Shuru
Apke Nagar Ki App…
ರೋಣ ಪಟ್ಟಣದ ಅಗ್ನಿಶಾಮಕ ದಳ ಕಚೇರಿಯಲ್ಲಿ ನೂತನ ಎರಡು ಅಗ್ನಿಶಾಮಕ ದಳ ವಾಹನಗಳಿಗೆ ಚಾಲನೆ ಗದಗ ಜಿಲ್ಲೆಯ ರೋಣ ಪಟ್ಟಣದ ಅಗ್ನಿಶಾಮಕ ದಳ ಕಚೇರಿಯಲ್ಲಿ ಶನಿವಾರ ಒಂದು ಕೋಟಿ 40 ಲಕ್ಷ ರೂಪಾಯಿ ಅನುದಾನದಡಿ ನೂತನ ಎರಡು ಅಗ್ನಿಶಾಮಕ ದಳ ವಾಹನಗಳಿಗೆ ಶಾಸಕ ಜಿ ಎಸ್ ಪಾಟೀಲ್ ಚಾಲನೆ ನೀಡಿದರು, ಈ ಸಂದರ್ಭದಲ್ಲಿ ಅಗ್ನಿಶಾಮಕ ದಳ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಾರ್ವಜನಿಕರು ಪಾಲ್ಗೊಂಡಿದ್ದರು, ಇದೇ ಸಂದರ್ಭದಲ್ಲಿ ಶಾಸಕ ಜಿ ಎಸ್ ಪಾಟೀಲ್ ಅವರನ್ನು ಇಲಾಖೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು
ಚಂದ್ರು ನೆಲ್ಲೂರ
ರೋಣ ಪಟ್ಟಣದ ಅಗ್ನಿಶಾಮಕ ದಳ ಕಚೇರಿಯಲ್ಲಿ ನೂತನ ಎರಡು ಅಗ್ನಿಶಾಮಕ ದಳ ವಾಹನಗಳಿಗೆ ಚಾಲನೆ ಗದಗ ಜಿಲ್ಲೆಯ ರೋಣ ಪಟ್ಟಣದ ಅಗ್ನಿಶಾಮಕ ದಳ ಕಚೇರಿಯಲ್ಲಿ ಶನಿವಾರ ಒಂದು ಕೋಟಿ 40 ಲಕ್ಷ ರೂಪಾಯಿ ಅನುದಾನದಡಿ ನೂತನ ಎರಡು ಅಗ್ನಿಶಾಮಕ ದಳ ವಾಹನಗಳಿಗೆ ಶಾಸಕ ಜಿ ಎಸ್ ಪಾಟೀಲ್ ಚಾಲನೆ ನೀಡಿದರು, ಈ ಸಂದರ್ಭದಲ್ಲಿ ಅಗ್ನಿಶಾಮಕ ದಳ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಾರ್ವಜನಿಕರು ಪಾಲ್ಗೊಂಡಿದ್ದರು, ಇದೇ ಸಂದರ್ಭದಲ್ಲಿ ಶಾಸಕ ಜಿ ಎಸ್ ಪಾಟೀಲ್ ಅವರನ್ನು ಇಲಾಖೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು
More news from Bagalkote and nearby areas
- ಬಾಗಲಕೋಟೆ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪರ ಸಿಎಂ ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರ ಅಂಗವಾಗಿ ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಅವರ ಮಾತಿನಲ್ಲಿ ಸತ್ಯವಿಲ್ಲ ಹಾಗೂ ಹೇಳಿದಂತೆ ನಡೆದುಕೊಳ್ಳುತ್ತಿಲ್ಲವಾದ್ದರಿಂದ ಅವರ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡಲಿಚ್ಚಿಸುವುದಿಲ್ಲ ಎಂದು ಹೇಳಿದರು. ಬಾಗಲಕೋಟೆ ಕ್ಷೇತ್ರದಲ್ಲಿ ಬಿಜೆಪಿ ಸೋಲುತ್ತಿದೆ ಎಂಬ ಭಯದಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದರು.1
- ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ನೀರಿನ ವಿಚಾರವಾಗಿ ಶುರುವಾದ ಗಲಾಟೆ ವಿಕೋಪಕ್ಕೆ ಹೋಗಿ ಕೈ ಕೈ ಮಿಗಿಲಾಯಿಸಿ ಮುಂಡರಗಿ ಪೊಲೀಸ್ ಠಾಣಾ ಮೆಟ್ಟಿಲೇರಿದೆ ಎರಡು ಸಮುದಾಯದ ನಡುವೆ ನಡೆದ ಗಲಾಟೆಯಲ್ಲಿ ಗಾಯ ಗೊಂಡವರು ಗದಗ ಜಿಲ್ಲಾ ಆಸ್ಪತ್ರೆ ಮತ್ತು ಮುಂಡರಗಿ ತಾಲೂಕ ಆಸ್ಪತ್ರೆ ಯಲ್ಲಿ ಚಿಕಿಸ್ತೆ ಪಡೆಯುತ್ತಿದ್ದಾರೆ1
- ಮೂಲಭೂತ ಸೌಕರ್ಯ ಒದಗಿಸಲು ಆಗ್ರಹಿಸಿ ಗ್ರಾಮಸ್ಥರು ಮತ್ತಿಗಟ್ಟಿ ಗ್ರಾಮ ಪಂಚಾಯಿತಿ ಕೀಲಿ ಮುರಿದು ಗುರುವಾರ ಆಕ್ರೋಶ ಹೊರಹಾಕಿದ್ದಾರೆ. ಮತ್ತಿಗಟ್ಟಿ ಗ್ರಾಮ ಪಂಚಾಯತಿಯಿಂದ ಯಾವುದೇ ಮೂಲಭೂತ ಸೌಕರ್ಯ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಕುಂದಗೋಳ ತಾಲ್ಲೂಕಿನ ಮತ್ತಿಗಟ್ಟಿ ಗ್ರಾಮ ಪಂಚಾಯಿತಿಯಿಂದ ಗ್ರಾಮಕ್ಕೆ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳನ್ನು ನೀಡುತ್ತಿಲ್ಲ, ಪಂಚಾಯತ ವತಿಯಿಂದ ಅನುದಾನ ಇಲ್ಲ, ಇದಕ್ಕೆ ಗ್ರಾಮ ಪಂಚಾಯತಿ ಪಿಡಿಓ ನಿರ್ಲಕ್ಷ್ಯ ಸಹ ಇದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ . ಮೂಲ ಭೂತ ಸೌಕರ್ಯಗಳನ್ನ ನೀಡದ ಪಂಚಾಯತ ಅಧಿಕಾರಿಗಳ ಮೇಲೆ ಕ್ರಮ ಆಗಬೇಕು. ತಕ್ಷಣವೇ ಎಲ್ಲಾ ಸೌಕರ್ಯ ನೀಡಬೇಕು ಎಂದು ಒತ್ತಾಯಿಸಿದರು.1
- ಶಿಗ್ಗಾವಿ ಸವಣೂರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಾಸೀರ್ ಖಾನ್ ಪಠಾಣ, ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಬಾರಿ ದಾವಣಗೆರೆ ಉಪ ಚನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಗೆಲುವು ನಿಶ್ಚಿತ ಎಂದು ಹೇಳಿದರು,1
- ll ಸಾರ್ವಜನಿಕ ಹನುಮಾನ ಮಂದಿರ ಹಾಗೂ ಜಮಖಂಡಿ ರಸ್ತೆ, ಅಂಬೇಡ್ಕರ್ ನಗರ ಹಾಗೂ ವಿವಿಧ 9 ಹನುಮಾನ್ ಮಂದಿರಗಳಲ್ಲಿ ಹೂವು ತರಿಳು ತೋರಣಗಳಿಂದ ಅಲಂಕರಿಸಿ ಬಾಲ ಹನುಮನನ್ನು ತೊಟ್ಟಿಲಲ್ಲಿ ಹಾಕಿ ನಾಮಕರಣ ಮಾಡಿ ಆಚರಣೆ ಮಾಡಿದರು. ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ಭಕ್ತರು ದಿನಪೂರ್ತಿ ಹನುಮಂತನ ದರ್ಶನ ಪಡೆದು, ಸಕಲ ಜೀವಿಗಳ ಕಲ್ಯಾಣಕ್ಕಾಗಿ ವಿಶೇಷ ಪೂಜೆಗಳನ್ನು ಸಲ್ಲಿಸಿ, ವಿವಿಧ ಅರ್ಪಣೆಗಳನ್ನು ಮಾಡುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಂಡರು. ಹೋಮ-ಹವನ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಜಮಖಂಡಿ ರಸ್ತೆಗಿರುವ ಹನುಮಾನ್ ಮಂದಿರದಲ್ಲಿ ಮಧ್ಯಾಹ್ನ ಸಹಸ್ರಾರು ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ 6ಗಂಟೆಗೆ ಎಲ್ಲ ಹನುಮಾನ್ ಮಂದಿರಗಳು ಹಾಗೂ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಸಮಸ್ತ ಹನುಮ ಭಕ್ತರಿಂದ ಹನುಮಾನ್ ಮೂರ್ತಿ ಪಲ್ಲಕ್ಕಿ, ಹನುಮಾನ್ ಹಾಗೂ ಶ್ರೀರಾಮನ ಭವ್ಯ ಭೃಹತ್ ಪ್ರತಿಮೆಗಳನ್ನು ಜಮಖಂಡಿ ರಸ್ತೆಗಿರುವ ಹನುಮಾನ್ ಮಂದಿರದಿಂದ ಪೂಜೆ ಸಲ್ಲಿಸುವ ಮೂಲಕ ಸಾಂಸ್ಕೃತಿಕ ಸಂಭಳ ವಾದ್ಯ ಹಾಗೂ ಹಲಗೆ ಲೇಜೀಮ ವಾದ್ಯಗಳೊಂದಿಗೆ ಪವನಪುತ್ರ ಹನುಮಾನಕಿ, ಜೈ ಶ್ರೀರಾಮ್ ಘೋಷಣೆ ಕೂಗುತ್ತ ಕೇಸರಿ ಧ್ವಜಗಳನ್ನು ರಾರಾಜಿಸುತ್ತ, ಪಟಾಕಿಗಳನ್ನು ಸಿಡಿಸುತ್ತ ಮೆರವಣಿಗೆಯು ರೇಲ್ವೆ ಮೇಲ್ಸೆತುವೆ, ಕರ್ನಾಟಕ ವೃತ್ತ ಮಾಸಾಬಿ ವೃತ್ತ, ಡಿಸಿಸಿ ಬ್ಯಾಂಕ್ ರೈಲು ನಿಲ್ದಾಣ ಬೆಲ್ಲದ ಕಾರ್ನರ್ ಮೂಲಕ ಸಾರ್ವಜನಿಕ ಹನುಮಾನ ಮಂದಿರಕ್ಕೆ ತಲುಪಿತು. ಈ ಸಂದರ್ಭದಲ್ಲಿ ಸಾರ್ವಜನಿಕ ಹನುಮಾನ ಮಂದಿರ ಅರ್ಚಕರಾದ ದಯಾನಂದ ಮಠಪತಿ, ಲಕ್ಷಟ್ಟಿ ತೇಲಿ, ಸಿದ್ಧಾನಿ ಸಣ್ಣಕ್ಕಿ,ಜಯಕುಮಾರ ಸನದಿ, ಶ್ರೀಮಾನ್ ನಾಯಿಕ, ಸದಾಶಿವ ಗಿಣಿಮೂಗೆ, ಪ್ರದೀಪ್ ಭಾವಿ, ಶೇಖರ್ ದಳವಾಯಿ, ಶಿವಾನಂದ ಲಖ್ಖನಗಾವ, ಯಲ್ಲಪ್ಪ ವಡ್ಡರ, ಡಾ.ಸಚಿನ ಮನಗುತ್ತಿ, ಅಮೀತ ನಾಯಿಕ, ಪ್ರೇಮ ಗುಪ್ತೆ, ಜಗ್ಗು ಮಂಗಸೂಳಿ, ಶೀತಲ ಲೋಹಾರ,ಕಾರ್ತಿಕ ರಾಜಮಾನೆ, ಚೇತನ್ ಸುತಾರ, ವರ್ಧಮಾನ ಶೆಟ್ಟಿ, ಸಚೀನ ತೇಲಿ, ಆನಂದ ಸಣ್ಣಕ್ಕಿ, ಪ್ರಕಾಶ್ ದಾವಣೆ, ನಾಗೇಶ ಕೌಲಗುಡ್ಡ, ಕೃಷ್ಣಾ ರೆಡ್ಡಿ ಸರ್ವ ಹನುಮಾನ್ ಭಕ್ತರು ಭಾಗಿಯಾಗಿದ್ದರು. ಮೆರಣಿಗೆಗೆ ಪಿಎಸಐ ಪ್ರೀತಮ್ ನಾಯಿಕ ನೇತೃತ್ವದಲ್ಲಿ ಎಎಸಐ ಇಂಚಲ, ಬಾನಪ್ಪಾ ಖೋತ, ಪೈಗಂಬರ್ ಗಡ್ಡೇಕರ,ಎಂ.ಬಿ.ಪಾಟೀಲ ಸೂಕ್ತ ಬಂದುಬಸ್ತಿ ಒದಗಿಸಿದ್ದರು.2
- ಕೆ ಬೆಳಗಾವಿ ಜಿಲ್ಲೆಯ ಚೆನ್ನಮ್ಮನ ಕಿತ್ತೂರು ತಾಲೂಕಿನ ಹುಣಸಿಕಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸುವರ್ಣ ಮಹೋತ್ಸವದ ಅಂಗವಾಗಿ ಪತ್ರಿಕಾಗೋಷ್ಠಿ ಕರೆಯಲಾಗಿತ್ತು ಈ ಪತ್ರಿಕಾಗೋಷ್ಠಿಯಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಸ್‌ಡಿಎಂಸಿ ಅಧ್ಯಕ್ಷರು ,ಸರ್ವ ಸದಸ್ಯರು ಊರಿನ ಹಿರಿಯರು, ಶಿಕ್ಷಣ ಪ್ರೇಮಿಗಳು, ಹಳೆಯ ವಿದ್ಯಾರ್ಥಿಗಳು ಹಾಜರಿದ್ದರು. ಇದೇ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಸರ್ಕಾರಿ ಪ್ರೌಢಶಾಲೆ ಹುಣಶೀಕಟ್ಟಿ1
- ಕಪ್ಪತ ಗುಡ್ಡ ದಲ್ಲಿ ವನ್ಯ ಜೀವಿಗಳಿಗೆ ನೀರಿನ ತೊಟ್ಟಿಗಳಲ್ಲಿ ಶೇಕರಿಸುವ ಕಾರ್ಯ ವನ್ನ ಕಪ್ಪತ ಹಿಲ್ಸ್ RFO ಮಂಜುನಾಥ ಮೆಗಲಮನಿ ಅವರು ಮಾಡುತಿದ್ದರೆ ಅರಣ್ಯ ಪ್ರದೇಶ ದಲ್ಲಿ ಅಲ್ಲಲ್ಲಿ ನೀರಿನ ಹೊಂಡ ಗಳನ್ನ ಮಾಡಿ ನೀರು ತುಂಬಿಸುವ ಕೆಲಸ ಮಾಡುತಿದ್ದಾರೆ1
- ಧಾರವಾಡದಲ್ಲಿ ಆಟೊ ಗ್ಯಾಸ್ ಬಂಕ್ ನಲ್ಲಿ ಗ್ಯಾಸ್ ಸಿಗದೇ ಆಟೋ ರಿಕ್ಷಾ ಚಾಲಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೌದು... ಧಾರವಾಡ ನಗರದಲ್ಲಿ ಇರುವ ಎಲ್ಲ ಆಟೋ ಗ್ಯಾಸ್ ಬಂಕ್‌ಗಳು ಬಂದ್ ಆಗಿವೆ. ಇದರ ಮಧ್ಯೆ ರಾಯಾಪುರದಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ನಲ್ಲಿ ಮಾತ್ರ ಆಟೊ ಎಲ್.ಪಿ.ಜಿ ಗ್ಯಾಸ್ ಸಿಗುತ್ತಿದ್ದು, ಇದಕ್ಕಾಗಿ ಆಟೋ ಚಾಲಕರು ಬೆಳಿಗ್ಗೆಯಿಂದಲೇ ಕ್ಯೂ ನಿಂತಿದ್ದಾರೆ. ಧಾರವಾಡ ರಾಯಾಪುರದಲ್ಲಿರುವ ಇಂಡಿಯನ್ ಆಯಿಲ್ ಬಂಕ್‌ನಲ್ಲಿ ಆಟೋ ಎಲ್.ಪಿ.ಜಿ ಸಿಗುತ್ತಿದ್ದು, ಇದಕ್ಕಾಗಿ ಕಿಲೋ ಮೀಟರ್‌ಗಟ್ಟಲೇ ಆಟೊಗಳು ಕ್ಯೂ ನಿಂತಿವೆ. ಇಲ್ಲಿ 94 ರೂಪಾಯಿಗೆ ಒಂದು ಕೆಜಿ ಎಲ್.ಪಿ.ಜಿ ಗ್ಯಾಸ್ ಸಿಗುತ್ತಿದ್ದು, ಇದು ಆಟೊ ಚಾಲಕರಿಗೆ ಹೊರೆಯಾಗಿದೆ. ಈ ಬಂಕ್‌ನಲ್ಲೂ ಗ್ಯಾಸ್ ಖಾಲಿಯಾಗುತ್ತ ಬಂದಿದ್ದು, ಕೇವಲ 40 ಆಟೊಗಳಿಗೆ ಆಗುವಷ್ಟೇ ಗ್ಯಾಸ್ ಇದೆ. ಹೀಗಾಗಿ ಆಟೋ ಚಾಲಕರು ಗ್ಯಾಸ್ ತುಂಬಿಸಿಕೊಳ್ಳಲು ಮುಗಿಬಿದ್ದಿದ್ದು, ಸರ್ಕಾರ ಈ ಸಮಸ್ಯೆ ಬಗೆಹರಿಸಿಕೊಡಬೇಕು ಎಂದು ಆಟೊ ಚಾಲಕರು ಆಗ್ರಹಿಸುತ್ತಿದ್ದಾರೆ.1
- ಅರ್ಜನಾಳ ಗ್ರಾಮದೇವರು ಪಂಚಮುಖಿ ಬಲಭಿಮನ ಜಾತ್ರಾ ನಿಮಿತ್ಯ ಮೊಸರು ಗಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಹನುಮ ಜಯಂತಿಯಂದು ಹನುಮಂತನಿಗೆ ಮೊಸರು ಅಥವಾ ಮೊಸರಿನಿಂದ ಮಾಡಿದ ಬೂಂದಿ/ಪಾಯಸ ಅರ್ಪಿಸುವುದು ಅತ್ಯಂತ ಪವಿತ್ರವೆಂದು ಝಳಕಿ ಗ್ರಾಮದ ವಿಜಯಪುರ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷರು ರಾಘವೇಂದ್ರ ಕಾಪಸೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು ಬಲಭಿಮ ದೇವಸ್ಥಾನದ ಪೂಜಾರಿ ಸಾಜಾನಂದ ಪೂಜಾರಿ ಮಾತನಾಡಿ ಮೊಸರು ಹನುಮನ ತಂಪಾದ ಮತ್ತು ಶಾಂತ ಸ್ವಭಾವವನ್ನು ಸಂಕೇತಿಸುತ್ತದೆ ಎಂದರು.1