ಕಲ್ಯಾಣ ಕರ್ನಾಟಕದ ʻಕಲ್ಯಾಣʼವೇ ನಮ್ಮ ಆದ್ಯತೆ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ–2026ರ ಅಂಗವಾಗಿ ಕಲಬುರಗಿಯ ಪೊಲೀಸ್ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ, ಪಥಸಂಚಲನ ವೀಕ್ಷಿಸಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್, ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದೆ. ಈ ಐತಿಹಾಸಿಕ ದಿನವು ಕಲ್ಯಾಣ ಕರ್ನಾಟಕದ ಜನರ ಹಕ್ಕು, ಸ್ವಾಭಿಮಾನ ಹಾಗೂ ಅಭಿವೃದ್ಧಿಯ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ. ಈ ನೆಲದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಶಿಕ್ಷಣ, ಉದ್ಯೋಗ, ಮೂಲಸೌಕರ್ಯ ಹಾಗೂ ಕೈಗಾರಿಕಾ ಬೆಳವಣಿಗೆಯ ಮೂಲಕ ಕಲ್ಯಾಣ ಕರ್ನಾಟಕವನ್ನು ಅಭಿವೃದ್ಧಿಯ ಮುಂಚೂಣಿಗೆ ಕೊಂಡೊಯ್ಯುವುದು ಸರ್ಕಾರದ ಮುಖ್ಯ ಗುರಿಯಾಗಿದೆ. ಈ ಕಾರ್ಯಕ್ರಮದಲ್ಲಿ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ, ಶಾಸಕರಾದ ಶ್ರೀ ಬಿ.ಆರ್ ಪಾಟೀಲ್, ಶ್ರೀಮತಿ ಕನೀಜ್ ಫಾತಿಮಾ, ಶ್ರೀ ಎಂ.ವೈ ಪಾಟೀಲ್, ಶ್ರೀ ಬಸವರಾಜ ಮತ್ತಿಮಡು, ಶ್ರೀ ಅಲ್ಲಮಪ್ರಭು ಪಾಟೀಲ್, ಸಂಸದರಾದ ಶ್ರೀ ರಾಧಾಕೃಷ್ಣ ದೊಡ್ಡಮನಿ, ಜಿಲ್ಲಾಧಿಕಾರಿ ಇಕ್ರಂ ಷರೀಫ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕಲ್ಯಾಣ ಕರ್ನಾಟಕದ ʻಕಲ್ಯಾಣʼವೇ ನಮ್ಮ ಆದ್ಯತೆ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ–2026ರ ಅಂಗವಾಗಿ ಕಲಬುರಗಿಯ ಪೊಲೀಸ್ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ, ಪಥಸಂಚಲನ ವೀಕ್ಷಿಸಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್, ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಸರ್ದಾರ್
ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದೆ. ಈ ಐತಿಹಾಸಿಕ ದಿನವು ಕಲ್ಯಾಣ ಕರ್ನಾಟಕದ ಜನರ ಹಕ್ಕು, ಸ್ವಾಭಿಮಾನ ಹಾಗೂ ಅಭಿವೃದ್ಧಿಯ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ. ಈ ನೆಲದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಶಿಕ್ಷಣ, ಉದ್ಯೋಗ,
ಮೂಲಸೌಕರ್ಯ ಹಾಗೂ ಕೈಗಾರಿಕಾ ಬೆಳವಣಿಗೆಯ ಮೂಲಕ ಕಲ್ಯಾಣ ಕರ್ನಾಟಕವನ್ನು ಅಭಿವೃದ್ಧಿಯ ಮುಂಚೂಣಿಗೆ ಕೊಂಡೊಯ್ಯುವುದು ಸರ್ಕಾರದ ಮುಖ್ಯ ಗುರಿಯಾಗಿದೆ. ಈ ಕಾರ್ಯಕ್ರಮದಲ್ಲಿ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ, ಶಾಸಕರಾದ ಶ್ರೀ ಬಿ.ಆರ್ ಪಾಟೀಲ್, ಶ್ರೀಮತಿ ಕನೀಜ್ ಫಾತಿಮಾ,
ಶ್ರೀ ಎಂ.ವೈ ಪಾಟೀಲ್, ಶ್ರೀ ಬಸವರಾಜ ಮತ್ತಿಮಡು, ಶ್ರೀ ಅಲ್ಲಮಪ್ರಭು ಪಾಟೀಲ್, ಸಂಸದರಾದ ಶ್ರೀ ರಾಧಾಕೃಷ್ಣ ದೊಡ್ಡಮನಿ, ಜಿಲ್ಲಾಧಿಕಾರಿ ಇಕ್ರಂ ಷರೀಫ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
- ಕೊಪ್ಪಳ: ನಮ್ಮ ಒತ್ತಡದಿಂದಲೇ ತಾಲೂಕಿನ ಬರ ಗುರುತಿಸಿದ ಸರಕಾರ' : ಸಿವಿಸಿ 'ಕೊಪ್ಪಳ: ಕೊಪ್ಪಳ ತಾಲೂಕ ಬರಪೀಡಿತ ಎಂದು ಸರಕಾರ ಒಪ್ಪಿಕೊಂಡಿರುವುದು ನಮ್ಮ ಹೋರಾಟಕ್ಕೆ ಸಂದ ಜಯ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. "ಕೊಪ್ಪಳವೂ ಸೇರಿದಂತೆ 53 ತಾಲೂಕುಗಳು ಬರಪೀಡಿತ ಸರಕಾರ ಆದೇಶ ಹೊರಡಿಸಿದೆ. ತಾಂತ್ರಿಕ ಪ್ರಕ್ರಿಯೆಗಳ ನಂತರ ಒಂದು ವಾರದಲ್ಲಿ ಈ ತಾಲೂಕು ಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗುತ್ತದೆ. ಈ ವಿಷಯದಲ್ಲಿ ಈ ಹಿಂದೆ ಮಾಡಿದಂತಹ ವಿಳಂಬವನ್ನು ಮಾಡದೆ ಎಲ್ಲಾ ಪ್ರಕ್ರಿಯೆಗಳನ್ನು ಒಂದೆರಡು ದಿನಗಳಲ್ಲಿ ಪೂರ್ಣಗೊಳಿಸಬೇಕು," ಎಂದು ಒತ್ತಾಯಿಸಿದ್ದಾರೆ. ತಾಲೂಕಿನ ಪರಸ್ಥಿತಿಯ ಆಧಾರದ ಮೇಲೆ ನಾವು ಮಂಡಿಸಿದ್ದ ಬೇಡಿಕೆಯನ್ನು ಈಡೇರಿಸಲು ಎರಡೂವರೆ ತಿಂಗಳುಗಳಷ್ಟು ಕಾಲಹರಣ ಮಾಡುವ ಅಗತ್ಯ ಇರಲಿಲ್ಲ. ನಾವು ಒಂದೂವರೆ ತಿಂಗಳಿನಲ್ಲಿ ಎರಡು ಪಾದಯಾತ್ರೆಗಳನ್ನು ಹಮ್ಮಿಕೊಂಡು ತೀವ್ರ ಒತ್ತಡ ಹೇರದಿದ್ದರೆ ಕೊಪ್ಪಳದಲ್ಲಿ ಬರ ಇರುವುದನ್ನು ಸರಕಾರ ಒಪ್ಪುತ್ತಿರಲಿಲ್ಲ. ಶಾಸಕರು ಕ್ರಿಯಾಶೀಲವಾಗಿ ಕೆಲಸ ಮಾಡಿದ್ದರೆ ನಾವು ಹೋರಾಡುವ ಪರಿಸ್ಥಿತಿಯೇ ಇರುತ್ತಿರಲಿಲ್ಲ. ಸರಕಾರದ ನಿರ್ಧಾರ ನಮ್ಮ ಹೋರಾಟಕ್ಕೆ ಸಿಕ್ಕ ಜಯ ಎಂದು ಹೇಳಿದ್ದಾರೆ. "ಕುಡಿಯುವ ನೀರು ಹಾಗೂ ಮೇವು ಪೂರೈಕೆಗೆ, ಬಾಕಿ ಇರುವ ಬೆಳೆ ವಿಮೆಗೆ ಹಾಗೂ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಹಣ ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ಈ ಕೂಡಲೇ ಆರಂಭಿಸಬೇಕು. ಈ ಪ್ರಕ್ರಿಯೆಯಲ್ಲಿ ವಿಳಂಬವಾದರೆ ಪರಿಹಾರ ಸಕಾಲದಲ್ಲಿ ದೊರೆಯದೆ ರೈತರು ಇನ್ನಷ್ಟು ಸಂಕಷ್ಟಕ್ಕೀಡಾಗಲಿದ್ದಾರೆ. ಈ ವಿಷಯದಲ್ಲಿ ಕಾಲಹರಣ ಮಾಡಿದರೇ ನಮ್ಮ ಪಕ್ಷ ಮತ್ತೊಮ್ಮೆ ಉಗ್ರ ಹೋರಾಟ ಮಾಡುವುದು ಖಚಿತ ಎಂದು ಸ್ಪಷ್ಟಪಡಿಸಿದ್ದಾರೆ.2
- ಗುಡೇಕೋಟೆ : ಆರೋಗ್ಯ ತಪಾಸಣೆಗೈದ ಹಾಗೂ ಒಳಗಾದ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ - ತಾಲೂಕಿನ ಗುಡೇಕೋಟೆ *ಗುಡೇಕೋಟೆ : ಆರೋಗ್ಯ ತಪಾಸಣೆಗೈದ ಹಾಗೂ ಒಳಗಾದ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್*- ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ , ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು. ಆರೋಗ್ಯ ತಪಾಸಣೆಗೈದರು , ಹಾಗೂ ತಪಾಸಣೆಗೆೊಳಗಾದರು. ಅವರು ಜನಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಭಾಗಿಯಾಗಿದ ನಂತರ , ಆರೋಗ್ಯ ಸಿಬ್ಬಂದಿಯವರಲ್ಲಿ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಮತ್ತು ನೆರೆದಿದ್ದ ಹಲವರ ಆಪೇಕ್ಷೆಯ ಮೇರೆಗೆ , ಶಾಸಕರು ಹಲವರ ಕಣ್ಣು ಪರೀಕ್ಷೆ ಮಾಡಿ ಚಿಕಿತ್ಸೆ ಶಿಪಾರಸ್ಸು ಮಾಡಿದರು. ನಂತರ ಅವರು ಸಿ ವಿಟಮಿನ್ ಮಾತ್ರೆ ಸೇವನೆಯ ಮಹತ್ವವನ್ನು , ನೆರೆದವರಲ್ಲಿ ಜಾಗ್ರತೆ ಮೂಡಿಸಿದರು ಹಾಗೂ ಸ್ವತಃ ಅವರೇ ಮಾತ್ರೆ ಸೇವೆನ ಮಾಡಿ ಪ್ರೋತ್ಸಾಹಿಸಿದರು. ಇದಕ್ಕೂ ಮುನ್ನ ಅವರು ಎಸ್ಡಿ ಎಮ್ಸಿ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ , ಪ್ರೌಢ ಶಾಲಾ ಪ್ರಾಂಶುಪಾಲರಿಗೆ ಅಗತ್ಯ ಸಲಹೆ ಸೂಚನೆಗಳನ್ನು ನಿರ್ಧೇಶನಗಳನ್ನು ನೀಡಿದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- ನವ ಯುವಶಕ್ತಿ ಸಂಘ ಮತ್ತು ಯೂತ್ ಎಸ್ಕಾರ್ಟ್ ಕಮಿಟಿ ವತಿಯಿಂದ ಅನ್ನ ಸಂತರ್ಪಣ ಕಾರ್ಯಕ್ರಮ4
- ಸಾರ್ವಜನಿಕ ಸ್ಪಂದನೆ ಕುರಿತು ದೂರು: ಪಟ್ಟಣ ಪಂಚಾಯತ್‌ಗೆ ಲೋಕಾಯುಕ್ತ ಭೇಟಿ ಕೂಡ್ಲಿಗಿ: ಪಟ್ಟಣ ಪಂಚಾಯತ್ ಕಚೇರಿಗೆ ಬುದುವಾರ ದಿಢೀರನೆ ವಿಜಯನಗರ–ಬಳ್ಳಾರಿ ವಿಭಾಗದ ಲೋಕಾಯುಕ್ತರು ಡಿವೈಎಸ್ಪಿ ಎಸ್.ಎಸ್.ಬೀಳಗಿ, ಚಿತ್ರದುರ್ಗ ಡಿವೈಎಸ್ಪಿ ಕಲಾವತಿ ನೇತೃತ್ವದಲ್ಲಿ ಚಿತ್ರದುರ್ಗದ ಸಿಪಿಐಗಳಾದ ಬಸವರಾಜ ಪಾಟೀಲ್, ಸುಮಾ ಗೊರೆಬಾಳ ಸೇರಿದಂತೆ ಒಟ್ಟು ೧೬ ಸಿಬ್ಬಂದಿಯು ದಿಢೀರ್ ಆಗಮಿಸಿದ್ದರು. ಕಛೇರಿಗೆ ಸಂಬಂಧಿಸಿದ ಕಡತಗಳನ್ನು ಮುಖ್ಯಾಧಿಕಾರಿ ದಾದಾಪೀರ್ ಮೂಲಕ ಕಚೇರಿಯ ಆಡಳಿತಾತ್ಮಕ ಕಾರ್ಯವೈಖರಿ ಹಾಗೂ ವಿವಿಧ ದಾಖಲೆಗಳನ್ನು ಪರಿಶೀಲಿಸಿದರು. ಪಟ್ಟಣ ಪಂಚಾಯತ್ ಕಚೇರಿಯ ಆಡಳಿತ ವ್ಯವಸ್ಥೆ ಸರಿಯಾಗಿಲ್ಲ ಹಾಗೂ ಸಾರ್ವಜನಿಕರ ಅಹವಾಲುಗಳಿಗೆ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಈ ಭೇಟಿ ನಡೆಸಿದ್ದಾರೆ ಎನ್ನಲಾಗಿದೆ. ಲೋಕಾಯುಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿ ದಿಢೀರ್ ಭೇಟಿ ನಂತರ ಮಾಹಿತಿ ಕೇಳಲು, ದಾಖಲೆ ಪರಿಶೀಲಿಸಲು ಮುಂದಾಗಿದ್ದರಿಂದ ಪಪಂ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಶಾಕ್ ನೀಡಿದಂತಾಗಿತ್ತು. ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸಿದ್ದ ವೇಳೆ ಪಪಂ ಮುಖ್ಯಾಧಿಕಾರಿ ಎಚ್.ದಾದಾಪೀರ್ ಸೇರಿ ನಾನಾ ವಿಭಾಗದ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದು, ದಾಖಲೆ ಪರಿಶೀಲನೆಗೆ ಸಹಕರಿಸಿದರು. ಬೆಳಗ್ಗೆ 10 ಗಂಟೆಯಿಂದ ಸಂಜೆ 5ಗಂಟೆಯವರೆಗೆ ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದರು. ನಾನಾ ದೂರು ಆಧರಿಸಿ ಲೋಕಾಯುಕ್ತದಲ್ಲಿ ಸ್ವಯಂ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಇದಲ್ಲದೆ, ಕೊಟ್ಟೂರು ಪಪಂ ಕಚೇರಿಯಲ್ಲೂ ಸಹ ಲೋಕಾಯುಕ್ತ ಅಧಿಕಾರಿಗಳು, ಸಿಬ್ಬಂದಿ ದಾಖಲೆ ಪರಿಶೀಲನೆ ನಡೆಸಲಾಗಿದೆ ಎಂದು ಬಳ್ಳಾರಿ ಲೋಕಾಯುಕ್ತ ಡಿವೈಎಸ್ಪಿ ಎಸ್.ಎಸ್.ಬೀಳಗಿ ಅವರು ಮಾಹಿತಿ ತಿಳಿಸಿದರು.1
- ಕುಷ್ಟಗಿಯಲ್ಲಿ ಪ್ರಧಾನಿ ಮೋದಿ ಜನ್ಮದಿನಾಚರಣೆ: ಮನೆ ಮನೆಯಲ್ಲಿ ಆಶೀರ್ವಾದ ದೀಪ ಬೆಳಗಲು ಕರೆ - ಶಾಸಕ ದೊಡ್ಡನಗೌಡ ಪಾಟೀಲ* *ಕುಷ್ಟಗಿ:* ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನಾಚರಣೆ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿ, ಅವರ ದೀರ್ಘಾಯುಷ್ಯಕ್ಕೆ ಶಾಸಕ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಹಾಗೂ ಬಿಜೆಪಿ ಕಾರ್ಯಕರ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಮಾತನಾಡಿದ ಅವರು, ದೇಶ ಕಂಡ ಪ್ರಬುದ್ಧ ನಾಯಕ, ಜಗತ್ತು ಮೆಚ್ಚಿದ ನಾಯಕ ನರೇಂದ್ರ ಮೋದಿಜಿ ಅವರಿಗೆ ಭಾರತವನ್ನು ಬಲಿಷ್ಠ ಮಾಡುವ ಶಕ್ತಿಯನ್ನು ದೇವರು ನೀಡಲಿ. ಇಂದು 75ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಮೋದಿಜಿ ಅವರಿಗೆ ನಿಮ್ಮೆಲ್ಲರ ಪರವಾಗಿ ಶುಭಾಶಯಗಳನ್ನು ಕೋರುತ್ತೇನೆ. ಅವರ ಹೆಸರಿನಲ್ಲಿ ಒಂದು ತಿಂಗಳ ಕಾಲ ಶಿವಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇಂದು ಸಂಜೆ ಮನೆ ಮನೆಯಲ್ಲಿ ದೀಪ ಹಚ್ಚುವ ಮೂಲಕ ಆಶೀರ್ವಾದ ದೀಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಾರತೀಯ ಜನತಾ ಪಕ್ಷದ ಹಿರಿಯರು, ಎಲ್ಲ ನಾಗರಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ ಅವರು, ಜನ್ಮದಿನದ ಈ ಸಂದರ್ಭದಲ್ಲಿ ಅವರಿಗೆ ಶುಭವಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಮಹಾಂತೇಶ ಬಾದಾಮಿ, ಜಯ ತೀರ್ಥ ಸೌದಿ, ಈರಣ್ಣ ಗಜೇಂದ್ರಗಡ,. ತಾಲೂಕು ಯುವ ಮೋರ್ಚಾ ಅಧ್ಯಕ್ಷ ಉಮೇಶ ಯಾದವ್, ಮಾಜಿ ಪುರಸಭೆ ಸದಸ್ಯ ಜಯತೀರ್ಥ ಆಚಾರಿ, ಅಶೋಕ ಬಳೂಟಗಿ, ಸುಖಮುನಿ ಗುರುವಿನ್, ವೆಂಕಟೇಶ ಇಂಗಳಗಿ, ಶಿವಪ್ಪ ಗೆಜ್ಜಲಗಟ್ಟಿ, ಸುರೇಶ ಕೌದಿ, ಶೈಲಜಾ ಬಾಗಲಿ, ಶರಣಮ್ಮ ಸೇರಿದಂತೆ ನಗರದ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.4
- ನಾಳೆ ದೇಶದ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರ ಜನ್ಮದಿನ. ಕುಷ್ಟಗಿ : ದೇಶದ ಅಭಿವೃದ್ಧಿ, ಜನಸೇವೆ ಹಾಗೂ ರಾಷ್ಟ್ರ ನಿರ್ಮಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ದೇಶದ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರಿಗೆ ನಾಳೆ ಜನ್ಮದಿನವಾಗಿರುವುದರಿಂದ ಅವರಿಗೆ ಇಂದು ಮುಂಚಿತವಾಗಿ ಹೃತ್ಪೂರ್ವಕವಾದ ಹುಟ್ಟುಹಬ್ಬದ ಶುಭಾಶಯಗಳನ್ನು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಹಾಗೂ ಕುಷ್ಟಗಿ ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಹೆಚ್ ಪಾಟೀಲ್ ಅವರು ತಿಳಿಸಿದ್ದಾರೆ. ನಾಳೆ ಸೆಪ್ಟೆಂಬರ್ 17ರಂದು ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ದೀಪ ಬೆಳಗಿಸಿ, ಮೋದಿಜಿ ಅವರಿಗೆ ಇನ್ನಷ್ಟು ಹೆಚ್ಚು ದೇಶ ಸೇವೆ ಮಾಡುವ ಶಕ್ತಿ, ಆರೋಗ್ಯ, ಆಯುಷ್ಯ ಹಾಗೂ ಯಶಸ್ಸನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸೋಣ ಹಾಗೂ ಸೇವೆಯ ಸಂಕಲ್ಪದೊಂದಿಗೆ, ರಾಷ್ಟ್ರ ನಿರ್ಮಾಣದ ಪಯಣಕ್ಕೆ ನಮ್ಮ ನಿಮ್ಮೆಲ್ಲರ ಬೆಂಬಲ ಇರಲಿ ಎಂದು ಶಾಸಕರು ಹೇಳಿದ್ದಾರೆ.2
- ಪೌರ ಕಾರ್ಮಿಕರ ಅವಮಾನ ಖಂಡಿಸಿ ಸಚಿವ ಕೃಷ್ಣ ಬೈರೇಗೌಡ ಕ್ಷಮೆ ಕೇಳಬೇಕು: ಎಐಸಿಸಿಟಿಯು ಪ್ರತಿಭಟನೆ. ಪೌರ ಕಾರ್ಮಿಕರ ಅವಮಾನ ಖಂಡಿಸಿ ಸಚಿವ ಕೃಷ್ಣ ಬೈರೇಗೌಡ ಕ್ಷಮೆ ಕೇಳಬೇಕು: ಎಐಸಿಸಿಟಿಯು ಪ್ರತಿಭಟನೆ. ಸಿಂಧನೂರು,ಸೆ. 11- ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಸೆಪ್ಟೆಂಬರ್ 5ರಂದು ಸಾರ್ವಜನಿಕವಾಗಿ ಅವಮಾನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ತಕ್ಷಣವೇ ಯಾವುದೇ ಷರತ್ತಿಲ್ಲದೆ ಭೇಷರತ್ ಕ್ಷಮೆಯಾಚಿಸಬೇಕು ಎಂದು ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು) ಆಗ್ರಹಿಸಿ ಪ್ರತಿಭಟನೆ ಮೂಲಕ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಎಐಸಿಸಿಟಿಯು ರಾಜ್ಯ ಸಹ ಕಾರ್ಯದರ್ಶಿ ನಾಗರಾಜ ಪೂಜಾರ್ ಇವರ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಎಐಸಿಸಿಟಿಯು ರಾಜ್ಯ ಸಹ ಕಾರ್ಯದರ್ಶಿ ನಾಗರಾಜ ಪೂಜಾರ್ ಮಾತನಾಡಿ, ಪೌರ ಕಾರ್ಮಿಕರು ನಗರದ ಕಸವನ್ನು ಮಾತ್ರ ತೆರವುಗೊಳಿಸುವವರಲ್ಲ. ನಗರವನ್ನು ಸ್ವಚ್ಛವಾಗಿ, ಆರೋಗ್ಯಕರವಾಗಿ ಮತ್ತು ನಾಗರಿಕ ಜೀವನಕ್ಕೆ ಯೋಗ್ಯವಾಗಿ ಇರಿಸುವ ಮುಂಚೂಣಿ ಶ್ರಮಿಕರು.ಆದರೆ ಸರ್ಕಾರ ಅವರ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವ ಬದಲು, ನಗರದ ಸಮಸ್ಯೆಗಳಿಗೆ ಕಾರ್ಮಿಕರನ್ನೇ ಹೊಣೆಗಾರರನ್ನಾಗಿ ಮಾಡುತ್ತಿರುವುದು ಸರಿಯಲ್ಲ,ಕಾರ್ಮಿಕರ ಕೊರತೆ, ಖಾಲಿ ಹುದ್ದೆಗಳು, ಗುತ್ತಿಗೆ ಮತ್ತು ಹೊರಗುತ್ತಿಗೆ ಪದ್ಧತಿ, ಕೆಲಸದ ಒತ್ತಡ, ವೇತನ ಪಾವತಿಯಲ್ಲಿ ವಿಳಂಬ ಹಾಗೂ ಸುರಕ್ಷತಾ ಸೌಲಭ್ಯಗಳ ಕೊರತೆಯಂತಹ ಸಮಸ್ಯೆಗಳನ್ನು ಸರ್ಕಾರ ಮೊದಲು ಪರಿಹರಿಸಬೇಕು. ಕಾರ್ಮಿಕರ ಮೇಲೆ ಆರೋಪ ಹೊರಿಸುವ ಮೂಲಕ ಆಡಳಿತದ ವೈಫಲ್ಯವನ್ನು ಮುಚ್ಚಿಹಾಕಲು ಸಾಧ್ಯವಿಲ್ಲ ಎಂದು ಹೇಳಿದರು. ಈ ಸಂಧರ್ಭದಲ್ಲಿ ಆರ್ ಎಚ್ ಕಲಮಂಗಿ, ಮೌನೇಶ್ ಕವಿತಾಳ, ವಿರೇಶ ಕೇಸರಿ, ರಮೇಶ್, ಅಲ್ಲಾಸಾಬ, ಸುಗರಡ್ಡಿ, ಅಯ್ಯಣ್ಣ,ಸಿದ್ದು, ಯಂಕೋಬ ಹನುಮಂತ ವಿರೇಶ, ದಾನಪ್ಪ, ಮಹಾದೇವಮ್ಮ, ಲಕ್ಷ್ಮಿ ಮಕಾಳಮ್ಮ, ವಿಜಯಲಕ್ಷ್ಮಿ ಇತರರು ಇದ್ದರು.1
- ನಗರದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಸ್ಥಾಪಿಸಿ: ಸರಕಾರಕ್ಕೆ ಸಿವಿಸಿ ಒತ್ತಾಯ ಕೊಪ್ಪಳ: ಹೈದರಾಬಾದ್ ಕರ್ನಾಟಕ (ಹೈ-ಕ) ವಿಮೋಚನೆಗೆ ನಿರ್ಣಾಯಕ ಪಾತ್ರ ವಹಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕೊಡುಗೆಗಳನ್ನು ಶಾಶ್ವತವಾಗಿರಿಸಲು ಕೊಪ್ಪಳದಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಗುರುವಾರ ಸರಕಾರಕ್ಕೆ ಒತ್ತಾಯಿಸಿದರು. ಪಕ್ಷದ ಜಿಲ್ಲಾ ಕಛೇರಿಯಲ್ಲಿ ಹೈ-ಕ ವಿಮೋಚನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಹೈ-ಕ ವಿಮೋಚನೆಗೊಂಡು ಏಳು ದಶಕಗಳಾದರೂ ಪಟೇಲ್ ಅವರ ಕೊಡುಗೆಗಳನ್ನು ಸ್ಮರಿಸಲು ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಅಂದಿನ ಹೋರಾಟದ ಸಂದರ್ಭದಲ್ಲಿ ಕವಲೂರಿನಲ್ಲಿ ನಡೆದ ಹತ್ಯಾಕಾಂಡದಲ್ಲಿ ಮಡಿದ ವೀರಯೋಧರ ನೆನಪಿಗಾಗಿ ಸ್ಮಾರಕವನ್ನು ಆ ಗ್ರಾಮದಲ್ಲಿ ಸ್ಥಾಪಿಸಬೇಕು. ಒಂದು ವೇಳೆ ಸರಕಾರ ಇದನ್ನು ಮಾಡದಿದ್ದರೆ ಜೆಡಿಎಸ್ ಈ ಕೆಲಸ ಮಾಡಲಿದೆ," ಎಂದರು. "ವೈಜನಾಥ ಪಾಟೀಲ್ ಹೈ-ಕ ಪ್ರದೇಶಕ್ಕೆ ವಿಶೇಷ ಸೌಕರ್ಯಗಳು ಬೇಕೆಂದು ಕನಸು ಕಂಡು ತಮ್ಮ ಸರ್ವಸ್ವವನ್ನೇ ಧಾರೆಯಾದವರು. ತಮ್ಮ ಆಸ್ತಿಯನ್ನು ಮಾರಿ ಈ ಭಾಗದ ಸೌಕರ್ಯಗಳಿಗೆ ಹೋರಾಡಿದರು. ಆದರೆ ಸರಕಾರ ಅವರನ್ನು ಸಂಪೂರ್ಣವಾಗಿ ಮರೆತಿದೆ. ಸಂವಿಧಾನಾತ್ಮಕವಾಗಿ ಸಿಗಬೇಕಾದ ಸವಲತ್ತುಗಳು ಇಂದಿಗೂ ಮರೀಚಿಕೆಯಾಗಿವೆ. ಹೈ-ಕ ಭಾಗದ ಏಳು ಜಿಲ್ಲೆಗಳ ಎಲ್ಲಾ ಶಾಸಕರು ಸಭೆ ಸೇರಿ ಈ ಭಾಗದ ಅಭಿವೃದ್ಧಿ ಯೋಜನೆಗಳ ಕುರಿತು ನೀಲನಕ್ಷೆ ತಯಾರಿಸಬೇಕು," ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಜಡಿ ಹೇಳಿದರು. ಸರಕಾರದ ನಿರ್ಧಾರಗಳಿಗೆ ಕಾಯದೆ ಈ ಭಾಗಕ್ಕೆ ಆಗಬೇಕಾಗಿರುವ ಕೆಲಸಗಳನ್ನು ಮಾಡಲು ನಾಯಕರು ಮುಂದೆ ಬರಬೇಕೆಂದು ಯುವ ಮುಖಂಡ ಬಸವರಾಜ್ ಹೇಳಿದರು. ಹೈ-ಕ ವಿಮೋಚನಾ ಅಂಗವಾಗಿ ಹೋರಾಟಗಾರರ ಕುರಿತು ಜಿಲ್ಲಾ ಸಂಸ್ಕೃತಿ ವಿಭಾಗದ ಅಧ್ಯಕ್ಷ ಮಂಜುನಾಥ ಸೊರಟೂರ ಮಾತನಾಡಿದರು. ಹೈ-ಕ ವಿಮೋಚನ ಸಂಘರ್ಷದ ಕುರಿತು ಎಸ್ ವಿ ಸಿ ಶಿಕ್ಷಣ ಸಂಸ್ಥೆಗಳ ಸಿಇಓ ಡಾ. ಜಗದೀಶ ಅಂಗಡಿ ಉಪನ್ಯಾಸ ನೀಡಿದರು. ಜಿಲ್ಲಾ ಒಬಿಸಿ ಅಧ್ಯಕ್ಷ ಕರಿಯಪ್ಪ ಹಾಲವರ್ತಿ, ಜಿಲ್ಲಾ ಎಸ್ ಟಿ ಘಟಕ ಅಧ್ಯಕ್ಷ ರಮೇಶ ಡಂಬ್ರಳ್ಳಿ ನಗರ ಘಟಕದ ಅಧ್ಯಕ್ಷ ಸೋಮನಗೌಡ ಹೊಗರನಾಳ, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ ಏಣಿಗಿ, ನಗರ ಘಟಕದ ಮಹಿಳಾ ಅಧ್ಯಕ್ಷೆ ನಿರ್ಮಾಲಾ ಮೇದಾರ, ನಗರ ಮಹಿಳಾ ಘಟಕದ ಗೌರವ ಅಧ್ಯಕ್ಷೆ ರತ್ನಮ್ಮ ಹಿರೇಮಠ, ತಾಲೂಕು ಎಸ್ ಸಿ ಘಟಕ ಅಧ್ಯಕ್ಷ ಸುರೇಶ ದದಗಲ್, ಜಿಲ್ಲಾ ಕೈಗಾರಿಕಾ ಅಧ್ಯಕ್ಷ ಮಾರುತಿಗೌಡ ಪೊಲೀಸ್ ಪಾಟೀಲ್, ಜಿಲ್ಲಾ ಯುವ ಘಟಕ ಅಧ್ಯಕ್ಷ ಮಂಜುನಾಥ ಮಾಲಿಪಾಟೀಲ, ಮುಖಂಡರಾದ ಭಾಗ್ಯಲಕ್ಷ್ಮಿ, ಸಿದ್ದು ಪಾಟೀಲ್, ಭರತ ಕುಮಾರ ಗೊಂದಿಹೊಸಳ್ಳಿ, ಶ್ರೀನಿವಾಸ ಗೊಂದಳ್ಳಿ, ಸೇರಿದಂತೆ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.2