logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಶಿವಮೊಗ್ಗದಲ್ಲಿ ನಾಳೆಯಿಂದ ಹೊಟೆಲ್ ಗಳು ಬಂದ್..? ಶಿವಮೊಗ್ಗ: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮ ವಾಣಿಜ್ಯ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರ ಬಿಸಿ ಈಗ ಶಿವಮೊಗ್ಗದ ಹೋಟೆಲ್ ಉದ್ಯಮಕ್ಕು ತಟ್ಟಿದೆ. ಅನಿಲ ಕೊರತೆಯಿಂದಾಗಿ ಶಿವಮೊಗ್ಗದ ಬಹುತೇಕ ಹೊಟೇಲ್‌ಗಳು ಗುರುವಾರದಿಂದ ಬಂದ್‌ ಆಗಲಿವೆ. ಈ ಹಿನ್ನೆಲೆ ಮಥುರಾ ಪ್ಯಾರಡೈಸ್‌ನಲ್ಲಿ ಜಿಲ್ಲಾ ಹೋಟೆಲ್ ಮಾಲೀಕರ ಸಂಘವು ಜಿಲ್ಲಾಧ್ಯಕ್ಷ ಶಂಕರನಾರಾಯಣ ಹೊಳ್ಳ ಅವರ ನೇತೃತ್ವ ದಲ್ಲಿ ಈ ಸಭೆ ನಡೆಸಲಾಯಿತು. ವಾಣಿಜ್ಯ ಅನಿಲದ ತೀವ್ರ ಕೊರತೆ ಎದುರಾಗಿರುವುದರಿಂದ ನಾಳೆಯಿಂದ ಹೋಟೆಲ್‌ಗಳನ್ನು ಯಾವ ರೀತಿ ನಡೆಸಬೇಕು ಎಂಬ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು. ಅನಿಲ ಲಭ್ಯವಿಲ್ಲದ ಕಾರಣ ಬಹುತೇಕ ಹೋಟೆಲ್‌ಗಳನ್ನು ಬಂದ್ ಮಾಡಲು ಸಂಘದ ಪ್ರಮುಖರು ನಿರ್ಧರಿಸಿದ್ದಾರೆ. ಸಭೆ ಬಳಿಕ ಮಾಧ್ಯಮಗಳ ಜೊತೆಗೆಮಾತ ನಾಡಿದ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಶಂಕರನಾರಾಯಣ ಹೊಳ್ಳ, ಖಾಸಗಿ ಕಂಪನಿಗಳು ಗ್ಯಾಸ್‌ ಪೂರೈಕೆಯನ್ನು ಸ್ಥಗಿತಗೊಳಿಸಿವೆ. ಹಾಗೂ ಏಜೆನ್ಸಿ ಗಳಲ್ಲಿಯೂ ಸಿಲಿಂಡರ್‌ಗಳ ಲಭ್ಯತೆ ತೀರಾ ಕಡಿಮೆಯಾಗಿದೆ. ಶೇ. 98 ರಷ್ಟು ಹೋಟೆಲ್‌ಗಳು ಗ್ಯಾಸ್‌ ಮೇಲೆ ಅವಲಂಬಿತವಾಗಿವೆ. ಅಡುಗೆ ಅನಿಲವಿಲ್ಲದೆ ಹೋಟೆಲ್ ನಡೆಸುವುದು ಅಸಾಧ್ಯ.ಈ ಸಮಸ್ಯೆಯಿಂದಾಗಿ ಹೋಟೆಲ್‌ ಕಾರ್ಮಿಕರವೇತನ ಪಾವತಿಗೂ ಸಂಚಕಾರ ಬಂದಿದೆ. ಉದ್ಯಮ ಮುಂದುವರಿಸುವುದೆ. ಸವಾಲಾ ಗಿದೆ ಎಂದರು. ರಾಜ್ಯ ಹೋಟೆಲ್‌ ಮಾಲೀಕರ ಸಂಘದ ವಲಯ ಕಾರ್ಯದರ್ಶಿ ಉದಯ್ ಕಂಡಂಬ ಮಾತನಾಡಿ, ಇಂಧನ ಪೂರೈಕೆ ಸ್ಥಗಿತ ಗೊಂಡರೆ ಲಕ್ಷಾಂತರ ಕಾರ್ಮಿಕರ ಬದುಕು ದುಸ್ತರವಾಗಲಿದೆ ಮತ್ತು ಹೋಟೆಲ್‌ಗಳನ್ನು ನಂಬಿರುವ ವಿದ್ಯಾರ್ಥಿಗಳು ಹಾಗೂ ರೋಗಿ ಗಳಿಗೆ ಊಟದ ಸಮಸ್ಯೆ ಎದುರಾಗಲಿದೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಕನಿಷ್ಠ ಶೇ.50 ರಷ್ಟಾದರೂ ಗ್ಯಾಸ್‌ ಪೂರೈಕೆಗೆ ವ್ಯವಸ್ಥೆ ಮಾಡಿ ಉದ್ಯಮ ಹಾಗೂ ಗ್ರಾಹಕರ ಹಿತ ಕಾಯಬೇಕು ಎಂದು ಒತ್ತಾಯಿಸಿದರು. ಗ್ಯಾಸ್‌ ಕೊರತೆಯಿಂದಾಗಿ ಗುರುವಾರದಿಂದ ಶಿವಮೊಗ್ಗದ ಶೇ.90 ರಷ್ಟು ಹೋಟೆಲ್‌ಗಳು ಕಾರ್ಯಾಚರಣೆ ಸ್ಥಗಿತಗೊಳಿಸುವ ಸಾಧ್ಯತೆ ಯಿದೆ. ಪರ್ಯಾಯವಾಗಿ ಕಟ್ಟಿಗೆ ಒಲೆ ಅಥವಾ ವಿದ್ಯುತ್‌ ಒಲೆ ಬಳಸಲು ಸಾಧ್ಯ ವಿರುವ ಕೆಲವೇ ಕೆಲವು ಹೋಟೆಲ್‌ಗಳು ಮಾತ್ರ ಸೀಮಿತ ತಿಂಡಿ ತಿನಿಸುಗಳೊಂದಿಗೆ ಕಾರ್ಯನಿರ್ವಹಿಸಲಿವೆ. ಆಸ್ಪತ್ರೆಗೆ ಬರುವವರು ಹಾಗೂ ಹೊರಗಿ ನಿಂದ ಬರುವ ಸಾರ್ವಜನಿಕರಿಗೆ ಇದರಿಂದ ತೊಂದರೆಯಾಗಲಿದೆ ಎಂದು ತಿಳಿಸಿದರು.

5 hrs ago
user_ಆರ್.ವಿ.ಕೃಷ್ಣ
ಆರ್.ವಿ.ಕೃಷ್ಣ
Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
5 hrs ago
ea10c9a0-1eda-467b-a4e6-e7a61ca58adf

ಶಿವಮೊಗ್ಗದಲ್ಲಿ ನಾಳೆಯಿಂದ ಹೊಟೆಲ್ ಗಳು ಬಂದ್..? ಶಿವಮೊಗ್ಗ: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮ ವಾಣಿಜ್ಯ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರ ಬಿಸಿ ಈಗ ಶಿವಮೊಗ್ಗದ ಹೋಟೆಲ್ ಉದ್ಯಮಕ್ಕು ತಟ್ಟಿದೆ. ಅನಿಲ ಕೊರತೆಯಿಂದಾಗಿ ಶಿವಮೊಗ್ಗದ ಬಹುತೇಕ ಹೊಟೇಲ್‌ಗಳು ಗುರುವಾರದಿಂದ ಬಂದ್‌ ಆಗಲಿವೆ. ಈ ಹಿನ್ನೆಲೆ ಮಥುರಾ ಪ್ಯಾರಡೈಸ್‌ನಲ್ಲಿ ಜಿಲ್ಲಾ ಹೋಟೆಲ್ ಮಾಲೀಕರ ಸಂಘವು ಜಿಲ್ಲಾಧ್ಯಕ್ಷ ಶಂಕರನಾರಾಯಣ ಹೊಳ್ಳ ಅವರ ನೇತೃತ್ವ ದಲ್ಲಿ ಈ ಸಭೆ ನಡೆಸಲಾಯಿತು. ವಾಣಿಜ್ಯ ಅನಿಲದ ತೀವ್ರ ಕೊರತೆ ಎದುರಾಗಿರುವುದರಿಂದ ನಾಳೆಯಿಂದ ಹೋಟೆಲ್‌ಗಳನ್ನು ಯಾವ ರೀತಿ ನಡೆಸಬೇಕು ಎಂಬ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು. ಅನಿಲ ಲಭ್ಯವಿಲ್ಲದ ಕಾರಣ ಬಹುತೇಕ ಹೋಟೆಲ್‌ಗಳನ್ನು ಬಂದ್ ಮಾಡಲು ಸಂಘದ ಪ್ರಮುಖರು ನಿರ್ಧರಿಸಿದ್ದಾರೆ. ಸಭೆ ಬಳಿಕ ಮಾಧ್ಯಮಗಳ ಜೊತೆಗೆಮಾತ ನಾಡಿದ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಶಂಕರನಾರಾಯಣ ಹೊಳ್ಳ, ಖಾಸಗಿ ಕಂಪನಿಗಳು ಗ್ಯಾಸ್‌ ಪೂರೈಕೆಯನ್ನು ಸ್ಥಗಿತಗೊಳಿಸಿವೆ. ಹಾಗೂ ಏಜೆನ್ಸಿ ಗಳಲ್ಲಿಯೂ ಸಿಲಿಂಡರ್‌ಗಳ ಲಭ್ಯತೆ ತೀರಾ ಕಡಿಮೆಯಾಗಿದೆ. ಶೇ. 98 ರಷ್ಟು ಹೋಟೆಲ್‌ಗಳು ಗ್ಯಾಸ್‌ ಮೇಲೆ ಅವಲಂಬಿತವಾಗಿವೆ. ಅಡುಗೆ ಅನಿಲವಿಲ್ಲದೆ ಹೋಟೆಲ್ ನಡೆಸುವುದು ಅಸಾಧ್ಯ.ಈ ಸಮಸ್ಯೆಯಿಂದಾಗಿ ಹೋಟೆಲ್‌ ಕಾರ್ಮಿಕರವೇತನ ಪಾವತಿಗೂ ಸಂಚಕಾರ ಬಂದಿದೆ. ಉದ್ಯಮ ಮುಂದುವರಿಸುವುದೆ. ಸವಾಲಾ ಗಿದೆ ಎಂದರು. ರಾಜ್ಯ ಹೋಟೆಲ್‌ ಮಾಲೀಕರ ಸಂಘದ ವಲಯ ಕಾರ್ಯದರ್ಶಿ ಉದಯ್ ಕಂಡಂಬ ಮಾತನಾಡಿ, ಇಂಧನ ಪೂರೈಕೆ ಸ್ಥಗಿತ ಗೊಂಡರೆ ಲಕ್ಷಾಂತರ ಕಾರ್ಮಿಕರ ಬದುಕು ದುಸ್ತರವಾಗಲಿದೆ ಮತ್ತು ಹೋಟೆಲ್‌ಗಳನ್ನು ನಂಬಿರುವ ವಿದ್ಯಾರ್ಥಿಗಳು ಹಾಗೂ ರೋಗಿ ಗಳಿಗೆ ಊಟದ ಸಮಸ್ಯೆ ಎದುರಾಗಲಿದೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಕನಿಷ್ಠ ಶೇ.50 ರಷ್ಟಾದರೂ ಗ್ಯಾಸ್‌ ಪೂರೈಕೆಗೆ ವ್ಯವಸ್ಥೆ ಮಾಡಿ ಉದ್ಯಮ ಹಾಗೂ ಗ್ರಾಹಕರ ಹಿತ ಕಾಯಬೇಕು ಎಂದು ಒತ್ತಾಯಿಸಿದರು. ಗ್ಯಾಸ್‌ ಕೊರತೆಯಿಂದಾಗಿ ಗುರುವಾರದಿಂದ ಶಿವಮೊಗ್ಗದ ಶೇ.90 ರಷ್ಟು ಹೋಟೆಲ್‌ಗಳು ಕಾರ್ಯಾಚರಣೆ ಸ್ಥಗಿತಗೊಳಿಸುವ ಸಾಧ್ಯತೆ ಯಿದೆ. ಪರ್ಯಾಯವಾಗಿ ಕಟ್ಟಿಗೆ ಒಲೆ ಅಥವಾ ವಿದ್ಯುತ್‌ ಒಲೆ ಬಳಸಲು ಸಾಧ್ಯ ವಿರುವ ಕೆಲವೇ ಕೆಲವು ಹೋಟೆಲ್‌ಗಳು ಮಾತ್ರ ಸೀಮಿತ ತಿಂಡಿ ತಿನಿಸುಗಳೊಂದಿಗೆ ಕಾರ್ಯನಿರ್ವಹಿಸಲಿವೆ. ಆಸ್ಪತ್ರೆಗೆ ಬರುವವರು ಹಾಗೂ ಹೊರಗಿ ನಿಂದ ಬರುವ ಸಾರ್ವಜನಿಕರಿಗೆ ಇದರಿಂದ ತೊಂದರೆಯಾಗಲಿದೆ ಎಂದು ತಿಳಿಸಿದರು.

More news from ಕರ್ನಾಟಕ and nearby areas
  • ಗದಗ ಮುಂಡರಗಿಯಲ್ಲಿ ಹಗಲು ಹೊತ್ತಿನಲ್ಲೇ ಮನೆ ಕಳ್ಳತನ ಬ್ಯಾಂಕ್ ಮ್ಯಾನೇಜರ್ ರಾಘವೇಂದ್ರಕುಮಾರ ಮನೆ ಟಾರ್ಗೆಟ್ ಮಾಡಿದ ಕಳ್ಳರು ಜನನೀಬೀಡ ಪ್ರದೇಶದ ಮನೆಯಲ್ಲಿ ಘಟನೆ ಮಧ್ಯಾಹ್ನ 3.20 ರಿಂದ 4.40ರೊಳಗೆ ಕಳ್ಳತನ ಮನೆಯ ಬಾಗಿಲಿನ ಕೀಲಿಮುರಿದು ಒಳನುಗ್ಗಿದ ದುಷ್ಕರ್ಮಿಗಳು ಹಣ, ಬಂಗಾರ ಹಾಗೂ ಬೆಳ್ಳಿ ವಸ್ತುಗಳ ಕಳ್ಳತನ ಮನೆ ಖಾಲಿ ಇದ್ದ ವೇಳೆ ಪಕ್ಕಾ ಪ್ಲ್ಯಾನ್‌ನೊಂದಿಗೆ ಕಳ್ಳರ ಕೃತ್ಯ ವಿದ್ಯಾನಗರ ಕಳ್ಳತನ ಪ್ರಕರಣದ ನಂತರ ಮತ್ತೊಂದು ಘಟನೆ ಸ್ಥಳಕ್ಕೆ ಮುಂಡರಗಿ ಪೊಲೀಸರ ಭೇಟಿ, ಪರಿಶೀಲನೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರಿಂದ ತನಿಖೆ ಆರಂಭ ಕಳ್ಳರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಕೆ
    1
    ಗದಗ
ಮುಂಡರಗಿಯಲ್ಲಿ ಹಗಲು ಹೊತ್ತಿನಲ್ಲೇ ಮನೆ ಕಳ್ಳತನ
ಬ್ಯಾಂಕ್ ಮ್ಯಾನೇಜರ್ ರಾಘವೇಂದ್ರಕುಮಾರ ಮನೆ ಟಾರ್ಗೆಟ್ ಮಾಡಿದ ಕಳ್ಳರು
ಜನನೀಬೀಡ ಪ್ರದೇಶದ ಮನೆಯಲ್ಲಿ ಘಟನೆ
ಮಧ್ಯಾಹ್ನ 3.20 ರಿಂದ 4.40ರೊಳಗೆ ಕಳ್ಳತನ
ಮನೆಯ ಬಾಗಿಲಿನ ಕೀಲಿಮುರಿದು ಒಳನುಗ್ಗಿದ ದುಷ್ಕರ್ಮಿಗಳು
ಹಣ, ಬಂಗಾರ ಹಾಗೂ ಬೆಳ್ಳಿ ವಸ್ತುಗಳ ಕಳ್ಳತನ
ಮನೆ ಖಾಲಿ ಇದ್ದ ವೇಳೆ ಪಕ್ಕಾ ಪ್ಲ್ಯಾನ್‌ನೊಂದಿಗೆ ಕಳ್ಳರ ಕೃತ್ಯ
ವಿದ್ಯಾನಗರ ಕಳ್ಳತನ ಪ್ರಕರಣದ ನಂತರ ಮತ್ತೊಂದು ಘಟನೆ
ಸ್ಥಳಕ್ಕೆ ಮುಂಡರಗಿ ಪೊಲೀಸರ ಭೇಟಿ, ಪರಿಶೀಲನೆ
ಶ್ವಾನದಳ ಹಾಗೂ ಬೆರಳಚ್ಚು ತಜ್ಞರಿಂದ ತನಿಖೆ ಆರಂಭ
ಕಳ್ಳರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಕೆ
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    1 hr ago
  • ಚಳ್ಳಕೆರೆ: ತಾಲೂಕಿನ ಗೋಪನಹಳ್ಳಿ ಗ್ರಾಮದ ರೈತ ನಾಗರಾಜ್ ಅವರ ಬಣವೆಗೆ ಸೋಮವಾರ ಬೆಂಕಿ ಬಿದ್ದು ಮೇವು ಸಂಪೂರ್ಣವಾಗಿ ಸುಟ್ಟು ಹೋಗಿದ್ದ ಘಟನೆಗೆ ಸಂಬಂಧಿಸಿದಂತೆ ಜನಧ್ವನಿ ನ್ಯೂಸ್ ಪ್ರಕಟಿಸಿದ ವರದಿಗೆ ಉತ್ತಮ ಸ್ಪಂದನೆ ದೊರೆತಿದೆ. ವರದಿ ಬೆಳಕಿಗೆ ಬಂದ ಬೆನ್ನಲ್ಲೇ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಶ್ರೀ ಜಪಾನಂದ ಸ್ವಾಮೀಜಿ ಬುಧವಾರ ಗೋಪನಹಳ್ಳಿ ಗ್ರಾಮದ ರೈತ ನಾಗರಾಜ್ ಅವರಿಗೆ ಒಂದು ಲೋಡ್ ಭತ್ತದ ಮೇವನ್ನು ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ವೇಳೆ ಮಾತನಾಡಿದ ಅವರು, ರೈತರು ಹಾಗೂ ಜಾನುವಾರುಗಳ ಪಾಲನೆ-ಪೋಷಣೆ ಮಾಡುವಲ್ಲಿ ಎದುರಿಸುವ ಕಷ್ಟಗಳನ್ನು ನಾನು ಚೆನ್ನಾಗಿ ಅರಿತಿದ್ದೇನೆ. ಗೋಪನಹಳ್ಳಿ ಗ್ರಾಮದ ರೈತ ನಾಗರಾಜ್ ಅವರ ಬಣವೆಗೆ ಬೆಂಕಿ ಬಿದ್ದು ಉಂಟಾದ ನಷ್ಟದ ಕುರಿತು ಜನಧ್ವನಿ ನ್ಯೂಸ್ ವರದಿ ನೋಡಿ ಮನಸ್ಸಿಗೆ ಬೇಸರವಾಯಿತು. ಆದ್ದರಿಂದ ರೈತನ ಜಾನುವಾರುಗಳಿಗೆ ನೆರವಾಗುವ ಉದ್ದೇಶದಿಂದ ಮೇವು ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮೇವು ನೆರವು ನೀಡಿದ ಶ್ರೀ ಜಪಾನಂದ ಸ್ವಾಮೀಜಿಗಳಿಗೆ ರೈತ ನಾಗರಾಜ್ ಕೃತಜ್ಞತೆ ಸಲ್ಲಿಸಿದರು.
    1
    ಚಳ್ಳಕೆರೆ: ತಾಲೂಕಿನ ಗೋಪನಹಳ್ಳಿ ಗ್ರಾಮದ ರೈತ ನಾಗರಾಜ್ ಅವರ ಬಣವೆಗೆ ಸೋಮವಾರ ಬೆಂಕಿ ಬಿದ್ದು ಮೇವು ಸಂಪೂರ್ಣವಾಗಿ ಸುಟ್ಟು ಹೋಗಿದ್ದ ಘಟನೆಗೆ ಸಂಬಂಧಿಸಿದಂತೆ ಜನಧ್ವನಿ ನ್ಯೂಸ್ ಪ್ರಕಟಿಸಿದ ವರದಿಗೆ ಉತ್ತಮ ಸ್ಪಂದನೆ ದೊರೆತಿದೆ.
ವರದಿ ಬೆಳಕಿಗೆ ಬಂದ ಬೆನ್ನಲ್ಲೇ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಶ್ರೀ ಜಪಾನಂದ ಸ್ವಾಮೀಜಿ ಬುಧವಾರ ಗೋಪನಹಳ್ಳಿ ಗ್ರಾಮದ ರೈತ ನಾಗರಾಜ್ ಅವರಿಗೆ ಒಂದು ಲೋಡ್ ಭತ್ತದ ಮೇವನ್ನು ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಈ ವೇಳೆ ಮಾತನಾಡಿದ ಅವರು, ರೈತರು ಹಾಗೂ ಜಾನುವಾರುಗಳ ಪಾಲನೆ-ಪೋಷಣೆ ಮಾಡುವಲ್ಲಿ ಎದುರಿಸುವ ಕಷ್ಟಗಳನ್ನು ನಾನು ಚೆನ್ನಾಗಿ ಅರಿತಿದ್ದೇನೆ. ಗೋಪನಹಳ್ಳಿ ಗ್ರಾಮದ ರೈತ ನಾಗರಾಜ್ ಅವರ ಬಣವೆಗೆ ಬೆಂಕಿ ಬಿದ್ದು ಉಂಟಾದ ನಷ್ಟದ ಕುರಿತು ಜನಧ್ವನಿ ನ್ಯೂಸ್ ವರದಿ ನೋಡಿ ಮನಸ್ಸಿಗೆ ಬೇಸರವಾಯಿತು. ಆದ್ದರಿಂದ ರೈತನ ಜಾನುವಾರುಗಳಿಗೆ ನೆರವಾಗುವ ಉದ್ದೇಶದಿಂದ ಮೇವು ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೇವು ನೆರವು ನೀಡಿದ ಶ್ರೀ ಜಪಾನಂದ ಸ್ವಾಮೀಜಿಗಳಿಗೆ ರೈತ ನಾಗರಾಜ್ ಕೃತಜ್ಞತೆ ಸಲ್ಲಿಸಿದರು.
    user_ಗೋಪನಹಳ್ಳಿಶಿವಣ್ಣ
    ಗೋಪನಹಳ್ಳಿಶಿವಣ್ಣ
    Local News Reporter ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
    5 hrs ago
  • ಎನ್ ನಾಯಕ್, ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ರೈತ ಸಂಘ ಹಾಗೂ ಆಮ್ ಆದ್ಮಿ ಪಕ್ಷ ದಿನಾಂಕ 11-03-2026 ರಂದು ಬ್ಯಾಡಗಿ ಶಹರದಲ್ಲಿ, ಮಾದಿಗ ಸಮಾಜದ ಒಳ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಂಡು ಒಳ ಮೀಸಲಾತಿ ಹೋರಾಟಕ್ಕೆ ಆಮ್ ಆದ್ಮಿ ಪಕ್ಷದಿಂದ ಸಂಪೂರ್ಣ ಬೆಂಬಲ ನೀಡಲಾಯಿತು, ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಆನಂದ ಸ್ವಾಮಿ, ಚಂದ್ರಶೇಖರ್ ಗದಗ್ಕರ್, ನಾಗರಾಜ್ ಹಿರೇಮಠ, ಸಾಧಿ ಕಲ್ಲಾಪುರ್, ಸಂಕಪ್ಪ ಮುಂದಿನಮನೆ, ಗುಡ್ಡೆಶ್, ದಾದಾಪೀರ್ ಸುಡಂಬಿ ಉಪಸ್ಥಿತರಿದ್ದರು.
    1
    ಎನ್ ನಾಯಕ್, ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ರೈತ ಸಂಘ ಹಾಗೂ ಆಮ್ ಆದ್ಮಿ ಪಕ್ಷ ದಿನಾಂಕ 11-03-2026 ರಂದು ಬ್ಯಾಡಗಿ ಶಹರದಲ್ಲಿ,  ಮಾದಿಗ ಸಮಾಜದ ಒಳ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಂಡು ಒಳ ಮೀಸಲಾತಿ ಹೋರಾಟಕ್ಕೆ ಆಮ್ ಆದ್ಮಿ ಪಕ್ಷದಿಂದ ಸಂಪೂರ್ಣ ಬೆಂಬಲ ನೀಡಲಾಯಿತು, ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಆನಂದ ಸ್ವಾಮಿ, ಚಂದ್ರಶೇಖರ್ ಗದಗ್ಕರ್, ನಾಗರಾಜ್ ಹಿರೇಮಠ, ಸಾಧಿ ಕಲ್ಲಾಪುರ್, ಸಂಕಪ್ಪ ಮುಂದಿನಮನೆ, ಗುಡ್ಡೆಶ್, ದಾದಾಪೀರ್ ಸುಡಂಬಿ ಉಪಸ್ಥಿತರಿದ್ದರು.
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    6 hrs ago
  • ಶಿಗ್ಗಾವಿ: ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಹಾಗೂ ಶೈಕ್ಷಣಿಕ ಸಾಧನೆ ಪ್ರೋತ್ಸಾಹಿಸಲು ಶಿಕ್ಷಣ ಪ್ರೇಮಿ, ಹಂಪಿ ವಿಶ್ವ ವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಡಾ| ಫಕ್ಕೀರಗೌಡ ಪಾಟೀಲ ಅವರು ತಿಳಿಸಿದರು. ಪಟ್ಟಣದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ವಿನೂತನ ಬಹುಮಾನಗಳನ್ನು ಘೋಷಿಸಿ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ 8ನೇ ತರಗತಿಯಿಂದ 10ನೇ ತರಗತಿಯವರೆಗೆ ಸತತವಾಗಿ ವ್ಯಾಸಂಗ ಮಾಡಿ, ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಸರ್ಕಾರಿ ಅಥವಾ ಖಾಸಗಿ ಶಾಲೆಯ ವಿದ್ಯಾರ್ಥಿಗೆ 100 ಗ್ರಾಂ ಚಿನ್ನದ ಪದಕ ನೀಡಿ ಗೌರವಿಸಲಾಗುವುದು. ಕಳೆದ ವರ್ಷ (2024-25) ಸವಣೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಬೆಳ್ಳಿ ಪದಕ ನೀಡಿ ಗೌರವಿಸ ಲಾಗಿತ್ತು. ಈ ಬಾರಿ ಬಹುಮಾನದ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆವ ವಿದ್ಯಾರ್ಥಿಗೆ 15 ಗ್ರಾಂ ಚಿನ್ನದ ಪದಕ, ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆವ ವಿದ್ಯಾರ್ಥಿಗೆ 25 ಗ್ರಾಂ ಬೆಳ್ಳಿ ಪದಕ ನೀಡಿ ಸನ್ಮಾನಿಸಲಾಗುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಯನ್ನು ಭಯವಿಲ್ಲದೆ ಹಬ್ಬದಂತೆ ಎದುರಿಸಬೇಕು. ಪರೀಕ್ಷಾ ಕೇಂದ್ರಕ್ಕೆ ಶಾಂತಚಿತ್ತದಿಂದ ಹೋಗಿ ಪರೀಕ್ಷೆಗಳನ್ನು ಎದುರಿಸಬೇಕು. ನನ್ನ ದುಡಿಮೆಯ ಹಣದಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ನನ್ನ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು. ಶೀಘ್ರದಲ್ಲೇ ತಮ್ಮ ಒಂದು ಟ್ರಸ್ಟ್ ಸ್ಥಾಪಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರೋತ್ಸಾಹಿಸಲಾ ಗುತ್ತದೆ. ಈ ವರ್ಷದ ಬಹುಮಾನ ವಿತರಣಾ ಕಾರ್ಯಕ್ರಮವನ್ನು ತರಳಬಾಳು ಶ್ರೀಗಳು ಹಾಗೂ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡುವ ಹಂಬಲವನ್ನು ಅವರು ವ್ಯಕ್ತಪಡಿಸಿದ್ದಾರೆ.
    4
    ಶಿಗ್ಗಾವಿ: ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಹಾಗೂ ಶೈಕ್ಷಣಿಕ ಸಾಧನೆ ಪ್ರೋತ್ಸಾಹಿಸಲು ಶಿಕ್ಷಣ ಪ್ರೇಮಿ, ಹಂಪಿ ವಿಶ್ವ ವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಡಾ| ಫಕ್ಕೀರಗೌಡ ಪಾಟೀಲ ಅವರು ತಿಳಿಸಿದರು.
ಪಟ್ಟಣದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ವಿನೂತನ ಬಹುಮಾನಗಳನ್ನು ಘೋಷಿಸಿ
ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ 8ನೇ ತರಗತಿಯಿಂದ 10ನೇ ತರಗತಿಯವರೆಗೆ ಸತತವಾಗಿ ವ್ಯಾಸಂಗ ಮಾಡಿ, ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಸರ್ಕಾರಿ ಅಥವಾ ಖಾಸಗಿ ಶಾಲೆಯ ವಿದ್ಯಾರ್ಥಿಗೆ 100 ಗ್ರಾಂ ಚಿನ್ನದ ಪದಕ ನೀಡಿ ಗೌರವಿಸಲಾಗುವುದು.
ಕಳೆದ ವರ್ಷ (2024-25) ಸವಣೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಬೆಳ್ಳಿ ಪದಕ ನೀಡಿ ಗೌರವಿಸ ಲಾಗಿತ್ತು. ಈ ಬಾರಿ ಬಹುಮಾನದ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆವ ವಿದ್ಯಾರ್ಥಿಗೆ 15 ಗ್ರಾಂ ಚಿನ್ನದ ಪದಕ, ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆವ ವಿದ್ಯಾರ್ಥಿಗೆ 25 ಗ್ರಾಂ ಬೆಳ್ಳಿ ಪದಕ ನೀಡಿ ಸನ್ಮಾನಿಸಲಾಗುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಯನ್ನು ಭಯವಿಲ್ಲದೆ ಹಬ್ಬದಂತೆ ಎದುರಿಸಬೇಕು. ಪರೀಕ್ಷಾ ಕೇಂದ್ರಕ್ಕೆ ಶಾಂತಚಿತ್ತದಿಂದ ಹೋಗಿ ಪರೀಕ್ಷೆಗಳನ್ನು ಎದುರಿಸಬೇಕು. ನನ್ನ ದುಡಿಮೆಯ ಹಣದಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ನನ್ನ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ಶೀಘ್ರದಲ್ಲೇ ತಮ್ಮ ಒಂದು ಟ್ರಸ್ಟ್ ಸ್ಥಾಪಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರೋತ್ಸಾಹಿಸಲಾ ಗುತ್ತದೆ. ಈ ವರ್ಷದ ಬಹುಮಾನ ವಿತರಣಾ ಕಾರ್ಯಕ್ರಮವನ್ನು ತರಳಬಾಳು ಶ್ರೀಗಳು ಹಾಗೂ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡುವ ಹಂಬಲವನ್ನು ಅವರು ವ್ಯಕ್ತಪಡಿಸಿದ್ದಾರೆ.
    user_ವಿಶ್ವನಾಥ ಬಂಡಿವಡ್ಡರ
    ವಿಶ್ವನಾಥ ಬಂಡಿವಡ್ಡರ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    10 hrs ago
  • ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು ಇದರ ನೇತೃತ್ವದಲ್ಲಿ ಪ್ರೀತಿ ಹರಡಲಿ ಎಲ್ಲೆಡೆ ಎಂಬ ಘೋಷವಾಕ್ಯದೊಂದಿಗೆ ರಂಝಾನ್ ಹಬ್ಬದ ಪ್ರಯುಕ್ತ ಸೌಹಾರ್ದ ಇಫ್ತಾರ್ ಕೂಟವು ಸಂತ ಅಲೋಶಿಯಸ್ ಕಾಲೇಜಿನ ಆವರಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸಹ ಕುಲಪತಿ ಫಾ. ಮೆಲ್ವಿನ್ ಡಿಕುನ್ಹಾ ಎಸ್.ಜೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ, ಖ್ಯಾತ ಸಾಹಿತಿ, ನಿವೃತ್ತ ಶಿಕ್ಷಕಿ ಬಿ.ಎಂ. ರೋಹಿಣಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಬೆಥನಿ ಮುಖ್ಯಸ್ಥೆ ಸಿಸ್ಟರ್ ರೋಸ್ ಮೇರಿ, ಬಾವುಟಗುಡ್ಡ ಝೀನತ್ ಬಕ್ಷ್ ಜುಮಾ ಮಸ್ಜಿದ್‌ನ ಉಪಾಧ್ಯಕ್ಷ ಕೆ. ಅಶ್ರಫ್ ಮಾತನಾಡಿ ಸೌಹಾರ್ದತೆಯ ಅಗತ್ಯ ಮತ್ತು ಮಹತ್ವವನ್ನು ಸಾರಿದರು. ವೇದಿಕೆಯ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಸ್ವಾಗತಿಸಿ, ಪ್ರೀತಿಯನ್ನು ಹಂಚುವ ವೇದಿಕೆಯ ಉದ್ದೇಶಗಳನ್ನು ವಿವರಿಸಿದರು. ಸಾಮರಸ್ಯ ಮಂಗಳೂರು ಮುಖ್ಯಸ್ಥೆ ಮಂಜುಳಾ ನಾಯಕ್ ವೇದಿಕೆಯಲ್ಲಿದ್ದರು. ರೆಹಮಾನ್ ಖಾನ್ ಕುಂಜತ್ತಬೈಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಮುಂತಾದವರು ಉಪಸ್ಥಿತರಿದ್ದರು. ಇದೇ ವೇಳೆ ಸರ್ವಧರ್ಮೀಯರು ಸೇರಿ ಇಫ್ತಾರ್ ಕೂಟದಲ್ಲಿ ಭಾಗವಹಿಸಿದರು.
    1
    ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು ಇದರ ನೇತೃತ್ವದಲ್ಲಿ ಪ್ರೀತಿ ಹರಡಲಿ ಎಲ್ಲೆಡೆ ಎಂಬ ಘೋಷವಾಕ್ಯದೊಂದಿಗೆ ರಂಝಾನ್ ಹಬ್ಬದ ಪ್ರಯುಕ್ತ ಸೌಹಾರ್ದ ಇಫ್ತಾರ್ ಕೂಟವು ಸಂತ ಅಲೋಶಿಯಸ್ ಕಾಲೇಜಿನ ಆವರಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸಹ ಕುಲಪತಿ ಫಾ. ಮೆಲ್ವಿನ್ ಡಿಕುನ್ಹಾ ಎಸ್.ಜೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ, ಖ್ಯಾತ ಸಾಹಿತಿ, ನಿವೃತ್ತ ಶಿಕ್ಷಕಿ ಬಿ.ಎಂ. ರೋಹಿಣಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಬೆಥನಿ ಮುಖ್ಯಸ್ಥೆ ಸಿಸ್ಟರ್ ರೋಸ್ ಮೇರಿ, ಬಾವುಟಗುಡ್ಡ ಝೀನತ್ ಬಕ್ಷ್ ಜುಮಾ ಮಸ್ಜಿದ್‌ನ ಉಪಾಧ್ಯಕ್ಷ ಕೆ. ಅಶ್ರಫ್ ಮಾತನಾಡಿ ಸೌಹಾರ್ದತೆಯ ಅಗತ್ಯ ಮತ್ತು ಮಹತ್ವವನ್ನು ಸಾರಿದರು.
ವೇದಿಕೆಯ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಸ್ವಾಗತಿಸಿ, ಪ್ರೀತಿಯನ್ನು ಹಂಚುವ ವೇದಿಕೆಯ ಉದ್ದೇಶಗಳನ್ನು ವಿವರಿಸಿದರು. ಸಾಮರಸ್ಯ ಮಂಗಳೂರು ಮುಖ್ಯಸ್ಥೆ ಮಂಜುಳಾ ನಾಯಕ್ ವೇದಿಕೆಯಲ್ಲಿದ್ದರು. ರೆಹಮಾನ್ ಖಾನ್ ಕುಂಜತ್ತಬೈಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಮುಂತಾದವರು ಉಪಸ್ಥಿತರಿದ್ದರು. ಇದೇ ವೇಳೆ ಸರ್ವಧರ್ಮೀಯರು ಸೇರಿ ಇಫ್ತಾರ್ ಕೂಟದಲ್ಲಿ ಭಾಗವಹಿಸಿದರು.
    user_Shamsheer Budoli
    Shamsheer Budoli
    Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
    2 hrs ago
  • Post by Sunil Sunil
    1
    Post by Sunil Sunil
    user_Sunil Sunil
    Sunil Sunil
    ಚನ್ನರಾಯಪಟ್ಟಣ, ಹಾಸನ, ಕರ್ನಾಟಕ•
    15 hrs ago
  • ಮೇಡಮ್ ಬರ್ತಾವ್ರೆ ತುಮಕೂರಿಗೆ
    1
    ಮೇಡಮ್ ಬರ್ತಾವ್ರೆ ತುಮಕೂರಿಗೆ
    user_Onlinetv24x7
    Onlinetv24x7
    ಹಾಸನ, ಹಾಸನ, ಕರ್ನಾಟಕ•
    10 hrs ago
  • ಚಿತ್ರದುರ್ಗ, ಬಿಸಿಲ ಝಳ-ಜನರಿಗೆ ತಂಪು ನೀರಿನ ವ್ಯವಸ್ಥೆ ಚಿತ್ರದುರ್ಗ ಜಿಲ್ಲೆ‌,ಮೊಳಕಾಲ್ಮೂರಲ್ಲಿ ಬಿಸಿಲಿನ ತಾಪಕ್ಕೆ ಜನ ಹೈರಾಣಾಗಿದ್ದು, ಜನರ ತಾಪ ತಣ್ಣಗಾಗಿಸಲು ಹಾನಗಲ್‌ ಗೆಳೆಯರ ಬಳಗದಿಂದ ಶುದ್ಧ ಹಾಗೂ ತಂಪು ನಿರಿನ ಅರವಟ್ಟಿಗೆ ನಿರ್ಮಿಸಿ ವಿನೂತನ ಪ್ರಯತ್ನ ಮಾಡಿದ್ದಾರೆ. ಮೊಳಕಾಲ್ಮೂರು ತಾಲೂಕಿನ ಹಾನಗಲ್ ಕ್ರಾಸ್ ನಲ್ಲಿ ಜನರ ತೃಷೆ ಇಂಗಿಸಲು ಹಾನಗಲ್‌ ಗೆಳೆಯರ ಬಳಗದಿಂದ ಅರಟಿಕೆ ನಿರ್ಮಾಣ ಮಾಡಿದ್ದಾರೆ. ತೆಂಗಿನ ಗರಿಗಳಿಂದ ಚಪ್ಪರ ಹಾಕಿ, ಮಣ್ಣಿನ‌ ಮಡಿಕೆಗಳಲ್ಲಿ ತಂಪಾದ ಶುದ್ಧ ಕುಡಿಯುವ ನಿರನ್ನು ಇಟ್ಟಿದ್ದಾರೆ. ಮೊಳಕಾಲ್ಮೂರು ತಾಲೂಕು ಮೊದಲೇ ಹೆಚ್ವು ಬಿಸಿಲು ದಾಖಲಾಗೋದ್ರಿಂದ ಜನರ ಬಾಯಾರಿಕೆ ನೋಗಿಸಲು ಪ್ರತಿನಿತ್ಯ ಈ ಮಡಕೆಗಳಿಗೆ ಶುದ್ಧ ಕುಡಿಯುವ ನೀರನ್ನು ತುಂಬಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿದ್ದಾರೆ. ಮಹಿಳೆಯರು, ಮಕ್ಕಳು ಹಾಗೂ ವೃದ್ಧರಿಗೆ ಇದರಿಂದ ತುಂಬಾ ಸಹಾಯವಾಗಿದೆ. ಹಾನಗಲ್ ಗೆಳೆಯರ ಬಳಗದ ಈ ಪ್ರಯತ್ನಕ್ಕೆ ಸಾರ್ವಜನಿಕರು ಭೇಷ್ ಎಂದಿದ್ದಾರೆ....
    1
    ಚಿತ್ರದುರ್ಗ,
ಬಿಸಿಲ ಝಳ-ಜನರಿಗೆ ತಂಪು ನೀರಿನ ವ್ಯವಸ್ಥೆ
ಚಿತ್ರದುರ್ಗ ಜಿಲ್ಲೆ‌,ಮೊಳಕಾಲ್ಮೂರಲ್ಲಿ ಬಿಸಿಲಿನ ತಾಪಕ್ಕೆ ಜನ ಹೈರಾಣಾಗಿದ್ದು, ಜನರ ತಾಪ ತಣ್ಣಗಾಗಿಸಲು ಹಾನಗಲ್‌ ಗೆಳೆಯರ ಬಳಗದಿಂದ ಶುದ್ಧ ಹಾಗೂ ತಂಪು ನಿರಿನ ಅರವಟ್ಟಿಗೆ ನಿರ್ಮಿಸಿ ವಿನೂತನ ಪ್ರಯತ್ನ ಮಾಡಿದ್ದಾರೆ.
ಮೊಳಕಾಲ್ಮೂರು ತಾಲೂಕಿನ ಹಾನಗಲ್ ಕ್ರಾಸ್ ನಲ್ಲಿ ಜನರ ತೃಷೆ ಇಂಗಿಸಲು ಹಾನಗಲ್‌ ಗೆಳೆಯರ ಬಳಗದಿಂದ ಅರಟಿಕೆ ನಿರ್ಮಾಣ ಮಾಡಿದ್ದಾರೆ. ತೆಂಗಿನ ಗರಿಗಳಿಂದ ಚಪ್ಪರ ಹಾಕಿ, ಮಣ್ಣಿನ‌ ಮಡಿಕೆಗಳಲ್ಲಿ ತಂಪಾದ ಶುದ್ಧ ಕುಡಿಯುವ ನಿರನ್ನು ಇಟ್ಟಿದ್ದಾರೆ. ಮೊಳಕಾಲ್ಮೂರು ತಾಲೂಕು ಮೊದಲೇ ಹೆಚ್ವು ಬಿಸಿಲು ದಾಖಲಾಗೋದ್ರಿಂದ ಜನರ ಬಾಯಾರಿಕೆ ನೋಗಿಸಲು ಪ್ರತಿನಿತ್ಯ ಈ ಮಡಕೆಗಳಿಗೆ ಶುದ್ಧ ಕುಡಿಯುವ ನೀರನ್ನು ತುಂಬಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿದ್ದಾರೆ. ಮಹಿಳೆಯರು, ಮಕ್ಕಳು ಹಾಗೂ ವೃದ್ಧರಿಗೆ ಇದರಿಂದ ತುಂಬಾ ಸಹಾಯವಾಗಿದೆ. ಹಾನಗಲ್ ಗೆಳೆಯರ ಬಳಗದ ಈ ಪ್ರಯತ್ನಕ್ಕೆ ಸಾರ್ವಜನಿಕರು ಭೇಷ್ ಎಂದಿದ್ದಾರೆ....
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    3 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.