logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಆನೇಕಲ್‌ನ ಚಂದಾಪುರದಲ್ಲಿ ಚಿನ್ಮಯ ಸೇವಾ ಸಂಸ್ಥೆಯ ವತಿಯಿಂದ ಹಿರಿಯ ನಾಗರಿಕರಿಗೆ ಸೀನಿಯರ್ ಸಿಟಿಜನ್ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆನೇಕಲ್ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಸ್. ಪ್ರಭಾಕರ್ ಬಾಬು ರೆಡ್ಡಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗುರುತಿನ ಚೀಟಿಗಳನ್ನು ವಿತರಿಸಿದರು. ತಮ್ಮ ಹುಟ್ಟುಹಬ್ಬದ ಅಂಗವಾಗಿ ಹಿರಿಯ ನಾಗರಿಕರಿಗೆ ಉಚಿತವಾಗಿ ಈ ಗುರುತಿನ ಚೀಟಿಗಳನ್ನು ವಿತರಿಸಲಾಗುತ್ತಿದ್ದು, ತಾಲೂಕಿನ ಎಲ್ಲಾ ಹಿರಿಯ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಚಿನ್ಮಯ ಸೇವಾ ಸಂಸ್ಥೆಯು ಕಳೆದ 25 ವರ್ಷಗಳಿಂದ ಪರಿಸರ, ಆರೋಗ್ಯ, ಶಿಕ್ಷಣ ಹಾಗೂ ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಿರಂತರವಾಗಿ ಸಲ್ಲಿಸುತ್ತಿರುವ ಸೇವೆಯನ್ನು ಇದೇ ವೇಳೆ ಅವರು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಚಿನ್ಮಯ ಸೇವಾ ಸಂಸ್ಥೆಯ ಅಧ್ಯಕ್ಷ ಹಾಗೂ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಡಾ. ಚಿನ್ನಪ್ಪ ವೈ ಚಿಕ್ಕಹಾಗಡೆ ಅವರು, ಎಸ್. ಪ್ರಭಾಕರ್ ಬಾಬು ರೆಡ್ಡಿ ಅವರು ಕಳೆದ 15 ವರ್ಷಗಳಿಂದ ಆನೇಕಲ್ ತಾಲೂಕಿನಾದ್ಯಂತ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ನೀಡಿರುವ ಮಹತ್ತರ ಕೊಡುಗೆಯನ್ನು ಸ್ಮರಿಸಿದರು. ಇತ್ತೀಚೆಗೆ ನೆರಿಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಗ್ರಾಮ ಪಂಚಾಯಿತಿಯ ಡಿ-ಗ್ರೂಪ್ ನೌಕರರಿಗೆ ತಮ್ಮ ಸ್ವಂತ ವೆಚ್ಚದಲ್ಲಿ ದ್ವಿಚಕ್ರ ವಾಹನಗಳನ್ನು ವಿತರಿಸಿರುವುದು ಹಾಗೂ ಸರ್ಕಾರಿ ಆಸ್ಪತ್ರೆಗೆ ಕಟ್ಟಡ ನಿರ್ಮಿಸಿಕೊಟ್ಟಿರುವುದು ಅವರ ಸಮಾಜಮುಖಿ ಕಾರ್ಯಗಳಿಗೆ ಸಾಕ್ಷಿಯಾಗಿದೆ ಎಂದ ಅವರು, ರೆಡ್ಡಿ ಅವರು ಭವಿಷ್ಯದಲ್ಲಿ ರಾಜಕೀಯವಾಗಿ ಮತ್ತಷ್ಟು ಉನ್ನತ ಸ್ಥಾನಕ್ಕೇರಲಿ ಎಂದು ಆಶಿಸಿದರು. ಸಂಸ್ಥೆಯ ಕಾರ್ಯದರ್ಶಿ ಕೆ. ಮಹೇಶ್ ಮಾತನಾಡಿ, ಬಡ ರೋಗಿಗಳಿಗೆ ಕನ್ನಡಕ ವಿತರಣೆ ಹಾಗೂ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲು ಪ್ರಭಾಕರ್ ಬಾಬು ರೆಡ್ಡಿ ಅವರು ನಿರಂತರವಾಗಿ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು. ಹಿರಿಯ ಪತ್ರಕರ್ತ ಸಿ.ಆರ್. ವಿಜಯಕುಮಾರ್ ಮಾತನಾಡಿ, ಚಿನ್ಮಯ ಸೇವಾ ಸಂಸ್ಥೆಯು ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗಾಗಿ ನಡೆಸುತ್ತಿರುವ ಕಾರ್ಯಗಳು ಇತರ ಸಂಘ-ಸಂಸ್ಥೆಗಳಿಗೆ ಮಾದರಿಯಾಗಿವೆ ಎಂದು ಪ್ರಶಂಸಿಸಿದರು. ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರಾದ ಹೀಲಲಿಗೆ ನಾಗವೇಣಿ, ಹಿರಿಯ ನಾಗರಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

2 hrs ago
user_Chakravarthy
Chakravarthy
Local News Reporter ಆನೇಕಲ್, ಬೆಂಗಳೂರು ನಗರ, ಕರ್ನಾಟಕ•
2 hrs ago
eb91036c-d6ea-4650-8df8-deb1b96b8dc9

ಆನೇಕಲ್‌ನ ಚಂದಾಪುರದಲ್ಲಿ ಚಿನ್ಮಯ ಸೇವಾ ಸಂಸ್ಥೆಯ ವತಿಯಿಂದ ಹಿರಿಯ ನಾಗರಿಕರಿಗೆ ಸೀನಿಯರ್ ಸಿಟಿಜನ್ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆನೇಕಲ್ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಸ್. ಪ್ರಭಾಕರ್ ಬಾಬು ರೆಡ್ಡಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗುರುತಿನ ಚೀಟಿಗಳನ್ನು ವಿತರಿಸಿದರು. ತಮ್ಮ ಹುಟ್ಟುಹಬ್ಬದ ಅಂಗವಾಗಿ ಹಿರಿಯ ನಾಗರಿಕರಿಗೆ ಉಚಿತವಾಗಿ ಈ ಗುರುತಿನ ಚೀಟಿಗಳನ್ನು ವಿತರಿಸಲಾಗುತ್ತಿದ್ದು, ತಾಲೂಕಿನ ಎಲ್ಲಾ ಹಿರಿಯ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಚಿನ್ಮಯ ಸೇವಾ ಸಂಸ್ಥೆಯು ಕಳೆದ 25 ವರ್ಷಗಳಿಂದ ಪರಿಸರ, ಆರೋಗ್ಯ, ಶಿಕ್ಷಣ ಹಾಗೂ ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಿರಂತರವಾಗಿ ಸಲ್ಲಿಸುತ್ತಿರುವ ಸೇವೆಯನ್ನು ಇದೇ ವೇಳೆ ಅವರು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಚಿನ್ಮಯ ಸೇವಾ ಸಂಸ್ಥೆಯ ಅಧ್ಯಕ್ಷ ಹಾಗೂ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಡಾ. ಚಿನ್ನಪ್ಪ ವೈ ಚಿಕ್ಕಹಾಗಡೆ ಅವರು, ಎಸ್. ಪ್ರಭಾಕರ್ ಬಾಬು ರೆಡ್ಡಿ ಅವರು ಕಳೆದ 15 ವರ್ಷಗಳಿಂದ ಆನೇಕಲ್ ತಾಲೂಕಿನಾದ್ಯಂತ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ನೀಡಿರುವ ಮಹತ್ತರ ಕೊಡುಗೆಯನ್ನು ಸ್ಮರಿಸಿದರು. ಇತ್ತೀಚೆಗೆ ನೆರಿಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಗ್ರಾಮ ಪಂಚಾಯಿತಿಯ ಡಿ-ಗ್ರೂಪ್ ನೌಕರರಿಗೆ ತಮ್ಮ ಸ್ವಂತ ವೆಚ್ಚದಲ್ಲಿ ದ್ವಿಚಕ್ರ ವಾಹನಗಳನ್ನು ವಿತರಿಸಿರುವುದು ಹಾಗೂ ಸರ್ಕಾರಿ ಆಸ್ಪತ್ರೆಗೆ ಕಟ್ಟಡ ನಿರ್ಮಿಸಿಕೊಟ್ಟಿರುವುದು ಅವರ ಸಮಾಜಮುಖಿ ಕಾರ್ಯಗಳಿಗೆ ಸಾಕ್ಷಿಯಾಗಿದೆ ಎಂದ ಅವರು, ರೆಡ್ಡಿ ಅವರು ಭವಿಷ್ಯದಲ್ಲಿ ರಾಜಕೀಯವಾಗಿ ಮತ್ತಷ್ಟು ಉನ್ನತ ಸ್ಥಾನಕ್ಕೇರಲಿ ಎಂದು ಆಶಿಸಿದರು. ಸಂಸ್ಥೆಯ ಕಾರ್ಯದರ್ಶಿ ಕೆ. ಮಹೇಶ್ ಮಾತನಾಡಿ, ಬಡ ರೋಗಿಗಳಿಗೆ ಕನ್ನಡಕ ವಿತರಣೆ ಹಾಗೂ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲು ಪ್ರಭಾಕರ್ ಬಾಬು ರೆಡ್ಡಿ ಅವರು ನಿರಂತರವಾಗಿ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು. ಹಿರಿಯ ಪತ್ರಕರ್ತ ಸಿ.ಆರ್. ವಿಜಯಕುಮಾರ್ ಮಾತನಾಡಿ, ಚಿನ್ಮಯ ಸೇವಾ ಸಂಸ್ಥೆಯು ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗಾಗಿ ನಡೆಸುತ್ತಿರುವ ಕಾರ್ಯಗಳು ಇತರ ಸಂಘ-ಸಂಸ್ಥೆಗಳಿಗೆ ಮಾದರಿಯಾಗಿವೆ ಎಂದು ಪ್ರಶಂಸಿಸಿದರು. ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರಾದ ಹೀಲಲಿಗೆ ನಾಗವೇಣಿ, ಹಿರಿಯ ನಾಗರಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

More news from ಕರ್ನಾಟಕ and nearby areas
  • ಥೇಟ್ ಪ್ರಸಿದ್ಧ ಗಾಯಕಿ ಎಸ್. ಜಾನಕಿ ಅವರಂತೆಯೇ ಹಾಡುವ ಅದ್ಭುತ ಪ್ರತಿಭೆಯ ಹುಡುಗನೊಬ್ಬನ ಧ್ವನಿ ಸದ್ಯ ಗಮನ ಸೆಳೆಯುತ್ತಿದೆ. ಈ ಹುಡುಗನ ಧ್ವನಿಗೆ ಮತ್ತು ಆತನ ಹಾಡುವಿಕೆಗೆ ಎಷ್ಟು ಮಾರ್ಕ್ಸ್ ನೀಡುತ್ತೀರಾ ಎಂದು ಪ್ರಶ್ನಿಸುವ ಮೂಲಕ ಕೇಳುಗರ ಅಭಿಪ್ರಾಯವನ್ನು ಇಲ್ಲಿ ಕೋರಲಾಗಿದೆ.
    1
    ಥೇಟ್ ಪ್ರಸಿದ್ಧ ಗಾಯಕಿ ಎಸ್. ಜಾನಕಿ ಅವರಂತೆಯೇ ಹಾಡುವ ಅದ್ಭುತ ಪ್ರತಿಭೆಯ ಹುಡುಗನೊಬ್ಬನ ಧ್ವನಿ ಸದ್ಯ ಗಮನ ಸೆಳೆಯುತ್ತಿದೆ. ಈ ಹುಡುಗನ ಧ್ವನಿಗೆ ಮತ್ತು ಆತನ ಹಾಡುವಿಕೆಗೆ ಎಷ್ಟು ಮಾರ್ಕ್ಸ್ ನೀಡುತ್ತೀರಾ ಎಂದು ಪ್ರಶ್ನಿಸುವ ಮೂಲಕ ಕೇಳುಗರ ಅಭಿಪ್ರಾಯವನ್ನು ಇಲ್ಲಿ ಕೋರಲಾಗಿದೆ.
    user_Veega News Kannada
    Veega News Kannada
    Technical service ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    1 hr ago
  • ಕೆ.ಜಿ.ಎಫ್ ತಾಲ್ಲೂಕಿನ ರಾಮಸಾಗರ ಗ್ರಾಪಂ ವ್ಯಾಪ್ತಿಯ ಪಾಪೇನಹಳ್ಳಿ ಗ್ರಾಮದ ಸರ್ಕಾರಿ ರಾಜಕಾಲುವೆಯಲ್ಲಿದ್ದ ಬೆಲೆಬಾಳುವ ಹುಣಸೆ ಮರಗಳನ್ನು ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಕಟಾವು ಮಾಡಿ ಸಾಗಿಸುತ್ತಿರುವುದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಗ್ರಾಮದ ವಿವಿಧ ಸರ್ವೆ ನಂಬರ್‌ಗಳ ಮಧ್ಯೆ ಹಾದುಹೋಗುವ ರಾಜಕಾಲುವೆಯ ಆಜುಬಾಜು ಬೃಹತ್ ಮರಗಳು ಬೆಳೆದಿದ್ದು, ತಹಶೀಲ್ದಾರ್ ಆದೇಶದನ್ವಯ ಕಂದಾಯ ಅಧಿಕಾರಿಗಳು ಈ ಹಿಂದೆ ಮಹಜರು ನಡೆಸಿ ಒಟ್ಟು 18 ಬೃಹತ್ ಮರಗಳನ್ನು ಗುರುತಿಸಿದ್ದರು. ಸಾರ್ವಜನಿಕ ಆಸ್ತಿಯಾದ ಈ ಮರಗಳನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ವಹಿಸಲಾಗಿತ್ತು ಎನ್ನಲಾಗಿದೆ. ಆದರೆ, ಕಳೆದ 15 ದಿನಗಳಿಂದ ಖಾಸಗಿ ವ್ಯಕ್ತಿಗಳು ಕಾನೂನುಬಾಹಿರವಾಗಿ ಎರಡು ಬೃಹತ್ ಹುಣಸೆ ಮರಗಳನ್ನು ಕಡಿದು ಸಾಗಿಸುತ್ತಿದ್ದರೂ ತಡೆಯದ ಪಂಚಾಯಿತಿ ಅಧಿಕಾರಿಗಳು ಸರ್ಕಾರಿ ಸ್ವತ್ತನ್ನು ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಆಕ್ರೋಶದ ಸಂದರ್ಭದಲ್ಲಿ ಗ್ರಾಮಸ್ಥರಾದ ರಮೇಶ್, ಮಲ್ಲನ್ನ ಹಾಗೂ ನಾರಾಯಣಪ್ಪ ಉಪಸ್ಥಿತರಿದ್ದರು.
    1
    ಕೆ.ಜಿ.ಎಫ್ ತಾಲ್ಲೂಕಿನ ರಾಮಸಾಗರ ಗ್ರಾಪಂ ವ್ಯಾಪ್ತಿಯ ಪಾಪೇನಹಳ್ಳಿ ಗ್ರಾಮದ ಸರ್ಕಾರಿ ರಾಜಕಾಲುವೆಯಲ್ಲಿದ್ದ ಬೆಲೆಬಾಳುವ ಹುಣಸೆ ಮರಗಳನ್ನು ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಕಟಾವು ಮಾಡಿ ಸಾಗಿಸುತ್ತಿರುವುದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಗ್ರಾಮದ ವಿವಿಧ ಸರ್ವೆ ನಂಬರ್‌ಗಳ ಮಧ್ಯೆ ಹಾದುಹೋಗುವ ರಾಜಕಾಲುವೆಯ ಆಜುಬಾಜು ಬೃಹತ್ ಮರಗಳು ಬೆಳೆದಿದ್ದು, ತಹಶೀಲ್ದಾರ್ ಆದೇಶದನ್ವಯ ಕಂದಾಯ ಅಧಿಕಾರಿಗಳು ಈ ಹಿಂದೆ ಮಹಜರು ನಡೆಸಿ ಒಟ್ಟು 18 ಬೃಹತ್ ಮರಗಳನ್ನು ಗುರುತಿಸಿದ್ದರು. ಸಾರ್ವಜನಿಕ ಆಸ್ತಿಯಾದ ಈ ಮರಗಳನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ವಹಿಸಲಾಗಿತ್ತು ಎನ್ನಲಾಗಿದೆ.

ಆದರೆ, ಕಳೆದ 15 ದಿನಗಳಿಂದ ಖಾಸಗಿ ವ್ಯಕ್ತಿಗಳು ಕಾನೂನುಬಾಹಿರವಾಗಿ ಎರಡು ಬೃಹತ್ ಹುಣಸೆ ಮರಗಳನ್ನು ಕಡಿದು ಸಾಗಿಸುತ್ತಿದ್ದರೂ ತಡೆಯದ ಪಂಚಾಯಿತಿ ಅಧಿಕಾರಿಗಳು ಸರ್ಕಾರಿ ಸ್ವತ್ತನ್ನು ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಆಕ್ರೋಶದ ಸಂದರ್ಭದಲ್ಲಿ ಗ್ರಾಮಸ್ಥರಾದ ರಮೇಶ್, ಮಲ್ಲನ್ನ ಹಾಗೂ ನಾರಾಯಣಪ್ಪ ಉಪಸ್ಥಿತರಿದ್ದರು.
    user_Prashanth  Vibes
    Prashanth Vibes
    Video Creator ಕೋಲಾರ ಗೋಲ್ಡ್ ಫೀಲ್ಡ್, ಕೋಲಾರ, ಕರ್ನಾಟಕ•
    1 hr ago
  • ದೇಶಾದ್ಯಂತ ನಡೆಯುತ್ತಿರುವ ಮೆಗಾ ರಾಷ್ಟ್ರೀಯ ಲೋಕ ಅದಾಲತ್ ಅಂಗವಾಗಿ ಕೋಲಾರ ಜಿಲ್ಲೆಯಲ್ಲಿ ಶನಿವಾರ ಲೋಕ ಅದಾಲತ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಅದಾಲತ್‌ನಲ್ಲಿ ಒಟ್ಟು 80,687 ಪ್ರಕರಣಗಳನ್ನು ಯಶಸ್ವಿಯಾಗಿ ಇತ್ಯರ್ಥಗೊಳಿಸಲಾಗಿದ್ದು, ನ್ಯಾಯಾಲಯದಲ್ಲಿ ವರ್ಷಾನುಗಟ್ಟಲೆ ಬಾಕಿ ಉಳಿದಿದ್ದ ಅನೇಕ ಸಿವಿಲ್, ಕ್ರಿಮಿನಲ್ ಹಾಗೂ ಕೌಟುಂಬಿಕ ಪ್ರಕರಣಗಳನ್ನು ಉಭಯ ಪಕ್ಷಕಾರರ ಸಮ್ಮತಿಯೊಂದಿಗೆ ರಾಜೀಸಂಧಾನದ ಮೂಲಕ ಸುಖಾಂತ್ಯಗೊಳಿಸಲಾಯಿತು. ಈ ಬಾರಿಯ ಲೋಕ ಅದಾಲತ್‌ನ ಪ್ರಮುಖ ಆಕರ್ಷಣೆಯೆಂದರೆ, ಸಣ್ಣಪುಟ್ಟ ಕಾರಣಗಳಿಗೆ ವಿಚ್ಛೇದನದ ಹಾದಿ ಹಿಡಿದಿದ್ದ ಆರು ದಂಪತಿಗಳು ತಮ್ಮ ಹಳೆಯ ಕಹಿ ಘಟನೆಗಳನ್ನು ಮರೆತು, ಪರಸ್ಪರ ಹೂವಿನ ಹಾರ ಬದಲಾಯಿಸಿಕೊಂಡು ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದಾದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ನ್ಯಾಯಾಧೀಶರಾದ ಬಿ.ಎಸ್.ಜಯಶ್ರೀ ಅವರು ಲೋಕ ಅದಾಲತ್ ಪ್ರಕ್ರಿಯೆಯನ್ನು 'ರಾಷ್ಟ್ರೀಯ ಹಬ್ಬ' ಎಂದು ಬಣ್ಣಿಸಿದರು.
    1
    ದೇಶಾದ್ಯಂತ ನಡೆಯುತ್ತಿರುವ ಮೆಗಾ ರಾಷ್ಟ್ರೀಯ ಲೋಕ ಅದಾಲತ್ ಅಂಗವಾಗಿ ಕೋಲಾರ ಜಿಲ್ಲೆಯಲ್ಲಿ ಶನಿವಾರ ಲೋಕ ಅದಾಲತ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಅದಾಲತ್‌ನಲ್ಲಿ ಒಟ್ಟು 80,687 ಪ್ರಕರಣಗಳನ್ನು ಯಶಸ್ವಿಯಾಗಿ ಇತ್ಯರ್ಥಗೊಳಿಸಲಾಗಿದ್ದು, ನ್ಯಾಯಾಲಯದಲ್ಲಿ ವರ್ಷಾನುಗಟ್ಟಲೆ ಬಾಕಿ ಉಳಿದಿದ್ದ ಅನೇಕ ಸಿವಿಲ್, ಕ್ರಿಮಿನಲ್ ಹಾಗೂ ಕೌಟುಂಬಿಕ ಪ್ರಕರಣಗಳನ್ನು ಉಭಯ ಪಕ್ಷಕಾರರ ಸಮ್ಮತಿಯೊಂದಿಗೆ ರಾಜೀಸಂಧಾನದ ಮೂಲಕ ಸುಖಾಂತ್ಯಗೊಳಿಸಲಾಯಿತು.

ಈ ಬಾರಿಯ ಲೋಕ ಅದಾಲತ್‌ನ ಪ್ರಮುಖ ಆಕರ್ಷಣೆಯೆಂದರೆ, ಸಣ್ಣಪುಟ್ಟ ಕಾರಣಗಳಿಗೆ ವಿಚ್ಛೇದನದ ಹಾದಿ ಹಿಡಿದಿದ್ದ ಆರು ದಂಪತಿಗಳು ತಮ್ಮ ಹಳೆಯ ಕಹಿ ಘಟನೆಗಳನ್ನು ಮರೆತು, ಪರಸ್ಪರ ಹೂವಿನ ಹಾರ ಬದಲಾಯಿಸಿಕೊಂಡು ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದಾದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ನ್ಯಾಯಾಧೀಶರಾದ ಬಿ.ಎಸ್.ಜಯಶ್ರೀ ಅವರು ಲೋಕ ಅದಾಲತ್ ಪ್ರಕ್ರಿಯೆಯನ್ನು 'ರಾಷ್ಟ್ರೀಯ ಹಬ್ಬ' ಎಂದು ಬಣ್ಣಿಸಿದರು.
    user_Vishnu Press
    Vishnu Press
    Local News Reporter ಬಂಗಾರಪೇಟೆ, ಕೋಲಾರ, ಕರ್ನಾಟಕ•
    11 hrs ago
  • ಕೋಲಾರ ತಾಲ್ಲೂಕಿನ ವಕ್ಕಲೇರಿ ಹೋಬಳಿಯ ಚಿನ್ನಾಪುರ ಗ್ರಾಮದಲ್ಲಿ ಶ್ರೀ ಶನೇಶ್ವರ ಸ್ವಾಮಿ ಪಲ್ಲಕ್ಕಿ ಉತ್ಸವ ಮತ್ತು 'ರಾಜಾ ಸತ್ಯವ್ರತ' ಅಥವಾ 'ಶನಿಪ್ರಭಾವ' ನಾಟಕ ಪ್ರದರ್ಶನವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಮುಖ್ಯ ರಸ್ತೆಯ ಮಾಗುಂದಿ ಕ್ರಾಸ್‌ನ ಗಾಟಗ ಗ್ರಾಮದ ಶ್ರೀ ಶ್ರೀ ಶಿವ ಶನೇಶ್ವರ ಸ್ವಾಮಿ ದೇವಾಲಯದ ಧರ್ಮಾಧಿಕಾರಿಗಳು ಹಾಗೂ ಪೀಠಾಧಿಪತಿಗಳಾದ ಶ್ರೀ ಮುನೇಶ್ವರ ಸ್ವಾಮಿಗಳಿಗೆ ಅದ್ದೂರಿ ಸ್ವಾಗತ ಕೋರಿ, ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀ ಮುನೇಶ್ವರ ಸ್ವಾಮಿಗಳು, ಸರ್ವ ಜನರಿಗೂ ಶನೇಶ್ವರ ಸ್ವಾಮಿಯ ಆಶೀರ್ವಾದ ಹಾಗೂ ಸುಖ ಸಂತೋಷ ಸಿಗಲಿ ಮತ್ತು ನಾಟಕವು ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು. ನಾಟಕ ನಿರ್ದೇಶಕ ಪಿಳ್ಳಪ್ಪನವರ ನೇತೃತ್ವದಲ್ಲಿ ಇದುವರೆಗೆ 18 ಶನೇಶ್ವರ ನಾಟಕಗಳನ್ನು ಯಶಸ್ವಿಯಾಗಿ ಆಡಿಸಿರುವುದು ಹೆಮ್ಮೆಯ ವಿಷಯ ಎಂದ ಅವರು, ತಾವೂ ಸಹ ಶ್ರಾವಣ ಮಾಸದಲ್ಲಿ ಶನಿಪ್ರಭಾವ ನಾಟಕ ಪ್ರದರ್ಶನ ಏರ್ಪಡಿಸುತ್ತಿದ್ದು, ಅದನ್ನೂ ಮೀರಿಸಿ ಚಿನ್ನಾಪುರ ಗ್ರಾಮದಲ್ಲಿ ಅತ್ಯಂತ ಅದ್ಭುತವಾಗಿ ಈ ಮಹಾತ್ಮನ ನಾಟಕ ನಡೆಯುತ್ತಿರುವುದು ಸಂತೋಷ ತಂದಿದೆ ಎಂದು ಶ್ಲಾಘಿಸಿದರು. ಇದೇ ವೇಳೆ, ತಾವು ಮಾಡುವ ದಾನ ಧರ್ಮಗಳು ಇನ್ನೊಂದು ಕೈಗೆ ತಿಳಿಯಬಾರದು ಎಂಬುದು ತಮ್ಮ ಭಾವನೆಯಾಗಿದ್ದು, ತಮಗೆ ಯಾವುದೇ ಹೊಗಳಿಕೆ ಸಲ್ಲದು ಹಾಗೂ ತಾವು ಏನೇ ಮಾಡಿದರೂ ಅದು ಭಕ್ತರಿಗೋಸ್ಕರ ಎಂದು ನುಡಿದರು. ಇದೇ ಸಂದರ್ಭದಲ್ಲಿ ಸಮಾಜ ಸೇವಕರು ಹಾಗೂ ಚಲನಚಿತ್ರ ನಟರಾದ ಪಾಕರಹಳ್ಳಿ ಬುಲೆಟ್ ನಾಗರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಗ್ರಾಮದ ಮುಖಂಡರಾದ ಮುದವತ್ತಿ ಎಸ್.ಕೃಷ್ಣಪ್ಪ, ವಡಗೇರಿ ರಮೇಶ್, ಜಂಗಾಲಹಳ್ಳಿ ಶ್ರೀನಿವಾಸ್, ಶೆಟ್ಟಿಗಾನಹಳ್ಳಿ ಎಸ್ಎಂಎಸ್ ಸಂತೋಷ್, ನದೀಂ ಬೇಗ್, ಟೈಲರ್ ಶಿವಕುಮಾರ್, ವಕ್ಕಲೇರಿ ಚಿರು, ಚಿನ್ನಾಪುರ ನಾರಾಯಣಸ್ವಾಮಿ, ಉಮೇಶ್ ಹಾಗೂ ಪಿಳ್ಳಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
    2
    ಕೋಲಾರ ತಾಲ್ಲೂಕಿನ ವಕ್ಕಲೇರಿ ಹೋಬಳಿಯ ಚಿನ್ನಾಪುರ ಗ್ರಾಮದಲ್ಲಿ ಶ್ರೀ ಶನೇಶ್ವರ ಸ್ವಾಮಿ ಪಲ್ಲಕ್ಕಿ ಉತ್ಸವ ಮತ್ತು 'ರಾಜಾ ಸತ್ಯವ್ರತ' ಅಥವಾ 'ಶನಿಪ್ರಭಾವ' ನಾಟಕ ಪ್ರದರ್ಶನವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಮುಖ್ಯ ರಸ್ತೆಯ ಮಾಗುಂದಿ ಕ್ರಾಸ್‌ನ ಗಾಟಗ ಗ್ರಾಮದ ಶ್ರೀ ಶ್ರೀ ಶಿವ ಶನೇಶ್ವರ ಸ್ವಾಮಿ ದೇವಾಲಯದ ಧರ್ಮಾಧಿಕಾರಿಗಳು ಹಾಗೂ ಪೀಠಾಧಿಪತಿಗಳಾದ ಶ್ರೀ ಮುನೇಶ್ವರ ಸ್ವಾಮಿಗಳಿಗೆ ಅದ್ದೂರಿ ಸ್ವಾಗತ ಕೋರಿ, ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀ ಮುನೇಶ್ವರ ಸ್ವಾಮಿಗಳು, ಸರ್ವ ಜನರಿಗೂ ಶನೇಶ್ವರ ಸ್ವಾಮಿಯ ಆಶೀರ್ವಾದ ಹಾಗೂ ಸುಖ ಸಂತೋಷ ಸಿಗಲಿ ಮತ್ತು ನಾಟಕವು ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು. ನಾಟಕ ನಿರ್ದೇಶಕ ಪಿಳ್ಳಪ್ಪನವರ ನೇತೃತ್ವದಲ್ಲಿ ಇದುವರೆಗೆ 18 ಶನೇಶ್ವರ ನಾಟಕಗಳನ್ನು ಯಶಸ್ವಿಯಾಗಿ ಆಡಿಸಿರುವುದು ಹೆಮ್ಮೆಯ ವಿಷಯ ಎಂದ ಅವರು, ತಾವೂ ಸಹ ಶ್ರಾವಣ ಮಾಸದಲ್ಲಿ ಶನಿಪ್ರಭಾವ ನಾಟಕ ಪ್ರದರ್ಶನ ಏರ್ಪಡಿಸುತ್ತಿದ್ದು, ಅದನ್ನೂ ಮೀರಿಸಿ ಚಿನ್ನಾಪುರ ಗ್ರಾಮದಲ್ಲಿ ಅತ್ಯಂತ ಅದ್ಭುತವಾಗಿ ಈ ಮಹಾತ್ಮನ ನಾಟಕ ನಡೆಯುತ್ತಿರುವುದು ಸಂತೋಷ ತಂದಿದೆ ಎಂದು ಶ್ಲಾಘಿಸಿದರು. ಇದೇ ವೇಳೆ, ತಾವು ಮಾಡುವ ದಾನ ಧರ್ಮಗಳು ಇನ್ನೊಂದು ಕೈಗೆ ತಿಳಿಯಬಾರದು ಎಂಬುದು ತಮ್ಮ ಭಾವನೆಯಾಗಿದ್ದು, ತಮಗೆ ಯಾವುದೇ ಹೊಗಳಿಕೆ ಸಲ್ಲದು ಹಾಗೂ ತಾವು ಏನೇ ಮಾಡಿದರೂ ಅದು ಭಕ್ತರಿಗೋಸ್ಕರ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಸಮಾಜ ಸೇವಕರು ಹಾಗೂ ಚಲನಚಿತ್ರ ನಟರಾದ ಪಾಕರಹಳ್ಳಿ ಬುಲೆಟ್ ನಾಗರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಗ್ರಾಮದ ಮುಖಂಡರಾದ ಮುದವತ್ತಿ ಎಸ್.ಕೃಷ್ಣಪ್ಪ, ವಡಗೇರಿ ರಮೇಶ್, ಜಂಗಾಲಹಳ್ಳಿ ಶ್ರೀನಿವಾಸ್, ಶೆಟ್ಟಿಗಾನಹಳ್ಳಿ ಎಸ್ಎಂಎಸ್ ಸಂತೋಷ್, ನದೀಂ ಬೇಗ್, ಟೈಲರ್ ಶಿವಕುಮಾರ್, ವಕ್ಕಲೇರಿ ಚಿರು, ಚಿನ್ನಾಪುರ ನಾರಾಯಣಸ್ವಾಮಿ, ಉಮೇಶ್ ಹಾಗೂ ಪಿಳ್ಳಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
    user_ಎಸ್.ಎನ್.ಪ್ರಕಾಶ್
    ಎಸ್.ಎನ್.ಪ್ರಕಾಶ್
    ಕೋಲಾರ, ಕೋಲಾರ, ಕರ್ನಾಟಕ•
    11 hrs ago
  • ಹಲಗೂರು ಸಮೀಪದ ಗೊಲ್ಲರಹಳ್ಳಿ ಗ್ರಾಮದಲ್ಲಿರುವ ಶ್ರೀ ಮಲೆ ಮಾದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭಕ್ತಾದಿಗಳು ಒಟ್ಟಾಗಿ ಸೇರಿ ನೂತನವಾಗಿ ಮಲೆ ಮಾದೇಶ್ವರ ಸ್ವಾಮಿಯ ಕೊಳಗವನ್ನು (ಮುಖವಾಡ) ಮಾಡಿಸಿಕೊಟ್ಟಿದ್ದು, ಇದಕ್ಕೆ ಶನಿವಾರ ವಿಶೇಷ ಪೂಜಾ ಪುನಸ್ಕಾರಗಳನ್ನು ನಡೆಸಿ ಪ್ರಸಾದ ವಿನಿಯೋಗಿಸಲಾಯಿತು. ಮಳವಳ್ಳಿ ತಾಲೂಕಿನ ಗೊಲ್ಲರಹಳ್ಳಿಯಲ್ಲಿ ಜರುಗಿದ ಈ ಕೊಳಗ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು. ಗ್ರಾಮದ ಅರ್ಚಕರಾದ ಮಹಾದೇವ ಅವರು ಮಾತನಾಡಿ, ಭಕ್ತರು ಸೇರಿ ಮಾಡಿಸಿಕೊಟ್ಟಿರುವ ಈ ಮಹದೇಶ್ವರ ಸ್ವಾಮಿಯ ಕೊಳಗದ ಮೂರ್ತಿಯನ್ನು ಮಲೆ ಮಹದೇಶ್ವರ ಬೆಟ್ಟಕ್ಕೆ ತೆಗೆದುಕೊಂಡು ಹೋಗಿ ದೇವಸ್ಥಾನದ ಆವರಣದಲ್ಲಿ ಸ್ವಾಮಿಯ ಮುಂದೆ ಪೂಜೆ ಮಾಡಿಸಲಾಗುತ್ತದೆ. ಆ ನಂತರ ಸಾಲೂರು ಮಠದ ಸ್ವಾಮೀಜಿಯವರ ಸನ್ನಿಧಿಯಲ್ಲಿ ಹೂವು ಹೊಂಬಾಳೆ ಮಾಡಿಸಿ, ಅವರ ಅನುಮತಿ ಹಾಗೂ ಆಶೀರ್ವಾದದೊಂದಿಗೆ ಗೊಲ್ಲರಹಳ್ಳಿ ಗ್ರಾಮದ ದೇವಸ್ಥಾನದಲ್ಲಿ ಕೊಳಗವನ್ನು ಧರಿಸಲಾಗುತ್ತದೆ ಎಂದು ವಿವರಿಸಿದರು. ಈ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಮಲೆ ಮಾದೇಶ್ವರ ಬೆಟ್ಟದಲ್ಲಿ ಅನ್ನ ಸಂತರ್ಪಣೆಯನ್ನು ಸಹ ಏರ್ಪಡಿಸಲಾಗಿದ್ದು, ಗೊಲ್ಲರಹಳ್ಳಿ, ನಂಜಾಪುರ, ಮಡಳ್ಳಿ ಹಾಗೂ ಚಿಕ್ಕ ಏಳಚೆಗೆರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಪೂಜೆ ಮುಗಿಸಿಕೊಂಡು ಬರಲು ಬೆಟ್ಟಕ್ಕೆ ತೆರಳಿದ್ದಾರೆ.
    1
    ಹಲಗೂರು ಸಮೀಪದ ಗೊಲ್ಲರಹಳ್ಳಿ ಗ್ರಾಮದಲ್ಲಿರುವ ಶ್ರೀ ಮಲೆ ಮಾದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭಕ್ತಾದಿಗಳು ಒಟ್ಟಾಗಿ ಸೇರಿ ನೂತನವಾಗಿ ಮಲೆ ಮಾದೇಶ್ವರ ಸ್ವಾಮಿಯ ಕೊಳಗವನ್ನು (ಮುಖವಾಡ) ಮಾಡಿಸಿಕೊಟ್ಟಿದ್ದು, ಇದಕ್ಕೆ ಶನಿವಾರ ವಿಶೇಷ ಪೂಜಾ ಪುನಸ್ಕಾರಗಳನ್ನು ನಡೆಸಿ ಪ್ರಸಾದ ವಿನಿಯೋಗಿಸಲಾಯಿತು. ಮಳವಳ್ಳಿ ತಾಲೂಕಿನ ಗೊಲ್ಲರಹಳ್ಳಿಯಲ್ಲಿ ಜರುಗಿದ ಈ ಕೊಳಗ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.

ಗ್ರಾಮದ ಅರ್ಚಕರಾದ ಮಹಾದೇವ ಅವರು ಮಾತನಾಡಿ, ಭಕ್ತರು ಸೇರಿ ಮಾಡಿಸಿಕೊಟ್ಟಿರುವ ಈ ಮಹದೇಶ್ವರ ಸ್ವಾಮಿಯ ಕೊಳಗದ ಮೂರ್ತಿಯನ್ನು ಮಲೆ ಮಹದೇಶ್ವರ ಬೆಟ್ಟಕ್ಕೆ ತೆಗೆದುಕೊಂಡು ಹೋಗಿ ದೇವಸ್ಥಾನದ ಆವರಣದಲ್ಲಿ ಸ್ವಾಮಿಯ ಮುಂದೆ ಪೂಜೆ ಮಾಡಿಸಲಾಗುತ್ತದೆ. ಆ ನಂತರ ಸಾಲೂರು ಮಠದ ಸ್ವಾಮೀಜಿಯವರ ಸನ್ನಿಧಿಯಲ್ಲಿ ಹೂವು ಹೊಂಬಾಳೆ ಮಾಡಿಸಿ, ಅವರ ಅನುಮತಿ ಹಾಗೂ ಆಶೀರ್ವಾದದೊಂದಿಗೆ ಗೊಲ್ಲರಹಳ್ಳಿ ಗ್ರಾಮದ ದೇವಸ್ಥಾನದಲ್ಲಿ ಕೊಳಗವನ್ನು ಧರಿಸಲಾಗುತ್ತದೆ ಎಂದು ವಿವರಿಸಿದರು. ಈ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಮಲೆ ಮಾದೇಶ್ವರ ಬೆಟ್ಟದಲ್ಲಿ ಅನ್ನ ಸಂತರ್ಪಣೆಯನ್ನು ಸಹ ಏರ್ಪಡಿಸಲಾಗಿದ್ದು, ಗೊಲ್ಲರಹಳ್ಳಿ, ನಂಜಾಪುರ, ಮಡಳ್ಳಿ ಹಾಗೂ ಚಿಕ್ಕ ಏಳಚೆಗೆರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಪೂಜೆ ಮುಗಿಸಿಕೊಂಡು ಬರಲು ಬೆಟ್ಟಕ್ಕೆ ತೆರಳಿದ್ದಾರೆ.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Agriculture cooperative ಮಳವಳ್ಳಿ, ಮಂಡ್ಯ, ಕರ್ನಾಟಕ•
    20 min ago
  • ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಜ್ಜಕದಿರೇನಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದ್ದ SIR ಪ್ರಕ್ರಿಯೆ ಜಾಗೃತಿ ಅಭಿಯಾನಕ್ಕೆ ಭಾರಿ ಜನಸಾಗರವೇ ಹರಿದುಬಂದಿದೆ. ಈ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಬಂದು ಕಿಕ್ಕಿರಿದು ಸೇರಿದ್ದಾರೆ.
    1
    ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಜ್ಜಕದಿರೇನಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದ್ದ SIR ಪ್ರಕ್ರಿಯೆ ಜಾಗೃತಿ ಅಭಿಯಾನಕ್ಕೆ ಭಾರಿ ಜನಸಾಗರವೇ ಹರಿದುಬಂದಿದೆ. ಈ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಬಂದು ಕಿಕ್ಕಿರಿದು ಸೇರಿದ್ದಾರೆ.
    user_Venu Gopal
    Venu Gopal
    Local News Reporter ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕರ್ನಾಟಕ•
    3 hrs ago
  • ಎಸ್. ಜಾನಕಿ ಅವರಿಗೆ ಕಣ್ಣೀರಿನ ವಿದಾಯ ಹೇಳಲಾಗಿದ್ದು, ಅವರ ಅಂತ್ಯಸಂಸ್ಕಾರದ ಕಾರ್ಯಗಳು ಅತ್ಯಂತ ವಿಧಿವತ್ತಾಗಿ ನೆರವೇರಿವೆ.
    1
    ಎಸ್. ಜಾನಕಿ ಅವರಿಗೆ ಕಣ್ಣೀರಿನ ವಿದಾಯ ಹೇಳಲಾಗಿದ್ದು, ಅವರ ಅಂತ್ಯಸಂಸ್ಕಾರದ ಕಾರ್ಯಗಳು ಅತ್ಯಂತ ವಿಧಿವತ್ತಾಗಿ ನೆರವೇರಿವೆ.
    user_Veega News Kannada
    Veega News Kannada
    Technical service ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    4 hrs ago
  • ತನ್ನ ಹೆಂಡತಿಗೆ ಅಶ್ಲೀಲ ಪದಗಳು ಮತ್ತು ಅಶ್ಲೀಲ ವಿಡಿಯೋಗಳನ್ನು ಕಳುಹಿಸುತ್ತಿದ್ದ ಕಚಡ ವ್ಯಕ್ತಿಗೆ ಸಾರ್ವಜನಿಕರು ಹಿಡಿದು ಸರಿಯಾಗಿ ಗೂಸಾಗೌರವ ನೀಡಿದ್ದಾರೆ. ಹೆಂಡತಿಯ ಮೊಬೈಲ್‌ಗೆ ಅಸಭ್ಯವಾಗಿ ಸಂದೇಶ ಹಾಗೂ ವಿಡಿಯೋ ಕಳುಹಿಸುತ್ತಿದ್ದ ಈ ವ್ಯಕ್ತಿಯನ್ನು ಸಾರ್ವಜನಿಕರೇ ಸೇರಿ ತರಾಟೆಗೆ ತೆಗೆದುಕೊಂಡು ಧರ್ಮದೇಟು ನೀಡಿದ್ದಾರೆ. ಈ ಕಚಡ ವ್ಯಕ್ತಿಯ ಮುಖವನ್ನು ನೋಡಿ ಎಂದು ತೀವ್ರ ಆಕ್ರೋಶ ಹೊರಹಾಕಲಾಗಿದ್ದು, ಸಾರ್ವಜನಿಕರಿಂದ ಆತನಿಗೆ ಹೊಸದಾಗಿ ಸರಿಯಾದ ಗೂಸಾಗೌರವ ಸಿಕ್ಕಿದೆ.
    1
    ತನ್ನ ಹೆಂಡತಿಗೆ ಅಶ್ಲೀಲ ಪದಗಳು ಮತ್ತು ಅಶ್ಲೀಲ ವಿಡಿಯೋಗಳನ್ನು ಕಳುಹಿಸುತ್ತಿದ್ದ ಕಚಡ ವ್ಯಕ್ತಿಗೆ ಸಾರ್ವಜನಿಕರು ಹಿಡಿದು ಸರಿಯಾಗಿ ಗೂಸಾಗೌರವ ನೀಡಿದ್ದಾರೆ. ಹೆಂಡತಿಯ ಮೊಬೈಲ್‌ಗೆ ಅಸಭ್ಯವಾಗಿ ಸಂದೇಶ ಹಾಗೂ ವಿಡಿಯೋ ಕಳುಹಿಸುತ್ತಿದ್ದ ಈ ವ್ಯಕ್ತಿಯನ್ನು ಸಾರ್ವಜನಿಕರೇ ಸೇರಿ ತರಾಟೆಗೆ ತೆಗೆದುಕೊಂಡು ಧರ್ಮದೇಟು ನೀಡಿದ್ದಾರೆ. ಈ ಕಚಡ ವ್ಯಕ್ತಿಯ ಮುಖವನ್ನು ನೋಡಿ ಎಂದು ತೀವ್ರ ಆಕ್ರೋಶ ಹೊರಹಾಕಲಾಗಿದ್ದು, ಸಾರ್ವಜನಿಕರಿಂದ ಆತನಿಗೆ ಹೊಸದಾಗಿ ಸರಿಯಾದ ಗೂಸಾಗೌರವ ಸಿಕ್ಕಿದೆ.
    user_Ica10 TVNEWS
    Ica10 TVNEWS
    Film Editor ಬೆಂಗಳೂರು ಉತ್ತರ, ಬೆಂಗಳೂರು ನಗರ, ಕರ್ನಾಟಕ•
    15 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.