ಧಾರವಾಡದ ಕೇಂದ್ರ ಕಾರಾಗೃಹದಲ್ಲಿ 10, 12ನೇ ತರಗತಿ ಫೇಲಾದ ಕೈದಿಗಳಿದ್ದಾರೆ. ಅವರಿಗೆ ಓದಲು ಅವಕಾಶ ಕಲ್ಪಿಸುವ ಉದ್ದೇಶ ಇದೆ. ಕೆಲವರು ಐದನೇ ತರಗತಿ ಓದಿದವರೂ ಇದ್ದಾರೆ. ಇವರಿಗೆ ಒಳ್ಳೆಯ ಯೋಚನೆಗಳು ಬರಲಿ ಎಂಬ ಉದ್ದೇಶದಿಂದ ಈ ಚಿಂತನೆ ನಡೆಸಿದ್ದೇವೆ ಎಂದು ಕಾರಾಗೃಹ ಸುಧಾರಣಾ ಡಿಜಿಪಿ ಅಲೋಕ್‌ಕುಮಾರ್ ಹೇಳಿದರು. ಧಾರವಾಡ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಕಾರಾಗೃಹದಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ಜೈಲು ತಪಾಸಣೆಗೆ ಬಂದಿಲ್ಲ. ಕೇವಲ ಭೇಟಿಗಾಗಿ ಬಂದಿದ್ದೇನೆ. ಇಲ್ಲಿ ಯಾವೆಲ್ಲ ಸಮಸ್ಯೆಗಳಿವೆ ಎಂಬುದನ್ನು ಪರಿಶೀಲನೆ ಮಾಡಲು ಬಂದಿದ್ದೇನೆ. ಇಲ್ಲಿನ ಕೈದಿಗಳು ಅಂತಹ ದೊಡ್ಡ ಸಮಸ್ಯೆಗಳನ್ನೇನೂ ಹೇಳಿಲ್ಲ. ಆದರೆ, ಇಲ್ಲಿ ವೈದ್ಯರ ಸಮಸ್ಯೆ ಇದೆ. ಇಲ್ಲಿ ಕಾಯಂ ವೈದ್ಯರಿಲ್ಲ. ಕಳೆದ ತಿಂಗಳಷ್ಟೇ ಇಲ್ಲಿ ಓರ್ವ ಕೈದಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾರಾಗೃಹದಲ್ಲಿ ಕೈದಿಗಳಿಗೆ ಮಾನಸಿಕ ಒತ್ತಡ ಹೆಚ್ಚಾಗಿ ಇರುತ್ತದೆ. ಅದನ್ನು ಕಡಿಮೆ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದರು. ಇಲ್ಲಿ ಓದಲು ಇಚ್ಛಿಸುವ ಕೈದಿಗಳಿಗೆ ಓದುವ ವ್ಯವಸ್ಥೆ ಕಲ್ಪಿಸುವ ಚಿಂತನೆ ನಡೆದಿದೆ. ಮಾದಕ ವಸ್ತು ಮತ್ತು ಮೊಬೈಲ್ ಹಾವಳಿ ಕಾರಾಗೃಹದಲ್ಲಿ ಜೋರಾಗಿರುತ್ತದೆ. ಇದನ್ನು ತಪ್ಪಿಸುವ ಉದ್ದೇಶ ಮತ್ತು ಪ್ರಯತ್ನ ನಮ್ಮದಾಗಿದೆ. ಹೊಸದಾಗಿ ಕಾರಾಗೃಹಕ್ಕೆ ಬರುವ ಕೈದಿಗಳ ನಾರ್ಕೋಟಿಕ್ ಟೆಸ್ಟ್ ಕೂಡ ಮಾಡುತ್ತಿದ್ದೇವೆ. ಜೈಲಿನ ಒಳಗಡೆ ಇರುವ ಕೈದಿಗಳನ್ನೂ ತಪಾಸಣೆ ಮಾಡುತ್ತಿದ್ದೇವೆ. ಮೊದಲ ಬಾರಿ ಅಪರಾಧ ಮಾಡಿದ ಕೈದಿಗಳಿಗಾಗಿ ಪ್ರತ್ಯೇಕ ಸೆಲ್ ಮಾಡಿದ್ದೇವೆ. ಇಲ್ಲಿ ಜಾಮರ್ ವ್ಯವಸ್ಥೆ ಇದೆ. ಆದರೆ, ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂಬ ದೂರು ಸಹ ಕೇಳಿ ಬಂದಿವೆ. ಆ ಸಮಸ್ಯೆ ಆಗದಂತೆ ಪ್ರಯತ್ನ ಮಾಡುತ್ತೇವೆ ಎಂದರು. ಈ ಕಾರಾಗೃಹ ಶಹರದ ಮಧ್ಯೆ ಭಾಗದಲ್ಲೇ ಇರುವುದರಿಂದ ಜಾಮರ್ ಸಮಸ್ಯೆ ಆಗುತ್ತಿದೆ. ಈ ಸಮಸ್ಯೆ ಕಡಿಮೆ ಮಾಡಲು ನಾವು ಪ್ರಯತ್ನಿಸುತ್ತೇವೆ. ಧಾರವಾಡದ ಈ ಜೈಲಿನಲ್ಲಿ ಹೆಚ್ಚು ಕೈದಿಗಳು ಇಲ್ಲ. ಬೆಂಗಳೂರು, ಕೋಲಾರ ಹಾಗೂ ಕಲಬುರ್ಗಿ ಜಿಲ್ಲೆಯಲ್ಲಿ ಹೆಚ್ಚುವರಿ ಕೈದಿಗಳಿದ್ದಾರೆ. ಜೈಲಿನಲ್ಲಿ ಹಲ್ಲೆ ಮತ್ತು ಕಿಡಿಗೇಡಿತನ ಮಾಡಿದ ಕೈದಿಗಳನ್ನು ಬೇರೆ ಕಡೆಯೂ ನಾವು ವರ್ಗಾವಣೆ ಮಾಡುತ್ತೇವೆ ಎಂದರು.

- ಧಾರವಾಡದ ಕೇಂದ್ರ ಕಾರಾಗೃಹದಲ್ಲಿ 10, 12ನೇ ತರಗತಿ ಫೇಲಾದ ಕೈದಿಗಳಿದ್ದಾರೆ. ಅವರಿಗೆ ಓದಲು ಅವಕಾಶ ಕಲ್ಪಿಸುವ ಉದ್ದೇಶ ಇದೆ. ಕೆಲವರು ಐದನೇ ತರಗತಿ ಓದಿದವರೂ ಇದ್ದಾರೆ. ಇವರಿಗೆ ಒಳ್ಳೆಯ ಯೋಚನೆಗಳು ಬರಲಿ ಎಂಬ ಉದ್ದೇಶದಿಂದ ಈ ಚಿಂತನೆ ನಡೆಸಿದ್ದೇವೆ ಎಂದು ಕಾರಾಗೃಹ ಸುಧಾರಣಾ ಡಿಜಿಪಿ ಅಲೋಕ್‌ಕುಮಾರ್ ಹೇಳಿದರು. ಧಾರವಾಡ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಕಾರಾಗೃಹದಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ಜೈಲು ತಪಾಸಣೆಗೆ ಬಂದಿಲ್ಲ. ಕೇವಲ ಭೇಟಿಗಾಗಿ ಬಂದಿದ್ದೇನೆ. ಇಲ್ಲಿ ಯಾವೆಲ್ಲ ಸಮಸ್ಯೆಗಳಿವೆ ಎಂಬುದನ್ನು ಪರಿಶೀಲನೆ ಮಾಡಲು ಬಂದಿದ್ದೇನೆ. ಇಲ್ಲಿನ ಕೈದಿಗಳು ಅಂತಹ ದೊಡ್ಡ ಸಮಸ್ಯೆಗಳನ್ನೇನೂ ಹೇಳಿಲ್ಲ. ಆದರೆ, ಇಲ್ಲಿ ವೈದ್ಯರ ಸಮಸ್ಯೆ ಇದೆ. ಇಲ್ಲಿ ಕಾಯಂ ವೈದ್ಯರಿಲ್ಲ. ಕಳೆದ ತಿಂಗಳಷ್ಟೇ ಇಲ್ಲಿ ಓರ್ವ ಕೈದಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾರಾಗೃಹದಲ್ಲಿ ಕೈದಿಗಳಿಗೆ ಮಾನಸಿಕ ಒತ್ತಡ ಹೆಚ್ಚಾಗಿ ಇರುತ್ತದೆ. ಅದನ್ನು ಕಡಿಮೆ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದರು. ಇಲ್ಲಿ ಓದಲು ಇಚ್ಛಿಸುವ ಕೈದಿಗಳಿಗೆ ಓದುವ ವ್ಯವಸ್ಥೆ ಕಲ್ಪಿಸುವ ಚಿಂತನೆ ನಡೆದಿದೆ. ಮಾದಕ ವಸ್ತು ಮತ್ತು ಮೊಬೈಲ್ ಹಾವಳಿ ಕಾರಾಗೃಹದಲ್ಲಿ ಜೋರಾಗಿರುತ್ತದೆ. ಇದನ್ನು ತಪ್ಪಿಸುವ ಉದ್ದೇಶ ಮತ್ತು ಪ್ರಯತ್ನ ನಮ್ಮದಾಗಿದೆ. ಹೊಸದಾಗಿ ಕಾರಾಗೃಹಕ್ಕೆ ಬರುವ ಕೈದಿಗಳ ನಾರ್ಕೋಟಿಕ್ ಟೆಸ್ಟ್ ಕೂಡ ಮಾಡುತ್ತಿದ್ದೇವೆ. ಜೈಲಿನ ಒಳಗಡೆ ಇರುವ ಕೈದಿಗಳನ್ನೂ ತಪಾಸಣೆ ಮಾಡುತ್ತಿದ್ದೇವೆ. ಮೊದಲ ಬಾರಿ ಅಪರಾಧ ಮಾಡಿದ ಕೈದಿಗಳಿಗಾಗಿ ಪ್ರತ್ಯೇಕ ಸೆಲ್ ಮಾಡಿದ್ದೇವೆ. ಇಲ್ಲಿ ಜಾಮರ್ ವ್ಯವಸ್ಥೆ ಇದೆ. ಆದರೆ, ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂಬ ದೂರು ಸಹ ಕೇಳಿ ಬಂದಿವೆ. ಆ ಸಮಸ್ಯೆ ಆಗದಂತೆ ಪ್ರಯತ್ನ ಮಾಡುತ್ತೇವೆ ಎಂದರು. ಈ ಕಾರಾಗೃಹ ಶಹರದ ಮಧ್ಯೆ ಭಾಗದಲ್ಲೇ ಇರುವುದರಿಂದ ಜಾಮರ್ ಸಮಸ್ಯೆ ಆಗುತ್ತಿದೆ. ಈ ಸಮಸ್ಯೆ ಕಡಿಮೆ ಮಾಡಲು ನಾವು ಪ್ರಯತ್ನಿಸುತ್ತೇವೆ. ಧಾರವಾಡದ ಈ ಜೈಲಿನಲ್ಲಿ ಹೆಚ್ಚು ಕೈದಿಗಳು ಇಲ್ಲ. ಬೆಂಗಳೂರು, ಕೋಲಾರ ಹಾಗೂ ಕಲಬುರ್ಗಿ ಜಿಲ್ಲೆಯಲ್ಲಿ ಹೆಚ್ಚುವರಿ ಕೈದಿಗಳಿದ್ದಾರೆ. ಜೈಲಿನಲ್ಲಿ ಹಲ್ಲೆ ಮತ್ತು ಕಿಡಿಗೇಡಿತನ ಮಾಡಿದ ಕೈದಿಗಳನ್ನು ಬೇರೆ ಕಡೆಯೂ ನಾವು ವರ್ಗಾವಣೆ ಮಾಡುತ್ತೇವೆ ಎಂದರು.1
- ನಾವು ಭೂಮಿ ಪೂಜೆ ಮಾಡಿ ಹೋಗುವ ಗಿರಾಕಿಗಳು ಅಲ್ಲ : ಮಾಜಿ ಶಾಸಕ ಬಸವರಾಜ್ ದಡೆಸಗೂರು ವಿರುದ್ಧ ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ #ಕೊಪ್ಪಳ #koppal #karatagi #ಕಾರಟಗಿ #kanakagiri #ಕನಕಗಿರಿ #ಬಸವರಾಜ_ದಡೆಸಗೂರು #ಶಿವರಾಜ_ತಂಗಡಗಿ #ಗಂಗಾವತಿ #Gangavati #ಕುಕನೂರು #ಯಲಬುರ್ಗಾ #ಕುಷ್ಟಗಿ #mla1
- Post by User52941
- ತುಮಕೂರು ನಗರ ಪಾಲಿಕೆ ಮತ್ತು ಶಾಸಕರ ವಿರುದ್ಧ ಜನಕ್ರೋಶ1
- ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಹಿಂದೂ ಸೇವಾ ಟ್ರಸ್ಟ್ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತೋತ್ಸವದ ಅಂಗವಾಗಿ ೧೦೦೦ ಕ್ಕೂ ಹೆಚ್ಚು ಬೈಕ್ ರ್ಯಾಲಿ ಫೆಬ್ರುವರಿ ೧೯ ಗುರುವಾರ ಬೆಳಗ್ಗೆ ೧೦ ಗಂಟೆಗೆ ನಡೆಯಿತು. ಬೈಕ್ ರ‍್ಯಾಲಿ ಚಂದ್ರಶೇಖರ್ ಅಜಾದ್ ಸರ್ಕಲ್‌ದಿಂದ ಆರಂಭವಾಗಿ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು. ಛತ್ರಪತಿ ಶಿವಾಜಿ ಮಹಾರಾಜರ ಘೋಷಣೆಗಳು ಮುಳುಗಿದವು. ರ‍್ಯಾಲಿಯಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರ ಪುತ್ರ ರಾಜುಗೌಡ ಪಾಟೀಲ, ಹಿಂದೂ ಸೇವಾ ಟ್ರಸ್ಟ್ ಪದಾಧಿಕಾರಿಗಳಾದ ಪ್ರದೀಪ ಅಮರಣ್ಣನವರ, ಪರಶುರಾಮ ಬಿಸಲದಿನ್ನಿ, ಎಂ.ಆರ್.ಪಾಟೀಲ ಸೇರಿದಂತೆ ಛತ್ರಪತಿ ಶಿವಾಜಿ ಮಹಾರಾಜರ ಅಭಿಮಾನಿಗಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.1
- Post by TUFAIL,,PASHA,,KOLAR.NEWS2
- ದಾವಣಗೆರೆ : ನಗರ ದೇವತೆ ದುಗ್ಗಮ್ಮ ಜಾತ್ರೆ ಫೆ22 ರಂದು ನಡೆಯಲಿದ್ದು, ರೌಡಿಶೀಟರ್ ಗಳಿಗೆ ಎಸ್ಪಿ ತೆಕ್ಕಣನವರ್ ಎಚ್ಚರಿಕೆ ನೀಡಿದರು. ದುಗ್ಗಮ್ಮ ದೇವಸ್ಥಾನ ಹಳೆ ಭಾಗದಲ್ಲಿ ಇದ್ದು, ಈ ಭಾಗದಲ್ಲಿಯೇ ಕೆಲ ದಿನಗಳ ಹಿಂದೆ ಕೈ ಮುಖಂಡ ಅಯ್ಯೂಬ್ ಪೈಲ್ವಾನ್ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿತ್ತು. ಅಲ್ಲದೇ ಆಜಾದ್ ನಗರ ಭಾಗದಲ್ಲಿ ಗಣಪತಿ ವಿಸರ್ಜನೆ ವೇಳೆ ಘರ್ಷಣೆ ನಡೆದಿತ್ತು..ಈ ಎಲ್ಲ ಕಾರಣಗಳಿಂದ ರೌಡಿ ಶೀಟರ್ ಮನೆಗಳಿಗೆ ಡಿಎಸ್ಪಿ ಹಾಗೂ ಸಿಪಿಐ ಉಮೇಶ್ ಸೇರಿದಂತೆ ಇತರ ಸಿಬ್ಬಂದಿಗಳು ಭೇಟಿ ನೀಡಿ ಎಚ್ಚರಿಕೆ ನೀಡಿದರು.4
- ಕಾರಟಗಿ ಫೆ18: ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ 7 ಕೋಟಿ 62 ಲಕ್ಷ ರೂಗಳ ವೆಚ್ಚದ ವಿವಿಧ ಕಾಮಗಾರಿಗಳಿಗೆ ಸಚಿವ ಶಿವರಾಜ ತಂಗಡಗಿಯವರು ಬುಧವಾರ ಭೂಮಿ ಪೂಜೆ ನಡೆಸಿದರು. ಬಳಿಕ ಸಚಿವ ತಂಗಡಗಿಯವರು ಮಾತನಾಡಿ ಕಾರಟಗಿ ಪಟ್ಟಣದ ಕನಕದಾಸ ವೃತ್ತದಿಂದ ಬೂದಗುಂಪ ಗ್ರಾಮದವರೆಗೆ ಡಾಂಭರಿಕರಣ ರಸ್ತೆ ನಿರ್ಮಿಸಲು ಉದ್ದೇಶಿಸಿದ್ದು ಈ ನಿಟ್ಟಿ ರಸ್ತೆಯ ಇಕ್ಕೆಲಗಳಲ್ಲಿ ಒತ್ತುಮೆಯಾದ ರಸ್ತೆಯನ್ನು ತೆರವುಗೊಳಿಸಿ 5 ಕೋಟಿ ರೂಗಳಲ್ಲಿ ಸೂಕ್ತ ರಸ್ತೆ ನಿರ್ಮಿಸಲಾಗುವುದು. ಬೂದಗುಂಪ ರಸ್ತೆ ನಿತ್ಯ ಜನದಟ್ಟೆಯಿಂದ ಕೂಡಿರುತ್ತಿದೆ. ಆದ್ದರಿಂದ ಒತ್ತುವರಿ ಜಾಗವನ್ನು ಮೊದಲು ತೆರವುಗೊಳಿಸಿ ಡಾಂಬರ ರಸ್ತೆ ನಿರ್ಮಾಣವಾಗಲಿದೆ. ಅಲ್ಲದೆ ಈ ರಸ್ತೆಯ ಆಸುಪಾಸಿನಲ್ಲಿ ಕನಕದಾಸ ವೃತ್ತದಿಂದ ರೈಲ್ವೆ ಬ್ರಿಡ್ಜ್ ನ ಬಳಿಯವರೆಗೂ ಬೀದಿ ದೀಪಗಳನ್ನು ಅಳವಡಿಸಲಾಗುವುದು. ಈ ನಿಟ್ಟಿನಲ್ಲಿ ರಸ್ತೆ ಕಾಮಗಾರಿವೇಳೆ ಸಾರ್ವಜನಿಕರು, ವರ್ತಕರು ಕಾಮಗಾರಿ ನಡೆಯುವಾಗ ಸಹಕಾರ ನೀಡಿ ಸುಸಜ್ಜಿತ ರೈತೆ ನಿರ್ಮಾಣಕ್ಕೆ ಅನುವು ಮಾಡಿ ಕೊಡಬೇಕು. ಹಾಗೂ ಕ್ಷೇತ್ರದ ಬೇವಿನಾಳ ಗ್ರಾಮದಿಂದ ಮೈಲಾಪೂರ ಹಳೆ ರಸ್ತೆವರೆಗೆ ಡಾಂಬರೀಕರಣಕ್ಕೆ. ಬೂದಗುಂಪ ಗ್ರಾಮದ ಸ.ಹಿ.ಪ್ರಾ.ಶಾಲೆಯ ಒಂದು ಕೊಠಡಿ ನಿರ್ಮಾಣಕ್ಕೆ ಕಕ್ಕರಗೋಳ ಗ್ರಾಮದ ಅಂಬಣ್ಣ ನವರ ಮನೆಯಿಂದ ಉದ್ಯಾನಪ್ಪ ನವರ ಮನೆಯವರೆಗೆ ಸಿಸಿ ರಸ್ತೆ, ಮರಳಿ ಗ್ರಾಮದ ಆರ್.ಜಿ.ಮು.ಬೈ ರಸ್ತೆಯಿಂದ ಸರಕಾರಿ ಪ್ರೌಢಶಾಲೆ ವರೆಗೆ ಸಿಸಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸಲಾಗಿದೆ. ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ತಂಗಡಗಿ ಬಿಜೆಪಿ ಯವರು ತಂದಿರುವ ಯಾವ ಕಾಮಗಾರಿಗೂ ನಾನು ಇವರೆಗೂ ಒಂದು ಕೆಲಸಕ್ಕೂ ಭೂಮಿ ಪೂಜೆ ನಡೆಸಿಲ್ಲಾ, ಮುಂದೆಯೂ ನಡೆಸುವುದಿಲ್ಲಾ. ನನ್ನ ಅಧಿಕಾರವಧಿಯಲ್ಲಿ ಮಂಜೂರಾದ ಕೆಲಸಗಳಿಗೆ ಗ್ರಾಂಟ್ ತಂದು ಬಹಳಷ್ಟು ಕೆಲಸಗಳಿಗೆ ನಾನೆ ಭೂಮಿ ಪೂಜೆ ನಡೆಸಿದ್ದೆನೆ. ಅವರು ತಂದ ಕೆಲಗಳನ್ನು ಅವರೇ ಮಾಡಲಿ.ಆರ್‌ಜಿ ರಸ್ತೆಯ ಆಗಲಿಕರಣಹಾಗೂಡಿವೈಡರ್‌ನಿರ್ಮಾಣ ಕಾಮಗಾರಿಗೆ ಗ್ರಾಂಟ್ ತೆಗೆದಿಟ್ಟ ಬಳಿಕ ಒತ್ತುವರಿ ತೆರವುಗೊಳಿಸಿ ರಸ್ತೆ ಅಗಲೀ ಕರಣ ಕಾಮಗಾರಿ ನಡೆಸಲಾಗುವುದು. ನಾವು ಯಾವಾಗಲೂ ಪೂಜಾ ಮಾಡಿ ಹೋಗೊ ಗಿರಾಕಿಯಲ್ಲಾ, ಫೆ. 28 ಕ್ಕೆ ಪುರಸಭೆ ಸಾಮಾನ್ಯ ಸಭೆ ನಡೆಯಲಿದ್ದು ಅಂದು ಪುರಸಭೆ ಸದಸ್ಯರು ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಕುರಿತು ಚರ್ಚೆಇಸಿ ನಿರ್ಧರಿಸುತ್ತಾರೆ ಬಳಿಕ ಸ್ಥಾಯಿ ಸಮಿತಿ ಅಧ್ಯಕ್ಷ ಘೋಷಣೆ ಮಾಡಲಾಗುವುದು ಎಂದರು. ಇದಕ್ಕೂ ಮುಂಚೆ ಸಚಿವರು ಬೂದಗುಂಪ ರಸ್ತೆ ಅಗಲಿಕರಣಕ್ಕೆ ತಾವೇ ಖುದ್ದು ರಸ್ತೆಯದ್ದಕ್ಕೂ ಅಧಿಕಾರಿಗಳೊಂದಿಗೆ ಸಂಚರಿಸಿ ವೀಕ್ಷಣೆ ಮಾಡಿ ಆಕ್ರಮಿತ ರಸ್ತೆ ತೆರವುಗೊಳಿಸಲು ಅಧಿಕಾರಿಗಳಿಗೆ ಖಡಕ್ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಶರಣೆಗೌಡ ಪೊ.ಪಾಟೀಲ್, ರುದ್ರಗೌಡ ನಂದಿಹಳ್ಳಿ, ಕೆ.ಶಿದ್ಧನಗೌಡ, ಶೀಧರಗೌಡ ಮಾ.ಪಾ. ಶಿವರೆಡ್ಡಿ ನಾಯಕ, ಶರಣೆ ಗೌಡ ಕೊಂತನೂರ, ವಿಜಯಕುಮಾರ ಕೊಲ್ಕಾರ, ರೆಡ್ಡಿಶ್ರೀನಿವಾಸ್, ನಾಗರಾಜ ಅರಳಿ, ಶರಣಪ್ಪ ಪರಕಿ, ಅಯ್ಯಪ್ಪ ಉಪ್ಪಾರ, ಉದಯ ಈಡಿಗೇರ, ಲೋಕೋಪಯೋಗಿ ಇಲಾಖೆ ಅಭಿಯಂತರ ವಿಶ್ವನಾಥ ಜೆ, ಈಶಪ್ಪ ಇಟ್ಟಂಗಿ, ದೊಡ್ಡಬಸಮಾಜ ಬೂದಿ. ಶರಣಪ್ಪ ಸಂಗಟಿ, ಚಂದ್ರು ನಾಗೇನಹಳ್ಳಿ ಶರಣಪ್ಪ ಹೂಗಾರ, ನಾಗರಾಜ ಈಡಿಗೇರ, ಅರ್ಚಕ ನಾಗಭೂಷಣ ಸ್ವಾಮಿ, ಶಿವಕುಮಾರ ಭಜಾರ್, ಸಾಗರ್ ಕುಲಕರ್ಣಿ, ಸೇರಿದಂತೆ ಪಕ್ಷದ ಮತ್ತಿತರರು ಇದ್ದರು.4