Shuru
Apke Nagar Ki App…
ಸಚಿವ ಸಂಪುಟ ವಿಸ್ತರಣೆಗಿಂತ ರೈತರ ಸಂಕಷ್ಟ ಪರಿಹಾರಕ್ಕೆ ಆದ್ಯತೆ ನೀಡಿ: ಬೆಳೆ ವಿಮೆಗಾಗಿ ರೈತ ಸಂಘದ ಆಗ್ರಹ"
Nava karnataka News channel
ಸಚಿವ ಸಂಪುಟ ವಿಸ್ತರಣೆಗಿಂತ ರೈತರ ಸಂಕಷ್ಟ ಪರಿಹಾರಕ್ಕೆ ಆದ್ಯತೆ ನೀಡಿ: ಬೆಳೆ ವಿಮೆಗಾಗಿ ರೈತ ಸಂಘದ ಆಗ್ರಹ"
More news from ಕರ್ನಾಟಕ and nearby areas
- ಸಚಿವ ಸಂಪುಟ ವಿಸ್ತರಣೆಗಿಂತ ರೈತರ ಸಂಕಷ್ಟ ಪರಿಹಾರಕ್ಕೆ ಆದ್ಯತೆ ನೀಡಿ: ಬೆಳೆ ವಿಮೆಗಾಗಿ ರೈತ ಸಂಘದ ಆಗ್ರಹ"1
- ಸಂಸ್ಕಾರವಿಲ್ಲದ ಶಿಕ್ಷಣ ಅಪೂರ್ಣ: ಮೌಲ್ಯಗಳ ಕುಸಿತವೇ ಅಪರಾಧಕ್ಕೆ ಕಾರಣ ಡಾ.ಶರಣಪ್ಪ ಎಸ್ ಡಿ.! ಸಂಸ್ಕಾರವಿಲ್ಲದ ಶಿಕ್ಷಣ ಅಪೂರ್ಣ: ಮೌಲ್ಯಗಳ ಕುಸಿತವೇ ಅಪರಾಧಕ್ಕೆ ಕಾರಣ ಡಾ.ಶರಣಪ್ಪ ಎಸ್ ಡಿ.!1
- ಆಗಸ್ಟ್ 9 ಕ್ಕೆ 2000-01ನೇ ಸಾಲಿನ sslc ವಿದ್ಯಾರ್ಥಿಗಳಿಂದ ಗುರು ವಂದನ ಕಾರ್ಯಕ್ರಮ. ಅಫಜಲಪುರ: ಪಟ್ಟಣದ ಶ್ರೀ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಇದೆ ಆಗಸ್ಟ್ 9 ರಂದು 2000-01ನೇ ಸಾಲಿನ sslc ವಿದ್ಯಾರ್ಥಿಗಳಿಂದ ಗುರು ವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಅದ್ದೂರಿಯಾಗಿ ಜರುಗಲಿದೆ ಎಂದು ಶ್ರೀ ಮಹಾಂತೇಶ್ವರ ವಿದ್ಯಾ ವರ್ದಕ ಶಾಲೆಯ ಹಳೆಯ ವಿದ್ಯಾರ್ಥಿಗಳು ತಿಳಿಸಿದ್ದಾರೆ.1
- ಕಲಬುರಗಿ:ಎರಡನೇ ಸಚಿವ ಸಂಪುಟ ವಿಸ್ತರಣೆ- ಶಾಸಕ ಬಸವರಾಜ್ ಮತ್ತಿಮೂಡ್ ಲೇವಡಿ ಡಿಕೆ ಶಿವಕುಮಾರ್ ಅವರ ಮಂತ್ರಿ ಮಂಡಲದ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದ್ದು ಈ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಗ್ರಾಮೀಣ ಬಿಜೆಪಿ ಶಾಸಕ ಬಸವರಾಜ ಮತ್ತಿಮೂಡ್ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.ಡಿಕೆ ಸಂಪುಟ ವಿಸ್ತರಣೆಯನ್ನು ಪೇಮೆಂಟ್ ಸಿಟ್ ಎಂದ ಬಿಜೆಪಿ ಶಾಸಕ ಕೆಲವರು ಹೇಳ್ತಿದ್ದಾರೆ ಪೇಮೆಂಟ್ ಸಿಟ್, ಪೇಮೆಂಟ್ ಸಿಟ್ ಅಂತಾ ಸಹಜವಾಗಿ ನೋಡಿದ್ರೆ ಅನಿಸುತ್ತದೆ,ಕೆಲವರು ಮಾತಾಡ್ತಿದ್ದಾರೆ ಮಂತ್ರಿಗಳದು ಪೇಮೆಂಟ್ ಸಿಟ್ ಅಂತಾ ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದರು. ಅವರ ಹೈ ಕಮಾಂಡ್ ಅವರ ಸಚಿವ ಸಂಪುಟ ಅವರಿಗೆ ಬಿಟ್ಟಿದ್ದು ಎಂದು ಹೇಳಿದರು1
- .ಗ್ಯಾಸ್ ಸೋರಿಕೆ ದುರಂತ: ಮೂವರು ಕಾರ್ಮಿಕರ ದುರ್ಮರಣ ಕಡೇಚೂರ ಕೈಗಾರಿಕಾ ಪ್ರದೇಶದ ಖಾಸಗಿ ಕಂಪನಿಯಲ್ಲಿ ವಿಷಾನಿಲ ಸೋರಿಕೆ; ಸುರಕ್ಷತಾ ಕ್ರಮಗಳ ಕುರಿತು ಪ್ರಶ್ನೆ – ತನಿಖೆ ಆರಂಭ ಯಾದಗೀರ, ಆ.5: ಜಿಲ್ಲೆಯ ಯಾದಗೀರ ತಾಲೂಕಿನ ಕಡೇಚೂರ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ರಾಸಾಯನಿಕ ಕಂಪನಿಯೊಂದರಲ್ಲಿ ಸಂಭವಿಸಿದ ವಿಷಾನಿಲ (ಗ್ಯಾಸ್) ಸೋರಿಕೆ ದುರಂತದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿರುವ ಘಟನೆ ಬುಧವಾರ ಮುಂಜಾನೆ ನಡೆದಿದ್ದು, ಕೈಗಾರಿಕಾ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಘಟನೆಯ ಬಳಿಕ ಕಂಪನಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಕಾರ್ಮಿಕರ ಸುರಕ್ಷತಾ ಕ್ರಮಗಳ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಮೃತರನ್ನು ವಿಕ್ರಮ್ ಸಿಂಗ್ (30), ಸಂಜಯ್ ಸಿಂಗ್ (29) ಹಾಗೂ ಗಣೇಶ್ ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಕಂಪನಿಯ ಉತ್ಪಾದನಾ ಘಟಕದಲ್ಲಿ ಕಾರ್ಮಿಕರು ತಮ್ಮ ನಿತ್ಯದ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ವಿಷಾನಿಲ ಸೋರಿಕೆಯಾಗಿದ್ದು, ಮೂವರು ಕಾರ್ಮಿಕರು ಉಸಿರಾಟದ ತೊಂದರೆಯಿಂದ ತೀವ್ರ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೂವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸೈದಾಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಂಬಂಧಿತ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನಾ ಸ್ಥಳವನ್ನು ಭದ್ರತಾ ವಲಯವಾಗಿ ಪರಿಗಣಿಸಿ, ಸೋರಿಕೆಗೆ ಕಾರಣವೇನು ಎಂಬುದರ ಕುರಿತು ತನಿಖೆ ಆರಂಭಿಸಲಾಗಿದೆ. ತಾಂತ್ರಿಕ ದೋಷ, ನಿರ್ವಹಣೆಯ ಲೋಪ ಅಥವಾ ಸುರಕ್ಷತಾ ನಿಯಮಗಳ ಉಲ್ಲಂಘನೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ದುರಂತದ ಹಿನ್ನೆಲೆಯಲ್ಲಿ ಕಂಪನಿಯಲ್ಲಿನ ಸುರಕ್ಷತಾ ವ್ಯವಸ್ಥೆಗಳು ಸಮರ್ಪಕವಾಗಿದ್ದವೆಯೇ, ಕಾರ್ಮಿಕರಿಗೆ ಅಗತ್ಯವಾದ ಸುರಕ್ಷತಾ ಸಾಧನಗಳನ್ನು ಒದಗಿಸಲಾಗಿತ್ತೇ ಹಾಗೂ ತುರ್ತು ಪರಿಸ್ಥಿತಿ ಎದುರಿಸಲು ಸೂಕ್ತ ವ್ಯವಸ್ಥೆ ಇತ್ತೇ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಕಾರ್ಮಿಕ ಸಂಘಟನೆಗಳು ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ. ಜಿಲ್ಲಾಡಳಿತವೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಂಬಂಧಿತ ಇಲಾಖೆಗಳ ಮೂಲಕ ಸಮಗ್ರ ತನಿಖೆಗೆ ಸೂಚನೆ ನೀಡಲಾಗಿದೆ. ಮೃತ ಕಾರ್ಮಿಕರ ಕುಟುಂಬಗಳಿಗೆ ಅಗತ್ಯ ನೆರವು ಒದಗಿಸುವ ಕುರಿತು ಸರ್ಕಾರ ಹಾಗೂ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಸಂಬಂಧ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ತನಿಖಾ ವರದಿ ಬಳಿಕ ಗ್ಯಾಸ್ ಸೋರಿಕೆಗೆ ನಿಖರ ಕಾರಣ ಹಾಗೂ ಜವಾಬ್ದಾರಿಯ ಕುರಿತು ಸ್ಪಷ್ಟ ಚಿತ್ರಣ ದೊರೆಯುವ ನಿರೀಕ್ಷೆಯಿದೆ.. ವರದಿ ನಿಜಾಮುದ್ದಿನ್ ಯಾದಗಿರಿ4
- ಸೇಡಂ ಜಿಲ್ಲೆಗಾಗಿ ಮೊಳಗಿದ ಕಹಳೆ. ಹೋರಾಟ ಸಂಘ ಅಸ್ತಿತ್ವಕ್ಕೆ .. ಅನೇಕ ವರ್ಷಗಳಿಂದ ಸೇಡಂ ಜಿಲ್ಲೆಯಾಗಿಸುವ ಕನಸಿಗೆ ಈಗ ಅಧಿಕೃತ ಯೋಜನೆ ರೂಪಿಸಿದಂತಾಗಿದೆ. ಈ ಹಿನ್ನೆಲೆಯಲ್ಲಿ ಸೇಡಂ ಜಿಲ್ಲಾ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಪಟ್ಟಣದಲ್ಲಿ ನಡೆದ ಪ್ರಮುಖರ ಸಭೆಯಲ್ಲಿ ಸೇಡಂ ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ಹೋರಾಟದ ರೂಪುರೇಷೆ ಕೈಗೊಳ್ಳಲಾಯಿತು ಅಲ್ಲದೆ ಇದೇ ವೇಳೆ ನೂತನ ಪದಾಧಿಕಾರಿಗಳನ್ನು ಸಹ ನೇಮಕ ಮಾಡಲಾಗಿದ್ದು, ಭೀಮರೆಡ್ಡಿ ಪಾಟೀಲ ಜಿಲ್ಲೇಡಪಲ್ಲಿ (ಗೌರವ ಅಧ್ಯಕ್ಷರು). ವಿಜಯಕುಮಾರ ಆಡಕಿ (ಅಧ್ಯಕ್ಷರು).ಮಹೇಶ ಪಾಟೀಲ ತರ್ನಳ್ಳಿ (ಉಪಾಧ್ಯಕ್ಷರು).ಅನೀಲರೆಡ್ಡಿ ಸಂಗೆಂಪಲ್ಲಿ (ಉಪಾಧ್ಯಕ್ಷರು. ಪ್ರೇಮ ಗಡಾಳೆ (ಉಪಾಧ್ಯಕ್ಷರು). ಕಾಶಪ್ಪ ರೆಬ್ಬನಪಲ್ಲಿ (ಉಪಾಧ್ಯಕ್ಷರು. ಮುಕುಂದ ದೇಶಪಾಂಡೆ (ಉಪಾಧ್ಯಕ್ಷ). ಶ್ರಿನಿವಾಸ ಕಾಸೋಜು (ಖಜಾಂಚಿ). ರಮೇಶ ಮಾಲಪಾಣಿ (ಸಹ ಖಜಾಂಚಿ). ವಿಜಯಕುಮಾರ ಸೂರವಾರ (ಪ್ರಧಾನ ಕಾರ್ಯದರ್ಶಿ). ಶಿವಾರೆಡ್ಡಿ ಗೌಡನಹಳ್ಳಿ (ಕಾರ್ಯದರ್ಶಿ). ಅಬ್ದುಲ ಸತ್ತಾರ (ಸಹ ಕಾರ್ಯದರ್ಶಿ). ಸಂತೋಷ ಪೂಜಾರಿ ನೀಲಹಳ್ಳಿ (ಸಂಘಟನಾ ಕಾರ್ಯದರ್ಶಿ). ಜಗನ್ನಾಥ ಕೋಡ್ಲಾ (ಸಹ ಸಂಘಟನಾ ಕಾರ್ಯದರ್ಶಿ). ರಮೇಶ ಶಿಲಾರಕೋಟ (ಕಾನೂನು ಸಲಹೆಗಾರ) ಅವರನ್ನು ಅಯ್ಕೆ ಮಾಡಲಾಗಿದೆ. ಈ ವೇಳೆ ನೂತನ ಅಧ್ಯಕ್ಷ ವಿಜಯಕುಮಾರ ಆಡಕಿ ಮಾತನಾಡಿ, ಸೇಡಂ ತಾಲೂಕು" ಜಿಲ್ಲೆಯಾಗುವ ಬಹುತೇಕ ಲಕ್ಷಣಗಳು ಹೊಂದಿದೆ. ರಾಷ್ಟ್ರಕೂಟರ ರಾಜಧಾನಿಯಾಗಿ ಮೆರೆದ ಈ ನೆಲ ಪ್ರತಿನಿತ್ಯ ಒಂದಿಲ್ಲೊಂದು ಕಾರಣಕ್ಕೆ ರಾಜ್ಯಮಟ್ಟದಲ್ಲಿ ಸುದ್ದಿಯಾಗುತ್ತದೆ. ಜಿಲ್ಲಾ ಮಟ್ಟದಲ್ಲಿರಬೇಕಾದ ಅನೇಕ ಕಚೇರಿಗಳು ಈಗಾಗಲೇ ನಮ್ಮಲ್ಲಿವೆ. ಜಿಲ್ಲೆಯಾಗಿಸುವ ಕನಸಿಗೆ ಶಕ್ತಿ ತುಂಬುವಂತೆ ಈಗಾಗಲೇ ಪುರಸಭೆ ನಗರಸಭೆಯಾಗಿ ಮಾರ್ಪಾಡಾಗಿದೆ. ಸಾಮಾಜಿಕ, ಧಾರ್ಮಿಕ, ಸಂಘಟನಾತ್ಮಕ, ಸಾಹಿತ್ಯ, ರಂಗಭೂಮಿ, ಕಲೆ ಹೀಗೆ ಹತ್ತು ಹಲವಾರು ರೀತಿಯಿಂದ ಸೇಡಂ ನೆಲ ಗುರುತಿಸಿಕೊಳ್ಳುತ್ತದೆ. ಹಾಗಾಗಿ ಅನೇಕ ಯೋಜನೆ, ಯೋಚನೆಗಳನ್ನು ಮುಂದಿಟ್ಟುಕೊಂಡು "*ಸೇಡಮ್ ಜಿಲ್ಲಾ ಹೋರಾಟ ಸಮಿತಿ*" ಯನ್ನು ಹುಟ್ಟುಹಾಕಿದ್ದೇವೆ. ಮುಂದಿನ ಯೋಜನೆಗಳನ್ನು ಬರುವ ದಿನಗಳಲ್ಲಿ ಪರಿಚಯಿಸುತ್ತೇವೆ ಎಂದು ಹೇಳಿದ್ದಾರೆ.1
- ಹರಿದಾಸ್ ಹಾರ್ಟ್ ಆಸ್ಪತ್ರೆಯ ಪ್ರಥಮ ವಾರ್ಷಿಕೋತ್ಸ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ1
- ವಿಜಯಪುರ ನಗರದಲ್ಲಿ ಮತ್ತೊಂದು ಅಗ್ನಿ ಅವಘಡ ಇಟಗಿ ಪೆಟ್ರೋಲ್ ಪಂಪ್ ಹತ್ತಿರ ಅಥಣಿ ರಸ್ತೆಯ ಬಳಿಯ ಮೆಡಿಕಲ್ ಶಾಪ್‌ನಲ್ಲಿ ಬೆಂಕಿ ಅವಘಡ ನಿನ್ನೆ ತಡರಾತ್ರಿ ನಡೆದಿದೆ ವಿಜಯಪುರ ನಗರದಲ್ಲಿ ಮತ್ತೊಂದು ಅಗ್ನಿ ಅವಘಡ ಇಟಗಿ ಪೆಟ್ರೋಲ್ ಪಂಪ್ ಹತ್ತಿರ ಅಥಣಿ ರಸ್ತೆಯ ಬಳಿಯ ಮೆಡಿಕಲ್ ಶಾಪ್‌ನಲ್ಲಿ ಬೆಂಕಿ ಅವಘಡ ನಿನ್ನೆ ತಡರಾತ್ರಿ ನಡೆದಿದೆ1