Shuru
Apke Nagar Ki App…
ಮುತ್ತಶೆಟ್ಟಿಯೂರಿನಲ್ಲಿ ಮೂರು ಜಾನುವಾರುಗಳ ಅನುಮಾನಾಸ್ಪದ ಸಾವು ಹನೂರು: ಮುತ್ತಶೆಟ್ಟಿಯೂರಿನಲ್ಲಿ ಮೂರು ಜಾನುವಾರುಗಳ ಅನುಮಾನಾಸ್ಪದ ಸಾವು ಹನೂರು ತಾಲೂಕಿನ ರಾಮಾಪುರ ಸಮೀಪದ ಮುತ್ತಶೆಟ್ಟಿಯೂರು ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಮೂರು ಜಾನುವಾರುಗಳು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ. ಗ್ರಾಮದ ರಮೇಶ್ ಕೃಷ್ಣಪ್ಪ ಅವರಿಗೆ ಸೇರಿದ ಹಸುಗಳನ್ನು ಜಮೀನುಗಳ ಸಮೀಪದ ಬಯಲು ಪ್ರದೇಶಕ್ಕೆ ಮೇಯಲು ಬಿಡಲಾಗಿತ್ತು. ದಿಡೀರ್‌ವಾಗಿ ಕುಸಿದ ಹಸುಗಳು ಸ್ಥಳದಲ್ಲೇ ಮೃತಪಟ್ಟಿವೆ ಸ್ಥಳೀಯ ರೈತರು ತಕ್ಷಣ ನೀರು ನೀಡಿ ಜೀವ ಉಳಿಸಲು ಪ್ರಯತ್ನಿಸಿದರೂ ಫಲಕಾರಿಯಾಗಿರಲಿಲ್ಲ. ಸ್ಥಳಕ್ಕೆ ಆಗಮಿಸಿದ ಪಶು ಇಲಾಖೆಯ ತಾಲ್ಲೂಕು ಸಹಾಯಕ ನಿರ್ದೇಶಕ ಸಿದ್ದರಾಜು ಪರಿಶೀಲನೆ ನಡೆಸಿ, ಮಾತನಾಡಿ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ವಿಷಯುಕ್ತ ಆಹಾರ ತಿಂದಿರಬಹುದು. ಎಂದಿದ್ದಾರೆ,
ಹನೂರು ನ್ಯೂಸ್ ಅಡ್ಡ
ಮುತ್ತಶೆಟ್ಟಿಯೂರಿನಲ್ಲಿ ಮೂರು ಜಾನುವಾರುಗಳ ಅನುಮಾನಾಸ್ಪದ ಸಾವು ಹನೂರು: ಮುತ್ತಶೆಟ್ಟಿಯೂರಿನಲ್ಲಿ ಮೂರು ಜಾನುವಾರುಗಳ ಅನುಮಾನಾಸ್ಪದ ಸಾವು ಹನೂರು ತಾಲೂಕಿನ ರಾಮಾಪುರ ಸಮೀಪದ ಮುತ್ತಶೆಟ್ಟಿಯೂರು ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಮೂರು ಜಾನುವಾರುಗಳು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ. ಗ್ರಾಮದ ರಮೇಶ್ ಕೃಷ್ಣಪ್ಪ ಅವರಿಗೆ ಸೇರಿದ ಹಸುಗಳನ್ನು ಜಮೀನುಗಳ ಸಮೀಪದ ಬಯಲು ಪ್ರದೇಶಕ್ಕೆ ಮೇಯಲು ಬಿಡಲಾಗಿತ್ತು. ದಿಡೀರ್‌ವಾಗಿ ಕುಸಿದ ಹಸುಗಳು ಸ್ಥಳದಲ್ಲೇ ಮೃತಪಟ್ಟಿವೆ ಸ್ಥಳೀಯ ರೈತರು ತಕ್ಷಣ ನೀರು ನೀಡಿ ಜೀವ ಉಳಿಸಲು ಪ್ರಯತ್ನಿಸಿದರೂ ಫಲಕಾರಿಯಾಗಿರಲಿಲ್ಲ. ಸ್ಥಳಕ್ಕೆ ಆಗಮಿಸಿದ ಪಶು ಇಲಾಖೆಯ ತಾಲ್ಲೂಕು ಸಹಾಯಕ ನಿರ್ದೇಶಕ ಸಿದ್ದರಾಜು ಪರಿಶೀಲನೆ ನಡೆಸಿ, ಮಾತನಾಡಿ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ವಿಷಯುಕ್ತ ಆಹಾರ ತಿಂದಿರಬಹುದು. ಎಂದಿದ್ದಾರೆ,
More news from ಕರ್ನಾಟಕ and nearby areas
- ಮುತ್ತಶೆಟ್ಟಿಯೂರಿನಲ್ಲಿ ಮೂರು ಜಾನುವಾರುಗಳ ಅನುಮಾನಾಸ್ಪದ ಸಾವು ಹನೂರು ತಾಲೂಕಿನ ರಾಮಾಪುರ ಸಮೀಪದ ಮುತ್ತಶೆಟ್ಟಿಯೂರು ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಮೂರು ಜಾನುವಾರುಗಳು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ. ಗ್ರಾಮದ ರಮೇಶ್ ಕೃಷ್ಣಪ್ಪ ಅವರಿಗೆ ಸೇರಿದ ಹಸುಗಳನ್ನು ಜಮೀನುಗಳ ಸಮೀಪದ ಬಯಲು ಪ್ರದೇಶಕ್ಕೆ ಮೇಯಲು ಬಿಡಲಾಗಿತ್ತು. ದಿಡೀರ್‌ವಾಗಿ ಕುಸಿದ ಹಸುಗಳು ಸ್ಥಳದಲ್ಲೇ ಮೃತಪಟ್ಟಿವೆ ಸ್ಥಳೀಯ ರೈತರು ತಕ್ಷಣ ನೀರು ನೀಡಿ ಜೀವ ಉಳಿಸಲು ಪ್ರಯತ್ನಿಸಿದರೂ ಫಲಕಾರಿಯಾಗಿರಲಿಲ್ಲ. ಸ್ಥಳಕ್ಕೆ ಆಗಮಿಸಿದ ಪಶು ಇಲಾಖೆಯ ತಾಲ್ಲೂಕು ಸಹಾಯಕ ನಿರ್ದೇಶಕ ಸಿದ್ದರಾಜು ಪರಿಶೀಲನೆ ನಡೆಸಿ, ಮಾತನಾಡಿ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ವಿಷಯುಕ್ತ ಆಹಾರ ತಿಂದಿರಬಹುದು. ಎಂದಿದ್ದಾರೆ,1
- ಮಳವಳ್ಳಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ತರಬೇತಿ ಕೇಂದ್ರದಲ್ಲಿ ನಿರುದ್ಯೋಗಿ ಯುವಕ ಯುವತಿಯರಿಗೆ ಉಚಿತ ಚಾಲನೆ ತರಬೇತಿ ಕಾರ್ಯಾಗಾರಕ್ಕೆ ಜಿಲ್ಲಾ ಅಲ್ಪ ಸಂಖ್ಯಾತರ ಇಲಾಖೆ ಅಧಿಕಾರಿ ಮಧುಶ್ರೀ ಚಾಲನೆ * ಉಚಿತ ತರಬೇತಿ ಆರಂಭವಾಗಿದೆ- ಅಸಕ್ತರು ಕೂಡಲೇ ನೋಂದಣಿ ಮಾಡಿಸಿಕೊಳ್ಳುವಂತೆ ಕರೆ ಮಳವಳ್ಳಿ:ಸರ್ಕಾರಗಳು ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕರಿಗೆ ಯುವತಿಯರಿಗೆ ಸ್ವಾವಲಂಬನೆ ಜೀವನ ರೂಪಿಸುವುದಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ತರಬೇತಿ ಸಂಸ್ಥೆ ವತಿಯಿಂದ ಉಚಿತವಾಗಿ ಡ್ರೈವಿಂಗ್ ತರಬೇತಿಯನ್ನು ನೀಡಲಾಗುತ್ತಿದ್ದು ನಿರುದ್ಯೋಗಿ ಯುವತಿ ಯುವಕರು ಇದರ ಸೌಲಭ್ಯವನ್ನು ಪಡೆದುಕೊಂಡು ಆರ್ಥಿಕವಾಗಿ ಪ್ರಗತಿ ಹೊಂದುವAತೆ ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿ ಮಧುಶ್ರೀ ಹೇಳಿದರು. ಪಟ್ಟಣದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ನಿರುದ್ಯೋಗಿ ಯುವಕ ಯುವತಿಯರಿಗೆ ಚಾಲನೆ ತರಬೇತಿ ಕಾರ್ಯಗಾರಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಅಲ್ಪಸಂಖ್ಯಾತರ ಇಲಾಖೆ ನಿರುದ್ಯೋಗಿ ಯುವಕರಿಗೆ ಯುವತಿಯರಿಗೆ ಸ್ವಾವಲಂಬಿ ಜೀವನ ರೂಪಿಸಲು ಈ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು,ಪಲಾನುಭವಿಗಳು ಇದರ ಸೌಲಭ್ಯವನ್ನು ಪಡೆದುಕೊಂಡು ಆರ್ಥಿಕವಾಗಿ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಅವರು ಕರೆ ನೀಡಿದರು ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಯುವತಿಯರು ಸಹ ಎಲ್ಲಾ ವೃತ್ತಿಯಲ್ಲಿ ಮುಂಚೂಣಿಯಲ್ಲಿದ್ದು, ನಗರ ಪ್ರದೇಶದಲ್ಲಿ ಮಹಿಳೆಯರು ಆಟೋ ಕಾರು ಬಸ್ ಚಾಲನೆ ಮಾಡುತ್ತಿದ್ದಾರೆ ಅವರಂತೆ ನೀವುಗಳು ಸಹ ಸರ್ಕಾರದ ಸೌಲಭ್ಯವನ್ನು ಪಡೆದುಕೊಂಡು ಸ್ವಾವಲಂಬಿ ಜೀವನ ನಡೆಸುವಂತೆ ಅವರು ಈ ಸಂದರ್ಬದಲ್ಲಿ ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಜಗದೀಶ್ ಮಾತನಾಡಿ ಇಡೀ ದೇಶದಲ್ಲಿ ಮಳವಳ್ಳಿಯ ರಾಜ್ಯ ರಸ್ತೆ ಸಾರಿಗೆ ತರಬೇತಿ ಸಂಸ್ಥೆಯು ಮಾದರಿಯಾಗಿ ಯುವಕ ಯುವತಿಯರಿಗೆ ಚಾಲನೆ ತರಬೇತಿ ನೀಡುತ್ತಿದೆ ,ಇಲ್ಲಿ ತರಬೇತಿ ಪಡೆದವರು ಇಡೀ ದೇಶದ ಯಾವ ಭಾಗದಲ್ಲಾದರೂ, ಇಡೀ ವಿಶ್ವದ ಯಾವ ದೇಶದಲ್ಲಾದರೂ ಚಾಲನೆ ವೃತ್ತಿಯನ್ನು ಯಶಸ್ವಿಯಾಗಿ ಮಾಡಬಹುದಾಗಿದೆ. ಪ್ರಸ್ತುತವಾಗಿ ಚಾಲನೆ ವೃತ್ತಿಗೆ ಬಹಳ ಬೇಡಿಕೆ ಇದೆ.ಯುವಕ ,ಯುವತಿಯರು ಇಲ್ಲಿ ನೀಡುವ ತರಬೇತಿಯನ್ನು ಉತ್ತಮವಾಗಿ ಕಲಿತು, ತಮ್ಮ ವೃತ್ತಿಯನ್ನು ಯಶಸ್ವಿಯಾಗಿ ಮಾಡುವುದರೊಂದಿಗೆ ಇತರರಿಗೂ ಸಹ ಈ ವೃತ್ತಿ ತರಬೇತಿಯ ಸೌಲಭ್ಯದ ಮಾಹಿತಿ ನೀಡಿ ಅವರನ್ನು ತರಬೇತಿಗೆ ಸೇರಿಸಿ ತಾವು, ತಮ್ಮವರು, ತಮ್ಮ ಸುತ್ತಮುತ್ತಲಿನ ಜನರು ಸಹ ಆರ್ಥಿಕವಾಗಿ ಪ್ರಗತಿ ಹೊಂದಲು ನೀವೆಲ್ಲರೂ ಸಮಾಜಮುಖಿಯಾಗಿ ಕೆಲಸ ಮಾಡುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಎ.ಎಸ್.ಪ್ರಭಾಕರ್,ಚಾಲನಾ ತರಬೇತಿ ಸಂಸ್ಥೆಙ ಸಂತೋಷ್,ಇತರೆ ಸಿಬ್ಬಂದಿಗಳು ,ನಿರುದ್ಯೋಗಿ ಯುವಕರು,ಯುವತಿಯರು ಉಪಸ್ಥಿತರಿದ್ದರು.1
- ಅಂದಿನಿಂದ ಇಂದಿ ನವರೆಗೂ ಪ್ರತಿ ವರ್ಷ ಕೂಡ ಯುಗಾದಿ ಹಬ್ಬದ ನಂತರ ಬಸವೇಶ್ವರ ಸ್ವಾಮಿಗೆ ವಿಶೇಷ ಪೂಜೆ ನಡೆದುಕೊಂಡು ಬರುತ್ತಿದೆ. ಬಸವೇಶ್ವರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪ್ರದಾಯಿಕವಾಗಿ ಅರ್ಚಕರು ಬೆಳಗ್ಗೆಯಿಂದ ಉಪವಾಸ ಇದ್ದು, ಸ್ವಾಮಿಗೆ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ ನೆರವೇರಿಸಿದರು. ದಟ್ಟವಾದ ಅರಣ್ಯ ಪ್ರದೇಶದ ಮಧ್ಯೆ ಇರುವ ಅರಳಿಮರದ ಕೆಳಗೆ ಬಸವೇಶ್ವರ ಸ್ವಾಮಿಯ ಲಿಂಗಕ್ಕೆ ಪೂರ್ವಜರು ಪೂಜೆ ಮಾಡಿಕೊಂಡು ಬರುತ್ತಿದ್ದರು. ಅಲ್ಲಿಂದ ಪಚ್ಚೇದೊಡ್ಡಿ ಗ್ರಾಮದಲ್ಲಿ ಬಸವೇಶ್ವರ ಸ್ವಾಮಿಯ ಲಿಂಗಾವನ್ನ ಪ್ರತಿಷ್ಠಾಪನೆ ಮಾಡಿ. ಪ್ರತಿ ವರ್ಷ ಕೂಡ ವಿಶೇಷ ಪೂಜೆ ನೆರವೇರಿಸಿಕೊಂಡು ಬಂದಿರುತ್ತಾರೆ. ಕಾಂಚಳ್ಳಿ ಗ್ರಾಮದಿಂದ ಜಡೆಸ್ವಾಮಿ (ಶಿವನ ಪ್ರತಿರೂಪ ) ದೇವರನ್ನ ಪಚ್ಚೇದೊಡ್ಡಿಗೆ ತಂದು ವಿಶೇಷ ಪೂಜೆ ಪುನಸ್ಕಾರಗಳನ್ನ ಮಾಡುತ್ತಾರೆ. ತಳಿರು ತೋರಣಗಳಿಂದ ಸಿಂಗರಿಸಿ, ದೇವರಿಗೆ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗುತ್ತದೆ. ಎಸ್. ಎ. ಸೌಂಡ್ಸ್ ಸಿಸ್ಟಮ್ ವತಿಯಿಂದ ಪಚ್ಚೆದೊಡ್ಡಿ ಗ್ರಾಮದ ದೇವಾಲಯದ ಸುತ್ತಮುತ್ತ ವಿದ್ಯುತ್ ದೀಪ ಅಲಂಕಾರಗಳಿಂದ ಅಲಂಕಾರ ಮಾಡಲಾಗಿತ್ತು. ಭಕ್ತರಿಗೆ ಅನ್ನ ದಾನ ವಿಶೇಷ ಪೂಜೆ ನಡೆದ ನಂತರ ರಾತ್ರಿ 8 ಗಂಟೆಗೆ ನೆರೆದಿರುವ ಭಕ್ತರಿಗೆ ಪಾಯಸ, ಮುದ್ದೆ, ದ್ವಿದಳ ದಾನ್ಯದ ಸಾಂಬಾರು, ಪಲ್ಯ, ಹಪ್ಪಳ,ಅನ್ನಸಾಂಬಾರ್ ಅನ್ನು ನೆರೆದಿರುವ ಭಕ್ತರಿಗೆ ಅನ್ನದಾನದ ವ್ಯವಸ್ಥೆಯನ್ನ ಕಲ್ಪಿಸಿದರು. ನಟರಾಜ್ ಮೈಸೂರು ತಂಡದವರಿಂದ ರಾತ್ರಿ 10 ರಿಂದ ಬೆಳಿಗ್ಗೆ 4 ರವರೆಗೆ ಹರಿಕಥೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಬಸವೇಶ್ವರ ಸ್ವಾಮಿಯ ಅರ್ಚಕ ಬಸವರಾಜು, ಅರ್ಚಕರಾದ ಶಿವು, ಶ್ರೀನಿವಾಸ್, ಗೌಡರದ ಮನ್ನಾರ್ ಕೃಷ್ಣೆಗೌಡ, ಕೃಷ್ಣೆಗೌಡ,ನಾಗರಾಜು, ರಾಜು, ಗಣೇಶ್, ಮಾದೇವ, ಜಡೆಸ್ವಾಮಿ,ಕುಮಾರ್, ಗಾವಳಿ ರಾಜು ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಇದ್ದರು.4
- ನಂಜನಗೂಡು: ರಸ್ತೆ ದಾಟುತ್ತಿದ್ದ ಜಿಂಕೆಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಜಿಂಕೆ ಸಾವನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ನೇರಳೆ ಗೇಟ್ ಬಳಿ ನಡೆದಿದೆ. ನಂಜನಗೂಡು ಮತ್ತು ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ನೇರಳೆ ಗೇಟ್ ಬಳಿ ಜಿಂಕೆಯೊಂದು ರಸ್ತೆ ದಾಟುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಜಿಂಕೆಯು ಸ್ಥಳದಲ್ಲಿಯೇ ಮೃತಪಟ್ಟಿದೆ. ಅಪರಿಚಿತ ವಾಹನದ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ನೇರಳೆ ಗೇಟ್ ಬಳಿ ಜಿಂಕೆಗಳು ಹೆಚ್ಚಾಗಿ ರಸ್ತೆ ಅಪಘಾತದಿಂದ ಸಾವನ್ನಪ್ಪಿರುವ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ಈ ಸ್ಥಳದಲ್ಲಿ ನಾಮಫಲಕ ಮತ್ತು ಸ್ಪೀಡ್ ಬ್ರೇಕರ್ ಅಳವಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಸ್ತೆ ದಾಟುವ ವೇಳೆ ಈ ಘಟನೆ ನಡೆದಿದ್ದು, ಆ ಸ್ಥಳದಲ್ಲಿ ನಾಮಫಲಕ ಅಳವಡಿಸುವಂತೆ ವರದಿ ಸಲ್ಲಿಸುತ್ತೇನೆ ಎಂದು ವಲಯ ಅರಣ್ಯ ಅಧಿಕಾರಿ ನಿತಿನ್ ಕುಮಾರ್ ತಿಳಿಸಿದ್ದಾರೆ.1
- *ಭಾರತ ನಲ್ಲಿ ವೈರಲ್*1
- ರಸ್ತೆ ದಾಟುತ್ತಿದ್ದ ಜಿಂಕೆಗೆ ಅಪರಿಚಿತ ವಾಹನ ಡಿಕ್ಕಿ ಯಾಗಿದ್ದು ಡಿಕ್ಕಿಯಾದ ರಭಸಕ್ಕೆ ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ನೇರಳೆ ಗೇಟ್ ಬಳಿ ಸಂಭವಿಸಿದೆ ವಾಹನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿನೀಡಿ ಪರಿಶೀಲನೆ ನೆಡೆಸಿದ್ದಾರೆ ಅಲ್ಲದೆ ಇತ್ತೀಚೆಗೆ ನೇರಳೆ ಗ್ರಾಮದ ಗೇಟ್ ಬಳಿ ಜಿಂಕೆಗಳು ಅಪಘಾತದಿಂದ ಹೆಚ್ಚು ಬಲಿಯಾಗುತ್ತಿದ್ದು ಈ ಜಾಗದಲ್ಲಿ ನಾಮಫಲಕ ಹಾಗೂ ಸ್ಪೀಡ್ ಬ್ರೇಕರ್ ಹಾಕುವಂತೆ ಸ್ಥಳೀಯು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.1
- ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಅಡ್ಡಗಾಲು ಬೇಡ; ಬಡವರಿಗಾಗಿ ನಡೆಯುವ ಕೆಲಸಕ್ಕೆ ಎಲ್ಲರೂ ಸಹಕರಿಸಿ: ಶಾಸಕ ಎಚ್.ಸಿ. ಬಾಲಕೃಷ್ಣ ಮನವಿ. ಮಾಗಡಿ: ಕ್ಷೇತ್ರದ ಅಭಿವೃದ್ಧಿ ಹಾಗೂ ಬಡವರ ಹಿತದೃಷ್ಟಿಯಿಂದ ನಿರ್ಮಾಣವಾಗುತ್ತಿರುವ 40 ಕೋಟಿರೂ ವೆಚ್ಚದ ಸರ್ಕಾರಿ ಆಸ್ಪತ್ರೆಯ ವಿಚಾರದಲ್ಲಿ ರಾಜಕೀಯ ಬೆರೆಸುವುದು ಬೇಡ. ಯಾರೇ ಬೆದರಿಕೆ ಹಾಕಿದರೂ ಅಥವಾ ಗಡುವು ನೀಡಿದರೂ ಕಾನೂನುಬದ್ಧವಾಗಿ ನಡೆಯಬೇಕಾದ ಕೆಲಸಗಳು ನಿಲ್ಲುವುದಿಲ್ಲ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಸ್ಪಷ್ಟಪಡಿಸಿದರು. ಪಟ್ಟಣದಲ್ಲಿ ಬುಧವಾರ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ವೀಕ್ಷಿಸಿದ ನಂತರ ಆಸ್ಪತ್ರೆ ಕಾಮಗಾರಿಯ ಕುರಿತು ಕೇಳಿಬಂದ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಕ್ಷೇತ್ರದ ಜನರ ಆರೋಗ್ಯ ದೃಷ್ಠಿಯಿಂದ ಹೈಟೆಕ್ ಆಸ್ಪತ್ರೆ ನಿರ್ಮಾಣಕ್ಕೆ ಹಣ ತಂದು ಆಸ್ಪತ್ರೆ ನಿರ್ಮಾಣಕ್ಕೆ ಈಗಾಗಲೇ ಗುದ್ದಲಿಪೂಜೆ ನೆರವೇರಿಸಲಾಗಿದೆ ಈ ಮಧ್ಯೆ ಆಸ್ಪತ್ರೆ ನಿರ್ಮಾಣಕ್ಕೆ ಅಡ್ಡಿಪಡಸುವ ಕೆಲಸ ಯಾರು ಮಾಡಬಾರದು ಎಂದರು. ವಿರೋಧ ವ್ಯಕ್ತಪಡಿಸಿದವರಿಗೆ ಟಾಂಗ್: ಎರಡು ವರ್ಷದ ಒಳಗೆ ಆಸ್ಪತ್ರೆ ಪೂರ್ಣಗೊಳಿಸದಿದ್ದರೆ ಆಸ್ಪತ್ರೆ ಬಿಟ್ಟುಕೊಡುವುದಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಅಂತಹ ಬೆದರಿಕೆಗಳಿಗೆ ನಾವು ಮಣಿಯುವುದಿಲ್ಲ. ಕೆಲಸಗಳು ನಿಯಮಾನುಸಾರ ನಡೆಯಲಿವೆ. ಅμÉ್ಟೂಂದು ಅವಸರವಿದ್ದರೆ ಅವರೇ ಕಾಂಟ್ರಾಕ್ಟ್ ಪಡೆದು, ಕಾರ್ಮಿಕರನ್ನು ಕರೆತಂದು ಕೆಲಸ ಮಾಡಿಸಲಿ, ಅದಕ್ಕೆ ಬೇಕಾದ ಹಣವನ್ನು ಸರ್ಕಾರ ನೀಡುತ್ತದೆ ಎಂದು ವಿರೋಧಿಗಳಿಗೆ ಸವಾಲು ಹಾಕಿದರು. ಬಡವರಿಗಾಗಿ ಆಸ್ಪತ್ರೆ: ಈ ಸರ್ಕಾರಿ ಆಸ್ಪತ್ರೆ ನಿರ್ಮಾಣವಾಗುತ್ತಿರುವುದು ಬಡವರಿಗಾಗಿ. ನಾನಾಗಲಿ ಅಥವಾ ನನ್ನ ಕುಟುಂಬದವರಾಗಲಿ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಹೋಗುವುದಿಲ್ಲ. ಆದರೆ ಬಡವರಿಗೆ ಚಿಕಿತ್ಸೆ ಸಿಗಬೇಕು ಎಂಬ ಉದ್ದೇಶದಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇತ್ತೀಚೆಗೆ ಆರೋಪ ಮಾಡಿರುವವರು ಅನಾರೋಗ್ಯಕ್ಕೀಡಾಗಿದ್ದ ವೇಳೆ ಅವರು ಸುಗುಣ ಆಸ್ಪತ್ರೆಗೆ ದಾಖಲಾಗಿದ್ದರು. ಬಡವರು ಅಂತಹ ದುಬಾರಿ ಆಸ್ಪತ್ರೆಗೆ ಹೋಗಲು ಸಾಧ್ಯವೇ? ಎಂದು ಪ್ರಶ್ನಿಸಿದ ಶಾಸಕರು, ಬಡವರ ಆರೋಗ್ಯದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದು ಕಿವಿಮಾತು ಹೇಳಿದರು. ಕ್ಷೇತ್ರದ ಸವಾರ್ಂಗೀಣ ಅಭಿವೃದ್ಧಿಗೆ ಎಲ್ಲರೂ ಒಗ್ಗೂಡಿ ಸಹಕಾರ ನೀಡಬೇಕು. ಈ ವಿಚಾರದಲ್ಲಿ ಜನರೇ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಶಾಸಕರು ಟೀಕಾಕಾರರಿಗೆ ಎಚ್ಚರಿಕೆ ನೀಡಿದರು. ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಗಿನಗೆರೆ ಕುಮಾರು, ಪುರಸಭೆ ಸ್ಥಾಯಿಸಮಿತಿ ಮಾಜಿ ಅಧ್ಯಕ್ಷ ಶಿವಕುಮಾರು, ಮಾಜಿ ಸದಸ್ಯರಾದ ಅಶ್ವಥ್, ಟಿಎಪಿಸಿಎಂಎಸ್ ನಿರ್ದೆಶಕ ಎಂ.ಆರ್.ಮಂಜುನಾಥ್, ಪ್ರಶಾಂತ್, ಆನಂದ್, ವಿನೋದ್ ಇತರರು ಇದ್ದರು.1
- ಹನೂರು: ಮುತ್ತಶೆಟ್ಟಿಯೂರಿನಲ್ಲಿ ಮೂರು ಜಾನುವಾರುಗಳ ಅನುಮಾನಾಸ್ಪದ ಸಾವು ಹನೂರು ತಾಲೂಕಿನ ರಾಮಾಪುರ ಸಮೀಪದ ಮುತ್ತಶೆಟ್ಟಿಯೂರು ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಮೂರು ಜಾನುವಾರುಗಳು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ. ಗ್ರಾಮದ ರಮೇಶ್ ಕೃಷ್ಣಪ್ಪ ಅವರಿಗೆ ಸೇರಿದ ಹಸುಗಳನ್ನು ಜಮೀನುಗಳ ಸಮೀಪದ ಬಯಲು ಪ್ರದೇಶಕ್ಕೆ ಮೇಯಲು ಬಿಡಲಾಗಿತ್ತು. ದಿಡೀರ್‌ವಾಗಿ ಕುಸಿದ ಹಸುಗಳು ಸ್ಥಳದಲ್ಲೇ ಮೃತಪಟ್ಟಿವೆ ಸ್ಥಳೀಯ ರೈತರು ತಕ್ಷಣ ನೀರು ನೀಡಿ ಜೀವ ಉಳಿಸಲು ಪ್ರಯತ್ನಿಸಿದರೂ ಫಲಕಾರಿಯಾಗಿರಲಿಲ್ಲ. ಸ್ಥಳಕ್ಕೆ ಆಗಮಿಸಿದ ಪಶು ಇಲಾಖೆಯ ತಾಲ್ಲೂಕು ಸಹಾಯಕ ನಿರ್ದೇಶಕ ಸಿದ್ದರಾಜು ಪರಿಶೀಲನೆ ನಡೆಸಿ, ಮಾತನಾಡಿ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ವಿಷಯುಕ್ತ ಆಹಾರ ತಿಂದಿರಬಹುದು. ಎಂದಿದ್ದಾರೆ,1