೃತ್ತಿಯಲ್ಲಿ ಬರುವ ಕಡಿಮೆ ಸಂಬಳದಿಂದ ಮನೆ ನಡೆಸಲು ಆಗದೆ ಹಲವು ಬಾರಿ ಸಂಕಷ್ಟಕ್ಕೆ ಸಿಲುಕಿದ್ದ ಶಿವರಾಜ್, ಕೊನೆಗೆ ಇದನ್ನೇ ನಂಬಿ ಕೂತರೆ ಏನು ಆಗದು ಎಂದು ಅರಿತು ಒಂದು ವರ್ಷದ ಹಿಂದೆ ಕೃಷಿಯಲ್ಲಿ ನಿರತರಾಗಿ ಯಶಸ್ಸು ಕಂಡಿದ್ದಾರೆ.
ತಮಿಳುನಾಡಿನಿಂದ 18 ರೂಪಾಯಿಗೆ ಒಂದರಂತೆ 1,500 ಮಿರಾಬಲ್ ತಳಿಯ ಗುಲಾಬಿ ಸಸಿಗಳನ್ನು ತರಿಸಿ ತಮ್ಮ ಅರ್ಧ ಎಕರೆ ಜಮೀನಿನಲ್ಲಿ ಸಾಲಿನಿಂದ ಸಾಲಿಗೆ 7 ಅಡಿ, ಸಸಿಯಿಂದ ಸಸಿಗೆ 3 ಹಂತರದಲ್ಲಿ ನಾಟಿ ಮಾಡಿದ್ದಾರೆ. ಮೊದಲು ಭೂಮಿ ಹದಮಾಡುವುದು, ಬೆಡ್ ಹೊಡೆಸುವುದು, ಡ್ರಿಪ್ ಹಾಕಿಸುವುದು, ಪೈಪ್ ಲೈನ್ ಸೇರಿ ಎಲ್ಲ ಸಿದ್ಧತೆ ಮಾಡಲು 1,00000 ಖರ್ಚು ಮಾಡಿದ್ದು, ಈಗ ಸಸಿ ನಾಟಿ ಮಾಡಿ 1 ವರ್ಷ 3 ತಿಂಗಳಾಗಿದ್ದು ಪ್ರತಿನಿತ್ಯ ಸುಮಾರು 40 ಕೆಜಿ ಗುಲಾಬಿ ಹೂವು ಸಿಗುತ್ತದೆ. ಹಬ್ಬದ ಸಮಯದಲ್ಲಿ ಹೂವಿನ ಬೆಲೆ ಹೆಚ್ಚಾಗುತ್ತದೆ ಹಬ್ಬ ಮುಗಿದ ಮೇಲೆ ಬೆಲೆಯಲ್ಲಿ ಏರಿಳಿತ ಆಗೋದು ಸಹಜ. ಆದರೂ ಒಂದೇ ವರ್ಷದಲ್ಲಿ 30.ಸಾವಿರದಿಂದ 40 ಸಾವಿದವರೆಗೆ  ಲಾಭ ಗಳಿಸಿದ್ದಾರೆ.
ಅಥಿತಿ‌‌ ಉಪನ್ಯಾಸಕ
ಶಿವರಾಜ್  ಮಾತನಾಡಿ.ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮಕ್ಕಳಿಗೆ ಪಾಠ ಮಾಡುತ್ತೇನೆ. ಮಧ್ಯಾಹ್ನ ಕಾಲೇಜಿನಿಂದ ಬಂದ ಕೂಡಲೇ ಸಂಜೆವರೆಗೆ ಹೊಲದಲ್ಲಿ ಕೆಲಸ ಮಾಡುತ್ತೇನೆ. ಒಂದು ವರ್ಷದಿಂದ ಕೃಷಿಯಲ್ಲಿ ತೊಡಗಿದ್ದು ಒಂದಷ್ಟು ಆರ್ಥಿಕವಾಗಿ ಸಧೃಡ ಆಗಲು ಕೃಷಿಯೇ  ಸಹಕಾರಿಯಾಗಿದೆ. ಕೃಷಿಯಲ್ಲಿ ಖುಷಿಯಾಗಿದ್ದೇನೆ ಎಂದು ಶಿವರಾಜ್ ಹೇಳುತ್ತಾರೆ...
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    4 hrs ago
  • ಬೆಳೆ ವಿಮೆಗೆ ಆಗ್ರಹಿಸಿ ಚಿತ್ರದುರ್ಗದ ತೋಟಗಾರಿಕೆ ಇಲಾಖೆ ಕಚೇರಿ ಬಳಿ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಇನ್ನೂ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ. ಈ ವೇಳೆ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಕೆ ಟಿ ತಿಪ್ಪೇಸ್ವಾಮಿ ಅವರು ಮಾತನಾಡಿದ್ದಾರೆ
    1
    ಬೆಳೆ ವಿಮೆಗೆ ಆಗ್ರಹಿಸಿ ಚಿತ್ರದುರ್ಗದ ತೋಟಗಾರಿಕೆ ಇಲಾಖೆ ಕಚೇರಿ ಬಳಿ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಇನ್ನೂ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ. ಈ ವೇಳೆ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಕೆ ಟಿ ತಿಪ್ಪೇಸ್ವಾಮಿ ಅವರು ಮಾತನಾಡಿದ್ದಾರೆ
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    17 hrs ago
  • ರಾಯಚೂರು - ​ಲಿಂಗಸುಗೂರು: ತಾಲೂಕಿನ ಗುಲಬರ್ಗಾ ರಸ್ತೆಯ ಪಕ್ಕದಲ್ಲಿರುವ ಹೋಟೆಲ್‌ವೊಂದಕ್ಕೆ ಅಪ್ರಾಪ್ತರು ಚಲಾಯಿಸುತ್ತಿದ್ದ ಕಾರು ನುಗ್ಗಿ ಭೀಕರ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ​ ​ಅಪಘಾತಕ್ಕೀಡಾದ ಕಾರು ದೇವದುರ್ಗ ಎ.ಪಿ.ಎಂ.ಸಿ ಅಧ್ಯಕ್ಷ ಆದನಗೌಡ ಅವರಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ. ​ ಅವರ ಅಪ್ರಾಪ್ತ ವಯಸ್ಸಿನ ಮಕ್ಕಳು ಅತಿ ವೇಗವಾಗಿ ಕಾರನ್ನು ಚಲಾಯಿಸಿದ ಪರಿಣಾಮ, ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೋಟೆಲ್‌ ಒಳಕ್ಕೆ ನುಗ್ಗಿದೆ. ​ಈ ಘಟನೆಗೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಪಟ್ಟಣ ಪ್ರದೇಶಗಳಲ್ಲಿ ಅಪ್ರಾಪ್ತ ವಯಸ್ಕರು ವಾಹನಗಳನ್ನು ಚಲಾಯಿಸುವುದು ಮಿತಿಮೀರಿದ್ದು, ಸಾರ್ವಜನಿಕರ ಪ್ರಾಣಕ್ಕೆ ಸಂಚಕಾರ ತರುತ್ತಿದೆ. ​ಮೋಟಾರು ವಾಹನ ಕಾಯ್ದೆಯ ಪ್ರಕಾರ, ಅಪ್ರಾಪ್ತರು ವಾಹನ ಚಲಾಯಿಸಿ ಅಪಘಾತಕ್ಕೀಡಾದರೆ ಅದರ ಸಂಪೂರ್ಣ ಹೊಣೆಯನ್ನು ವಾಹನ ಮಾಲೀಕರು ಅಥವಾ ಪೋಷಕರು ಹೊರಬೇಕಾಗುತ್ತದೆ. ​ ಅಪ್ರಾಪ್ತರಿಗೆ ವಾಹನ ನೀಡಿದ ಪೋಷಕರಿಗೆ ₹25,000 ವರೆಗೆ ದಂಡ ಮತ್ತು 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ​ವಾಹನದ ನೋಂದಣಿಯನ್ನು 12 ತಿಂಗಳ ಕಾಲ ರದ್ದುಗೊಳಿಸಬಹುದು. ಅಪ್ರಾಪ್ತ ವಯಸ್ಕನಿಗೆ 25 ವರ್ಷ ತುಂಬುವವರೆಗೆ ಡ್ರೈವಿಂಗ್ ಲೈಸೆನ್ಸ್ ಸಿಗದಂತೆ ನಿರ್ಬಂಧ ಹೇರಬಹುದು.
    1
    ರಾಯಚೂರು - ​ಲಿಂಗಸುಗೂರು: ತಾಲೂಕಿನ ಗುಲಬರ್ಗಾ ರಸ್ತೆಯ ಪಕ್ಕದಲ್ಲಿರುವ ಹೋಟೆಲ್‌ವೊಂದಕ್ಕೆ ಅಪ್ರಾಪ್ತರು ಚಲಾಯಿಸುತ್ತಿದ್ದ ಕಾರು ನುಗ್ಗಿ ಭೀಕರ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
​
​ಅಪಘಾತಕ್ಕೀಡಾದ ಕಾರು ದೇವದುರ್ಗ ಎ.ಪಿ.ಎಂ.ಸಿ ಅಧ್ಯಕ್ಷ ಆದನಗೌಡ ಅವರಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ.
​
ಅವರ ಅಪ್ರಾಪ್ತ ವಯಸ್ಸಿನ ಮಕ್ಕಳು ಅತಿ ವೇಗವಾಗಿ ಕಾರನ್ನು ಚಲಾಯಿಸಿದ ಪರಿಣಾಮ, ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೋಟೆಲ್‌ ಒಳಕ್ಕೆ ನುಗ್ಗಿದೆ.
​ಈ ಘಟನೆಗೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ.
ಇತ್ತೀಚಿನ ದಿನಗಳಲ್ಲಿ ಪಟ್ಟಣ ಪ್ರದೇಶಗಳಲ್ಲಿ ಅಪ್ರಾಪ್ತ ವಯಸ್ಕರು ವಾಹನಗಳನ್ನು ಚಲಾಯಿಸುವುದು ಮಿತಿಮೀರಿದ್ದು, ಸಾರ್ವಜನಿಕರ ಪ್ರಾಣಕ್ಕೆ ಸಂಚಕಾರ ತರುತ್ತಿದೆ.
​ಮೋಟಾರು ವಾಹನ ಕಾಯ್ದೆಯ ಪ್ರಕಾರ, ಅಪ್ರಾಪ್ತರು ವಾಹನ ಚಲಾಯಿಸಿ ಅಪಘಾತಕ್ಕೀಡಾದರೆ ಅದರ ಸಂಪೂರ್ಣ ಹೊಣೆಯನ್ನು ವಾಹನ ಮಾಲೀಕರು ಅಥವಾ ಪೋಷಕರು ಹೊರಬೇಕಾಗುತ್ತದೆ.
​
ಅಪ್ರಾಪ್ತರಿಗೆ ವಾಹನ ನೀಡಿದ ಪೋಷಕರಿಗೆ ₹25,000 ವರೆಗೆ ದಂಡ ಮತ್ತು 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.
​ವಾಹನದ ನೋಂದಣಿಯನ್ನು 12 ತಿಂಗಳ ಕಾಲ ರದ್ದುಗೊಳಿಸಬಹುದು.
ಅಪ್ರಾಪ್ತ ವಯಸ್ಕನಿಗೆ 25 ವರ್ಷ ತುಂಬುವವರೆಗೆ ಡ್ರೈವಿಂಗ್ ಲೈಸೆನ್ಸ್ ಸಿಗದಂತೆ ನಿರ್ಬಂಧ ಹೇರಬಹುದು.
    user_Power focus
    Power focus
    ಹಿರಿಯೂರು, ಚಿತ್ರದುರ್ಗ, ಕರ್ನಾಟಕ•
    15 hrs ago
  • ತುಮಕೂರು ನಗರ ಪಾಲಿಕೆ ಮತ್ತು ಶಾಸಕರ ವಿರುದ್ಧ ಜನಕ್ರೋಶ
    1
    ತುಮಕೂರು ನಗರ ಪಾಲಿಕೆ ಮತ್ತು ಶಾಸಕರ ವಿರುದ್ಧ ಜನಕ್ರೋಶ
    user_Onlinetv Chinnu
    Onlinetv Chinnu
    Media ಹಾಸನ, ಹಾಸನ, ಕರ್ನಾಟಕ•
    15 hrs ago
  • I C U ನಲ್ಲಿರುವ ನಮ್ಮ ಸಿಕ್ಷಣ, ರಾಜಕಾರಣಿಗಳು ಸಿಕ್ಷಣ ಸಂಸ್ಥೆಗೆ ಸಲೈನ್ ಏರಿಸುತ್ತಿರುವುದು ವಿಷಾದದ ಸಂಗತಿ.
    1
    I C U ನಲ್ಲಿರುವ ನಮ್ಮ ಸಿಕ್ಷಣ, ರಾಜಕಾರಣಿಗಳು ಸಿಕ್ಷಣ ಸಂಸ್ಥೆಗೆ ಸಲೈನ್ ಏರಿಸುತ್ತಿರುವುದು  ವಿಷಾದದ ಸಂಗತಿ.
    user_✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    Auto parts store ಹುಬ್ಬಳ್ಳಿ, ಧಾರವಾಡ, ಕರ್ನಾಟಕ•
    4 hrs ago
  • ಧಾರವಾಡದ ಕೇಂದ್ರ ಕಾರಾಗೃಹದಲ್ಲಿ 10, 12ನೇ ತರಗತಿ ಫೇಲಾದ ಕೈದಿಗಳಿದ್ದಾರೆ. ಅವರಿಗೆ ಓದಲು ಅವಕಾಶ ಕಲ್ಪಿಸುವ ಉದ್ದೇಶ ಇದೆ. ಕೆಲವರು ಐದನೇ ತರಗತಿ ಓದಿದವರೂ ಇದ್ದಾರೆ. ಇವರಿಗೆ ಒಳ್ಳೆಯ ಯೋಚನೆಗಳು ಬರಲಿ ಎಂಬ ಉದ್ದೇಶದಿಂದ ಈ ಚಿಂತನೆ ನಡೆಸಿದ್ದೇವೆ ಎಂದು ಕಾರಾಗೃಹ ಸುಧಾರಣಾ ಡಿಜಿಪಿ ಅಲೋಕ್‌ಕುಮಾರ್ ಹೇಳಿದರು. ಧಾರವಾಡ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಕಾರಾಗೃಹದಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ಜೈಲು ತಪಾಸಣೆಗೆ ಬಂದಿಲ್ಲ. ಕೇವಲ ಭೇಟಿಗಾಗಿ ಬಂದಿದ್ದೇನೆ. ಇಲ್ಲಿ ಯಾವೆಲ್ಲ ಸಮಸ್ಯೆಗಳಿವೆ ಎಂಬುದನ್ನು ಪರಿಶೀಲನೆ ಮಾಡಲು ಬಂದಿದ್ದೇನೆ. ಇಲ್ಲಿನ ಕೈದಿಗಳು ಅಂತಹ ದೊಡ್ಡ ಸಮಸ್ಯೆಗಳನ್ನೇನೂ ಹೇಳಿಲ್ಲ. ಆದರೆ, ಇಲ್ಲಿ ವೈದ್ಯರ ಸಮಸ್ಯೆ ಇದೆ. ಇಲ್ಲಿ ಕಾಯಂ ವೈದ್ಯರಿಲ್ಲ. ಕಳೆದ ತಿಂಗಳಷ್ಟೇ ಇಲ್ಲಿ ಓರ್ವ ಕೈದಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾರಾಗೃಹದಲ್ಲಿ ಕೈದಿಗಳಿಗೆ ಮಾನಸಿಕ ಒತ್ತಡ ಹೆಚ್ಚಾಗಿ ಇರುತ್ತದೆ. ಅದನ್ನು ಕಡಿಮೆ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದರು. ಇಲ್ಲಿ ಓದಲು ಇಚ್ಛಿಸುವ ಕೈದಿಗಳಿಗೆ ಓದುವ ವ್ಯವಸ್ಥೆ ಕಲ್ಪಿಸುವ ಚಿಂತನೆ ನಡೆದಿದೆ. ಮಾದಕ ವಸ್ತು ಮತ್ತು ಮೊಬೈಲ್ ಹಾವಳಿ ಕಾರಾಗೃಹದಲ್ಲಿ ಜೋರಾಗಿರುತ್ತದೆ. ಇದನ್ನು ತಪ್ಪಿಸುವ ಉದ್ದೇಶ ಮತ್ತು ಪ್ರಯತ್ನ ನಮ್ಮದಾಗಿದೆ. ಹೊಸದಾಗಿ ಕಾರಾಗೃಹಕ್ಕೆ ಬರುವ ಕೈದಿಗಳ ನಾರ್ಕೋಟಿಕ್ ಟೆಸ್ಟ್ ಕೂಡ ಮಾಡುತ್ತಿದ್ದೇವೆ. ಜೈಲಿನ ಒಳಗಡೆ ಇರುವ ಕೈದಿಗಳನ್ನೂ ತಪಾಸಣೆ ಮಾಡುತ್ತಿದ್ದೇವೆ. ಮೊದಲ ಬಾರಿ ಅಪರಾಧ ಮಾಡಿದ ಕೈದಿಗಳಿಗಾಗಿ ಪ್ರತ್ಯೇಕ ಸೆಲ್ ಮಾಡಿದ್ದೇವೆ. ಇಲ್ಲಿ ಜಾಮರ್ ವ್ಯವಸ್ಥೆ ಇದೆ. ಆದರೆ, ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂಬ ದೂರು ಸಹ ಕೇಳಿ ಬಂದಿವೆ. ಆ ಸಮಸ್ಯೆ ಆಗದಂತೆ ಪ್ರಯತ್ನ ಮಾಡುತ್ತೇವೆ ಎಂದರು. ಈ ಕಾರಾಗೃಹ ಶಹರದ ಮಧ್ಯೆ ಭಾಗದಲ್ಲೇ ಇರುವುದರಿಂದ ಜಾಮರ್ ಸಮಸ್ಯೆ ಆಗುತ್ತಿದೆ. ಈ ಸಮಸ್ಯೆ ಕಡಿಮೆ ಮಾಡಲು ನಾವು ಪ್ರಯತ್ನಿಸುತ್ತೇವೆ. ಧಾರವಾಡದ ಈ ಜೈಲಿನಲ್ಲಿ ಹೆಚ್ಚು ಕೈದಿಗಳು ಇಲ್ಲ. ಬೆಂಗಳೂರು, ಕೋಲಾರ ಹಾಗೂ ಕಲಬುರ್ಗಿ ಜಿಲ್ಲೆಯಲ್ಲಿ ಹೆಚ್ಚುವರಿ ಕೈದಿಗಳಿದ್ದಾರೆ. ಜೈಲಿನಲ್ಲಿ ಹಲ್ಲೆ ಮತ್ತು ಕಿಡಿಗೇಡಿತನ ಮಾಡಿದ ಕೈದಿಗಳನ್ನು ಬೇರೆ ಕಡೆಯೂ ನಾವು ವರ್ಗಾವಣೆ ಮಾಡುತ್ತೇವೆ ಎಂದರು.
    1
    ಧಾರವಾಡದ ಕೇಂದ್ರ ಕಾರಾಗೃಹದಲ್ಲಿ 10, 12ನೇ ತರಗತಿ ಫೇಲಾದ ಕೈದಿಗಳಿದ್ದಾರೆ. ಅವರಿಗೆ ಓದಲು ಅವಕಾಶ ಕಲ್ಪಿಸುವ ಉದ್ದೇಶ ಇದೆ. ಕೆಲವರು ಐದನೇ ತರಗತಿ ಓದಿದವರೂ ಇದ್ದಾರೆ. ಇವರಿಗೆ ಒಳ್ಳೆಯ ಯೋಚನೆಗಳು ಬರಲಿ ಎಂಬ ಉದ್ದೇಶದಿಂದ ಈ ಚಿಂತನೆ ನಡೆಸಿದ್ದೇವೆ ಎಂದು ಕಾರಾಗೃಹ ಸುಧಾರಣಾ ಡಿಜಿಪಿ ಅಲೋಕ್‌ಕುಮಾರ್ ಹೇಳಿದರು.
ಧಾರವಾಡ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಕಾರಾಗೃಹದಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ನಾನು ಜೈಲು ತಪಾಸಣೆಗೆ ಬಂದಿಲ್ಲ. ಕೇವಲ ಭೇಟಿಗಾಗಿ ಬಂದಿದ್ದೇನೆ. ಇಲ್ಲಿ ಯಾವೆಲ್ಲ ಸಮಸ್ಯೆಗಳಿವೆ ಎಂಬುದನ್ನು ಪರಿಶೀಲನೆ ಮಾಡಲು ಬಂದಿದ್ದೇನೆ. ಇಲ್ಲಿನ ಕೈದಿಗಳು ಅಂತಹ ದೊಡ್ಡ ಸಮಸ್ಯೆಗಳನ್ನೇನೂ ಹೇಳಿಲ್ಲ. ಆದರೆ, ಇಲ್ಲಿ ವೈದ್ಯರ ಸಮಸ್ಯೆ ಇದೆ. ಇಲ್ಲಿ ಕಾಯಂ ವೈದ್ಯರಿಲ್ಲ. ಕಳೆದ ತಿಂಗಳಷ್ಟೇ ಇಲ್ಲಿ ಓರ್ವ ಕೈದಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾರಾಗೃಹದಲ್ಲಿ ಕೈದಿಗಳಿಗೆ ಮಾನಸಿಕ ಒತ್ತಡ ಹೆಚ್ಚಾಗಿ ಇರುತ್ತದೆ. ಅದನ್ನು ಕಡಿಮೆ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದರು.
ಇಲ್ಲಿ ಓದಲು ಇಚ್ಛಿಸುವ ಕೈದಿಗಳಿಗೆ ಓದುವ ವ್ಯವಸ್ಥೆ ಕಲ್ಪಿಸುವ ಚಿಂತನೆ ನಡೆದಿದೆ. ಮಾದಕ ವಸ್ತು ಮತ್ತು ಮೊಬೈಲ್ ಹಾವಳಿ ಕಾರಾಗೃಹದಲ್ಲಿ ಜೋರಾಗಿರುತ್ತದೆ. ಇದನ್ನು ತಪ್ಪಿಸುವ ಉದ್ದೇಶ ಮತ್ತು ಪ್ರಯತ್ನ ನಮ್ಮದಾಗಿದೆ. ಹೊಸದಾಗಿ ಕಾರಾಗೃಹಕ್ಕೆ ಬರುವ ಕೈದಿಗಳ ನಾರ್ಕೋಟಿಕ್ ಟೆಸ್ಟ್ ಕೂಡ ಮಾಡುತ್ತಿದ್ದೇವೆ. ಜೈಲಿನ ಒಳಗಡೆ ಇರುವ ಕೈದಿಗಳನ್ನೂ ತಪಾಸಣೆ ಮಾಡುತ್ತಿದ್ದೇವೆ. ಮೊದಲ ಬಾರಿ ಅಪರಾಧ ಮಾಡಿದ ಕೈದಿಗಳಿಗಾಗಿ ಪ್ರತ್ಯೇಕ ಸೆಲ್ ಮಾಡಿದ್ದೇವೆ. ಇಲ್ಲಿ ಜಾಮರ್ ವ್ಯವಸ್ಥೆ ಇದೆ. ಆದರೆ, ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂಬ ದೂರು ಸಹ ಕೇಳಿ ಬಂದಿವೆ. ಆ ಸಮಸ್ಯೆ ಆಗದಂತೆ ಪ್ರಯತ್ನ ಮಾಡುತ್ತೇವೆ ಎಂದರು.
ಈ ಕಾರಾಗೃಹ ಶಹರದ ಮಧ್ಯೆ ಭಾಗದಲ್ಲೇ ಇರುವುದರಿಂದ ಜಾಮರ್ ಸಮಸ್ಯೆ ಆಗುತ್ತಿದೆ. ಈ ಸಮಸ್ಯೆ ಕಡಿಮೆ ಮಾಡಲು ನಾವು ಪ್ರಯತ್ನಿಸುತ್ತೇವೆ. ಧಾರವಾಡದ ಈ ಜೈಲಿನಲ್ಲಿ ಹೆಚ್ಚು ಕೈದಿಗಳು ಇಲ್ಲ. ಬೆಂಗಳೂರು, ಕೋಲಾರ ಹಾಗೂ ಕಲಬುರ್ಗಿ ಜಿಲ್ಲೆಯಲ್ಲಿ ಹೆಚ್ಚುವರಿ ಕೈದಿಗಳಿದ್ದಾರೆ. ಜೈಲಿನಲ್ಲಿ ಹಲ್ಲೆ ಮತ್ತು ಕಿಡಿಗೇಡಿತನ ಮಾಡಿದ ಕೈದಿಗಳನ್ನು ಬೇರೆ ಕಡೆಯೂ ನಾವು ವರ್ಗಾವಣೆ ಮಾಡುತ್ತೇವೆ ಎಂದರು.
    user_YSRmedia vijayanagaraupsates
    YSRmedia vijayanagaraupsates
    Photographer ಹೊಸಪೇಟೆ, ವಿಜಯನಗರ, ಕರ್ನಾಟಕ•
    4 hrs ago
  • ತೀರ್ಥಹಳ್ಳಿ: ತೀರ್ಥಹಳ್ಳಿ ಕುರುವಳ್ಳಿ ಬೈಪಾಸ್ ರಸ್ತೆಯ ಪಕ್ಕದಲ್ಲಿರುವ ಗದ್ದೆಯಲ್ಲಿ ದಸರಾ ಸಮಯದಲ್ಲಿ ಕೆಸರು ಗದ್ದೆ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು. ಕ್ರೀಡಾಕೂಟ ಮುಗಿದ ನಂತರ ಅದೇ ಗದ್ದೆಯಲ್ಲಿ ಭತ್ತದ ಸಸಿಯನ್ನು ನಾಟಿ ಮಾಡಿ ಬಂದ ಭತ್ತವನ್ನು ಶ್ರೀ ರಾಮೇಶ್ವರ ದೇವಸ್ಥಾನ ಅನ್ನದಾನಕ್ಕೆ ನೀಡುತ್ತೇವೆ ಎಂದು ಸಂಕಲ್ಪ ಮಾಡಲಾಗಿತ್ತು. ಅದೇ ರೀತಿಯಲ್ಲಿ ಪೈರು ಬೆಳೆದು ಕಟಾವಿಗೆ ಬಂದಿದ್ದು ಇಂದು ಮೊದಲು ಕ್ರೀಡಾಕೂಟದಲ್ಲಿ ಪಾಲ್ಗೊಂಡ ಮಹಿಳೆಯರೆಲ್ಲರೂ ಸೇರಿ ಭೂಮಿ ತಾಯಿಗೆ ಪೂಜೆ ಮಾಡಿ ನಂತರ ಪೈರನ್ನು ಕಟಾವು ಮಾಡಲಾಯಿತು. ಈ ಸಂದರ್ಭದಲ್ಲಿ ಜಾಗದ ಮಾಲೀಕರಾದ ಶ್ರೀಕಾಂತ್ ನಾಯಕ್, ರಶ್ಮಿ ಶ್ರೀಕಾಂತ್ ನಾಯಕ್, ಪ.ಪಂ ಅಧ್ಯಕ್ಷ ರತ್ನಾಕರ್ ಶೆಟ್ಟಿ ( ದತ್ತಣ್ಣ), ನಯನಾ ಜಯಪ್ರಕಾಶ್ ಶೆಟ್ಟಿ, ಗೀತಾ ರಮೇಶ್, ಜ್ಯೋತಿ ದಿಲೀಪ್, ಶೋಭಿತಾ, ಸುಶೀಲಾ ಶೆಟ್ಟಿ, ಗೀತಾ ರಾಘವೇಂದ್ರ, ವಿಜಯಕ್ಕ, ವರಲಕ್ಷ್ಮಿ, ಪ.ಪಂ ಮುಖ್ಯಾಧಿಕಾರಿ ನಾಗರಾಜ್ ಸುಜಯಾ ಶೆಟ್ಟಿ ಮುಂತಾದವರಿದ್ದರು.
    3
    ತೀರ್ಥಹಳ್ಳಿ: ತೀರ್ಥಹಳ್ಳಿ ಕುರುವಳ್ಳಿ ಬೈಪಾಸ್ ರಸ್ತೆಯ ಪಕ್ಕದಲ್ಲಿರುವ ಗದ್ದೆಯಲ್ಲಿ ದಸರಾ ಸಮಯದಲ್ಲಿ ಕೆಸರು ಗದ್ದೆ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು. ಕ್ರೀಡಾಕೂಟ ಮುಗಿದ ನಂತರ ಅದೇ ಗದ್ದೆಯಲ್ಲಿ ಭತ್ತದ ಸಸಿಯನ್ನು ನಾಟಿ ಮಾಡಿ ಬಂದ ಭತ್ತವನ್ನು ಶ್ರೀ ರಾಮೇಶ್ವರ ದೇವಸ್ಥಾನ ಅನ್ನದಾನಕ್ಕೆ ನೀಡುತ್ತೇವೆ ಎಂದು ಸಂಕಲ್ಪ ಮಾಡಲಾಗಿತ್ತು.
ಅದೇ ರೀತಿಯಲ್ಲಿ ಪೈರು ಬೆಳೆದು ಕಟಾವಿಗೆ ಬಂದಿದ್ದು ಇಂದು ಮೊದಲು   ಕ್ರೀಡಾಕೂಟದಲ್ಲಿ ಪಾಲ್ಗೊಂಡ ಮಹಿಳೆಯರೆಲ್ಲರೂ ಸೇರಿ ಭೂಮಿ ತಾಯಿಗೆ ಪೂಜೆ ಮಾಡಿ ನಂತರ ಪೈರನ್ನು ಕಟಾವು ಮಾಡಲಾಯಿತು.
ಈ ಸಂದರ್ಭದಲ್ಲಿ ಜಾಗದ ಮಾಲೀಕರಾದ ಶ್ರೀಕಾಂತ್ ನಾಯಕ್, ರಶ್ಮಿ ಶ್ರೀಕಾಂತ್ ನಾಯಕ್, ಪ.ಪಂ ಅಧ್ಯಕ್ಷ ರತ್ನಾಕರ್ ಶೆಟ್ಟಿ ( ದತ್ತಣ್ಣ), ನಯನಾ ಜಯಪ್ರಕಾಶ್ ಶೆಟ್ಟಿ, ಗೀತಾ ರಮೇಶ್, ಜ್ಯೋತಿ ದಿಲೀಪ್, ಶೋಭಿತಾ, ಸುಶೀಲಾ ಶೆಟ್ಟಿ, ಗೀತಾ ರಾಘವೇಂದ್ರ, ವಿಜಯಕ್ಕ, ವರಲಕ್ಷ್ಮಿ, ಪ.ಪಂ ಮುಖ್ಯಾಧಿಕಾರಿ ನಾಗರಾಜ್ ಸುಜಯಾ ಶೆಟ್ಟಿ ಮುಂತಾದವರಿದ್ದರು.
    user_ರಶ್ಮಿ ಶ್ರೀಕಾಂತ್ ನಾಯಕ್
    ರಶ್ಮಿ ಶ್ರೀಕಾಂತ್ ನಾಯಕ್
    Local News Reporter ತೀರ್ಥಹಳ್ಳಿ, ಶಿವಮೊಗ್ಗ, ಕರ್ನಾಟಕ•
    10 hrs ago
  • ಚಿತ್ರದುರ್ಗ : ದಾವಣಗೆರೆ ಜಿಲ್ಲೆಯ ರಜಾನಹಳ್ಳಿ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷರಾದ (Valmiki Peeth) ಪ್ರಸನ್ನಾನಂದಪುರಿ ಸ್ವಾಮೀಜಿ ಅವರಿಗೆ ಹೃದಯಾಘಾತ ಸಂಭವಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ..ಮಾಹಿತಿಯ ಪ್ರಕಾರ, ಇತ್ತೀಚೆಗೆ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಸ್ವಾಮೀಜಿಯವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಸ್ತುತ ಅವರು ಚಿತ್ರದುರ್ಗ ನಗರದ ಬಸವೇಶ್ವರ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಅಗತ್ಯ ಪರೀಕ್ಷೆಗಳನ್ನು ನಡೆಸಿ, ತೀವ್ರ ನಿಗಾದಲ್ಲಿ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ವಾಲ್ಮೀಕಿ ಗುರುಪೀಠದ ಮೂಲಗಳ ಪ್ರಕಾರ, ಸ್ವಾಮೀಜಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಹೆಚ್ಚಿನ ಚಿಕಿತ್ಸೆ ಮತ್ತು ಮೇಲ್ವಿಚಾರಣೆ ಮುಂದುವರಿದಿದೆ. ಸ್ವಾಮೀಜಿಗಳ ಆರೋಗ್ಯ ವಿಚಾರ ತಿಳಿಯುತ್ತಿದ್ದಂತೆಯೇ ಭಕ್ತರು ಮತ್ತು ಅಭಿಮಾನಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದು, ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆಸ್ಪತ್ರೆ ಆವರಣದಲ್ಲಿ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
    1
    ಚಿತ್ರದುರ್ಗ : ದಾವಣಗೆರೆ ಜಿಲ್ಲೆಯ ರಜಾನಹಳ್ಳಿ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷರಾದ (Valmiki Peeth) ಪ್ರಸನ್ನಾನಂದಪುರಿ ಸ್ವಾಮೀಜಿ ಅವರಿಗೆ ಹೃದಯಾಘಾತ ಸಂಭವಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ..ಮಾಹಿತಿಯ ಪ್ರಕಾರ, ಇತ್ತೀಚೆಗೆ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಸ್ವಾಮೀಜಿಯವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಸ್ತುತ ಅವರು ಚಿತ್ರದುರ್ಗ ನಗರದ ಬಸವೇಶ್ವರ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಅಗತ್ಯ ಪರೀಕ್ಷೆಗಳನ್ನು ನಡೆಸಿ, ತೀವ್ರ ನಿಗಾದಲ್ಲಿ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.
ವಾಲ್ಮೀಕಿ ಗುರುಪೀಠದ ಮೂಲಗಳ ಪ್ರಕಾರ, ಸ್ವಾಮೀಜಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಹೆಚ್ಚಿನ ಚಿಕಿತ್ಸೆ ಮತ್ತು ಮೇಲ್ವಿಚಾರಣೆ ಮುಂದುವರಿದಿದೆ.
ಸ್ವಾಮೀಜಿಗಳ ಆರೋಗ್ಯ ವಿಚಾರ ತಿಳಿಯುತ್ತಿದ್ದಂತೆಯೇ ಭಕ್ತರು ಮತ್ತು ಅಭಿಮಾನಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದು, ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆಸ್ಪತ್ರೆ ಆವರಣದಲ್ಲಿ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    7 hrs ago
  • Rajadi Raj Shri Chatrapati Shivajimaharaj ki Jai
    1
    Rajadi Raj Shri Chatrapati Shivajimaharaj ki Jai
    user_✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    Auto parts store ಹುಬ್ಬಳ್ಳಿ, ಧಾರವಾಡ, ಕರ್ನಾಟಕ•
    12 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.