ಪೈಂಟ್ ಹೊಡೆದಂತೆ ಟಾರ್ ಹಾಕಬೇಡಿ; ಬಾಕ್ಸ್ ಕಟ್ ಮಾಡಿ ಗುಣಮಟ್ಟದ ಪ್ಯಾಚ್ವರ್ಕ್ ಮಾಡಿ: ಸಚಿವ ಕೃಷ್ಣ ಬೈರೇಗೌಡ ಬೆಂಗಳೂರು: ನಗರದ ರಸ್ತೆ ಕಾಮಗಾರಿಗಳ ಗುಣಮಟ್ಟದ ವಿಚಾರವಾಗಿ ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಸ್ತೆ ಗುಂಡಿಗಳನ್ನು ಕೇವಲ ಪೈಂಟ್ ಹೊಡೆದಂತೆ ಟಾರ್ ಹಾಕಿ ಮುಚ್ಚುವ ಬದಲು, ವೈಜ್ಞಾನಿಕವಾಗಿ ಬಾಕ್ಸ್ ಕಟ್ ಮಾಡಿ ಗುಣಮಟ್ಟದ ಪ್ಯಾಚ್ವರ್ಕ್ ಮೂಲಕ ದುರಸ್ತಿ ಮಾಡಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಅತಿಹೆಚ್ಚು ವಾಹನ ದಟ್ಟಣೆ ಇರುವ ಪ್ರದೇಶದಲ್ಲಿಯೂ ರಸ್ತೆ ಕಾಮಗಾರಿ ಕೈಗೊಳ್ಳಲು ಇಷ್ಟೊಂದು ನಿರ್ಲಕ್ಷ್ಯ ಏಕೆ ಎಂದು ಪ್ರಶ್ನಿಸಿದ ಸಚಿವರು, ಅಧಿಕಾರಿಗಳ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡರು. "ನಾನು ಬಂದು ಕೇಳುವವರೆಗೂ ರಸ್ತೆ ಮಾಡಬಾರದು ಎಂದು ತೀರ್ಮಾನಿಸಿದ್ದೀರಾ? ಸರ್ಕಾರಕ್ಕಾಗಿ ಕೆಲಸ ಮಾಡುತ್ತೀರಾ ಅಥವಾ ಗುತ್ತಿಗೆದಾರರಿಗಾಗಿ ಕೆಲಸ ಮಾಡುತ್ತೀರಾ?" ಎಂದು ಪ್ರಶ್ನಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ರಸ್ತೆ ಕಾಮಗಾರಿಗಳನ್ನು ಕಾಟಾಚಾರಕ್ಕೆ ನಡೆಸದೆ, ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪೈಂಟ್ ಹೊಡೆದಂತೆ ಟಾರ್ ಹಾಕಬೇಡಿ; ಬಾಕ್ಸ್ ಕಟ್ ಮಾಡಿ ಗುಣಮಟ್ಟದ ಪ್ಯಾಚ್ವರ್ಕ್ ಮಾಡಿ: ಸಚಿವ ಕೃಷ್ಣ ಬೈರೇಗೌಡ ಬೆಂಗಳೂರು: ನಗರದ ರಸ್ತೆ ಕಾಮಗಾರಿಗಳ ಗುಣಮಟ್ಟದ ವಿಚಾರವಾಗಿ ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಸ್ತೆ ಗುಂಡಿಗಳನ್ನು ಕೇವಲ ಪೈಂಟ್ ಹೊಡೆದಂತೆ ಟಾರ್ ಹಾಕಿ ಮುಚ್ಚುವ ಬದಲು, ವೈಜ್ಞಾನಿಕವಾಗಿ ಬಾಕ್ಸ್ ಕಟ್ ಮಾಡಿ ಗುಣಮಟ್ಟದ ಪ್ಯಾಚ್ವರ್ಕ್ ಮೂಲಕ ದುರಸ್ತಿ ಮಾಡಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಅತಿಹೆಚ್ಚು ವಾಹನ ದಟ್ಟಣೆ ಇರುವ ಪ್ರದೇಶದಲ್ಲಿಯೂ ರಸ್ತೆ ಕಾಮಗಾರಿ ಕೈಗೊಳ್ಳಲು ಇಷ್ಟೊಂದು ನಿರ್ಲಕ್ಷ್ಯ ಏಕೆ ಎಂದು ಪ್ರಶ್ನಿಸಿದ ಸಚಿವರು, ಅಧಿಕಾರಿಗಳ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡರು. "ನಾನು ಬಂದು ಕೇಳುವವರೆಗೂ ರಸ್ತೆ ಮಾಡಬಾರದು ಎಂದು ತೀರ್ಮಾನಿಸಿದ್ದೀರಾ? ಸರ್ಕಾರಕ್ಕಾಗಿ ಕೆಲಸ ಮಾಡುತ್ತೀರಾ ಅಥವಾ ಗುತ್ತಿಗೆದಾರರಿಗಾಗಿ ಕೆಲಸ ಮಾಡುತ್ತೀರಾ?" ಎಂದು ಪ್ರಶ್ನಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ರಸ್ತೆ ಕಾಮಗಾರಿಗಳನ್ನು ಕಾಟಾಚಾರಕ್ಕೆ ನಡೆಸದೆ, ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
- ಪೈಂಟ್ ಹೊಡೆದಂತೆ ಟಾರ್ ಹಾಕಬೇಡಿ; ಬಾಕ್ಸ್ ಕಟ್ ಮಾಡಿ ಗುಣಮಟ್ಟದ ಪ್ಯಾಚ್ವರ್ಕ್ ಮಾಡಿ: ಸಚಿವ ಕೃಷ್ಣ ಬೈರೇಗೌಡ ಬೆಂಗಳೂರು: ನಗರದ ರಸ್ತೆ ಕಾಮಗಾರಿಗಳ ಗುಣಮಟ್ಟದ ವಿಚಾರವಾಗಿ ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಸ್ತೆ ಗುಂಡಿಗಳನ್ನು ಕೇವಲ ಪೈಂಟ್ ಹೊಡೆದಂತೆ ಟಾರ್ ಹಾಕಿ ಮುಚ್ಚುವ ಬದಲು, ವೈಜ್ಞಾನಿಕವಾಗಿ ಬಾಕ್ಸ್ ಕಟ್ ಮಾಡಿ ಗುಣಮಟ್ಟದ ಪ್ಯಾಚ್ವರ್ಕ್ ಮೂಲಕ ದುರಸ್ತಿ ಮಾಡಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಅತಿಹೆಚ್ಚು ವಾಹನ ದಟ್ಟಣೆ ಇರುವ ಪ್ರದೇಶದಲ್ಲಿಯೂ ರಸ್ತೆ ಕಾಮಗಾರಿ ಕೈಗೊಳ್ಳಲು ಇಷ್ಟೊಂದು ನಿರ್ಲಕ್ಷ್ಯ ಏಕೆ ಎಂದು ಪ್ರಶ್ನಿಸಿದ ಸಚಿವರು, ಅಧಿಕಾರಿಗಳ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡರು. "ನಾನು ಬಂದು ಕೇಳುವವರೆಗೂ ರಸ್ತೆ ಮಾಡಬಾರದು ಎಂದು ತೀರ್ಮಾನಿಸಿದ್ದೀರಾ? ಸರ್ಕಾರಕ್ಕಾಗಿ ಕೆಲಸ ಮಾಡುತ್ತೀರಾ ಅಥವಾ ಗುತ್ತಿಗೆದಾರರಿಗಾಗಿ ಕೆಲಸ ಮಾಡುತ್ತೀರಾ?" ಎಂದು ಪ್ರಶ್ನಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ರಸ್ತೆ ಕಾಮಗಾರಿಗಳನ್ನು ಕಾಟಾಚಾರಕ್ಕೆ ನಡೆಸದೆ, ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.1
- ರಾಜಣ್ಣ ನಮ್ಮ ಶಕ್ತಿ… ಬಾಲಕೃಷ್ಣಗೆ ಖಡಕ್ ಎಚ್ಚರಿಕೆ..! ರಾಜಣ್ಣ ವಿರುದ್ಧ ಮಾತನಾಡಿದ್ರೆ ಮಾಗಡಿಗೆ ಬಂದು ಮುತ್ತಿಗೆ!MADHUGIRI *ಬಾಲಕೃಷ್ಣಗೆ ರಂಗಶ್ಯಾಮಣ್ಣ ಸವಾಲ್… ರಾಜಣ್ಣ ವಿಚಾರದಲ್ಲಿ ಸುಮ್ಮನಿರಲ್ಲ!* #MADHUGIRI #TUMKUR #MAGADI #BALAKRISHANA1
- ಕುರಿಗಾಹಿಗಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ: ಗುಂಡಿನ ದಾಳಿ ಖಂಡನೆ ಹುಣಸೂರು ಸಮೀಪ ಶಿರಾ ತಾಲ್ಲೂಕಿನ ಮೂವರು ಕುರಿಗಾಹಿಗಳ ಮೇಲೆ ಗುಂಡಿನ ದಾಳಿ; ದೌರ್ಜನ್ಯ ತಡೆ ಕಾಯಿದೆ ಪರಿಣಾಮಕಾರಿ ಜಾರಿಗೆ ಒತ್ತಾಯ ಕುರಿಗಾಹಿಗಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ: ಗುಂಡಿನ ದಾಳಿ ಖಂಡನೆ ಹುಣಸೂರು ಸಮೀಪ ಶಿರಾ ತಾಲ್ಲೂಕಿನ ಮೂವರು ಕುರಿಗಾಹಿಗಳ ಮೇಲೆ ಗುಂಡಿನ ದಾಳಿ; ದೌರ್ಜನ್ಯ ತಡೆ ಕಾಯಿದೆ ಪರಿಣಾಮಕಾರಿ ಜಾರಿಗೆ ಒತ್ತಾಯ ತುಮಕೂರು ಕುರಿಗಳನ್ನು ಮೇಯಿಸಲು ವಲಸೆ ತೆರಳುವ ಕುರಿಗಾಹಿಗಳ ಮೇಲೆ ಕಳ್ಳರು ಹಾಗೂ ದುಷ್ಕರ್ಮಿಗಳ ದೌರ್ಜನ್ಯ ಹೆಚ್ಚಾಗುತ್ತಿದ್ದು, ಅವರ ಜೀವ ಮತ್ತು ಆಸ್ತಿಗೆ ರಕ್ಷಣೆ ಇಲ್ಲದಂತಾಗಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಗುರುಪುರ ಸಮೀಪ ನ.5ರ ರಾತ್ರಿ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಮೂವರು ಕುರಿಗಾಹಿಗಳ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ಆತಂಕ ಮೂಡಿಸಿದೆ. ಶಿರಾ ತಾಲ್ಲೂಕಿನ ಗೌಡಗೆರೆ ಹೋಬಳಿಯ ಬೇವಿನಹಳ್ಳಿ ಹಾಗೂ ಚಂಗಾವರ ಗ್ರಾಮದ ಕುರಿಗಾಹಿಗಳಾದ ಗೋವಿಂದ, ಜುಂಜಣ್ಣ ಮತ್ತು ಭೀಮು ಅವರು ಎರಡು ದಿನಗಳ ಹಿಂದೆ ಕುರಿಗಳನ್ನು ಮೇಯಿಸಲು ಹುಣಸೂರು ಸಮೀಪಕ್ಕೆ ವಲಸೆ ತೆರಳಿದ್ದರು. ಈ ವೇಳೆ ಕಳ್ಳರು ಎರಡು ಟಗರುಗಳನ್ನು ಕದ್ದು ಪರಾರಿಯಾಗಿದ್ದರು ಎನ್ನಲಾಗಿದೆ. ನ.5ರ ರಾತ್ರಿ ಎರಡು ಬೈಕ್ಗಳಲ್ಲಿ ಬಂದ ಕಳ್ಳರು ಮತ್ತೆ ಕುರಿಗಳನ್ನು ಕದಿಯಲು ಯತ್ನಿಸುತ್ತಿರುವುದನ್ನು ಗಮನಿಸಿದ ಕುರಿಗಾಹಿಗಳು ಎಚ್ಚೆತ್ತುಕೊಂಡು ಅವರನ್ನು ಹಿಡಿಯಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿ, ಒಂದು ಬೈಕ್ ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ದಾಳಿಯಲ್ಲಿ ಮೂವರು ಕುರಿಗಾಹಿಗಳು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರ್ಕಾರದಿಂದ ರಕ್ಷಣೆ ಒದಗಿಸಲು ಒತ್ತಾಯ ಶಿರಾ, ಹಿರಿಯೂರು ಹಾಗೂ ಚಿಕ್ಕನಾಯಕನಹಳ್ಳಿ ಸೇರಿದಂತೆ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಹಲವು ಭಾಗಗಳಲ್ಲಿ ಮಳೆ-ಬೆಳೆ ಇಲ್ಲದೆ ಕುರಿಗಾಹಿಗಳು ಜೀವನ ನಿರ್ವಹಣೆಗಾಗಿ ಕುರಿಗಳೊಂದಿಗೆ ದೂರದ ಊರುಗಳಿಗೆ ವಲಸೆ ಹೋಗುತ್ತಿದ್ದಾರೆ. ಆದರೆ, ವಲಸೆ ಹೋದ ಸಂದರ್ಭಗಳಲ್ಲಿ ಕುರಿಗಳ ಕಳ್ಳತನ, ಕುರಿಗಾಹಿಗಳ ಮೇಲೆ ಹಲ್ಲೆ ಹಾಗೂ ಗುಂಡಿನ ದಾಳಿಯಂತಹ ಘಟನೆಗಳು ನಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಕುರಿಗಾಹಿಗಳು ಜೀವಭಯದಲ್ಲೇ ಜೀವನ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಕುರಿಗಾಹಿಗಳ ರಕ್ಷಣೆಗಾಗಿ ರೂಪಿಸಿರುವ ಕಳ್ಳತನ ತಡೆ ಕ್ರಮಗಳು, ದೌರ್ಜನ್ಯ ತಡೆ ಕಾಯಿದೆ ಹಾಗೂ ವಿವಿಧ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ವಲಸೆ ಹೋಗುವ ಕುರಿಗಾಹಿಗಳಿಗೆ ಸೂಕ್ತ ಭದ್ರತೆ ಒದಗಿಸುವ ಜತೆಗೆ, ದಾಳಿಯಲ್ಲಿ ಭಾಗಿಯಾಗಿರುವ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾಡುಗೊಲ್ಲ ಯುವ ಸೇನೆ ಅಧ್ಯಕ್ಷ ಮಂಜು ಕೆಂಪರಾಯನಹಟ್ಟಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ವರದಿ ಸತೀಶ್ ಎಸ್ ತುಮಕೂರು4
- ಮೈಸೂರು ಹುಲಿ ದಾಳಿ: ಮೃತರ ಕುಟುಂಬಕ್ಕೆ 50 ಲಕ್ಷ ಪರಿಹಾರ ಘೋಷಿಸಿ ನಾಗಲಿಂಗ ಸ್ವಾಮಿ1
- ಇಂದು ಬೆಂಗಳೂರಿನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ವಿಚಿತ್ರ ಬಗೆಯ ಪ್ರತಿಭಟನೆ ಇಂದು ಬೆಂಗಳೂರಿನ ಕೇಂದ್ರ ಬಿಂದುವಾದ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ಕನ್ನಡ ಪರ ಹೋರಾಟಗಾರ ಹೋಟೆಲ್ ನಾಗರಾಜ್ ರವರು ಈಗಿನ ಸರಕಾರ ಮಾಡಿರುವ ಹಾಲು ಅಕ್ಕಿ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ ದರಗಳನ್ನು ಏರಿಕೆ ಮಾಡಿರುವದರ ಬಗ್ಗೆ ವಿಚಿತ್ರ ಪ್ರತಿಭಟನೆ ಮಾಡಿದರು ಬಗ್ಗೆ1
- ತುಮಕೂರು ಬಸ್ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರು ಬಸ್ ದರ ಏರಿಕೆ ಬಗ್ಗೆ ಪ್ರತಿಭಟನೆ *ತುಮಕೂರು ಬಸ್ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ* > ತುಮಕೂರು: ನಗರದ ಶ್ರೀ ಡಿ. ದೇವರಾಜ ಅರಸು ಬಸ್ ನಿಲ್ದಾಣದ ಎದುರು ಇಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. > > ಬಿಜೆಪಿ ಬಾವುಟ ಹಿಡಿದು, ಭಿತ್ತಿಪತ್ರ ಹಿಡಿದು ನೂರಾರು ಕಾರ್ಯಕರ್ತರು ಬಸ್ ನಿಲ್ದಾಣದ ಮುಂಭಾಗದಲ್ಲಿ ಜಮಾಯಿಸಿ ಘೋಷಣೆ ಕೂಗಿದರು. > > ಈ ಸಂದರ್ಭದಲ್ಲಿ ಪುರುಷರು ಹಾಗೂ ಮಹಿಳಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸ್ಥಳದಲ್ಲಿ ಪೊಲೀಸರು ಬಿಗಿ ಭದ್ರತೆ > ಇಂದು ತುಮಕೂರಿನ ಡಿ. ದೇವರಾಜ ಅರಸು ಬಸ್ ನಿಲ್ದಾಣದ ಮುಂದೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. > ಕೈಯಲ್ಲಿ ಬಿಜೆಪಿ ಬಾವುಟ ಹಿಡಿದು, ಭಿತ್ತಿಪತ್ರ ಹಿಡಿದು ಕಾರ್ಯಕರ್ತರು ಘೋಷಣೆ ಕೂಗಿದರು. ಈ ಪ್ರತಿಭಟನೆಯಲ್ಲಿ ಮಹಿಳೆಯರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.2
- *ದ್ವಾರಪಲ್ಲಿಯ ಪುರಾತನ ವೆಂಕಟರಮಣ ಸ್ವಾಮಿ ದೇವಸ್ಥಾನದ ಜಾಗ ಒತ್ತುವರಿ-ತಾಲೂಕು ಆಡಳಿತದ ವಿರುದ್ಧ ಗ್ರಾಮಸ್ಥರ ಆಕ್ರೋಶ* *ಮುಜರಾಯಿ ದೇವಸ್ಥಾನದ ಜಾಗ ಒತ್ತುವರಿ ಆರೋಪ ಸರ್ವೆಗಾಗಿ ಗ್ರಾಮಸ್ಥರ ಪರದಾಟ,ತಾಲೂಕು ಆಡಳಿತದ ವಿರುದ್ಧ ಆಕ್ರೋಶ* ಚಿಂತಾಮಣಿ ತಾಲೂಕಿನ ಅಂಬಾಜಿದುರ್ಗಾ ಹೋಬಳಿ ವ್ಯಾಪ್ತಿಯ ದ್ವಾರಪಲ್ಲಿ ಗ್ರಾಮದಲ್ಲಿ ಪುರಾತನ ಕಾಲದ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದ್ದು,ತಾಲೂಕು ಆಡಳಿತ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜಾಗದ ಸರ್ವೆ ಕಾರ್ಯ ವಿಳಂಬವಾಗುತ್ತಿದೆ ಎಂದು ಗ್ರಾಮದ ನರೇಶ್ ನಾಯಕ್, ಗಂಭೀರ ಆರೋಪ ಮಾಡಿದ್ದಾರೆ. ದ್ವಾರಪಲ್ಲಿ ಗ್ರಾಮದಲ್ಲಿ ತಾತ-ಮುತ್ತಾತಂದರ ಕಾಲದಿಂದಲೂ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನವಿದ್ದು,ಗ್ರಾಮಸ್ಥರು ಇಲ್ಲಿ ವಿವಿಧ ಪೂಜೆ-ಪುನಸ್ಕಾರಗಳು ಹಾಗೂ ಹಬ್ಬಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ.ಸಂಕ್ರಾಂತಿ ಸೇರಿದಂತೆ ಪ್ರಮುಖ ಹಬ್ಬಗಳನ್ನು ಈ ಜಾಗದಲ್ಲೇ ಆಚರಿಸಲಾಗುತ್ತಿತ್ತು ಎಂದು ನರೇಶ್ ನಾಯಕ್ ತಿಳಿಸಿದ್ದಾರೆ. ದೇವಸ್ಥಾನಕ್ಕೆ ಹಾಗೂ ಕಲ್ಯಾಣಿಗೆ ಸೇರಬೇಕಾದ ಸರ್ವೆ ನಂಬರ್ 12ರ ಸುಮಾರು 1 ಎಕರೆ 10 ಗುಂಟೆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ.ಈ ಜಾಗವನ್ನು ಬೇರೆ ಸರ್ವೆ ನಂಬರ್ಗಳಿಗೆ ಕನ್ವರ್ಟ್ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ದೇವಸ್ಥಾನದ ಜಾಗವನ್ನು ಗುರುತಿಸಿ ಮುಜರಾಯಿ ಇಲಾಖೆಗೆ ಒಳಪಡಿಸುವಂತೆ ಕೋರಿ ಪ್ರಸಕ್ತ ವರ್ಷದ ಜನವರಿ 23 ರಂದೇ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿತ್ತು.ಇದರನ್ವಯ ಮಾರ್ಚ್ 23 ರಂದು ಸರ್ವೆ ಕಾರ್ಯಕ್ಕೆ ಆದೇಶಿಸಲಾಗಿದ್ದರೂ, ಅಧಿಕಾರಿಗಳು ಇದುವರೆಗೆ ಸರ್ವೆ ಮಾಡಲು ಬಾರದೆ ಸಬೂಬು ಹೇಳುತ್ತಿದ್ದಾರೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಕಚೇರಿಗೆ ಅಲೆದಾಡಿದರೂ ಅಧಿಕಾರಿಗಳು "ಮಾಡಿಕೊಡುತ್ತೇವೆ, ಮಾಡಿಕೊಡುತ್ತೇವೆ" ಎಂದು ಭರವಸೆ ನೀಡುತ್ತಾರೆಯೇ ಹೊರತು ಇದುವರೆಗೂ ಯಾವುದೇ ಪರಿಹಾರ ದೊರೆತಿಲ್ಲ ಎಂದು ನರೇಶ್ ನಾಯಕ್ ದೂರಿದ್ದಾರೆ. ಕೂಡಲೇ ಜಿಲ್ಲಾ ಆಡಳಿತ ಮತ್ತು ತಾಲೂಕು ಆಡಳಿತ ಎಚ್ಚೆತ್ತುಕೊಂಡು,ದ್ವಾರಪಲ್ಲಿ ಗ್ರಾಮದ ಪುರಾತನ ವೆಂಕಟರಮಣ ಸ್ವಾಮಿ ದೇವಸ್ಥಾನವಿರುವ ಜಾಗ ಹಾಗೂ ಕಲ್ಯಾಣಿಯನ್ನು ಸರ್ವೆ ನಡೆಸಿ ಗುರುತಿಸಬೇಕು.ಜತೆಗೆ ಮುಜರಾಯಿ ದೇವಸ್ಥಾನದ ಜಾಗವನ್ನು ರಕ್ಷಿಸಿಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.4
- ಹಸನಾಂಬಾ ದೇವಿಯ ದರ್ಶನ ಪಡೆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಸನ: ಇತಿಹಾಸ ಪ್ರಸಿದ್ಧ ಹಾಸನದ ಹಸನಾಂಬಾ ದೇವಿಯ ಉತ್ಸವದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಪಾಲ್ಗೊಂಡು ದೇವಿಯ ದರ್ಶನ ಪಡೆದರು. ಈ ವೇಳೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು. ಬಳಿಕ ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯಕ್ಕೂ ಭೇಟಿ ನೀಡಿದ ಸಿದ್ದರಾಮಯ್ಯ ಅವರು ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಅಬಕಾರಿ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್. ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.1