Shuru
Apke Nagar Ki App…
ರಾಯಚೂರು ನಗರದಲ್ಲಿ ಏಪ್ರಿಲ್ 25 ರಂದು ಭೀಮ್ ಜಯಂತಿ ಸಂಭ್ರಮಕ್ಕೆ ಸಿದ್ದತೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತಿಯ ಅಂಗವಾಗಿ ದಲಿತ ಶಕ್ತಿಪಡೆ ಸಂಘಟನೆ ವತಿಯಿಂದ ಭೀಮ್ ಜಯಂತಿ ಸಂಭ್ರಮವನ್ನು ಏಪ್ರಿಲ್ 25 ರಂದು ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಶಕ್ತಿಪಡೆ ಸಂಘಟನೆಯ ಜಿಲ್ಲಾಧ್ಯಕ್ಷ ಆನಂದ್ ರಾಜ್ ಬುಧವಾರ ತಿಳಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು,ಅಂದು ಸಂಜೆ 5 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಸ್ಟೇಷನ್ ಸರ್ಕಲ್ ವೃತ್ತದಿಂದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದವರೆಗೆ ಬೃಹತ್ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ. ಈ ಜಾಥಾದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಯುವಕರು ಹಾಗೂ ಅಂಬೇಡ್ಕರ್ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.
K2 kannada News
ರಾಯಚೂರು ನಗರದಲ್ಲಿ ಏಪ್ರಿಲ್ 25 ರಂದು ಭೀಮ್ ಜಯಂತಿ ಸಂಭ್ರಮಕ್ಕೆ ಸಿದ್ದತೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತಿಯ ಅಂಗವಾಗಿ ದಲಿತ ಶಕ್ತಿಪಡೆ ಸಂಘಟನೆ ವತಿಯಿಂದ ಭೀಮ್ ಜಯಂತಿ ಸಂಭ್ರಮವನ್ನು ಏಪ್ರಿಲ್ 25 ರಂದು ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಶಕ್ತಿಪಡೆ ಸಂಘಟನೆಯ ಜಿಲ್ಲಾಧ್ಯಕ್ಷ ಆನಂದ್ ರಾಜ್ ಬುಧವಾರ ತಿಳಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು,ಅಂದು ಸಂಜೆ 5 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಸ್ಟೇಷನ್ ಸರ್ಕಲ್ ವೃತ್ತದಿಂದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದವರೆಗೆ ಬೃಹತ್ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ. ಈ ಜಾಥಾದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಯುವಕರು ಹಾಗೂ ಅಂಬೇಡ್ಕರ್ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.
More news from ಕರ್ನಾಟಕ and nearby areas
- ಶ್ರೀ ಗಿರಿ ಅಭಯ ಆಂಜನೇಯಸ್ವಾಮಿ ಸೇವಾ ಸಮಿತಿ ವತಿಯಿಂದ ಏಪ್ರಿಲ್ 25 ರಂದು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ‘ಅಭಯಾಂತರಂಗ’ ಗ್ರಂಥ ಲೋಕಾರ್ಪಣೆ ಹಾಗೂ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಶ್ರೀ ಗಿರಿ ಅಭಯ ಆಂಜನೇಯಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷರಾದ ಬಿ. ಬಸವರಾಜ್ ಬುಧವಾರ ತಿಳಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು,ಅಂದು ಬೆಳಿಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಚರಂತೇಶ್ವರ ಮಠದ ಪೂಜ್ಯ ಶ್ರೀ ಶರಣಬಸವ ದೇವರು ದಿವ್ಯ ಸಾನಿಧ್ಯ ವಹಿಸಲಿದ್ದು, ಸಚಿವರಾದ ಎನ್.ಎಸ್. ಬೋಸರಾಜು ಉದ್ಘಾಟನೆ ನೆರವೇರಿಸಲಿದ್ದಾರೆ.1
- Post by Sharanappa Annadata1
- ಮಹಿಳಾ ಮೀಸಲಾತಿ ವಿರೋಧ ಮಹಿಳೆಯರಿಗೆ ಅಪಮಾನ: ಲಲಿತಾ ಅನಪುರ ಕಿಡಿ1
- ವಿಜಯಪುರ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ ಮೇ ತಿಂಗಳು ಜೂನ್ ತಿಂಗಳಲ್ಲಿ ಜನರು ಹೊರಗೆ ಹೋಗಬಾರದು ಅವಶ್ಯ ಇದ್ರೆ ಮಾತ್ರ ಹೊರಗಡೆ ಹೋಗಬೇಕು ಡಾ ಶಸ್ತ್ರ ಚಿಕಿತ್ಸೆ ವೈದ್ಯರು ಹೇಳಿದ್ದಾರೆ1
- ಇಳಕಲ್ ನಗರದಲ್ಲಿ ಮಿತಿ ಮೀರಿದ ಬೀದಿ ನಾಯಿಗಳ ಹಾವಳಿಗೆ ಆಕಳಿನ ಕರುವಿನ ಮೇಲೆ ದಾಳಿ ಮಾಡಿದ್ದರಿಂದ ಕರು ತೀವ್ರವಾಗಿ ಗಾಯಗೊಂಡು ಬುಧವಾರ ಮೃತಪಟ್ಟಿದೆ. ನಗರದ ಶ್ರೀರಾಮ ಮಂದಿರ ಸಮೀಪ ಬಜಾರದಲ್ಲಿ ಬೀದಿ ನಾಯಿಗಳು ಕರುವಿನ ಮೇಲೆ ದಾಳಿ ಮಾಡಿ ಹೊಟ್ಟೆ ಮತ್ತು ಕವಿಯನ್ನು ತಿಂದ್ದು ಹಾಕಿದೆ. ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮೀತಿ ಮೀರಿ ಹೋಗಿದೆ, ನಗರಸಭೆ ಅಧಿಕಾರಿಗಳು ನಾಯಿಗಳನ್ನು ಸೆರೆ ಹಿಡಿದು ಬೇರೆಡೆಗೆ ಸಾಗಿಸಿದರೂ ಕೂಡ ಬೀದಿ ನಾಯಿಗಳ ಹಾವಳಿ ಕಡಿಮೆಯಾಗಿಲ್ಲ. ನಗರಸಭೆ ಅಧಿಕಾರಿಗಳು ಬೀದಿ ನಾಯಿಗಳ ಹಿಡಿಯುವ ಕಾರ್ಯಾಚರಣೆಯನ್ನು ಮಾಡಬೇಕು. ಶಾಲೆಗಳು ರಜೆ ಇರುವದ್ದರಿಂದ ಮನೆಯ ಮುಂದೆ ಮಕ್ಕಳು ಆಟ ಆಡುವ ಸಂದರ್ಭದಲ್ಲಿ ಬೀದಿ ನಾಯಿಗಳು ಯಾವಾಗ ದಾಳಿ ಮಾಡುತ್ತಾವೋ ಗೊತ್ತಿಲ್ಲ, ಅಧಿಕಾರಿಗಳು ಬೇಗನೆ ಎಚ್ಚೆತ್ತುಕೊಂಡು ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಬೇಕಾಗಿದೆ.1
- ಕಾಶಿ ಪೀಠದ ಜಗದ್ಗುರುಗಳ ಸಮ್ಮುಖದಲ್ಲಿ ಸರ್ವಧರ್ಮ ಸಾಮೂಹಿಕ ವಿವಾಹ ಹಾಗೂ ಧಾರ್ಮಿಕ ಸಭೆ ವೈಭವದಿಂದ ಜರುಗಿತು.1
- ಲೋಕಾಯುಕ್ತ ಬಲೆಗೆ ಕೆರೂರ ಪಿ.ಎಸ್.ಐ. ಭೀಮಪ್ಪ ಕೆರೂರ - ಸುಳ್ಳು ಕೇಸ್ ದಾಖಲಿಸುತ್ತೇನೆಂದು ವ್ಯಕ್ತಿಯೊಬ್ಬನಿಂದ ಲಂಚ ಪಡೆಯುವಾಗ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಪಟ್ಟಣದ ಪಿ.ಎಸ್.ಐ.ಭೀಮಪ್ಪ ರಬಕವಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮಂಗಳವಾರ ಫಿರ್ಯಾದಿದಾರ ಬೆಳಗಂಟಿ ಕೆರೂರ ನಿವಾಸಿ ಮುತ್ತಪ್ಪ ಹುಲ್ಲಪ್ಪ ನಾಯ್ಕರ ಇವರು ಬಾಗಲಕೋಟೆ ಲೋಕಾಯುಕ್ತ ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾದಿ ನೀಡಿದ್ದರಲ್ಲಿ, ಎ.17 ರಂದು ಫಿರ್ಯಾದಿಯ ಸ್ನೇಹಿತ ಶಂಕ್ರಪ್ಪ ನೀಲಪ್ಪ ಬೂದಿಹಾಳ ಸಾ:ಕೆರೂರ ಇವನಿಗೆ ಅವನ ಮೋಟರ ಸೈಕಲ್ ನಂ:ಕೆಎ-29 ಇಸಿ-0914 ಸಮೇತ ಕೆರೂರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಪೊಲೀಸ್ ಠಾಣೆಯಲ್ಲಿ ಕೂಡಿಸಿ ಅವನಿಗೆ ಇಸ್ಪೀಟ್ ಆಡಿಸಿದ್ದಿಯಾ. ಬಡ್ಡಿ ಆಡಿದ್ದೀಯಾ ಅಂತಾ ಸುಳ್ಳು ಆಪಾದನೆ ಮಾಡಿ ನಿನ್ನ ಮೇಲೆ ಕೇಸ್ ಮಾಡುತ್ತೇವೆ ಅಂತಾ ಹೆದರಿಸಿ ರೂ.1 ಲಕ್ಷ 70 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟು, ಎ.18 ರಂದು ರಾತ್ರಿ ಶಂಕ್ರಪ್ಪ ಬೂದಿಹಾಳ ಇವನಿಗೆ ಕೆರೂರ ಪೊಲೀಸ್ ಠಾಣೆಯಿಂದ ಬಿಟ್ಟು ಕಳುಹಿಸಿ ಲಂಚದ ಹಣ ಕೊಟ್ಟು, ಅವನ ಮೋಟರ ಸೈಕಲ್ ನಂ:ಕೆಎ-29 ಇಸಿ-0914 ನೇದ್ದನ್ನು ಬಿಡಿಸಿಕೊಂಡು ಹೋಗಲು ತಿಳಿಸಿ ಲಂಚಕ್ಕೆ ಬೇಡಿಕೆ ಇಟ್ಟಿರುತ್ತಾರೆ. ಈ ಬಗ್ಗೆ ಫಿರ್ಯಾದಿದಾರರು ದೂರು ನೀಡಿದ್ದರಿಂದ ಬಾಗಲಕೋಟೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಇಂದು ಬುಧವಾರ ಪ್ರಕರಣದಲ್ಲಿಯ ಆಪಾದಿತರಾದ ಪಿ.ಎಸ್.ಐ. ಭೀಮಪ್ಪ ರಬಕವಿ, ಪೊಲೀಸ್ ಪೇದೆ ಸಂತೋಷ ಬಿರಾದಾರ ಇಬ್ಬರೂ ಕೆರೂರ ಪೊಲೀಸ್ ಠಾಣೆ, ಇವರುಗಳು ಫಿರ್ಯಾದಿಯಿಂದ ಲಂಚದ ಹಣ ರೂ.1 ಲಕ್ಷ 70 ಸಾವಿರ ಹಣ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿರುತ್ತಾರೆ. ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಬಿ. ನಂದಗಾಂವಿ, ಇವರ ಮಾರ್ಗದರ್ಶನದಲ್ಲಿ ಡಿ.ಎಸ್.ಪಿ. ಸುರೇಶರೆಡ್ಡಿ, ಬಿ.ಎ. ಬಿರಾದಾರ, ಎಂ.ಬಿ. ಬಿರಾದಾರ, ಮತ್ತು ಎನ್. ಆರ್. ಖಿಲಾರೆ, ಪಿಐ-3 ಕರ್ನಾಟಕ ಲೋಕಾಯುಕ್ತ ಬಾಗಲಕೋಟೆ ಹಾಗೂ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.1
- ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತಿಯ ಅಂಗವಾಗಿ ದಲಿತ ಶಕ್ತಿಪಡೆ ಸಂಘಟನೆ ವತಿಯಿಂದ ಭೀಮ್ ಜಯಂತಿ ಸಂಭ್ರಮವನ್ನು ಏಪ್ರಿಲ್ 25 ರಂದು ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಶಕ್ತಿಪಡೆ ಸಂಘಟನೆಯ ಜಿಲ್ಲಾಧ್ಯಕ್ಷ ಆನಂದ್ ರಾಜ್ ಬುಧವಾರ ತಿಳಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು,ಅಂದು ಸಂಜೆ 5 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಸ್ಟೇಷನ್ ಸರ್ಕಲ್ ವೃತ್ತದಿಂದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದವರೆಗೆ ಬೃಹತ್ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ. ಈ ಜಾಥಾದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಯುವಕರು ಹಾಗೂ ಅಂಬೇಡ್ಕರ್ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.1