ಶಿವಮೊಗ್ಗ-ಬಿಟಿವಿ ಜಿಲ್ಲಾ ವರದಿಗಾರ ಅನಿಲ್ ಅಪಘಾತ ಆಸ್ಪತ್ರೆಯಲ್ಲಿ ಸಾವು ಶಿವಮೊಗ್ಗ, ಎರಡು ಬೈಕ್ ಗಳ ಮುಖಾ ಮುಖಿ ಡಿಕ್ಕಿ ಸಂಭವಿಸಿ ಬಿಟಿವಿ ಶಿವಮೊಗ್ಗ ಜಿಲ್ಲಾ ವರದಿ ಗಾರ ಅನಿಲ್ ಕುಮಾರ್ ನಾಯ್ಕ (44) ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ನಗರದ ಶುಭಮಂಗಳ ಪಕ್ಕದ ಆಟೋ ಕಾಂಪ್ಲೆಕ್ಸ್ ರಸ್ತೆಯಲ್ಲಿ ಸಂಭವಿಸಿದ ಬೈಕ್ ಗಳೆರಡರ ನಡುವಿನ ಡಿಕ್ಕಿಯಲ್ಲಿ ಪತ್ರಕರ್ತ ಬಿಟಿವಿ ಅನಿಲ್ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. ಅಪಘಾತ ಭಾನುವಾರ ರಾತ್ರಿ ಸಂಭವಿಸಿದ್ದು, ಚಿಕಿತ್ಸೆ ಫಲಕಾರಿ ಯಾಗದೇ ಮ್ಯಾಕ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತ ಪತ್ರಕರ್ತ ಅನಿಲ್ ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದಾಗ ಮತ್ತೊಂದು ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಚಿಂತಾಜನಕ ಸ್ಥಿತಿ ತಲುಪಿದ್ದರು. ಅನಿಲ್ ಅವರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಈ ಮೊದಲು ಟಿವಿ9 ಚಿಕ್ಕಮಗಳೂರು ಜಿಲ್ಲಾ ಕ್ಯಾಮರಾಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅನಿಲ್ ನಂತರ ಬಿಟಿವಿಗೆ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

- ಕಂಬದಾಳ್ ಹೊಸೂರು ಕ್ಯಾಂಪ್ ಆಟದ ಮೈದಾನ ಆವರಣದಲ್ಲಿ ನಡೆದ ಕಂಬದಾಳ್ ಹೊಸೂರು ಗ್ರಾಮ ಪಂಚಾಯಿತಿ ಮತ್ತು ತಾವರಗಟ್ಟ ಗ್ರಾಮ ಪಂಚಾಯಿತಿಯ ಗೋಡಿಬೀಡು ಮತ್ತು ಮಲ್ಲಿಗೆನಹಳ್ಳಿ ಗ್ರಾಮಗಳ ವ್ಯಾಪ್ತಿಯ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಸಮಿತಿ ಸಭೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರನ್ನು ಕಂಡು ಮನತುಂಬಿ ಬಂತು, ಈ ಕಾರ್ಯಕ್ರಮಕ್ಕೆ ಇಡೀ ಗ್ರಾಮವನ್ನೇ ಹಬ್ಬದ ರೀತಿಯಲ್ಲಿ ಸಿಂಗರಿಸಿ ಹಗಲಿರುಳು ಶ್ರಮಿಸಿದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕಂಬದಾಳ್ ಹೊಸೂರು ಗ್ರಾಮ ಪಂಚಾಯಿತಿಯ ಮತ್ತು ತಾವರಗಟ್ಟ ಗ್ರಾಮ ಪಂಚಾಯಿತಿಯ ಗೋಡಿಬೀಡು ಮತ್ತು ಮಲ್ಲಿಗೆನಹಳ್ಳಿ ಗ್ರಾಮಗಳ ಮಾಜಿ ಅಧ್ಯಕ್ಷರು, ಮಾಜಿ ಉಪಾಧ್ಯಕ್ಷರು, ಮಾಜಿ ಸದಸ್ಯರುಗಳು, ಸರ್ಕಾರಿ ಅಧಿಕಾರಿಗಳು ಮತ್ತು ಆರಕ್ಷಕ ಅಧಿಕಾರಿಗಳಿಗೂ ವಿಶೇಷ ಧನ್ಯವಾದಗಳು. ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಒಂದೇಡೆ ಸೇರಿಸಿ ಜನರ ಕುಂದುಕೊರತೆಗಳನ್ನು ಆಲಿಸಿ ಸ್ಥಳದಲ್ಲೆ ಪರಿಹಾರ ಮಾಡುವಲ್ಲಿ ಯಶಸ್ವಿಗೊಳ್ಳಲಾಯಿತು.ನಿಮ್ಮ ಈ ಪ್ರೀತಿ ಅಭಿಮಾನ ಚಿರಕಾಲ ನಮ್ಮ ಕುಟುಂಬದ ಮೇಲೆ ಇರಲಿ ಎಂದು ಬಯಸುತ್ತೆನೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಟ್ಟ ಪ್ರತಿಯೊಬ್ಬ ಕಾರ್ಯಕರ್ತರಿಗೂ ಮತ್ತು ನಮ್ಮ ಕುಟುಂಬದ ಅಭಿಮಾನಿಗಳಿಗೂ ನನ್ನ ಸಾಷ್ಟಂಗ ನಮಸ್ಕಾರ1
- ಕಡೂರು: ವಿಧಾನ ಸೌಧದಲ್ಲಿ ನಡೆಯುತ್ತಿರುವ ಕರ್ನಾಟಕ ಸರ್ಕಾರದ ಬಜೆಟ್ ಅಧಿವೇಶನದಲ್ಲಿ ಕಡೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್.ಆನಂದ್ ಬೆಂಕಿ ಅವಘಡದಲ್ಲಿ ಸುಟ್ಟು ಹೋದ ಮನೆಗಳಿಗೆ ಪರಿಹಾರವನ್ನು ನೀಡಲಾಗುತ್ತಿದೆ. ಆದರೆ ಅಗ್ನಿ ಅವಘಡ ಯಾಕೆ ಆಯಿತು ಎಂಬ ಕಾರಣ ತಿಳಿಯದೆ ಮನೆಗಳು ಸುಟ್ಟು ಹೋದಾಗ ಜನರಿಗೆ ಪರಿಹಾರ ದೊರೆಯದೇ ಅತ್ಯಂತ ಕಷ್ಟವಾಗುತ್ತಿದ್ದು ಮನೆ ಸುಟ್ಟು ಹೋಗಲು ಸ್ಪಷ್ಟ ಕಾರಣ ತಿಳಿಯದೇ ಹೋದಾಗ ಕೂಡಾ ಆ ಮನೆಗಳಿಗೆ ಎಸ್ಡಿಆರ್ ಎಫ್ ಹಾಗೂ ಎನ್ ಡಿ ಆರ್ ಎಫ್ ಮೂಲಕ ಪರಿಹಾರ ನೀಡಬೇಕಾಗಿ ಸದನದಲ್ಲಿ ಮನವಿ ಮಾಡಿದರು. ಕಳೆದ ಆರು ತಿಂಗಳಲ್ಲಿ ಕಡೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಕಸ್ಮಿಕ ಬೆಂಕಿ ಅನಾಹುತಗಳಿಗೆ ಸುಮಾರು 7 ಮನೆಗಳು ಸುಟ್ಟು ಹೋಗಿದ್ದು ಈ ರೀತಿ ಬೆಂಕಿ ಅವಘಡಗಳಿಗೆ ಸುಟ್ಟು ಹೋದ ಮನೆಗಳಿಗೆ ಸರ್ಕಾರ ಹೆಚ್ಚಿನ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡಬೇಕಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರಲ್ಲಿ ಒತ್ತಾಯಿಸಿದರು.1
- ದಾವಣಗೆರೆ : ದಾವಣಗೆರೆ ದಕ್ಷಿಣ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಬಿಟ್ಟ ವಿಚಾರ. ಯುಗಾದಿ ಹಬ್ಬದ ನಂತರ ನೋಡೋಣ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು. ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಎಸ್ . ಮಲ್ಲಿಕಾರ್ಜುನ್ ಅವರು ರೂ.1061 ಲಕ್ಷಗಳ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಭೂಮಿ ಪೂಜೆ ಸಮಾರಂಭದಲ್ಲಿ ಭಾಗವಹಿಸಿ ನಂತರ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದರು.1
- ತೋಡ್ಲರಹಟ್ಟಿ ಗ್ರಾಮದಲ್ಲಿ ಮಕ್ಕಳ ಕಳ್ಳಿಯೆಂದು ಅನುಮಾನಗೊಂಡು ಮಹಿಳೆಗೆ ಧರ್ಮದೇಟು ಕೊಟ್ಟ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ತೋಡ್ಲರಹಟ್ಟಿ ಗ್ರಾಮದಲ್ಲಿ ಸೋಮವಾರ ಘಟನೆ ನಡೆದಿದ್ದು ಪ್ರಖರಣ ತಡವಾಗಿ ಬೆಳಕಿಗೆ ಬಂದಿದೆ. ಮಕ್ಕಳು ಕಳ್ಳಿಯೆಂದು ಅನುಮಾನಗೊಂಡ ಗ್ರಾಮದ ಮಹಿಳೆಯರು ಮಹಿಳೆಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲ್ಲೂಕಿನ ನನ್ನಿವಾಳ ಗ್ರಾಪಂ ವ್ಯಾಪ್ತಿಯ ತೋಡ್ಲರಹಟ್ಟಿಯಲ್ಲಿ ನಡೆದಿದೆ1
- ಇತ್ತೀಚಿನ ದಿನಗಳಲ್ಲಿ ಮಣ್ಣಿನ ಮನೆಗಳ ನಿರ್ಮಾಣ ಇಲ್ಲದ ಕಾರಣ ಸಿಮೆಂಟು ಮನೆಗಳ ನಿರ್ಮಾಣದಿಂದಾಗಿ ಮನೆಗಳಿಗೆ ಸುಣ್ಣ ಬದಲು ಬಣ್ಣಗಳ ಮರೆ ಹೋಗುತ್ತಿರುವುದರಿಂದ ಸುಣ್ಣಗಾರರ ಬದುಕು ಬಣ್ಣ ಕಳೆದುಕೊಳ್ಳುತ್ತಿದೆ... ಸುಣ್ಣಗಾರರ ಬದಕು ಕುರಿತು ಒಂದು ವರದಿ . ಸುರೇಶ ಬೆಳಗೆರೆ 97398757291
- ನಾಯಕನಹಟ್ಟಿಯಲ್ಲಿ ಶ್ರೀ ಗುರು ತಿಪ್ಪೇಶನ ದರ್ಶನಕ್ಕೆ ಭಕ್ತರ ಸಾಗರ ನಾಯಕನಹಟ್ಟಿಯಲ್ಲಿ ಸೋಮವಾರ ಶ್ರೀ ಗುರು ತಿಪ್ಪೇಶನ ಸ್ವಾಮಿ ದರ್ಶನ ಪಡೆಯಲು ವಿವಿಧ ಕಡೆಗಳಿಂದ ಭಕ್ತರು ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಭಕ್ತಿಭಾವದಿಂದ ದರ್ಶನ ಪಡೆದರು. ಭಕ್ತರು ದೇವರ ಬಳಿ ಮನಸಿನ ಹರಕೆ ತೀರಿಸಲು ಗೊಬರಿ ಸುಡುವ ಮೂಲಕ ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬೇತೂರು ಗ್ರಾಮದ ಉದ್ಯಮಿಯೊಬ್ಬರು ಅನ್ನದಾಸೋಹ ವ್ಯವಸ್ಥೆ ಮಾಡಿದ್ದರೆ, ದಾವಣಗೆರೆ ಮೂಲದ ಉದ್ಯಮಿಯೊಬ್ಬರು ಭಕ್ತರಿಗೆ ಉಚಿತ ಲಾಡು ವಿತರಣೆ ಮಾಡಿದರು. ಕಾರ್ಯಕ್ರಮದ ವೇಳೆ ಆಡಳಿತಾಧಿಕಾರಿ ಗಂಗಾಧರಪ್ಪ, ಸಿಬ್ಬಂದಿ ಸತೀಶ್ ಸೇರಿದಂತೆ ಇತರರು ಭಕ್ತರಿಗೆ ಲಾಡು ವಿತರಣೆ ಮಾಡಿ ಸೇವೆಯಲ್ಲಿ ಭಾಗವಹಿಸಿದರು.1
- ಬ್ರೇಕ್ ಇನ್ಸ್ಪೆಕ್ಟರ್ ಎಡವಟ್ಟಿಗೆ ತುಮಕೂರು ಆರ್ ಟಿ ಓ ಕಚೇರಿ ಮರ್ಯಾದೆ ಹರಾಜು #onlinetv24x7 #tumkur #tumkurrto #tumkursp #tumkurdc #tumkurmp #kpcc #bjp #aicc #aap #krs1
- ಚಳ್ಳಕೆರೆ ತಾಲ್ಲೂಕು ವಿಶ್ವಕರ್ಮ ಸಮಾಜದ ವತಿಯಿಂದ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ವಡ್ಡನಾಹಾಳ್‌ನ ಶ್ರೀ ವಿಶ್ವಕರ್ಮ ಮಹಾ ಸಂಸ್ಥಾನ ಸರಸ್ವತಿ ಪೀಠದಲ್ಲಿ 2026ರ ಏಪ್ರಿಲ್ 19ರಂದು ನಡೆಯಲಿರುವ ಶ್ರೀ ಗಾಯತ್ರಿ ಮಹಾಯಜ್ಞ ಹಾಗೂ ಸಾವಿತ್ರೀ ದೇವಸ್ಥಾನದ ಅಡಿಗಲ್ಲು ಸಮಾರಂಭದ ಪೂರ್ವಸಿದ್ಧತೆ ಕುರಿತು ಸಭೆ ನಡೆಯಿತು.1