Shuru
Apke Nagar Ki App…
ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೋಣಿ ಸೇವೆ ಡಮರುಗ ಬಾರಿಸುತ್ತ ದೋಣಿ ಸೇವೆ ನಡೆಸಿಕೊಟ್ಟ ಗೊರವಪ್ಪಗಳು. ಚಳ್ಳಕೆರೆ ತಾಲ್ಲೂಕಿನ ಕೆಂಚವೀರನಹಳ್ಳಿ ಗ್ರಾಮದಲ್ಲಿ ಶ್ರೀಮೈಲಾರ ಲಿಂಗೇಶ್ವರ ದೇವಸ್ಥಾನದಲ್ಲಿ ದೋಣಿ ಸೇವೆ ಕಾರ್ಯಕ್ರಮ ಹಮ್ಮಿಕೊಳ್ಳಾಯಿತು. ಹರೆಕೆ ಹೊತ್ತ ಭಕ್ತರು ಬಾಳೆ ಹಣ್ಣು ಸಕ್ಕರೆ ತುಪ್ಪ ವನ್ನ ದೇವಸ್ಥಾನಕ್ಕೆ ನೀಡಿದ್ದರು.. ಮೈಲಾರ ಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆಯ ನಂತರ ದೋಣಿಸೇವೆ ನಡೆಯಿತು.. ದೋಣಿ (ಹಣ್ಣಿನ) ಸೇವೆ: ತಣ್ಣೀರಿನಲ್ಲಿ ಸ್ನಾನ ಮಾಡಿ ನಡೆಮುಡಿಯಲ್ಲಿ ಬಂದ ಭಕ್ತರು ‘ಏಳುಕೋಟಿ ಮೈಲಾರಲಿಂಗ ಚಾಂಗಮಲೋ’ ಎಂಬ ಘೋಷಣೆ ಕೂಗುತ್ತ ದೇವಸ್ಥಾನದ ಸುತ್ತ ಮೂರು ಬಾರಿ ಪ್ರದಕ್ಷಿಣೆ ಹಾಕಿದರು. ನಂತರ ಡಮರುಗ ಬಾರಿಸುತ್ತ ಭಕ್ತರು ದೋಣಿಯ ಸುತ್ತಲು ಹೆಜ್ಜೆ ಹಾಕುತ್ತ ಕುಣಿದರು. ಪುರದ ಜ್ಯೋತಿ ಬೆಳಗಿದ ನಂತರ ಭಕ್ತರಿಗೆ ಬಾಳೆಹಣ್ಣಿನ ಪ್ರಸಾದವನ್ನು ನೀಡಲಾಯಿತು..
Suresh Belagere
ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೋಣಿ ಸೇವೆ ಡಮರುಗ ಬಾರಿಸುತ್ತ ದೋಣಿ ಸೇವೆ ನಡೆಸಿಕೊಟ್ಟ ಗೊರವಪ್ಪಗಳು. ಚಳ್ಳಕೆರೆ ತಾಲ್ಲೂಕಿನ ಕೆಂಚವೀರನಹಳ್ಳಿ ಗ್ರಾಮದಲ್ಲಿ ಶ್ರೀಮೈಲಾರ ಲಿಂಗೇಶ್ವರ ದೇವಸ್ಥಾನದಲ್ಲಿ ದೋಣಿ ಸೇವೆ ಕಾರ್ಯಕ್ರಮ ಹಮ್ಮಿಕೊಳ್ಳಾಯಿತು. ಹರೆಕೆ ಹೊತ್ತ ಭಕ್ತರು ಬಾಳೆ ಹಣ್ಣು ಸಕ್ಕರೆ ತುಪ್ಪ ವನ್ನ ದೇವಸ್ಥಾನಕ್ಕೆ ನೀಡಿದ್ದರು.. ಮೈಲಾರ ಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆಯ ನಂತರ ದೋಣಿಸೇವೆ ನಡೆಯಿತು.. ದೋಣಿ (ಹಣ್ಣಿನ) ಸೇವೆ: ತಣ್ಣೀರಿನಲ್ಲಿ ಸ್ನಾನ ಮಾಡಿ ನಡೆಮುಡಿಯಲ್ಲಿ ಬಂದ ಭಕ್ತರು ‘ಏಳುಕೋಟಿ ಮೈಲಾರಲಿಂಗ ಚಾಂಗಮಲೋ’ ಎಂಬ ಘೋಷಣೆ ಕೂಗುತ್ತ ದೇವಸ್ಥಾನದ ಸುತ್ತ ಮೂರು ಬಾರಿ ಪ್ರದಕ್ಷಿಣೆ ಹಾಕಿದರು. ನಂತರ ಡಮರುಗ ಬಾರಿಸುತ್ತ ಭಕ್ತರು ದೋಣಿಯ ಸುತ್ತಲು ಹೆಜ್ಜೆ ಹಾಕುತ್ತ ಕುಣಿದರು. ಪುರದ ಜ್ಯೋತಿ ಬೆಳಗಿದ ನಂತರ ಭಕ್ತರಿಗೆ ಬಾಳೆಹಣ್ಣಿನ ಪ್ರಸಾದವನ್ನು ನೀಡಲಾಯಿತು..
More news from ಕರ್ನಾಟಕ and nearby areas
- "ಶ್ರೀಶಾರದಾಶ್ರಮದಿಂದ ಬುಡಗ ಜಂಗಮ ಅಲೆಮಾರಿ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ":- ಮಾತಾಜೀ ತ್ಯಾಗಮಯೀ. ಚಳ್ಳಕೆರೆ:-ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಿಂದ ಪ್ರತಿ ತಿಂಗಳು ಚಳ್ಳಕೆರೆ ತಾಲೂಕಿನ ಅಲೆಮಾರಿ ಕುಟುಂಬಗಳಿಗೆ ದಿನಬಳಕೆಯ ವಸ್ತುಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು. ನಗರದ ಹೊರವಲಯದ ಭರಮಸಾಗರ ರಸ್ತೆಯ ಮೈರಾಡ್ ಕಾಲೋನಿಯ ಬುಡಗ ಜಂಗಮ ಅಲೆಮಾರಿ ಕುಟುಂಬಗಳಿಗೆ ದಿನಸಿ ಕಿಟ್ ಮತ್ತು ಪಾತ್ರೆ-ತಟ್ಟೆ-ಲೋಟ ವಿತರಿಸಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಬುಡಗ ಜಂಗಮ ಅಲೆಮಾರಿಗಳ ಮುಖಂಡ ಬಲರಾಮ ಮಾತನಾಡಿ ದಾನದಿಂದ ಮನುಷ್ಯ ಧನ್ಯತೆಯನ್ನು ಪಡೆಯುತ್ತಾನೆ. ಇಂತಹ ಪವಿತ್ರವಾದ ಕಾರ್ಯಕ್ರಮವನ್ನು ನಗರದ ಶ್ರೀಶಾರದಾಶ್ರಮವು ಮಾಡುತ್ತಿರುವುದು ನಮ್ಮಂತಹ ಅಲೆಮಾರಿ ಕುಟುಂಬಗಳಿಗೆ ಉಪಯೋಗವಾಗುತ್ತಿದ್ದು ನೆಮ್ಮದಿಯ ಜೀವನ ನಡೆಸಲು ಸಹಾಯವಾಗುತ್ತಿದೆ ಎಂದು ಕೃತಜ್ಞತೆ ಸಲ್ಲಿಸಿದರು. ಸಮಾಜ ಸೇವಕ ಮತ್ತು ಶ್ರೀಶಾರದಾಶ್ರಮದ ಸದ್ಭಕ್ತ ಯತೀಶ್ ಎಂ ಸಿದ್ದಾಪುರ ಮಾತನಾಡಿ ಸ್ವಾಮಿ ವಿವೇಕಾನಂದರು ತಿಳಿಸಿದಂತೆ ಇಂದು ಬುಡಗ ಜಂಗಮ ಅಲೆಮಾರಿ ಕುಟುಂಬಗಳಿಗೆ ದಿನಬಳಕೆಯ ವಸ್ತುಗಳ ವಿತರಣೆಯ ಮೂಲಕ "ಜೀವ ಸೇವೆಯೇ ಈಶ ಸೇವೆ"ಯ ಸಿದ್ಧಾಂತವನ್ನು ಶ್ರೀಶಾರದಾಶ್ರಮವು ಅನುಸರಿಸಿ ಅನುಷ್ಠಾನಕ್ಕೆ ತರುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದರು. ದಿನಸಿ ಕಿಟ್ ಗಳ ವಿತರಣಾ ಸಮಾರಂಭದಲ್ಲಿ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ, ಎಂ ಗೀತಾ ನಾಗರಾಜ್,ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ,ಗೀತಾ ಪ್ರಕಾಶ್, ಅಂಬುಜಾ,ವಿದ್ಯಾ,ಕವಿತಾ, ಸರಸ್ವತಿ, ಸಂತೋಷ್, ಚೆನ್ನಕೇಶವ, ಹೃತಿಕ್,ಭಾವನಾ, ರಾಘವೇಂದ್ರ,ಡಾ.ಭೂಮಿಕ ಸೇರಿದಂತೆ ಬುಡಗ ಜಂಗಮ ನಿವಾಸಿಗಳು ಉಪಸ್ಥಿತರಿದ್ದರು.1
- ಕಲ್ಕುಂಟೆ ಗೇಟ್ ಬಳಿ ರಸ್ತೆ ಬದಿಯ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಚಿತ್ರದುರ್ಗ ತಾಲೂಕಿನ ಕಲ್ಕುಂಟೆ ಗೇಟ್ ಬಳಿ ಘಟನೆ ನಡೆದಿದ್ದು ಬೈ್ಕ ಸವಾರ ಗಂಬೀರವಾಗಿ ಗಾಯಗೊಂಡಿದ್ದು ಆತನನ್ನ ಚಿಕಿತ್ಸೆಗೆಂದು ಆಸ್ಪತ್ರೆಗೆ ಧಾಖಲಿಸಲಾಗಿದೆ1
- Post by ಚಂದು ಕನ್ನಡಿಗ ಚಳ್ಳಕೆರೆ1
- ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬಾಲೇನಹಳ್ಳಿ ಗ್ರಾಮದ ಕಾಡುಗೊಲ್ಲ ಸಮಾಜದ ಪ್ರತಿಭಾನ್ವಿತ ಯುವತಿ ಶ್ರೀಮತಿ ಕಾವ್ಯ ಟಿ. ಅವರು ಕೃಷಿ ವಿಜ್ಞಾನ ಕ್ಷೇತ್ರದಲ್ಲಿ ಕೈಗೊಂಡಿರುವ ಮಹತ್ವದ ಸಂಶೋಧನೆಗಾಗಿ ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು (ICAR-IARI) 'ಡಾಕ್ಟರ್ ಆಫ್ ಫಿಲಾಸಫಿ' (Ph.D) ಪದವಿಯನ್ನು ನೀಡಿ ಗೌರವಿಸಿದೆ. ನವದೆಹಲಿಯಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಐಸಿಎಆರ್–ಐಎಆರ್‌ಐ ಸಂಸ್ಥೆಯ ಭವ್ಯ ಘಟಿಕೋತ್ಸವ ಸಮಾರಂಭದಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಕಾವ್ಯ ಅವರಿಗೆ ಅಧಿಕೃತವಾಗಿ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿ ಅಭಿನಂದಿಸಿದರು. ಡಾ. ಕಾವ್ಯ ಅವರು "ಭತ್ತದ ಗದ್ದೆಗಳಿಂದ ಮೀಥೈಲೋಟ್ರೋಫಿಕ್ ಬ್ಯಾಕ್ಟೀರಿಯಾಗಳ ಪ್ರತ್ಯೇಕತೆ ಮತ್ತು ಗುಣಲಕ್ಷಣಗಳು ಹಾಗೂ ಸಸ್ಯ ಬೆಳವಣಿಗೆಯ ಉತ್ತೇಜನ ಮತ್ತು ಮಣ್ಣಿನ ಇಂಗಾಲದ ಸ್ವಾಧೀನದಲ್ಲಿ ಅವುಗಳ ಪಾತ್ರ" ಎಂಬ ವಿಷಯದ ಕುರಿತು ಪ್ರೌಢ ಪ್ರಬಂಧವನ್ನು ಮಂಡಿಸಿದ್ದರು. ನವದೆಹಲಿಯ ಪ್ರತಿಷ್ಠಿತ ಐಸಿಎಆರ್–ಐಎಆರ್‌ಐ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ. ಗೀತಾ ಸಿಂಗ್ ಅವರ ಮಾರ್ಗದರ್ಶನದಲ್ಲಿ ಈ ಸಂಶೋಧನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಮಣ್ಣಿನ ಫಲವತ್ತತೆಯನ್ನು ಕಾಪಾಡುವಲ್ಲಿ ಮತ್ತು ಹವಾಮಾನ ಬದಲಾವಣೆಯ ಸವಾಲುಗಳ ನಡುವೆ ಸುಸ್ಥಿರ ಕೃಷಿಯನ್ನು ಉತ್ತೇಜಿಸುವಲ್ಲಿ ಈ ಸಂಶೋಧನೆಯು ಬಹಳ ಮುಖ್ಯವಾಗಿದೆ. ವಿಶೇಷವಾಗಿ ಭತ್ತದ ಬೆಳೆಯ ಸಸ್ಯಗಳ ಬೆಳವಣಿಗೆಯನ್ನು ನೈಸರ್ಗಿಕವಾಗಿ ಹೆಚ್ಚಿಸುವ ಮತ್ತು ಮಣ್ಣಿನಲ್ಲಿ ಇಂಗಾಲದ ಅಂಶವನ್ನು ಸಂಗ್ರಹಿಸುವ ಬ್ಯಾಕ್ಟೀರಿಯಾಗಳ ಪಾತ್ರವನ್ನು ಇವರ ಸಂಶೋಧನೆಯು ಸಾಬೀತುಪಡಿಸಿದೆ. ಇದು ಕೃಷಿ ಕ್ಷೇತ್ರದಲ್ಲಿ ಮಣ್ಣಿನ ಆರೋಗ್ಯ ವೃದ್ಧಿಗೆ ಹೊಸ ದಾರಿಯನ್ನು ತೋರಿಸಿಕೊಟ್ಟಿದೆ. ಗ್ರಾಮೀಣ ಭಾಗದ ಹಿನ್ನೆಲೆಯ ಯುವತಿಯೊಬ್ಬರು ರಾಷ್ಟ್ರಮಟ್ಟದ ಉನ್ನತ ಸಂಸ್ಥೆಯಲ್ಲಿ ಸಂಶೋಧನೆ ನಡೆಸಿ ಸಾಧನೆ ಮಾಡಿರುವುದು ಹಿರಿಯೂರು ತಾಲೂಕು ಮತ್ತು ಚಿತ್ರದುರ್ಗ ಜಿಲ್ಲೆಗೆ ಕೀರ್ತಿ ತಂದಿದೆ. ಕೃಷಿ ಪ್ರಧಾನವಾದ ಚಿತ್ರದುರ್ಗದ ಮಣ್ಣಿನ ಮಗಳ ಈ ಸಾಧನೆಯು ಈ ಭಾಗದ ರೈತ ಸಮುದಾಯಕ್ಕೆ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಆಸಕ್ತಿಯಿರುವ ಯುವಕ-ಯುವತಿಯರಿಗೆ ಸ್ಫೂರ್ತಿಯಾಗಿದೆ.1
- ಮೊಳಕಾಲ್ಮೂರು ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿಯಲ್ಲಿ ಮೊಳಕಾಲ್ಮೂರು ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆ ಗೊಳಿಸಿದರು ಼಼಼಼಼಼ಕೊಂಡ್ಲಹಳ್ಳಿ ಗ್ರಾಮದಲ್ಲಿ ಸಿಎಂ ವಿಶೇಷ ಅನುದಾನದಲ್ಲಿ 14ವರೆ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಶಾಲಾ ಕೊಠಡಿ ,2024 25 ನೇ ಸಾಲಿನ ತಾಲೂಕು ಪಂಚಾಯತ್ ಅನಿರ್ ಬಂಧಿತ ಅನುದಾನ ದಡಿ ನಿರ್ಮಾಣಗೊಂಡ ನೂತನ ಅಂಗನವಾಡಿ ಕೇಂದ್ರ ಹಾಗೂ ನೂತನ ಪಶು ಚಿಕಿತ್ಸಾಲಯ ಹಾಗೂ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿ ಅಡಿಯಲ್ಲಿ ನಿರ್ಮಾಣಗೊಂಡ 5 ಲಕ್ಷದ ನೂತನ ರಥ ಮಂಟಪ ವನ್ನು ಲೋಕಾರ್ಪಣೆಗೊಳಿಸಿದರು಼಼಼಼ ಇದೆ ವೇಳೆ ಬಿಇಒ ಈ ನಿರ್ಮಲಾದೇವಿ ಪ್ರದೇಶ ಕುರುಬರ ಸಂಘದ ಮಾಜಿ ನಿರ್ದೇಶಕ ಎಸ್.ಕೆ .ಗುರುಲಿಂಗಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂಎಲ್ ಪವಿತ್ರ ಪ್ರದೀಪ್, ಪಿಡಿಓ ಎನ್ ಪಾಲಯ್ಯ, ಕಾರ್ಯದರ್ಶಿ ಕೃಷ್ಣಪ್ಪ ,ಮುಖಂಡರಾದ ಟಿ ತಿಪ್ಪೇಸ್ವಾಮಿ, ಟಿ ಸಿದ್ದಲಿಂಗಪ್ಪ, ಬಿಎಂ.ತಿಪ್ಪೇಸ್ವಾಮಿ, ಸುಧರ್ಮ, ಪಿ ಆರ್ ಈಡಿ ಎಇಇ ಲಿಂಗರಾಜ್ ,ಕ್ರೆಡಿಲ್ ಎಇಇ ನಟರಾಜ್ ಸಂಗೋಪನ ತಾಲೂಕು ಸಹಾಯಕ ನಿರ್ದೇಶಕ ಹೆಚ್ .ರಂಗಪ್ಪ ,,ಸಿಡಿಪಿಓ ನವೀನ್ ಕುಮಾರ್ ಶಾಸಕರ ಆಪ್ತ ಸಹಾಯಕ ಶ್ರೀಕಾಂತ್, ಪಿಎಸ್ಐ ಬಾಹುಬಲಿ, ಬಿಎನ್ ಬೀರಲಿಂಗಪ್ಪ, ಮುಖ್ಯ ಶಿಕ್ಷಕ ಸಿ ಚಂದ್ರಶೇಖರ್ ಎಸ್ ಡಿ ಎಮ್ ಸಿ ಅಧ್ಯಕ್ಷರು ಅಧ್ಯಕ್ಷರು, ಪದಾಧಿಕಾರಿಗಳು ,ಸ್ಥಳೀಯ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು ಉಪಸ್ಥಿತರಿದ್ದರು.4
- ಭದ್ರಾವತಿ: ಹಳೇ ನಗರದ ಬಿ.ಇ.ಒ ಕಛೇರಿ ಮತ್ತು ಡಾ|| ಬಿ.ಆರ್.ಅಂಬೇಡ್ಕರ್ ಭವನದ ಮಧ್ಯಭಾಗದಲ್ಲಿ ಇರುವ ಪ್ರಾಥಮಿಕ ಶಾಲೆಯ ಆವರಣದ ಖಾಲಿ ಜಾಗವನ್ನು ಶಾಲಾ ಮಕ್ಕಳಿಗಾಗಿ ಉದ್ಯಾನವನ ನಿರ್ಮಾಣ ಮಾಡಲು ಒತ್ತಾಯಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ, ದಲಿತ, ಕ್ರಿಶ್ಚಿಯನ್, ಮುಸ್ಲಿಂ ಸಂಘಟನೆ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ದೇಶದ ಎಲ್ಲಾ ಪ್ರಜೆಗಳಿಗೂ ಉಚಿತ ಶಿಕ್ಷಣ ನೀಡಬೇಕೆಂದು ಸಂವಿಧಾನ ತಿಳಿಸಿದ್ದರು ಸಹ ಸರ್ಕಾರಿ ಶಾಲೆ, ಕಾಲೇಜುಗಳು ಕಸದ ಗುಂಡಿ ಯಂತೆ, ನಿರ್ಲಕ್ಷ್ಯತನದಿಂದ ಬಡ ಜನರು ವಿಧ್ಯಾಭ್ಯಾಸ ಮಾಡುತ್ತಿದ್ದು, ಸಮಾನ ಶಿಕ್ಷಣ ಎಂಬ ಕಾಯ್ದೆಯನ್ನು ಉಲ್ಲಂಘಿಸುತ್ತಿರುವ ಸರ್ಕಾರಗಳು ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿರುವುದು ವಿಷಾದಕರ ಸಂಗತಿಯಾಗಿದೆ ಎಂದು ಪ್ರತಿಭಟನಾ ಕಾರರು ಕಿಡಿಕಾರಿದರು. ಶಿಕ್ಷಣ ಸಚಿವರ ಜಿಲ್ಲೆಯಲ್ಲಿಯೇ ಸರ್ಕಾರಿ ಶಾಲೆಗಳು ಅದಪತನದತ್ತ ಸಾಗುತ್ತಿರುವುದು ಶೋಚನೀಯವಾಗಿದೆ. ಸರ್ಕಾರಿ ಶಾಲೆಗಳು ಕಸದ ಗುಂಡಿಯಾಗಿ ಪರಿವರ್ತನೆ ಗೊಂಡಿದೆ. ಶಿಕ್ಷಕರಿಲ್ಲದೆ. ಮೂಲಭೂತ ಸೌಕರ್ಯ ಗಳಾದ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಕಟ್ಟಡದ ವ್ಯವಸ್ಥೆ ಇಲ್ಲದೆ ಹದಗೆಟ್ಟಿದ್ದು, ಸರ್ಕಾರಿ ಶಾಲೆಗೆ ಸೇರಿದ ಜಾಗಗಳನ್ನು ಕಬಳಿಸುವ ನಿಟ್ಟಿನಲ್ಲಿ ಖಾಸಗಿ ವ್ಯಕ್ತಿಗಳು ಕನ್ನ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪಕ್ಕದ ನಗರದ ಹೃದಯ ಭಾಗದಲ್ಲಿ ಇರುವ ಪ್ರಾಥಮಿಕ ಪಾಠಶಾಲೆಯ ಆವರಣದ ಜಾಗವನ್ನು ಕಬಳಿಸಲು ಖಾಸಗಿ ವ್ಯಕ್ತಿಗಳು ಸಂಚು ನಡೆಸುತ್ತಿದ್ದು ಆ ಜಾಗದಲ್ಲಿ ಕಳೆದ 20 ವರ್ಷಗಳಿಂದಲೂ ಕಸದ ಗುಂಡಿ ಯಂತಿತ್ತು. ಈ ಬಗ್ಗೆ ಎಚ್ಚರಿಸಿದ್ದರು ಸಹ ಸಂಬಂಧ ಪಟ್ಟ ಅಧಿಕಾರಿಗಳು ಸ್ವಚ್ಚಗೊಳಿ ಸದೆ ಕನಿಷ್ಟ ಶಾಲೆಯ ಜಾಗಕ್ಕೆ ಕಾಂಪೌಂಡ್ ನಿರ್ಮಿಸಿ , ಮಕ್ಕಳ ಆಟಿಕೆಗಳನ್ನು ಅಳವಡಿಸಿದ್ದಲ್ಲಿ ಸರ್ಕಾರಿ ಶಾಲೆಗೆ ಬರುವ ಬಡ ಕುಟುಂಬಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಅನುಕೂಲ ವಾಗಲಿದೆ ಈ ಹಿನ್ನಲೆಯಲ್ಲಿ ಒಂದು ವಾರದಲ್ಲಿ ಖಾಲಿ ಜಾಗಕ್ಕೆ ಬೇಲಿ ನಿರ್ಮಿಸಿ ಆಟಿಕೆ ಅಳವಡಿಸಲು ಒತ್ತಾಯಿಸಲಾಯಿತು. ನಂತರ ಬಿ ಇ ಓ ಹಾಗೂ ನಗರಸಭೆ ಆಯುಕ್ತರುಗಳ ಮೂಲಕ ಮುಖ್ಯಮಂತ್ರಿ ಗಳು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು,ಸಂಸದರು, ಜಿಲ್ಲಾಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿಗಳು,ತಹಶೀಲ್ದಾರ್ ರವರುಗಳಿಗೆ ಮನವಿ ಸಲ್ಲಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ನಗರಸಭೆ ಪೌರಾಯುಕ್ತರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ ಎನ್ ರಾಜು ಪ್ರತಿಭಟನೆ ನೇತೃತ್ವವಹಿಸಿದ್ದರು. ಡಿಸಿಎಂ ರಾಜ್ಯಾಧ್ಯಕ್ಷ ಪ್ರಮೋದ್ ಕುಮಾರ್, ಪ್ರಮುಖರಾದ ತೀರ್ಥೇಶ್, ಬ್ರಹ್ಮಲಿಂಗಯ್ಯ , ಸೋಮಣ್ಣ, ಚಂದ್ರಶೇಖರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.1
- ಈ ಸರ್ಕಾರಿ ಭೂಮಿ ಇದು ಜಾಗ ಮನೆಯನ್ನು ಕಟ್ಟಿಕೊಂಡರೆ ಇದು ವಿಜಯನಗರ ಜಿಲ್ಲೆ ಇಟಗಿ ಗ್ರಾಮದಲ್ಲಿರುವ ಸರ್ಕಾರಿ ಜಾಗ ಗ್ರಾಮ ಪಂಚಾಯತಿ ಇಟಗಿ ಕೋಟೆ ಸರ್ಕಾರಿ ಭೂಮಿಯಲ್ಲಿ ಗ್ರಾಮ ಸರ್ಕಾರಿ ಜಾಗವನ್ನು ಸರ್ಕಾರಿ ಜಾಗವನ್ನು ಕಟ್ಟಿಕೊಂಡಿದ್ದಾರೆ ಇದು ಅಂಗನವಾಡಿ ಶಾಲೆ ಮತ್ತು ಆಸ್ಪತ್ರೆ ಆಗಬೇಕೈತಿ ಇದು ಪಂಚಾಯತಿ ಅಧ್ಯಕ್ಷರ ಎಲ್ಲಾ ಸೇರಿಕೊಂಡು ಅಕ್ರಮವಾಗಿ ಬರೆದು ಕೊಟ್ಟಿದ್ದಾರೆ ಗ್ರಾಮ್ ಪಂಚಾಯ್ತಿ ನಂಬರ್ಸಿಗೆ ಬರೆದುಕೊಟ್ಟಿದ್ದಾರೆ1
- ಚಳ್ಳಕೆರೆ ತಾಲ್ಲೂಕಿನ ಕೆಂಚವೀರನಹಳ್ಳಿ ಗ್ರಾಮದಲ್ಲಿ ಶ್ರೀಮೈಲಾರ ಲಿಂಗೇಶ್ವರ ದೇವಸ್ಥಾನದಲ್ಲಿ ದೋಣಿ ಸೇವೆ ಕಾರ್ಯಕ್ರಮ ಹಮ್ಮಿಕೊಳ್ಳಾಯಿತು. ಹರೆಕೆ ಹೊತ್ತ ಭಕ್ತರು ಬಾಳೆ ಹಣ್ಣು ಸಕ್ಕರೆ ತುಪ್ಪ ವನ್ನ ದೇವಸ್ಥಾನಕ್ಕೆ ನೀಡಿದ್ದರು.. ಮೈಲಾರ ಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆಯ ನಂತರ ದೋಣಿಸೇವೆ ನಡೆಯಿತು.. ದೋಣಿ (ಹಣ್ಣಿನ) ಸೇವೆ: ತಣ್ಣೀರಿನಲ್ಲಿ ಸ್ನಾನ ಮಾಡಿ ನಡೆಮುಡಿಯಲ್ಲಿ ಬಂದ ಭಕ್ತರು ‘ಏಳುಕೋಟಿ ಮೈಲಾರಲಿಂಗ ಚಾಂಗಮಲೋ’ ಎಂಬ ಘೋಷಣೆ ಕೂಗುತ್ತ ದೇವಸ್ಥಾನದ ಸುತ್ತ ಮೂರು ಬಾರಿ ಪ್ರದಕ್ಷಿಣೆ ಹಾಕಿದರು. ನಂತರ ಡಮರುಗ ಬಾರಿಸುತ್ತ ಭಕ್ತರು ದೋಣಿಯ ಸುತ್ತಲು ಹೆಜ್ಜೆ ಹಾಕುತ್ತ ಕುಣಿದರು. ಪುರದ ಜ್ಯೋತಿ ಬೆಳಗಿದ ನಂತರ ಭಕ್ತರಿಗೆ ಬಾಳೆಹಣ್ಣಿನ ಪ್ರಸಾದವನ್ನು ನೀಡಲಾಯಿತು..1