*ಕುದಾಪುರ ಇಂಜಿನಿಯರಿಂಗ್ ವಿದ್ಯಾರ್ಥಿ ಪಿ.ವಿವೇಕಾನಂದ ಸಾವು : ಇಡೀ ಊರಿಗೆ ಊರು ಕಂಬನಿ* ನಾಯಕನಹಟ್ಟಿ-:ಸಮೀಪದ ಎನ್ ಮಹದೇವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುದಾಪುರ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಎಂ. ಪಾಲಯ್ಯ ಶಾರದಮ್ಮ ದಂಪತಿಯ ಪುತ್ರ ಪಿ. ವಿವೇಕಾನಂದ ಕಳೆದ ಮೂರ್ನಾಲ್ಕು ವರ್ಷಗಳಿಂದ ಅನಾರೋಗ್ಯ ಕಾಯಿಲೆ ರೋಗದಿಂದ ಬಳಲುತ್ತಿದ್ದ ಪಿ. ವಿವೇಕಾನಂದ ಅನಾರೋಗ್ಯದಿಂದ ಸಾವನ್ನಪ್ಪಿದ್ದು ಯುವಕನ ಸಾವಿಗೆ ಕುದಾಪುರ ಗ್ರಾಮದಲ್ಲಿ ನೀರವ ಮೌನದ ಕಾರ್ಮೋಡ ಕವಿದಿದೆ.ಗ್ರಾಮಕ್ಕೆ ಕೀರ್ತಿ ತರುವ ನಿರೀಕ್ಷೆ ಇಟ್ಟಿದ್ದ ಪಿ. ವಿವೇಕಾನಂದ ಅಗಲಿಕೆಗೆ ಗ್ರಾಮಸ್ಥರು ಕ್ಯಾಂಡಲ್ ಹಿಡಿದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ಕೆ.ಜಿ ಪ್ರಕಾಶ್ ಮಾತನಾಡಿ, ಜೀವನದಲ್ಲಿ ಸಾಧಿಸುವ ಚಲದಿಂದ ಬೆಂಗಳೂರಿನ ಸಪ್ತಗಿರಿ ಕಾಲೇಜಿನಲ್ಲಿ ಆರ್ಟಿಫಿಶಿಯಲ್ ಇಂಜಿನಿಯರಿಂಗ್ ಮಾಡುತ್ತಿದ್ದ ಕುದಾಪುರ ಗ್ರಾಮದ ನಮ್ಮೆಲ್ಲ ನೆಚ್ಚಿನ ಪಿ ವಿವೇಕಾನಂದ ಕಳೆದ ಹಲವು ವರ್ಷಗಳಿಂದ ಹೃದಯ ಸಂಬಂಧ ಕಾಯಿಲೆಗಳಿಂದ ಬಳಲಿ ನಮ್ಮನ್ನು ಬಿಟ್ಟು ಅಗಲಿದ್ದಾನೆ, ಗ್ರಾಮದ ಯುವಕನ ಅಗಲಿಕೆಯು ನಮ್ಮ ಮನೆ ಮಗನನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ. ವಿದ್ಯಾಭ್ಯಾಸ ಮಾಡಿ ಊರಿಗೆ ಕೀರ್ತಿ ತಂದು ಕೊಟ್ಟು ಇಂದಿನ ಪೀಳಿಗೆಗೆ ಮಾದರಿಯಾಗಿರಬೇಕಾದ ಯುವಕ ವಯಸ್ಸಲ್ಲದ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿರುವುದು ತುಂಬಾ ದುಃಖಕರ ಸಂಗತಿಯಾಗಿದೆ, ದೇವರು ಅವರ ಕುಟುಂಬಕ್ಕೆ ನೋವು ತುಂಬುವ ಶಕ್ತಿ ನೀಡಲಿ, ಗ್ರಾಮದ ಅಚ್ಚುಮೆಚ್ಚಿನ ಯುವಕನನ್ನು ಕಳೆದುಕೊಂಡಿದ್ದು ತುಂಬಾ ದುಃಖ ತಂದಿದೆ ಎಂದರು. ಪಶು ಸಂಗೋಪನೆ ಇಲಾಖೆ ಅಧೀಕ್ಷಕರು ಎಂ.ಬಿ. ಸತೀಶ್ ಮಾತನಾಡಿ , ಕುದಾಪುರ ಗ್ರಾಮಸ್ಥರ ಪ್ರೀತಿಗೆ ಪಾತ್ರರಾಗಿದ್ದ ಗ್ರಾಮದ ನೆಚ್ಚಿನ ಯುವಕ ವಿವೇಕಾನಂದ ಹೆಸರಿಗೆ ತಕ್ಕಂತೆ ಸುಸಂಸ್ಕೃತದಿಂದ ಬೆಳೆದಂತಹ ಹುಡುಗ, ಆದರೆ ಅನಾರೋಗ್ಯದ ಕಾರಣ ನಮ್ಮೆಲ್ಲರನ್ನು ಬಿಟ್ಟು ಹೋಗಿರುವುದು ಇಡೀ ಗ್ರಾಮಕ್ಕೆ ಶೋಕ ತಂದಿದೆ, ವಿದ್ಯಾಭ್ಯಾಸದಲ್ಲಿ ಯಶಸ್ಸಿನ ಪಯಣ ಸಾಗಿಸುತ್ತಾ ಜೀವನದಲ್ಲಿ ಏನಾದರೂ ಸಾಧನೆ ಮಾಡುವ ಹಂಬಲ ಹೊಂದಿದ್ದ ಯುವಕನನ್ನು ಕಳೆದುಕೊಂಡಿರುವುದರಿಂದ ಗ್ರಾಮದ ಪ್ರತಿಯೊಬ್ಬರು ಕಂಬನಿ ಮಿಡಿಯುತ್ತಿದ್ದಾರೆ. ಇಂತಹ ಯುವಕನನ್ನು ಕಳೆದುಕೊಂಡಿರುವುದು ನಿಜಕ್ಕೂ ಕೂಡ ನಮ್ಮ ಗ್ರಾಮದ ದೌರ್ಭಾಗ್ಯ, ಯುವಕನ ಆತ್ಮಕ್ಕೆ ಶಾಂತಿ ಸಿಗಲಿ,ವಿವೇಕಾನಂದನ ಕುಟುಂಬಕ್ಕೆ ದೇವರು ನೋವು ಭರಿಸುವ ಶಕ್ತಿ ನೀಡಲಿ ಎಂದರು. ಈ ವೇಳೆ ಸಮಸ್ತ ಕುದಾಪುರ ಗ್ರಾಮಸ್ಥರು ಇದ್ದರು.

- ಬ್ಯಾನರ್ ಪಾಲಿಟಿಕ್ಸ್ ಯುವಕ ಬಲಿ.ಪೋಲೀಸರಿಂದ ಲಾಠಿ ಚಾರ್ಜ್..1
- ಚಿಕ್ಕಬಳ್ಳಾಪುರ ನೂತನ ಜಿಲ್ಲಾಧಿಕಾರಿಯಾಗಿ ಜಿ.ಪ್ರಭು ಅಧಿಕಾರ ಸ್ವೀಕಾರ! ಪಿ.ಎನ್. ರವೀಂದ್ರ ಅವರು ನೂತನ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ!1
- *ಭಾರತ ನಲ್ಲಿ ವೈರಲ್*1
- ಹೊಸ ವರ್ಷದ ಮೊದಲ ದಿನ ರಾಯರ ದರ್ಶನಕ್ಕೆ ಭಕ್ತರು ಮುಗಿಬಿದ್ದಿದ್ದಾರೆ. ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ಮಠಕ್ಕೆ ಭಕ್ತರ ದಂಡೇ ಆಗಮಿಸಿದೆ. ಗುರು ರಾಯರ ವಾರ ಗುರುವಾರವೇ ವರ್ಷದ ಮೊದಲ ದಿನ ಬಂದ ಹಿನ್ನೆಲೆ ಪ್ರತಿ ವರ್ಷಕ್ಕಿಂತಲೂ ಎರಡು ಪಟ್ಟು ಭಕ್ತರಿಂದ ರಾಯರ ಮಠ ತುಂಬಿ ತುಳುಕುತ್ತಿದೆ. ಹೌದು ಹೊಸ ವರ್ಷದಲ್ಲಿ ಶುಭವಾಗಲಿ ಅಂತ ಬೇಡಿದ ವರ ನೀಡುವ, ಕಲಿಯುಗ ಕಾಮಧೇನು ರಾಘವೇಂದ್ರ ಸ್ವಾಮಿಗಳ ಆಸ್ಥಾನದಲ್ಲಿ ಭಕ್ತ ಸಾಗರವೇ ಹರಿದು ಬಂದಿದೆ. ರಾಯರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಬೆಳಿಗ್ಗೆ ಐದು ಗಂಟೆಯಿಂದಲೇ ರಾಯರ ವೃಂದಾವನ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಮಠದ ಎಲ್ಲಾ ದ್ವಾರಗಳ ಮೂಲಕ ಭಕ್ತರಿಗೆ ಒಳಬರಲು ಅವಕಾಶ ನೀಡಲಾಗಿದೆ.1
- ಹನೂರು : ಶಾಲಾ ಸಮಯಕ್ಕೆ ಸರಿಯಾಗಿ ಬಸ್ ಬರುತ್ತಿಲ್ಲ ಎಂದು ವಿದ್ಯಾರ್ಥಿಗಳಿಂದ ಪ್ರತಿಭಟನೆ ನೆಡೆಸಿರುವ ಘಟನೆ ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ಜರುಗಿದೆ ಶಾಲಾ ಸಮಯಕ್ಕೆ ಸರಿಯಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಾಹನಗಳು ಬರುತ್ತಿಲ್ಲ ಎಂದು ಲೊಕ್ಕನಹಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಬಸ್ ಗಳನ್ನು ತಡೆದು ಪೋಷಕರು ಮತ್ತು ಮಕ್ಕಳು ಪ್ರತಿಭಟನೆಯನ್ನು ನಡೆಸಿದರು. ಇದೆ ವೇಳೆ ಮಾತನಾಡಿದಂತಹ ಪ್ರತಿಭಟನಾ ನಿರತ ಪೋಷಕರು ನಮ್ಮ ಮಕ್ಕಳು ನಮ್ಮ ಗ್ರಾಮದಿಂದ ಕೊಳ್ಳೇಗಾಲ ಹನೂರು ಪಟ್ಟಣದ ವಿವಿಧ ಕಾಲೇಜುಗಳಿಗೆ ಪ್ರತಿನಿತ್ಯ ತೆರಳುತ್ತಾರೆ. ಆದರೆ ಶಾಲಾ ಕಾಲೇಜುಗಳ ಸಮಯಕ್ಕೆ ಅನುಗುಣವಾಗಿ ಸರ್ಕಾರಿ ಬಸ್ ಗಳು ಬರುತ್ತಿಲ್ಲ. ಇದರ ಪರಿಣಾಮ ಶಾಲಾ ಕಾಲೇಜುಗಳಿಗೆ ನಮ್ಮ ಮಕ್ಕಳು ತಡವಾಗಿ ಹೋಗುತ್ತಿದ್ದಾರೆ. ಇದರಿಂದ ಕಲಿಕೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಕ್ರಮ ವಹಿಸಬೇಕು ಎಂದು ಪ್ರತಿಭಟನೆಯನ್ನು ನಡೆಸಿದರು. ಪ ಶಾಲಾ ಸಮಯಕ್ಕೆ ಸರಿಯಾಗಿ ಬಸ್ ಬರುತ್ತಿಲ್ಲ ಎಂದು ಪ್ರತಿಭಟನೆ ನಡೆಸಿರುವುದು ಇದು ಮೊದಲೆನಲ್ಲ. ಈ ಹಿಂದೆ ಸಹ ಇದೇ ಲೊಕ್ಕನಹಳ್ಳಿ ಗ್ರಾಮದ ಮುಖ್ಯರಸ್ತೆಯಲ್ಲಿ ಬಸ್ ಗಳನ್ನು ತಡೆದು ಪ್ರತಿಭಟನೆ ನಡೆಸಿದ್ದೆವು. ಸ್ಥಳಕ್ಕೆ ಬಂದಿದ್ದ ಅಂದಿನ ಅಧಿಕಾರಿಗಳು ಸಾದಾ ಸಮಯಕ್ಕೆ ಬಸ್ ಬಿಡುದಾಗಿ ಭರವಸೆಯನ್ನ ಕೊಟ್ಟು ತೆರಳಿದ್ದರು. ಸ್ವಲ್ಪ ದಿನಗಳ ಬಳಿಕ ಮತ್ತೆ ಇದೇ ಸಮಸ್ಯೆಯನ್ನ ಅನುಭವಿಸುತ್ತಿದ್ದೇವೆ. ಹಾಗಾಗಿ ಶಾಶ್ವತ ವಾದಂತಹ ಪರಿಹಾರವನ್ನು ಸಾರಿಗೆ ಇಲಾಖೆ ಅಧಿಕಾರಿಗಳು ನಮಗೆ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮೀಣ ಭಾಗದ ಕಾಡಂಚಿನ ಭಾಗದ ಹಳ್ಳಿಗಳಿಗೆ ಸಂಚಾರ ಮಾಡುತ್ತಿರುವ ಕೆ ಎಸ್ ಆರ್ ಟಿ ಸಿ ಡಕೋಟಾ ಬಸ್ ಗಳಾಗಿದ್ದು, ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವ ಚಾಳಿ ಯಾಗಿದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ಕಳೆದ ತಿಂಗಳಲ್ಲಿ ಮಣಗಳ್ಳಿ, ಶಾಗ್ಯ ಬಳಿ ಒಂದೆ ದಿನದಲ್ಲಿ ಎರಡು ಬಸ್ ಕೆಟ್ಟು ನಿಂತಿರುವ ನಿದರ್ಶನವಿದೆ. ಹಾಗಾಗಿ ಗ್ರಾಮೀಣ ಭಾಗದ ಕಾಡಂಚಿನ ಭಾಗದ ಗ್ರಾಮಗಳಿಗೆ ಸಂಚಾರ ಮಾಡಲು ಕನಿಷ್ಠಪಕ್ಷ ಟೂಲ್ ಕಿಟ್ ಗಳ ವ್ಯವಸ್ಥೆ ಇರುವಂತಹ ಬಸ್ ಗಳನ್ನು ಕಲ್ಪಿಸಬೇಕು ಎಂದು ಗ್ರಾಮೀಣ ಭಾಗದ ಸಾರ್ವಜನಿಕರು ಒತ್ತಾಯ ಮಾಡಿದ್ದಾರ ಬಹುತೇಕ ಬೆಳಗಿನ ಜಾವ ಹಾಗೂ ಸಂಜೆ ವೇಳೆಗೆ ಶಾಲಾ ಕಾಲೇಜುಗಳ ಮಕ್ಕಳೇ ಸರ್ಕಾರಿ ಬಸ್ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ, ಪದೇ ಪದೇ ಬಸ್ ಗಳು ತೊಂದರೆಗೆ ಒಳಗಾಗು ತ್ತಿರುವುದರಿಂದ ಗ್ರಾಮೀಣ ಭಾಗದಲ್ಲಿ ಶಾಲಾ ಕಾಲೇಜುಗಳ ಮಕ್ಕಳಿಗೆ ತೊಂದರೆ ಆಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ನಾವು ಗಮನಿಸುತ್ತಿದ್ದೇವೆ. ಹಾಗಾಗಿ ಸಾಲ ಕಾಲೇಜುಗಳ ಮಕ್ಕಳಿಗೆ ತೊಂದರೆಯಾಗದಂತೆ ಬಸ್ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಪ್ರಜ್ಞಾವಂತ ನಾಗರೀಕರು ಆಗ್ರಹ ಪಡಿಸಿದ್ದಾರೆ.1
- ತುಬಚಿ ಗ್ರಾಮದಲ್ಲಿ ಚಿರತೆ ಚಲನ ವಲನ ಹಾಗೂ ಕಳೇಬರ ಪತ್ತೆ ಗ್ರಾಮಸ್ತರಲ್ಲಿ ಆತಂಕ1
- *ಭಾರತ ನಲ್ಲಿ ವೈರಲ್*1
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳ ಮೇಲಿನ ದೌರ್ಜನ್ಯ ಮತ್ತು ಜಾತಿ ನಿಂದನೆ ಹಾಗೂ ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣಗಳಲ್ಲಿ ತ್ವರಿತ ಮತ್ತು ಪರಿಣಾಮಕಾರಿ ಕ್ರಮ ಕೈಗೊಳ್ಳುವಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ ಆರೋಪಿಸಿದೆ. ಇಂದು ಒಕ್ಕೂಟದ ಮುಖಂಡರಾದ ಎನ್ ನರಸಿಂಹಲು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈ ವಿಷಯವನ್ನು ಪ್ರಸ್ತಾಪಿಸಿ ಜನವರಿ 03 ರಂದು ಸಿಂಧನೂರಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ಈ ಅಂಶ ತರಲಾಗುತ್ತದೆ ಎಂದು ಹೇಳಿದರು.1
- ಗಂಗನದಡ್ಡಿ: ಎಲ್‌ಟಿಎಫ್ ತಂಡದಿಂದ ಚಿರತೆ ಸೆರೆ ಕಾರ್ಯಾಚರಣೆ ಆರಂಭ ಗುರುವಾರ ಮಲೆಮಹದೇಶ್ವರ ವನ್ಯಧಾಮದ ಡಿಎಫ್‌ಒ ಭಾಸ್ಕರ್ ಅವರು ಹನೂರು ತಾಲ್ಲೂಕಿನ ಗಂಗನದಡ್ಡಿ ಗ್ರಾಮಕ್ಕೆ ಭೇಟಿ ನೀಡಿ, ಚಿರತೆಯನ್ನು ಹಿಡಿಯಲು ಮೈಸೂರಿನಿಂದ ಎಲ್‌ಟಿಎಫ್ (ಲೆಪರ್ಡ್ ಟಾಸ್ಕ್ ಫೋರ್ಸ್) ತಂಡವನ್ನು ಕಳುಹಿಸಲಾಗುವುದು ಎಂದು ಭರವಸೆ ನೀಡಿದ್ದರು. ಅದರಂತೆ ಗುರುವಾರ ರಾತ್ರಿ ಸುಮಾರು 10 ಗಂಟೆಗೆ ಎಲ್‌ಟಿಎಫ್ ತಂಡ ಗಂಗನದಡ್ಡಿ ಗ್ರಾಮಕ್ಕೆ ಆಗಮಿಸಿದ್ದು, ಅರಣ್ಯ ಸಿಬ್ಬಂದಿಯ ನೆರವಿನೊಂದಿಗೆ ಕಾರ್ಯಾಚರಣೆ ಆರಂಭಿಸಿದೆ. ಡ್ರೋನ್ ಬಳಸಿ ಪರಿಶೀಲನೆ ನಡೆಸಿದ ವೇಳೆ ಎರಡು ಚಿರತೆಗಳು ಇರುವುದನ್ನು ಪತ್ತೆಹಚ್ಚಲಾಗಿದ್ದು, ಅವುಗಳನ್ನು ಸೆರೆ ಹಿಡಿಯಲು ಮುಂದಿನ ಹಂತದ ಕಾರ್ಯಾಚರಣೆ ಮುಂದುವರಿದಿದೆ. ಈ ಕುರಿತು ರೈತ ಸಂಘದ ಅಧ್ಯಕ್ಷ ಅಮ್ಜದ್ ಖಾನ್ ಮಾತನಾಡಿ, “ಚಿರತೆ ಹಾವಳಿಯಿಂದ ಗ್ರಾಮಸ್ಥರು ಹಾಗೂ ರೈತರು ಭಯದಲ್ಲಿದ್ದು, ಅರಣ್ಯ ಇಲಾಖೆ ತ್ವರಿತವಾಗಿ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ. ಶೀಘ್ರದಲ್ಲೇ ಚಿರತೆಯನ್ನು ಸೆರೆ ಹಿಡಿದು ಗ್ರಾಮಸ್ಥರಿಗೆ ರಕ್ಷಣೆಯ ಭರವಸೆ ನೀಡಬೇಕು” ಎಂದರು1