Shuru
Apke Nagar Ki App…
ವೃಂದಾವನಹಳ್ಳಿಯ ವೃಂದಾವನ ದೇವಿಯ ಅದ್ದೂರಿ ಜಾತ್ರೆಯಲ್ಲಿ ಪಾಲ್ಗೊಂಡ ವಿವಿಧ ಊರಿನ ದೇವತೆಗಳು. ಜಾವಗಲ್ ಹೋಬಳಿಯ ವೃಂದಾವನ ಹಳ್ಳಿಯ ಗ್ರಾಮದೇವತೆ ಊರು ಹಬ್ಬದಲ್ಲಿ ಹಲವು ಗ್ರಾಮದ ದೇವತೆಗಳು ಕರೆಯಿಸಿ ಗ್ರಾಮದಲ್ಲಿ ಅದ್ದೂರಿಯಾಗಿ ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರೆ, ಪರವು, ಕೆಂಡೋತ್ಸವ ಮುಂತಾದ ಗ್ರಾಮದ ಆಚರಣೆಗಳು ಅಲ್ಲಿ ಬಂದಿರುವ ಭಕ್ತರನ್ನು ಗಮನಸೆಳೆದವು..
Top 1 Digital Marketing
ವೃಂದಾವನಹಳ್ಳಿಯ ವೃಂದಾವನ ದೇವಿಯ ಅದ್ದೂರಿ ಜಾತ್ರೆಯಲ್ಲಿ ಪಾಲ್ಗೊಂಡ ವಿವಿಧ ಊರಿನ ದೇವತೆಗಳು. ಜಾವಗಲ್ ಹೋಬಳಿಯ ವೃಂದಾವನ ಹಳ್ಳಿಯ ಗ್ರಾಮದೇವತೆ ಊರು ಹಬ್ಬದಲ್ಲಿ ಹಲವು ಗ್ರಾಮದ ದೇವತೆಗಳು ಕರೆಯಿಸಿ ಗ್ರಾಮದಲ್ಲಿ ಅದ್ದೂರಿಯಾಗಿ ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರೆ, ಪರವು, ಕೆಂಡೋತ್ಸವ ಮುಂತಾದ ಗ್ರಾಮದ ಆಚರಣೆಗಳು ಅಲ್ಲಿ ಬಂದಿರುವ ಭಕ್ತರನ್ನು ಗಮನಸೆಳೆದವು..
- Top 1 Digital Marketingಹಾಸನ, ಹಾಸನ, ಕರ್ನಾಟಕ👌👌💐💐15 hrs ago
More news from ಕರ್ನಾಟಕ and nearby areas
- ನಾಡಪ್ರಭು ಕೆಂಪೇಗೌಡರ ಸಂಪೂರ್ಣ ಜೀವನ ಚರಿತ್ರೆ #news #onlinetv24x7 #ನಾಡಪ್ರಭುಕೆಂಪೇಗೌಡರು #ಬೆಂಗಳೂರು1
- ಜಾವಗಲ್ ಹೋಬಳಿಯ ವೃಂದಾವನ ಹಳ್ಳಿಯ ಗ್ರಾಮದೇವತೆ ಊರು ಹಬ್ಬದಲ್ಲಿ ಹಲವು ಗ್ರಾಮದ ದೇವತೆಗಳು ಕರೆಯಿಸಿ ಗ್ರಾಮದಲ್ಲಿ ಅದ್ದೂರಿಯಾಗಿ ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರೆ, ಪರವು, ಕೆಂಡೋತ್ಸವ ಮುಂತಾದ ಗ್ರಾಮದ ಆಚರಣೆಗಳು ಅಲ್ಲಿ ಬಂದಿರುವ ಭಕ್ತರನ್ನು ಗಮನಸೆಳೆದವು..2
- ಗದಗ ಜಿಲ್ಲೆಯ ರೋಣ ತಾಲೂಕಿನ ಕುರಹಟ್ಟಿ ಗ್ರಾಮದ ರೈತ ಚಂದ್ರಶೇಖರಗೌಡ ಪಾಟೀಲ್ ಇವರು ತಮ್ಮ ಎರಡುವರೆ ಎಕರೆ ಜಮೀನಿನಲ್ಲಿ ಏಲಕ್ಕಿ ಬಾಳೆ ಬೆಳೆದಿದ್ದರು, ಸಾವಯವ ಪದ್ಧತಿಯಲ್ಲಿ ಬಾಳೆ ತೋಟವನ್ನು ಬೆಳೆಸಿದ್ದರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹನಿ ನೀರಾವರಿ ಮಾಡಿ ಇನ್ನೇನು ಬೆಳೆ ಕೈಗೆ ಬರುವ ಸಮಯದಲ್ಲಿ ಬಾಳೆ ತೋಟಕ್ಕೆ ಬೆಂಕಿ ತಗುಲಿದ ಪರಿಣಾಮ ಬಾಳೇ ಗಿಡಗಳು ಮತ್ತು ಬಾಳೆ ಗೊಣೆಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ ಬೆಂಕಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ , ಗುರುವಾರ ನಸುಕಿನ ಜಾವ ಬೆಂಕಿ ತಗುಲಿ ಸಂಪೂರ್ಣ ಬಾಳೆ ಗಿಡಗಳು ಸುಟ್ಟು ಕರಕಲಾಗಿವೆ ನೀರು ಹಾಯಿಸಲೆಂದು ಬೆಳಿಗ್ಗೆ 9 ರ ಸುಮಾರಿಗೆ ರೈತ ಚಂದ್ರಶೇಖರಗೌಡ ಪಾಟೀಲ ಜಮೀನಿಗೆ ತೆರಳಿದಾಗ ವಿಷಯ ತಿಳಿದಿದ್ದು ರೈತ ನೆಲಕ್ಕೆ ಕುಸಿದಿದ್ದಾನೆ, ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ ಹಾಗೂ ಕಂದಾಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ತಾಲೂಕಿನಲ್ಲಿ ರೈತರಿಗೆ ಒಂದಿಲ್ಲ ಒಂದು ಸಂಕಷ್ಟ ಎದುರಾಗುತ್ತಲೇ ಇರುತ್ತವೆ , ಬೆಳೆ ಇದ್ದಲ್ಲಿ ಬೆಲೆ ಇರುವುದಿಲ್ಲ ಬೆಲೆ ಇದ್ದಾಗ ಬೆಳೆ ಇರುವುದಿಲ್ಲ ಅತಿವೃಷ್ಟಿ ಅನಾವೃಷ್ಟಿಯಿಂದ ತಾಲೂಕಿನ ರೈತರಿಗೆ ಒಂದು ವರ್ಷವೂ ಸಹ ಉತ್ತಮ ಬೆಲೆ ಸಿಗದೇ ರೈತರು ಕಂಗಾಲಾಗುತ್ತಾ ಬಂದಿದ್ದಾರೆ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರೈತರು ಏನಾದರೂ ಹೊಸದನ್ನು ಮಾಡಲು ಮುಂದಾದರೆ ಈ ರೀತಿಯ ಅನಾಹುತಗಳು ಸಂಭವಿಸುತ್ತದೆ ಹೀಗಾಗಿ ರೈತರಿಗೆ ಯಾವುದೇ ರೀತಿಯಲ್ಲಿ ಅಭಿವೃದ್ಧಿ ಹೊಂದಲು ಅವಕಾಶ ದೊರೆಯದಂತಾಗಿದೆ, ಕಾರಣ ಸರ್ಕಾರ ಇಂತಹ ಸಂಕಷ್ಟದಲ್ಲಿ ಸಿಲುಕಿರುವಂತಹ ರೈತರಿಗೆ ಪರಿಹಾರವನ್ನು ನೀಡಿ ಸ್ವಲ್ಪಮಟ್ಟಿಗಾದರೂ ಸಾಲದ ಹೊರೆಯನ್ನು ಕಡಿಮೆ ಮಾಡುವಲ್ಲಿ ಮುಂದಾಗಬೇಕಿದೆ,1
- ಕೊಪ್ಪಳ: ರಾಜ್ಯದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ಹಾಗೂ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಅಂದಾಜು 2.80 ಲಕ್ಷ ಹುದ್ದೆಗಳ ಭರ್ತಿಗೆ ಆಗ್ರಹಿಸಿ Karnataka Rashtra Samithi Party (KRS) ಪಕ್ಷದ ಕೊಪ್ಪಳ ಜಿಲ್ಲಾ ಘಟಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ರಾಜ್ಯದ ಲಕ್ಷಾಂತರ ನಿರುದ್ಯೋಗಿ ಯುವಕರು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯ ಅಭ್ಯರ್ಥಿಗಳು ಎದುರಿಸುತ್ತಿರುವ ಸಂಕಷ್ಟವನ್ನು ಮನಗಂಡು ಈ ಮನವಿಯನ್ನು ಸಲ್ಲಿಸಲಾಗಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ. ಇತ್ತೀಚೆಗೆ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ KRS ಪಕ್ಷ ಘೋಷಿಸಿದೆ. ಈ ವೇಳೆ ಸರ್ಕಾರವು ವಿವಿಧ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಆಗ್ರಹಿಸಲಾಯಿತು. ಜೊತೆಗೆ ಪ್ರತಿ ವರ್ಷ ಸರ್ಕಾರಿ ನೇಮಕಾತಿಗೆ ಸ್ಪಷ್ಟವಾದ ವಾರ್ಷಿಕ ನೇಮಕಾತಿ ಕ್ಯಾಲೆಂಡರ್ ಪ್ರಕಟಿಸಿ, ಯಾವ ಇಲಾಖೆಗಳಲ್ಲಿ ಯಾವ ಸಮಯದಲ್ಲಿ ಪರೀಕ್ಷೆಗಳು ನಡೆಯುತ್ತವೆ ಎಂಬುದನ್ನು ವಿದ್ಯಾರ್ಥಿಗಳಿಗೆ ಮುಂಚಿತವಾಗಿ ತಿಳಿಸಬೇಕು ಎಂದು ಮನವಿ ಮಾಡಲಾಗಿದೆ. ಇದಲ್ಲದೆ ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಜಿ ಸಲ್ಲಿಕೆ, ಲಿಖಿತ ಪರೀಕ್ಷೆ, ಸಂದರ್ಶನ ಹಾಗೂ ದಾಖಲೆ ಪರಿಶೀಲನೆ ಸೇರಿದಂತೆ ಎಲ್ಲಾ ಹಂತಗಳನ್ನು ನಿಗದಿತ ವೇಳಾಪಟ್ಟಿಯೊಳಗೆ ಪೂರ್ಣಗೊಳಿಸಿ, ಗರಿಷ್ಠ ಆರು ತಿಂಗಳೊಳಗೆ ನೇಮಕಾತಿ ಪತ್ರಗಳನ್ನು ನೀಡಬೇಕು ಎಂದು ಒತ್ತಾಯಿಸಲಾಯಿತು. ನೇಮಕಾತಿ ಪ್ರಕ್ರಿಯೆ ಸಂಪೂರ್ಣವಾಗಿ ಪಾರದರ್ಶಕವಾಗಿ ಮತ್ತು ಕಾನೂನುಬದ್ಧವಾಗಿ ನಡೆಯಬೇಕು. ನೇಮಕಾತಿ ಹಗರಣಗಳಿಂದ ಹತಾಶರಾಗಿರುವ ಅಭ್ಯರ್ಥಿಗಳಿಗೆ ಸರ್ಕಾರ ವಿಶ್ವಾಸ ತುಂಬುವ ಕ್ರಮ ಕೈಗೊಳ್ಳಬೇಕು ಎಂದು KRS ಪಕ್ಷದ ಮುಖಂಡರು ಹೇಳಿದರು. ಇದರ ಜೊತೆಗೆ ಪ್ರಸ್ತುತ 700 ರಿಂದ 800 ರೂಪಾಯಿವರೆಗೆ ಇರುವ ಅರ್ಜಿ ಶುಲ್ಕವನ್ನು ಕೇವಲ 100 ರೂಪಾಯಿಗೆ ಇಳಿಸಬೇಕು, ಇದರಿಂದ ಉದ್ಯೋಗಾಕಾಂಕ್ಷಿಗಳು ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅನುಕೂಲವಾಗುತ್ತದೆ ಎಂದು ಮನವಿ ಮಾಡಲಾಗಿದೆ. ಅದೇ ವೇಳೆ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರ ಮೇಲೆ ದಾಖಲಾಗಿರುವ ಪೊಲೀಸ್ ಪ್ರಕರಣಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಕೂಡ ಸರ್ಕಾರಕ್ಕೆ ಆಗ್ರಹಿಸಲಾಗಿದೆ. ಈ ಕುರಿತು ಕೊಪ್ಪಳ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ನಿರುದ್ಯೋಗಿ ಯುವಕರ ಸಮಸ್ಯೆಗೆ ತ್ವರಿತ ಪರಿಹಾರ ಒದಗಿಸಬೇಕು ಎಂದು KRS ಪಕ್ಷದ ಕೊಪ್ಪಳ ಜಿಲ್ಲಾ ಘಟಕ ಒತ್ತಾಯಿಸಿದೆ.1
- Post by Mayur TV Hangal YouTube c1
- ಗುಳೇದಗುಡ್ಡ: ಸಮೀಪದ ಕೆಲವಡಿ ಗ್ರಾಮದ ಶ್ರೀಲಕ್ಷ್ಮೀ ರಂಗನಾಥ ದೇವರ ರಥೋತ್ಸವ ಗುರುವಾರ ಸಂಜೆ ಸಾವಿರಾರು ಭಕ್ತರ ಹರ್ಷೋದ್ಘಾರದ ನಡುವೆ ವಿಜೃಂಭಣೆಯಿಂದ ನಡೆಯಿತು. ವಿವಿಧ ಊರುಗಳಿಂದ ಆಗಮಿಸಿದ ಭಕ್ತರು ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿ ಮೆರೆದರು.1
- ಮಹಿಳೆಯರ ಸಬಲೀಕರಣದ ಬಗ್ಗೆ ಸರ್ಕಾರ ಹೆಚ್ಚು ಕಾಳಜಿ ವಹಿಸಬೇಕು. ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳು ನಿಜವಾಗಿ ಮಹಿಳೆಯರಿಗೆ ತಲುಪುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮಹಿಳೆಯರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪರಿಣಾಮಕಾರಿ ಯೋಜನೆಗಳನ್ನು ಜಾರಿಗೆ ತರಬೇಕೆಂದು ತೇರದಾಳ ಶಾಸಕ ಸಿದ್ದು ಸವದಿ ಸದನದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.1
- ಗುಳೇದಗುಡ್ಡ: ನಮ್ಮ ಮುಂದಿನ ಪೀಳಿಗೆಗೆ ಮತಾಂತರ, ಭಯೋತ್ಪಾದನೆ, ಆಂತರಿಕ ಕಚ್ಛಾಟಗಳಿಂದ ಮುಕ್ತಗೊಳಿಸಿ ಸಶಕ್ತ ಸದೃಢ ಭಾರತವನ್ನು ಕಟ್ಟಲು ಹಿಂದೂ ಸಮ್ಮೇಳನದ ಉದ್ದೇಶವಾಗಿದ್ದು, ಈ ಹಿನ್ನಲೆಯಲ್ಲಿ ಪಟ್ಟಣದ ಹಿಂದೂ ಸಮ್ಮೇಳನ ಸಂಚಾಲನ ಸಮಿತಿ ವತಿಯಿಂದ ಮಾ.15ರಂದು ಬೃಹತ್ ಶೋಭಾಯಾತ್ರೆ ಹಾಗೂ ಹಿಂದೂ ಸಮ್ಮೇಳನ ಪಟ್ಟಣದ ಭಂಡಾರಿ ಕಾಲೇಜಿನ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಸಮ್ಮೇಳನದ ಸಂಚಲನಾ ಸಮಿತಿ ಅಧ್ಯಕ್ಷ ಅಶೋಕ ಹೆಗಡಿ ಹೇಳಿದರು. ಅವರು ಗುರುವಾರ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದೂ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ದೇಶಾದ್ಯಂತ ಹಿಂದೂ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತಿದ್ದು, ಪಟ್ಟಣದ ಎಲ್ಲ ಸಮಾಜಭಾಂದವರು ಹಿಂದೂ ಸಮ್ಮೇಳನದಲ್ಲಿ ಭಾಗವಹಿಸಿ, ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಹಿಂದೂ ಮುಖಂಡ ವಿಠ್ಠಲ ಪತ್ತಾರ ಮಾತನಾಡಿ, ಹಿಂದೂ ಸಮ್ಮೇಳನದ ಅಂಗವಾಗಿ ಮಾ. 15ರಂದು ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಬಾದಾಮಿ ನಾಕಾ ಹತ್ತಿರದ ಶ್ರೀ ಅಕ್ಕಲಕೋಟಿ ಚಿಕ್ಕರೇವಣಸಿದ್ಧೇಶ್ವರ ಮಠದಿಂದ ಬೃಹತ್ ಶೋಭಾಯಾತ್ರೆ ಪ್ರಾರಂಭಗೊಳ್ಳಲಿದೆ. ಬೃಹತ್ ಶೋಭಾಯಾತ್ರೆಯಲ್ಲಿ ಶೋಭಾಯಾತ್ರೆಯಲ್ಲಿ ಕುಂಭಹೊತ್ತ ಮಹಿಳೆಯರು, ಗೊಂಬೆಗಳು, ಕರಡಿಮಜಲು, ಡೊಳ್ಳು ಕುಣಿತ, ಹಲಗಿ ಮಜಲು ಸೇರಿದಂತೆ ವಿವಿಧ ವಾಧ್ಯಮೇಳಗಳು ಭಾಗವಹಿಸಲಿವೆ. ಸಂಜೆ 6 ಗಂಟೆಗೆ ಭಂಡಾರಿ ಕಾಲೇಜನ ಆವರಣದಲ್ಲಿ ನಡೆಯಲಿರುವ ಹಿಂದೂ ಸಮ್ಮೇಳನದಲ್ಲಿ ಪಟ್ಟಣದ ವಿವಿಧ ಮಠಾಧೀಶರು ಸಾನಿಧ್ಯ ವಹಿಸುವರು. ಆರ್‌ಎಸ್‌ಎಸ್‌ನ ಬಳ್ಳಾರಿ ಪ್ರಾಂತ ಕಾರ್ಯಕಾರಣಿ ಸದಸ್ಯ ಗೋಪಿ ಜಿ. ಅವರು ಮುಖ್ಯ ವಕ್ತಾರರಾಗಿ ಪಾಲ್ಗೊಳ್ಳಲಿದ್ದಾರೆ. ಪಟ್ಟಣದ ಎಲ್ಲಾ ಸಮಾಜ, ಸಂಘಸಂಸ್ಥೆಗಳಿಗೆ ಭೇಟಿ ನೀಡಿ ಸಮ್ಮೇಳನಕ್ಕೆ ಆಹ್ವಾನಿಸಲಾಗಿದ್ದು, ಸಮಾರು ಹತ್ತುಸಾವಿರ ಜನರು ಹಿಂದೂ ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಪತ್ತಕುಮಾರ್ ರಾಠಿ, ಅಮಾತೆಪ್ಪ ಕೊಪ್ಪಳ, ಪಿ.ಎನ್. ಪವಾರ, ಸಂಜು ಕಾರಕೂನ, ಪ್ರಭು ತಟ್ಟಿಮಠ, ಭುವನೇಶ ಪೂಜಾರ, ವಿಠ್ಠಲ ಶಿರೂರು, ಶಿವಾನಂದ ಬಾದವಾಡಗಿ, ಆದಪ್ಪ ಕಲಬುರ್ಗಿ, ಮಹೇಶ ಸೂಳೇಭಾವಿ, ಈರಣ್ಣ ಬಂಡಿ, ಶಿವಾನಂದ ಬಡಿಗೇರ ಮತ್ತಿತರರು.1