Shuru
Apke Nagar Ki App…
ಸಾರ್ಥಕವಾಯಿತು ಸಚಿವರೇ, ಯಾದಗಿರಿ ಜಿಲ್ಲೆಗೆ ಶಿಕ್ಷಣದ ಅವಶ್ಯಕತೆಯಿದೆ ಕಾನೂನಿಗೆ ಹೆದರಿ ಓಡಿ ಹೋಗಿರುವ ಮುತ್ಯಾನ ಬೆಂಬಲಕ್ಕೆ ನಿಂತ ಸಚಿವ ಶರಣಗೌಡ ಪಾಟೀಲ್ ದರ್ಶನಾಪುರ, ಮುತ್ಯನದ್ದು ತಪ್ಪಿಲ್ಲ, ಅದನ್ನು ದೇಶಕ್ಕೆ ತೋರಿಸಿದ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳದ್ದು ತಪ್ಪು ಎಂದು ಹೇಳಿದ್ದಾರೆ
ಅರವಿಂದ್ ರಾಜೀವ್
ಸಾರ್ಥಕವಾಯಿತು ಸಚಿವರೇ, ಯಾದಗಿರಿ ಜಿಲ್ಲೆಗೆ ಶಿಕ್ಷಣದ ಅವಶ್ಯಕತೆಯಿದೆ ಕಾನೂನಿಗೆ ಹೆದರಿ ಓಡಿ ಹೋಗಿರುವ ಮುತ್ಯಾನ ಬೆಂಬಲಕ್ಕೆ ನಿಂತ ಸಚಿವ ಶರಣಗೌಡ ಪಾಟೀಲ್ ದರ್ಶನಾಪುರ, ಮುತ್ಯನದ್ದು ತಪ್ಪಿಲ್ಲ, ಅದನ್ನು ದೇಶಕ್ಕೆ ತೋರಿಸಿದ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳದ್ದು ತಪ್ಪು ಎಂದು ಹೇಳಿದ್ದಾರೆ
More news from ಕರ್ನಾಟಕ and nearby areas
- ಕಾನೂನಿಗೆ ಹೆದರಿ ಓಡಿ ಹೋಗಿರುವ ಮುತ್ಯಾನ ಬೆಂಬಲಕ್ಕೆ ನಿಂತ ಸಚಿವ ಶರಣಗೌಡ ಪಾಟೀಲ್ ದರ್ಶನಾಪುರ, ಮುತ್ಯನದ್ದು ತಪ್ಪಿಲ್ಲ, ಅದನ್ನು ದೇಶಕ್ಕೆ ತೋರಿಸಿದ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳದ್ದು ತಪ್ಪು ಎಂದು ಹೇಳಿದ್ದಾರೆ1
- ವಿಮಾನ ನಿಲ್ದಾಣದ ಕಾರ್ಯಾಚರಣೆ ಸ್ಥಗಿತ: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಸದೃಶ್ಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಭದ್ರತಾ ಕಾರಣಗಳಿಂದಾಗಿ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಸಾವಿರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಕಷ್ಟದಲ್ಲಿ ಬಳ್ಳಾರಿಯ ಪ್ರವಾಸಿಗರು: ದುಬೈಗೆ ಪ್ರವಾಸಕ್ಕೆ ತೆರಳಿದ್ದ ಬಳ್ಳಾರಿ ನಗರದ ಶಾಸಕ ಭರತ್ ರೆಡ್ಡಿ ಸೇರಿದಂತೆ ಬಳ್ಳಾರಿ ಜಿಲ್ಲೆಯ ಸುಮಾರು 50ಕ್ಕೂ ಹೆಚ್ಚು ಪ್ರವಾಸಿಗರು ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ವಿಮಾನಗಳ ಸಂಚಾರ ಸ್ಥಗಿತಗೊಂಡಿರುವುದರಿಂದ ತಾಯ್ನಾಡಿಗೆ ಮರಳಲು ಸಾಧ್ಯವಾಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಶಾಸಕರಿಂದ ವಿಡಿಯೋ ಸಂದೇಶ: ಈ ಪರಿಸ್ಥಿತಿಯ ನಡುವೆಯೇ ಶಾಸಕ ಭರತ್ ರೆಡ್ಡಿ ಅವರು ದುಬೈನಿಂದ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ತಾವು, ತಮ್ಮ ಕುಟುಂಬಸ್ಥರು ಹಾಗೂ ಬಳ್ಳಾರಿಯ ಸುಮಾರು 35ಕ್ಕೂ ಹೆಚ್ಚು ನಿವಾಸಿಗಳು ಸದ್ಯಕ್ಕೆ ಸುರಕ್ಷಿತವಾಗಿದ್ದೇವೆ ಎಂದು ತಿಳಿಸಿದ್ದಾರೆ. ಪರಿಸ್ಥಿತಿಯನ್ನು ಗಮನಿಸುತ್ತಿದ್ದು, ಶೀಘ್ರದಲ್ಲೇ ಮರಳುವ ಆಶಯ ವ್ಯಕ್ತಪಡಿಸಿದ್ದಾರೆ.1
- ಚಂದ್ರ ಗ್ರಹಣ ಹಿನ್ನೆಲೆ ಘಾಟಿ ಸುಬ್ರಹ್ಮಣ್ಯ ದೇವಾಲಯ ಕ್ಲೋಸ್1
- ಕರ್ನಾಟಕದಲ್ಲಿ ನಿರ್ಮಾಣವಾದ ಅಂತಹ ಅದೆಷ್ಟೋ ಡ್ಯಾಮ್ ಗಳ ಪೈಕಿ ಮೈಸೂರು ಅರಸರ ಕೊಡುಗೆ ಆಡಳಿತದ ಹುರುಪುಗಳು ಇವೆ, ಅರಸರು ತ್ಯಾಗ ಮಾಡಿದಂತಹ ಇತಿಹಾಸವು ಇದೆ, ಏಷ್ಯಾ ಖಂಡದಲ್ಲೇ ಯಾರು ನಿರ್ಮಿಸಿದಂತಹ ಅತ್ಯಧಿಕ ತಂತ್ರಜ್ಞಾನಗಳನ್ನ ಬಳಸಿ ಅಣೆಕಟ್ಟೆಗಳನ್ನ ನಿರ್ಮಾಣ ಮಾಡಿದಂತಹ ಕೀರ್ತಿ ಇವರಿಗೆ ಸಲ್ಲುತ್ತದೆ. ಏಷ್ಯಾ ಖಂಡದಲ್ಲಿ ನಿರ್ಮಾಣ ಮಾಡಿರುವಂತಹ ಅಣೆಕಟ್ಟುಗಳಲ್ಲಿ ಈ ಅಣೆಕಟ್ಟು ಬಹಳ ವಿಭಿನ್ನವಾಗಿದೆ, ಅದೇ ಮಾರ್ಕೋನಹಳ್ಳಿ ಜಲಾಶಯ ನಾಲ್ವರ ನಾಲ್ವಡಿ ಕೃಷ್ಣರಾಜ ಒಡೆಯರ ಕೀರ್ತಿ ಸಲ್ಲುತ್ತದೆ. ದೇವರಾಯನ ದುರ್ಗಾ ಬೆಟ್ಟದಲ್ಲಿ ಉದ್ಭವಿಸುವ ಶಿಮ್ಷಾ ನದಿ ಕಾವೇರಿ ನದಿಯ ಮೂಲ ಸೇರಲು ಮೊದಲು ಸುಮಾರು 221 ಕಿಲೋ ಮೀಟರ್ ದೂರ ಹರಿಯುತ್ತದೆ ಕೃಷಿ ಗೆ ಕುಡಿಯಲಿಕ್ಕೆ ಅನುಕೂಲವಾಗುವ ದೃಷ್ಟಿಯಿಂದ ತುಮಕೂರಿ ಜಿಲ್ಲೆಯ ಕುಣಿಗಲ್ ತಾಲೂಕಿನ ಶಿಮ್ಷಾ ನದಿಯ ಅಡ್ಡಲಾಗಿ ಮಾರ್ಕೋನಹಳ್ಳಿ ಜಲಾಶಯವನ್ನು ನಿರ್ಮಾಣ ಮಾಡಿದೆ. ಈ ಭಾಗದ ಲಕ್ಷಾಂತರ ಜನರಿಗೆ ವ್ಯವಸಾಯವನ್ನ ಮಾಡಲಿಕ್ಕೆ ನಿರ್ಮಾಣ ಮಾಡಿದ್ದು ಕಟ್ಟೆಯನ್ನು ಕಟ್ಟಲಾಯಿತು, ಸರ್ ಎಂ ವಿಶ್ವೇಶ್ವರಯ್ಯರ ನೇತೃತ್ವದಲ್ಲಿ ಈ ಡ್ಯಾಮನ ಉಸ್ತುವಾರಿಯನ್ನ ಗಣೇಶ್ ಅಯ್ಯರ್ ನೋಡಿಕೊಳ್ಳುತ್ತಿದ್ದರು 1,500 ಚದರ ಮೈಲಿ ಜಲಾಯನ ಪ್ರದೇಶವನ್ನು ಒಳಗೊಂಡಿದ್ದು 6070 ಹೆಕ್ಟರ್ ಪ್ರದೇಶಗಳಿಗೆ ನೀರಾವರಿಯನ್ನು ಒದಗಿಸುತ್ತಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ನಿರ್ಮಾಣ ಮಾಡಿದಂತಹ ಮಾರ್ಕೋನಹಳ್ಳಿ ಜಲಾಶಯ ಒಂದಾಗಿದೆ ಅತ್ಯಂತ ವಿಶೇಷತೆ ಅಂದರೆ ಸ್ವಯಂ ಚಾಲಿತವಾಗಿ ಗೇಟುಗಳು ತೆರೆಯಲು ಅವಕಾಶವನ್ನು ಹೊಂದಿದೆ. ಜಲಾಶಯದಲ್ಲಿ ನೀರು ಹೆಚ್ಚಾದಾಗ ತನ್ನಷ್ಟಕ್ಕೆ ತಾನೇ ನೀರು ಹೊರ ಹೋಗಲು ಗೇಟುಗಳು ತೆರೆದುಕೊಳ್ಳುತ್ತವೆ. ಏಷ್ಯಾ ಖಂಡದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ವಯಂ ಚಾಲಿತ ಗೇಟುಗಳನ್ನು ತೆರೆಯಲು ನಿರ್ಮಾಣ ಮಾಡಿದಂತಹ ಖ್ಯಾತಿ ಈ ಜಲಾಶಯ ಹೊಂದಿದೆ .ಸಮುದ್ರಮಟ್ಟದಿಂದ ಸುಮಾರು 731 ಮೀಟರ್ ಎತ್ತರದಲ್ಲಿ ಇದೆ ಸ್ವಯಂ ಚಾಲಿತ ಗೇಟುಗಳನ್ನು ಹೊಂದಿದೆ, ಈ ಜಲಾಶಯ ಎತ್ತರ 91. 5 ಮೀಟರ್ ಎತ್ತರ ಅಣೆಕಟ್ಟು ಹೊಂದಿದೆ ಈ ಜಲಾಶಯಕ್ಕೆ ಹೆಚ್ಚು ನೀರು ಶೇಖರಣೆ ಆದಾಗ ಅಂದಾಜು 88 ಮೀಟರ್ ಹೆಚ್ಚು ನೀರು ಸಂಗ್ರಹಣೆಯಾದಾಗ ಸ್ವಯಂ ಚಾಲಿತ ಗೇಟುಗಳು ಓಪನ್ ಆಗುತ್ತವೆ. ನೀರು ಹೊರ ಹೋಗುತ್ತದೆ ಯಾವುದೇ ಯಂತ್ರ ವಿದ್ಯುತ್ ಇಲ್ಲದೆ ಕೇವಲ ಗುರುತ್ವಾಕರ್ಷಣೆ ಬಲದಿಂದ ನೀರು ಹೊರಗೆ ಹೋಗುತ್ತದೆ ಈ ಜಲಾಶಯದ ಹಿಂಭಾಗದಲ್ಲಿ ಯಡಿಯೂರು ಸಿದ್ದಲಿಂಗೇಶ್ವರ ದೇವಸ್ಥಾನ ಕೂಡ ಇದೆ ನೀರು ಹೆಚ್ಚಾದಾಗ ದೇವಾಲಯ ಮುಳಗಬಾರದು ಎಂದು ಅಣೆಕಟ್ಟಿನ ಸೈಫನ್ ಗೇಟುಗಳು ಓಪನ್ ಆಗಲು ನಿರ್ಮಾಣ ಮಾಡಲಾಗಿದೆ ಸುಮಾರು 68 ದಶಲಕ್ಷ ಘನ ಮೀಟರ್ ನೀರನ್ನ ಶೇಖರಣ ಮಾಡುವಂತಹ ಅಣೆಕಟ್ಟು ಇದಾಗಿದೆ ಈ ಜಲಾಶಯದಲ್ಲಿ 25ಕ್ಕೂ ಹೆಚ್ಚು ರೀತಿಯ ಮೀನುಗಳು ವಾಸ ಮಾಡುತ್ತವೆ, ಈ ಡ್ಯಾಮನ್ನು ನಿರ್ಮಾಣ ಮಾಡಲು ಆಗಿನ ಕಾಲಘಟ್ಟಕ್ಕೆ ಸುಮಾರು 30 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ ಈ ಡ್ಯಾಮನ್ನ ನಂಬಿಕೊಂಡು ಕುಣಿಗಲ್ ತಾಲೂಕಿನ ಸುತ್ತಮುತ್ತಲ ಹಳ್ಳಿಗಳು ಜೀವನವನ್ನು ಮಾಡುತ್ತಿದ್ದಾರೆ. ಈ ಡ್ಯಾಮಿಗೆ ಹತ್ತಲು ಮೆಟ್ಟುಲುಗಳನ್ನು ನಿರ್ಮಾಣ ಮಾಡಲಾಗಿದೆ ಮಾರ್ಕೋನಹಳ್ಳಿ ಜಲಾಶಯ ಒಂದು ಪ್ರವಾಸಿ ತಾಣವಾಗಿದೆ ಅಂದಿನ ಕಾಲಘಟ್ಟದಲ್ಲಿ ಮುಂದಿನ ಪೀಳಿಗೆಗೆ ಕೃಷಿ ಯೇತರ ಚಟುವಟಿಕೆಗಳಿಗೆ ಹಾಗೂ ಕುಡಿಯಲಿಕ್ಕೆ ದೂರ ದೃಷ್ಟಿಯನ್ನು ಇಟ್ಟುಕೊಂಡಂತಹ ನಾಲ್ವಡಿ ಕೃಷ್ಣರಾಜ ಒಡೆಯರು ನಿರ್ಮಾಣ ಮಾಡಲು ಪಣತೊಟ್ಟು ಸರ್ ಎಂ ವಿಶ್ವೇಶ್ವರಯ್ಯ ಅವರ ಸಹಕಾರದಿಂದ ದೂರ ದೃಷ್ಟಿ ಇಟ್ಟುಕೊಂಡು ನಿರ್ಮಾಣ ಮಾಡಲಾಯಿತು ಹಗಲಿರುಳು ಶ್ರಮವಹಿಸಿದ್ದಂತಹ ಕೂಲಿ ಕೆಲಸಗಾರರಿಗೆ ನಾವೆಲ್ಲರೂ ಕೂಡ ಪ್ರಣಾಮಗಳನ್ನು ಸಲ್ಲಿಸಬೇಕಾಗುತ್ತದೆ ಕಾಲಘಟ್ಟದಲ್ಲಿ ನಿರ್ಮಾಣ ಮಾಡಲು ಪ್ರಯತ್ನಪಟ್ಟಿದ್ದಿದ್ದರೆ ಇಂದಿನ ರಾಜಕಾರಣಿಗಳ ಕೆಸರು ಕಚ್ಚಾಟದಿಂದ ನಿರ್ಮಾಣ ಆಗುತ್ತಿತ್ತು ಇಲ್ಲವೋ ಆಗಿನ ಕಾಲ ದೂರ ದೃಷ್ಟಿ ಇಟ್ಟುಕೊಂಡು ನಿರ್ಮಾಣ ಮಾಡಿದ್ದಾರೆ ಕರ್ತವ್ಯ ನಿಷ್ಠೆ ಎಷ್ಟು ಅಚಲವಾಗಿದೆ ಎಂಬುದನ್ನ ನಾವು ವಿಮರ್ಶೆಯನ್ನು ಮಾಡಿಕೊಳ್ಳಬೇಕಾಗುತ್ತದೆ ಊಹಿಸಿ ಕೊಳ್ಳಲು ಸಾಧ್ಯವಿಲ್ಲದ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ. ಸಾಧ್ಯವಾದಷ್ಟು ಈ ಜಲಾಶಯವನ್ನು ನೋಡಿಕೊಂಡು ಇವತ್ತಿನ ಕಾಲಘಟ್ಟದಲ್ಲಿ ನಮ್ಮನ್ನ ಆಳುತ್ತಿರುವ ಸರ್ಕಾರಗಳು ರಾಜಕಾರಣಿಗಳ ಸ್ವಾರ್ಥದಿಂದ ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದ ಪೂರ್ಣ ಪ್ರಮಾಣದಲ್ಲಿ ಯೋಜನೆಗಳನ್ನ ಜಾರಿಗೆ ತರಲು ಸಂಪೂರ್ಣವಾಗಿ ನಿಲ್ಲಕ ಕುಂಠಿತವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಕೋಲಾರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ವ್ಯವಸಾಯಕ್ಕೆ ಮತ್ತು ಕುಡಿಯಲಿಕ್ಕೆ ಶಾಶ್ವತವಾದ ನೀರಾವರಿಯನ್ನು ಈ ಬಯಲು ಸೀಮೆ ಜಿಲ್ಲೆಗಳಿಗೆ ನೀರಾವರಿಯನ್ನು ಒದಗಿಸಬೇಕು ಅಂತ ಹೇಳಿ ಅಂದಿನ ಕಾಲಘಟ್ಟದಲ್ಲಿ ಪ್ರಪ್ರಥಮ ಬಾರಿಗೆ ದಿವಂಗತ ಮಾಜಿ ರಾಜ್ಯಸಭಾ ಸದಸ್ಯರು ಮಾಜಿ ಶಾಸಕರು ಆದಂತಹ ಜೆ ವೆಂಕಟಪ್ಪನವರ ಅಧ್ಯಕ್ಷತೆಯಲ್ಲಿ ಹಾಗೂ ಡಾಕ್ಟರ್ ಶ್ರೀನಿವಾಸ್ ಅವರ ಸಹಕಾರದೊಂದಿಗೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಪ್ರಾರಂಭವಾಗಿ ಅಂದಿನಿಂದ ಇಂದಿನವರೆಗೂ ಕೂಡ ಕನಸು ನನಸಾಗಿಯೇ ಉಳಿದಿದೆ. ಪಕ್ಕದ ರಾಜ್ಯಗಳು ನೀರಾವರಿ ಯೋಜನೆಗಳ ಬಗ್ಗೆ ಕಾಳಜಿ ವಹಿಸಿ ಕೆಲಸವನ್ನು ನಿರ್ವಹಿಸುತ್ತಿದ್ದು ನಮ್ಮ ಕರ್ನಾಟಕದಲ್ಲಿ ರಾಜಕೀಯದ ಕಚ್ಚಾಟದಿಂದ ತಮ್ಮ ಸ್ವಾರ್ಥಕ್ಕೆ ರೈತರನ್ನ ಬಲಿಪಶುಗಳಾಗಿ ಮಾಡಲಾಗುತ್ತಿದೆ ಪ್ರತಿಯೊಬ್ಬ ನಾಗರೀಕನು ಕೂಡ ಆಗಿನ ಕಾಲಘಟ್ಟಕ್ಕೂ ಇಂದಿನ ಪರಿಸ್ಥಿತಿಯು ಗಂಭೀರವಾಗಿ ಚಿಂತನೆಯನ್ನ ಮಾಡಿ,,,,3
- ಪುರಾತನ ಪೂಜಮ್ಮ ದೇವಸ್ಥಾನಕ್ಕೆ ಸಮಾಜ ಸೇವಕ ನರಸಿಂಹಮೂರ್ತಿ ಭೇಟಿ: ರೈತರು ಹಾಗೂ ವ್ಯಾಪಾರಸ್ಥರ ಏಳಿಗೆಗಾಗಿ ವಿಶೇಷ ಪ್ರಾರ್ಥನೆ. ಶಿಡ್ಲಘಟ್ಟ : ಈ ಭಾಗದ ಅತ್ಯಂತ ಶ್ರದ್ಧಾ ಕೇಂದ್ರವಾಗಿರುವ ಮತ್ತು ಐತಿಹಾಸಿಕ ಹಿನ್ನೆಲೆ ಹೊಂದಿರುವ ಪುರಾತನ ಪೂಜಮ್ಮ ದೇವಸ್ಥಾನಕ್ಕೆ ಮೀನಾಕ್ಷಿ ಫೌಂಡೇಶನ್ ಅಧ್ಯಕ್ಷರು ಹಾಗೂ ಸಮಾಜ ಸೇವಕರು ಆದ ಬೀರಪ್ಪನಹಳ್ಳಿ ಗೌಡನವರ ನರಸಿಂಹಮೂರ್ತಿ ಅವರು ಭೇಟಿ ನೀಡಿ, ದೇವಿಯ ದರ್ಶನ ಪಡೆದರು. ಈ ಸಂದರ್ಭದಲ್ಲಿ ಅವರು ದೇವಸ್ಥಾನದ ಅಭಿವೃದ್ಧಿ ಹಾಗೂ ಲೋಕ ಕಲ್ಯಾಣಕ್ಕಾಗಿ ತಮ್ಮ ಅಳಿಲು ಸೇವೆಯನ್ನು ಅರ್ಪಿಸುವುದಾಗಿ ಭರವಸೆ ನೀಡಿದರು. ಶಿಡ್ಲಘಟ್ಟ ನಗರದ ಬೈಪಾಸ್ ರಸ್ತೆಯಲ್ಲಿರುವ ಪೂಜಮ್ಮ ದೇವಿಯ ಕರಗ ಮಹೋತ್ಸವ ಅಂಗವಾಗಿ ವಿಶೇಷ ಪೂಜೆಯನ್ನು ಹಮ್ಮಿಕೊಂಡಿದ್ದು ದೇವಾಲಯಕ್ಕೆ ಭೇಟಿ ತಾಯಿಯ ದರ್ಶನ ಪಡೆದು ಕ್ಷೇತ್ರದ ಜನತೆಯ ಒಳತಿಗಾಗಿ ದೇವರಲ್ಲಿ ಪ್ರಾರ್ಥಿಸಿದರು . ಸ್ಥಳೀಯ ಮುಖಂಡರಾದ ಮುನಿಯಪ್ಪಣ್ಣ ಅವರ ವಿಶೇಷ ಆಹ್ವಾನದ ಮೇರೆಗೆ ದೇವಸ್ಥಾನಕ್ಕೆ ಆಗಮಿಸಿದ ನರಸಿಂಹಮೂರ್ತಿ ಅವರಿಗೆ ಸ್ವಾಗತ ಕೋರಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ದಾರಿಯಲ್ಲಿ ತಾವು ನಿರಂತರವಾಗಿ ಸಂಚರಿಸುತ್ತಿರುವುದಾಗಿ ಮತ್ತು ಈ ಪುರಾತನ ದೇವಸ್ಥಾನದೊಂದಿಗೆ ತಮಗೆ ಮೊದಲಿನಿಂದಲೂ ಭಾವನಾತ್ಮಕ ಸಂಬಂಧವಿದೆ ಎಂದು ಸ್ಮರಿಸಿದರು. ಮುನಿಯಪ್ಪಣ್ಣ ಅವರ ಕರೆಯ ಮೇರೆಗೆ ಇಂದು ಇಲ್ಲಿಗೆ ಬಂದು ದೇವಿಯ ಸೇವೆ ಮಾಡುವ ಸೌಭಾಗ್ಯ ಸಿಕ್ಕಿರುವುದು ಸಂತಸ ತಂದಿದೆ ಎಂದು ಅವರು ಹೇಳಿದರು. ಪೂಜಮ್ಮ ದೇವಿಯ ಕರಗ ಮಹೋತ್ಸವದಲ್ಲಿ ಭಾಗವಹಿಸಿದ ಅವರು, "ನಮ್ಮ ಕೈಲಾದ ಅಳಿಲು ಸೇವೆಯನ್ನು ಈ ಪುಣ್ಯಕ್ಷೇತ್ರಕ್ಕೆ ಸಲ್ಲಿಸುತ್ತಿದ್ದೇವೆ. ಭಕ್ತಿಯಿಂದ ಮಾಡುವ ಸಣ್ಣ ಸೇವೆಯೂ ದೊಡ್ಡ ಬದಲಾವಣೆಗೆ ಕಾರಣವಾಗುತ್ತದೆ" ಎಂದು ಅಭಿಪ್ರಾಯಪಟ್ಟರು. ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಭಕ್ತರಿಗೆ ಅನುಕೂಲ ಮಾಡಿಕೊಡುವ ಆಶಯವನ್ನು ಅವರು ವ್ಯಕ್ತಪಡಿಸಿದರು. ಮುಖ್ಯವಾಗಿ ಈ ಭಾಗದ ಶ್ರಮಿಕ ವರ್ಗದವರ ಬಗ್ಗೆ ಮಾತನಾಡಿದ ನರಸಿಂಹಮೂರ್ತಿ ಅವರು, "ಪೂಜಮ್ಮ ತಾಯಿಯ ಆಶೀರ್ವಾದ ಸಮಾಜದ ಪ್ರತಿಯೊಬ್ಬರಿಗೂ ಸಿಗಬೇಕು. ವಿಶೇಷವಾಗಿ ನಮ್ಮ ಬೆನ್ನೆಲುಬಾಗಿರುವ ರೈತರು ಮತ್ತು ಜೀವನೋಪಾಯಕ್ಕಾಗಿ ಶ್ರಮಿಸುವ ವ್ಯಾಪಾರಸ್ಥರಿಗೆ ತಾಯಿ ಒಳ್ಳೆಯದು ಮಾಡಲಿ" ಎಂದು ಹಾರೈಸಿದರು. ಈ ಭಾಗದ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿ ಮತ್ತು ಎಲ್ಲರ ಮನೆಯಲ್ಲಿ ಸುಖ-ಶಾಂತಿ ನೆಲೆಸಲಿ ಎಂದು ಅವರು ದೇವಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇವಾಲಯದ ಕಮಿಟಿಯವರು ಮಾತನಾಡಿ ಹುಣ್ಣಿಮೆಯ ದಿವಸ ಗ್ರಹಣ ಇರುವುದರಿಂದ ಸಂಜೆ 3 ಗಂಟೆಗೆ ಪೂಜಾ ಕಾರ್ಯಕ್ರಮಗಳನ್ನು ನಿಲ್ಲಿಸಿ ಗ್ರಹಣ ಮುಗಿದ ಬಳಿಕ ದೇವಾಲಯವನ್ನು ಸ್ವಚ್ಛಗೊಳಿಸಿ ರಾತ್ರಿ 11 ಗಂಟೆಗೆ ಕರಗ ಮಹೋತ್ಸವ ಪ್ರಾರಂಭವಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪೂಜಮ್ಮ ದೇವಾಲಯ ಟ್ರಸ್ಟ್‌ನ ಅಧ್ಯಕ್ಷರಾದ ಚಿಕ್ಕಮುನಿಯಪ್ಪ, ಉಪಾಧ್ಯಕ್ಷರಾದ ಆರ್.ಗಣೇಶ್, ಕೆ. ಮಂಜುನಾಥ್, ಕಾರ್ಯದರ್ಶಿ ನಾರಾಯಣಸ್ವಾಮಿ, ಖಜಾಂಚಿ ಚಿಕ್ಕಮುನಿಯಪ್ಪ, ಬೀರಪ್ಪನಹಳ್ಳಿ ದ್ಯಾವಪ್ಪ,ಬಿ.ಎಂ.ಕೃಷ್ಣ, ಹರಿಕೃಷ್ಣ, ಕುರುಬರಪೇಟೆ ಚಂದ್ರಶೇಖರ್,ವಿಘ್ನೇಶ್,ಸೇರಿದಂತೆ ನಗರದ ಪೂಜ ಮ್ಮ ದೇವಿ ಭಕ್ತರು ಪಾಲ್ಗೊಂಡಿದ್ದರು. ವರದಿ ನಂದಿ ರಾಜೇಶ್ ಶಿಡ್ಲಘಟ್ಟ1
- ಮಳ್ಳೂರು ಗ್ರಾಮದ ಮಲ್ಲಶೆಟ್ಟಿ ಗೌರಮ್ಮ ರವರ ಪುಣ್ಯ ಸ್ಮರಣೆ ಅಂಗವಾಗಿ ಉಚಿತ ಕಿಡ್ನಿ ಮೂತ್ರಪಿಂಡ ತಪಾಸಣಾ ಶಿಬಿರ1
- SIP N CHILL SODA SHOP NEW CITY OPPOSITE PRABHA TAKIES KOLAR CONTACT NUMBER .7899287733. VISIT YOUR FAMILY...........1
- ಮ್ಯಾರಥಾನ್ ವೇಳೆ ಪಿಎಸ್ಸೈ ನಾಸೀರ್ ಹುಸೇನ್ ಕುಂದಾಪುರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುವ ಇವರು ಎದೆ ನೋವಿನಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ1