Shuru
Apke Nagar Ki App…
ಬೈಕ್ ಅಪಘಾತದಲ್ಲಿ ಬಿದ್ದು ಪ್ರಜ್ಞೆ ತಪ್ಪಿದ ಬೈಕ್ ಸವಾರ ,ಸರಿಯಾದ ಸಮಯಕ್ಕೆ ಬಾರದ ತುರ್ತುವಾಹನ..!
Suresh Belagere
ಬೈಕ್ ಅಪಘಾತದಲ್ಲಿ ಬಿದ್ದು ಪ್ರಜ್ಞೆ ತಪ್ಪಿದ ಬೈಕ್ ಸವಾರ ,ಸರಿಯಾದ ಸಮಯಕ್ಕೆ ಬಾರದ ತುರ್ತುವಾಹನ..!
More news from ಕರ್ನಾಟಕ and nearby areas
- ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನದ ಸರ ಮಾಲೀಕರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಆಟೋಚಾಲಕ ಚಳ್ಳಕೆರೆ ಆಟೋ ಚಾಲಕರ ಮಾನವೀಯ ಗುಣಗಳು ಮತ್ತು ಅವರ ಪ್ರಾಮಾಣಿಕತೆಯ ಬಗ್ಗೆ ಆಗಾಗ ಸುದ್ದಿಗಳು ಆಗ್ತಾವೆ,ಅದೇ ರೀತಿ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿಂದು ಇಂತ್ತದೊಂದು ಘಟನೆಯಲ್ಲಿ ಆಟೋಚಾಲಕನ ಪ್ರಾಮಾಣಿಕತೆಗೆ ಜನ ಭೇಷ್ ಎಂದಿದ್ದಾರೆ. ಮಹದೇವಪುರದಿಂದ ಅನ್ಯ ಊರಿಗೆ ತೆರಳಲು ಬಂದಿದ್ದ ದಂಪತಿಗಳು ಅಕಸ್ಮಾತ್ ಆಗಿ ಆಟೋದಲ್ಲಿ ಬ್ಯಾಗ್ ಬಿಟ್ಟು ನಾಯಕನಹಟ್ಟಿಯಲ್ಲಿ ಇಳಿದು ಹೋಗಿದ್ದರು,ಚಾಲಕನು ತನ್ನ ಆಟೋವನ್ನು ತೊರೆಕೊಲಮ್ಮನಹಳ್ಳಿಗೆ ಚಲಾಯಿಸಿಕೊಂಡು ಹೋಗುವಾಗ ದಾರಿ ಮಧ್ಯದಲ್ಲಿ ಆಟೋದಲ್ಲಿರುವ ಬ್ಯಾಗ್ ನೋಡಿ ವಾಪಾಸ್ ನಾಯಕನಹಟ್ಟಿಗೆ ಬಂದು ವಿಚಾರಿಸಿದ್ದಾನೆ,ನಂತರ ನೇರವಾಗಿ ಬ್ಯಾಗ್ ನಲ್ಲಿದ್ದ ಸುಮಾರು 5 ತೊಲದ 7.50ಲಕ್ಷದ ಬೆಲೆ ಬಾಳುವ ಬಂಗಾರದ ಮಾಂಗಲ್ಯ ಸರವಿದ್ದ ಬ್ಯಾಗ್ ಅನ್ನು ತಾನು ಇಟ್ಟುಕೊಳ್ಳದೇ ನಾಯಕನಹಟ್ಟಿ ಪೊಲೀಸ್ ಠಾಣೆಗೆ ತೆರಳಿ ಪಿಎಸ್ ಐ ಪಾಂಡುರಂಗಪ್ಪ ಅವರ ಮೂಲಕ ಮಾಲೀಕರಾದ ಸರಸ್ವತಿಗೆ ಹಿಂತಿರುಗಿಸುವ ಮೂಲಕ ಮಾದರಿಯಾಗಿದ್ದಾನೆ. ಬೇಡರೆಡ್ಡಿಹಳ್ಳಿ ಗ್ರಾಮದ ಮಲ್ಲಿಕಾರ್ಜುನ್ ಎನ್ನುವ ಆಟೋ ಚಾಲಕ ತನ್ನ ಆಟೋದಲ್ಲಿ ಸಿಕ್ಕಂತಹ ಬೆಲೆಬಾಳುವ ಚಿನ್ನದ ಸರವನ್ನು ಅದರ ಮಾಲೀಕರಿಗೆ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದು ಆಟೋ ಚಾಲಕನ ನಡೆಗೆ ಎಲ್ಲಡೆ ಶ್ಲಾಘನೆ ವ್ಯಕ್ತವಾಗಿದೆ.1
- ಬಿ ಎಸ್ ವೈ ಅಭಿಮಾನೋತ್ಸವ ಕಾರ್ಯಕ್ರಮದ ವೇಧಿಕೆ ನಿರ್ಮಾಣ ಸ್ಥಳಕ್ಕೆ ಎಸ್ಪಿ ರಂಜಿತ್ ಕುಮಾರ್ ಬಂಡಾರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ಹೊರ ವಲಯದ ಮಾದಾರ ಚನ್ನಯ್ಯ ಮಠದ ಬಳಿ ಬಿ ಎಸ್ ವೈ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ಪೆಂಡಾಲ್ ನಿರ್ಮಾಣ ಹಾಗೂ ಸ್ಥಳ ವೀಕ್ಷಣೆಯನ್ನು ಎಸ್ಪಿ ರಂಜಿತ್ ಕುಮಾರ್ ಬಂಡಾರು ಹಾಗೂ ಮಾಜಿ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ಹೆಚ್ಚಿನ ಮಾಹಿತಿಯನ್ನ ಪಡೆದಿದ್ದಾರೆ. ಇನ್ನೂ ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಅಭಿಮಾನೋತ್ಸವ ಉಸ್ತುವಾರಿ ತಮೇಶ ಗೌಡ ಮಾಯಿತಿ ನೀಡಿ ಮಾದ್ಯಮರೊಂದಿಗೆ ಮಾತನಾಡಿದರು.1
- #Yediyurappa50Years #BSYediyurappa #YediyurappaCelebration #BJPKarnataka #BJPChitradurga #KumaraswamyStatement #PoliticalNewsKarnataka #ChitradurgaNews #BJPStrength #KarnatakaPolitics #ಯಡಿಯೂರಪ್ಪ50ವರ್ಷ #ಯಡಿಯೂರಪ್ಪಅಭಿಮಾನೋತ್ಸವ #ಬಿಜೆಪಿಶಕ್ತಿಪ್ರದರ್ಶನ #ಚಿತ್ರದುರ್ಗಸುದ್ದಿ #ಬಿಜೆಪಿಕಾರ್ಯಕ್ರಮ #ಕುಮಾರಸ್ವಾಮಿಸ್ಪಷ್ಟನೆ #ಕರ್ನಾಟಕರಾಜಕೀಯ #ಬಿಜೆಪಿಬಲವರ್ಧನ #BreakingNews #BigStatement #PoliticalUpdate #BJPWave #PowerShow #May9Event #Election2028 #LocalElection #TrendingNow #ViralNews1
- Post by Karibasava Balal1
- ವಿಜಯನಗರ: ಔಷಧಿಗಳ ಅಂಗಡಿಗಳಿಗೆ ವಿಜಯನಗರ ಡಿಸಿ, ಎಸ್ಪಿ ದಿಡೀರ್ ಭೇಟಿ, ನೀಡಿ ಪರಿಶೀಲನೆ ನಡೆಸಿದರು. ವಿಜಯನಗರ ಡಿಸಿ ಕವಿತಾ ಮನ್ನಿಕೇರಿ, ಎಸ್ಪಿ ಜಾಹ್ನವಿ, ಡ್ರಗ್ ಕಂಟ್ರೋಲ್ ಆಫೀಸರ್ ಭೇಟಿ ನೀಡಿದರು. ಮಾದಕ ವ್ಯಸನಿಗಳು, ಡ್ರಗ್ ಅಡಿಕ್ಟರ್ ಔಷಧಿಗಳ ಬಳಕೆಗೆ ಮುಂದಾಗುತ್ತಿರೋ ಮಾಹಿತಿ ಮೇರೆಗೆ, ಔಷಧಿಗಳ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವೈದ್ಯರ ಬರೆದಿರೋ ಔಷಧಿಗಳ ರಸೀದಿ ಇಲ್ಲದೇ ಮಾತ್ರೆ, ಔಷಧಿಗಳನ್ನ ನೀಡದಂತೆ ತಾಕೀತು ಮಾಡಿದರು. ಔಷಧಿ ಅಂಗಡಿಗಳ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ ಡಿಸಿ, ಎಸ್ಪಿ, ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಬಸ್ ನಿಲ್ದಾಣದ ಬಳಿಯ ಮೆಡಿಕಲ್ ಶಾಪ್ ಗಳಿಗೆ ವಿಸಿಟ್ ಮಾಡಿ ಮಾಲೀಕರಿಗೆ ವಾರ್ನ್ ನೀಡಿದರು. ಔಷಧಿ ಅಂಗಡಿಗಳ ಮುಂದೆ ಕಡ್ಡಾಯವಾಗಿ ಇಲಾಖೆ ನೀಡಿರೋ ಸೂಚನಾ ಫಲಕ ಅಳವಡಿಸುವಂತೆ ಸೂಚನೆ ನೀಡಿದ ಎಸ್ಪಿ, ಔಷಧಿಗಳ ವಹಿವಾಟನ್ನ ಕಂಪ್ಯೂಟರ್ ಹಾಗೂ ರಿಜಿಸ್ಟರ್ ಬುಕ್ ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು, ವೈದ್ಯರ ರಸೀದಿಯಿಲ್ಲದೇ ಮಾತ್ರೆ, ಔಷಧಿಗಳನ್ನ ನೀಡಿವಂತಿಲ್ಲ, ಒಂದು ವೇಳೆ ವೈದ್ಯರ ರಸೀದಿ ಇಲ್ಲದೇ ಮಾತ್ರೆಗಳನ್ನ ನೀಡಿದ್ರೆ ಕಠಿಣ ಕ್ರಮ ಜರುಗಿಸಲಾಗುವದು ಎಂದರು.1
- ಶಿವಮೊಗ್ಗ : ಮನೆ ಕಳ್ಳತನ ಪ್ರಕರಣಗಳು ಹೆಚ್ಚಳವಾಗಬಾರದು ಎನ್ನುವ ದೃಷ್ಟಿಯಿಂದ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ `ಲಾಕ್ಡ್ ಹೌಸ್ ಬೀಟ್ ಸಿಸ್ಟಮ್- ಎಲ್‍ಹೆಚ್‍ಬಿಎಸ್’ ಜಾರಿಗೆ ತರಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಖಿಲ್ ಬಿ. ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀಗಹಾಕಿದ ಮನೆಗಳ ಸುರಕ್ಷತೆಯ ಸಂಬಂಧ ಪೊಲೀಸ್ ವತಿಯಿಂದ ನೂತನ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದ್ದು, ಮನೆಯವರೆಲ್ಲಾ ಪ್ರಯಾಣಕ್ಕೆ ಹೊರಟಿ ದ್ದಾಗ ಮೂರು ಪ್ರಮುಖ ಅಂಶಗಳನ್ನು ಪೊಲೀಸ್ ಗಮನಕ್ಕೆ ತರಬೇಕು. ಹೊರಗೆ ಹೋಗುವ ಮತ್ತು ಮರಳಿ ಬರುವ ದಿನಾಂಕ, ಮನೆಯ ವಿಳಾಸ ಮತ್ತು ಲೋಕೇಷನ್ ಮತ್ತು ತಮ್ಮದೇ ಮನೆಯ ಮುಂದೆ ನಿಂತು ಸೆಲ್ಫಿ ತೆಗೆದು ವಾಟ್ಸ್ ಅಪ್ ಮೂಲಕ ಎಲ್‍ಹೆಚ್‍ಬಿಎಸ್‍ನ ಕಂಟ್ರೋಲ್ ರೂಂ/ಸಹಾಯ ವಾಣಿ ಸಂಖ್ಯೆ-8277982901ಕ್ಕೆ ಅಪ್‍ಲೋಡ್ ಮಾಡಿದರೆ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್‍ಮಾಡಿ ಮಾಹಿತಿ ನೀಡಿದರೆ ನಿಮ್ಮ ಮನೆಯ ಸುರಕ್ಷತೆಯ ಜವಾಬ್ದಾರಿಯನ್ನು ಪೊಲೀಸರು ತೆಗೆದು ಕೊಳ್ಳಲಿದ್ದಾರೆ ಎಂದರು. ಸಾರ್ವಜನಿಕರು ತಾವು ಪ್ರವಾಸಕ್ಕೆ ಹೊರಟಾಗ ತಮ್ಮ ಗೇಟಿಗೆ ಲಾಕ್ ಮಾಡುವುದು ಮತ್ತು ಮನೆಯ ಮುಂದೆ ಪೇಪರ್ ಗಳರಾಶಿ, ಹಾಲಿನ ಪ್ಯಾಕೇಟ್ ಬಿದ್ದಿರುವುದು ಮತ್ತು ತಾವು ಹೋದ ಪ್ರವಾಸ ತಾಣಗಳ ಸ್ಟೇಟಸ್ ಅನ್ನು ಹಾಕುವುದು ಸೇರಿದಂತೆ ಕೆಲವು ಸೂಕ್ಷ್ಮ ವಿಚಾರಗಳ ಬಗ್ಗೆ ಜಾಗ್ರತರಾದರೆ ಅನೇಕ ಪ್ರಕರಣಗಳು ಕಮ್ಮಿಯಾಗುತ್ತದೆ. ಈ ಬಗ್ಗೆ ಸಾರ್ವಜನಿಕರು ಎಚ್ಚರವಹಿಸಬೇಕು. ಮತ್ತು ಪೊಲೀಸರ ಎಲ್‍ಹೆಚ್‍ಬಿಎಸ್‍ಗೆ ಸಹಕಾರ ನೀಡಬೇಕು ಎಂದರು. ಜಿಲ್ಲೆಯಲ್ಲಿ ಮಾದಕದ್ರವ್ಯ ಗಾಂಜಾ ವಿರುದ್ಧ 1-1-2026ರಿಂದ ಮಾದಕ ದ್ರವ್ಯ ಸೇವೆನೆ 266 ಪ್ರಕರಣ ದಾಖಲಿಸಲಾಗಿದೆ. 290 ಆರೋಪಿತರನ್ನು ಬಂಧಿಸಲಾಗಿದೆ. 18 ಪ್ರಕರಣಗಳಲ್ಲಿ 40 ಆರೋಪಿತರನ್ನು ಬಂಧಿಸಿ, ಅವರಿಂದ ಮಾದಕದ್ರವ್ಯ ಅಮಾನತುಪಡಿಸಲಾಗಿದೆ. ಒಟ್ಟು 280 ಪ್ರಕರಣಗಳಲ್ಲಿ 330 ಜನ ಆರೋಪಿತರನ್ನು ಬಂಧಿಸಿ, 30 ಕೆ.ಜಿ. ಗಾಂಜಾ ಅಮಾನತು ಪಡಿಸಿ 125 ಗ್ರಾಂ ಎಂಡಿಎಂ ಸೇರಿದಂತೆ 27,37,000 ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ. ಮಾದಕ ವಸ್ತು ವಿತರಿಸುವ ಮೂರು ಮಾರ್ಗಗಳನ್ನು ಮೂಲದಲ್ಲೇ ಬಂದ್ ಮಾಡಲಾಗಿದೆ. ಇನ್ನೂ ಮೂರು ವಿತರಕರ ಸುಳಿವು ದೊರೆತ್ತಿದ್ದು, ಅವರನ್ನು ಬಂಧಿಸಲಿ ದ್ದೇವೆ ಎಂದರು. ಗಾಂಜಾ ಪ್ರಕರಣಗಳಲ್ಲಿ 52ಜನ ಬಂಧಿತ ಆರೋಪಿಗಳಿಗೆ ಪುನರ್ವಸತಿ ಕಲ್ಪಿಸ ಲಾಗಿದ್ದು, ಅವರು ಈಗ ದುಶ್ಚಟದಿಂದ ಮುಕ್ತರಾಗಿದ್ದಾರೆ ಎಂದರು. ಅಕ್ಕಪಡೆ: ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯವೆಸಗುವ ಮತ್ತು ಅಸಭ್ಯವಾಗಿ ವರ್ತಿಸುವವರ ವಿರುದ್ಧ ಸೂಕ್ತ ಕಾನೂನು ರೀತ್ಯ ಕ್ರಮ ಜರುಗಿಸುವ ಉದ್ದೇಶದಿಂದ ನಗರದಲ್ಲಿ ಅಕ್ಕಪಡೆಯು ಕಾರ್ಯನಿರ್ವಹಿ ಸುತ್ತಿದ್ದು, ಸಾರ್ವಜನಿಕ ಉಪಟಳ ನೀಡಿದ ಒಟ್ಟು 156ಜನ ಅಸಾಮಿಗಳ ವಿರುದ್ಧ ಲಘು ಪ್ರಕರಣವನ್ನು ದಾಖಲಿಸಲಾಗಿದೆ ಎಂದರು. ಡ್ರೋಣ್ ಕಾರ್ಯಾಚರಣೆ ಮೂಲಕ ಖಾಲಿ ಜಾಗಗಳು ಮತ್ತು ಹೊರ ವಲಯದ ನಿರ್ಜನ ಪ್ರದೇಶಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುವವರ ವಿರುದ್ಧ ಜಿಲ್ಲಾ ಪೊಲೀಸ್ ಡ್ರೋಣ್ ಕ್ಯಾಮೇರಾ ಮುಖಾಂತರ ಕಣ್ಗಾವಲು ಇಟ್ಟಿದ್ದು, ಭದ್ರಾವತಿಯ ಕೂಡ್ಲಿಗೆರೆ ಗ್ರಾಮದ ಹೊರವಲಯದಲ್ಲಿ ಜೂಜಾಡುತ್ತಿದ್ದ 19ಜನ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗಿದೆ. ಹಾಗೂ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಗಂಗೂರು ಗ್ರಾಮದ ಹೊರವಲಯದಲ್ಲಿ ಡ್ರೋಣ್ ಹಾರಿಸಿದಾಗ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದ ವರ ವಿರುದ್ಧ ಅಬಕಾರಿ ಕಾಯ್ದೆ ರೀತ್ಯ ಪ್ರಕರಣ ದಾಖಲಿಸಿ ಕ್ರಮಕೈ ಗೊಳ್ಳಲಾಗಿದೆ ಎಂದರು.1
- ಸೊರಬ ಪಟ್ಟಣದ ಪುರದೈವ ಶ್ರೀಲಕ್ಷ್ಮಿ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಹಳೇ ರಥ ಶಿಥಿಲವಾದ ಹಿನ್ನೆಲೆ ನೂತನ ರಥ ನಿರ್ಮಾಣ ಮಾಡಲಾಗಿದ್ದು, ಶ್ರೀ ದೇವರಿಗೆ ರಥ ಸಮರ್ಪಣೆಯಾದ ತರುವಾಯ ಮೊದಲ ರಥೋತ್ಸವ ಇದಾಗಿದ್ದು, ಭಕ್ತರು ಪಾಲ್ಗೊಂಡು ದೇವರ ಆಶೀರ್ವಾದ ಬೇಡಿದರು. ರಥೋತ್ಸವ ಅಂಗವಾಗಿ ಶ್ರೀ ದೇವರಿಗೆ ವಿಶೇಷ ಅಲಂಕಾರ ಪೂಜೆ, ಅಭಿಷೇಕ ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ಘನಪಾಠಿ ನಾರಾಯಣ ಭಟ್ ಮರಾಠೆ ಅವರು ಪೂಜಾ ಕೈಂಕರ್ಯಗಳ ನೇತೃತ್ವ ವಹಿಸಿದ್ದರು. ಭಕ್ತರು ಕಳಸಕ್ಕೆ ಬಾಳೆಹಣ್ಣು, ಉತ್ತುತ್ತಿ, ಕಾಳು ಮೆಣಸು ಬೀರುವ ಮೂಲ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ದೇವಸ್ಥಾನದ ಮುಂಭಾಗ ಕೊಂಚ ದೂರ ಮಾತ್ರ ರಥ ಎಳೆಯಲಾಯಿತು. ಹಳೇಸೊರಬ ಗ್ರಾಮಸ್ಥರು ಚಪ್ಪರ ಕಟ್ಟುವ ಹಾಗೂ ಹಿರೇಶಕುನ ಮತ್ತು ಸೊಪ್ಪಿನಕೇರಿ ಗ್ರಾಮಸ್ಥರು ತೇರು ಕಟ್ಟುವ ಶಾಸ್ತ್ರವನ್ನು ನೆರವೇರಿಸಿದರು. ರಥೋತ್ಸವ ಅಂಗವಾಗಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಸಲಾಯಿತು. ವರದಿ: ಸಂದೀಪ ಯು ಎಲ್ ಸೊರಬ3
- Post by Suresh Belagere1