9.5 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಂ. ಆರ್ ಮಂಜುನಾಥ್ ರವರಿಂದ ಭೂಮಿ ಪೂಜೆ. ಹನೂರು:-ಲೋಕೋಪಯೋಗಿ ಇಲಾಖೆ ಹಾಗೂ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ ಇಲಾಖೆಯ ಅನುದಾನದ ಅಡಿ ಅಂದಾಜು 7 .5ಕೋಟಿ ವೆಚ್ಚದಲ್ಲಿ ಕುರಟ್ಟಿ ಹೊಸೂರಿನಿಂದ ದಂಟಳ್ಳಿ ಗ್ರಾಮದವರೆಗೆ ಹಾಗೂ ಅಂಬಿಕಾಪುರ ಗ್ರಾಮದಿಂದ ಪಳನಿಮೇಡು ಗ್ರಾಮದವರೆಗೆ ಡಾಂಬರು ರಸ್ತೆ ನಿರ್ಮಾಣ ಮಾಡುವ ಕಾರ್ಯಕ್ಕೆ ಕ್ಷೇತ್ರದ ಶಾಸಕ ಎಂ.ಆರ್ ಮಂಜುನಾಥ್ ರವರು ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ಮಾಧ್ಯಮದವರ ಜೊತೆ ಮಾತನಾಡಿ ಜನರ ಬಹಳ ದಿನಗಳ ಬೇಡಿಕೆಯಾದ ಕುರಟ್ಟಿ ಹೊಸೂರು ಗ್ರಾಮದಿಂದ ದಂಟಳ್ಳಿ ಗ್ರಾಮದ ವರೆಗೆ 7.5 ಕೋಟಿ ರೂ. ಡಾಂಬರು ರಸ್ತೆ ನಿರ್ಮಾಣ ಮಾಡಲು ಲೋಕೋಪಯೋಗಿ ಇಲಾಖೆ ಮತ್ತು 1.5 ಕೋಟಿ ರೂ ವೆಚ್ಚದಡಿ ಕೆಆರ್ ಐಡಿಎಲ್ ಇಲಾಖೆ ವತಿಯಿಂದ ಅಂಬಿಕಾಪುರ ಗ್ರಾಮದಿಂದ ಪಳನಿಮೇಡು ಗ್ರಾಮದ ತನಕ ಡಾಂಬರು ರಸ್ತೆ ಕಾಮಗಾರಿ ಕೈಗೊಳ್ಳಲು ಇಂದು ಭೂಮಿ ಪೂಜೆ ನೆರೆವೆರಿಸಿದ್ದೇನೆ. ಇದಲ್ಲದೆ ಭದ್ರಣ್ಣನಳ್ಳಿ ಗ್ರಾಮದ ಬಣಜಿಗ ಸಮುದಾಯ ಭವನದ ಮುಂದುವರೆದ ಕಾಮಗಾರಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಸುಮಾರು 50 ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.. ಗುತ್ತಿಗೆದಾರರು ಆದಷ್ಟು ಬೇಗ ಕಾಮಗಾರಿ ಪೂರ್ಣಿಗೊಳಿಸಿ ಕಾಮಗಾರಿ ಗುಣಮಟ್ಟದಿಂದ ಇರಲಿ ಗ್ರಾಮಸ್ಥರು ಕೆಲಸ ನಡೆಯುವ ಸಂದರ್ಭದಲ್ಲಿ ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಿ ಎಂದು ತಿಳಿಸಿದರು. ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಹನೂರು ಕ್ಷೇತ್ರದ ನೀರಾವರಿ ಯೋಜನೆಗೆ ಬಜೆಟ್ ನಲ್ಲಿ 490 ಕೋಟಿ ಅನುದಾನ ನೀಡಿರುವುದಕ್ಕೆ ಮತ್ತೊಮ್ಮೆ ಧನ್ಯವಾದಗಳನ್ನು ತಿಳಿಸುತ್ತೇನೆ ಆದಷ್ಟು ಬೇಗ ಈ ಭಾಗದ ಶೆಟ್ಟಳ್ಳಿ, ಕೌದಳ್ಳಿ,ಕುರಟ್ಟಿ ಹೊಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ನೀರಾವರಿ ವ್ಯವಸ್ಥೆ ಆಗಲಿದೆ. ಜೊತೆಗೆ ಎಲ್ಲಾ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಕೆಲಸವು ಆಗುತ್ತದೆ. ಈ ಭಾಗದ ಜನರು ನೀರಿನ ಸಮಸ್ಯೆಯಿಂದ ಕೆಲಸ ಹರಸಿ ದೂರದ ನಗರಗಳಿಗೆ ಗುಳೆ ಹೋಗಿರುವ ಜನರನ್ನು ಮತ್ತೆ ತಮ್ಮ ಊರಿಗೆ ಬರುವಂತೆ ಮಾಡಿ ಅವರಿಗೆ ರಸ್ತೆ ನೀರು ವಿದ್ಯುತ್ ಮೂಲಭೂತ ಸೌಕರ್ಯಗಳನ್ನು ಒದಗಿಸೋ ಕೆಲಸ ಹಾಗುತ್ತದೆ ಎಂದರು. ಇದೆ ಸಮಯದಲ್ಲಿ ಯಜಮಾನರಾದ ಕೌದಲ್ಲಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಸ್ವಾಮಿ,ಮುಖಂಡರುಗಳಾದ ಸಿದ್ದರಾಜು,ಮಂಜೇಶ್ ಗೌಡ, ಮಹದೇವ, ಜಯರಾಮು, ಚಿನ್ನವೆಂಕಟ್,ವಿಜಯ್ ಕುಮಾರ್,ಕಾಳಪ್ಪ,ಮುನಿಶೆಟ್ಟಿ, ಎಸ್ ಆರ್ ರಂಗಸ್ವಾಮಿ,ವಸಂತ,ಕೃಷ್ಣ,ನಾಗರಾಜು,ಶ್ರೀರಂಗ,ಚಂದ್ರು, ಗೋವಿಂದ, ನಬಿಖಾನ್, ಮಣಿಕಂಟ, ವೆಂಕಟರಮಣ, ಕುಮಾರ್, ಪೆರುಮಾಳ್ ಗೌಡ,ಶ್ರೀರಂಗ, ಲಕ್ಷ್ಮಣ,ಎಸ್. ಆರ್ ಮಹದೇವ್, ಸತ್ತೇಗಾಲ ಮಂಜು,ಮಧು, ನಟರಾಜುಗೌಡ, ಸೇರಿದಂತೆ ಇನ್ನಿತರರು ಇದ್ದರು.
9.5 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಂ. ಆರ್ ಮಂಜುನಾಥ್ ರವರಿಂದ ಭೂಮಿ ಪೂಜೆ. ಹನೂರು:-ಲೋಕೋಪಯೋಗಿ ಇಲಾಖೆ ಹಾಗೂ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ ಇಲಾಖೆಯ ಅನುದಾನದ ಅಡಿ ಅಂದಾಜು 7 .5ಕೋಟಿ ವೆಚ್ಚದಲ್ಲಿ ಕುರಟ್ಟಿ ಹೊಸೂರಿನಿಂದ ದಂಟಳ್ಳಿ ಗ್ರಾಮದವರೆಗೆ ಹಾಗೂ ಅಂಬಿಕಾಪುರ ಗ್ರಾಮದಿಂದ ಪಳನಿಮೇಡು ಗ್ರಾಮದವರೆಗೆ ಡಾಂಬರು ರಸ್ತೆ ನಿರ್ಮಾಣ ಮಾಡುವ ಕಾರ್ಯಕ್ಕೆ ಕ್ಷೇತ್ರದ ಶಾಸಕ ಎಂ.ಆರ್ ಮಂಜುನಾಥ್ ರವರು ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ಮಾಧ್ಯಮದವರ ಜೊತೆ ಮಾತನಾಡಿ ಜನರ ಬಹಳ ದಿನಗಳ ಬೇಡಿಕೆಯಾದ ಕುರಟ್ಟಿ ಹೊಸೂರು
ಗ್ರಾಮದಿಂದ ದಂಟಳ್ಳಿ ಗ್ರಾಮದ ವರೆಗೆ 7.5 ಕೋಟಿ ರೂ. ಡಾಂಬರು ರಸ್ತೆ ನಿರ್ಮಾಣ ಮಾಡಲು ಲೋಕೋಪಯೋಗಿ ಇಲಾಖೆ ಮತ್ತು 1.5 ಕೋಟಿ ರೂ ವೆಚ್ಚದಡಿ ಕೆಆರ್ ಐಡಿಎಲ್ ಇಲಾಖೆ ವತಿಯಿಂದ ಅಂಬಿಕಾಪುರ ಗ್ರಾಮದಿಂದ ಪಳನಿಮೇಡು ಗ್ರಾಮದ ತನಕ ಡಾಂಬರು ರಸ್ತೆ ಕಾಮಗಾರಿ ಕೈಗೊಳ್ಳಲು ಇಂದು ಭೂಮಿ ಪೂಜೆ ನೆರೆವೆರಿಸಿದ್ದೇನೆ. ಇದಲ್ಲದೆ ಭದ್ರಣ್ಣನಳ್ಳಿ ಗ್ರಾಮದ ಬಣಜಿಗ ಸಮುದಾಯ ಭವನದ ಮುಂದುವರೆದ ಕಾಮಗಾರಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಸುಮಾರು 50 ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.. ಗುತ್ತಿಗೆದಾರರು ಆದಷ್ಟು ಬೇಗ ಕಾಮಗಾರಿ
ಪೂರ್ಣಿಗೊಳಿಸಿ ಕಾಮಗಾರಿ ಗುಣಮಟ್ಟದಿಂದ ಇರಲಿ ಗ್ರಾಮಸ್ಥರು ಕೆಲಸ ನಡೆಯುವ ಸಂದರ್ಭದಲ್ಲಿ ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಿ ಎಂದು ತಿಳಿಸಿದರು. ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಹನೂರು ಕ್ಷೇತ್ರದ ನೀರಾವರಿ ಯೋಜನೆಗೆ ಬಜೆಟ್ ನಲ್ಲಿ 490 ಕೋಟಿ ಅನುದಾನ ನೀಡಿರುವುದಕ್ಕೆ ಮತ್ತೊಮ್ಮೆ ಧನ್ಯವಾದಗಳನ್ನು ತಿಳಿಸುತ್ತೇನೆ ಆದಷ್ಟು ಬೇಗ ಈ ಭಾಗದ ಶೆಟ್ಟಳ್ಳಿ, ಕೌದಳ್ಳಿ,ಕುರಟ್ಟಿ ಹೊಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ನೀರಾವರಿ ವ್ಯವಸ್ಥೆ ಆಗಲಿದೆ. ಜೊತೆಗೆ ಎಲ್ಲಾ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಕೆಲಸವು ಆಗುತ್ತದೆ. ಈ ಭಾಗದ ಜನರು
ನೀರಿನ ಸಮಸ್ಯೆಯಿಂದ ಕೆಲಸ ಹರಸಿ ದೂರದ ನಗರಗಳಿಗೆ ಗುಳೆ ಹೋಗಿರುವ ಜನರನ್ನು ಮತ್ತೆ ತಮ್ಮ ಊರಿಗೆ ಬರುವಂತೆ ಮಾಡಿ ಅವರಿಗೆ ರಸ್ತೆ ನೀರು ವಿದ್ಯುತ್ ಮೂಲಭೂತ ಸೌಕರ್ಯಗಳನ್ನು ಒದಗಿಸೋ ಕೆಲಸ ಹಾಗುತ್ತದೆ ಎಂದರು. ಇದೆ ಸಮಯದಲ್ಲಿ ಯಜಮಾನರಾದ ಕೌದಲ್ಲಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಸ್ವಾಮಿ,ಮುಖಂಡರುಗಳಾದ ಸಿದ್ದರಾಜು,ಮಂಜೇಶ್ ಗೌಡ, ಮಹದೇವ, ಜಯರಾಮು, ಚಿನ್ನವೆಂಕಟ್,ವಿಜಯ್ ಕುಮಾರ್,ಕಾಳಪ್ಪ,ಮುನಿಶೆಟ್ಟಿ, ಎಸ್ ಆರ್ ರಂಗಸ್ವಾಮಿ,ವಸಂತ,ಕೃಷ್ಣ,ನಾಗರಾಜು,ಶ್ರೀರಂಗ,ಚಂದ್ರು, ಗೋವಿಂದ, ನಬಿಖಾನ್, ಮಣಿಕಂಟ, ವೆಂಕಟರಮಣ, ಕುಮಾರ್, ಪೆರುಮಾಳ್ ಗೌಡ,ಶ್ರೀರಂಗ, ಲಕ್ಷ್ಮಣ,ಎಸ್. ಆರ್ ಮಹದೇವ್, ಸತ್ತೇಗಾಲ ಮಂಜು,ಮಧು, ನಟರಾಜುಗೌಡ, ಸೇರಿದಂತೆ ಇನ್ನಿತರರು ಇದ್ದರು.
- ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಸುರಕ್ಷತೆ ಮುಖ್ಯವಾಗಿದ್ದು ನಡಿಬಾರದ ಘಟನೆ ಜರುಗಿದೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದ್ದಾರೆ .ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಬಂದಂತ ಭಕ್ತಾದಿಗಳು ನಿಗದಿತ ಸಮಯಕ್ಕೆ ಮೊದಲೇ ತೆರಳಿದ ಭಕ್ತಾದಿಗಳಿಗೆ ಪ್ರಾಣಿಗಳು ಓಡಾಡುವ ಸಮಯದಲ್ಲಿ ಭಕ್ತಾದಿಗಳು ಹೋಗಿರುವ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ಚಿರತೆ ಯುವಕನೋರ್ವನನ್ನು ಬಲಿ ಪಡೆದಿದೆ ಎಂದು ವಿಷಾದ ವ್ಯಕ್ತಪಡಿಸಿದರು . ಮುಂಜಾಗ್ರತ ಕ್ರಮ : ಸರ್ಕಾರದ ಗಮನಕ್ಕೆ ತಂದು ಸಚಿವರ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಮುಂದಿನ ದಿನಗಳಲ್ಲಿ ನಾಗಮಲೆಗೆ ತೆರಳುವ ಭಕ್ತಾದಿಗಳಿಗೆ ಸುರಕ್ಷತಾ ದೃಷ್ಟಿಯಿಂದ ಸಿಬ್ಬಂದಿಯವರನ್ನು ನೇಮಕ ಮಾಡಿ ದೇವಾಲಯಕ್ಕೆ ತೆರಳಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು . ಎಂದರು. ನಡೀಬಾರದ ಘಟನೆ ಜರುಗಿದೆ : ಶ್ರೀ ಕ್ಷೇತ್ರಕ್ಕೆ ರಾಜ್ಯದ ನಾನಾ ಭಾಗಗಳಿಂದ ಬರುವ ಭಕ್ತಾದಿಗಳು ಅರಣ್ಯ ಇಲಾಖೆ ಅಧಿಕಾರಿಗಳು ನಿಗದಿಪಡಿಸಿರುವ ಸಮಯಕ್ಕಿಂತ ಮೊದಲೇ ಯಾರೂ ಸಹ ಪಾದಯಾತ್ರೆಯಲ್ಲಿ ತೆರಳಬಾರದು ಪ್ರಾಣಿಗಳು ಬೆಳಿಗ್ಗೆ ಮೂರರಿಂದ ಹಾರದವರೆಗೆ ಸಂಚರಿಸುವ ಸಮಯದಲ್ಲಿ ಇಂತಹ ದುರ್ಘಟನೆ ಜರುಗಿದೆ ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಭಕ್ತರ ಸುರಕ್ಷತಾ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು..1
- ಮೈಸೂರು,ಚಾಮರಾಜನಗರ ಜಿಲ್ಲೆಯಿಂದ ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಬಿಜೆವಿ ಗೆ ಪರಿಷತ್ ಸ್ಥಾನ ನೀಡುವಂತೆ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ- ಶಾಸಕರ ಒಮ್ಮತದ ನಿರ್ಣಯ. ಮೈಸೂರು ಜಿಲ್ಲೆ ಮತ್ತು ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಎರಡು ಜಿಲ್ಲೆಯ ಶಾಸಕರು ಮತ್ತು ಮಾಜಿ ಶಾಸಕರ ಸಮ್ಮುಖದಲ್ಲಿ ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಾ.ಬಿ ಜೆ ವಿಜಯ್ ಕುಮಾರ್ ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡಬೇಕೆಂದು ಒಮ್ಮತದ ನಿರ್ಣಯ ಮಾಡಲಾಯಿತು. ವಿಧಾನ ಪರಿಷತ್ ಸದಸ್ಯರಾದ ಹಾಗೂ ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಅಧ್ಯಕ್ಷರಾದ ಡಾಕ್ಟರ್. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ ಸತತವಾಗಿ 25 ವರ್ಷಗಳಿಂದ ಸಮರ್ಥವಾಗಿ ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ನಿಭಾಯಿಸಿದ್ದು ಇದು ಮುಂಬರುವ ಅಧ್ಯಕ್ಷರುಗಳಿಗೆ ಮಾದರಿಯಾಗಿದೆ ಎಂದರು. ನಾನು ರಾಜಕೀಯಕ್ಕೆ 2016 ರಲ್ಲಿ ಕಾಲಿಟ್ಟ ಆರಂಭದ ದಿನಗಳಲ್ಲಿ ವಿಜಯ್ ಅವರು ನನಗೆ ಸಾಕಷ್ಟು ಮಾರ್ಗದರ್ಶನ ನೀಡಿ ನನಗೆ ಹಾಗೂ ನಮ್ಮ ಕುಟುಂಬಕ್ಕೆ ಎಲ್ಲಾ ಹಂತದಲ್ಲೂ ಬೆನ್ನೆಲುಬಾಗಿ ನಿಂತಿದ್ದಾರೆ. ನಾನು ರಾಜಕೀಯವಾಗಿ ಬೆಳೆಯಲು ಅವರ ಸಹಕಾರ ಬಹಳಷ್ಟು ಇದೆ ಅದನ್ನ ನಾವು ಮರೆಯುವುದು ಮನುಷ್ಯತ್ವದ ಗುಣವಲ್ಲ ಎಂದರು. ಜಿಲ್ಲೆಯ ಎಲ್ಲಾ ಚುನಾವಣೆ ಹಾಗೂ ಉಪಚುನಾವಣೆಗಳಲ್ಲಿ ಅವರ ಶ್ರಮವನ್ನ ಕಾಂಗ್ರೆಸ್ ಪಕ್ಷ ಹಾಗೂ ಶಾಸಕರಾಗಿರುವ ಎಲ್ಲರೂ ಮರೆಮಾಚಲು ಸಾಧ್ಯವಿಲ್ಲ ಎಂದರು. ಆದ್ದರಿಂದ ಈ ಬಾರಿ ಅವರಿಗೆ ಪರಿಷತ್ತಿಗೆ ಅವಕಾಶ ಕಲ್ಪಿಸುವುದು ಸರ್ಕಾರದ ಹೊಣೆ ಹಾಗೂ ನನ್ನ ಸಂಪೂರ್ಣ ಬೆಂಬಲವಿದೆ ಎಂದರು. ಪಕ್ಷ ಕೊಟ್ಟ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬಂದಿರುವ ಅವರು ಎಂದು ಎಲ್ಲೋ ಸಣ್ಣ ಲೋಪವನ್ನು ಎಸೆಗದೆ ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದರೆ ತಪ್ಪಾಗಲಾರದು ಎಂದರು. ಇಂದಿನ ಸಭೆಯಲ್ಲಿ ಮೈಸೂರು ಮತ್ತು ಚಾಮರಾಜನಗರದ ಜಿಲ್ಲೆಯ ಎಲ್ಲಾ ಶಾಸಕರು, ಮಾಜಿ ಶಾಸಕರು ಮತ್ತು ಜನಪ್ರತಿನಿಧಿಗಳು ಒಮ್ಮತದ ನಿರ್ಣಯಕ್ಕೆ ಬಂದಿದ್ದಾರೆ ಎಂದರು. ಈಗಾಗಲೇ ವಿಜಯ್ ಕುಮಾರ್ ಅವರಿಗೆ ಪಾರ್ಲಿಮೆಂಟ್ ಹಾಗೂ ವಿಧಾನಸಭೆಗಳಲ್ಲಿ ಅವಕಾಶ ವಂಚನೆಯಾಗಿದೆ, ಈಗ ಅವರಿಗೆ ಅವಕಾಶ ಕಲ್ಪಿಸುವುದು ನಮ್ಮೆಲ್ಲರ ನೈತಿಕ ಹೊಣೆಗಾರಿಕೆ ಎದ್ದರೂ. ಕೆಪಿಸಿಸಿ ಕಾರ್ಯಾಧ್ಯಕ್ಷರು ಮತ್ತು ಶಾಸಕರಾದ ತನ್ವಿರ್ ಸೇಠ್ ಮಾತನಾಡಿ ಪಕ್ಷಕ್ಕಾಗಿ 7 FIR ದಾಖಲಿಸಿಕೊಂಡು ಹೊರಡುತ್ತಿದ್ದಾರೆ ಎಂದರೆ ಡಾ.ಬಿ ಜೆ ವಿಜಯ್ ಕುಮಾರ್ ನಿಷ್ಠೆ ಎಂತಹದ್ದು ಎಂದು ತಿಳಿಯುತ್ತದೆ. ಅಧಿಕಾರದಲ್ಲಿ ಇದ್ದು ಜನ ಸೇವೆ ಮಾಡೋದು ಕಷ್ಟ ಅದರಲ್ಲೂ ಜಿಲ್ಲಾಧ್ಯಕ್ಷರಾಗಿ ಇಷ್ಟೊಂದು ಪ್ರೀತಿ ಮತ್ತು ಜನಮಣ್ಣನೇ ಗಳಿಸುವುದು ಬಹಳ ಕಷ್ಟ ಎಂದು ಹೇಳಿ ಪಕ್ಷಕ್ಕೆ ಮುಜುಗರ ಉಂಟುಮಾಡೋ ಕೆಲಸ ಮಾಡಬಾರದು ಬಹಳಷ್ಟು ಜನ ನಮ್ಮ ಪಕ್ಷಕ್ಕಾಗಿ ದುಡಿದಿದ್ದಾರೆ ನಾವು ಭಾರಿ ಬಹುಮತದಿಂದ ಸರಕಾರ ಹಿಡಿದಿದ್ದೇವೆ ಎಲ್ಲರಿಗೂ ಅವಕಾಶ ಕೊಡಲು ಅಸಾಧ್ಯ ಆದರೆ ಹಂತ ಹಂತವಾಗಿ ಅವಕಾಶ ಸಿಗುತ್ತದೆ ಆದರೆ ಈ ಬಾರಿ ಡಾ ಬಿಜೆ ವಿಜಯ್ ಕುಮಾರ್ ಅವರ ಸೇವೆಯನ್ನು ಪರಿಗಣಿಸಿ ಕಾಂಗ್ರೆಸ್ ಪಕ್ಷ ಅವರಿಗೆ ವಿಧಾನ ಪರಿಷತ್ ಅಥವಾ ರಾಜ್ಯಸಭಾ ಸ್ಥಾನ ನೀಡುತ್ತದೆ ಎಂಬ ವಿಶ್ವಾಸವಿದೆ ಎಂದು ನುಡಿದರು. ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ. ರವಿಶಂಕರ್ ಮಾತನಾಡಿ ಯಾವ ಚುನಾವಣೆಯಲ್ಲೂ ಯಾವ ಅಭ್ಯರ್ಥಿಯಿಂದ ಯಾವ ಅಪೇಕ್ಷೆ ಇಲ್ಲದೆ ಅತ್ಯಂತ ಪ್ರಾಮಾಣಿಕವಾಗಿ ಪಕ್ಷ ಸೇವೆ ಮಾಡಿದ್ದು ನನ್ನ ಮಿತ್ರ ವಿಜಯಕುಮಾರ್ ಅವರು ಎಂದರು. ಹೆಚ್‍ಡಿ. ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಅನಿಲ್ ಚಿಕ್ಕಮಾದು ಮಾತನಾಡಿ ಮೈಸೂರು ಜಿಲ್ಲೆಯಲ್ಲಿ ಎರಡನೇ ತಲೆಮಾರಿನ ಶಾಸಕರು ಅತ್ಯಂತ ಒಗ್ಗಟ್ಟಿನಿಂದ ಕೆಲಸ ಮಾಡಲು ಚುನಾವಣೆ ಗೆಲ್ಲಲು ವಿಜಯ್ ಕುಮಾರ್ ಅವರ ಸಹಕಾರವಿದೆ ಎಂದರು. ಮೈಸೂರು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಆರ್ ಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕರಾದ ಪುಟ್ಟರಂಗಶೆಟ್ಟಿ, ಎ ಆರ್.ಕೃಷ್ಣಮೂರ್ತಿ , ದರ್ಶನ್ ಧ್ರುವನಾರಾಯಣ್ ಕೆ ಹರೀಶ್ ಗೌಡ, ಮಾಜಿ ಶಾಸಕರಾದ ಮರಿತಿಬ್ಬೆಗೌಡ, ಜಿ.ಏನ್. ನಂಜುಂಡಸ್ವಾಮಿ ಎಂ ಕೆ ಸೋಮಶೇಖರ್, ಕಳಲೆ ಕೇಶವಮೂರ್ತಿ, ಶ್ರೀಮತಿ ಸುನಿತ ವೀರಪ್ಪಗೌಡ, ಬನ್ನೂರ್ ಎಂ ಕೃಷ್ಣಪ್ಪ, ಎನ್.ಧರ್ಮ ಸೇನಾ, ವಿವಿಧ ನಿಗಮಗಳ ಅಧ್ಯಕ್ಷರಾದ ಹಾಡ್ಯ ರಂಗಸ್ವಾಮಿ, ಎಚ್ ಡಿ ಗಣೇಶ್ ರಾಮಪ್ಪ, ರಾಮಪ್ಪ ಭೋವಿ, ಅನಂತು, ಮೂಡ ಮಾಜಿ ಅಧ್ಯಕ್ಷರಾದ ಕೆಮರಿಗೌಡ, ರಾಜೀವ್, ಕೆಎಂಎಫ್ ಮೈಸೂರ ಜಿಲ್ಲಾ ಅಧ್ಯಕ್ಷರಾದ ಈರೇಗೌಡರು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೂರ್ಗಳ್ಳಿ ಮಾದೇವ್, ಮಾಜಿ ಮೇಯರ್ಗಳಾದ ಪುರುಷೋತ್ತಮ್, ಟಿಬಿ. ಚಿಕ್ಕಣ್ಣ, ಕೆಪಿಸಿಸಿಯ ಜಿಲ್ಲಾ ವ್ಯಾಪ್ತಿ ಪದಾಧಿಕಾರಿಗಳು, ಹಾಗೂ ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಕೀಲರು ಆದ ಎಂಸಿ ಹುಂಡಿ ಶಿವಪ್ರಸಾದ್ ಹಿರಿಯ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಸಕಳ್ಳಿ ಬಸವರಾಜು ಎಂಟು ವಿಧಾನಸಭಾ ಕ್ಷೇತ್ರದ 16 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, 25 ಮಂಚೂಣಿ ಘಟಕದ ಅಧ್ಯಕ್ಷರು ಹಾಗೂ ಡಿಸಿಸಿಯ ಎಲ್ಲ ಹಂತದ ಪದಾಧಿಕಾರಿಗಳು ಹಕ್ಕುತ್ತಾಯಕ್ಕೆ ಅಧಿಕೃತವಾಗಿ ಸಹಿ ಮಾಡಿ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಹೈಕಮಾಂಡ್ ಗೆ ಸಭೆಯ ಮೂಲಕ ರವಾನಿಸಿದ್ದಾರೆ.1
- ಚಾಮರಾಜನಗರ ಜಿಲ್ಲೆಯ ಹನೂರು ಶಾಸಕ ಎಂ.ಆರ್. ಮಂಜುನಾಥ್ ಅವರು ₹9.5 ಕೋಟಿ ವೆಚ್ಚದ ರಸ್ತೆ ಮತ್ತು ಸಮುದಾಯ ಭವನ ಕಾಮಗಾರಿಗಳಿಗೆ ಚಾಲನೆ ನೀಡಿದರು. ಇದರ ಜೊತೆಗೆ, ಕ್ಷೇತ್ರದ ನೀರಾವರಿ ಯೋಜನೆಗಳಿಗೆ ₹490 ಕೋಟಿ ಅನುದಾನ ಸಿಕ್ಕಿರುವುದನ್ನು ಘೋಷಿಸಿದರು. ಈ ಯೋಜನೆಗಳಿಂದ ಅಂತರ್ಜಲ ಮಟ್ಟ ಹೆಚ್ಚಾಗಿ, ಗ್ರಾಮಗಳಿಂದ ನಗರಗಳಿಗೆ ವಲಸೆ ಹೋಗುವುದನ್ನು ತಡೆಯುವ ಗುರಿ ಹೊಂದಲಾಗಿದೆ.4
- ಚಾಮರಾಜನಗರದ ಹನೂರು ತಾಲೂಕಿನ ಕೌಡಳ್ಳಿ ಗ್ರಾಮ ಪಂಚಾಯಿತಿ ಅರಣ್ಯ ಕಚೇರಿ ಎದುರು ಸ್ವಚ್ಛತೆ ಮರೆತಂತಿದೆ. ಸಾರ್ವಜನಿಕರು ಓಡಾಡುವ ಈ ಸ್ಥಳದಲ್ಲಿ ಕಸದ ರಾಶಿ ಸೇರಿ ಅಸ್ವಚ್ಛತೆ ತಾಂಡವವಾಡುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.1
- All About Fake Entries in Official Records of 10 Acres related with #WaqfProperty *ಭಾರತ ನಲ್ಲಿ ವೈರಲ್*1
- ಮಳವಳ್ಳಿ ಪಟ್ಟಣದ ಅನಂತರಾಮ್ ವೃತ್ತದಲ್ಲಿ ನಡೆದ ಭೀಕರ ಅಪಘಾತದಲ್ಲಿ ಕಾರು ಬೈಕ್‌ಗೆ ಡಿಕ್ಕಿ ಹೊಡೆದು, ನಂತರ ಸಿಗ್ನಲ್ ಕಂಬ ಮತ್ತು ಪಾದಚಾರಿ ಅಂಗಡಿಗಳಿಗೆ ನುಗ್ಗಿದೆ. ಈ ಘಟನೆಯಲ್ಲಿ ಇಬ್ಬರು ಬೈಕ್ ಸವಾರರು ಮತ್ತು ಕಾರಿನಲ್ಲಿದ್ದ ಇಬ್ಬರಿಗೆ ಗಾಯಗಳಾಗಿದ್ದು, ಅಂಗಡಿಗಳಲ್ಲಿ ಯಾರೂ ಇಲ್ಲದ ಕಾರಣ ಭಾರೀ ಅನಾಹುತವೊಂದು ಅದೃಷ್ಟವಶಾತ್ ತಪ್ಪಿದೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.1
- Post by Ramuc2
- ತಮಿಳುನಾಡಿನಲ್ಲಿ ಟಿವಿಕೆ ಪಕ್ಷದ ಮುಖ್ಯಸ್ಥ ಹಾಗೂ ನಟ ವಿಜಯ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. 108 ಸ್ಥಾನ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ವಿಜಯ್, ವಿವಿಧ ಪಕ್ಷಗಳ ಬೆಂಬಲ ಪಡೆದು ಸಿಎಂ ಗಾದಿಗೇರಿದ್ದಾರೆ. ಪ್ರಮಾಣವಚನದಲ್ಲಿ, ತಮ್ಮ ಸಂಪುಟದಲ್ಲಿ ಭ್ರಷ್ಟಾಚಾರ ಸಹಿಸುವುದಿಲ್ಲ ಎಂದು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.3