logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

*ಭಾರತ ನಲ್ಲಿ ವೈರಲ್*

3 hrs ago
user_Md Aleemulla Shariff
Md Aleemulla Shariff
Citizen Reporter ಮೈಸೂರು, ಮೈಸೂರು, ಕರ್ನಾಟಕ•
3 hrs ago

*ಭಾರತ ನಲ್ಲಿ ವೈರಲ್*

More news from ಕರ್ನಾಟಕ and nearby areas
  • ಜ್ಯೂಸ್ ಬಾಟಲ್ ಗಳ ನಡುವೆ ಅಡಗಿದ್ದ ನಾಗರಹಾವನ್ನು ರಕ್ಷಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಮೈಸೂರಿನ ಪ್ರೀತಿ ಬಡಾವಣೆಯ ವಿನಾಯಕ ಸ್ಪೋರ್ಟ್ಸ್ ನಲ್ಲಿ ಜ್ಯೂಸ್ ಬಾಟಲ್ ಗಳ ಮಧ್ಯೆ ಇದ್ದ ಹಾವನ್ನು ಕಂಡೊಡನೆ ಉರಗ ಸಂರಕ್ಷಕ ಸ್ನೇಕ್ ರಮೇಶ್ ಗೆ ಕರೆ ಮಾಡಿ ಮಾಹಿತಿ‌ನೀಡಲಾಗಿತ್ತು ಬಳಿಕ ಆಗಮಿಸಿದ ಸ್ನೇಕ್ ರಮೇಶ್ ರಿಂದ ನಾಗರಹಾವು ರಕ್ಷಣೆ ಮಾಡಿ ಸುರಕ್ಷಿತ ಸ್ಥಳದಲ್ಲಿ ಬಿಡುಗಡೆ ಮಾಡಲಾಗಿದೆ.
    1
    ಜ್ಯೂಸ್ ಬಾಟಲ್ ಗಳ ನಡುವೆ ಅಡಗಿದ್ದ ನಾಗರಹಾವನ್ನು ರಕ್ಷಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ.
ಮೈಸೂರಿನ ಪ್ರೀತಿ ಬಡಾವಣೆಯ ವಿನಾಯಕ ಸ್ಪೋರ್ಟ್ಸ್ ನಲ್ಲಿ  ಜ್ಯೂಸ್ ಬಾಟಲ್ ಗಳ ಮಧ್ಯೆ ಇದ್ದ ಹಾವನ್ನು ಕಂಡೊಡನೆ ಉರಗ ಸಂರಕ್ಷಕ ಸ್ನೇಕ್ ರಮೇಶ್ ಗೆ ಕರೆ ಮಾಡಿ ಮಾಹಿತಿ‌ನೀಡಲಾಗಿತ್ತು
ಬಳಿಕ ಆಗಮಿಸಿದ ಸ್ನೇಕ್ ರಮೇಶ್ ರಿಂದ ನಾಗರಹಾವು ರಕ್ಷಣೆ ಮಾಡಿ ಸುರಕ್ಷಿತ ಸ್ಥಳದಲ್ಲಿ ಬಿಡುಗಡೆ ಮಾಡಲಾಗಿದೆ.
    user_Sandeep Kumar
    Sandeep Kumar
    Local News Reporter ಮೈಸೂರು, ಮೈಸೂರು, ಕರ್ನಾಟಕ•
    7 hrs ago
  • ಪರಮಪೂಜ್ಯ ತ್ರಿವಿಧ ದಾಸೋಹಿ ಸೇವೆ-ಕೂಡುಗೆ -ತತ್ವ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತ - ಮಳವಳ್ಳಿ ಪಟ್ಟಣದಲ್ಲಿ ಸಮಾಜ ಸೇವಕರಾದ ಹೆಬ್ಬಣಿ ಬಬ್ರುವಾಹನ ಹೇಳಿಕೆ ಮಳವಳ್ಳಿ:ತ್ರಿವಿಧ ದಾಸೋಹಿ ನಡೆದಾಡುವ ದೇವರು ಡಾ. ಶಿವಕುಮಾರ ಸ್ವಾಮೀಜಿಯವರ ಜೀವಮ,ಸೇವೆ,ಕೂಡುಗೆ ಶಾಂತಿ ಸೌಹಾರ್ದತೆ ಸಮಾನತೆ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದು ಸಮಾಜ ಸೇವಕ ಬಬ್ರುವಾಹನ ಹೇಳಿದರು ಪಟ್ಟಣದ ಮಾಮರ ಸೌಹಾರ್ದ ಸಹಕಾರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಡಾ.ಶಿವಕುಮಾರ್ ಸ್ವಾಮೀಜಿಯವರ ಜಯಂತಿ ಆಚರಣೆಯಲ್ಲಿ ಭಾಗವಹಿಸಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಸಿದ್ದಗಂಗಾ ಮಠದ ಸೇವೆ ದೇಶದ ಇತರೆ ಮಠಗಳಿಗೆ ಮಾದರಿಯಾಗಿದೆ ಎಂದ ಅವರು ಅಕ್ಷರ ಜ್ಞಾನ ದಾಸೋಹ ಸೇವೆಯನ್ನು ಇತರೆ ಮಠಗಳು ಅನುಸರಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುವಂತೆ ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ ಅಗಮಿಸಿದ ಜನರಿಗೆ ಸಿಹಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾಮರ ಸೌಹರ್ಧ ಸಹಕಾರ ಸಂಘದ ಅಧ್ಯಕ್ಷರಾದ ಎಂ ಶಿವಕುಮಾರ್, ಸಿಬ್ಬಂದಿಗಳಾದ ರಮ್ಯಾ ಪೂರ್ಣಿಮಾ, ಹೀನ ,ಸುಬ್ರಮಣ್ಯ,ಅಶ್ವಿನಿ ಇತರರು ಉಪಸ್ಥಿತರಿದ್ದರು. ಉಪ್ಪನಹಳ್ಳಿ ಆಚರಣೆ:ತಾಲೂಕಿನ ಉಪ್ಪನಹಳ್ಳಿ ಗ್ರಾಮದ ಮುಖಂಡರು ಹಾಗೂ ಶ್ರೀ ಬಸವೇಶ್ವರಯುವಕರ ಸಂಘದ
    1
    ಪರಮಪೂಜ್ಯ ತ್ರಿವಿಧ ದಾಸೋಹಿ ಸೇವೆ-ಕೂಡುಗೆ -ತತ್ವ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತ - ಮಳವಳ್ಳಿ ಪಟ್ಟಣದಲ್ಲಿ ಸಮಾಜ ಸೇವಕರಾದ ಹೆಬ್ಬಣಿ ಬಬ್ರುವಾಹನ ಹೇಳಿಕೆ
ಮಳವಳ್ಳಿ:ತ್ರಿವಿಧ ದಾಸೋಹಿ ನಡೆದಾಡುವ ದೇವರು ಡಾ. ಶಿವಕುಮಾರ ಸ್ವಾಮೀಜಿಯವರ ಜೀವಮ,ಸೇವೆ,ಕೂಡುಗೆ ಶಾಂತಿ ಸೌಹಾರ್ದತೆ ಸಮಾನತೆ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದು ಸಮಾಜ ಸೇವಕ ಬಬ್ರುವಾಹನ ಹೇಳಿದರು
ಪಟ್ಟಣದ ಮಾಮರ ಸೌಹಾರ್ದ ಸಹಕಾರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಡಾ.ಶಿವಕುಮಾರ್ ಸ್ವಾಮೀಜಿಯವರ ಜಯಂತಿ ಆಚರಣೆಯಲ್ಲಿ ಭಾಗವಹಿಸಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಸಿದ್ದಗಂಗಾ ಮಠದ ಸೇವೆ ದೇಶದ ಇತರೆ ಮಠಗಳಿಗೆ  ಮಾದರಿಯಾಗಿದೆ ಎಂದ ಅವರು ಅಕ್ಷರ ಜ್ಞಾನ ದಾಸೋಹ ಸೇವೆಯನ್ನು ಇತರೆ ಮಠಗಳು ಅನುಸರಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುವಂತೆ ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ ಅಗಮಿಸಿದ ಜನರಿಗೆ ಸಿಹಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾಮರ ಸೌಹರ್ಧ ಸಹಕಾರ ಸಂಘದ ಅಧ್ಯಕ್ಷರಾದ  ಎಂ ಶಿವಕುಮಾರ್, ಸಿಬ್ಬಂದಿಗಳಾದ ರಮ್ಯಾ ಪೂರ್ಣಿಮಾ, ಹೀನ ,ಸುಬ್ರಮಣ್ಯ,ಅಶ್ವಿನಿ ಇತರರು ಉಪಸ್ಥಿತರಿದ್ದರು.
ಉಪ್ಪನಹಳ್ಳಿ ಆಚರಣೆ:ತಾಲೂಕಿನ ಉಪ್ಪನಹಳ್ಳಿ ಗ್ರಾಮದ ಮುಖಂಡರು ಹಾಗೂ ಶ್ರೀ ಬಸವೇಶ್ವರಯುವಕರ ಸಂಘದ
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    ಮಳವಳ್ಳಿ, ಮಂಡ್ಯ, ಕರ್ನಾಟಕ•
    5 hrs ago
  • ಹನೂರು: ಮುತ್ತಶೆಟ್ಟಿಯೂರಿನಲ್ಲಿ ಮೂರು ಜಾನುವಾರುಗಳ ಅನುಮಾನಾಸ್ಪದ ಸಾವು ಹನೂರು ತಾಲೂಕಿನ ರಾಮಾಪುರ ಸಮೀಪದ ಮುತ್ತಶೆಟ್ಟಿಯೂರು ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಮೂರು ಜಾನುವಾರುಗಳು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ. ಗ್ರಾಮದ ರಮೇಶ್ ಕೃಷ್ಣಪ್ಪ ಅವರಿಗೆ ಸೇರಿದ ಹಸುಗಳನ್ನು ಜಮೀನುಗಳ ಸಮೀಪದ ಬಯಲು ಪ್ರದೇಶಕ್ಕೆ ಮೇಯಲು ಬಿಡಲಾಗಿತ್ತು. ದಿಡೀರ್‌ವಾಗಿ ಕುಸಿದ ಹಸುಗಳು ಸ್ಥಳದಲ್ಲೇ ಮೃತಪಟ್ಟಿವೆ ಸ್ಥಳೀಯ ರೈತರು ತಕ್ಷಣ ನೀರು ನೀಡಿ ಜೀವ ಉಳಿಸಲು ಪ್ರಯತ್ನಿಸಿದರೂ ಫಲಕಾರಿಯಾಗಿರಲಿಲ್ಲ. ಸ್ಥಳಕ್ಕೆ ಆಗಮಿಸಿದ ಪಶು ಇಲಾಖೆಯ ತಾಲ್ಲೂಕು ಸಹಾಯಕ ನಿರ್ದೇಶಕ ಸಿದ್ದರಾಜು ಪರಿಶೀಲನೆ ನಡೆಸಿ, ಮಾತನಾಡಿ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ವಿಷಯುಕ್ತ ಆಹಾರ ತಿಂದಿರಬಹುದು. ಎಂದಿದ್ದಾರೆ,
    1
    ಹನೂರು: ಮುತ್ತಶೆಟ್ಟಿಯೂರಿನಲ್ಲಿ ಮೂರು ಜಾನುವಾರುಗಳ ಅನುಮಾನಾಸ್ಪದ ಸಾವು
ಹನೂರು ತಾಲೂಕಿನ ರಾಮಾಪುರ ಸಮೀಪದ ಮುತ್ತಶೆಟ್ಟಿಯೂರು ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಮೂರು ಜಾನುವಾರುಗಳು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ.
ಗ್ರಾಮದ ರಮೇಶ್ ಕೃಷ್ಣಪ್ಪ ಅವರಿಗೆ ಸೇರಿದ ಹಸುಗಳನ್ನು ಜಮೀನುಗಳ ಸಮೀಪದ ಬಯಲು ಪ್ರದೇಶಕ್ಕೆ ಮೇಯಲು ಬಿಡಲಾಗಿತ್ತು. ದಿಡೀರ್‌ವಾಗಿ ಕುಸಿದ ಹಸುಗಳು ಸ್ಥಳದಲ್ಲೇ ಮೃತಪಟ್ಟಿವೆ
ಸ್ಥಳೀಯ ರೈತರು ತಕ್ಷಣ ನೀರು ನೀಡಿ ಜೀವ ಉಳಿಸಲು ಪ್ರಯತ್ನಿಸಿದರೂ ಫಲಕಾರಿಯಾಗಿರಲಿಲ್ಲ.
ಸ್ಥಳಕ್ಕೆ ಆಗಮಿಸಿದ ಪಶು ಇಲಾಖೆಯ ತಾಲ್ಲೂಕು ಸಹಾಯಕ ನಿರ್ದೇಶಕ ಸಿದ್ದರಾಜು ಪರಿಶೀಲನೆ ನಡೆಸಿ,  ಮಾತನಾಡಿ
ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ವಿಷಯುಕ್ತ ಆಹಾರ ತಿಂದಿರಬಹುದು. ಎಂದಿದ್ದಾರೆ,
    user_ಹನೂರು ನ್ಯೂಸ್ ಅಡ್ಡ
    ಹನೂರು ನ್ಯೂಸ್ ಅಡ್ಡ
    Farmer ಹನೂರು, ಚಾಮರಾಜನಗರ, ಕರ್ನಾಟಕ•
    9 hrs ago
  • ಅರಕಲಗೂಡು : ಪುಣ್ಯ ಕ್ಷೇತ್ರ ಧರ್ಮಸ್ಥಳ ಹಾಗು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ದರ್ಶನಕ್ಕೆ ಅನುಕೂಲವಾಗುವಂತೆ ಧರ್ಮಸ್ಥಳ ದಿಂದ ಮೈಸೂರಿಗೆ ನೇರ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿರುವುದನ್ನು ಸ್ವಾಗತಿಸಿ ಸಂತೆಮರೂರು ಗ್ರಾಮಸ್ಥರು ನೂತನ ಬಸ್‌ಗೆ ಪೂಜೆ ಸಲ್ಲಿಸಿ ಸಂಭ್ರಮಿಸಿದರು. ಇಂದು ಬೆಳಿಗ್ಗೆ 5-20ಕ್ಕೆ ಆಗಮಿಸಿದ ಸಾರಿಗೆ ಬಸ್‌ನ್ನು ಗ್ರಾಮಸ್ಥರು ತಡೆದು ಹೂವಿನ ಅಲಂಕಾರಗೊಳಿಸಿ ಪೂಜೆ ಸಲ್ಲಿಸಿದರು.ಅಲ್ಲದೆ ಕೆಲವರು ಬಸ್ ಏರಿ ಸುಬ್ರಹ್ಮಣ್ಯ,ಧರ್ಮಸ್ಥಳಕ್ಕೆ ಪ್ರಯಾಣ ಕೂಡ ಆರಂಭಿಸಿದರು. ಈ ನೂತ ಬಸ್ ನಿತ್ಯವೂ ಬಿಸಿಲೆ ಘಾಟ್ ಮೂಲಕ ಅರಕಲಗೂಡು ಸಂತೆಮರೂರು,ಜೋಡಿಗುಬ್ಬಿ,ಹಳ್ಳಿಮೈಸೂರು,ಭೇರ್ಯ,ಕೆ.ಆರ್.ಮಾರ್ಗವಾಗಿ ಮೈಸೂರಿಗೆ ತೆರಳಲಿ ತಂಗಲಿದೆ.ಪುನಃ ಬೆಳಗ್ಗೆ 6ಗಂಟೆಗೆ ಮೈಸೂರಿನಿಂದ ಹೊರಟು ಅದೇ ಮಾರ್ಗವಾಗಿ ಸಂಚರಿಸಿ ಕುಕ್ಕೆ ಸುಬ್ರಹ್ಮಣ್ಯ ಮೂಲಕ ಧರ್ಮಸ್ಥಳಕ್ಕೆ ತೆರಳಲಿದೆ. ನಿತ್ಯವೂ ತಾಲೂಕಿನಿಂದ ಕುಕ್ಕೆ ಸುಬ್ರಹ್ಮಣ್ಯ,ಧರ್ಮಸ್ಥಳಕ್ಕೆ ಪ್ರಯಾಣಿಕರು ಹೋಗಿಬರುತ್ತಿದ್ದು,ಈ ನೂತನ ಸಾರಿಗೆ ಬಸ್ ಅತೀ ಸಮೀಪ ಮಾರ್ಗದಲ್ಲಿ ಇರುವ ಕಾರಣ ಹೆಚ್ಚಿನ ಪ್ರಯಾಣಿಕರು ಈ ಬಸ್ ಸೌಲಭ್ಯವನ್ನು ಪಡೆಯಲು ಅವಕಾಶ ದೊರೆತಂತೆ ಆಗಿದೆ ಎಂದು ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದರು. ಅರಕಲಗೂಡಿನಿಂದ ಸಂತೆಮರೂರು-ಜೋಡಿಗುಬ್ಬಿ,ಹಳ್ಳಿಮೈಸೂರು ಮಾರ್ಗವಾಗಿ ಮೈಸೂರಿಗೆ ತೆರಳಲು ಸಕಾಲಿಕವಾಗಿ ಸಾರಿಗೆ ಬಸ್ ಸೇವೆಯಿಂದ ತ್ಭಾಗದ ಹತ್ತಾರು ಹಳ್ಳಿಗಳ ಜನರು ವಂಚನೆಗೊಂಡಿದ್ದರು.ಈ ಮಾರ್ಗ ಅರಕಲಗೂಡಿನಿಂದ ಮೈಸೂರಿಗೆ ಸಂಚರಿಸುವ ಪ್ರಯಾಣಿಕರಿಗೆ ಅತೀ ಸಮೀಪವಾಗಿತ್ತು.ಅಲ್ಲದೆ ಬೆಳಕಿನ ವೇಳೆ ಬಿಸಿಲೆ ಘಾಟ್ ಸೌಂಧರ್ಯವನ್ನು ಸವಿಯಲು ಮತ್ತೊಂದು ಅವಕಾಶ ದೊರೆತಂತ್ತಾಗಿದೆ.ಈ ಅವಕಾಶ ಮತ್ತು ಪ್ರಯಾಣಿಕರ ಸಮಸ್ಯೆಗೆ ಪರಿಹಾರ ಒದಗಿಸಿರುವ ಸಾರಿಗೆ ಸಂಸ್ಥೆ ಅಧಿಕಾರಿಗಳನ್ನು ಇಡೀ ಪ್ರಯಾಣಿಕರ ಪರವಾಗಿ ಸಂತೆಮರೂರು ಗ್ರಾಮಸ್ಥರು ಅಭಿನಂದಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶಾಂತರಾಜೇ ಅರಸು,ಮಲ್ಲರಾಜೇ ಅರಸು,ಕಾರ್ತಿಕ ಅರಸು,ಬಾಲರಾಜೇ ಅರಸು ಇತರರು ಇದ್ದರು. #dharmasthala #ksrtc
    1
    ಅರಕಲಗೂಡು : ಪುಣ್ಯ ಕ್ಷೇತ್ರ ಧರ್ಮಸ್ಥಳ ಹಾಗು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ದರ್ಶನಕ್ಕೆ ಅನುಕೂಲವಾಗುವಂತೆ ಧರ್ಮಸ್ಥಳ
ದಿಂದ ಮೈಸೂರಿಗೆ ನೇರ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿರುವುದನ್ನು ಸ್ವಾಗತಿಸಿ ಸಂತೆಮರೂರು ಗ್ರಾಮಸ್ಥರು ನೂತನ ಬಸ್‌ಗೆ ಪೂಜೆ ಸಲ್ಲಿಸಿ ಸಂಭ್ರಮಿಸಿದರು.
ಇಂದು ಬೆಳಿಗ್ಗೆ 5-20ಕ್ಕೆ ಆಗಮಿಸಿದ ಸಾರಿಗೆ ಬಸ್‌ನ್ನು ಗ್ರಾಮಸ್ಥರು ತಡೆದು ಹೂವಿನ ಅಲಂಕಾರಗೊಳಿಸಿ ಪೂಜೆ ಸಲ್ಲಿಸಿದರು.ಅಲ್ಲದೆ ಕೆಲವರು ಬಸ್ ಏರಿ ಸುಬ್ರಹ್ಮಣ್ಯ,ಧರ್ಮಸ್ಥಳಕ್ಕೆ ಪ್ರಯಾಣ ಕೂಡ ಆರಂಭಿಸಿದರು.
ಈ ನೂತ ಬಸ್ ನಿತ್ಯವೂ ಬಿಸಿಲೆ ಘಾಟ್ ಮೂಲಕ ಅರಕಲಗೂಡು ಸಂತೆಮರೂರು,ಜೋಡಿಗುಬ್ಬಿ,ಹಳ್ಳಿಮೈಸೂರು,ಭೇರ್ಯ,ಕೆ.ಆರ್.ಮಾರ್ಗವಾಗಿ ಮೈಸೂರಿಗೆ ತೆರಳಲಿ ತಂಗಲಿದೆ.ಪುನಃ ಬೆಳಗ್ಗೆ 6ಗಂಟೆಗೆ ಮೈಸೂರಿನಿಂದ ಹೊರಟು ಅದೇ ಮಾರ್ಗವಾಗಿ ಸಂಚರಿಸಿ ಕುಕ್ಕೆ ಸುಬ್ರಹ್ಮಣ್ಯ ಮೂಲಕ ಧರ್ಮಸ್ಥಳಕ್ಕೆ ತೆರಳಲಿದೆ. ನಿತ್ಯವೂ ತಾಲೂಕಿನಿಂದ ಕುಕ್ಕೆ ಸುಬ್ರಹ್ಮಣ್ಯ,ಧರ್ಮಸ್ಥಳಕ್ಕೆ ಪ್ರಯಾಣಿಕರು ಹೋಗಿಬರುತ್ತಿದ್ದು,ಈ ನೂತನ ಸಾರಿಗೆ ಬಸ್ ಅತೀ ಸಮೀಪ ಮಾರ್ಗದಲ್ಲಿ ಇರುವ ಕಾರಣ ಹೆಚ್ಚಿನ ಪ್ರಯಾಣಿಕರು ಈ ಬಸ್ ಸೌಲಭ್ಯವನ್ನು ಪಡೆಯಲು ಅವಕಾಶ ದೊರೆತಂತೆ ಆಗಿದೆ ಎಂದು ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದರು.
ಅರಕಲಗೂಡಿನಿಂದ ಸಂತೆಮರೂರು-ಜೋಡಿಗುಬ್ಬಿ,ಹಳ್ಳಿಮೈಸೂರು ಮಾರ್ಗವಾಗಿ ಮೈಸೂರಿಗೆ ತೆರಳಲು ಸಕಾಲಿಕವಾಗಿ ಸಾರಿಗೆ ಬಸ್ ಸೇವೆಯಿಂದ ತ್ಭಾಗದ ಹತ್ತಾರು ಹಳ್ಳಿಗಳ ಜನರು ವಂಚನೆಗೊಂಡಿದ್ದರು.ಈ ಮಾರ್ಗ ಅರಕಲಗೂಡಿನಿಂದ ಮೈಸೂರಿಗೆ ಸಂಚರಿಸುವ ಪ್ರಯಾಣಿಕರಿಗೆ ಅತೀ ಸಮೀಪವಾಗಿತ್ತು.ಅಲ್ಲದೆ ಬೆಳಕಿನ ವೇಳೆ ಬಿಸಿಲೆ ಘಾಟ್ ಸೌಂಧರ್ಯವನ್ನು ಸವಿಯಲು ಮತ್ತೊಂದು ಅವಕಾಶ ದೊರೆತಂತ್ತಾಗಿದೆ.ಈ ಅವಕಾಶ ಮತ್ತು ಪ್ರಯಾಣಿಕರ ಸಮಸ್ಯೆಗೆ ಪರಿಹಾರ ಒದಗಿಸಿರುವ ಸಾರಿಗೆ ಸಂಸ್ಥೆ ಅಧಿಕಾರಿಗಳನ್ನು ಇಡೀ ಪ್ರಯಾಣಿಕರ ಪರವಾಗಿ ಸಂತೆಮರೂರು ಗ್ರಾಮಸ್ಥರು ಅಭಿನಂದಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶಾಂತರಾಜೇ ಅರಸು,ಮಲ್ಲರಾಜೇ ಅರಸು,ಕಾರ್ತಿಕ ಅರಸು,ಬಾಲರಾಜೇ ಅರಸು ಇತರರು ಇದ್ದರು.
#dharmasthala #ksrtc
    user_News5Kannada
    News5Kannada
    Local News Reporter Arkalgud, Hassan•
    17 hrs ago
  • ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಅಡ್ಡಗಾಲು ಬೇಡ; ಬಡವರಿಗಾಗಿ ನಡೆಯುವ ಕೆಲಸಕ್ಕೆ ಎಲ್ಲರೂ ಸಹಕರಿಸಿ: ಶಾಸಕ ಎಚ್.ಸಿ. ಬಾಲಕೃಷ್ಣ ಮನವಿ. ​ಮಾಗಡಿ: ಕ್ಷೇತ್ರದ ಅಭಿವೃದ್ಧಿ ಹಾಗೂ ಬಡವರ ಹಿತದೃಷ್ಟಿಯಿಂದ ನಿರ್ಮಾಣವಾಗುತ್ತಿರುವ 40 ಕೋಟಿರೂ ವೆಚ್ಚದ ಸರ್ಕಾರಿ ಆಸ್ಪತ್ರೆಯ ವಿಚಾರದಲ್ಲಿ ರಾಜಕೀಯ ಬೆರೆಸುವುದು ಬೇಡ. ಯಾರೇ ಬೆದರಿಕೆ ಹಾಕಿದರೂ ಅಥವಾ ಗಡುವು ನೀಡಿದರೂ ಕಾನೂನುಬದ್ಧವಾಗಿ ನಡೆಯಬೇಕಾದ ಕೆಲಸಗಳು ನಿಲ್ಲುವುದಿಲ್ಲ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಸ್ಪಷ್ಟಪಡಿಸಿದರು. ಪಟ್ಟಣದಲ್ಲಿ ಬುಧವಾರ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ವೀಕ್ಷಿಸಿದ ನಂತರ ಆಸ್ಪತ್ರೆ ಕಾಮಗಾರಿಯ ಕುರಿತು ಕೇಳಿಬಂದ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಕ್ಷೇತ್ರದ ಜನರ ಆರೋಗ್ಯ ದೃಷ್ಠಿಯಿಂದ ಹೈಟೆಕ್ ಆಸ್ಪತ್ರೆ ನಿರ್ಮಾಣಕ್ಕೆ ಹಣ ತಂದು ಆಸ್ಪತ್ರೆ ನಿರ್ಮಾಣಕ್ಕೆ ಈಗಾಗಲೇ ಗುದ್ದಲಿಪೂಜೆ ನೆರವೇರಿಸಲಾಗಿದೆ ಈ ಮಧ್ಯೆ ಆಸ್ಪತ್ರೆ ನಿರ್ಮಾಣಕ್ಕೆ ಅಡ್ಡಿಪಡಸುವ ಕೆಲಸ ಯಾರು ಮಾಡಬಾರದು ಎಂದರು. ವಿರೋಧ ವ್ಯಕ್ತಪಡಿಸಿದವರಿಗೆ ಟಾಂಗ್: ​ ಎರಡು ವರ್ಷದ ಒಳಗೆ ಆಸ್ಪತ್ರೆ ಪೂರ್ಣಗೊಳಿಸದಿದ್ದರೆ ಆಸ್ಪತ್ರೆ ಬಿಟ್ಟುಕೊಡುವುದಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಅಂತಹ ಬೆದರಿಕೆಗಳಿಗೆ ನಾವು ಮಣಿಯುವುದಿಲ್ಲ. ಕೆಲಸಗಳು ನಿಯಮಾನುಸಾರ ನಡೆಯಲಿವೆ. ಅμÉ್ಟೂಂದು ಅವಸರವಿದ್ದರೆ ಅವರೇ ಕಾಂಟ್ರಾಕ್ಟ್ ಪಡೆದು, ಕಾರ್ಮಿಕರನ್ನು ಕರೆತಂದು ಕೆಲಸ ಮಾಡಿಸಲಿ, ಅದಕ್ಕೆ ಬೇಕಾದ ಹಣವನ್ನು ಸರ್ಕಾರ ನೀಡುತ್ತದೆ ಎಂದು ವಿರೋಧಿಗಳಿಗೆ ಸವಾಲು ಹಾಕಿದರು. ಬಡವರಿಗಾಗಿ ಆಸ್ಪತ್ರೆ: ​ ಈ ಸರ್ಕಾರಿ ಆಸ್ಪತ್ರೆ ನಿರ್ಮಾಣವಾಗುತ್ತಿರುವುದು ಬಡವರಿಗಾಗಿ. ನಾನಾಗಲಿ ಅಥವಾ ನನ್ನ ಕುಟುಂಬದವರಾಗಲಿ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಹೋಗುವುದಿಲ್ಲ. ಆದರೆ ಬಡವರಿಗೆ ಚಿಕಿತ್ಸೆ ಸಿಗಬೇಕು ಎಂಬ ಉದ್ದೇಶದಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇತ್ತೀಚೆಗೆ ಆರೋಪ ಮಾಡಿರುವವರು ಅನಾರೋಗ್ಯಕ್ಕೀಡಾಗಿದ್ದ ವೇಳೆ ಅವರು ಸುಗುಣ ಆಸ್ಪತ್ರೆಗೆ ದಾಖಲಾಗಿದ್ದರು. ಬಡವರು ಅಂತಹ ದುಬಾರಿ ಆಸ್ಪತ್ರೆಗೆ ಹೋಗಲು ಸಾಧ್ಯವೇ? ಎಂದು ಪ್ರಶ್ನಿಸಿದ ಶಾಸಕರು, ಬಡವರ ಆರೋಗ್ಯದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದು ಕಿವಿಮಾತು ಹೇಳಿದರು. ಕ್ಷೇತ್ರದ ಸವಾರ್ಂಗೀಣ ಅಭಿವೃದ್ಧಿಗೆ ಎಲ್ಲರೂ ಒಗ್ಗೂಡಿ ಸಹಕಾರ ನೀಡಬೇಕು. ಈ ವಿಚಾರದಲ್ಲಿ ಜನರೇ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಶಾಸಕರು ಟೀಕಾಕಾರರಿಗೆ ಎಚ್ಚರಿಕೆ ನೀಡಿದರು. ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಗಿನಗೆರೆ ಕುಮಾರು, ಪುರಸಭೆ ಸ್ಥಾಯಿಸಮಿತಿ ಮಾಜಿ ಅಧ್ಯಕ್ಷ ಶಿವಕುಮಾರು, ಮಾಜಿ ಸದಸ್ಯರಾದ ಅಶ್ವಥ್, ಟಿಎಪಿಸಿಎಂಎಸ್ ನಿರ್ದೆಶಕ ಎಂ.ಆರ್.ಮಂಜುನಾಥ್, ಪ್ರಶಾಂತ್, ಆನಂದ್, ವಿನೋದ್ ಇತರರು ಇದ್ದರು.
    1
    ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಅಡ್ಡಗಾಲು ಬೇಡ; ಬಡವರಿಗಾಗಿ ನಡೆಯುವ ಕೆಲಸಕ್ಕೆ ಎಲ್ಲರೂ ಸಹಕರಿಸಿ: ಶಾಸಕ ಎಚ್.ಸಿ. ಬಾಲಕೃಷ್ಣ ಮನವಿ.
​ಮಾಗಡಿ: ಕ್ಷೇತ್ರದ ಅಭಿವೃದ್ಧಿ ಹಾಗೂ ಬಡವರ ಹಿತದೃಷ್ಟಿಯಿಂದ ನಿರ್ಮಾಣವಾಗುತ್ತಿರುವ 40 ಕೋಟಿರೂ ವೆಚ್ಚದ ಸರ್ಕಾರಿ ಆಸ್ಪತ್ರೆಯ ವಿಚಾರದಲ್ಲಿ ರಾಜಕೀಯ ಬೆರೆಸುವುದು ಬೇಡ. ಯಾರೇ ಬೆದರಿಕೆ ಹಾಕಿದರೂ ಅಥವಾ ಗಡುವು ನೀಡಿದರೂ ಕಾನೂನುಬದ್ಧವಾಗಿ ನಡೆಯಬೇಕಾದ ಕೆಲಸಗಳು ನಿಲ್ಲುವುದಿಲ್ಲ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ  ಸ್ಪಷ್ಟಪಡಿಸಿದರು.
ಪಟ್ಟಣದಲ್ಲಿ ಬುಧವಾರ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ವೀಕ್ಷಿಸಿದ ನಂತರ ಆಸ್ಪತ್ರೆ ಕಾಮಗಾರಿಯ ಕುರಿತು ಕೇಳಿಬಂದ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು,  ಕ್ಷೇತ್ರದ ಜನರ ಆರೋಗ್ಯ ದೃಷ್ಠಿಯಿಂದ ಹೈಟೆಕ್ ಆಸ್ಪತ್ರೆ ನಿರ್ಮಾಣಕ್ಕೆ ಹಣ ತಂದು ಆಸ್ಪತ್ರೆ ನಿರ್ಮಾಣಕ್ಕೆ ಈಗಾಗಲೇ ಗುದ್ದಲಿಪೂಜೆ ನೆರವೇರಿಸಲಾಗಿದೆ ಈ ಮಧ್ಯೆ ಆಸ್ಪತ್ರೆ ನಿರ್ಮಾಣಕ್ಕೆ ಅಡ್ಡಿಪಡಸುವ ಕೆಲಸ ಯಾರು ಮಾಡಬಾರದು ಎಂದರು.
ವಿರೋಧ ವ್ಯಕ್ತಪಡಿಸಿದವರಿಗೆ ಟಾಂಗ್:
​  ಎರಡು ವರ್ಷದ ಒಳಗೆ ಆಸ್ಪತ್ರೆ ಪೂರ್ಣಗೊಳಿಸದಿದ್ದರೆ ಆಸ್ಪತ್ರೆ ಬಿಟ್ಟುಕೊಡುವುದಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಅಂತಹ ಬೆದರಿಕೆಗಳಿಗೆ ನಾವು ಮಣಿಯುವುದಿಲ್ಲ. ಕೆಲಸಗಳು ನಿಯಮಾನುಸಾರ ನಡೆಯಲಿವೆ. ಅμÉ್ಟೂಂದು ಅವಸರವಿದ್ದರೆ ಅವರೇ ಕಾಂಟ್ರಾಕ್ಟ್ ಪಡೆದು, ಕಾರ್ಮಿಕರನ್ನು ಕರೆತಂದು ಕೆಲಸ ಮಾಡಿಸಲಿ, ಅದಕ್ಕೆ ಬೇಕಾದ ಹಣವನ್ನು ಸರ್ಕಾರ ನೀಡುತ್ತದೆ ಎಂದು ವಿರೋಧಿಗಳಿಗೆ ಸವಾಲು ಹಾಕಿದರು.
ಬಡವರಿಗಾಗಿ ಆಸ್ಪತ್ರೆ:
​ ಈ ಸರ್ಕಾರಿ ಆಸ್ಪತ್ರೆ ನಿರ್ಮಾಣವಾಗುತ್ತಿರುವುದು ಬಡವರಿಗಾಗಿ. ನಾನಾಗಲಿ ಅಥವಾ ನನ್ನ ಕುಟುಂಬದವರಾಗಲಿ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಹೋಗುವುದಿಲ್ಲ. ಆದರೆ ಬಡವರಿಗೆ ಚಿಕಿತ್ಸೆ ಸಿಗಬೇಕು ಎಂಬ ಉದ್ದೇಶದಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇತ್ತೀಚೆಗೆ  ಆರೋಪ ಮಾಡಿರುವವರು ಅನಾರೋಗ್ಯಕ್ಕೀಡಾಗಿದ್ದ ವೇಳೆ ಅವರು ಸುಗುಣ ಆಸ್ಪತ್ರೆಗೆ ದಾಖಲಾಗಿದ್ದರು. ಬಡವರು ಅಂತಹ ದುಬಾರಿ ಆಸ್ಪತ್ರೆಗೆ ಹೋಗಲು ಸಾಧ್ಯವೇ? ಎಂದು ಪ್ರಶ್ನಿಸಿದ ಶಾಸಕರು, ಬಡವರ ಆರೋಗ್ಯದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದು ಕಿವಿಮಾತು ಹೇಳಿದರು.
ಕ್ಷೇತ್ರದ ಸವಾರ್ಂಗೀಣ ಅಭಿವೃದ್ಧಿಗೆ ಎಲ್ಲರೂ ಒಗ್ಗೂಡಿ ಸಹಕಾರ ನೀಡಬೇಕು. ಈ ವಿಚಾರದಲ್ಲಿ ಜನರೇ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಶಾಸಕರು ಟೀಕಾಕಾರರಿಗೆ ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಗಿನಗೆರೆ ಕುಮಾರು, ಪುರಸಭೆ ಸ್ಥಾಯಿಸಮಿತಿ ಮಾಜಿ ಅಧ್ಯಕ್ಷ ಶಿವಕುಮಾರು, ಮಾಜಿ ಸದಸ್ಯರಾದ ಅಶ್ವಥ್, ಟಿಎಪಿಸಿಎಂಎಸ್ ನಿರ್ದೆಶಕ ಎಂ.ಆರ್.ಮಂಜುನಾಥ್, ಪ್ರಶಾಂತ್, ಆನಂದ್, ವಿನೋದ್ ಇತರರು ಇದ್ದರು.
    user_Siddalinga siddalinga
    Siddalinga siddalinga
    ಮಾಗಡಿ, ರಾಮನಗರ, ಕರ್ನಾಟಕ•
    6 hrs ago
  • Post by ಈಶ್ವರ್ ಬೆಳಕು ನ್ಯೂಸ್ ಕನ್ನಡ User
    1
    Post by ಈಶ್ವರ್ ಬೆಳಕು ನ್ಯೂಸ್ ಕನ್ನಡ User
    user_ಈಶ್ವರ್ ಬೆಳಕು ನ್ಯೂಸ್ ಕನ್ನಡ User
    ಈಶ್ವರ್ ಬೆಳಕು ನ್ಯೂಸ್ ಕನ್ನಡ User
    Bengaluru North, Bengaluru Urban•
    7 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    3 hrs ago
  • ದಸರಾ ಆನೆ ಗಜೇಂದ್ರ ಆನೆಯನ್ನು ಚಾಮರಾಜನಗರ ‌ಬೂದಿಪಡಗ ಆನೆ ಶಿಬಿರದಿಂದ ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರಕ್ಕೆ ಸ್ಥಳಾಂತರ ಮಾಡಲಾಗಿದೆ. ಐತಿಹಾಸಿಕ ಮೈಸೂರು ದಸರಾ ಉತ್ಸವದಲ್ಲಿ 15ಕ್ಕೂ ಹೆಚ್ಚು ಭಾರಿ‌ ಭಾಗಿಯಾಗಿದ್ದ ಗಜೇಂದ್ರ ಆಕರ್ಷಕ ಮೈಕಟ್ಟು, ಗಾಂಭೀರ್ಯದ ನಡಿಗೆ, ನೀಳ ದಂತದಿಂದಲೇ ಆಕರ್ಷಣೀಯವಾಗಿ ಚಾಮರಾಜನಗರ ಜಿಲ್ಲೆಯ ಕೆ.ಗುಡಿಯ ಕೇಂದ್ರಬಿಂದುವಾಗಿದ್ದ 2015, ಮಾರ್ಚ್‌ 18ರಂದು ಮದವೇರಿ ಶ್ರೀರಾಮ ಆನೆ,ಮಾವುತ ಗಣಪತಿಯನ್ನ ಕೊಂದಿದ್ದ ಘಟನೆಯ ಬಳಿಕ ಗಜೇಂದ್ರನಿಗೆ ದಸರಾ ಮಹೋತ್ಸವಕ್ಕೆ ಕೋಕ್ ನೀಡಲಾಗಿತ್ತು ಹಲವು ವರ್ಷಗಳ ಕಾಲ ಕೆ.ಗುಡಿ ಆನೆಶಿಬಿರದಲ್ಲಿದ್ದ ಏಕಾಂತವಾಸ ಅನುಭವಿಸಿದ್ದ. 2024ರ ನವೆಂಬರ್‌ನಲ್ಲಿ ಕೆ.ಗುಡಿಯಿಂದ ಬೂದಿಪಡಗದ ಆನೆ ಶಿಬಿರಕ್ಕೆ ಶಿಫ್ಟ್ ಆಗಿದ್ದ ಗಜೇಂದ್ರನ ಗತವೈಭವದ ದಿನಗಳನ್ನು ಕಂಡಿದ್ದ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಈಚೆಗಷ್ಟೆ ‘ಸೇವ್ ಗಜೇಂದ್ರ’ ಅಭಿಯಾನ ಆರಂಭಿಸಿದ್ದರು ಸಾಮಾನ್ಯವಾಗಿ ಆನೆಗಳು ಗುಂಪಾಗಿ ವಾಸಿಸುವ ಸೂಕ್ಷ್ಮ ಮನಸ್ಸಿನ ಜೀವಿಗಳಾಗಿದ್ದು ಬೂದಿಪಡಗದಲ್ಲಿರುವ ಗಜೇಂದ್ರ ಒಂಟಿತನದಿಂದ ಬಳಲಿದ್ದ ಕಾಡಿಗೆ ಮೇಯಲು ಬಿಟ್ಟರೆ ಇತರೆ ಕಾಡಾನೆಗಳೊಂದಿಗೆ ಕಾದಾಡುವ ಸಾಮರ್ಥ್ಯವನ್ನೂ ಕಳೆದುಕೊಂಡಿದ್ದ ಹೀಗಾಗಿ ಸುರಕ್ಷಿತವಾದ ಶಿಬಿರಕ್ಕೆ ಸ್ಥಳಾಂತರಿಸಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಪತ್ರ ಬರಡಯಲಾಗಿತ್ತು ಪ್ರಾಣಿಪ್ರಿಯರ, ಅಭಿಮಾನಿಗಳ ಒತ್ತಾಸೆಗೆ ಮಣಿದ ಸಚಿವ ಈಶ್ವರ ಖಂಡ್ರೆ ಎರಡು ದಿನಗಳ ಹಿಂದೆಯಷ್ಟೆ ಗಜೇಂದ್ರನನ್ನು ಮತ್ತಿಗೋಡು ಶಿಬಿರಕ್ಕೆ ಸ್ಥಳಾಂತರಿಸುವಂತೆ ಸೂಚನೆ ನೀಡಿದ್ದರು ಆದರೆಅರಣ್ಯ ಸಚಿವ ಸೂಚನೆ ಹಿನ್ನಲೆ ಗಜೇಂದ್ರ ಸ್ಥಳಾಂತರ ಮಾಡಲಾಗಿದ್ದು ಪ್ರಾಣಿಪ್ರಿಯರ ಸೇವ್ ಗಜೇಂದ್ರ ಅಭಿಯಾನ ಫಲಶೃತಿಯಾಗಿದೆ.
    1
    ದಸರಾ ಆನೆ ಗಜೇಂದ್ರ ಆನೆಯನ್ನು ಚಾಮರಾಜನಗರ  ‌ಬೂದಿಪಡಗ ಆನೆ ಶಿಬಿರದಿಂದ
ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರಕ್ಕೆ ಸ್ಥಳಾಂತರ ಮಾಡಲಾಗಿದೆ.
ಐತಿಹಾಸಿಕ ಮೈಸೂರು ದಸರಾ ಉತ್ಸವದಲ್ಲಿ 15ಕ್ಕೂ ಹೆಚ್ಚು ಭಾರಿ‌ ಭಾಗಿಯಾಗಿದ್ದ ಗಜೇಂದ್ರ
ಆಕರ್ಷಕ ಮೈಕಟ್ಟು, ಗಾಂಭೀರ್ಯದ ನಡಿಗೆ, ನೀಳ ದಂತದಿಂದಲೇ ಆಕರ್ಷಣೀಯವಾಗಿ ಚಾಮರಾಜನಗರ ಜಿಲ್ಲೆಯ ಕೆ.ಗುಡಿಯ ಕೇಂದ್ರಬಿಂದುವಾಗಿದ್ದ
2015, ಮಾರ್ಚ್‌ 18ರಂದು ಮದವೇರಿ ಶ್ರೀರಾಮ ಆನೆ,ಮಾವುತ ಗಣಪತಿಯನ್ನ  ಕೊಂದಿದ್ದ ಘಟನೆಯ ಬಳಿಕ ಗಜೇಂದ್ರನಿಗೆ ದಸರಾ ಮಹೋತ್ಸವಕ್ಕೆ ಕೋಕ್ ನೀಡಲಾಗಿತ್ತು ಹಲವು ವರ್ಷಗಳ ಕಾಲ ಕೆ.ಗುಡಿ ಆನೆಶಿಬಿರದಲ್ಲಿದ್ದ ಏಕಾಂತವಾಸ ಅನುಭವಿಸಿದ್ದ. 
2024ರ ನವೆಂಬರ್‌ನಲ್ಲಿ ಕೆ.ಗುಡಿಯಿಂದ ಬೂದಿಪಡಗದ ಆನೆ ಶಿಬಿರಕ್ಕೆ ಶಿಫ್ಟ್ ಆಗಿದ್ದ ಗಜೇಂದ್ರನ ಗತವೈಭವದ ದಿನಗಳನ್ನು ಕಂಡಿದ್ದ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಈಚೆಗಷ್ಟೆ ‘ಸೇವ್ ಗಜೇಂದ್ರ’ ಅಭಿಯಾನ ಆರಂಭಿಸಿದ್ದರು ಸಾಮಾನ್ಯವಾಗಿ ಆನೆಗಳು ಗುಂಪಾಗಿ ವಾಸಿಸುವ ಸೂಕ್ಷ್ಮ ಮನಸ್ಸಿನ ಜೀವಿಗಳಾಗಿದ್ದು ಬೂದಿಪಡಗದಲ್ಲಿರುವ ಗಜೇಂದ್ರ ಒಂಟಿತನದಿಂದ ಬಳಲಿದ್ದ  ಕಾಡಿಗೆ ಮೇಯಲು ಬಿಟ್ಟರೆ ಇತರೆ ಕಾಡಾನೆಗಳೊಂದಿಗೆ ಕಾದಾಡುವ ಸಾಮರ್ಥ್ಯವನ್ನೂ ಕಳೆದುಕೊಂಡಿದ್ದ ಹೀಗಾಗಿ ಸುರಕ್ಷಿತವಾದ ಶಿಬಿರಕ್ಕೆ ಸ್ಥಳಾಂತರಿಸಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಪತ್ರ ಬರಡಯಲಾಗಿತ್ತು
ಪ್ರಾಣಿಪ್ರಿಯರ, ಅಭಿಮಾನಿಗಳ ಒತ್ತಾಸೆಗೆ ಮಣಿದ ಸಚಿವ ಈಶ್ವರ ಖಂಡ್ರೆ ಎರಡು ದಿನಗಳ ಹಿಂದೆಯಷ್ಟೆ ಗಜೇಂದ್ರನನ್ನು ಮತ್ತಿಗೋಡು ಶಿಬಿರಕ್ಕೆ ಸ್ಥಳಾಂತರಿಸುವಂತೆ ಸೂಚನೆ ನೀಡಿದ್ದರು ಆದರೆಅರಣ್ಯ ಸಚಿವ ಸೂಚನೆ ಹಿನ್ನಲೆ ಗಜೇಂದ್ರ  ಸ್ಥಳಾಂತರ ಮಾಡಲಾಗಿದ್ದು ಪ್ರಾಣಿಪ್ರಿಯರ ಸೇವ್ ಗಜೇಂದ್ರ ಅಭಿಯಾನ ಫಲಶೃತಿಯಾಗಿದೆ.
    user_Sandeep Kumar
    Sandeep Kumar
    Local News Reporter ಮೈಸೂರು, ಮೈಸೂರು, ಕರ್ನಾಟಕ•
    13 hrs ago
  • ಮಳವಳ್ಳಿ ಪಟ್ಟಣದ ಸೇರಿದಂತೆ ತಾಲೂಕಿನಾದ್ಯಂತ ವಿವಿಧ ಸಂಘ-ಸAಸ್ಥೆಗಳವತಿಯಿAದ ನಡೆದಾಡುವ ದೇವರು ಪರಮಪೂಜ್ಯ ಲಿಂಗೈಕ್ಯ ಡಾಕ್ಟರ್ ಶಿವಕುಮಾರ ಸ್ವಾಮಿಗಳ ೧೧೯ನೇ ಜನ್ಮ ದಿನಾಚರಣೆಯನ್ನು ಸ್ವಾಮಿಗಳ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಿ ಆಗಮಿಸಿದ ಜನರಿಗೆ ಪ್ರಸಾದ ವಿತರಣೆಯ ಮೂಲಕ ಶ್ರದ್ಧಾ ಭಕ್ತಿಯಿಂದ ಬುಧವಾರ ಆಚರಿಸಲಾಯಿತು ಪಟ್ಟಣದ ಸಾರಿಗೆ ಬಸಿ ನಿಲ್ದಾಣದ ಅವರಣದಲ್ಲಿ ಪೂರಿಗಾಲಿ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಆಯೋಜಿಸಿದ ತುಮಕೂರಿನ ಸಿದ್ದಗಂಗಾ ಮಠಾಧ್ಯಕ್ಷರಾದ ನಡೆದಾಡುವ ದೇವರು ಪರಮಪೂಜ್ಯ ಡಾ ಶ್ರೀಶಿವಕುಮಾರಮಹಾಸ್ವಾಮಿಗಳ ೧೧೯ನೇ ಜಯಂತಿ ಮಹೋತ್ಸವವನ್ನು ಬೆಸುಗೆ ಸಮಾನ ಮನಸ್ಕರ ಬಳಗದ ಪರಶಿವಮೂರ್ತಿಡಾ ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಮಹಾ ಮಂಗಳಾರತಿ ಸಲ್ಲಿಸಿ ಪುಷ್ಪ ನಮನ ಸಲ್ಲಿಸುವ ಮೂಲಕ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ತ್ರಿವಿಧ ದಾಸೋಹಿ ಡಾ ಶಿವಕುಮಾರಸ್ವಾಮಿಯವರ ಕುರಿತು ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಕಾರ್ಯದರ್ಶಿ ಮಲ್ಲೇಶ್ ,ಬಸವ ಕೇಂದ್ರದ ತಾಲೂಕು ಅಧ್ಯಕ್ಷ ಡಿ ಹಲಸಳ್ಳಿ ತೊಟ್ಟಿ ಮನೆ ಚನ್ನಪ್ಪ, ಭಾಜಪ ಮುಖಂಡ ಕ್ಯಾತನಹಳ್ಳಿ ಅಶೋಕ್ ಕುಮಾರ್ ಮಾತನಾಡಿದರು.ಇದೇ ಸಂದರ್ಭದಲ್ಲಿ ಆಗಮಿಸಿದ ಜನರಿಗೆ ಪ್ರಸಾದ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಪದಾಧಿಕಾರಿಗಳು, ಬಸವ ಕೇಂದ್ರದ ಪದಾಧಿಕಾರಿಗಳು ,ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ನಿರ್ದೇಶಕರು, ಬೆಸುಗೆ ವೀರಶೈವ ಲಿಂಗಾಯಿತ ಸಮಾನ ಮನಸ್ಕರ ಬಳಗದ ಪದಾಧಿಕಾರಿಗಳು,ವಿಶ್ವಗುರು ಸಹಕಾರ ಸಂಘದ ಮಾಮರ ಸೌಹಾರ್ದ ಸಹಕಾರ ಸಂಘದ,ಮೌಲ್ಯ ಸ್ವನಿದಿ ಸೌಹಾರ್ದ ಸಹಕಾರ ಸಂಘದ, ಶ್ರೀಬಸವೇಶ್ವರ ಯುವ ವೇದಿಕೆ,ವೀರಶೈವ ಯುವ ಬಳಗ ಪದಾದಿಕಾರಿಗಳು ಸೇರಿದಮತೆÀ ನೂರಾರು ಜನರು, ಮಾಜಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ , ಪಂಚಾಯತ್ ಸದಸ್ಯರು, ಸರ್ವ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.
    1
    ಮಳವಳ್ಳಿ ಪಟ್ಟಣದ ಸೇರಿದಂತೆ ತಾಲೂಕಿನಾದ್ಯಂತ ವಿವಿಧ ಸಂಘ-ಸAಸ್ಥೆಗಳವತಿಯಿAದ ನಡೆದಾಡುವ ದೇವರು ಪರಮಪೂಜ್ಯ ಲಿಂಗೈಕ್ಯ ಡಾಕ್ಟರ್ ಶಿವಕುಮಾರ ಸ್ವಾಮಿಗಳ ೧೧೯ನೇ ಜನ್ಮ ದಿನಾಚರಣೆಯನ್ನು ಸ್ವಾಮಿಗಳ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಿ ಆಗಮಿಸಿದ ಜನರಿಗೆ ಪ್ರಸಾದ ವಿತರಣೆಯ ಮೂಲಕ ಶ್ರದ್ಧಾ ಭಕ್ತಿಯಿಂದ ಬುಧವಾರ ಆಚರಿಸಲಾಯಿತು
ಪಟ್ಟಣದ ಸಾರಿಗೆ ಬಸಿ ನಿಲ್ದಾಣದ ಅವರಣದಲ್ಲಿ ಪೂರಿಗಾಲಿ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಆಯೋಜಿಸಿದ ತುಮಕೂರಿನ ಸಿದ್ದಗಂಗಾ ಮಠಾಧ್ಯಕ್ಷರಾದ ನಡೆದಾಡುವ ದೇವರು ಪರಮಪೂಜ್ಯ ಡಾ ಶ್ರೀಶಿವಕುಮಾರಮಹಾಸ್ವಾಮಿಗಳ ೧೧೯ನೇ ಜಯಂತಿ ಮಹೋತ್ಸವವನ್ನು ಬೆಸುಗೆ ಸಮಾನ ಮನಸ್ಕರ ಬಳಗದ ಪರಶಿವಮೂರ್ತಿಡಾ ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಮಹಾ ಮಂಗಳಾರತಿ ಸಲ್ಲಿಸಿ ಪುಷ್ಪ ನಮನ ಸಲ್ಲಿಸುವ ಮೂಲಕ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ತ್ರಿವಿಧ ದಾಸೋಹಿ ಡಾ ಶಿವಕುಮಾರಸ್ವಾಮಿಯವರ ಕುರಿತು ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಕಾರ್ಯದರ್ಶಿ ಮಲ್ಲೇಶ್ ,ಬಸವ ಕೇಂದ್ರದ ತಾಲೂಕು ಅಧ್ಯಕ್ಷ ಡಿ ಹಲಸಳ್ಳಿ ತೊಟ್ಟಿ ಮನೆ ಚನ್ನಪ್ಪ, ಭಾಜಪ ಮುಖಂಡ ಕ್ಯಾತನಹಳ್ಳಿ ಅಶೋಕ್ ಕುಮಾರ್ ಮಾತನಾಡಿದರು.ಇದೇ ಸಂದರ್ಭದಲ್ಲಿ ಆಗಮಿಸಿದ ಜನರಿಗೆ ಪ್ರಸಾದ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಪದಾಧಿಕಾರಿಗಳು, ಬಸವ ಕೇಂದ್ರದ ಪದಾಧಿಕಾರಿಗಳು ,ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ನಿರ್ದೇಶಕರು, ಬೆಸುಗೆ ವೀರಶೈವ ಲಿಂಗಾಯಿತ ಸಮಾನ ಮನಸ್ಕರ ಬಳಗದ ಪದಾಧಿಕಾರಿಗಳು,ವಿಶ್ವಗುರು ಸಹಕಾರ ಸಂಘದ ಮಾಮರ ಸೌಹಾರ್ದ ಸಹಕಾರ ಸಂಘದ,ಮೌಲ್ಯ ಸ್ವನಿದಿ ಸೌಹಾರ್ದ ಸಹಕಾರ ಸಂಘದ, ಶ್ರೀಬಸವೇಶ್ವರ ಯುವ ವೇದಿಕೆ,ವೀರಶೈವ ಯುವ ಬಳಗ ಪದಾದಿಕಾರಿಗಳು ಸೇರಿದಮತೆÀ ನೂರಾರು ಜನರು, ಮಾಜಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ,  ಪಂಚಾಯತ್ ಸದಸ್ಯರು, ಸರ್ವ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    ಮಳವಳ್ಳಿ, ಮಂಡ್ಯ, ಕರ್ನಾಟಕ•
    6 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.